Tag: movie theater

  • RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    ಗಾಗಲೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಆರ್‌ಆರ್‌ಆರ್ ಚಿತ್ರತಂಡವು ವೀಕೆಂಡ್‌ನಲ್ಲಿ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ.

    ವೀಕೆಂಡ್ ಖುಷಿಯಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರದ ಆರಂಭದಲ್ಲೇ ಬರುವ `ಕೊಮ್ಮ ಉಯ್ಯಾಲ’ ಗೀತೆಯನ್ನು ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು, ಮಲಯಾಳಂ ಭಾಷೆಗಳಲ್ಲೂ ಯುಟ್ಯೂಬ್‌ನಲ್ಲಿ ಸಾಂಗ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದಿದೆ. ಇದನ್ನೂ ಓದಿ: ಆಲಿಯಾ- ರಣಬೀರ್ ಮದುವೆಗೆ ರಾಕಿ ಸಾವಂತಗಿಲ್ಲ ಆಹ್ವಾನ: ರಾಕಿ ಆ ಬಯಕೆ ಈಡೇರಲೇ ಇಲ್ಲ

    RRR NEW SONG ONE

    ಆರ್‌ಆರ್‌ಆರ್ ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿರುವ `ನಾಟು ನಾಟು’ ಸಾಂಗ್ 5 ಭಾಷೆಗಲ್ಲೂ ಸಖತ್ ಸೌಂಡ್ ಮಾಡಿದೆ. ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಈ ಹಾಡಿಗೆ ಹಾಕಿರುವ ಜಬರ್ದಸ್ತ್ ಸ್ಟೆಪ್‌ಗಳು ಅಭಿಮಾನಿಗಳನ್ನು ಹುಚ್ಚೆಂದು ಕುಣಿಯುವಂತೆ ಮಾಡಿದೆ.

    ಇದೀಗ ಪ್ರತಿಯೊಬ್ಬರಿಗೂ ಇಷ್ಟವಾಗುವಂತ ಕೊಮ್ಮಾ ಉಯ್ಯಾಲ ಗೀತೆಯನ್ನು 5 ಭಾಷೆಗಳಲ್ಲೂ ಬಿಡುಗಡೆ ಮಾಡಿದ್ದು, ಮೆಚ್ಚುಗೆ ಗಳಿಸಿದೆ. ಅಜಾದ್ ವರದರಾಜ್ ಅವರು ಬರೆದಿರುವ ಈ ಸಾಂಗ್ ಅನ್ನು ಎಂ.ಎಂ.ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಖ್ಯಾತ ಗಾಯಕಿ ಪ್ರಕೃತಿ ರೆಟ್ಟಿ ಹಾಡಿ ಮಿಂಚಿದ್ದಾರೆ. 2.49 ನಿಮಿಷದ ಗೀತೆ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್ 

    ಹಸಿರು ಪ್ರಕೃತಿಯ ಅನಾವರಣದಿಂದ ಆರಂಭವಾಗುವ ಈ ಗೀತೆಗೆ ನುಡಿಸಿರುವ ವಾದ್ಯಗಳು ಹಾಗೂ ವಾತಾವರಣ ಅಪ್ಪಟ ಜನಪದ ಶೈಲಿಯಿಂದ ಕೂಡಿದಂತಿದೆ. ಕಾಡುಜನರ ಮುಗ್ಧ ಮನಸ್ಥಿತಿಯನ್ನೂ ಮುಖಭಾವದಲ್ಲಿ ಅರಳಿಸಿದ್ದಾರೆ. ಅಲ್ಲಲ್ಲಿ ಚಿತ್ರದ ಸನ್ನಿವೇಶಗಳನ್ನು ಹಿಡಿದಿದ್ದರೂ ಪ್ರಕೃತಿ ಸೌಂದರ್ಯವನ್ನೇ ಹೆಚ್ಚಾಗಿ ಕೇಂದ್ರೀಕರಿಸಿದೆ. ವಾದ್ಯಕ್ಕೆ ದನಿಗೂಡಿಸಿದಂತೆ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ನಾದ ಪ್ರಕೃತಿ ಪ್ರಿಯರನ್ನೂ ಸೆಳೆಯುತ್ತದೆ.

    RRR NEW SONG (1)

    ತೆಲುಗಿನಲ್ಲಿ `ಕೋಮ್ಮಾ ಉಯ್ಯಾಲಾ ಕೋನಾ ಜಂಪಾಲ, ಅಮ್ಮಾ ಉಳ್ಳೋ ನೇನು ರೋಜು ವೋಗಾಲ ರೋಜು ವೋಗಾಲ’, ಕನ್ನಡದಲ್ಲಿ `ಕೊಂಬೆ ಉಯ್ಯಾಲೆ, ಕಾಡೆ ಹೊಂಬಾಳೆ, ಅಮ್ಮನ ಮಡಿಲೆನಗೆ ಲಾಲಿ ಸುವ್ವಾಲಿ’ ಹಾಗೂ ಹಿಂದಿ ಭಾಷೆಯಲ್ಲಿ `ಅಂಬರ್‌ಸೆ ತೋಡ, ಸೂರಜ್‌ಕೋ ಪ್ಯಾರಾ’ ಶೀರ್ಷಿಕೆಯೊಂದಿಗೆ ಮೂಡಿ ಬಂದಿರುವ ಈ ಗೀತೆ ಲಕ್ಷಾಂತರ ಅಭಿಮಾನಿಗಳಿಂದ ಬೇಶ್ ಎನಿಸಿಕೊಂಡಿದೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಕೊಮ್ಮ ಉಯ್ಯಲ ಹಾಡನ್ನು ಬಳ್ಳಾರಿಯ ಪ್ರಕೃತಿ ರೆಡ್ಡಿ ಹಾಡಿದ್ದಾಳೆ. 2010 ಜುಲೈ 21ರಂದು ಬಳ್ಳಾರಿಯಲ್ಲಿ ಜನಿಸಿದ ಈಕೆ ತೆಲುಗಿನ ಸರಿಗಮಪ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದಳು. ಪ್ರಸ್ತುತ ಈಕೆ ಪೋಷಕರ ಜೊತೆ ಮುಂಬೈನಲ್ಲಿ ನೆಲೆಸಿದ್ದಾಳೆ.

  • ಕೆಜಿಎಫ್ ನಗರದಲ್ಲೇ ಸಿನಿಮಾ ರಿಲೀಸ್ ಇಲ್ಲ – ಚಿತ್ರಮಂದಿರಗಳ ಮೇಲೆ ಅಭಿಮಾನಿಗಳ ಕೆಂಗಣ್ಣು

    ಕೆಜಿಎಫ್ ನಗರದಲ್ಲೇ ಸಿನಿಮಾ ರಿಲೀಸ್ ಇಲ್ಲ – ಚಿತ್ರಮಂದಿರಗಳ ಮೇಲೆ ಅಭಿಮಾನಿಗಳ ಕೆಂಗಣ್ಣು

    ಕೋಲಾರ: ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಕೆಜಿಎಫ್-2 ಸಿನಿಮಾ ಗುರುವಾರ ಎಲ್ಲೆಡೆ ತೆರೆ ಕಾಣಲಿದೆ. ಗುರುವಾರ ಬೆಳಗ್ಗೆಯಿಂದಲೆ ಬೆಳ್ಳಿ ತೆರೆಗೆ ಕೆಜಿಎಫ್ ಅಪ್ಪಳಿಸಲು ತಯಾರಾಗಿದೆ. ಆದರೆ ಕೆಜಿಎಫ್ ಹೆಸರಿನ, ಕೆಜಿಎಫ್ ಹಿನ್ನೆಲೆ ಇರುವ ಸಿನಿಮಾ ಕೆಜಿಎಫ್ ನಗರದಲ್ಲೇ ತೆರೆ ಕಾಣುತ್ತಿಲ್ಲ ಎನ್ನುವ ಬೇಸರ ಅಭಿಮಾನಿಗಳನ್ನು ಕಾಡತೊಡಗಿದೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕೆಜಿಎಫ್ 2 ರಿಲೀಸ್ ಇಲ್ಲ: ಅಭಿಮಾನಿಗಳ ಪ್ರತಿಭಟನೆ, ಸಿ.ಟಿ ರವಿ ಭರವಸೆ

    ಕೆಜಿಎಫ್ ನಗರದಲ್ಲಿ ಮೀನಾಕ್ಷಿ(ಒಲಂಪಿಯಾ) ಹಾಗೂ ಲಕ್ಷ್ಮೀ ಹೆಸರಿನ 2 ಸಿನಿಮಾ ಮಂದಿರಗಳಿವೆ. ಈ ಎರಡೂ ಸಿನಿಮಾ ಮಂದಿರಗಳಲ್ಲಿ ಕನ್ನಡ ಸಿನಿಮಾ ಬದಲಾಗಿ ತಮಿಳು ಸಿನಿಮಾಗಳನ್ನು ಹಾಕಲಾಗಿದೆ. ತಮಿಳು ನಟ ವಿಜಯ್ ನಟಿಸಿರುವ ಬೀಸ್ಟ್ ಸಿನಿಮಾವನ್ನು ಸದ್ಯ ಕೆಜಿಎಫ್ ನಗರದ ಸಿನಿಮಾ ಮಂದಿರಗಳಲ್ಲಿ ಹಾಕಲಾಗಿದೆ. ಈ ಮೂಲಕ ಕನ್ನಡ ಚಿತ್ರ ಕೆಜಿಎಫ್ ಅನ್ನು ಕಡೆಗಾಣಿಸಲಾಗಿದೆ ಎಂದು ಅಭಿಮಾನಿಗಳು ದೂರಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ ಕೆಜಿಎಫ್ 2 ‘ಸುಲ್ತಾನ್’ ಸಾಂಗ್

    ಇದೀಗ ಕರ್ನಾಟಕದಲ್ಲೇ ಕನ್ನಡ ಸಿನಿಮಾಗಿಂತ ತಮಿಳು ಸಿನಿಮಾಗಳು ಹೆಚ್ಚಾಯ್ತಾ ಎನ್ನುವ ಹಲವು ಅನುಮಾನ, ಗೊಂದಲಗಳು ಅಭಿಮಾನಿಗಳನ್ನು ಕಾಡತೊಡಗಿದೆ.

  • ಚಿತ್ರಮಂದಿರಕ್ಕೆ ಬೆಂಕಿ – ಪೀಠೋಪಕರಣಗಳು ಸುಟ್ಟು ಕರಕಲು

    ಹೈದರಾಬಾದ್: ನಗರದ ಕುಕಟ್‌ಪಲ್ಲಿ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ಶಿವ ಪಾರ್ವತಿ ಥಿಯೇಟರ್‌ನಲ್ಲಿ ಭಾನುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.

    ಅಗ್ನಿ ಅವಘಡದಿಂದಾಗಿ ಚಿತ್ರಮಂದಿರದಲ್ಲಿದ್ದ ಪೀಠೋಪಕರಣಗಳು ಸುಟ್ಟು ಬೂದಿಯಾಗಿದೆ ಹಾಗೂ ಥಿಯೇಟರ್‌ನ ಮೇಲ್ಛಾವಣಿ ಕುಸಿದಿದೆ. ಅದೃಷ್ಟವಶಾತ್ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಇದನ್ನೂ ಓದಿ: ನಿಲ್ದಾಣದಲ್ಲಿ ಎಮರ್ಜೆನ್ಸಿ ಬ್ರೇಕ್ ಹಾಕಿದ ಲೊಕೊ ಪೈಲಟ್- ಕೆಲವೇ ಸೆಕೆಂಡ್‍ಗಳಲ್ಲಿ ವ್ಯಕ್ತಿ ಬಚಾವ್

    ಚಿತ್ರಮಂದಿರದೊಳಗೆ ಬೆಂಕಿ ಕಾಣಿಸಿಕೊಂಡಾಗ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ತಕ್ಷಣ ಅಲ್ಲಿಗೆ ಧಾವಿಸಿದ ಮೂರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕೆಲಸ ಮಾಡಿದೆ.

    ಅಗ್ನಿಶಾಮಕದಳ ಚಿತ್ರಮಂದಿರಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು 3 ಗಂಟೆಗಳ ಕಾಲ ತೆಗೆದುಕೊಂಡಿದೆ. ಬೆಂಕಿ ಅವಘಡಕ್ಕೆ ಮುಖ್ಯ ಕಾರಣ ಏನು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ 6 ಬೈಕ್‌, 9 ಮಂದಿಗೆ ಗುದ್ದಿದ ಕಾರು ಚಾಲಕ

  • ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಹೈದರಾಬಾದ್: ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳನ್ನು ಬಹಿಷ್ಕಾರ ಹಾಕಲು ತೆಲುಗು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ.

    ತೆಲುಗಿನಲ್ಲಿ ತಮ್ಮ ಆ್ಯಕ್ಟಿಂಗ್ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಎಂದರೆ ನಾನಿ. ಸೈಲೆಂಟ್ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ನಾನಿಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಸಿನಿಮಾ ಈಗ. ಇದಾದ ನಂತರ ನಾನಿ ಸಿನಿಮಾಗಳೆಲ್ಲಾವೂ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡತೊಡಗಿತು. ಸದ್ಯ ಟಾಲಿವುಡ್‍ನ ಹಲವು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಾನಿ ಸಿನಿಮಾವನ್ನು ಇನ್ನು ಮುಂದೆ ಥಿಯೇಟರ್‍ನಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಚಿತ್ರಮಂದಿರದ ಮಾಲೀಕರು ಪಟ್ಟು ಹಿಡಿದು ಕುಳಿತಿದ್ದಾರೆ.

    ಹೌದು, ಕೆಲವು ತಿಂಗಳ ಹಿಂದೆ ನಾನಿ ಅಭಿನಯದ ‘ವಿ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ನಾನಿಯ ಟಕ್ ಜಗದೀಶ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಆಕ್ರೋಶಗೊಂಡ ಚಿತ್ರಮಂದಿರ ಮಾಲೀಕರು ಇನ್ನು ಮುಂದೆ ನಾನಿ ಸಿನಿಮಾಗಳನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

    ಅಕ್ಟೋಬರ್ 10ರವರೆಗೂ ಕಾದು ನೋಡಿ ನಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿಲ್ಲ ಎಂದರೆ ಓಟಿಟಿಯಲ್ಲಿ ನಿಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳಿ ಯಾವುದೇ ತೊಂದರೆ ಇಲ್ಲ ಎಂದು ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಿದ್ದೇವು. ಅಲ್ಲದೇ ದಶಕಗಳ ಕಾಲ ನಾವು ನಿರ್ಮಾಪಕರುಗಳಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ. ಹೀಗಿದ್ದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ ಎಂದು ಚಿತ್ರ ಪ್ರದರ್ಶಕರ ಪ್ರಮುಖರೊಬ್ಬರು ಆರೋಪಿಸಿದ್ದಾರೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ನಾನಿ ಕೂಡ ವಿ ಸಿನಿಮಾವನ್ನು ನಾನು ಓಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದ್ದೆ ಎಂದಿದ್ದರು. ಆದರೆ ಇದೀಗ ನಾನಿ ಅಭಿನಯದ ಹೊಸ ಸಿನಿಮಾ ಮತ್ತೆ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಈ ವಿಚಾರವಾಗಿ ಮಾತನಾಡಿದ ಚಿತ್ರ ಮಂದಿರ ಮಾಲೀಕರ ಸಂಘದ ಪ್ರಮುಖ ಮುಖಂಡ ಶ್ರೀಹರಿ, ನಾನಿ ಹೆದರು ಪುಕ್ಕಲ. ಮಾತಿನ ಮೇಲೆ ನಿಗಾ ಇಲ್ಲದ ವ್ಯಕ್ತಿ. ಈ ಮುನ್ನ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಿಗರೆ ಕೊಡುತ್ತೇನೆ ಎಂದವರು ಇದೀಗ ಓಟಿಟಿಗೆ ಕೊಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್

  • ಗಡಿ ಜಿಲ್ಲೆಯಲ್ಲಿ ರಾಬರ್ಟ್ ಹವಾ – ಚಿತ್ರಮಂದಿರ ಪ್ರವೇಶ ವೇಳೆ  ನೂಕುನುಗ್ಗಲು

    ಗಡಿ ಜಿಲ್ಲೆಯಲ್ಲಿ ರಾಬರ್ಟ್ ಹವಾ – ಚಿತ್ರಮಂದಿರ ಪ್ರವೇಶ ವೇಳೆ ನೂಕುನುಗ್ಗಲು

    – ಅಭಿಮಾನಿಗಳ ನುಕುನೂಗ್ಗಲಿಗೆ ಮುಖ್ಯ ಡೋರ್ ಗ್ಲಾಸ್ ಪೀಸ್ ಪೀಸ್

    ಯಾದಗಿರಿ: ರಾಬರ್ಟ್ ಹವಾ ಫುಲ್ ಜೋರಾಗಿದೆ. ಬಾಕ್ಸ್ ಅಫೀಸ್ ಸುಲ್ತಾನ್ ದರ್ಶನ್ ಅವರ ಸಿನಿಮಾವನ್ನು ನೋಡಲು ಚಿತ್ರಮಂದಿರದತ್ತ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಶಹಪುರದ ಜಯಶ್ರೀ ಟಾಕೀಸ್‍ನಲ್ಲಿ ಬೆಳಗ್ಗೆ 7.30 ರಿಂದ ರಾಬರ್ಟ್ ಚಿತ್ರ ಪ್ರಸಾರಗೊಳುತ್ತಿದೆ.

    ಚಿತ್ರ ಮಂದಿರ ಮತ್ತು ಆವರಣದಲ್ಲಿ ಡಿ ಬಾಸ್ ಫ್ಯಾನ್ಸ್‍ಗಳ ಆರ್ಭಟ ಜೋರಾಗಿದೆ. ಡಿ ಬಾಸ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

    ಫಸ್ಟ್ ಶೋ ವೇಳೆ ಅಭಿಮಾನಿಗಳು ಚಿತ್ರಮಂದಿರ ಪ್ರವೇಶಿಸುವೇಳ ನುಕುನೂಗ್ಗಲು ಉಂಟಾಗಿ ಚಿತ್ರಮಂದಿರದ ಮುಂದಿನ ಬಾಗಿಲಿನ ಗ್ಲಾಸ್ ಒಡೆದು ಹೋಗಿದೆ. ಬಾಗಿಲಲ್ಲಿ ಗ್ಲಾಸ್ ಪೀಸ್‍ಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದನ್ನು ಲೆಕ್ಕಿಸಿದೇ ಅಭಿಮಾನಿಗಳು ಸಿನಿಮಾ ನೋಡಲು ಎಂಟ್ರಿಕೊಟ್ಟಿದ್ದಾರೆ.

  • ಹುಬ್ಬಳ್ಳಿಯಲ್ಲಿ ಪೊಗರು ಚಿತ್ರಕ್ಕೆ ಭರ್ಜರಿ ಓಪನಿಂಗ್ – 4 ಚಿತ್ರ ಮಂದಿರದಲ್ಲಿ ಹೌಸ್ ಫುಲ್

    ಹುಬ್ಬಳ್ಳಿಯಲ್ಲಿ ಪೊಗರು ಚಿತ್ರಕ್ಕೆ ಭರ್ಜರಿ ಓಪನಿಂಗ್ – 4 ಚಿತ್ರ ಮಂದಿರದಲ್ಲಿ ಹೌಸ್ ಫುಲ್

    ಹುಬ್ಬಳ್ಳಿ: ಬಹುನಿರೀಕ್ಷಿತ ಪೊಗರು ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಹುಬ್ಬಳ್ಳಿಯ ನಾಲ್ಕು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಹೌಸ್ ಫುಲ್ ಆಗಿದೆ. ಈಗಾಗಲೇ ಮೊದಲ ಪ್ರದರ್ಶನದ ಟಿಕೇಟ್ ಸೋಲ್ಡ್ ಔಟ್ ಆಗಿದ್ದು, ಪೇಕ್ಷಕರು 2 ಆಟದ ಟಿಕೆಟ್‍ಗಾಗಿ ಮುಗಿಬಿದ್ದು ಕ್ಯೂ ನಿಂತಿದ್ದಾರೆ.

    ಪೊಗರು ಚಿತ್ರ ಪ್ರದರ್ಶನ ಆರಂಭ ಕ್ಕೂ ಮುನ್ನ ಸಂಭ್ರಮಾಚರಣೆ ಪ್ರಾರಂಭವಾಗಿತ್ತು. ಹುಬ್ಬಳ್ಳಿಯ ಸುಧಾ, ಅಪ್ಸರಾ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಂಭ್ರಮದಿಂದ ಪಟಾಕಿ ಸಿಡಿಸಿ, ಸಿಹಿ ಹಚ್ಚಿ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿರುವ ಹುಬ್ಬಳ್ಳಿಯ ನಟ ಕೃಷ್ಣಾ ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಪೇಕ್ಷಕರ ಜೊತೆ ಸಂಭ್ರಮಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಈಗಾಗಲೇ ಮೊದಲ ಪ್ರದರ್ಶನದ ಟಿಕೇಟ್ ಸೋಲ್ಡ್ ಔಟ್ ಆಗಿದ್ದು. ಪೇಕ್ಷಕರು 2 ಆಟದ ