Tag: MP Pratap Simha

  • ಸಂಸದ ಪ್ರತಾಪ್ ಸಿಂಹ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಸಂಸದ ಪ್ರತಾಪ್ ಸಿಂಹ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಚೋದನಾತ್ಮಕ ಪೋಸ್ಟ್ ಹಾಕುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಕರ್ನಾಟಕ ಅಂತರ್ಜಾಲ ಪ್ರಾಧಿಕಾರದ ಎ ಆನಂದ ಎಂಬವರು ಪ್ರತಾಪ್ ಸಿಂಹ ಅವರ ವಿರುದ್ಧ ದೂರು ದಾಖಲಿಸಿದ್ದು, ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳ ಮೇಲೆ ವಿನಕಾರಣ ಹೇಳಿಕೆ ನೀಡಿ ಅವರ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

    ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಉತ್ತರಿಸುವ ವಿಡಿಯೋ ಕುರಿತು ದೂರಿನಲ್ಲಿ ಉಲ್ಲೇಖ ಮಾಡಲಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರು ನೈಜವಲ್ಲದ ಪೋಸ್ಟ್ ಗಳನ್ನು ಫೇಸ್‍ಬುಕ್ ನಲ್ಲಿ ಹಾಕಿ ಪ್ರಚೋದನೆ ನೀಡುತ್ತಾರೆ. ಅಲ್ಲದೇ ದೇಶದ ವೀರ ವನಿತೆಯರ ಚಾರಿತ್ರ್ಯ ಹರಣ ಮಾಡುವಂತಹ ಪೋಸ್ಟ್ ಗಳನ್ನು ಹಾಕಿದ್ದು, ಈ ಕುರಿತು ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳುಬೇಕು. ಪ್ರಕರಣದ ಸಂಬಂಧಿಸಿದ ಸಾಕ್ಷ್ಯಧಾರಗಳನ್ನು ನಂತರ ದಿನಗಳಲ್ಲಿ ಹಾಜರು ಪಡಿಸುವುದಾಗಿ ದೂರಿನಲ್ಲಿ ಮನವಿ ಮಾಡಿದ್ದಾರೆ. (ಇದನ್ನೂ ಓದಿ: ಪ್ರತಾಪ್ ಸಿಂಹ ವಿರುದ್ಧ ಐಪಿಸಿ ಸೆಕ್ಷನ್ 188 ಸೇರಿಸಿ ಪೇಚಿಗೆ ಸಿಲುಕಿದ ಖಾಕಿಗಳು!)

    ಪ್ರತಾಪ್ ಸಿಂಹ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 66 ಸಿ, ಐಪಿಸಿ ಸೆಕ್ಷನ್ ಗಳಾದ 153ಎ(ಸಮಾಜದ ಸಾಮರಸ್ಯ ಹಾಳು ಮಾಡುವುದು), 295ಎ( ಕೋಮು ಸೌಹಾರ್ದಕ್ಕೆ ಧಕ್ಕೆ), 505(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ.

  • ಕಾಂಗ್ರೆಸ್ ಟೀಕಿಸಲು ಅಭಿಮಾನಿಗಳಿಗೆ ರಸಪ್ರಶ್ನೆ ಆರಂಭಿಸಿದ ಪ್ರತಾಪ್ ಸಿಂಹ!

    ಕಾಂಗ್ರೆಸ್ ಟೀಕಿಸಲು ಅಭಿಮಾನಿಗಳಿಗೆ ರಸಪ್ರಶ್ನೆ ಆರಂಭಿಸಿದ ಪ್ರತಾಪ್ ಸಿಂಹ!

    ಮೈಸೂರು: ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆ ಕೇಳುವ ಮೂಲಕ ಟಾಂಗ್ ನೀಡಲು ಆರಂಭಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ವಿನಯ್ ಕುಲರ್ಣಿ ಹಾಗೂ ಮೈಸೂರು ಎಸ್‍ಪಿ ರವಿ ಡಿ.ಚನ್ನಣ್ಣವರ್ ವಿರುದ್ಧ ಹಲವು ಪೋಸ್ಟ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ.

    ಸಿಂಹ ಪ್ರಶ್ನೆಗಳು:
    ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಕಪಾಳಕ್ಕೆ ಹೊಡೆದ ಪುಂಡ ಯಾರು? ಬಳ್ಳಾರಿ ನಗರ ಪಾಲಿಕೆ ಅಧಿಕಾರಿಯ ಕಪಾಳಕ್ಕೆ ಹೊಡೆದವರ ವಿರುದ್ಧ ಕೇಸು ದಾಖಲಾಗಿದೇಯೋ ಇಲ್ವೋ? ಓಬವ್ವನಿಗೆ ಹಿಂದಿನಿಂದ ಚೂರಿ ಹಾಕಿದವನ ಜಯಂತಿ ಆರಂಭಿಸಿದ ಸರ್ಕಾರ ಯಾವುದು? ಮೈಸೂರಿನ ಕೆ.ಆರ್.ನಗರದಲ್ಲಿ ಅಂಟಿಸಿರುವ ಪೋಸ್ಟರ್ ಗಳ ವಿರುದ್ಧ ಕ್ರಮ ಕೈಗೊಳ್ಳುವವರು ಯಾರು ಇಲ್ಲವೆ? ಎಂಬ ಪ್ರಶ್ನೆಗಳನ್ನು ಟ್ಟಿಟ್ಟರ್ ಮತ್ತು ಫೇಸ್‍ಬುಕ್ ನಲ್ಲಿ ಕೇಳಿದ್ದಾರೆ.

    ಮಂಗಳವಾರದಿಂದ ಸಾಮಾಜಿಕ ಜಾಲತಾಣದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದಕ್ಕೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಬಳಕೆದಾರರು ತಮಗೆ ತೊಚಿದಂತೆ ಉತ್ತರಗಳನ್ನು ನೀಡುತ್ತಿದ್ದಾರೆ.

  • ಪೊಲೀಸ್ ಇಲಾಖೆಗೆ ನಿಷ್ಠರೋ, ಕೆಂಪಯ್ಯಗೆ ನಿಷ್ಠರೋ: ಚನ್ನಣ್ಣನವರ್ ಗೆ ಪ್ರತಾಪ್ ಸಿಂಹ ಪ್ರಶ್ನೆ

    ಮೈಸೂರು: ಸಂಸದ ಪ್ರತಾಪ್ ಸಿಂಹ, ಎಸ್‍ಪಿ ರವಿಚನ್ನಣ್ಣನವರ್ ನಡುವಿನ ಸಮರ ಮತ್ತಷ್ಟು ತೀಕ್ಷ್ಣಗೊಳ್ಳುತ್ತಿದೆ. ಇಂದು ಫೇಸ್‍ಬುಕ್ ಲೈವ್ ನಲ್ಲಿ ಎಸ್‍ಪಿ ರವಿಚನ್ನಣ್ಣನವರ್ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಫೇಸ್‍ಬುಕ್ ಲೈವ್‍ನಲ್ಲಿ ರವಿ ಚನ್ನಣ್ಣವರ್ ನೀವು ಪೊಲೀಸ್ ಇಲಾಖೆಗೆ ನಿಷ್ಠರೋ, ಕೆಂಪಯ್ಯ ಅವರಿಗೆ ನಿಷ್ಠರೋ. ನಿಮ್ಮ ಮಾಸ್ಟರ್ ಯಾರು ಅಂತ ನನಗೆ ಗೊತ್ತಿದೆ. ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳನ್ನು ಎಳೆದು ತರಬೇಡಿ. ಹುಣಸೂರು ಪ್ರಕರಣವನ್ನು ಪಬ್ಲಿಕ್ ಟಿವಿ ಸರಿದೂಗಿಸಿದೆ. ರಂಗನಾಥ್ ಅವರು ಒಳ್ಳೆಯ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದು ಹೇಳಿದರು.

    ಹಿಂದಿನ ಫೇಸ್‍ಬುಕ್ ಲೈವ್ ಕುರಿತ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಅವರು, ನನ್ನ ಫೇಸ್‍ಬುಕ್ ಲೈವ್‍ನ ಒಂದು ತುಣುಕನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಅದನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಹಾಗೂ ಕೆಲ ಮಾಧ್ಯಮಗಳ ನನ್ನ ಮೇಲೆ ಆರೋಪ ಮಾಡುತ್ತಿವೆ. ಆದರೆ ಆ ವಿಡಿಯೋ ಹಿಂದಿನ ಹಾಗೂ ಮುಂದಿನ ಭಾಗವನ್ನು ನೋಡಿ ಸುದ್ದಿ ಬಿತ್ತರಿಸಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದು ಸರ್ಕಾರದ ಮೇಲೆ ಒತ್ತಡ ತರುವ ಪ್ರತಿಭಟನೆ ಮಾಡಿದ್ದೀರಾ ಅಂತ. ನಾನು ಅದಕ್ಕೆ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.

    https://www.youtube.com/watch?v=4lHDGBADYCs

    https://youtu.be/0C5M6aKA7SQ

  • ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನಿಂದ ಹಣ ಹಂಚಿಕೆ

    ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರಿಗೆ ಕಾಂಗ್ರೆಸ್ಸಿನಿಂದ ಹಣ ಹಂಚಿಕೆ

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಬಗ್ಗೆ ಕೀಳುಮಟ್ಟದ ಪೋಸ್ಟ್ ಹಂಚಿದ್ದನ್ನು ಖಂಡಿಸಿ ಸಂಸದ ಪ್ರತಾಪ್ ಸಿಂಹ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್ ಹಣ ಹಂಚಿಕೆ ಮಾಡಿದೆ.

    ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದಲ್ಲಿ ಇಂದು ನಗರದ ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ನಡೆಸಿದ ನಂತರ ಬಿಜೆಪಿ ಹಾಗೂ ಪ್ರತಾಪ್ ಸಿಂಹ ಅವರ ವಿರುದ್ಧ ಧಿಕ್ಕಾರ ಕೂಗಿದವರಿಗೆ ಕೆಪಿಸಿಸಿ ವತಿಯಿಂದ ಹಣ ಹಂಚಿಕೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೆ 100 ರೂ. ಹಾಗೂ 500 ರೂ. ಮುಖ ಬೆಲೆಯ ನೋಟುಗಳನ್ನು ಹಂಚಿಕೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. (ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಬೆಂಬಲಿಗರ ವಿರುದ್ಧ ದೂರು ದಾಖಲು )

    ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ನಾಡಿನ ಇತಿಹಾಸ ಗೊತ್ತಿಲ್ಲದೇ ಏನೇನೋ ಮಾತನಾಡುತ್ತಿರುವ ಬಿಜೆಪಿ ನಾಯಕರು ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ನಾಚಿಕೆಯಾಗ್ಬೇಕು. ಇಡೀ ದೇಶಕ್ಕೆ, ರಾಜ್ಯಕ್ಕೆ ವೀರ ವನಿತೆ ಒಬವ್ವ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಯಾರು ಎನ್ನುವುದು ಗೊತ್ತು. ಬಿಜೆಪಿಯವರು ಇಡೀ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಇದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. (ಇದನ್ನೂ ಓದಿ: ಓಬವ್ವ, ಕಿತ್ತೂರು ರಾಣಿ ಬಗ್ಗೆ ಪ್ರಕಟವಾದ ಪೋಸ್ಟಿಗೂ ನನಗೂ ಸಂಬಂಧವಿಲ್ಲ: ಪ್ರತಾಪ್ ಸಿಂಹ )

