Tag: MP By Election

  • ಸಾಥ್ ನೀಡದ ಕಮಲ ಪಾಳಯದ ನಾಯಕರು-ಒಂಟಿಯಾಗಿ ಕ್ಷೇತ್ರದೆಲ್ಲೆಡೆ ಶ್ರೀರಾಮುಲು ಪ್ರಚಾರ

    ಸಾಥ್ ನೀಡದ ಕಮಲ ಪಾಳಯದ ನಾಯಕರು-ಒಂಟಿಯಾಗಿ ಕ್ಷೇತ್ರದೆಲ್ಲೆಡೆ ಶ್ರೀರಾಮುಲು ಪ್ರಚಾರ

    ಬಳ್ಳಾರಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು, ಕಾಂಗ್ರೆಸ್ ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ ಬಿಜೆಪಿ ಅಭ್ಯರ್ಥಿ ಜೆ.ಶಾಂತ ಪರ ಶಾಸಕ ಶ್ರೀರಾಮುಲುರನ್ನು ಹೊರತು ಪಡಿಸಿ, ಯಾವುದೇ ಕಮಲ ಪಾಳಯದ ನಾಯಕರು ಹಾಜರಾಗದೇ ಇರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ಹೌದು, ಇತಂಹದ್ದೊಂದು ಪ್ರಶ್ನೆ ಇದೀಗ ಬಳ್ಳಾರಿ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ಯಾಕೆಂದರೆ ಬಳ್ಳಾರಿ ಲೋಕಸಭಾ ಉಪಚುನಾವಣೆಯ ದಿನಾಂಕ ಷೋಷಣೆಯಾಗಿ ಅಭ್ಯರ್ಥಿ ಆಯ್ಕೆ ಆದ ನಂತರವೂ, ಬಿಜೆಪಿ ಪಾಳಯದಲ್ಲಿ ಚುನಾವಣಾ ಕಾವು ಮಾತ್ರ ಕಂಡು ಬರುತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದೆ ಜೆ ಶಾಂತಾ ನಾಮಪತ್ರ ಸಲ್ಲಿಸಿ, ಕ್ಷೇತ್ರದೆಲ್ಲೆಡೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಶಾಂತಾ ಮತ್ತು ಶಾಸಕ ಶ್ರೀರಾಮುಲುಗೆ ಬಿಜೆಪಿ ರಾಜ್ಯ ಮತ್ತು ಕೇಂದ್ರ ನಾಯಕರು ಸಾಥ್ ನೀಡದಿರುವುದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರವಾಗಿ 6 ಸಚಿವರು, 10 ಸಂಸದರು ಸೇರಿದಂತೆ ಹಲವು ಶಾಸಕರ 51 ಜನರ ತಂಡವೇ ಬಳ್ಳಾರಿಯಲ್ಲಿ ಬಿಡುಬಿಟ್ಟು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಪರವಾಗಿ ಕೇವಲ ಶ್ರೀರಾಮುಲು ಮಾತ್ರ ಪ್ರಚಾರ ನಡೆಸುತ್ತಿದ್ದು, ಶಾಸಕ ಶ್ರೀರಾಮುಲುಗೆ ಬಿಜೆಪಿ ನಾಯಕರ ಸಾಥ್ ಇಲ್ಲದಿರುವುದು ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

    ಶಾಸಕ ಶ್ರೀರಾಮುಲು, ಶಾಂತಾ ಒಂಟಿಯಾಗಿ ಪ್ರಚಾರ ನಡೆಸುತ್ತಿರುವುದು ಬಿಜೆಪಿ ಪಾಳಯದ ಉತ್ಸಾಹವನ್ನೆ ಅಡಗಿಸಿದಂತಾಗಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಳ್ಳಾರಿ ಗೆಲುವಿಗಾಗಿ 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್!

    ಬಳ್ಳಾರಿ ಗೆಲುವಿಗಾಗಿ 52 ಜನರ ವಿಶೇಷ ತಂಡ ರಚಿಸಿದ ಕಾಂಗ್ರೆಸ್!

    ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯು ಕಾಂಗ್ರೆಸ್ಸಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯಗತಾಯ ಈ ಕ್ಷೇತ್ರದಲ್ಲಿ ವಿಜಯ ಸಾಧಿಸಲೇಬೇಕೆಂದು 52 ಜನರ ವಿಶೇಷ ತಂಡವನ್ನು ಕಾಂಗ್ರೆಸ್ ಸಿದ್ಧಪಡಿಸಿದೆ.

    ಹೌದು, ಗಣಿಧಣಿಗಳ ವಿರುದ್ಧ ತೊಡೆ ತಟ್ಟಿರುವ ಕಾಂಗ್ರೆಸ್ ನಾಯಕರು, ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಲೇಬೇಕೆಂದು ಪಣತೊಟ್ಟಿದ್ದಾರೆ. ಇದರ ಜೊತೆ ಜಲಸಂಪನ್ಮೂಲ, ವೈದ್ಯಕೀಯ ಹಾಗೂ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಶೇಷವಾಗಿ 52 ಜನರ ವಿಶೇಷ ತಂಡವನ್ನು ಕೆಪಿಸಿಸಿ ರಚಿಸಿದೆ. ಈ ತಂಡದಲ್ಲಿ ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಸಂಸದರು ಸೇರಿದಂತೆ ಜಿಲ್ಲೆಗೆ ಕಾಂಗ್ರೆಸ್ ನಾಯಕರ ದಂಡೇ ಪ್ರಚಾರ ನಡೆಸಲಿದೆ.

    ಸರ್ವ ಸನ್ನದ್ಧವಾಗಿ ಚುನಾವಣಾ ಅಖಾಡಕ್ಕೆ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಧುಮುಕಿದೆ. ಆದರೆ ಚುನಾವಣಾ ಉಸ್ತುವಾರಿಯಲ್ಲಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಅನಿಲ್ ಲಾಡ್‍ರನ್ನು ಕೈಬಿಟ್ಟಿದೆ.

    ಶ್ರೀರಾಮಲು ಶಾಸಕರಾಗಿ ಆಯ್ಕೆಯಾದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಬಳ್ಳಾರಿಯಲ್ಲಿ ಲೋಕಸಭೆ ಉಪ ಚುನಾವಣೆ ಘೋಷಣೆಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿ ಆಯ್ಕೆಯ ವಿಚಾರದ ಬಗ್ಗೆ ಗೊಂದಲ ಸಹ ಏರ್ಪಟ್ಟಿತ್ತು. ಮೊದಲಿಗೆ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್’ಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ವಿ.ಎಸ್.ಉಗ್ರಪ್ಪರನ್ನು ಲೋಕಸಭಾ  ಅಭ್ಯರ್ಥಿಯೆಂದು ಘೋಷಣೆಮಾಡಿ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ತೆರೆ ಎಳೆದಿತ್ತು.

    ಸಚಿವರಾದ ಕೃಷ್ಣಭೈರೈಗೌಡ-ಬಳ್ಳಾರಿ ಗ್ರಾಮೀಣ, ಎನ್.ಎಚ್.ಶಿವಶಂಕರ ರೆಡ್ಡಿ-ಹಗರಿಬೊಮ್ಮನಹಳ್ಳಿ, ರಮೇಶ್ ಜಾರಕಿಹೊಳಿ-ಕೂಡ್ಲಿಗಿ, ಪ್ರಿಯಾಂಕ್ ಖರ್ಗೆ-ಸಂಡೂರು, ಯು.ಟಿ.ಖಾದರ್-ಬಳ್ಳಾರಿ ನಗರ, ರಾಜಶೇಖರ್ ಬಿ ಪಾಟೀಲ್-ಹೂವಿನ ಹಡಗಲಿ, ಡಾ.ಶರಣಪ್ರಕಾಶ್ ಪಾಟೀಲ್-ವಿಜಯನಗರ ಹಾಗೂ ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ- ಕಂಪ್ಲಿ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಯನ್ನು ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆ ಮಧ್ಯಾಹ್ನದ ಬಳಿಕ ರಾಜ್ಯ ರಾಜಕೀಯದಲ್ಲಿ ಏರುಪೇರು – ಕಾದು ನೋಡಿ ಎಂದ ಬಿಎಸ್‍ವೈ

    ನಾಳೆ ಮಧ್ಯಾಹ್ನದ ಬಳಿಕ ರಾಜ್ಯ ರಾಜಕೀಯದಲ್ಲಿ ಏರುಪೇರು – ಕಾದು ನೋಡಿ ಎಂದ ಬಿಎಸ್‍ವೈ

    ಶಿವಮೊಗ್ಗ: ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮನೆಗಳು ಬಿಜೆಪಿಯ ಮನೆಗಳಾಗುತ್ತವೆ. ಮಂಗಳವಾರ ನಾಮಪತ್ರ ಸಲ್ಲಿಕೆ ಮುಗಿದ ಮೇಲೆ ರಾಜಕೀಯ ಏರುಪೇರು ಆಗಲಿದೆ. ಅಲ್ಲದೇ ಕಾಂಗ್ರೆಸ್ ಜೆಡಿಎಸ್ ಒಬ್ಬರ ಮುಖ ಇನ್ನೊಬ್ಬರು ನೋಡದ ಪರಿಸ್ಥಿತಿ ನಿರ್ಮಾಣ ಆಗಲಿದೆ. ನಾನು ಈಗಲೇ ಭವಿಷ್ಯ ಹೇಳುವುದಿಲ್ಲ. ಕಾದು ನೋಡಿ ಮುಂದೆ ಏನಾಗುತ್ತೆ ಎಂದು ತಿಳಿಸಿದರು.

    ಮಂಗಳವಾರ ಮಂಡ್ಯದಲ್ಲಿ ಸಾವಿರಾರು ಕಾರ್ಯಕರ್ತರ ಜೊತೆ ಪಕ್ಷದ ಅಭ್ಯರ್ಥಿ ಡಾ.ಸಿದ್ದರಾಮಯ್ಯನವರ ನಾಮಪತ್ರ ಸಲ್ಲಿಸಲು ತೆರಳುತ್ತೇವೆ. ಅದಾದ ಬಳಿಕ ಅಲ್ಲಿಂದ ನೇರವಾಗಿ ಜಮಖಂಡಿಗೆ ಹೋಗುತ್ತೇನೆ. ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆಯ ಉಪಚುನಾವಣೆಗಳು ಇಡೀ ದೇಶದ ಗಮನ ಸೆಳೆದಿವೆ ಎಂದು ಹೇಳಿದ್ರು.

    ಸಿಎಂ ಕುಮಾರಸ್ವಾಮಿ ನಾಲ್ಕು ತಿಂಗಳಿಂದ ಸಾಲಮನ್ನಾದ ಕಥೆ ಹೇಳಿಕೊಂಡು ಓಡಾಡುತ್ತಿದ್ದಾರೆ. ಈಗ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಮಾಡಲು ಮೋದಿ ಅಡ್ಡಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇವರಿಗೆಲ್ಲಾ ನಾಚಿಕೆ ಆಗಬೇಕು. ಜನರಿಗೆ ವಂಚನೆ-ದ್ರೋಹ ಮಾಡುತ್ತಿದ್ದಾರೆ. 10 ಸಾವಿರ ಕೋಟಿ ರೂ. ಬಾಕಿ ಇದೆ. ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದೆ. ರಾಜ್ಯದಲ್ಲಿ ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಟಿ ದೇವೇಗೌಡರನ್ನು ನಿಲ್ಲಿಸಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದು ಯಾರು ಎಂದು ಪ್ರಶ್ನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv