Tag: MP Chandrappa

  • ಸಿದ್ದರಾಮಯ್ಯ ಕೊಟ್ಟ ಅಕ್ಕಿ ಉಂಡು, ಬೇರೆಯವ್ರಿಗೆ ಮತ ಹಾಕ್ತೀರಲ್ಲ ಇದ್ಯಾವ ನ್ಯಾಯ- ಮಾಜಿ ಸಂಸದ ಚಂದ್ರಪ್ಪ

    ಸಿದ್ದರಾಮಯ್ಯ ಕೊಟ್ಟ ಅಕ್ಕಿ ಉಂಡು, ಬೇರೆಯವ್ರಿಗೆ ಮತ ಹಾಕ್ತೀರಲ್ಲ ಇದ್ಯಾವ ನ್ಯಾಯ- ಮಾಜಿ ಸಂಸದ ಚಂದ್ರಪ್ಪ

    ಚಿತ್ರದುರ್ಗ: ಬಿಜೆಪಿಯನ್ನು ತೆಗಳುವ ಭರದಲ್ಲಿ ಮಾಜಿ ಸಂಸದ ಚಂದ್ರಪ್ಪ ಮತದಾರರ ವಿರುದ್ಧವೇ ಕಿಡಿಕಾರಿದ್ದಾರೆ.

    ಸಿಎಎ(ಪೌರತ್ವ ಕಾಯ್ದೆ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ವಿರೋಧಿಸಿ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅನ್ನ ಕೊಟ್ಟವರನ್ನು ಬಿಟ್ಟು ಬೇರೆಯವರಿಗೆ ಮತ ಹಾಕಿದ್ದು ದೇಶದ್ರೋಹ ಅಲ್ಲವೇ? ಯಾವುದೇ ಮನುಷ್ಯ ತಾನು ಬಲಗೈಯ್ಯಲ್ಲಿ ಮಾಡಿದ ಸೇವೆ ಎಡಗೈಗೆ ಸಹ ತಿಳಿಯಬಾರದು ಅಂತ ದೊಡ್ಡವರು ಗೌರವದಿಂದ ಇರುತ್ತಾರೆ. 5 ವರ್ಷಗಳ ಕಾಲ ಸಿದ್ದರಾಮಯ್ಯ ಅನೇಕ ಕಾರ್ಯಕ್ರಮಗಳನ್ನು ನಿಮಗಾಗಿ ನೀಡಿದ್ದಾರೆ. ಅವರು ಕೊಟ್ಟ ಅಕ್ಕಿಯಲ್ಲಿ ಊಟ ಮಾಡಿದ್ದೀರಿ. ಆದರೆ ಅದೇ ಕೈಯಲ್ಲಿ ಬೇರೆಯವರಿಗೆ ಮತ ಹಾಕುತ್ತೀರಲ್ಲ. ಇದು ಯಾವ ನ್ಯಾಯ ಎಂದು ಮತದಾರರ ವಿರುದ್ಧ ಕಿಡಿ ಕಾರಿದರು.

    ಉಪ್ಪು ತಿಂದು ಮುಪ್ಪಿನವರೆಗೆ ನೆನೆಯಬೇಕು ಅಂತಾರೆ. ಆದರೆ ಎಸ್‍ಸಿ, ಎಸ್ಟಿ, ಹಿಂದುಳಿದವರು, ಮುಸ್ಲಿಮರು ಶತಮಾನಗಳಿಂದ ನೊಂದ ಜನರೆಂದು ಕಾಂಗ್ರೆಸ್ಸಿನವರು ಭಾವಿಸಿದ್ದೇವೆ. ಹೀಗಿರುವಾಗ ಕೆಲ ಎಸ್‍ಸಿ, ಎಸ್ ಟಿ ಜನ ಸಹ ಬಿಜೆಪಿಗೆ ಮತ ಹಾಕ್ತಾರಲ್ರೀ ಏನರ್ಥ ಎಂದು ವಾಗ್ದಾಳಿ ನಡೆಸಿದರು. ಯಾವುದೋ ಒಂದು ಉದ್ದೇಶಕ್ಕೆ ನೀವೆಲ್ಲಾ ಬಿಜೆಪಿಯನ್ನು ಅಪ್ಪಿಕೊಂಡರೆ ದೇಶವನ್ನು ರಕ್ಷಣೆ ಮಾಡುವವರು ಯಾರು ಎಂದು ಪ್ರಶ್ನಿಸಿದರು.