Tag: movie

  • ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

    ಹೊರಗಡೆಯ ಆಹಾರಕ್ಕೆ ನಿರ್ಬಂಧ ಹೇರಬಹುದು, ಥಿಯೇಟರ್‌ಗಳು ಶುದ್ಧವಾದ ಕುಡಿಯುವ ನೀರು ಫ್ರೀ ನೀಡಬೇಕು: ಸುಪ್ರೀಂ

    ನವದೆಹಲಿ: ಪ್ರೇಕ್ಷಕರು ಹೊರಗಡೆಯಿಂದ ಆಹಾರ ಮತ್ತು ಪಾನೀಯವನ್ನು(Food and Beverage) ಚಲನಚಿತ್ರ ಮಂದಿರಕ್ಕೆ(Cinema Halls) ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾ. ಪಿ ಎಸ್ ನರಸಿಂಹ ಅವರ ಪೀಠವು ಚಿತ್ರಮಂದಿರವು ಮಾಲೀಕರ ಖಾಸಗಿ ಆಸ್ತಿಯಾಗಿದೆ. ಆದರೆ ಶುದ್ಧವಾದ ನೀರನ್ನು ಉಚಿತವಾಗಿ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

    ವೀಕ್ಷಕರು ಮನರಂಜನೆಗಾಗಿ ಸಿನಿಮಾ ಹಾಲ್‌ಗೆ ಭೇಟಿ ನೀಡುತ್ತಾರೆ. ಚಿತ್ರಮಂದಿರದ ಮಾಲೀಕರು ಆಹಾರ ಮತ್ತು ಪಾನೀಯಗಳ ಪ್ರವೇಶವನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿದ್ದಾರೆ. ಲಭ್ಯವಿರುವ ಪಾನಿಯವನ್ನು ಸೇವಿಸಬೇಕೇ? ಬೇಡವೇ ಎಂಬುದು ಸಂಪೂರ್ಣವಾಗಿ ಚಲನಚಿತ್ರ ಪ್ರೇಕ್ಷಕರ ಆಯ್ಕೆಯ ಮೇಲೆ ಇರುತ್ತದೆ ಎಂದು ಪೀಠ ಹೇಳಿದೆ.

    ವೀಕ್ಷಕರು ಚಲನಚಿತ್ರ ಮಂದಿರಕ್ಕೆ ಪ್ರವೇಶಿಸಿದರೆ, ಅವನು/ಅವಳು ಚಿತ್ರಮಂದಿರದ ಮಾಲೀಕರ ನಿಯಮಗಳಿಗೆ ಬದ್ಧವಾಗಿರಬೇಕು ಮತ್ತು ಇದು ಸ್ಪಷ್ಟವಾಗಿ ಥಿಯೇಟರ್ ಮಾಲೀಕರ ವಾಣಿಜ್ಯ ನಿರ್ಧಾರದ ವಿಷಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.  ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ ಉದ್ಘಾಟನೆಗೊಂಡ 4ನೇ ದಿನಕ್ಕೆ ಕಲ್ಲು ತೂರಾಟ- ಕಿಟಕಿ ಗಾಜು ಪುಡಿ ಪುಡಿ

    ಪ್ರೇಕ್ಷಕರು ತಮ್ಮ ಸ್ವಂತ ಆಹಾರ ಮತ್ತು ಪಾನೀಯಗಳನ್ನು ಚಿತ್ರಮಂದಿರಗಳಿಗೆ ಕೊಂಡೊಯ್ಯುವುದನ್ನು ಮಲ್ಟಿಪ್ಲೆಕ್ಸ್‌ಗಳು ತಡೆಯಬಾರದು ಎಂದು ಜಮ್ಮು ಕಾಶ್ಮೀರ ಹೈಕೋರ್ಟ್‌ 2018ರಲ್ಲಿ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಥಿಯೇಟರ್‌, ಮಲ್ಟಿಪ್ಲೆಕ್ಸ್‌(Multiplexes) ಮಾಲೀಕರು ಮೇಲ್ಮನವಿ ಸಲ್ಲಿಸಿದ್ದರು.

    ಹಾಲ್‌ ನೀಡುವ ಸಿನಿಮಾ ಟಿಕೆಟ್‌ ಜೊತೆ ಮಾತ್ರ ಪ್ರೇಕ್ಷಕರ ಒಪ್ಪಂದ ಇರುತ್ತದೆ. ಆದರೆ ಸಭಾಂಗಣದೊಳಗೆ ತಿನ್ನುವ ವಸ್ತುಗಳನ್ನು ಕೊಂಡೊಯ್ಯಲು ಪ್ರೇಕ್ಷಕರಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

    ಚಿತ್ರಮಂದಿರಗಳ ಆವರಣವು ಸಾರ್ವಜನಿಕ ಆಸ್ತಿಯಲ್ಲ. ಅಷ್ಟೇ ಅಲ್ಲದೇ ಥಿಯೇಟರ್‌ ಒಳಗಡೆ ಆಹಾರವನ್ನು ಖರೀದಿಸಲೇಬೇಕೆಂದು ಪ್ರೇಕ್ಷಕರಿಗೆ ನಾವು ಒತ್ತಾಯ ಮಾಡುತ್ತಿಲ್ಲ ಎಂದು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ವಾದ ಮಂಡಿಸಿ ಮಲ್ಟಿಪ್ಲೆಕ್ಸ್‌ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಯ ಪಡಬೇಡಿ: ಈ ವಾರ ಬರೋಬ್ಬರಿ 20 ಸಿನಿಮಾಗಳು ರಿಲೀಸ್

    ಭಯ ಪಡಬೇಡಿ: ಈ ವಾರ ಬರೋಬ್ಬರಿ 20 ಸಿನಿಮಾಗಳು ರಿಲೀಸ್

    ವರ್ಷ ಚಿತ್ರೋದ್ಯಮದ ಮತ್ತೊಂದು ದಾಖಲೆಯ ವಾರಕ್ಕೆ ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಈ ವಾರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿ ಬರೋಬ್ಬರಿ 20ಕ್ಕೂ ಹೆಚ್ಚು ಚಿತ್ರಗಳು (Movie) ಬಿಡುಗಡೆ ಆಗುತ್ತಿವೆ. ಕನ್ನಡದಲ್ಲೇ ಆರು ಚಿತ್ರಗಳು ಈ ಶುಕ್ರವಾರ ತೆರೆ ಕಾಣುತ್ತಿವೆ. ಲೂಸ್ ಮಾದ ಯೋಗಿ, ಡಾಲಿ ಧನಂಜಯ್ ಸಿನಿಮಾಗಳು ಇದರಲ್ಲಿ ಸೇರಿವೆ. ವರ್ಷಾಂತ್ಯಕ್ಕೆ ಈ ಪ್ರಮಾಣದಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿರುವುದು ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸಂಭ್ರಮವೋ ಸಂಕಟವೋ ಗೊಂದಲವಾಗಿದೆ.

    ಡಾಲಿ ಧನಂಜಯ್ (Dhananjay) ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ಲೂಸ್ ಮಾದ ಯೋಗೀಶ್ (Yogi) ನಟನೆಯ ‘ನಾನು ಮತ್ತು ಸರೋಜ’, ಯೋಗರಾಜ್ ಭಟ್ ಅವರ ಬ್ಯಾನರ್ ನಿಂದ ತಯಾರಾದ ‘ಪದವಿ ಪೂರ್ವ’, ಹೊಸ ತಂಡದ ‘ಮೇಡ್ ಇನ್ ಇಂಡಿಯಾ’, ‘ಜೋರ್ಡನ್’, ‘ದ್ವಿಪಾತ್ರ’ ಚಿತ್ರಗಳು ಈ ವಾರ ತೆರೆಗೆ ಬರಲು ಸಿದ್ಧವಾಗಿವೆ. ಈ ಕನ್ನಡ ಚಿತ್ರಗಳು ಈ ವಾರ ಬಿಡುಗಡೆ ಆಗುತ್ತಿರುವ ಇತರ ಭಾಷೆಯ ಚಿತ್ರಗಳ ಜೊತೆ ಪೈಪೋಟಿಗೆ ಇಳಿಯಲಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಸ್ಟಾರ್ ನಟ ನಟಿಯರ ಚಿತ್ರಗಳಾದ ತಮಿಳಿನ ಖ್ಯಾತ ನಟಿ ತ್ರಿಶಾ (Trisha) ನಟನೆಯ ‘ರಾಂಗಿ’, ಐಶ್ವರ್ಯ ರಾಜೇಶ್ ನಟನೆಯ ‘ದ ಗ್ರೇಟ್ ಇಂಡಿಯನ್ ಕಿಚನ್, ಬಾಲಿವುಡ್ ನ ವೇದ್, ಟಾಲಿವುಡ್ ನ ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್’, ಧನಂಜಯ್ ನಟನೆಯ ತೆಲುಗು ಅವತರಣಿಕೆ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ’ ಹೀಗೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಈ ವಾರ ಕರ್ನಾಟಕದಲ್ಲಿ ಬಿಡುಗಡೆ (Release) ಆಗುತ್ತಿವೆ.

    ಈಗಾಗಲೇ ರಿಲೀಸ್ ಆಗಿರುವ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿವೆ. ಕಳೆದ ಕೆಲ ವಾರಗಳಿಂದ ರಿಲೀಸ್ ಆಗಿರುವ ಹಲವು ಚಿತ್ರಗಳು ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ಈ ಪ್ರಮಾಣದ ಸಂಖ್ಯೆಯ ಚಿತ್ರಗಳು ಥಿಯೇಟರ್ ಎಲ್ಲಿಂದ ತರೋದು ಎನ್ನುವುದು ವಿತರಕರ ತಲೆನೋವು ಆಗಿದೆ. ಸಿಕ್ಕಷ್ಟು ಚಿತ್ರಮಂದಿರಗಳಲ್ಲಿ ನಿರ್ಮಾಪಕ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿ, ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೌದು, ಸಿನಿಮಾ ರಂಗದಿಂದ ನನ್ನನ್ನು ದೂರಿಡಲಾಗುತ್ತಿದೆ: ಪ್ರಕಾಶ್ ರೈ

    ಹೌದು, ಸಿನಿಮಾ ರಂಗದಿಂದ ನನ್ನನ್ನು ದೂರಿಡಲಾಗುತ್ತಿದೆ: ಪ್ರಕಾಶ್ ರೈ

    ನ್ನಡದ ಪ್ರತಿಭಾವಂತ ನಟ ಪ್ರಕಾಶ್ ರೈ. ಪರಭಾಷೆಯಲ್ಲೂ ಅಷ್ಟೇ ವರ್ಚಸ್ಸು ಹೊಂದಿದವರು. ಭಾರತೀಯ ಸಿನಿಮಾ ರಂಗದ ಮೇರು ನಟರಾಗಿ ಗುರುತಿಸಿಕೊಂಡವರು. ಅಂತಹ ಪ್ರಕಾಶ್ ರೈ ಇದೀಗ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ತಾವು ರಾಜಕೀಯ ಪ್ರವೇಶ ಮಾಡಿದ ನಂತರ ಮತ್ತು ತಮ್ಮ ವಿರೋಧಿಗಳನ್ನು ಪ್ರಶ್ನೆ ಮಾಡಿದ್ದಕ್ಕಾಗಿ ಅವರು ವೃತ್ತಿ ಬದುಕಿನಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದ್ದಾರಂತೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಕಾಶ್ ರೈ, ‘ತಮ್ಮ ಸಿದ್ಧಾಂತ ಮತ್ತು ನಿಲುವುಗಳ ಕಾರಣದಿಂದಾಗಿ ತಮ್ಮೊಂದಿಗೆ ನಟಿಸಲು ಅನೇಕರು ಹಿಂಜರಿಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ರಂಗದಿಂದಲೇ ತಮ್ಮನ್ನು ದೂರ ಇಡುವ ಹುನ್ನಾರವೂ ನಡೆದಿದೆ ಎಂದು ಬಹಿರಂಗವಾಗಿಯೇ ಅವರು ಮಾತನಾಡಿದ್ದಾರೆ. ಈ ಹಿಂದೆ ಪ್ರಧಾನಿಗೆ ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ಪ್ರಶ್ನೆ ಕೇಳಿದರು ಎನ್ನುವ ಕಾರಣಕ್ಕಾಗಿ ಕೆಲ ಜಾಹೀರಾತುಗಳಿಂದ ಅವರನ್ನು ಕೈ ಬಿಟ್ಟರು ಎಂದು ಹೇಳಲಾಗಿತ್ತು. ಇದನ್ನೂ ಓದಿ: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

    ಸಿನಿಮಾ ರಂಗದಿಂದ ದೂರ ಇಡುವಂತಹ ಕೆಲಸವನ್ನು ಮೊದಲ ಮಾಡಿದ್ದು ಬಾಲಿವುಡ್. ಪ್ರಕಾಶ್ ರೈ ಅವರನ್ನು ಬಾಲಿವುಡ್ ನ ಅನೇಕ ಸಿನಿಮಾಗಳಿಂದ ಕೈ ಬಿಡಲಾಯಿತು. ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲು ಎಷ್ಟೋ ನಿರ್ದೇಶಕರು ಹಿಂಜರಿದರು. ಅಲ್ಲದೇ, ಅನೇಕ ಜಾಹೀರಾತುಗಳಿಂದಲೂ ಪ್ರಕಾಶ್ ರೈ ಅವರನ್ನು ಕೈ ಬಿಡಲಾಯಿತು. ಇದೀಗ ಆ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಕಾರಣಕ್ಕಾಗಿ ಪ್ರಕಾಶ್ ರೈ ಮೊದಲ ಬಾರಿಗೆ ಬಹಿರಂಗವಾಗಿ ಈ ಮಾತುಗಳನ್ನು ಆಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆರ್.ಎಸ್.ಎಸ್ ಬಗ್ಗೆ ಸಿನಿಮಾ ಮಾಡಲಿದ್ದಾರೆ ಖ್ಯಾತ ನಿರ್ದೇಶಕ ರಾಜಮೌಳಿ ತಂದೆ

    ಆರ್.ಎಸ್.ಎಸ್ ಬಗ್ಗೆ ಸಿನಿಮಾ ಮಾಡಲಿದ್ದಾರೆ ಖ್ಯಾತ ನಿರ್ದೇಶಕ ರಾಜಮೌಳಿ ತಂದೆ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ಬಾಹುಬಲಿ ಖ್ಯಾತಿಯ ಎಸ್.ಎಸ್. ರಾಜಮೌಳಿ ಅವರ ತಂದೆ, ರಾಜ್ಯ ಸಭಾ ಸಂಸದ  ವಿಜಯೇಂದ್ರ ಪ್ರಸಾದ್ ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್.ಎಸ್.ಎಸ್. ಕುರಿತಾಗಿ ಸಿನಿಮಾ ಮತ್ತು ವೆಬ್ ಸೀರಿಸ್ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಸಿದ್ಧವಾಗಿದ್ದು, ಇಡೀ ಕಥೆಯನ್ನು ಮೋಹನ್ ಭಾಗವಾತ್ ಮೆಚ್ಚಿಕೊಂಡಿದ್ದು, ಇದೊಂದು ಅಪರೂಪದ ಸಿನಿಮಾ ಆಗಲಿದೆ ಎಂದಿದ್ದಾರೆ.

    ವಿಜಯವಾಡದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ ಪ್ರಸಾದ್ ಅವರು, ಆರ್.ಎಸ್.ಎಸ್ ಕುರಿತು ಸಿನಿಮಾ ಮತ್ತು ವೆಬ್ ಸೀರಿಸ್ ತಯಾರಾಗಲಿದ್ದು, ಎರಡಕ್ಕೂ ನಾನೇ ನಿರ್ದೇಶನ ಮಾಡಲಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಬರೆಯುವುದಕ್ಕೆ ಆರಂಭಿಸಿರುವುದಾಗಿಯೇ ತಿಳಿಸಿದ್ದಾರೆ. ಆರ್.ಎಸ್.ಎಸ್ ಬಗ್ಗೆ ಊಹಾಪೋಹಗಳನ್ನು ಹರಿಬಿಡಲಾಗಿದೆ. ಗಾಂಧೀಜಿಯನ್ನು ಕೊಂದವರು ಆರ್.ಎಸ್.ಎಸ್ ನವರು ಎಂದು ಬಿಂಬಿಸಲಾಗುತ್ತಿದೆ. ಅದೆಲ್ಲದಕ್ಕೂ ಸಿನಿಮಾದಲ್ಲಿ ಉತ್ತರ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ಆರ್.ಎಸ್.ಎಸ್ ಇರದೇ ಇದ್ದರೆ ಹಿಂದೂಗಳು ಉಳಿಯುತ್ತಿರಲಿಲ್ಲ. ಕಾಶ್ಮೀರವೇ ಇರುತ್ತಿರಲಿಲ್ಲ. ಹೀಗೆ ಸಾಕಷ್ಟು ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ಆರ್.ಎಸ್.ಎಸ್ ಈ ದೇಶಕ್ಕೆ ಏನೆಲ್ಲ ತ್ಯಾಗ ಮಾಡಿದೆ ಎನ್ನುವ ಕುರಿತಾದ ಸಿನಿಮಾ ಇದಾಗಲಿದೆ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

    Live Tv
    [brid partner=56869869 player=32851 video=960834 autoplay=true]

  • ನನ್ನ `ಕಾಳಿ’ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ ಸ್ಫೋಟಕ ಹೇಳಿಕೆ

    ನನ್ನ `ಕಾಳಿ’ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ ಸ್ಫೋಟಕ ಹೇಳಿಕೆ

    ಚೆನ್ನೈ: ಹಿಂದೂ ದೇವತೆಗಳನ್ನು ಸತತವಾಗಿ ಅವಮಾನಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ವಿವಿಧೆಡೆ ದೂರುಗಳು ದಾಖಲಾಗುತ್ತಿವೆ. ಲೀನಾ ಅವರು ಮೊದಲ ಪೋಸ್ಟರ್‌ನಲ್ಲೇ ಕಾಳಿ ಕೈಗೆ ಸಿಗರೇಟು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ ಮಾಡಿದ್ದ ಅವರು ಶಿವ ಮತ್ತು ಪಾರ್ವತಿ ಕೈಯಲ್ಲೂ ಸಿಗರೇಟು ಕೊಡಿಸಿದ್ದರು.

    ಇದರಿಂದಾಗಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡದ ನಟಿ ಮಾಳವಿಕಾ ಅವಿನಾಶ್ ಸಹ ಈ ನಡೆಯನ್ನು ವಿರೋಧಿಸಿದ್ದರು. ವ್ಯಾಪಕ ವಿರೋಧಗಳ ನಡುವೆಯೂ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಟ್ವೀಟ್‌ನಲ್ಲಿ ಏನಿದೆ?
    ನನ್ನ ಕಾಳಿ ವಿಲಕ್ಷಣವಾದರೂ ಸ್ವತಂತ್ರ ಮನೋಭಾವದ ಚೇತನ. ಪಿತೃ ಪ್ರಭುತ್ವದ ಮೇಲೆ ಉಗುಳುತ್ತಾಳೆ. ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ, ಬಂಡವಾಳಶಾಹಿಯನ್ನು ಕಿತ್ತೊಗೆಯುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನು ಅಪ್ಪಿಕೊಳ್ಳುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕಾಳಿಯ ರೌದ್ರಾವತಾರದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಮಾರ್ಚ್ 25ಕ್ಕೆ RRR ಸಿನಿಮಾ ತೆರೆಗೆ

    ಹೈದರಾಬಾದ್: ರಾಜ್‍ಮೌಳಿ ನಿರ್ದೇಶನದ ಬಹುನೀರಿಕ್ಷಿತ  ಆರ್‌ಆರ್‌ಆರ್‌ ಸಿನಿಮಾವನ್ನು ಮಾರ್ಚ್ 25ರಂದು ಬಿಡುಗಡೆ  ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಾ ಬಂದಿರುವ ಚಿತ್ರ ತಂಡ ಅಧಿಕೃತ ದಿನಾಂಕವನ್ನು ಪ್ರಕಟ ಮಾಡಿದೆ.

    ಜೂನಿಯರ್ ಎನ್‍ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್‌ಆರ್‌ಆರ್‌ ಸಿನಿಮಾವು ಜನವರಿ 7ರಂದು ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ಮಾರ್ಚ್ 18ರಂದು ಆರ್‌ಆರ್‌ಆರ್‌ ಸಿನಿಮಾವನ್ನು ತೆರೆಕಾಣಿಸಲು ಸಜ್ಜಾಗಿದ್ದರು ರಾಜಮೌಳಿ. ಆ ದಿನಾಂಕ ಹೊಂದಿಕೆಯಾಗದೇ ಇದ್ದರೆ ಏಪ್ರಿಲ್ 28ರ ಮೇಲೆ ಕಣ್ಣಿಟ್ಟಿದ್ದರು. ಇದೀಗ ಅವರೆಡನ್ನೂ ಬಿಟ್ಟು ಹೊಸ ರಿಲೀಸ್ ಡೇಟ್ ಫೈನಲ್ ಮಾಡಲಾಗಿದೆ. ಮಾರ್ಚ್ 25ರಂದು ಆರ್‌ಆರ್‌ಆರ್‌ ರಿಲೀಸ್ ಆಗೋದು ಖಚಿತ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ನೀಡಿದೆ.

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಸಿನಿಮಾವಾಗಿದೆ.  ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್​ ಅವರು ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಟ ಅಜಯ್​ ದೇವಗನ್​ ಕೂಡ ಈ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ.

  • ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯನ್ ಜನಿಸಿದ ನಂತರ ನಾನು ಅಭಿನಯಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದ್ದು, ಸಿನಿಮಾ ಮಾಡುವುದು ನನಗೆ ಖುಷಿ ನೀಡುತ್ತದೆ. ಇದು ಎಲ್ಲೋ ಒಂದು ಕಡೆ ನನ್ನ ತನವನ್ನು ನಾನು ಎಂಜಾಯ್ ಮಾಡುವಂತಹ ಕ್ಷೇತ್ರವಾಗಿದೆ. ಕ್ಯಾಮೆರಾ ಮುಂದೆ ನಿಂತುಕೊಳ್ಳುವುದು ನನಗೆ ಹೊಸದೇನಲ್ಲ.ಬಾಲ್ಯದಿಂದಲೂ ನನಗೆ ಸಿನಿಮಾ ಎಂದರೆ ಖುಷಿ ಇದೆ. ಆದರೀಗ ಮತ್ತೆ ಸಿನಿಮಾ ಮಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಇದೇ ವೇಳೆ, ನನ್ನ ತಂದೆ ನನ್ನ ಪ್ರತಿಯೊಂದು ಕನಸ್ಸು ಹಾಗೂ ಹೆಜ್ಜೆಗೆ ಯಾವ ರೀತಿ ಬೆಂಬಲವಾಗಿ ನಿಂತಿದ್ದಾರೋ, ಅದೇ ರೀತಿ ಇಂದು ಚಿರು ಅವರ ತಂದೆ ವಿಜಯ್ ಕುಮಾರ್ ಕೂಡ ನನಗೆ ಬಹಳಷ್ಟು ಬೆನ್ನುಲುಬಾಗಿ ನಿಂತಿದ್ದಾರೆ. ನನ್ನ ಜೀವನದಲ್ಲಿ ಅಹಿತಕರ ಘಟನೆ ನಡೆದ ಬಳಿಕ ಸಿನಿಮಾ ಮಾಡುತ್ತೀಯಾ ಎಂದು ನನ್ನ ತಂದೆ ಕೇಳಿದ್ದರು. ಅದೇ ರೀತಿ ಚಿರು ಅವರ ತಂದೆ ಕೂಡ ನೀನು ಸುಮ್ಮನೆ ಕುಳಿತುಕೊಳ್ಳಬಾರದು. ನೀನು ಸಿನಿಮಾ ಮಾಡಬೇಕು. ಏಕೆಂದರೆ ಅದು ನಿನ್ನ ಪ್ಯಾಷೆನ್ ಎಂದು ಹೇಳಿ ಒಂದು ಪಾಸಿಟಿವ್ ಎನರ್ಜಿ ತುಂಬುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲಿದೆ ಎಂದು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ಚಿರು ಸ್ನೇಹಜೀವಿ ಎಂಬುವುದು ಎಲ್ಲರಿಗೂ ಗೊತ್ತಿದೆ. ಸುಖದಲ್ಲಿ ಎಲ್ಲರೂ ಇರುತ್ತಾರೆ. ಆದರೆ ದುಃಖದಲ್ಲಿ ನಿಮ್ಮ ಜೊತೆ ಯಾರು ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ತಿರುಗಿ ನೋಡಿದಾಗ, ನಮಗೆ ನಿಜವಾದ ಸ್ನೇಹಿತರ್ಯಾರು? ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿ ಇರುವುದು ಯಾರಿಗೆ ಎಂಬ ವಿಚಾರ ನಮಗೆ ಬಹಳ ಚೆನ್ನಾಗಿ ತಿಳಿಯುತ್ತದೆ. ಆ ಒಂದು ಗುಂಪಿನಲ್ಲಿ ನಾನು ನೋಡಿದಾಗ ನನ್ನ ಫ್ರೆಂಡ್ಸ್ ನನ್ನ ಕುಟುಂಬದವರಂತೆ ಇದ್ದಾರೆ. ಇದನ್ನೂ ಓದಿ: ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    ಚಿರು ಹುಟ್ಟು ಹಬ್ಬದಂದು ಈ ಸಿನಿಮಾವನ್ನು ಲಾಂಚ್ ಮಾಡುತ್ತಿರುವುದು, ಚಿರು ಹಾಗೂ ಪನ್ನಾಗಭರಣ, ನನ್ನ ಸ್ನೇಹವನ್ನು ಗುರುತಿಸುತ್ತದೆ. ನನಗೆ ಸಿನಿಮಾ ಮಾಡಬೇಕೆಂಬ ಯೋಚನೆ ಬರುವ ಮುಂಚೆಯೇ ನನ್ನ ಪರವಾಗಿ ಪನ್ನಾಗಭರಣ ಮಾಡಿದ್ದಾರೆ. ಇದು ನಮ್ಮ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಬಹುದು  ಎಂದಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಒಟ್ಟಾರೆ ಚಿರು ಹುಟ್ಟುಹಬ್ಬದಂದು ಪಿಬಿ ಸ್ಟುಡಿಯೋಸ್‍ನಲ್ಲಿ ನನ್ನ ಸಿನಿಮಾ ಬರುತ್ತಿರುವುದು ಬಹಳ ಹೆಮ್ಮೆ ಹಾಗೂ ಖುಷಿ ಆಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

  • ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ಸಂತಸದ ವಿಚಾರವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

    ಮೇಘನಾ ಹೇಳಿದ್ದೇನು?: ತನ್ನ ಅಧಿಕೃತ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ, ಬೇರೆ ಯಾವ ದಿನವೂ ಉತ್ತಮವಾಗಿರಲಿಲ್ಲ, ಬೇರೆ ಯಾವುದೇ ತಂಡವು ಇಷ್ಟು ಉತ್ತಮವಾಗಿರಲಾರದು, ಇದು ನಿಮ್ಮ ಜನ್ಮದಿನ, ಇದು ನಮ್ಮ ಕನಸು ಆಗಿದೆ. ಇದು ನಿಮಗಾಗಿ ಚಿರು, ಪನ್ನ ಇಲ್ಲದಿದ್ದರೆ ನಾನು ಈ ಬಗ್ಗೆ ಯೋಚಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಅಧಿಕೃತವಾಗಿ ಹೇಳುತ್ತಿದ್ದೇನೆ ಕ್ಯಾಮರಾ, ರೋಲಿಂಗ್, ಆ್ಯಕ್ಷನ್ ಎಂದು ಬರೆದುಕೊಂಡು ತಾವು ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕುರಿತಾಗಿ ಚಿರು ಹುಟ್ಟುಹಬ್ಬದಂದು ಹೇಳಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಚಿರು ಹುಟ್ಟುಹಬ್ಬದ ದಿನ ಮೇಘನಾ ರಾಜ್ ತಾವು ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವಾನ್ನು ಹೇಳಿರುವುದು ಅಭಿಮಾನಿಗಳಿಗೆ ಸಖತ್ ಸಂತೋಷ ತಂದಿದೆ. ಮೇಘನಾ ಚಿರು ಹುಟ್ಟುಹಬ್ಬದ ನಿಮಿತ್ತ ಸಾಕಷ್ಟು  ಸರ್ಪ್ರೈಜ್ ನೀಡಲಿದ್ದಾರೆ ಎಂದು ಈ ಮೊದಲೇ ತಿಳಿಸಿದ್ದರು. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ಚಿರಂಜೀವಿ ಸರ್ಜಾ ನಿಧನದ ಬಳಿಕ ನಟನೆಯಿಂದ ಗ್ಯಾಪ್ ಪಡೆದುಕೊಂಡಿದ್ದ ಮೇಘನಾ ರಾಜ್ ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರ ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರುತ್ತಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಮೇಘನಾ ಆದಷ್ಟು ಬೇಗ ಕಮ್‍ಬ್ಯಾಕ್ ಮಾಡಬೇಕು ಎಂಬುದೇ ಫ್ಯಾನ್ಸ್ ಬಯಕೆ ಆಗಿತ್ತು. ಆ ಬಯಕೆಯನ್ನು ಮೇಘನಾ ಈಡೇರಿಸುತ್ತಿದ್ದಾರೆ. ಚಿರು ಸ್ನೇಹಿತ ಪನ್ನಗಾಭರಣ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:  ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಚಿರು ಸರ್ಜಾ ಹುಟ್ಟುಹಬ್ಬದ ಹಿನ್ನಲೆ ಪತಿಯ ಸವಿನೆನಪಿನಾರ್ಥಕವಾಗಿ ಒಂದು ಫೋಟೋಶೂಟ್ ಮಾಡಿಸಿದ್ದಾರೆ. ರಾಜ ರಾಣಿ ಥೀಮ್‍ನಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದಾಗಿದೆ. ರಾಜ ವಿಧಿವಶರಾದ ಬಳಿಕ ರಾಣಿ, ಮಗನಿಗೆ ಆ ರಾಜನ ಬಗ್ಗೆ ತಿಳಿಸುವ ಥೀಮ್ ಅನ್ನು ಫೋಟೋಶೂಟ್ ಒಳಗೊಂಡಿದೆ. ರಾಜನ ನಿಧನದ ಬಳಿಕ ರಾಣಿ ತನ್ನ ಸಾಮ್ರಾಜ್ಯವನ್ನು ಹೇಗೆ ಸಮರ್ಥವಾಗಿ ಮುನ್ನಡೆಸುತ್ತಾಳೆ ಎಂಬ ಥೀಮ್‍ನಲ್ಲಿ ಮೇಘನಾ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ನಿನ್ನೆ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಇಂದು ಮೇಘನಾ ರಾಜ್ ಪತಿಯ ಕುರಿತಾಗಿ ಭಾವನಾತ್ಮಕವಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದನ್ನು ನೋಡಿದ ಕೆಲವು ಅಭಿಮಾನಿಗಳು ಕಣ್ಣೀರು ತುಂಬಿಕೊಂಡಿದ್ದಾರೆ. ನೆಚ್ಚಿನ ನಟನನ್ನು ಮಿಸ್ ಮಾಡಿಕೊಳ್ಳುವುತ್ತಿರುವುದರ ಕುರಿತಾಗಿ ಕಮೆಂಟ್ ಮಾಡುತ್ತಿದ್ದಾರೆ. ನಟ ಚಿರಂಜೀವಿ ಸರ್ಜಾ ಅವರು ಅಭಿಮಾನಿಗಳಿಂದ, ಕುಟುಂಬದಿಂದ ದೂರವಾಗಿರಬಹುದು. ಆದರೆ ಅವರು ನಟಿಸಿರುವ ಸಿನಿಮಾಗಳ ಮೂಲಕವಾಗಿ ಎಂದಿಗೂ ಜೀವಂತವಾಗಿದ್ದಾರೆ.

  • ಲಂಕೆ ದಹನಕ್ಕೆ ರಾಮನಾಗಿ ಯೋಗಿ ಮಾಸ್ ಕಂಬ್ಯಾಕ್

    ಲಂಕೆ ದಹನಕ್ಕೆ ರಾಮನಾಗಿ ಯೋಗಿ ಮಾಸ್ ಕಂಬ್ಯಾಕ್

    ಚಿತ್ರ: ಲಂಕೆ
    ನಿರ್ದೇಶನ : ರಾಮ್ ಪ್ರಸಾದ್
    ನಿರ್ಮಾಪಕ : ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್ ಪ್ರಸಾದ್
    ಸಂಗೀತ : ಕಾರ್ತಿಕ್ ಶರ್ಮಾ
    ಛಾಯಾಗ್ರಹಣ : ರಮೇಶ್ ಬಾಬು
    ತಾರಾಗಣ: ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಸಂಚಾರಿ ವಿಜಯ್, ಎಸ್ಟರ್ ನರೋನಾ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಇತರರು,

    ಲೂಸ್ ಮಾದ ಯೋಗಿ ಅಭಿನಯದ ಬಹು‌ ನಿರೀಕ್ಷಿತ ಅದ್ಧೂರಿ ಕಮರ್ಶಿಯಲ್ ಸಿನಿಮಾ ಲಂಕೆ ಇಂದು‌ ಬಿಡುಗಡೆಯಾಗಿದೆ. ಎರಡು ವರ್ಷದ ನಂತರ ‌ಲೂಸ್ ಮಾದ ಯೋಗಿಯನ್ನು ತೆರೆ ಮೇಲೆ ಕಣ್ತುಂಬಿಕೊಂಡ ಅಭಿಮಾನಿಗಳು ಚಿತ್ರ ನೋಡಿ‌ ದಿಲ್ ಖುಷ್ ಆಗಿದ್ದು. ಎಲ್ಲೆಡೆ ಭರ್ಜರಿ ಒಪನಿಂಗ್ ಪಡೆದುಕೊಂಡಿದೆ.

    ವೆಶ್ಯವಾಟಿಕೆಯಿಂದ ತುಳಿತಕೊಳಗಾದವರ ಕಥೆ ಚಿತ್ರದಲ್ಲಿದೆ. ಜೊತೆಗೆ ಒಂದೊಳ್ಳೆ ಸಂದೇಶವೂ ಇದೆ. ಚಿತ್ರದ‌ ಕಥಾನಾಯಕ ರಾಮ್. ಜೈಲಿನಿಂದ ಬಿಡುಗಡೆಯಾದ ರಾಮ್ ಜಾಕಿ ಎಂಬಾತನ ಮೂಲಕ ರೌಡಿಸಂ ಹಿನ್ನೆಲೆಯುಳ್ಳ ಕಂಟ್ರ್ಯಾಕ್ಟರ್ ನಾಯ್ಡುಗೆ ಪರಿಚಿತನಾಗುತ್ತಾನೆ‌. ಎದುರಾಳಿ ಕೃಷ್ಣಪ್ಪನ ದಾಳಿಯಿಂದ ನಾಯ್ಡುನನ್ನು ಕಾಪಾಡಿ ರಾಮ್ ಕಂಟ್ರ್ಯಾಕ್ಟರ್ ನಾಯ್ಡು ನಂಬಿಕಸ್ಥ ಶಿಷ್ಯನಾಗುತ್ತಾನೆ. ಹೀಗಿರುವಾಗ ರಾಮ್ ಗೆ ವೃದ್ಧಾಶ್ರಮ ನಡೆಸಿಕೊಂಡು ಹೋಗುತ್ತಿದ್ದ ಪಾವನಿ ಪರಿಚಯವಾಗುತ್ತಾಳೆ. ಇಬ್ಬರ ಕ್ಯೂಟ್ ಲವ್ ಸ್ಟೋರಿ ಒಂದು‌ ಕಡೆ ಸಾಗುತ್ತಿರುತ್ತೆ. ಇನ್ನೊಂದು ಕಡೆ ರಾಜಕೀಯದಲ್ಲಿ ಮಿಂಚಬೇಕೆಂದು ಕನಸು ಕಾಣುತ್ತಿದ್ದ ಮಂದಾರ ಮಾಂಸದ ಅಡ್ಡೆ‌ ನಡೆಸುತ್ತಿರುತ್ತಾಳೆ. ಪೊಲೀಸ್ ಅಧಿಕಾರಿ, ಮಿನಿಸ್ಟರ್ ಜೊತೆ ಸೇರಿ‌ ಮಂದಾರ ಆಟ ಎಗ್ಗಿಲ್ಲದೆ ನಡೆಯುತ್ತಿರುತ್ತೆ. ಒಂದಿಷ್ಟು ಟ್ವಿಸ್ಟ್ ಟರ್ನ್ ನಡುವೆ ರಾಮ್, ಪಾವನಿ, ಮಂದಾರ ಒಟ್ಟಿಗೆ‌ ಸೇರುತ್ತಾರೆ. ಇದರ‌ ನಡುವೆ ನಾಯಕ ರಾಮ್ ಇಂಟ್ರಸ್ಟಿಂಗ್ ಫ್ಲ್ಯಾಶ್‌‌‌ ಬ್ಯಾಕ್ ಚಿತ್ರಕ್ಕೆ‌ ಮತ್ತೊಂದು ಹೊಸ ತಿರುವು‌ ನೀಡುತ್ತೆ. ಫ್ಲ್ಯಾಶ್‌‌‌ ಬ್ಯಾಕ್ ಸ್ಟೋರಿ ಏನು, ಲಂಕೆಯಲ್ಲಿ ಮುಂದೇನಾಗುತ್ತೆ ಎನ್ನೊದಕ್ಕೆ ನೀವು ಸಿನಿಮಾ ನೋಡ್ಲೇಬೇಕು. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಲಂಕೆ ನೈಜ ಘಟನೆ ಆಧಾರಿತ ಚಿತ್ರ, ನೈಜ ಘಟನೆಯನ್ನು ಸಿನಿಮ್ಯಾಟಿಕ್ ಆಗಿ ತೋರಿಸುವಲ್ಲಿ ನಿರ್ದೇಶಕ ರಾಮ್ ಪ್ರಸಾದ್ ಯಶಸ್ವಿಯಾಗಿದ್ದಾರೆ. ಕಮರ್ಶಿಯಲ್ ಸಿನಿಮಾಗೆ ತಕ್ಕಂತೆ ಹೆಣೆದ ಸ್ಕ್ರೀನ್ ಪ್ಲೇ ಚಿತ್ರದ ಹೈಲೈಟ್. ರಾಮ್ ಪ್ರಸಾದ್ ಹಾಗೂ ತಂಡದ ಪರಿಶ್ರಮ ತೆರೆ ಮೇಲೆ ಅಚ್ಚುಕಟ್ಟಾಗಿ ಮೂಡಿಬಂದಿದ್ದು. ಬಹಳ ದಿನಗಳ ನಂತರ ಮಾಸ್ ಪ್ರಿಯರ‌ ಮನತಣಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. ಬಿಡುಗಡೆಯಾದ ಎಲ್ಲ‌ ಕಡೆಗಳಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕಲರ್ ಫುಲ್ ಹಾಡು, ಫೈಟ್ ಸೀನ್ ಗಳು ಫುಲ್ ಮಾರ್ಕ್ಸ್ ಪಡೆದುಕೊಂಡಿವೆ.

