Tag: MP Anant Kumar Hegde

  • ‘ಹಳ್ಳಿಹಕ್ಕಿ’ ಪುಸ್ತಕದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

    ‘ಹಳ್ಳಿಹಕ್ಕಿ’ ಪುಸ್ತಕದ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯ

    ಮೈಸೂರು: ಆಪರೇಷನ್ ಕಮಲದ ಬಗ್ಗೆ ಎಚ್.ವಿಶ್ವನಾಥ್ ಪುಸ್ತಕ ಬರೆಯುವ ವಿಚಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ವಿಶ್ವನಾಥ್ ಅವರು ಪುಸ್ತಕ ಬರೆಯಲಿ ಬಿಡಿ, ದೊಡ್ಡ ಬರಹಗಾರರು. ಅವರು ಪುಸ್ತಕ ಬರೆದರೆ ನಾವು ಓದೋಣ ಎಂದು ವ್ಯಂಗ್ಯವಾಡಿದರು.

    ಪುಣ್ಯಾತ್ಮ ಪಕ್ಷ ಬಿಟ್ಟು ಹೋಗಿ ಇವನೇನು ಪುಸ್ತಕ ಬರೆಯೋದು. ನೀನು ಶುದ್ಧವಾಗಿದ್ದರೆ ಇನ್ನೋಬ್ಬರ ಬಗ್ಗೆ ಆರೋಪ ಮಾಡಬಹುದು. ಇವರೇ ಸರಿಯಿಲ್ಲ ಅಂದರೆ ಏನ್ ಬರೆಯೋದು ಎಂದು ಪ್ರಶ್ನಿಸಿದರು. ಅಲ್ಲದೇ ಬರೆಯೋವಾಗ ಯಾರ್ಯಾರು ಎಷ್ಟು ದುಡ್ಡು ತಗೊಂಡಿದ್ದೀರಿ ಅಂತಾನು ಎಂದು ಬರೆಯಲು ಹೇಳಿ ಎಂದರು.

    ಇದೇ ವೇಳೆ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರು ಮಹಾತ್ಮ ಗಾಂಧೀಜಿ ಅವರ ಕುರಿತಂತೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಗೂಡ್ಸೆ, ಸಾರ್ವಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ಕ್ರೂರತ್ವ ಮನೋಭಾವದವರಿಗೆ ಸತ್ಯ, ಅಹಿಂಸೆ ಅರ್ಥ ಆಗುವುದಿಲ್ಲ. ಅನಂತ್ ಕುಮಾರ್ ಹೆಗ್ಡೆಗೆ ಎಷ್ಟು ವರ್ಷ? ಇವನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ನಾ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು? ನಾನು ಆಗಸ್ಟ್ 3, 1947ರಂದು ಹುಟ್ಟಿದ್ದೇನೆ. ನಾನು ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ್ದೇನೆ. ಹೆಗಡೆ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ಆದವರ ಹೆಸರು ಹೇಳಲಿ ನೋಡೋಣ ಎಂದು ಸವಾಲು ಎಸೆದರು.

    ಮಹಾತ್ಮ ಗಾಂಧಿ ಎಷ್ಟು ಜೈಲಿನಲ್ಲಿ ಇದ್ರು ಗೊತ್ತಾ? ಗಾಂಧಿ ಕೊಂದಿದ್ದು ದೇಶದ್ರೋಹಾನ, ದೇಶ ಭಕ್ತಿನಾ? ವಲ್ಲಭಾಯಿ ಪಟೇಲ್ ಪ್ರತಿಮೆ ಮಾಡಿದ್ದು ಯಾರು? ಅದೇ ಪಟೇಲರು ಆರ್.ಎಸ್.ಎಸ್ ಬ್ಯಾನ್ ಮಾಡಿದ್ದರು. ಈ ಬಗ್ಗೆ ಇವನಿಗೆ ಗೊತ್ತಾ? ಜಗತ್ತಿನಲ್ಲಿ ರಕ್ತಪಾತ ಇಲ್ಲದೆ ಸ್ವಾತಂತ್ರ್ಯ ಪಡೆದ ದೇಶ ಭಾರತ ದೇಶ. ಇದರ ಇತಿಹಾಸದ ಅನಂತ್ ಕುಮಾರ್ ಹೆಗ್ಡೆಗೆ ಏನ್ ಗೊತ್ತು? ಇತಿಹಾಸ ಗೊತ್ತಿಲ್ಲ ಎಂದರೇ ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದರು.

  • ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಲಿ: ಅನಂತಕುಮಾರ್ ಹೆಗ್ಡೆ

    ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಲಿ: ಅನಂತಕುಮಾರ್ ಹೆಗ್ಡೆ

    – ತಮ್ಮ ದೇಶದ ಕೆಲ ತಲೆಹಿಡುಕರಿಗೆ ಏರ್ ಸ್ಟ್ರೈಕ್ ಸಾಕ್ಷಿ ಬೇಕಂತೆ

    ಕಾರವಾರ: ಅಮೆರಿಕ ಸೇರಿದಂತೆ ಇಡೀ ಜಗತ್ತು ಭಾರತೀಯ ವಾಯು ಪಡೆ ನಡೆಸಿದ ಏರ್ ಸ್ಟ್ರೈಕ್ ಅನ್ನ ಒಪ್ಪಿಕೊಂಡಿದೆ. ಆದರೆ ನಮ್ಮಲ್ಲಿರುವ ಕೆಲ ತಲೆಹಿಡುಕರಿಗೆ ಸಾಕ್ಷಿ ಬೇಕು ಎಂದು ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಾಗ್ದಾಳಿ ನಡೆಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕೂಗ್ತಿ ಮಹಾಸತಿ ದೇವಸ್ಥಾನದಲ್ಲಿ ನಡೆದ ತಾಯ್ನೆಲದ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಭಾರತೀಯ ಯೋಧರ ಶೌರ್ಯದ ಬಗ್ಗೆ ಸಂದೇಹ ಪಡುವ ಬಿಕನಾಸಿ ಪರಿಸ್ಥಿತಿ ಕಾಂಗ್ರೆಸ್‍ನಿಂದ ನಿರ್ಮಾಣವಾಗಿದೆ. ನಮ್ಮ ಪೈಲಟ್‍ಗಳು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿದ್ದಕ್ಕೆ ಸಾಕ್ಷಿ ಕೇಳುತ್ತಿದ್ದಾರೆ. ಆದರೆ ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವುದಕ್ಕೆ ಸಾಕ್ಷಿ ಕೊಡುತ್ತಾರಾ ಎಂದು ಪ್ರಶ್ನಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಸಲ್ಮಾನ ಅಪ್ಪ, ಕ್ರಿಶ್ಚಿಯನ್ ತಾಯಿಗೆ ಹುಟ್ಟಿರುವ ಈ ಪರದೇಶಿ ಬ್ರಾಹ್ಮಣ ಹೇಗಾದ ಎನ್ನುವುದಕ್ಕೆ ಡಿಎನ್‍ಎ ಸಾಕ್ಷಿ ಕೊಡುತ್ತಾರಾ? ಮಾಜಿ ಪ್ರಧಾನಿ ರಾಜೀವ್ ಗಾಂಧಿ ಉಗ್ರರ ದಾಳಿಗೆ ಬಲಿಯಾದಾಗ ಅವರ ದೇಹ ಛಿದ್ರ ಛಿದ್ರವಾಗಿತ್ತು. ಮೃತ ದೇಹವನ್ನು ಪತ್ತೆ ಹಚ್ಚಲು, ಡಿಎನ್‍ಎ ಪರೀಕ್ಷೆಗೆ ಮಕ್ಕಳ ರಕ್ತದ ಮಾದರಿ ನೀಡುವಂತೆ ಸೋನಿಯಾ ಗಾಂಧಿ ಕೇಳಲಾಗಿತ್ತು. ಆದರೆ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ರಕ್ತದ ಮಾದರಿ ಬೇಡ, ಪ್ರಿಯಾಂಕಾ ಗಾಂಧಿ ರಕ್ತವನ್ನು ತೆಗೆದುಕೊಳ್ಳಿ ಎಂದು ಹೇಳಿದ್ದರು. ಅಂತಹವರು ಈಗ ಏರ್ ಸ್ಟ್ರೈಕ್ ಸಾಕ್ಷಿ ಕೇಳುತ್ತಿದ್ದಾರೆ ಎಂದು ಗಾಂಧಿ ಕುಟುಂಬದ ವಿರುದ್ಧ ಕಿಡಿಕಾರಿದರು.

    ಮೆಣಸಿನಕಾಯಿ ಗಿಡದಲ್ಲಿ ತೆಂಗಿನ ಕಾಯಿ ಬಿಡುತ್ತದೆ ಎನ್ನುವ ಸಾಕ್ಷಿ ಗಾಂಧಿ ಕುಟುಂಬದಲ್ಲಿ ಇರಬಹುದು. ಆದರೆ ನಮ್ಮಲ್ಲಿ ಅಂತಹ ಸಾಕ್ಷಿಗಳಿಲ್ಲ. ಕಾಂಗ್ರೆಸ್ ದಿವಾಳಿಯಾಗುತ್ತಿದೆ. ಹೀಗಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv