Tag: movie

  • ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    ಮದುವೆ ಮುನ್ನ ಅಭಿಮಾನಿಗಳಿಗೆ ಹರ್ಷಿಕಾ-ಭುವನ್ ಕೊಟ್ಟರು ಗುಡ್ ನ್ಯೂಸ್

    ನಟಿ ಹರ್ಷಿಕಾ (Harshika Poonachcha) ಹಾಗೂ ಭುವನ್ (Bhuvan) ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರ ಎಲ್ಲರಿಗೂ  ಗೊತ್ತಿರುವ ವಿಚಾರ ಇದೆ. ಮದುವೆ (Marriage) ಶುಭ ಸುಖ ನೀಡುವ ಜೊತೆಗೆ ನಟ ಭುವನ್ ಹಾಗೂ ಹರ್ಷಿಕಾ ಪೂಣಚ್ಚ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡಿದ್ದಾರೆ. ಅದರ ಜೊತೆಗೆ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಮಾಡಿದ್ದಾರೆ.

    ಭುವನ್ ಹಾಗೂ ಹರ್ಷಿಕಾ ಅವರ ಪ್ರೊಡಕ್ಷನ್ ಹೌಸ್ ಗೆ ‘ಭುವನಂ ಎಂಟಟೈನ್ ಮೆಂಟ್’ ಎಂದು ಹೆಸರಿಡಲಾಗಿದ್ದು ಅದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ (Movie) ‘ಭುವನಂ ಶ್ರೇಷ್ಠಮ್  ಗಚ್ಚಾಮಿ’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ:ಉರ್ಫಿಗೆ ಕೊಲೆ ಬೆದರಿಕೆ: ವ್ಯಕ್ತಿಯ ಹೆಸರು ಬಹಿರಂಗ ಪಡಿಸಿದ ನಟಿ

    ಇದೊಂದು ಬಾಕ್ಸರ್ ನ ಕಥೆಯಾಗಿದ್ದು ಆರು ವರ್ಷದ ಹಿಂದೆಯೇ ಈ ರೀತಿಯ ಸಿನಿಮಾ ಒಂದನ್ನ ಮಾಡಬೇಕು ಎಂದು ಭುವನ್ ಹಾಗೂ ಹರ್ಷಿಕಾ ಪ್ಲಾನ್ ಮಾಡಿಕೊಂಡಿದ್ದರಂತೆ. ಬಾಕ್ಸರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಭುವನ್​ ಪೊನ್ನಣ್ಣ ಸಾಕಷ್ಟು ತರಬೇತಿ ಪಡೆದುಕೊಂಡಿದ್ದಾರೆ. ಈ ಪಾತ್ರಕ್ಕೆ ಹಲವು ಶೇಡ್​ ಇರಲಿದೆ. ಈ ಚಿತ್ರದಲ್ಲಿ  ರೆಟ್ರೊ ಶೈಲಿಯಲ್ಲೂ ಭುವನ್ ಅವರನ್ನು ನೋಡಬಹುದು. ಸಿನಿಮಾಗಳ ಸಂಖ್ಯೆಗಿಂತಲೂ ಗುಣಮಟ್ಟ ಮುಖ್ಯ ಎನ್ನುವ ಭುವನ್ ಗಡಿಬಿಡಿಯಲ್ಲಿ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಕಳೆದ ಎರಡು ವರ್ಷಗಳಿಂದ ಈ ಸಿನಿಮಾದ ಸ್ಕ್ರಿಪ್ಟ್​ ಮೇಲೆ  ಕೆಲಸ ಮಾಡುತ್ತಿದ್ದಾರೆ.

    ಸದ್ಯ ಮದುವೆಯ ಸಂದರ್ಭದಲ್ಲಿ ಈ ಖುಷಿಯ ಸುದ್ದಿಯನ್ನು ಕೂಡ ಭುವನ್ ಹಾಗೂ ಹರ್ಷಿಕಾ ಮಾಧ್ಯಮ ಮಿತ್ರರ ಜೊತೆ ಹಂಚಿಕೊಂಡಿದ್ದಾರೆ. ಮದುವೆ ಸಮಾರಂಭ ಎಲ್ಲವನ್ನು ಮುಗಿಸಿಕೊಂಡು ಶೀಘ್ರದಲ್ಲಿ ಸಿನಿಮಾ ಚಿತ್ರೀಕರಣವನ್ನು ಶುರು ಮಾಡಲಿದ್ದಾರೆ. ಇನ್ನು ಈ ಸಿನಿಮಾಗೆ ಭುವನ್ ಅವರೇ ಕಥೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ ಚಿತ್ರದಲ್ಲಿ ಭುವನ್ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ಹರ್ಷಿಕಾ ನಿರ್ಮಾಪಕಿಯಾಗಿ ಮೊದಲ‌ ಬಾರಿಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ಕೊಡಗು ಮೂಲದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಭುವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

    ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

    ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ (Aniruddha) ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಏನು ಎಂದು ಕೇಳಿದ್ದರು. ಎಸ್.ನಾರಾಯಣ್ ಮತ್ತು ಅನಿರುದ್ಧ ಕಾಂಬಿನೇಷನ್ ನಲ್ಲಿ ‘ಸೂರ್ಯವಂಶ’ ಧಾರಾವಾಹಿ ಬರುತ್ತದೆ ಎಂದಾಗ ಕುತೂಹಲದಿಂದ ಕಾದರು. ಆದರೆ, ಆ ಧಾರಾವಾಹಿ ಬರಲೇ ಇಲ್ಲ. ಅನಿರುದ್ಧ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಯಿತು.

    ನಿರಾಸೆಗೊಂಡ ಅಭಿಮಾನಿಗಳಿಗಾಗಿ ಅನಿರುದ್ಧ ಬಿಗ್ ಸರ್ ಪ್ರೈಸ್ ನೀಡುವುದಾಗಿ ತಿಳಿಸಿದ್ದಾರೆ. ‘ಇನ್ನು ಕೇವಲ ಎರಡೇ ಎರಡು ದಿನ ವೇಟ್ ಮಾಡಿ, ನಿಮಗಾಗಿ ಬಿಗ್ ಸರ್ ಪ್ರೈಸ್ ಕಾದಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಆ ಸರ್ ಪ್ರೈಸ್ ಏನು ಎನ್ನುವ ಕುರಿತು ಅವರು ಸಣ್ಣ ಸುಳಿವೂ ಕೂಡ ನೀಡಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳು ಕಾಯುವಂತಾಗಿದೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?

    ಜೊತೆ ಜೊತೆಯಲಿ ಧಾರಾವಾಹಿಯಿಂದ (Serial) ಅನಿರುದ್ಧ ಆಚೆ ಬಂದ ನಂತರ ಮತ್ತೆ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಇತ್ತು. ಸಿನಿಮಾ (Movie) ರಂಗದಲ್ಲೇ ಅವರು ನಟರಾಗಿ ಸಕ್ರೀಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ, ಡಾಕ್ಯುಮೆಂಟರಿ ನಿರ್ದೇಶನವನ್ನೂ ಮುಂದುವರೆಸುತ್ತಾರೆ ಎನ್ನಲಾಗಿತ್ತು. ಈ ಎರಡರಲ್ಲಿ ಯಾವುದಾದರೂ ಒಂದು ಸರ್ ಪ್ರೈಸ್ ರೀತಿಯಲ್ಲಿ ಹೇಳಬಹುದು ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ.

     

    ಸೂರ್ಯವಂಶ (Suryavamsa) ಧಾರಾವಾಹಿಯ ಹಲವು ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಆದರೆ, ಅದು ಅರ್ಧಕ್ಕೆ ನಿಲ್ಲುವುದಕ್ಕೆ ಈವರೆಗೂ ಕಾರಣ ಸಿಕ್ಕಿಲ್ಲ. ಈ ಧಾರಾವಾಹಿಯ ಕುರಿತಾಗಿ ಅನಿರುದ್ಧ ಅಪ್ ಡೇಟ್ ನೀಡಬಹುದು ಎಂದೂ ಅಂದಾಜಿಸಲಾಗಿದೆ. ಅದು ಏನು ಎನ್ನುವುದು ತಿಳಿಯಬೇಕು ಅಂದರೆ ಇನ್ನೆರಡು ದಿನ ಕಳೆಯಲೇಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ‘ಸಿದ್ದರಾಮಯ್ಯ ಎಂಬ ನಾನು’: ಸಿದ್ದರಾಮಯ್ಯ ಕುರಿತು ಮತ್ತೊಂದು ಸಿನಿಮಾ ಘೋಷಣೆ

    ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕುರಿತಾಗಿ ಮತ್ತೊಂದು ಸಿನಿಮಾ (Movie) ಘೋಷಣೆಯಾಗಿದೆ. ಸಿದ್ಧರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿ (Chief Minister) ಆಯ್ಕೆಯಾಗುತ್ತಿದ್ದಂತೆಯೇ  ‘ಸಿದ್ದರಾಮಯ್ಯ ಎಂಬ ನಾನು’ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ನಿರ್ದೇಶಕ ನಾಗರಾಜು ಬಿ. ಈಗಾಗಲೇ ತಮ್ಮ ಸಿನಿಮಾದ ಪೋಸ್ಟರ್ ಅನ್ನು ಕೂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಹಿಂದೆ ಸಿದ್ದರಾಮಯ್ಯನವರ ಜೀವನವನ್ನು (Biopic) ಆಧರಿಸಿ ಚಿತ್ರ ಮಾಡುವುದಾಗಿ ಸತ್ಯರತ್ನಂ ಎನ್ನುವವರು ಹೇಳಿಕೊಂಡಿದ್ದರು. ಈ ಸಿನಿಮಾದಲ್ಲಿ ‘ಲೀಡರ್ ರಾಮಯ್ಯ’ ಎಂದು ಹೆಸರಿಟ್ಟಿದ್ದರು. ರಾಮನವಮಿಯ ದಿನದಂದು ಸಿನಿಮಾದ ಪೋಸ್ಟರ್ ಅನ್ನು ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸದಲ್ಲೇ ಬಿಡುಗಡೆ ಮಾಡಲಾಗಿತ್ತು. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ತಯಾರಿಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದನ್ನೂ ಓದಿ:Exclusive- ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಹಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು ಹೇಗೆ?

    ಪೋಸ್ಟರ್ ರಿಲೀಸ್ ಆಗಿ ಹಲವು ದಿನಗಳು ಕಳೆದರೂ, ಈವರೆಗೂ ಆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸಿದ್ದರಾಮಯ್ಯನವರ ಪಾತ್ರವನ್ನು ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದು ಕೂಡ ಈವರೆಗೂ ಅಧಿಕೃತವಾಗಿಲ್ಲ. ಚುನಾವಣೆ, ನೀತಿಸಂಹಿತೆ ಕಾರಣದಿಂದಾಗಿ ಸಿನಿಮಾ ಶುರು ಮಾಡಿಲ್ಲ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಈ ಸಿನಿಮಾದ ಜೊತೆಗೆ ಮತ್ತೊಂದು ಸಿನಿಮಾ ಘೋಷಣೆಯಾಗಿದೆ.

    ಸಿದ್ದರಾಮಯ್ಯ ಎಂಬ ನಾನು ಚಿತ್ರತಂಡ ಹೇಳಿಕೊಂಡಂತೆ ಸದ್ಯದಲ್ಲೇ ಚಿತ್ರೀಕರಣ ಕೂಡ ಆರಂಭ ಮಾಡಲಿದ್ದಾರಂತೆ. ಆದರೆ ಈ ಕುರಿತು ಸಿದ್ಧರಾಮಯ್ಯ ಅವರ ಜೊತೆ ಮಾತುಕತೆ ಮಾಡಿದ್ದರೋ ಅಥವಾ ಅವರಿಗೆ ಗೊತ್ತಾಗದಂತೆ ಸಿನಿಮಾ ಮಾಡುತ್ತಿದ್ದರೋ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ.

  • ಧೋನಿ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ

    ಧೋನಿ ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಫಸ್ಟ್ ಲುಕ್ ಬಿಡುಗಡೆ

    ಕ್ಯಾಪ್ಟನ್ ಕೂಲ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್ ಧೋನಿ (MS Dhoni) ಸಿನಿಮಾ ನಿರ್ಮಾಣಕ್ಕಿಳಿದಿದ್ದಾರೆ. ಪತ್ನಿ ಸಾಕ್ಷಿ (Sakshi) ಜೊತೆಗೂಡಿ ಧೋನಿ ಎಂಟರ್ ಟೈನ್ಮೆಂಟ್ ಬ್ಯಾನರ್ ಶುರು ಮಾಡಿರುವ ಅವರು ತಮಿಳು ಸೇರಿದಂತೆ ಬೇರೆ ಭಾಷೆಗಳ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಈ ಬ್ಯಾನರ್ ಯಡಿಯಲ್ಲಿ ಮೂಡಿಬರ್ತಿರುವ ‘L.G.M’ ಸಿನಿಮಾದ ಫಸ್ಟ್ ಲುಕ್ (First Look) ಅನಾವರಣ ಮಾಡಿ ಇಡೀ ತಂಡಕ್ಕೆ ಕ್ಯಾಪ್ಟನ್ ಕೂಲ್ ಶುಭಾಶಯ ತಿಳಿಸಿದ್ದಾರೆ.

    ‘L.G.M’ ಸಿನಿಮಾಗೆ ವಿಕಾಸ್ ಹಸಿಜಾ ಬಂಡವಾಳ ಹೂಡಿದ್ದಾರೆ. ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿರುವ ಅವರು, ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

    ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಪ್ರಿಯಾಂಶು ಚೋಪ್ರಾ, ‘L.G.M’ ಹೊಸ ಪರಿಕಲ್ಪನೆಯಾಗಿದೆ. ಅನೇಕ ಸ್ವಾರಸ್ಯಕರ ಅಂಶಗಳು ಚಿತ್ರದಲ್ಲಿವೆ. ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗವಿ ಚಿತ್ರದಲ್ಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮತ್ತೆ ಒಂದಾಯಿತು ‘ಕರ್ಣನ್’ ಜೋಡಿ: ಧನುಷ್ ಚಿತ್ರಕ್ಕೆ ಮಾರಿ ಸೆಲ್ವರಾಜ್ ಡೈರೆಕ್ಟರ್

    ರಮೇಶ್ ಥಮಿಳ್ಮಣಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘L.G.M’ ಸಿನಿಮಾ ಫ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಹರೀಶ್ ಕಲ್ಯಾಣ್, ನದಿಯಾ ಹಾಗೂ ಲವ್ ಟು ಡೇ ಖ್ಯಾತಿಯ ಇವಾನಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಯೋಗಿ ಬಾಬು ಹಾಗೂ ಮಿರ್ಚಿ ವಿಜಯ್ ತಾರಾಬಳಗದಲ್ಲಿದ್ದಾರೆ. ರಮೇಶ್ ಥಮಿಳ್ಮಣಿ ಸಿನಿಮಾಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ.

  • ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಸ್ಯಾಂಡಲ್ ವುಡ್ ನಲ್ಲಿ ಈ ವಾರ ಬರೋಬ್ಬರಿ ಹನ್ನೊಂದು ಚಿತ್ರಗಳು (Movie) ಬಿಡುಗಡೆ (Release) ಆಗುತ್ತಿವೆ. ಈ ಮೂಲಕ ನೋಡುಗನನ್ನೇ ಚಿತ್ರಗಳು ಬೆಚ್ಚಿ ಬೀಳಿಸಿವೆ. ಇತ್ತೀಚಿನ ದಿನಗಳಲ್ಲಿ ವಾರಕ್ಕೆ ನಾಲ್ಕೈದು ಚಿತ್ರಗಳು ರಿಲೀಸ್ ಆಗುವುದು ಸಾಮಾನ್ಯವಾಗಿತ್ತು. ಆದರೆ, ಈ ವಾರ ಹನ್ನೊಂದು ಚಿತ್ರಗಳು ರಿಲೀಸ್ ಆಗುವ ಮೂಲಕ ನಿರ್ಮಾಪಕರಲ್ಲಿ ಆತಂಕ ಮೂಡಿಸಿವೆ. ಕನ್ನಡದ ಹನ್ನೊಂದು ಚಿತ್ರಗಳ ಜೊತೆ ತೆಲುಗು, ತಮಿಳು ಮತ್ತು ಮಲಯಾಳಂ ಹಾಗೂ ಹಿಂದಿ ಚಿತ್ರಗಳು ಕೂಡ ಥಿಯೇಟರ್ ನಲ್ಲಿವೆ. ಹೀಗಾಗಿ ಕನ್ನಡದ ಪ್ರೇಕ್ಷಕ ಗೊಂದಲದಲ್ಲಿದ್ದಾನೆ.

    ಈ ವರ್ಷ ಶುರುವಾಗಿ ಇನ್ನೂ ಎರಡು ತಿಂಗಳು ಪೂರ್ತಿಯಾಗಿಲ್ಲ. ಆಗಲೇ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಐವತ್ತರ ಸಮೀಪವಿದೆ. ಈವರೆಗೂ ಕನ್ನಡದಲ್ಲೇ 47 ಚಿತ್ರಗಳು ಬಿಡುಗಡೆ ಆಗಿವೆ. ಈ ವಾರ ಸೌತ್ ಇಂಡಿಯನ್ ಹೀರೋ, ಸಂಭ್ರಮ, ಪಲಾರ್, ಜ್ಯೂಲಿಯಟ್ 2, ಹೊಟ್ಟೆಪಾಡು, ಗೌಳಿ, ಕ್ಯಾಂಪಸ್ ಕ್ರಾಂತಿ, ಅಸ್ತಿರ, ಅಂತರಂಗ, ಆರ್ಟಿಕಲ್ 370 ಮತ್ತು 1975 ಚಿತ್ರಗಳು ತೆರೆಗೆ ಬರುತ್ತಿವೆ. ಇದನ್ನೂ ಓದಿ: ‘ಪೆಂಟಗನ್’ ಸಿನಿಮಾದ 3ನೇ ಕಥೆಯ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್

    ಬಹುತೇಕ ಚಿತ್ರಗಳು ಹೊಸಬರದ್ದೇ ಆದರೂ, ಹೊಸ ಮತ್ತು ವಿಭಿನ್ನ ರೀತಿಯ ಕಾರಣಗಳಿಂದಾಗಿ ಕೆಲ ಚಿತ್ರಗಳು ಗಮನ ಸೆಳೆದಿವೆ. ಬಹುವರ್ಷಗಳ ನಂತರ ಶ್ರೀನಗರ ಕಿಟ್ಟಿ (Srinagar Kitty) ನಟನೆಯ ಚಿತ್ರ ತೆರೆ ಕಾಣುತ್ತಿದೆ. ಅಲ್ಲದೇ, ಈಗಾಗಲೇ ಫಸ್ಟ್ ರಾಂಕ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನರೇಶ್ (Naresh) ನಿರ್ದೇಶನದ ಮತ್ತೊಂದು ಚಿತ್ರ ತೆರೆ ಕಾಣುತ್ತಿದೆ. ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಪಲಾರ್ ಚಿತ್ರ ಕೂಡ ಈ ವಾರ ಬೆಳ್ಳಿತೆರೆಯಲ್ಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಈ ಚಿತ್ರದಲ್ಲಿ ಹಾರು ಜನ ಅಲ್ಲ ಆರು ಜನ ಹೀರೋಗಳಿದ್ದಾರೆ

    ಈ ಚಿತ್ರದಲ್ಲಿ ಹಾರು ಜನ ಅಲ್ಲ ಆರು ಜನ ಹೀರೋಗಳಿದ್ದಾರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಳೆ ರಾಜ್ಯಾದ್ಯಂತ ಪ್ರಥಮ್ ಅಭಿನಯದ ‘ನಟ ಭಯಂಕರ’ ಸಿನಿಮಾ ರಿಲೀಸ್

    ನಾಳೆ ರಾಜ್ಯಾದ್ಯಂತ ಪ್ರಥಮ್ ಅಭಿನಯದ ‘ನಟ ಭಯಂಕರ’ ಸಿನಿಮಾ ರಿಲೀಸ್

    ಬಿಗ್ ಬಾಸ್ ಖ್ಯಾತಿಯ ಪ್ರಥಮ್ (Pratham) ನಟಿಸಿ, ನಿರ್ದೇಶನ ಮಾಡಿರುವ ‘ನಟ ಭಯಂಕರ’ (Nata Bhayankar) ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈವರೆಗೂ ಕೇವಲ ನಟನಾಗಿ ಪ್ರೇಕ್ಷಕರ ಮುಂದೆ ನಿಂತಿದ್ದ ಪ್ರಥಮ್, ಈ ಬಾರಿ ನಿರ್ದೇಶಕನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾ (Movie) ಪೂರ್ತಿ ನಗಿಸುತ್ತಲೇ ಒಂದು ಹಾರರ್ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ನಗುವುದಕ್ಕಾಗಿ ಥಿಯೇಟರ್ ಗೆ ಬನ್ನಿ ಎಂದು ಅವರು ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ.

    ಇದೊಂದು ಪಕ್ಕಾ ಹಾರರ್ ಹಾಗೂ ಥ್ರಿಲ್ಲರ್ ಮಿಶ್ರಿತ ಸಿನಿಮಾವಾಗಿದ್ದರೂ, ಭರ್ಜರಿ ಮನರಂಜನೆಯೂ ಇದೆಯಂತೆ. ನಗಿಸುವುದಕ್ಕಾಗಿ ಪ್ರಥಮ್ ಜೊತೆ ಓಂ ಪ್ರಕಾಶ್ ರಾವ್ (Om Prakash Rao), ಕುರಿ ಪ್ರತಾಪ್, ಮಜಾ ಟಾಕೀಸ್ ಪವನ್, ಬಿರಾದಾರ ಹಾಗೂ ರಾಕ್ ಲೈನ್ ಸುಧಾಕರ್ ಸೇರಿದಂತೆ ಅನೇಕ ಕಲಾವಿದರು ತಾರಾಗಣದಲ್ಲಿ ಇದ್ದಾರೆ. ಸಾಯಿ ಕುಮಾರ್ (Sai Kumar) ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹಾಗಾಗಿ ಇದೊಂದು ಪಕ್ಕಾ ಮನರಂಜನೆಯ ಸಿನಿಮಾ ಎನ್ನುವುದು ಪ್ರಥಮ್ ಮಾತು. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಪ್ರಥಮ್ ಈ ಚಿತ್ರದಲ್ಲಿ ಸಿನಿಮಾ ಕಲಾವಿದನ ಪಾತ್ರವನ್ನು ಮಾಡಿದ್ದಾರಂತೆ. ಕಲಾವಿದ ಮತ್ತು ಭಯಂಕರ ದೆವ್ವದ ನಡುವೆ ನಡೆಯುವ ರೋಚಕ ಕಥೆಯೇ ಈ ಸಿನಿಮಾವಂತೆ. ಓಂ ಪ್ರಕಾಶ್ ರಾವ್ ಈ ಸಿನಿಮಾದಲ್ಲಿ ನಿರ್ದೇಶಕನ ಪಾತ್ರವಂತೆ. ನಟ ಮತ್ತು ನಿರ್ದೇಶಕನ ನಡುವೆ ಇರುವ ಬಾಂಧವ್ಯವನ್ನೂ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರಂತೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಕೂಡ ನೋಡುಗರ ನಿರೀಕ್ಷೆಯನ್ನು ಹುಸಿಗೊಳಿಸಲಾರದು ಎನ್ನುತ್ತಾರೆ ಪ್ರಥಮ್.

