Tag: MP Nalin Kumar Kateel

  • 10 ದಿನದೊಳಗೆ ಸ್ಪಷ್ಟನೆ ನೀಡಿ- ಗೋಡ್ಸೆ ಹೇಳಿಕೆ ನೀಡಿದ ನಾಯಕರಿಗೆ ಅಮಿತ್ ಶಾ ಸೂಚನೆ

    10 ದಿನದೊಳಗೆ ಸ್ಪಷ್ಟನೆ ನೀಡಿ- ಗೋಡ್ಸೆ ಹೇಳಿಕೆ ನೀಡಿದ ನಾಯಕರಿಗೆ ಅಮಿತ್ ಶಾ ಸೂಚನೆ

    ನವದೆಹಲಿ: ಬಿಜೆಪಿ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿ ಪ್ರಜ್ಞಾಸಿಂಗ್ ಸಿಂಗ್ ಠಾಕೂರ್ ಹಾಗೂ ಸಂಸದರಾದ ಅನಂತ್ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲ್ ಅವರು ಗೋಡ್ಸೆ ಕುರಿತ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದು, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಭಾರೀ ಟೀಕೆಗಳನ್ನು ಎದುರಿಸಿದೆ. ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಮುಖಂಡರ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದಾರೆ.

    10 ದಿನಗಳ ಒಳಗೆ ನಾಯಕರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ಪಕ್ಷದ ಅಂತರಿಕವಾಗಿ ಶಿಸ್ತು ಸಮಿತಿ ಎದುರಿಸಬೇಕಾಗುತ್ತದೆ ಎಂದು ಅಮಿತ್ ಶಾ ಸೂಚಿಸಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪ್ರಮುಖವಾಗಿ ಟಾರ್ಗೆಟ್ ಮಾಡಿದ್ದ ರಾಜೀವ್ ಗಾಂಧಿ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್, ಗೋಡ್ಸೆಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದರು. ಇತ್ತ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಟ್ವಿಟ್ಟರ್ ಖಾತೆಯಲ್ಲಿ 7 ವರ್ಷದ ಬಳಿಕ ಇಂದಿನ ತಲೆಮಾರಿನ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಂ ಗೋಡ್ಸೆ ಈ ಚರ್ಚೆ ನೋಡಿ ಸಂತೋಷ ಪಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದನ್ನು ಓದಿ: ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

    ಸದ್ಯ ಚುನಾವಣಾ ಅಂತಿಮ ಹಂತದ ಮತದಾನದ ಸಮಯವಾಗಿರುವ ವೇಳೆಯಲ್ಲೇ ಸಂಸದರ ಈ ಹೇಳಿಕೆಗಳು ಸಾಕಷ್ಟು ವಿವಾದವನ್ನು ಸೃಷ್ಟಿಸಿದ್ದು, ಈ ಹೇಳಿಕೆಗಳನ್ನೆ ಕಾಂಗ್ರೆಸ್ ಅಂತಿಮ ದಿನದ ಪ್ರಚಾರದಲ್ಲಿ ಪ್ರಸ್ತಾಪ ಮಾಡಿ ವಾಗ್ದಾಳಿ ನಡೆಸಿದೆ.  ಇದನ್ನು ಓದಿ: ಇಂದು ನಡೆಯುತ್ತಿರುವ ಚರ್ಚೆಯಿಂದ ಗೋಡ್ಸೆ ಸಂತೋಷ ಪಡಬಹುದು: ಹೆಗ್ಡೆ

  • ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

    ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

    ಬೆಂಗಳೂರು: ನಾಥುರಾಂ ಗೋಡ್ಸೆ ಕುರಿತು ಮಾಡಿದ್ದ ಟ್ವೀಟ್ ಅನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ.

    ನಾಥುರಾಂ ಗೋಡ್ಸೆ ಕೊಂದವರ ಸಂಖ್ಯೆ 1 ಆದರೆ ಉಗ್ರ ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72 ಹಾಗೂ ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17 ಸಾವಿರ. ಈಗ ನೀವೇ ಹೇಳಿ. ಇವರಲ್ಲಿ ಯಾರು ಅತೀ ಕ್ರೂರ ಕೊಲೆಗಾರ ಎಂದು ಪ್ರಶ್ನೆ ಮಾಡಿ ಸಂಸದರು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಪ್ರತಿಕ್ರಿಯೆಗಳು ಬರತೊಡಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಂಸದರು, ‘ನನ್ನ ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ’ ಎಂದು ಬರೆದುಕೊಂಡಿದ್ದಾರೆ.

    ಕಲಬುರಗಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜೀವ್ ಗಾಂಧಿ 17 ಸಾವಿರ ಜನರನ್ನ ಕೊಂದಿದ್ದಾರೆ ಎಂಬ ಕಟೀಲ್ ಅವರ ಟ್ವೀಟ್‍ಗೆ ಕಿಡಿಕಾರಿದ್ದರು. ಬಿಜೆಪಿ ನಾಯಕರ ಇಂತಹ ಮಾತುಗಳಿಂದ ಅವರ ಮನಸಿತ್ಥಿ ಹೇಗಿದೆ ಎಂಬುವುದು ತಿಳಿಯುತ್ತದೆ. ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ಐಕ್ಯತೆಗಾಗಿ ತಮ್ಮ ಪ್ರಾಣ ಕೊಟ್ಟಿದ್ದಾರೆ. ನಳಿನ್ ಕುಮಾರ್ ಅವರಂತೆ ಹೇಳಿಕೆ ನೀಡುವ ಸಜ್ಜನರ ಸಂಖ್ಯೆ ಹಾಗೂ ವಿಚಾರಧಾರೆ ಹೆಚ್ಚಾಗುತ್ತಿರುವುದ್ದರಿಂದ ದೇಶಕ್ಕೆ ತೊಂದರೆ ಆಗುತ್ತಿದೆ. ಇನ್ನು ಮುಂದೆ ಆದರೂ ನಾಲಿಗೆ ಬಿಗಿ ಹಿಡಿದು ಮಾತನಾಡಲು ಕಲಿಯಬೇಕು ಎಂದು ವಾಗ್ದಾಳಿ ನಡೆಸಿದರು.

    ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ಅಂತವರನ್ನ ಕೊಂದವರನ್ನ ಬಿಜೆಪಿಯವರು ದೇವರಂತೆ ಪೂಜೆ ಮಾಡುತ್ತಿದ್ದಾರೆ. ಗಾಂಧೀಜಿ ಅವರನ್ನ ರಾಷ್ಟ್ರಪಿತ ಮನ್ನಣೆ ಕೊಟ್ಟು ಪ್ರಧಾನಿ ಮೋದಿ ಅವರ ಸಮಾಧಿ ಮುಂದೆ ತಲೆ ಬಾಗುತ್ತದೆ. ಮತ್ತೊಂದೆಡೆ ಬಿಜೆಪಿಯವರು ಈ ರೀತಿ ಮಾತನಾಡುತ್ತಾರೆ ಎಂದು ಟೀಕಿಸಿದರು. ಇದನ್ನು ಓದಿ: ಇಂದು ನಡೆಯುತ್ತಿರುವ ಚರ್ಚೆಯಿಂದ ಗೋಡ್ಸೆ ಸಂತೋಷ ಪಡಬಹುದು: ಹೆಗ್ಡೆ

  • ಕುಮಾರಸ್ವಾಮಿಗೆ ಏನೂ ಆಗಲ್ಲ, ಸರ್ಕಾರವೇ ಸಾಯುತ್ತೆ- ಸಂಸದ ನಳಿನ್ ಕುಮಾರ್

    ಕುಮಾರಸ್ವಾಮಿಗೆ ಏನೂ ಆಗಲ್ಲ, ಸರ್ಕಾರವೇ ಸಾಯುತ್ತೆ- ಸಂಸದ ನಳಿನ್ ಕುಮಾರ್

    ಉಡುಪಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಏನೂ ಆಗಲ್ಲ. ಆದರೆ ಸರ್ಕಾರ ಮಾತ್ರ ಉಳಿಯಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟಾಂಗ್ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಾನು ಸಾಯುತ್ತೇನೆ ಅಂತ ಹೇಳಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ಕೊಟ್ಟರು. ಸಾಯುತ್ತೇನೆ ಅಂದರೆ ಸರ್ಕಾರ ಸಾಯುತ್ತೆ ಹಾಗೂ ಅಧಿಕಾರ ಕಳೆದುಕೊಳ್ಳುತ್ತೇನೆ ಅಂಥ ಅರ್ಥ. ಜನರಲ್ಲಿ ಸಿಂಪಥಿ ಕ್ರಿಯೇಟ್ ಮಾಡಿಯಾದ್ರೂ ಸರ್ಕಾರ ಉಳಿಸುವ ಪ್ರಯತ್ನ ಅವರದ್ದು ಎಂದು ವ್ಯಂಗ್ಯವಾಡಿದರು.

    ಎಚ್.ಡಿ.ಕುಮಾರಸ್ವಾಮಿ ಅವರು ಏನೇ ಮಾಡಿದರೂ ರಾಜ್ಯ ಸರ್ಕಾರ ಬೇಗ ಸಾಯುತ್ತದೆ. ಮತ್ತೆ ಮುಂದೇನಾಗುತ್ತೋ ಆಮೇಲೆ ನೋಡೋಣ ಎಂದ ಸಂಸದರು, ರಾಜ್ಯದ ಜನತೆಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾದವರು ಈತರ ಮಾತನಾಡುತ್ತಿದ್ದಾರೆ. ಆದರೆ ಬಿಜೆಪಿ ಎಂದೆಂದಿಗೂ ಜನರ ಜೊತೆ ಇರುತ್ತದೆ ಎಂದು ಹೇಳಿದರು.

    ಈ ಬಾರಿಯ ಉಪಚುನಾವಣೆಯಲ್ಲಿ ರಾಮನಗರ ಕ್ಷೇತ್ರವೇ ಎಚ್.ಡಿ.ಕುಮಾರಸ್ವಾಮಿ ಅವರ ಗಂಟಲಲ್ಲಿ ಸಿಕ್ಕಿಕೊಳ್ಳುತ್ತಿದೆ. ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ಕರಾವಳಿ ಜಿಲ್ಲೆಯಲ್ಲಿ ಬಂದ ಫಲಿತಾಂಶವೇ ಈ ಉಪಚುನಾವಣೆಯಲ್ಲಿ ಬರುತ್ತದೆ ಎಂದ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಟೆಂಟ್ ಹಾಕಿದಷ್ಟು ಬಿಜೆಪಿಗೆ ಲಾಭವಾಗಲಿದೆ ಎಂದು ಲೇವಡಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv