Tag: movie

  • ಚಿನ್ನೇಗೌಡರಿಗೆ ಸಾರಾ ಗೋವಿಂದರಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧಿಕಾರ ಹಸ್ತಾಂತರ

    ಚಿನ್ನೇಗೌಡರಿಗೆ ಸಾರಾ ಗೋವಿಂದರಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧಿಕಾರ ಹಸ್ತಾಂತರ

    ಬೆಂಗಳೂರು: ಮಂಗಳವಾರ ನಡೆದಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಎಸ್.ಎ.ಚಿನ್ನೇಗೌಡರಿಗೆ ಮಾಜಿ ಅಧ್ಯಕ್ಷ ರಾ ಗೋವಿಂದ್‍ರವರು ಅಧಿಕಾರ ಹಸ್ತಾಂತರಿಸಿದರು.

    ಈ ವೇಳೆ ಮಾತನಾಡಿದ ಸಾ ರಾ ಗೋವಿಂದ್, ವಾಣಿಜ್ಯ ಮಂಡಳಿಯ ನೂತನ ಸದಸ್ಯರಲ್ಲಿ ಮನವಿ ಮಾಡಿಕೊಂಡು ನೀವು ಯಾವುದೇ ಸಾಧನೆ ಮಾಡದೇ ಇದ್ದರೂ ಪರವಾಗಿಲ್ಲ, ಆದರೆ ವಾಣಿಜ್ಯ ಮಂಡಳಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

    ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರಾಗಿ ಕರಿಸುಬ್ಬು, ವಿತರಕರ ವಲಯದಿಂದ ಕೆ. ಮಂಜು, ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಹಾಗೂ ಖಜಾಂಚಿಯಾಗಿ ಕೆ.ಎಂ.ವೀರೇಶ್ ಆಯ್ಕೆಯಾಗಿದ್ದಾರೆ. ಎಸ್ ಎ ಚಿನ್ನೆಗೌಡರು ರಾಜ್ ಕುಟುಂಬದ ಸದಸ್ಯರಾಗಿದ್ದು, ಪಾರ್ವತಮ್ಮ ರಾಜ್ ಕುಮಾರ್‍ರವರ ಸಹೋದರಾಗಿದ್ದಾರೆ. ಅಲ್ಲದೇ ಶ್ರೀಮುರುಳಿ ಹಾಗೂ ವಿಜಯರಾಘವೇಂದ್ರರವರ ತಂದೆಯಾಗಿದ್ದಾರೆ.

    ಅಧ್ಯಕ್ಷರಾದ ಸಾ ರಾ ಗೋವಿಂದ್‍ರವರ ಅಧಿಕಾರ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ಕಳೆದ ಮೂರು ವರ್ಷಗಳ ನಂತರ ಚುನಾವಣೆ ನಡೆದಿತ್ತು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಣಾ ವಲಯಕ್ಕೆ ಮೀಸಲಿಡಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ಸ್ಫರ್ದಿಸಿದ್ದು, ಇವರಿಬ್ಬರ ನಡುವೆ ತೀವ್ರ ಪೈಪೊಟಿ ಕಂಡುಬಂದಿತ್ತು. ವಿವಿಧ ಕ್ಷೇತ್ರಗಳಿಂದ ಒಟ್ಟು 1,500 ಮತದಾರರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊಂದಿದೆ. ಇದನ್ನೂ ಓದಿ: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ!

  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ!

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ!

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮೂರು ವರ್ಷದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮತದಾನ ಇಂದು ನಡೆಯುತ್ತಿದೆ.

    ಅಧ್ಯಕ್ಷರಾದ ಸಾ ರಾ ಗೋವಿಂದ್‍ರವರ ಅಧಿಕಾರ ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಕಳೆದ ಮೂರು ವರ್ಷಗಳ ನಂತರ ಚುನಾವಣೆ ನಡೆಯುತ್ತಿದ್ದು, ಈ ಬಾರಿ ಅಧ್ಯಕ್ಷ ಸ್ಥಾನವನ್ನು ವಿತರಣಾ ವಲಯಕ್ಕೆ ಮೀಸಲಿಡಲಾಗಿದೆ. ವಿವಿಧ ಕ್ಷೇತ್ರಗಳಿಂದ ಒಟ್ಟು 1,500 ಮತದಾರರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೊಂದಿದೆ.

    ಅಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಚಿನ್ನೆಗೌಡ್ರು ಮತ್ತು ಮಾರ್ಸ್ ಸುರೇಶ್ ಸ್ಫರ್ದಿಸಿದ್ದು, ಇವರಿಬ್ಬರ ನಡುವೆ ತೀವ್ರ ಪೈಪೊಟಿ ಕಂಡುಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಕೇಶವ ಬಿ.ಆರ್., ಮಾಗರಾಜ್.ಬಿ.ಎಲ್ ಹಾಗೂ ಮಂಜು.ಕೆ ಸ್ಪರ್ಧಿಸಿದ್ದಾರೆ.

    ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಗಾಂಧಿ, ಪ್ರಮೀಳ ಜೋಷಾಯ್ ಹಾಗೂ ಸುಭ್ರಮಣಿ.ವಿ ಸ್ಪರ್ಧಿಸಿದ್ದಾರೆ. ಅಲ್ಲದೆ ಮಳೆ ಹುಡುಗಿ ಪೂಜಾ ಗಾಂಧಿ ನಿರ್ಮಾಪಕರ ವಲಯದಿಂದ ಸಮಿಸಿ ಸದಸ್ಯತ್ವಕ್ಕೆ ಸ್ಪರ್ಧಿಸಿದ್ದಾರೆ.

  • ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಚಿತ್ರ ನಟಿಗೆ ಡ್ರಾಪ್ ನೀಡುವದಾಗಿ ಹೇಳಿ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸೆಗಿದ

    ಮುಂಬೈ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ ತಿಂಗಳು ಚಿತ್ರ ನಟಿಯೊಬ್ಬರನ್ನ ಅತ್ಯಾಚಾರ ಎಸಗಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

    31 ವರ್ಷದ ನಟಿ ಜನವರಿ 12 ರಂದು ರಾತ್ರಿ ತನ್ನ ಫೊಟೋ ಶೂಟ್ ಮುಗಿಸಿಕೊಂಡು ವಾಸೈನಲ್ಲಿ ಆಟೋ ರಿಕ್ಷಾಗೆ ಕಾಯುತಿದ್ದರು. ಅದೇ ಸಮಯಕ್ಕೆ ಬೈಕ್‍ನಲ್ಲಿ ಬಂದ ಪ್ರದೀಪ್ ತಿವಾರಿ (27) ಅಲಿಯಾಸ್ ಚಿಂಟು ನಟಿಯನ್ನು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೊಗುತ್ತೇನೆ ಎಂದು ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

    ನಟಿ ಜನವರಿ 12 ರಂದು ವಾಸೈನಲ್ಲಿ ಫೊಟೋ ಶೂಟ್ ಮುಗಿಸುಕೊಂಡು ದಹಿಸಾರ್ ರೈಲ್ವೆ ನಿಲ್ದಾಣಕ್ಕೆ ಹೋಗಲು ಆಟೋ ರಿಕ್ಷಾಗೆ ಕಾಯುತ್ತಿದ್ದರು. ಈ ಸಮಯಕ್ಕೆ ಕಾಯುತ್ತಿದ್ದ ಕಾಮುಕ ತಿವಾರಿ ನಟಿಗೆ ಡ್ರಾಪ್ ಕೊಡುತ್ತೇನೆ ಎಂದು ಪುಸಲಾಯಿಸಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಪೊಲೀಸರ ಪ್ರಕಾರ ಆರೋಪಿ ತಿವಾರಿಯ ವಿರುದ್ಧ 2003 ರಿಂದ 9 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.

    ಘಟನೆ ನಂತರ ನಟಿಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ನಟಿಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ನಟಿ ಜನವರಿ 14ರಂದು ತಿವಾರಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾರಿಯನ್ನ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.