    ಈ ಸಿನಿಮಾದಲ್ಲಿ ಎರಡು ಬಗೆಯ ಕತೆಗಳಿವೆಯಂತೆ. ದೃಷ್ಟಿ ಇಲ್ಲದ ದೆವ್ವದ ನಡುವೆ ನಡೆಯುವಂತಹ ಪ್ರೇಮಕಥೆಯು ಥ್ರಿಲ್ ನೀಡಲಿದೆ ಎನ್ನುವುದು ಪ್ರಥಮ್ ಮಾತು. ಅಹಂಕಾರ ಇರುವ ಒಬ್ಬ ವ್ಯಕ್ತಿ ಮಾತು ಕೊಟ್ಟ ಮೇಲೆ ಹೇಗೆಲ್ಲ ಬದಲಾಗುತ್ತಾನೆ ಎನ್ನುವುದು ಕೂಡ ಸಿನಿಮಾದಲ್ಲಿ ಕತೆಯಾಗಿ ಬರಲಿದೆ. ಹಾರರ್ ಸಿನಿಮಾ ಇದಾದರೂ, ಮನರಂಜಿಸುವಂತಹ ಎಲ್ಲ ಅಂಶಗಳು ಚಿತ್ರದಲ್ಲಿ ಇವೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜ.13ಕ್ಕೆ ತೆರೆಗೆ ಬರುತ್ತಿದೆ ʼವಿರಾಟಪುರ ವಿರಾಗಿʼ!

    ಜ.13ಕ್ಕೆ ತೆರೆಗೆ ಬರುತ್ತಿದೆ ʼವಿರಾಟಪುರ ವಿರಾಗಿʼ!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಠಾಣ್ ಡಿಸಾಸ್ಟರ್, ನಿವೃತ್ತಿ ತಗೊಳ್ಳಿ ಅಂದವರಿಗೆ ಶಾರುಖ್ ಕೊಟ್ಟ ಉತ್ತರ ‘ಕೂಲ್ ಕೂಲ್’

    ಪಠಾಣ್ ಡಿಸಾಸ್ಟರ್, ನಿವೃತ್ತಿ ತಗೊಳ್ಳಿ ಅಂದವರಿಗೆ ಶಾರುಖ್ ಕೊಟ್ಟ ಉತ್ತರ ‘ಕೂಲ್ ಕೂಲ್’

    ಹಿಂದಿಯ ಪಠಾಣ್ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ನಟ ಶಾರುಖ್ ಖಾನ್ ತಮ್ಮ ಅಭಿಮಾನಿಗಳ ಜೊತೆ ಸೋಷಿಯಲ್ ಮೀಡಿಯಾದಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಆಯೋಜನೆ ಮಾಡಿದ್ದರು. ಇಲ್ಲಿ ಯಾರು ಬೇಕಾದರೂ ಪ್ರಶ್ನೆಗಳನ್ನು ಮಾಡಬಹುದು ಎಂದು ಹೇಳಿದ್ದರು. ಈ ಹೊತ್ತಿನಲ್ಲಿ ರೌಡಿ ಹೆಸರಿನ ಅಕೌಂಟ್ ನಿಂದ ಒಬ್ಬರು ಪ್ರಶ್ನೆ ಮಾಡಿ, ‘ನಿಮ್ಮ ಪಠಾಣ್ ಸಿನಿಮಾ ಈಗಾಗಲೇ ಡಿಸಾಸ್ಟರ್ ಆಗಿದ್ದು, ನೀವು ನಿವೃತ್ತಿ ತಗೆದುಕೊಳ್ಳಿ’ ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಶಾರುಖ್ ಅಷ್ಟೇ ಕೂಲ್ ಆಗಿ ಉತ್ತರಿಸಿದ್ದಾರೆ.

