ಚಿಕ್ಕಮಗಳೂರು: ನನ್ನನ್ನು ಬಿಜೆಪಿಯಿಂದ (BJP) ಸಿ.ಟಿ.ರವಿ (CT Ravi) ಕಳಿಸಿದ್ರು, ಈಗ ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು ಎಂದು ಎಂ.ಪಿ. ಕುಮಾರಸ್ವಾಮಿ (MP Kumaraswamy) ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಒಕ್ಕಲಿಗರು ಇರೋದು ಆರೇ ಸಾವಿರ ಮತದಾರರು ಅಷ್ಟೇ. ಆದರೆ ಚಿಕ್ಕಮಗಳೂರು (Chikkamagaluru) ಇನ್ಮುಂದೆ ವೀರಶೈವ ಲಿಂಗಾಯತರ ಕ್ಷೇತ್ರ. ಸಿ.ಟಿ.ರವಿ ದತ್ತಮಾಲೆ, ಅಹಿತಕರ ಘಟನೆ ಇಟ್ಕಂಡ್ ಹೋದ್ರು ಇನ್ಮುಂದೆ ಆಗಲ್ಲ. ಯಡಿಯೂರಪ್ಪ (BS Yediyurappa) ಸ್ವಿಚ್ ಆಫ್ ಮಾಡಲಿಲ್ಲ, ಮಾಡಿದ್ರೆ ಬಿಜೆಪಿ 50 ಸೀಟ್ ಅಷ್ಟೆ ಬರುತ್ತಿತ್ತು ಎಂದು ಟೀಕಿಸಿದರು. ಇದನ್ನೂ ಓದಿ: ಪ್ರತಿಕ್ರಿಯೆ ನೀಡದೇ ಫುಲ್ ಗರಂ ಆಗಿ ತೆರಳಿದ ಸಿದ್ದರಾಮಯ್ಯ
ಮೂಡಿಗೆರೆ ಬಿಜೆಪಿಗೆ ಜೀವ ತುಂಬಿದವನೇ ನಾನಾಗಿದ್ದೆ. ಆದರೆ ನನ್ನನ್ನ ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಅಂತ ಸಾಮಾನ್ಯ ಜನ ಹೇಳ್ತಾರೆ. ಜೆಡಿಎಸ್‍ನಲ್ಲಿ ಬೂತ್ ಕಮಿಟಿ, ಪಕ್ಷ ಸಂಘಟನೆ ಇರಲಿಲ್ಲ, ಹಾಗಾಗಿ ಸೋತೆ. ಎಲ್ಲಾ ಸರಿ ಮಾಡಿಕೊಂಡು ಚುನಾವಣೆ ಮಾಡೋದು ಆಗುತ್ತಿರಲಿಲ್ಲ, ಕಷ್ಟವಾಗಿತ್ತು. ಮುಂದೆ ಎಲ್ಲಾ ಸರಿ ಮಾಡಿಕೊಂಡು ಜಿಪಂ, ತಾಪಂ ಎಲೆಕ್ಷನ್ ಮಾಡುತ್ತೇವೆ. ಇದನ್ನೂ ಓದಿ:ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿರುವ ಪಕ್ಷೇತರ ಅಭ್ಯರ್ಥಿ
– ಹುಚ್ಚುನಾಯಿಯಂತೆ ನನ್ನನ್ನು ಪಕ್ಷದಿಂದ ಓಡಿಸಿದ್ದಾರೆಂದು ಕುಮಾರಸ್ವಾಮಿ ಕಿಡಿ
ಕಾರವಾರ: ಮೂಡಿಗೆರೆ (Mudigere) ಬಿಜೆಪಿ (BJP) ಶಾಸಕ ಎಂಪಿ ಕುಮಾರಸ್ವಾಮಿ (MP Kumaraswamy) ಅವರು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಎಂಪಿ ಕುಮಾರಸ್ವಾಮಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸಿದ್ದು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಬುಧವಾರ ರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿತ್ತು. ಆದರೆ ಪಟ್ಟಿಯಲ್ಲಿ ಮೂಡಿಗೆರೆಯ ಹಾಲಿ ಶಾಸಕರ ಹೆಸರು ಇರಲಿಲ್ಲ. ಕುಮಾರಸ್ವಾಮಿ ಬದಲಿಗೆ ಬಿಜೆಪಿ ದೀಪಕ್ ದೊಡ್ಡಯ್ಯ ಅವರಿಗೆ ಈ ಬಾರಿ ಅವಕಾಶ ನೀಡಿದೆ. ಇದರಿಂದ ಪಕ್ಷ ಹಾಗೂ ನಾಯಕರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಬಿಜೆಪಿ ಪಕ್ಷದಲ್ಲಿ ನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಪಕ್ಷದಿಂದ ಓಡಿಸಿದ್ದಾರೆ. ಇದಕ್ಕೆಲ್ಲಾ ಸಿಟಿ ರವಿ ಹಾಗೂ ಪ್ರಾಣೇಶ್ ಕಾರಣ. ಪಕ್ಷದಲ್ಲಿ ಹೀನಾಯವಾಗಿ ನನ್ನನ್ನು ನಡೆಸಿಕೊಂಡಿದ್ದಾರೆ. ಅವರೇ ಜನ ಕಳುಹಿಸಿ, ಅವರೇ ಜಗಳ ಮಾಡಿಸಿ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿ ಮಾಡಿದರು ಎಂದು ನೋವು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಯಾಣದ ನಡುವೆಯೇ ಪಕ್ಷದ ಕೆಲಸ, ಆಹಾರ ಸೇವನೆ, ವಿಶ್ರಾಂತಿ – ಇದು ಹೆಚ್‌ಡಿಕೆ ದಿನಚರಿ
ಅವರು ಪಕ್ಷ ಉಳಿಸಲ್ಲ. ಸಿಟಿ ರವಿ ಬಿಜೆಪಿಗೆ ಮಾರಕ. ಮುಂದಿನ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ನನಗೆ ಇನ್ನೂ ವಯಸ್ಸಾಗಿಲ್ಲ, ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷದಿಂದಲೇ ಸ್ಪರ್ಧೆ ಮಾಡುತ್ತೇನೆ. ಶನಿವಾರ ಸಂಜೆ ವೇಳೆಗೆ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ
ಚಿಕ್ಕಮಗಳೂರು: ಎಂ.ಪಿ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ಬಿಜೆಪಿಯಲ್ಲಿ ಯಾರೂ ಸಿ.ಟಿ.ರವಿಯನ್ನು ನೆಚ್ಚಿಕೊಂಡಿಲ್ಲ, ಬಿಜೆಪಿ ಸಿದ್ಧಾಂತವನ್ನು ನೆಚ್ಚಿಕೊಂಡಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಿಡಿಕಾರಿದರು.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿ (BJP) ಎಂ.ಪಿ ಕುಮಾರಸ್ವಾಮಿ (MP Kumaraswamy) ಅವರಿಗೆ 5 ಬಾರಿ ಟಿಕೆಟ್ ನೀಡಿದೆ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗುವುದರಿಂದ ಈ ರೀತಿ ಹೇಳುತ್ತಾರೆ. ಪಾರ್ಟಿ ಟಿಕೆಟ್ ವಿಥ್ ಡ್ರಾ ಮಾಡುವುದು ಮಾತ್ರ ಕೆಲಸವಲ್ಲ, ಪಾರ್ಟಿ ತುಂಬಬೇಕು ಎಂದರು.
ಕುಮಾರಸ್ವಾಮಿ, ಜೀವರಾಜ್, ನನ್ನನ್ನು ಸೈದ್ಧಾಂತಿಕ ಬದ್ಧತೆ ಕಾರಣಕ್ಕೆ ಗೆಲ್ಲಿಸಿದರು. ಮೂಡಿಗೆರೆಯಲ್ಲಿ ಬಿಜೆಪಿ ಬಲವಾಗಿದೆ ಗೆಲ್ಲಿಸುತ್ತೇವೆ. ಕುಮಾರಸ್ವಾಮಿ ಸಂದರ್ಭಕ್ಕೊಂದು ಮಾತನಾಡುತ್ತಾರೆ. ನಿನ್ನೆ ನನ್ನ ಮನೆಗೆ ಬಂದು ಹೊಗಳಿ ಹೋಗಿದ್ದರು. ಈಗ ಹೀಗೆ ಮಾತನಾಡ್ತಾರೆ. ನಾಳೆ ಏನ್ ಮಾತನಾಡ್ತಾರೆ ನೋಡೋಣ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ
ಬಿಜೆಪಿಯು ಸಿದ್ಧಾಂತಕ್ಕೆ ಬದ್ಧತೆ ಇಟ್ಟುಕೊಂಡಿರುವವರು ಯಾರೂ ಕೆಟ್ಟಿಲ್ಲ. ಸಿದ್ಧಾಂತವನ್ನು ಸ್ವಾರ್ಥ ಹಾಗೂ ಸಂದರ್ಭಕ್ಕೆ ಬಳಸಿಕೊಂಡಿರುವವರು ಮಾತ್ರ ಕೆಟ್ಟಿದ್ದಾರೆ. ಸಿದ್ಧಾಂತಕ್ಕೆ ಬದ್ಧತೆ ಇಟ್ಟುಕೊಂಡಿರುವವರು ಕೆಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ:ರಾಹುಕಾಲ ಮುಗಿದ ಬಳಿಕ ಬಿ ಫಾರಂ ವಿತರಿಸಿದ ಡಿಕೆಶಿ
ಬೆಂಗಳೂರು: ಸಿ.ಟಿ ರವಿ (CT Ravi) ಬಿಜೆಪಿಯನ್ನು (BJP) ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೂಡಿಗೆರೆ (Mudigere) ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಕಿಡಿಕಾರಿದರು.
ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ನನಗೆ ಟಿಕೆಟ್ ಕೈತಪ್ಪುವಂತೆ ಮಾಡಿರುವುದರ ಹಿಂದೆ ಸಿ.ಟಿ. ರವಿ ಕೈವಾಡ ಇದೆ. ಬಿಜೆಪಿ ಸಿ.ಟಿ ರವಿಯನ್ನು ನಂಬಿಕೊಂಡು ಹೋದರೆ ಮುಂದಿನ ದಿನಗಳಲ್ಲಿ ಅನುಭವಿಸುತ್ತದೆ. ಸಿಟಿ ರವಿ ಓದ್ಕೊಂಡು ಬಂದಿಲ್ಲ. ಸಂಘ ಪರಿವಾರದ ಜೊತೆ ಇದ್ದು ಮಾತನಾಡುವುದನ್ನು ಕಲಿತುಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಹೈಕಮಾಂಡ್‍ಗೆ ನನ್ನ ಬಗ್ಗೆ ತಪ್ಪು ವರದಿ ಕೊಟ್ಟಿದ್ದಾರೆ. ವೈಯಕ್ತಿಕ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಕೆಲ ರಾಜ್ಯ ನಾಯಕರೇ ಇದಕ್ಕೆ ಕಾರಣ. ಸಿಟಿ ರವಿ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಿ ತಿಳಿದಿದೆ. ಹೈಕಮಾಂಡ್ ಮುಂದೆ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಟಿಕೆಟ್ ತಪ್ಪಿಸಿದ್ದಾರೆ. ಬಿಜೆಪಿ ಮುಗಿಸುವವರೆಗೂ ಸಿ.ಟಿ ರವಿ ವಿಶ್ರಾಂತಿ ಪಡೆಯುವುದಿಲ್ಲ. ಪಕ್ಷಕ್ಕೆ ಇದು ಮುಂದೇ ಗೊತ್ತಾಗುತ್ತದೆ ಎಂದು ಗುಡುಗಿದರು. ಇದನ್ನೂ ಓದಿ: ರಾಜಕೀಯಕ್ಕೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗುಡ್ ಬೈ
ಯಡಿಯೂರಪ್ಪ ಸ್ವಿಚ್ ಆಫ್ ಮಾಡಿದ್ರೆ ಬಿಜೆಪಿಗೆ 50 ಸೀಟ್ ಬರುವುದಿಲ್ಲ. ಟಿಕೆಟ್ ಕೈ ತಪ್ಪಿದ ಬಳಿಕ ಯಾವ ಒಬ್ಬ ನಾಯಕರು ಕರೆ ಮಾಡಿ ಮಾತನಾಡಿಲ್ಲ. ನಾನೇ ಸಿಎಂ ಭೇಟಿ ಮಾಡಿದ್ದೆ, ಸಿಎಂ ಅವರು ಮಾತನಾಡಿದ ದಾಟಿಯಿಂದಾಗಿ ನನಗೆ ಟಿಕೆಟ್ ಇಲ್ಲ ಎನ್ನುವುದು ಖಚಿತವಾಗಿತ್ತು ಎಂದು ಕಿಡಿಕಾರಿದ ಅವರು, ಶಾಸಕ ಭವನದಿಂದ ಹೊರಟರು. ಈ ವೇಳೆ ಶಾಸಕನಾಗಿಯೇ ಮರಳಿ ಬರೋದಾಗಿ ಶಪಥ ಮಾಡಿದರು. ಇದನ್ನೂ ಓದಿ:ಸ್ವಾತಂತ್ರ್ಯ ನಂತರ ಯಾದಗಿರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಗೆ ಟಿಕೆಟ್
ಚಿಕ್ಕಮಗಳೂರು: ಅದ್ಯಾಕೋ ಏನೋ.. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (MP Kumaraswamy) ಗೆ ಟೈಮೇ ಸರಿ ಇಲ್ಲ ಅನ್ಸತ್ತೆ. ಚುನಾವಣೆ ಹೊಸ್ತಿಲಲ್ಲಿ ಅವರಿಗೆ ಟಿಕೆಟ್ ಕೊಡಬೇಕು ಅಂತ ಒಂದು ತಂಡ ಬೀದಿಗಳಿದು ಹೋರಾಡಿದರೆ, ಅವರಿಗೆ ಟಿಕೆಟ್ ಬೇಡವೇ ಬೇಡ ಅಂತ ಮತ್ತೊಂದು ತಂಡ ಕೂಡ ರಸ್ತೆಗಿಳಿದು ಹೋರಾಡುತ್ತಿದೆ. ಇದೇ ಹೊತ್ತಿನಲ್ಲಿ ಚೆಕ್‍ಬೌನ್ಸ್ (Checkbounce) ಕೇಸೊಂದು ಕುಮಾರಸ್ವಾಮಿಗೆ ಕೊರಳಿಗೆ ಉರುಳಾಗಿ ಬಂಧನವಾಗುತ್ತಾರಾ ಎಂಬ ಸುದ್ದಿಯೊಂದು ಮೂಡಿಗೆರೆ ತಾಲೂಕಿನಾದ್ಯಂತ ಸಂಚಲನ ಹುಟ್ಟಿಸಿದ್ದು ಎಂ.ಎಲ್.ಎ ಅರೆಸ್ಟ್ ಆಗ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶಾಸಕ ಕುಮಾರಸ್ವಾಮಿಯ ಪರ-ವಿರೋಧ ಗುಂಪು ಒಂದು ದಿನ ಶಾಸಕ ಸಿ.ಟಿ.ರವಿ ಮನೆಗೂ ಬರ್ತಾರೆ, ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಮನೆಗೂ ಹೋಗ್ತಾರೆ. ಮೂಡಿಗೆರೆಯಲ್ಲೂ ಅಪ ಪ್ರಚಾರ ಮಾಡುತ್ತಿದ್ದರು. ಈ ಮಧ್ಯೆ ಚೆಕ್‍ಬೌನ್ಸ್ ಕೇಸ್‍ನಿಂದ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ.
ಈಗಾಗಲೇ ವಿಧಾನಸಭಾ ಚುನಾವಣೆ (Vidhanasabha Election) ಗೆ ಚುನಾವಣಾ ಆಯೋಗ ಕೂಡ ಕಹಳೆ ಊದಿದೆ. ರಾಜಕೀಯ ಪಕ್ಷಗಳು ಗೆಲ್ಲೋ ಕುದುರೆ ಬಾಲಕ್ಕೆ ಬಾಜಿ ಕಟ್ಟಲು ಮುಂದಾಗಿವೆ. ಇನ್ನೇನು ಒಂದೆರಡು ವಾರದಲ್ಲಿ ಬಿಜೆಪಿಯ ಕದನ ಕಲಿಗಳು ಕೂಡ ಅಖಾಡದಲ್ಲಿ ತೊಡೆ ತಟ್ಟಲಿದ್ದಾರೆ. ಆದರೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೂಡಿಗೆರೆಯಲ್ಲಿ ನಡೆಯುತ್ತಿರುವ ಬೆಳೆವಣಿಗೆಯಿಂದ ಹಾಲಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಕುಮಾರಸ್ವಾಮಿ ಕೂಡ ಟೆನ್ಷನ್ ಆಗಿದ್ದಾರೆ. ಇಷ್ಟು ದಿನ ಕಾರ್ಯಕರ್ತರನ್ನ ಫೇಸ್ ಮಾಡುವ ಸವಾಲು ಎದುರಿಸುತ್ತಿದ್ದ ಕುಮಾರಸ್ವಾಮಿಗೆ ಈಗ ನ್ಯಾಯಾಲಯವನ್ನ ಎದುರಿಸುವ ಸ್ಥಿತಿ ಬಂದಿದ್ದು, ಚೆಕ್ ಬೌನ್ಸ್ ಕೇಸಲ್ಲಿ ಕುಮಾರಸ್ವಾಮಿಗೆ ಬಂಧನ ಭೀತಿ ಕೂಡ ಎದುರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಕುಮಾರಸ್ವಾಮಿ ವಿರುದ್ಧ ನಾನ್ ಬೇಲೇಬಲ್ ವಾರಂಟ್ ಜಾರಿ ಮಾಡಿರೋದು ಕುಮಾರಸ್ವಾಮಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಎಂ.ಎಲ್.ಎ. ವಿರುದ್ಧ ಎನ್.ಬಿ.ಡಬ್ಲ್ಯೂ ಆದೇಶ ಜಾರಿ ಮಾಡಿರುವ ಕೋರ್ಟ್ ಖುದ್ದು ಎಸ್‍ಪಿ ಅವರಿಗೆ ಕುಮಾರಸ್ವಾಮಿಯನ್ನ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚಿಸಿದೆ. ಆದೇಶದ ಪ್ರತಿ ಎಸ್ಪಿ ಕೈಗೆ ಸಿಕ್ಕ ಕೂಡಲೇ ಕುಮಾರಸ್ವಾಮಿ ಬಂಧನವಾಗ್ತಾರೆ ಎಂಬ ಮಾತುಗಳು ಮೂಡಿಗೆರೆ ತಾಲೂಕಿನಲ್ಲಿ ಫುಲ್ ಗುಲ್ ಎದ್ದಿದೆ. ಇದನ್ನೂ ಓದಿ: ಬಸ್ ಮೇಲಿಂದ ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು
ಶಾಸಕ ಕುಮಾರಸ್ವಾಮಿ ಸಾಲದ ರೂಪದಲ್ಲಿ ನನ್ನ ಬಳಿ ಹಣ ಪಡೆದುಕೊಂಡು ಹಣವನ್ನ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ಹೂವಪ್ಪಗೌಡ ಎಂಬವರು ಜನಪ್ರತಿನಿಧಿಗಳ ಕೋರ್ಟಿನಲ್ಲಿ ದೂರು ದಾಖಲಿಸಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟಿನಲ್ಲಿ ಮೂರು ವರ್ಷಗಳಿಂದ ಕೇಸ್ ಕೂಡ ನಡೆಯುತ್ತಿತ್ತು. ಶಾಸಕರ ಹಣ ವಾಪಸ್ ನೀಡದ ಹಿನ್ನೆಲೆ ವಾದ-ವಿವಾದಗಳನ್ನ ಆಲಿಸಿದ ನ್ಯಾಯಾಲಯ ಒಂದು ತಿಂಗಳಲ್ಲಿ 1 ಕೋಟಿ, 38 ಲಕ್ಷದ 65 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಾಲ್ಕು ವರ್ಷಗಳ ಸಾದ ಶಿಕ್ಷೆ ಅಂತ ತೀರ್ಪು ನೀಡಿತ್ತು. ಪ್ರಕರಣ ಸಂಬಂಧ ಕುಮಾರಸ್ವಾಮಿ ಮೇಲ್ಮನವಿ ಕೂಡ ಹೋಗಿದ್ರು. ಆದರೆ ಅಲ್ಲಿ ಸ್ಟೇ ಸಿಕ್ಕಿಲ್ಲ. ಕನ್ವಿಕ್ಷನ್‍ಗೂ ಸ್ಟೇ ಸಿಕ್ಕಿಲ್ಲ. ಜನಪ್ರತಿನಿಧಿಗಳ ಕೋರ್ಟ್ ನೀಡಿದ್ದ ಗುಡುವು ಮುಗಿದ ಹಿನ್ನೆಲೆ ನ್ಯಾಯಾಲಯ ಕುಮಾರಸ್ವಾಮಿ ಬಂಧನಕ್ಕೆ ನಾನ್ ಬೇಲೇಬಲ್ ವಾರಂಟ್ ಇಶ್ಯು ಮಾಡಿದೆ. ಆದೇಶದ ಪ್ರತಿ ಚಿಕ್ಕಮಗಳೂರು ಎಸ್‍ಪಿ ಕೈಸೇರಿದ ಕೂಡಲೇ ಎಸ್‍ಪಿ ಕುಮಾರಸ್ವಾಮಿಯನ್ನ ಕೋರ್ಟ್‍ಗೆ ಹಾಜರುಪಡಿಸಬೇಕಿದೆ.
ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರನ್ನು ರಸ್ತೆ ಮಧ್ಯೆಯೇ ಅಡ್ಡ ಹಾಕಿ ಬಿಜೆಪಿ (BJP) ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ (Chikkamagaluru) ಮೂಡಿಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿಯಿಂದ ಹೈಡ್ರಾಮಾ ನಡೆದಿದೆ. ಮೂಡಿಗೆರೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಬೇಡವೇ ಬೇಡ. ಹೊಸ ಮುಖಕ್ಕೆ ಟಿಕೆಟ್ ಕೊಡಿ ಅಂತಾ ಕೂಗಾಟ ನಡೆಸಿದ ನೂರಾರು ಕಾರ್ಯಕರ್ತರು ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಬಿಎಸ್‍ವೈ ಅವರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ವೇಳೆ 1,000ಕ್ಕೂ ಅಧಿಕ ಬಿಜೆಪಿ ಮುಖಂಡರು ಹಾಗೂ ನಾಯಕರು ಭಾಗಿಯಾಗಿದ್ದರು. ಈ ವೇಳೆ ಶಾಸಕ ಕುಮಾರಸ್ವಾಮಿಯನ್ನು ಪೊಲೀಸರು ಬೇರೆ ಕಡೆ ಕರೆದೊಯ್ದಿದ್ದಾರೆ. ಘಟನೆ ಬೆನ್ನಲ್ಲೇ ಸಿಟ್ಟಾದ ಮಾಜಿ ಸಿಎಂ ಬಿಎಸ್‍ವೈ ರೋಡ್ ಶೋ ರದ್ದುಗೊಳಿಸಿ, ಹೆಲಿಪ್ಯಾಡ್‍ಗೆ ಹೋಗಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಹೆಣ್ಣಿನ ರೂಪವಷ್ಟೇ, ಅವರ ಗುಣಗಳೇ ಬೇರೆ: ರಮೇಶ್ ಜಾರಕಿಹೊಳಿ
ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣಕ್ಕೆ (Check Bounce Case) ಸಂಬಂಧಿಸಿದಂತೆ ಮೂಡಿಗೆರೆ ಬಿಜೆಪಿ ಶಾಸಕ (Mudigere BJP MLA) ಎಂ ಪಿ ಕುಮಾರಸ್ವಾಮಿಗೆ (MP Kumaraswamy) 4 ವರ್ಷ ಜೈಲು ಶಿಕ್ಷೆಯಾಗಿದೆ.
ಹೂವಪ್ಪಗೌಡ ಅವರಿಂದ ಎಂ.ಪಿ.ಕುಮಾರಸ್ವಾಮಿ 1.35 ಕೋಟಿ ರೂ. ಸಾಲ ಪಡೆದಿದ್ದರು. ಈ ಹಣ ಪಾವತಿ ಸಂಬಂಧ ಕುಮಾರಸ್ವಾಮಿ 8 ಚೆಕ್ ನೀಡಿದ್ದರು. ಆದರೆ ಈ ಎಲ್ಲಾ ಚೆಕ್ ಬೌನ್ಸ್ ಆಗಿತ್ತು. ಇದನ್ನೂ ಓದಿ: ಪ್ರಧಾನಿ ಮೋದಿ ಔತಣಕೂಟಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಗೈರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂವಪ್ಪಗೌಡ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾ.ನ್ಯಾ.ಜೆ.ಪ್ರೀತ್ ಅವರಿಂದು ಶಿಕ್ಷೆಯ ತೀರ್ಪು ಪ್ರಕಟಿಸಿದರು. 8 ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ 6 ತಿಂಗಳು ಒಟ್ಟು 4 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಹಿಂದುಗಳ ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಹೇಳಿದರು.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ವಿಚಾರಕ್ಕೆ ಪ್ರತಿಕ್ರಿಯಿಸಿ, ದೇವರು ನಮ್ಮ ಕಡೆಗೆ ಇದ್ದಾನೆ. ಹಿಂದೆಯೂ ಹಿಂದೂಗಳ ವಿರುದ್ಧ ಕ್ರಿಶ್ಚಿಯನ್‍ರನ್ನ ಎತ್ತಿಕಟ್ಟುವ ಪ್ರಯತ್ನ ನಡೆದಿತ್ತು. ಈಗ ಕೊಯಮತ್ತೂರು ಬಳಿಕ ಕರ್ನಾಟಕದಲ್ಲಿ ಸ್ಫೋಟ ವಿಫಲವಾಗಿದೆ ಎಂದರು.
ಹಿಂದುಗಳು ಗುರುತಿನಲ್ಲಿ ಸ್ಫೋಟ ನಡೆಸಲು ಪ್ಲಾನ್ ಮಾಡಿದ್ದಾರೆ. ಇದನ್ನೇ ಆಧರಿಸಿ ಕೆಲವು ರಾಜಕಾರಣಿಗಳು ಹಿಂದೂಗಳ ತಲೆಗೆ ಕಟ್ಟುವ ಪ್ರಯತ್ನ ನಡೆದು ಬಿಟ್ಟಿತ್ತು. ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ನಾನು ಸಿಎಂ ಜೊತೆಗೆ ವೈಯಕ್ತಿಕವಾಗಿ ಮಾತನಾಡಿ ಎನ್‍ಐಎಗೆ ನೀಡಲು ಆಗ್ರಹಿಸಿದ್ದೇನೆ. ಇದನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿಂದೆ ಜಿಹಾದಿ ಮಾನಸಿಕತೆ ಇದೆ. ದೊಡ್ಡ ಷಡ್ಯಂತ್ರ ನಡೆದಿರುವ ಸಾಧ್ಯತೆ ಇದೆ. ಸ್ಫೋಟಕ್ಕೆ ಖಚ್ಚಾ ವಸ್ತುಗಳನ್ನು ಯಾರು ನೀಡುತ್ತಿದ್ದಾರೆ ಎನ್ನುವುದು ಪತ್ತೆಯಾಗಬೇಕಿದೆ ಎಂದರು. ಇದನ್ನೂ ಓದಿ: ಕುಕ್ಕರ್ ಬಾಂಬ್ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್ ಫೋನ್
ಚುನಾವಣೆಯ ಬಗ್ಗೆ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ಗುಜರಾತ್ (Gujrat) ನಲ್ಲಿ ಓಡಾಡುತ್ತಿದ್ದೇನೆ. ಗುಜರಾತ್ ನಲ್ಲಿ ಬಿಜೆಪಿ (BJP) ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಮೋದಿ ನಾಯಕತ್ವ ಗುಜರಾತ್ ಮೇಲೆ ಅಗಾಧ ಪ್ರಭಾವ ಬೀರಿದೆ. ಈ ಬಾರಿ ಹೊಸ ದಾಖಲೆ ಸೃಷ್ಟಿಯಾಗಲಿದೆ. ನರೇಂದ್ರ ದಾಖಲೆಯನ್ನು ಭೂಪೇಂದ್ರ ಮುರಿಯಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಆಪ್ ಸೌಂಡ್ ಜಾಸ್ತಿ ಗ್ರೌಂಡ್ ನಲ್ಲಿ ಬಿಗ್ ಜಿರೋ. ಗಂಟು ಮೂಟೆ ಕಟ್ಟು ಕೊಂಡು ಹೋಗಲಿದೆ. ಅದರ ಮುಖವಾಡ ಕಳಚಿ ಬಿದ್ದಿದೆ. ಕಾಂಗ್ರೆಸ್ (Congress) ಯಾರ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತಿದೆ ಗೊತ್ತಿಲ್ಲ. ಅದೊಂದು ಅಳಿದುಳಿದ ಪಳಿಯುಳಿಕೆಯಾಗಿದೆ ಎಂದು ಹೇಳಿದರು.
ಇದೇ ವೇಳೆ ಮತದಾರರ ಮಾಹಿತಿಗೆ ಕನ್ನ ವಿಚಾರದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಆರೋಪ ಮಾಡಲು ಇದೆ. ಕಾಂಗ್ರೆಸ್‍ಗಿಂತ ಮುಂಚೆ ಬಿಜೆಪಿ ದೂರು ನೀಡಿದೆ. ಚಿಲುಮೆಗೆ ಅವಕಾಶ ನೀಡಿದ್ದೆ ಸಿದ್ದರಾಮಯ್ಯ ಸರ್ಕಾರ ಎನ್ನುವ ಆರೋಪ ಇದೆ. ಈ ಬಗ್ಗೆ ತನಿಖೆಯಾಗಲಿ ಬಿಡಿ. ಆಯೋಗ ಜನರಿಗೂ ಮತದಾರರ ಪಟ್ಟಿ ಅಪ್ಡೇಟ್ ಮಾಡಲು ಅನುಮತಿ ನೀಡಿದೆ. ಸಂಘ ಸಂಸ್ಥೆಗಳಿಗೂ ಈ ಅನುಮತಿ ನೀಡಿದೆ. ಕರಡು ಪಟ್ಟಿಯಲ್ಲಿ ನಿರ್ದಿಷ್ಟವಾಗಿ ಹೆಸರು ತಪ್ಪಿದ್ರೆ ದೂರು ನೀಡಬಹುದು. ಬಿಎಲ್‍ಓ ಇದಕ್ಕೆ ಉತ್ತರದಾಯಿ. ಬಿಎಲ್‍ಓಗೆ ಅಂತಿಮ ಪಟ್ಟಿ ಪರಿಷ್ಕರಣೆ ಮಾಡುವ ಅಧಿಕಾರ ಇದೆ ಎಂದರು.
ಮೂಡಿಗೇರೆ ಶಾಸಕ ಕುಮಾರಸ್ವಾಮಿ (MP Kumaraswamy) ಮೇಲೆ ಹಲ್ಲೆ ನಡೆದಿರುವುದು ದುರದೃಷ್ಟಕರ. ನಾನು ಅವರ ಜೊತೆಗೆ ಮಾತುಕತೆ ಮಾತನಾಡಿದ್ದೇನೆ. ಕಾರಣ ಏನು ಎನ್ನುವುದು ತನಿಖೆ ಬಳಿಕ ಗೊತ್ತಾಗಬೇಕು. ನನ್ನ ಹಾಗೇ ಅವರು ಜನ ಪ್ರತಿನಿಧಿ, ನಾನು ಹಲ್ಲೆಯನ್ನು ಸಮರ್ಥಿಸುವುದಿಲ್ಲ ಎಂದು ತಿಳಿಸಿದರು.
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ (MP Kumaraswamy) ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮೂಡಿಗೆರೆ ತಾಲೂಕಿನ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿ ದೀಪಕ್ ದೊಡ್ಡಯ್ಯ ಸ್ಪಷ್ಟಪಡಿಸಿದರು.
ಇಂದು ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿರುವ ಓಂಕಾರೇಶ್ವರ ದೇವಾಲಯದಲ್ಲಿ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ನಡೆದ ಶಾಸಕ ಕುಮಾರಸ್ವಾಮಿ ಮೇಲಿನ ಹಲ್ಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರ ಸತ್ಯಾಸತ್ಯತೆಯನ್ನೂ ನೀವೇ ಪರಿಶೀಲನೆ ಮಾಡಿ, ತಪ್ಪಿತಸ್ಥರಿಗೆ ನ್ಯಾಯ, ನೀತಿ, ಧರ್ಮದ ಆಧಾರದಲ್ಲಿ ಶಿಕ್ಷೆ ಕೊಡು ಎಂದು ಓಂಕಾರೇಶ್ವರನಲ್ಲಿ ಬೇಡಿಕೊಂಡಿದ್ದಾರೆ. ನಾನು ಒಳ್ಳೆಯ ಸಂಸ್ಕೃತಿಯಿಂದ ಬಂದವನು. ನಾನು ಅಷ್ಟು ಕೀಳುಮಟ್ಟದ ರಾಜಕಾರಣವನ್ನು ಮಾಡುವ ಸಣ್ಣ ಮನಸ್ಸಿನ ವ್ಯಕ್ತಿಯಲ್ಲ ಎಂದರು.
ಮೂರು ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಹುಲ್ಲೇಮನೆ-ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಮಹಿಳೆ ಸಾವನ್ನಪ್ಪಿದ್ದಳು. ಶಾಸಕ ಕುಮಾರಸ್ವಾಮಿ ಸ್ಥಳ ಪರಿಶೀಲನೆಗೆಂದು ಹೋದಾಗ ಕುಂದೂರು ಗ್ರಾಮದಲ್ಲಿ ಮಾತಿಗೆ-ಮಾತು ಬೆಳೆದು ಗಲಾಟೆಯಾಗಿತ್ತು. ಈ ವೇಳೆ ಸ್ಥಳೀಯರು ಶಾಸಕರ ಮೇಲೂ ಹಲ್ಲೆ ಮಾಡಿದ್ದರು. ಆ ಬಳಿಕ ಶಾಸಕ ಕುಮಾರಸ್ವಾಮಿ ನನ್ನ ಮೇಲಿನ ಹಲ್ಲೆಗೆ ದೀಪಕ್ ದೊಡ್ಡಯ್ಯನೇ ಕಾರಣ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ
ಹಾಗಾಗಿ, ಇಂದು ದೀಪಕ್ ದೊಡ್ಡಯ್ಯ ಓಂಕಾರೇಶ್ವರ ದೇವಾಲಯದಲ್ಲಿ ನನಗೂ ಈ ಹಲ್ಲೆಗೂ ಯಾವುದೇ ಸಂಬಂಧವಿಲ್ಲ. ತಪ್ಪಿತಸ್ಥರ ವಿರುದ್ಧ ನೀನೇ ಸೂಕ್ತ ಶಿಕ್ಷೆ ನೀಡು ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ನಾನು ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದೇನೆ. ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದ್ದೇನೆ. ಅಂತಹ ಕೀಳು ಮನಸ್ಸಿನ ವ್ಯಕ್ತಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಕುಮಾರಸ್ವಾಮಿ ಇದು ರಾಜಕೀಯ ದಾಳಿ ಎಂದು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಹಾಲು, ಮೊಸರಿನ ದರ 2 ರೂ. ಏರಿಕೆ
Live Tv
[brid partner=56869869 player=32851 video=960834 autoplay=true]
ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ (Elephant Attack) ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಮಹಿಳೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಹಿಳೆಯ ಶವವಿಟ್ಟು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
ಜನಪ್ರತಿನಿಧಿ ಎಂಬುದನ್ನೂ ನೋಡದೆ, ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹಿಗ್ಗಾಮುಗ್ಗ ಥಳಿಸಿ ಬಟ್ಟೆಯನ್ನೂ ಹರಿದುಹಾಕಿದ್ದಾರೆ. ಬಳಿಕ ಹರಿದ ಬಟ್ಟೆಯಲ್ಲೇ ಹೇಳಿಕೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು (Police) ವಿಫಲರಾಗಿದ್ದಾರೆ. ನಾನು ಅಲ್ಲೇ ಇರ್ತಿದ್ದೆ ಪೊಲೀಸರು ಮಿಸ್‌ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ನಾವು. ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: BJP ಎಸ್ಟಿ ಸಮಾವೇಶಕ್ಕೆ ತೆರಳಿದ್ದ 26ರ ಯುವಕ ನೀರುಪಾಲು
ಈ ವೇಳೆ ಮೃತ ಮಹಿಳೆಯ ಶವ ಮುಂದಿಟ್ಟುಕೊಂಡು ಸರ್ಕಾರ (Government of Karnataka) ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಕಾಡಾನೆ ದಾಳಿಗಳಿಗೆ ರಾಜ್ಯ ಸರ್ಕಾರ, ಅರಣ್ಯ ಇಲಾಖೆಯೇ (Forest Department) ಹೊಣೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟ ಹಿಡಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಜನರ ಆಕ್ರೋಶ ಕಡಿಮೆಯಾಗಲಿಲ್ಲ. ಘಟನೆ ನಡೆದು ಸುಮಾರು 2 ಗಂಟೆ ಬಳಿಕ ಸ್ಥಳಕ್ಕೆ ಚಿಕ್ಕಮಗಳೂರು ಅರಣ್ಯ ವಿಭಾಗದ ಡಿಎಫ್‌ಒ ಕ್ರಾಂತಿ ತೆರಳಿದ್ದು, ಇದರಿಂದ ಮತ್ತಷ್ಟು ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
Live Tv
[brid partner=56869869 player=32851 video=960834 autoplay=true]