    ಈ ಹಿಂದೆ ನೋಟ್ ಬ್ಯಾನ್ ಆದ ಸಂದರ್ಭಲ್ಲಿ ಕಳೆದ ವರ್ಷ ಕಾಂಗ್ರೆಸ್ ನವೆಂಬರ್ ತಿಂಗಳಿನಲ್ಲಿ ಆಕ್ರೋಶ್ ದಿನವನ್ನು ಆಚರಿಸಲು ಕರೆ ಕೊಟ್ಟಿತ್ತು. ಈ ವೇಳೆ ಪ್ರತಿಭಟನೆಗೆ ಆಗಮಿಸಿದ್ದ ಜನರಿಗೆ ಹಣವನ್ನು ಹಂಚಿಕೆ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    https://www.youtube.com/watch?v=EkN6SRtlWtY

  • ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ

    ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ ವೀರಮರಣ ಹೇಗೆ ಆಗುತ್ತೆ: ರಾಷ್ಟ್ರಪತಿಗಳಿಗೆ ಪ್ರತಾಪ್ ಸಿಂಹ ಪ್ರಶ್ನೆ

    ಬೆಂಗಳೂರು: ಕೋಟೆಯಲ್ಲಿ ಮೃತಪಟ್ಟ ಟಿಪ್ಪುವಿನ ಮರಣ, ವೀರಮರಣ ಹೇಗೆ ಆಗುತ್ತದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ರಾಜ್ಯ ವಿಧಾನಸಭೆ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಟಿಪ್ಪುವನ್ನು ಹೊಗಳಿ ರಾಷ್ಟ್ರಪತಿಗಳು ಭಾಷಣ ಮಾಡಿದ ವಿಚಾರದ ಬಗ್ಗೆ ಪ್ರಶ್ನೆ ಎತ್ತಿ ಪ್ರತಾಪ್ ಸಿಂಹ ಅವರು ಎರಡು ಟ್ವೀಟ್ ಮಾಡಿದ್ದಾರೆ.

    ಟಿಪ್ಪು ಯುದ್ಧ ಭೂಮಿಯಲ್ಲಿ ಹೋರಾಟ ಮಾಡುತ್ತಾ ಮರಣ ಹೊಂದಿಲ್ಲ. ಕೋಟೆಯಲ್ಲಿ ಮರಣ ಹೊಂದಿದ್ದಾನೆ. ಕೋಟೆಯಲ್ಲಿ ಮರಣ ಹೊಂದಿದರೆ ಅದು ಹೇಗೆ ವೀರ ಮರಣವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

    ಒಂದು ವೇಳೆ ಟಿಪ್ಪು ಕ್ಷಿಪಣಿಯ ಜನಕನಾಗಿದ್ದರೆ ಬ್ರಿಟಿಷರ ವಿರುದ್ಧ ಕ್ಷಿಪಣಿಯನ್ನು ಪ್ರಯೋಗಿಸಬಹುದಿತ್ತು. ಆದರೆ 3ನೇ ಮತ್ತು 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತಿದ್ದು ಯಾಕೆ? ಕ್ಷಿಪಣಿಯನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸದ್ದು ಯಾಕೆ ಎಂದು ಪ್ರಶ್ನಿಸಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

    ಇಂದು ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಟಿಪ್ಪು ಸುಲ್ತಾನ್ ಬಗ್ಗೆ ಗುಣಗಾನ ಮಾಡಿದ್ದರು. ಅಲ್ಲದೇ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರಮರಣವನ್ನಪ್ಪಿದ. ಭಾರತದ ಮೊದಲ ಕ್ಷಿಪಣಿ ಜನಕ ಎಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿಹೊಗಳುವ ವೇಳೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ಮಾತ್ರ ಸುಮ್ಮನೆ ಕುಳಿತಿದ್ದರು.