    ಸಾವಿರಾರು ಪ್ರಶ್ನೆಗಳ ಮಧ್ಯೆ ರೌಡಿ ಹೆಸರಿನ ಅಕೌಂಟ್ ನಿಂದ ಬಂದ ಪ್ರಶ್ನೆಗಳನ್ನು ಎತ್ತಿಕೊಂಡ ಶಾರುಖ್ ಖಾನ್, ‘ದೊಡ್ಡವರ ಜೊತೆ ಹಾಗೆಲ್ಲ ಮಾತನಾಡಬಾರದು’ ಎಂದಷ್ಟೇ ಉತ್ತರಿಸಿದರು. ಈ ಉತ್ತರ ನಂತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು. ಈ ಪ್ರಶ್ನೋತ್ತರದ ಟ್ವಿಟ್ ಅನ್ನು ಸ್ಕ್ರಿನ್ ಶಾಟ್ ತಗೆದು ಹಲವಾರು ಜನರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವಕಾಶ ಸಿಕ್ಕಿದೆ ಎಂದು ಏನೇ ಬೇಕಾದರೂ ಪ್ರಶ್ನೆಗಳನ್ನು ಕೇಳುವುದಲ್ಲ ಎಂದು ಹಲವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಪಠಾಣ್ ಸಿನಿಮಾ ನಾನಾ ಕಾರಣಗಳಿಂದ ವಿವಾದಕ್ಕೀಡಾಗಿದೆ. ಆದರೂ, ನಿಗದಿತ ಸಮಯದಲ್ಲಿ ಎಲ್ಲವೂ ಆಗಲಿದೆ ಎಂದು ಶಾರುಖ್ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರದ ಟ್ರೈಲರ್ ಹಾಗೂ ಸಿನಿಮಾದ ರಿಲೀಸ್ ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಮೊದಲೇ ಫಿಕ್ಸ್ ಮಾಡಿಕೊಂಡಂತೆ ಜನವರಿ 10 ರಂದು ಟ್ರೈಲರ್ ಮತ್ತು ಜನವರಿ 25 ರಂದು ವಿಶ್ವದಾದ್ಯಂತ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆಯೇ ಘೋಷಿಸಿದೆ.

    ಈ ನಡುವೆ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ.

    ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ‘ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.

    ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದೂ, ಅವುಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದೂ ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದೆ ಎನ್ನುವ ಆರೋಪವಿದೆ. ಈ ಎಲ್ಲ ಸಂಕಟಗಳ ಮಧ್ಯೆಯೂ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡುವ ಸಂಭ್ರಮದಲ್ಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿಗದಿತ ದಿನದಂದೇ ರಿಲೀಸ್ ಆಗಲಿದೆ ‘ಪಠಾಣ್’  ಟ್ರೈಲರ್, ಸಿನಿಮಾ

    ನಿಗದಿತ ದಿನದಂದೇ ರಿಲೀಸ್ ಆಗಲಿದೆ ‘ಪಠಾಣ್’ ಟ್ರೈಲರ್, ಸಿನಿಮಾ

    ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾದ ಟ್ರೈಲರ್ ಹಾಗೂ ಸಿನಿಮಾ ಅಂದುಕೊಂಡ ದಿನದಂದೇ ರಿಲೀಸ್ ಆಗಲಿವೆ. ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರದ ಟ್ರೈಲರ್ (Trailer) ಹಾಗೂ ಸಿನಿಮಾದ ರಿಲೀಸ್ ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಮೊದಲೇ ಫಿಕ್ಸ್ ಮಾಡಿಕೊಂಡಂತೆ ಜನವರಿ 10 ರಂದು ಟ್ರೈಲರ್ ಮತ್ತು ಜನವರಿ 25 ರಂದು ವಿಶ್ವದಾದ್ಯಂತ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆಯೇ ಘೋಷಿಸಿದೆ.

    ಈ ನಡುವೆ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ‘ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.

    ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದೂ, ಅವುಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದೂ ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದೆ ಎನ್ನುವ ಆರೋಪವಿದೆ. ಈ ಎಲ್ಲ ಸಂಕಟಗಳ ಮಧ್ಯೆಯೂ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡುವ ಸಂಭ್ರಮದಲ್ಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]