Tag: MP Kumaraswamy

  • ಬೆಂಗ್ಳೂರಿನಲ್ಲಿರೋ ಜನರನ್ನು ಅವರವರ ಮನೆಗೆ ಕಳಿಸಿಕೊಡಿ: ಎಂ.ಪಿ ಕುಮಾರಸ್ವಾಮಿ

    ಬೆಂಗ್ಳೂರಿನಲ್ಲಿರೋ ಜನರನ್ನು ಅವರವರ ಮನೆಗೆ ಕಳಿಸಿಕೊಡಿ: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ಸಿಲಿಕಾನ್ ಸಿಟಿಯಲ್ಲಿರುವ ಜನರನ್ನು ಅವರವರ ಮನೆಗೆ ಕಳುಹಿಸಿಕೊಡಿ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದಾರೆ.

    ದಯವಿಟ್ಟು ಯುವಕ-ಯುವತಿಯರನ್ನು ಊರಿಗೆ ಕಳುಹಿಸಿಕೊಡಿ. ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ. ಇದೀಗ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ನಾವು ತೆಗೆದುಕೊಂಡ ತೀರ್ಮಾನದಲ್ಲಿ ಅನೇಕ ಜನರ ಬದುಕು ಬೀದಿಗೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಉತ್ತರ ಪ್ರದೇಶ ಹಾಗೂ ದೆಹಲಿ ಸರ್ಕಾರಗಳು ನಡೆದುಕೊಂಡ ರೀತಿಯನ್ನ ನೀವು ಪಾಲಿಸಿ. ಬೆಂಗಳೂರಿನಿಂದ ನನಗೆ ವೋಟ್ ಹಾಕಲು ಯುವಕ-ಯುವತಿಯರು ಬಂದಿದ್ದರು. ದಯವಿಟ್ಟು ಅವರ ವೈದ್ಯಕೀಯ ಪರೀಕ್ಷೆ ಮಾಡಿಸಿ ಜನರನ್ನ ಹಳ್ಳಿಗಳಿಗೆ ಕಳುಹಿಸಿ ಎಂದು ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಬಳಿ ಕೇಳಿಕೊಂಡಿದ್ದಾರೆ.

  • ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷಿಸಿದ ಶಾಸಕರು

    ಚಿಕ್ಕಮಗಳೂರು: ಶಾಸಕರೊಬ್ಬರು ರಾತ್ರೋರಾತ್ರಿ ಹಾಸ್ಟೆಲ್‍ಗೆ ತೆರಳಿ ಸಾಂಬಾರ್ ಪರೀಕ್ಷೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನಡೆದಿದೆ.

    ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾತ್ರೋರಾತ್ರಿ ತಾಲೂಕಿನ ಹೆಸ್ಕಲ್ ಗ್ರಾಮದಲ್ಲಿರುವ ಗಿರಿದರ್ಶಿನಿ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿ ಮಕ್ಕಳಿಗೆ ನೀಡುತ್ತಿರುವ ಆಹಾರವನ್ನು ಪರೀಕ್ಷೆ ಮಾಡಿದ್ದಾರೆ. ಶಾಸಕರು ದಿಢೀರ್ ಭೇಟಿ ನೀಡಿ ಅಡುಗೆ ಮನೆಗೆ ಧಾವಿಸಿ ಸಾಂಬಾರ್ ಕುಡಿದು ಆಹಾರ ಪರೀಕ್ಷೆ ಮಾಡಿದಾಗ ಅಡುಗೆಯವರು ಕಕ್ಕಾಬಿಕ್ಕಿಯಾಗಿದ್ದಾರೆ.

    ಆ ಬಳಿಕ ಆಹಾರ ಸಾಮಾಗ್ರಿಗಳು ಸೇರಿದಂತೆ ಊಟ ಇನ್ನಿತರ ಮೂಲಭೂತ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳ ಜೊತೆ ಮಾಹಿತಿ ಪಡೆದರು. ಈ ವೇಳೆ ಊಟ, ವಸತಿ ಮತ್ತು ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಶಾಸಕರಿಗೆ ದೂರು ನೀಡಿದರು. ಮೊನ್ನೆ ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯಲ್ಲಿ ಹಾಸ್ಟೆಲ್ ಗಳ ಅವ್ಯವಸ್ಥೆ ಬಗ್ಗೆ ಚರ್ಚೆ ಆಗಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಪರಿಶೀಲನೆ ಮಾಡಿದ್ದಾರೆ.