Tag: MP DK Suresh

  • ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

    ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಂಗೌಡ

    ಹಾಸನ : ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು ಎಂದು ಶಾಸಕ ಪ್ರೀತಂಗೌಡ ಹೇಳಿದರು.

    ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಮಂತ್ರಿ ಭಾಷಣ ಮಾಡುವಾಗ ಪಾಳೇಗಾರರ ಸಂಸ್ಕೃತಿಯಲ್ಲಿ ಜಗಳಕ್ಕೆ ಹೋಗಿದ್ದಾರೆ. ಸಂಸದ ಡಿ.ಕೆ.ಸುರೇಶ್ ನಡವಳಿಕೆಯನ್ನು ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯನ್ನು ಯಾರಿಗೂ ಜಿಪಿಎ ಬರೆದುಕೊಟ್ಟಿಲ್ಲ. ಅಲ್ಲಿ ಪಾಳೇಗಾರರ ಸಂಸ್ಕೃತಿ ನಡೆಯುತ್ತಿಲ್ಲ. ಇನ್ಮುಂದೆ ಅವರ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಡೀ ರಾಜಕಾರಣಿಗಳು ತಲೆ ತಗ್ಗಿಸುವ ಕೆಲಸವನ್ನು ನಿನ್ನೆ ರಾಮನಗರದಲ್ಲಿ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ: ಎಚ್‍ಡಿಕೆ ಕಿಡಿ

    ಇಂದು ರಾಜ್ಯಾದ್ಯಂತ ಅಶ್ವತ್ಥನಾರಾಯಣ ಅವರನ್ನು ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಮಾಫಿಯಾ ಆಫ್ ರಾಮನಗರ ಖಂಡಿಸುತ್ತೇವೆ. ಅವರು ಮಾಡುತ್ತಿರುವುದು ಅವರ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಂತೆ. ಕಾರ್ಯಕ್ರಮಕ್ಕೆ ಡಿ.ಕೆ ಸುರೇಶ್ ಅವರಿಗೆ ಡೋಲ್ ಸೆಟ್ಟು ಇಟ್ಟು ಆಹ್ವಾನ ಕೊಡಲು ಆಗಲ್ಲ. ಡಿಸಿಯಿಂದ ಸಮಸ್ಯೆ ಆಗಿದ್ದರೆ ಹಕ್ಕುಚ್ಯುತಿ ಮಂಡಿಸಲಿ. ಸಾವಿರ ಜನ ಕರೆದುಕೊಂಡು ಬಂದು ಧಿಕ್ಕಾರ ಕೂಗುವುದು ಸಭ್ಯತೆಯಲ್ಲ. ಒಂದೂವರೆ ವರ್ಷ ಸಮ್ಮಿಶ್ರ ಸರ್ಕಾರ ಇತ್ತು. ನನ್ನನ್ನು ಕರೆಯುತ್ತಿರಲಿಲ್ಲ. ನಾನು ಸ್ಟೇಜ್ ಮೇಲೆ ಹೋಗಿ ಕೂಗಾಡಿದ್ನಾ. ನನಗೇನು ಕೂಗಾಡಲು ಬರಲ್ವಾ. ನನ್ನ ಹತ್ರ ಹಾಸನದಲ್ಲಿ ಜನ ಇಲ್ವಾ. ನಾನು ಆ ರೀತಿ ಮಾಡಿದ್ನಾ. ಸಮಾಧಾನವಾಗಿಯೇ ಇದ್ದೆ. ರಾಜಕೀಯ ಬಂದಾಗ ರಾಜಕೀಯ ಮಾಡೋಣ ಎಂದು ಹೇಳಿದರು.

    ಮುಂದಿನ ಚುನಾವಣೆಯಲ್ಲಿ ಹಾಸನದಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಳೆದ ಬಾರಿ ಯಾರೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದರೋ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೋ ಅವರು ಏಳಕ್ಕೆ ಏಳು ಕಾಂಗ್ರೆಸ್ ಗೆಲ್ಲುತ್ತದೆ ಎಂದಿದ್ದರು. ಏಳು ಮಕಾಡೆ ಮಲಗಿ, ಹೇಳಿದವರು ಸೋತರು ಎಂದು ಮಾಜಿ ಸಚಿವ ಎ.ಮಂಜು ವಿರುದ್ಧ ಕುಟುಕಿದರು.

    ನಂತರ 224 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳುತ್ತೇನೆ. ಮೈಕ್ ಮುಂದೆ ಹೇಳುವುದೇ ಬೇರೆ ರಾಜಕೀಯವೇ ಬೇರೆ. ಮತಗಳೇನು ಅವರ ಜೇಬಿನಲ್ಲಿ ಇರಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಟಾಂಗ್ ನೀಡಿದರು. ಇದನ್ನೂ ಓದಿ: ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

    ಇದೇ ವೇಳೆ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ಹೋರಾಟ ರೈತರಿಗೋಸ್ಕರ, ಜನರಿಗೋಸ್ಕರ ಮಾಡುವುದಾದರೆ ಮಾಡಲಿ. ಅದನ್ನು ಬಿಟ್ಟು ರಾಜಕೀಯಕ್ಕಾಗಿ ಮಾಡಬಾರದು. ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ಮೇಕೆದಾಟು ಚುನಾವಣೆ ಗಿಮಿಕ್ ಎಂದರ್ಥ. ಹಾಸನ, ಹಳೇ ಮೈಸೂರು ಭಾಗದ ಜನರಿಗೆ ಚುನಾವಣೆ ಗಿಮಿಕ್ ಅವಶ್ಯಕತೆ ಇಲ್ಲ. ಈ ಹೋರಾಟದಿಂದ ಹೊಸದಾಗಿ ಸೂಟುಬೂಟು ಹೊಲಿಸಿಕೊಳ್ಳಬಹುದು ಎಂದುಕೊಂಡಿದ್ದರೆ ಆ ಸೂಟು, ಬೂಟು ರೂಂನಲ್ಲಿ ಉಳಿಯುತ್ತದೆ ಹೊರತು ಧರಿಸಲು ಅವಕಾಶ ಸಿಗಲ್ಲ. ಮೇಕೆದಾಟು ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲು ಹೊರಟಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಮೇಕೆದಾಟು ಮಾಡುತ್ತೇವೆ ಎಂದಿದ್ದಾರೆ ಕಾದುನೋಡಿ ಎಂದಿದ್ದಾರೆ. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

  • ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ಇದು ಸಿಟಿಯಲ್ಲ ರಾಮನಗರ, ಎಸ್ಪಿಗೆ ಶಿಸ್ತು ಕಲಿಯಲು ಹೇಳು – ಡಿಕೆ ಸುರೇಶ್ ಗರಂ

    ರಾಮನಗರ: ಇದು ಸಿಟಿಯಲ್ಲ ರಾಮನಗರ ಜಿಲ್ಲೆ ನೆನಪಿರಲಿ ಎಸ್ಪಿಗೆ ಶಿಸ್ತು ಕಲಿಯಲು ಹೇಳು ಎಂದು ಸಂಸದ ಡಿಕೆ ಸುರೇಶ್ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

    ಎಲ್ಲಿ ನಿಮ್ ಎಸ್ಪಿ, ಇದು ಬೇರೆ ತರಹ ಅಲ್ಲ ನಿಮ್ ಎಸ್ಪಿಗೆ ಹೇಳಿ. ಯಶವಂತಪುರಕ್ಕೆ ಏನ್ ಡ್ಯೂಟಿಗೆ ಹೋಗಿದ್ದಾರಾ ಬಂದೋಬಸ್ತ್‍ಗೆ ಹೋಗಿದ್ದಾರಾ? ಎಲೆಕ್ಷನ್ ಅದರ ಪಾಡಿಗೆ ನಡೆಯುತ್ತೆ ಮೀಟಿಂಗ್ ಇದೆ ಬರಬೇಕು. ಇದು ರಾಮನಗರ ಜಿಲ್ಲೆ ಅಂತಾ ಹೇಳಿ. ಬೇರೆ ಎಲ್ಲ ಮಾತನಾಡೋಕೆ ಆಗುತ್ತೆ ಮೀಟಿಂಗ್ ಅಟೆಂಡ್ ಮಾಡೋಕೆ ಆಗಲ್ವಾ ಎಂದು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಮೇಲೆ ಡಿಕೆ ಸುರೇಶ್ ಕಿಡಿಕಾರಿದ್ರು.

    ನಿಮ್ ಎಸ್ಪಿಗೆ ಹೇಳು ಶಿಸ್ತು ಕಲಿತ್ಕೋಳಿ ಅಂತಾ ಗೊತ್ತಾಯ್ತಾ. ಇದು ಬೆಂಗಳೂರು ಸಿಟಿ ಅಲ್ಲ ರಾಮನಗರ ಜಿಲ್ಲೆ ನೆನಪಿರಲಿ. ಪೊಲೀಸ್ ಇಲಾಖೆನಲ್ಲಿ ಕೆಲಸ ಮಾಡ್ತಿರೋದು ಡಿಸಿಪ್ಲೈನ್ ಕಲಿತುಕೊಳ್ಳೋಕೆ ಹೇಳು. ಉಳಿದಿದ್ದನ್ನು ಅಮೇಲೆ ಮಾತನಾಡುತ್ತೇನೆ. ನಾನ್ ಹೇಳ್ದೆ ಎಂದು ನಿಮ್ ಎಸ್ಪಿಗೆ ಹೇಳಿ ಎಂದು ರಾಮನಗರ ಟೌನ್ ಸಬ್ ಇನ್ಸ್ ಪೆಕ್ಟರ್ ಹೇಮಂತ್ ಗೆ ಹೇಳಿದ ಸಂಸದ ಡಿಕೆ ಸುರೇಶ್ ಸೂಚಿಸಿದ್ದಾರೆ.

    ಜಿಲ್ಲೆಗೆ ಬಂದಿರುವ ಅಧಿಕಾರಿಗಳೆಲ್ಲ ಇಲ್ಲಿ ಕೆಲಸ ಮಾಡ್ಕೊಂಡು ಇರಬೇಕು, ನಾನು ಅಷ್ಟು ದುಡ್ಡು ಇಷ್ಟು ದುಡ್ಡು ಕೊಟ್ಟು ಬಂದಿದ್ದೀನಿ ಅನ್ನೋದಲ್ಲ. ಕೆಲಸ ಮಾಡೋಕೆ ಬಂದಿದ್ದೀರಿ ಕೆಲಸ ಮಾಡ್ಕೊಂಡು ಹೋಗಬೇಕು ಅಷ್ಟೇ. ಹೊಸದಾಗಿ ಜಿಲ್ಲೆಗೆ ಬಂದಿರುವವರು ತಮ್ಮ ಪರಿಚಯ ಮಾಡಿಕೊಳ್ಳಿ ಎಂದು ಡಿಸಿಯಿಂದ ಹಿಡಿದು ಸಿಇಓ ಸೇರಿದಂತೆ ಹೊಸದಾಗಿ ಬಂದಿರುವ ಇಲಾಖೆಯ ಅಧಿಕಾರಿಗಳಿಗೆ ಸರೇಶ್ ಅವರು ಹೇಳಿದ್ದಾರೆ.

    ಒಬ್ಬೊಬ್ಬರಾಗಿ ಎಲ್ಲರನ್ನೂ ಪರಿಚಯ ಮಾಡಿಕೊಂಡು ಸಾರ್ವಜನಿಕ ಕೆಲಸ ಮಾತ್ರ ಮಾಡಬೇಕು. ಬೇರೆ ರೀತಿಯಲ್ಲಿ ಪಕ್ಷದವರು ಹೇಳಿದರು, ಮುಖಂಡರು, ಕಾರ್ಯಕರ್ತರು ಹೇಳೋದಲ್ಲ ಇಲ್ಲಿ ನಡೆಯಲ್ಲ. ಇಲ್ಲಿ ಅಗಲ್ಲ ಅನ್ನೋರು ಜಾಗ ಖಾಲಿ ಮಾಡ್ಕೊಂಡು ಹೋಗಿ ಎಂದು ಡಿಕೆ ಸುರೇಶ್ ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ.

  • ಇಡಿ ಕಚೇರಿಯಿಂದ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಡಿಕೆಶಿ ಶಿಫ್ಟ್

    ಇಡಿ ಕಚೇರಿಯಿಂದ ತುಘಲಕ್ ರೋಡ್ ಪೊಲೀಸ್ ಠಾಣೆಗೆ ಡಿಕೆಶಿ ಶಿಫ್ಟ್

    ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣದ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ವಿಶೇಷ ಕೋರ್ಟ್ ಸೆ. 13 ರವರೆಗೂ ಜಾರಿ ನಿರ್ದೇಶನಾಲಯ ಕಸ್ಟಡಿಗೆ ನೀಡಿದೆ. ಕೋರ್ಟ್ ಆದೇಶದ ಬಳಿಕ ನ್ಯಾಯಾಲಯದಿಂದ ಇಡಿ ಕಚೇರಿಗೆ ಡಿಕೆಶಿರನ್ನ ಕರೆದ್ಯೊಯಲಾಗಿತ್ತು. ಅಲ್ಲಿಂದ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದೆ.

    ದೆಹಲಿಯ ಲೋಕ್ ನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ಕರೆತಂದು ಕೆಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ್ದರು. ಅಲ್ಲಿಯೇ ಊಟ ಸೇವಿಸಿದ ಡಿಕೆಶಿ ಅವರನ್ನು ಬಳಿಕ ಠಾಣೆಗೆ ಕರೆತಂದರು. ಇಂದು ರಾತ್ರಿಯನ್ನು ಡಿಕೆಶಿ ಅವರು ಪೊಲೀಸ್ ಠಾಣೆಯಲ್ಲೇ ಕಳೆಯಲಿದ್ದಾರೆ. ಕೋರ್ಟ್ ಆದೇಶ ಬರುತ್ತಿದಂತೆ ಇಡಿ ಕಚೇರಿಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು. ಇಂದು ಬೆಳಗ್ಗೆ ಇಂದ ಇಡಿ ಕಚೇರಿ, ನ್ಯಾಯಾಲಯದ ಎದುರು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈ ವೇಳೆಗೆ ಅಲ್ಲಿಂದ ತೆರಳಿದ್ದರು. ಕೆಲ ಮಂದಿಯಷ್ಟೇ ಕಚೇರಿ ಬಳಿ ಉಳಿದಿದ್ದರು.

    ಇದಕ್ಕೂ ಮುನ್ನ ನ್ಯಾಯಾಲಯ ಆವರಣದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ಬಿಜೆಪು ಸರ್ಕಾರ ಗೂಂಡಾ ಪ್ರವೃತ್ತಿ ತೋರುತ್ತಿದ್ದು, ದೇಶದ್ಯಾಂತ ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ನ್ಯಾಯಾಲಯದ ಆದೇಶ ಗೌರವಿಸಿ ಮುಂದಿನ ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.

  • ನ್ಯಾಯಾಲಯದ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ ಸಹೋದರ ಡಿಕೆ ಸುರೇಶ್

    ನ್ಯಾಯಾಲಯದ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಡಿಕೆಶಿ ಸಹೋದರ ಡಿಕೆ ಸುರೇಶ್

    ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಇನ್ನೂ 9 ದಿನಗಳ ಕಾಲ ಇಡಿ ವಶದಲ್ಲಿಯೇ ಇರಲಿದ್ದು, ದೆಹಲಿಯ ಫ್ಲ್ಯಾಟ್‍ನಲ್ಲಿ ಪತ್ತೆಯಾದ 8.59 ಕೋಟಿ ಅಕ್ರಮ ಹಣ ಪತ್ತೆ ಪ್ರಕರಣ ಸಂಬಂಧ ನಿನ್ನೆ ರಾತ್ರಿ ಅರೆಸ್ಟ್ ಆಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಸೆಪ್ಟೆಂಬರ್ 13ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಆದೇಶ ನೀಡುತ್ತಿದಂತೆ ಸಂಸದ ಡಿಕೆ ಸುರೇಶ್ ಅವರು ಕಣ್ಣೀರಿಟ್ಟ ದೃಶ್ಯಕಂಡು ಬಂತು.

    ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ನಾನು ಒಬ್ಬ ಮನುಷ್ಯ ಎಂದರು. ಇದೇ ವೇಳೆ ಕಾರ್ಯಕರ್ತರು ಅಭಿಮಾನಿಗಳಿಗೆ ದೆಹಲಿಗೆ ಆಗಮಿಸದಂತೆ ಮನವಿ ಮಾಡಿದರು. ಡಿಕೆ ಶಿವಕುಮಾರ್ ಅವರು ಧೈರ್ಯದಿಂದ ಇರುವಂತೆ ಎಲ್ಲರಿಗೂ ಹೇಳಿದ್ದಾರೆ. ನ್ಯಾಯಾಲಯಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ. ನಾವು ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಭಾವುಕರಾಗಿ ಹೇಳಿದರು.

    ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದ್ದು, ಕಾನೂನು ತಿರುಚುವ ಕೆಲಸವನ್ನು ಬಿಜೆಪಿ ಮಾಡಿದೆ. ಕರ್ನಾಟದಲ್ಲಿ ಪ್ರಬಲ ನಾಯಕರನ್ನು ಮಣಿಸಲು ಈ ರೀತಿ ಮಾಡಿದೆ. ನಾವೆಲ್ಲರೂ ಕೂಡ ಡಿಕೆ ಶಿವಕುಮಾರ್ ಅವರ ಬೆಂಬಲಕ್ಕೆ ನಿಂತು ಅವರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡೋಣ. ಸೆಪ್ಟೆಂಬರ್ 13ರಂದು ಡಿಕೆಶಿ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ ಎಂದರು.

    ಇದಕ್ಕೂ ಮುನ್ನ ಸರಿಸುಮಾರು ಒಂದೂಮುಕ್ಕಾಲು ಗಂಟೆ ನಡೆದ ಸುದೀರ್ಘ ವಾದ-ಪ್ರತಿವಾದದ ಆಲಿಸಿದ ಪಿಎಂಎಲ್‍ಎ ಕೋರ್ಟ್ ನ್ಯಾಯಧೀಶ ಅಜಯ್ ಕುಮಾರ್ ಕುಹುರ್, ಡಿಕೆಶಿಯನ್ನು ಇ.ಡಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು. ಕೋರ್ಟ್ ಆದೇಶದ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರ ಮೊಗದಲ್ಲಿ ನಿರಾಸೆ ಆವರಿಸಿತು. ಅಣ್ಣನ ಸ್ಥಿತಿ ನೋಡಿ ಕೋರ್ಟ್ ಹಾಲ್‍ನಲ್ಲಿಯೇ ಸಂಸದ ಡಿಕೆ ಸುರೇಶ್ ಬಿಕ್ಕಿ ಬಿಕ್ಕಿ ಅತ್ತರು.

  • ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗ – ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ

    ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗ – ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ

    ಬೆಂಗಳೂರು: ಈಗಾಲ್ಟನ್ ರೆಸಾರ್ಟ್ ನಲ್ಲಿ ಮಾರಾಮಾರಿ ನಡೆಸಿರುವವರು ಸಾಮಾನ್ಯ ವ್ಯಕ್ತಿಗಳಲ್ಲ. ಅವರಿಬ್ಬರೂ ಸಹ ಶಾಸಕರಾಗಿದ್ದು, ಆ ಸ್ಥಾನದ ಗೌರವವನ್ನು ಉಳಿಸಿಕೊಂಡು ಬೆಳೆಸಿಕೊಳ್ಳಬೇಕಿತ್ತು ಎಂದು ಸಂಸದ ಸುರೇಶ್ ಹೇಳಿದ್ದಾರೆ.

    ಶಾಸಕರ ಹೊಡೆದಾಟದ ವಿಡಿಯೋ ಬಹಿರಂಗವಾದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸುರೇಶ್ ಮಾತನಾಡಿದ್ದಾರೆ. ಜವಾಬ್ದಾರಿಯುತ ಶಾಸಕರ ಸ್ಥಾನದಲ್ಲಿದ್ದು ಈ ರೀತಿ ಕುಡಿದು ಗಲಾಟೆ ಮಾಡಿಕೊಂಡಿರುವುದು ಸರಿಯಲ್ಲ. ಆದರೆ ಪ್ರಕರಣ ನ್ಯಾಯಾಲಯಲ್ಲಿ ಇರುವ ಕಾರಣ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಉತ್ತಮವಲ್ಲ ಎಂದರು.

    ಇಬ್ಬರು ಶಾಸಕರ ನಡುವಿನ ಹೊಡೆತ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಸಂಧರ್ಭದಲ್ಲಿಯೇ, ಇಬ್ಬರು ಶಾಸಕರು ಹೊಡೆದಾಡುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ. ಈ ವರದಿಯನ್ನು ನಾನು ನೋಡಿದ್ದು, ವಿಡಿಯೋ ತುಣುಕು ಯಾರು ಕೊಟ್ಟಿದ್ದಾರೆ ಅವರೇ ಸಂಪೂರ್ಣ ವಿಡಿಯೋವನ್ನು ಕೊಟ್ಟರೆ ಪೊಲೀಸರಿಗೆ ಹಾಗು ನ್ಯಾಯಾಲಯಕ್ಕೆ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ ಎಂದರು. ಇದನ್ನು ಓದಿ: ರೆಸಾರ್ಟ್ ನಲ್ಲಿ ಶಾಸಕರಿಬ್ಬರ ಡಿಶುಂ ಡಿಶುಂ – ಫಸ್ಟ್ ಪಂಚ್ ಮಾಡಿದ್ಯಾರು?

    ಇಬ್ಬರು ಶಾಸಕರಾಗಿರುವ ಕಾರಣ ಅವರ ಗೌರವವನ್ನು ಉಳಿಸಿ ಕಾಪಾಡಿಕೊಂಡು ಹೋಗಬೇಕು. ಕುಡಿದು ಈ ರೀತಿ ಮಾರಾಮಾರಿ ನಡೆದಿರುವುದು ಸರಿಯಲ್ಲ. ಗಲಾಟೆ ಎಷ್ಟು ನಿಮಿಷ, ಎಷ್ಟು ಗಂಟೆಗಳ ಕಾಲ ಗಲಾಟೆ ನಡೆದಿದೆ ಎಂದು ವಿಡಿಯೋ ಮಾಡಿದವರೆ ಹೇಳಬೇಕು. ಹುಡುಗಿ ವಿಷಯಕ್ಕೆ ಗಲಾಟೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಆ ಬಗ್ಗೆ ನಮಗೇನು ಗೊತ್ತಿಲ್ಲ ಎಂದರು.

    2019ರ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯ ಭಾಗವಾಗಿ ಇಂದು ಬೆಂಗಳೂರು ಹೊರವಲಯ ಮಳೆನಲ್ಲಸಂದ್ರ ಗ್ರಾಮದ ಕಾರ್ಯಕ್ರಮದಲ್ಲಿ ಸಂಸದರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಶಾಸಕರ ಬಡಿದಾಟಕ್ಕೆ ಆಪರೇಷನ್ ಕಮಲ ಕಾರಣ – ಎದೆ ನೋವು ಡೈಲಾಗ್ ಹೊಡೆದು ಉಲ್ಟಾ ಹೊಡೆದ ಡಿಕೆ ಸುರೇಶ್

    ಬೆಂಗಳೂರು: ಈಗಲ್ಟನ್ ರೆಸಾರ್ಟಿನಲ್ಲಿ ನಡೆದ ಜಗಳಕ್ಕೆ ಬಿಜೆಪಿ ‘ಆಪರೇಷನ್ ಕಮಲ’ ಕಾರಣ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಸಭೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಆಗಮಿಸಿ ಮಾತನಾಡಿದ ಡಿಕೆ ಸುರೇಶ್ ಅವರು, ಬಿಜೆಪಿಯ ಆಪರೇಷನ್ ಕಮಲದಲ್ಲಿ ಹಣದ ವ್ಯವಹಾರವೂ ನಡೆದಿದ್ದು, ರೆಸಾರ್ಟಿನಲ್ಲಿ ಶಾಸಕರ ನಡುವೆ ಗಲಾಟೆಗೆ ಬಿಜೆಪಿಯೇ ಕಾರಣ. ಅವರು ಕೈಗೊಂಡಿದ್ದ ಆಪರೇಷನ್ ಕಮಲದಿಂದಲೇ ನಾವು ರೆಸಾರ್ಟಿಗೆ ಹೋಗಿದ್ದು, ಇಲ್ಲವಾದರೆ ರೆಸಾರ್ಟಿಗೆ ಹೋಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾಧ್ಯಮಗಳ ವರದಿಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಮಾಧ್ಯಮದವರು ಕೆಲವು ವಿಷಯ ಮುಚ್ಚಿಟ್ಟಿದ್ದಾರೆ. ಆಪರೇಷನ್ ಕಮಲ ಯಾವ ಹಂತದಲ್ಲಿ ನಡೆಯುತ್ತಿದೆ. ಎಷ್ಟು ಹಣಕಾಸಿನ ವ್ಯವಹಾರ ನಡೆದಿದೆ ಎನ್ನುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇದೆ. ಆದರೆ ಮಾಧ್ಯಮಗಳು ಅದನ್ನು ಮುಚ್ಚಿಟ್ಟಿದ್ದಾರೆ ಎಂದು ಶಾಸಕರ ನಡುವಿನ ಗಲಾಟೆಯ ಬಗ್ಗೆ ಸಮರ್ಥನೆ ನೀಡಲು ಯತ್ನಿಸಿ ಗೊಂದಲ ವಾತಾವರಣ ನಿರ್ಮಾಣ ಮಾಡುವಂತೆ ಹೇಳಿಕೆ ನೀಡಿದರು.

    ಇದೇ ವೇಳೆ ಆಪರೇಷನ್ ಕಮಲದಲ್ಲಿ ನಡೆದಿದೆ ಎಂದು ಹೇಳುತ್ತಿರುವ ಹಣಕಾಸಿನ ವ್ಯವಹಾರದ ಬಗ್ಗೆ ನಿಮಗೆ ಇರುವ ಮಾಹಿತಿ ನೀಡಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಎಲ್ಲವೂ ಮಾಧ್ಯಮಗಳಿಗೆ ತಿಳಿದಿದೆ ಎಂದು ಹೇಳಿ ಜಾರಿಕೊಳ್ಳುವ ಪ್ರಯತ್ನ ನಡೆಸಿದರು. ಇದನ್ನು ಓದಿ: ಈಗಲ್ಟನ್ ರೆಸಾರ್ಟಿನಲ್ಲಿ ರಾತ್ರಿ ನಡೆದಿದ್ದೇನು? ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಗಣೇಶ್

    ಉಲ್ಟಾ ಹೊಡೆದ ಡಿಕೆ ಸುರೇಶ್: ಶಾಸಕ ಆನಂದ್ ಸಿಂಗ್ ಅವರು ಎದೆ ನೋವಿನ ಕಾರಣ ಆಸ್ಪತ್ರೆಗೆ ಸೇರಿದ್ದಾರೆ ಎಂದು ಅಂದು ಮಾಹಿತಿ ನೀಡಿದ್ದ ಡಿಕೆ ಸುರೇಶ್ ಅವರು, ಇಂದು ಕಾಂಗ್ರೆಸ್ ಶಾಸಕ ಶಾಸಕರ ನಡುವಿನ ಗಲಾಟೆಗೆ ಆಪರೇಷನ್ ಕಮಲವೇ ಕಾರಣ ಎಂದು ಹೇಳಿ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದಾರೆ. ಇದೇ ವೇಳೆ ಯಾವುದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನಿನ ಪ್ರಕಾರ ಪೊಲೀಸರು ಕ್ರಮ ತೆಗದುಕೊಳ್ಳುತ್ತಾರೆ. ಆನಂದ್ ಸಿಂಗ್ ಬಹುಬೇಗ ಗುಣಮುಖರಾಗುತ್ತಾರೆ ಎಂದು ತಿಳಿಸಿದರು.

    ಆಪರೇಷನ್ ಕಮಲದ ಬಗ್ಗೆ ಪದೇ ಪದೇ ದಾಖಲೆ ಬಿಡುಗಡೆ ಮಾಡುತ್ತೇವೆ. ಈ ಮೂಲಕ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು, ಸೂಕ್ತ ಸಮಯ ಬಂದರೆ ಬಿಡುಗಡೆ ಮಾಡುತ್ತೇವೆ ಎಂದು ಜಾರಿಕೊಂಡಿದ್ದರು. ಆದರೆ ಇದುವರೆಗೂ ದೋಸ್ತಿ ಸರ್ಕಾರದ ಯಾವುದೇ ನಾಯಕರು ಕೂಡ ಅಧಿಕೃತವಾಗಿ ಹಣಕಾಸಿನ ವ್ಯವಹಾದ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.

    https://www.youtube.com/watch?v=yHwEYzuJJPM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಡೆಯ ಕ್ಷಣದಲ್ಲಿ ರಾಮನಗರದಲ್ಲಿ ಬಿಜೆಪಿಗೆ ಆಪರೇಷನ್ ನಡೆದಿದ್ದು ಹೇಗೆ?

    ಕಡೆಯ ಕ್ಷಣದಲ್ಲಿ ರಾಮನಗರದಲ್ಲಿ ಬಿಜೆಪಿಗೆ ಆಪರೇಷನ್ ನಡೆದಿದ್ದು ಹೇಗೆ?

    ಬೆಂಗಳೂರು: ರಾಜ್ಯ ಉಪಚುನಾವಣೆ ಘೋಷಣೆ ಆಗುತ್ತಿದಂತೆ ಮತ್ತೆ ಅಧಿಕಾರ ಪಡೆಯುವ ಕನಸು ಕಂಡಿದ್ದ ಬಿಜೆಪಿ ನಾಯಕರಿಗೆ ಪಕ್ಷದ ರಾಮನಗರ ಕ್ಷೇತ್ರದ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಾಂಗ್ರೆಸ್‍ಗೆ `ಘರ್‌ವಾಪಸಿ’ ಆಗಿದ್ದಾರೆ. ಚುನಾವಣೆಯ ಕೊನೆಯ ಹಂತದಲ್ಲಿ ಬಿಜೆಪಿಗೆ ಅಭ್ಯರ್ಥಿಯನ್ನೇ ವಾಪಸ್ ಕರೆತರುವ ಮೂಲಕ ಡಿಕೆ ಸಹೋದರರು ಶಾಕ್ ನೀಡಿದ್ದು, ಈ ಆಪರೇಷನ್ ಬಿಜೆಪಿಯಲ್ಲಿ ತಳಮಳವನ್ನು ಉಂಟುಮಾಡಿದೆ.

    ರಾಮನಗರದಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದ ಎಲ್ ಚಂದ್ರಶೇಖರ್ ಅವರು ಬಿಜೆಪಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರ ಮುಂದಾಳತ್ವದಲ್ಲಿ ಯಡಿಯೂರಪ್ಪನವವರನ್ನು ಭೇಟಿ ಮಾಡಿ ಪಕ್ಷ ಸೇರಿದ್ದರು. ಆದರೆ ಚುನಾವಣೆಯಲ್ಲಿ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಳಿಕ ಪಕ್ಷದ ಪರ ಪ್ರಚಾರಕ್ಕೆ ರಾಮನಗರಕ್ಕೆ ಬಿಜೆಪಿ ನಾಯಕರು ಆಗಮಿಸಿರಲಿಲ್ಲ. ಇದರಿಂದ ಕಂಗೆಟ್ಟ ಚಂದ್ರಶೇಖರ್ ರಾತ್ರೋ ರಾತ್ರಿ ರಸ್ತೆ ಮಧ್ಯೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಬುಧವಾರ ರಾತ್ರಿ 11.30ಕ್ಕೆ ಡಿಕೆ ಸುರೇಶ್‍ಗೆ ಫೋನ್ ಮಾಡಿದ ಚಂದ್ರಶೇಖರ್ ಮಾತುಕತೆ ನಡೆಸಲು ಅವಕಾಶ ಕೋರಿದ್ದರು.

    ಇತ್ತ ಚಂದ್ರಶೇಖರ್ ಮನವಿ ಮೇರೆಗೆ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ನಗರದ ಕೆಂಗೇರಿ ಬಳಿ ಭೇಟಿ ಮಾಡಿದ್ದರು. ಇಬ್ಬರ ನಡುವೆಯೂ ಸುಮಾರು 4 ಗಂಟೆಯಷ್ಟು ಕಾಲ ಮಾತುಕತೆ ನಡೆದ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗುವ ಕುರಿತು ಚಂದ್ರಶೇಖರ್ ಅವರಿಗೆ ಡಿಕೆ ಸುರೇಶ್ ಆಫರ್ ನೀಡಿದ್ದರು. ಈ ಮಾತಿಗೆ ಒಪ್ಪಿಗೆ ಸೂಚಿಸಿದ ಚಂದ್ರಶೇಖರ್ ಅವರು ಬಿಜೆಪಿಯಲ್ಲಿದ್ದು ಸೋತು ಮೂಲೆಗುಂಪು ಆಗುವುದರ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದೇ ಉತ್ತಮ ಎಂದು ತಿಳಿಸಿ ಮರಳಿ ಕಾಂಗ್ರೆಸ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಡಿಕೆ ಸುರೇಶ್ ಅವರ ಸಮ್ಮುಖದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಶೇಖರ್ ಅವರು ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದು, 15 ದಿನಗಳಲ್ಲೇ ಬಿಜೆಪಿ ಪಕ್ಷದಲ್ಲಿನ ಒಳಜಗಳಗಳಿಂದ ತಮಗೆ ಬೇಸರ ಉಂಟಾಗಿದೆ ಎಂದು ಹೇಳಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಣಯಕೈಗೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದರು.

    ಇತ್ತ ಎಲ್ ಚಂದ್ರಶೇಖರ್ ಸೇರ್ಪಡೆ ವೇಳೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದು ಹಾಗೂ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಕುರಿತು ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದಿರುವ ಪರಿಣಾಮ ರಾಮನಗರದ ಉಪಚುನಾವಣೆ ತನ್ನ ಕುತೂಹಲವನ್ನು ಕಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭ್ರಷ್ಟರ ಮೇಲೆ ಎಸಿಬಿ ದಾಳಿ – ಎಲ್ಲರೂ ಡಿಕೆಶಿ ಆಪ್ತರೇ: ಡಿಕೆ ಸುರೇಶ್ ವ್ಯಂಗ್ಯ

    ಭ್ರಷ್ಟರ ಮೇಲೆ ಎಸಿಬಿ ದಾಳಿ – ಎಲ್ಲರೂ ಡಿಕೆಶಿ ಆಪ್ತರೇ: ಡಿಕೆ ಸುರೇಶ್ ವ್ಯಂಗ್ಯ

    ರಾಮನಗರ: ಇಲ್ಲಿ ಎಲ್ಲರೂ ಕೂಡ ಸಚಿವ ಡಿಕೆ ಶಿವಕುಮಾರ್ ಆಪ್ತರೇ, ಮಾಧ್ಯಮದವರು ಕೂಡ ಡಿಕೆಶಿಯವರ ಆಪ್ತರು. ಯಾರಿಗೆ ಅನುಕೂಲ ಆಗುತ್ತೆ ಎಲ್ಲರಿಗೂ ಅವರು ಆಪ್ತರೇ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಇಂದು ಬೆಳಗ್ಗೆ ಕೆಐಎಡಿಬಿ ಮತ್ತು ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಆಪಾರ ಹಣ, ಆಸ್ತಿಯೊಂದಿಗೆ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ ಗೌಡಯ್ಯ ಡಿಕೆ ಶಿವಕುಮಾರ್ ಆಪ್ತರು ಎಂದು ವರದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ಎಲ್ಲರೂ ಡಿ.ಕೆ ಶಿವಕುಮಾರ್ ಆಪ್ತರೇ. ಮಾಧ್ಯಮದವರು ಕೂಡ ಅವರಿಗೆ ಮತ್ತು ಡಿಕೆ ಸುರೇಶ್‍ಗೆ ಆಪ್ತರು. ಆದರೆ ಡಿ.ಕೆ ಶಿವಕುಮಾರ್ ಆಪ್ತರಾದರೆ ನಿಮಗೂ ಕೂಡಾ ಅನುಕೂಲವಾಯಿತು ಎಂದರ್ಥವೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

    ಗೌಡಯ್ಯ ಅವರು ಡಿ.ಕೆ ಶಿವಕುಮಾರ್ ಇಲಾಖೆಯಲ್ಲಿ ಕೆಲಸ ಮಾಡಿಲ್ಲ. ಅವರ ಜೊತೆಯೂ ಇಲ್ಲ. ಗೌಡಯ್ಯ ಅವರು ಒಬ್ಬ ಸರ್ಕಾರಿ ಅಧಿಕಾರಿ ಅಷ್ಟೇ. ಅಲ್ಲದೇ ಸಾಕಷ್ಟು ಜನರು ಸಚಿವ ಡಿ.ಕೆ ಶಿವಕುಮಾರ್‍ಗೆ ಆಪ್ತರಿದ್ದಾರೆ. ನೀವು ಕೂಡ ಆಪ್ತರೇ ಎಂದು ಹೇಳಿದರು.

    ಇದೇ ವೇಳೆ ರಾಮನಗರ ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಘೋಷಣೆಯಾದ ಬಳಿಕ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮೈತ್ರಿ ರಾಜಕೀಯ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಪಕ್ಷದ ಆಂತರಿಕವಾಗಿ ಚರ್ಚೆಯಾಗಿಲ್ಲ. ಎಲ್ಲದರ ಕುರಿತು ಪಕ್ಷದ ಮುಖಂಡರು, ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದರು.  ಇದನ್ನೂ ಓದಿ: ಬೆಳ್ಳಂಬೆಳಗ್ಗೆ KIADB, BDA, ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ – ಅಧಿಕಾರಿಗಳನ್ನು ನೋಡ್ತಿದ್ದಂತೇ ಕಂತೆಕಂತೆ ನೋಟುಗಳ ಬ್ಯಾಗ್ ಬಿಸಾಕಿದ್ರು! 

    ರಾಮನಗರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಅವರ ಪುತ್ರಿ ಶಾಂಭವಿ ಅವರು ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಅವಕಾಶವಿದೆ. ಯಾರೇ ಚುನಾವಣೆಗೆ ನಿಂತರೂ ಸ್ವಾಗತ ಮಾಡುತ್ತೇವೆ. ನಾನು ಕೂಡ ಸ್ಪರ್ಧಿಸಲು ಸಮಯ ಬಂದಾಗ ಸ್ಪರ್ಧೆ ಮಾಡುವುದಾಗಿ ತಿಳಿಸಿದರು.  ಇದನ್ನೂ ಓದಿ:  ಎಸಿಬಿ ದಾಳಿ ವೇಳೆ ಪಾರ್ಕಿಂಗ್ ಕಾರಿನಲ್ಲಿ ಹಣ, ಪೈಪಿನಲ್ಲಿ ಚಿನ್ನ ಪತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಜೆಪಿಗೆ ಬಂದ್ರೆ ಎಲ್ಲಾ ಸಮಸ್ಯೆ ಪರಿಹಾರ ಎಂಬ ಆಫರ್ ಬಂದಿತ್ತು : ಡಿಕೆ ಸುರೇಶ್

    ಬಿಜೆಪಿಗೆ ಬಂದ್ರೆ ಎಲ್ಲಾ ಸಮಸ್ಯೆ ಪರಿಹಾರ ಎಂಬ ಆಫರ್ ಬಂದಿತ್ತು : ಡಿಕೆ ಸುರೇಶ್

    ಬೆಂಗಳೂರು: ನೀವು ಬಿಜೆಪಿಗೆ ಬಂದರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತೆ ಎಂದು ಬಿಜೆಪಿ ನಾಯಕರು, ಕೆಲ ಆಪ್ತರು ನಮಗೆ ಬಿಜೆಪಿ ಸೇರ್ಪಡೆಗೆ ಆಫರ್ ನೀಡಿದ್ದರು ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಸಂಸದ ಡಿಕೆ ಸುರೇಶ್ ಅವರು, ರಾಜ್ಯದ ಇತರೆ ನಾಯಕರಿಗೆ ಆಫರ್ ನೀಡಿದಂತೆ ನಮಗೂ ಬಿಜೆಪಿ ನಾಯಕರು ಆಫರ್ ನೀಡಿದ್ದರು. ನಾವು ಸ್ವಲ್ಪ ಸ್ಟ್ರಾಂಗ್ ಇದ್ದೀವಿ ಎನ್ನುವ ಕಾರಣಕ್ಕೆ ಹೆಚ್ಚು ಒತ್ತಡ ತಂದಿದ್ದರು. ಅಲ್ಲದೇ ಐಟಿ, ಇಡಿ, ಸಿಬಿಐ ಎಲ್ಲಾ ಸಮಸ್ಯೆ ಪರಿಹಾರ ಅಗುತ್ತೆ ಎಂಬ ಆಫರ್ ನೀಡಿದ್ದಾಗಿ ಹೇಳಿದ್ದಾರೆ.

    ನಮ್ಮ ಪಕ್ಷ ಮುಖಂಡರು ನಿರಂತರವಾಗಿ ನಮಗೆ ಬೆಂಬಲ ನೀಡಿದ್ದಾರೆ. ನಮ್ಮ ಮೇಲೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾವು ನಂಬಿರುವ ತತ್ವ, ಸಿದ್ಧಾಂತ, ಜನಸೇವೆ ಮಾಡಲು ಪಕ್ಷದಲ್ಲೇ ಮುಂದುವರೆಯುತ್ತೆವೆ. ಬೇರೆ ಪಕ್ಷಕ್ಕೆ ಹೋಗಿ ನಾವು ಮಾಡುವಂತಹದ್ದು ಏನು ಇಲ್ಲ. ಕಾಂಗ್ರೆಸ್ ನಲ್ಲಿದೇ ಜನ ಸೇವೆ ಮುಂದುವರೆಸುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿ ಯಾವುದೇ ಭಯ ಇಲ್ಲಾ ಎಂದು ಹೇಳಿದರು.

    ಕಾಂಗ್ರೆಸ್ ಪಕ್ಷದಲ್ಲಿ ನಿಮ್ಮನ್ನು ನಿರ್ಲಕ್ಷ ಮಾಡಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಸೇರಿದಂತೆ ನಾನು ಮಾಡುತ್ತಿದ್ದು, ಪಕ್ಷ ಯಾವುದೇ ಜವಾಬ್ದಾರಿ ನೀಡದೆ ಇದ್ದರೆ ಎಲ್ಲಾ ಶಾಸಕರ ಹಾಗೇ ಜನರ ಸೇವೆ ಮಾಡುತ್ತೇವೆ. ಆದರೆ ಯಾರ ಮೇಲೆ ಬಿದ್ದು ಯಾವುದೇ ಸ್ಥಾನ ನೀಡಿ ಎಂದು ಇದುವರೆಗೂ ಹೋಗಿಲ್ಲ, ಮುಂದೆ ಹೋಗುವ ಸಂದರ್ಭವೂ ಬರಲ್ಲ ಎಂದರು.