    ಎಂದಿನಂತೆ ಯೋಗಿ ಆಕ್ಟಿಂಗ್, ಡಾನ್ಸ್, ಫೈಟಿಂಗ್, ಎಲ್ಲದರಲ್ಲೂ ಲೀಲಾಜಾಲವಾಗಿ ನಟಿಸಿ ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡ್ಯಾನಿ ಕುಟ್ಟಪ್ಪ, ಶರತ್ ಲೋಹಿತಾಶ್ವ ಸುಚೇಂದ್ರ ಪ್ರಸಾದ್ ಅದ್ಭುತ ನಟನೆ ಮೂಲಕ ಮಿಂಚಿದ್ದಾರೆ. ಕೃಷಿ ತಾಪಂಡ, ಕಾವ್ಯಾ ಶೆಟ್ಟಿ ಎಸ್ಟರ್ ನರೋನ್ಹಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದಾರೆ. ಹಲವು ವರ್ಷದ ನಂತರ ಕನ್ನಡ ಸಿನಿಮಾದಲ್ಲಿ ನಟಿಸಿರುವ ಗಾಯಿತ್ರ ಜೈರಾಮ್ ಮಿಂಚಿದ್ದಾರೆ. ಸಂಚಾರಿ ವಿಜಯ್ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿ ಗಮನ ಸೆಳೆದಿದ್ದಾರೆ. ಕಾರ್ತಿಕ್ ಶರ್ಮಾ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿದ್ದು, ಭರವಸೆ ಮೂಡಿಸಿದ್ದಾರೆ. ರಮೇಶ್ ಬಾಬು ಛಾಯಾಗ್ರಾಹಣ ಅಚ್ಚುಕಟ್ಟಾಗಿ ಮೂಡಿ ಬಂದಿದ್ದು, ಸಾಹಸ ದೃಶ್ಯಗಳು ಕಿಕ್ ಕೊಡುತ್ತವೆ. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಮಾಸ್ ಕಮರ್ಶಿಯಲ್ ಚಿತ್ರಕ್ಕೆ ಬೇಕಾದ ಅದ್ದೂರಿತನ, ದೊಡ್ಡದಾದ ಸ್ಟಾರ್ ಕಾಸ್ಟ್, ಹಾಡು, ಫೈಟ್ ಸೀನ್ ಗಳು ಚಿತ್ರಕ್ಕೆ ಮೆರುಗು ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ‌ ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿಯಿದ್ದರೂ ಕೂಡ ಚಿತ್ರ‌ ಬಿಡುಗಡೆ ಮಾಡಲು ಧೈರ್ಯ ‌ಮಾಡಿ ಸೈ ಎನಿಸಿಕೊಂಡಿದೆ ಚಿತ್ರತಂಡ. ಮೊದಲ ದಿನ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿದೆ.

    ಪಬ್ಲಿಕ್ ರೇಟಿಂಗ್ : 3.5/5

  • ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!

    ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಕ್ ಲುಕ್ ಧಗ ಧಗ!

    ಹೈದರಾಬಾದ್: ಟಾಲಿವುಡ್ ಅಂಗಳದ ಬಹುನಿರೀಕ್ಷಿತ ಸಲಾರ್ ಸಿನಿಮಾದಲ್ಲಿ ನಟ ಜಗಪತಿ ಬಾಬು ಅವರ ಖಡಕ್ ಫಸ್ಟ್ ಲುಕ್ ರಿವೀಲ್ ಆಗಿದೆ.

    ಟಾಲಿವುಡ್ ಬಾಹುಬಲಿ ಪ್ರಭಾಸ್ ನಟನೆಯ ಹಾಗೂ ಕೆಜಿಎಫ್ ಸೂತ್ರದಾರ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕುರಿತಾಗಿ ನಿರ್ದೇಶಕರು ಮತ್ತಷ್ಟು ಕ್ಯೂರಾಟಿಸಿ ಹುಟ್ಟಿಸುವ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಸಲಾರ್ ಸಿನಿಮಾ ಅಪ್‍ಡೇಟ್‍ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ನಟಿಸುತ್ತಿದ್ದಾರೆ. ಇವರ ಪಾತ್ರದ ಕುರಿತಾಗಿ ಪ್ರಶಾಂತ್ ನೀಲ್ ಪೋಸ್ಟರ್ ಟ್ವೀಟ್ ಮಾಡುವ ಮೂಲಕವಾಗಿ ಅಭಿಮಾನಿಗಳಿಗೆ ಸಿನಿಮಾದಲ್ಲಿರುವ ಖಡಕ್ ಪಾತ್ರದ ಕುರಿತಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

    ಈಗ ಚಿತ್ರತಂಡ ರಾಜಮನಾರ್ ಪಾತ್ರವನ್ನು ಪರಿಚಯಿಸಿದೆ. ಇದರಲ್ಲಿ ಟಾಲಿವುಡ್‍ನ ಖ್ಯಾತ ನಟ ಜಗಪತಿ ಬಾಬು ಈ ಪಾತ್ರದಲ್ಲಿ ಖಡಖ್ ಲುಕ್‍ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಬಿಡುಗಡೆಮಾಡಲಾಗಿದೆ. ಜಗಪತಿ ಬಾಬು ವಿಲನ್ ಪಾತ್ರಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಬಿಗ್ ಬಜೆಟ್‍ನಲ್ಲಿ ನಿರ್ಮಾಣ ಆಗುತ್ತಿರುವ ಸಲಾರ್ ಮೇಲೆ ಪ್ರಭಾಸ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ:  ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ

    ಜಗಪತಿ ಬಾಬು ಸಲಾರ್ ಗೆ ವಿಲನ್ ಆಗುತ್ತಾರೆ ಎನ್ನುವ ವಿಚಾರ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಅವರ ಖಡಕ್ ಲುಕ್ ನೋಡಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ. ಸಲಾರ್ ಸಿನಿಮಾದಲ್ಲಿ ಜಗಪತಿ ಬಾಬು ಖಡಲ್ ಅವತಾರ ಹೇಗೆ ಇರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.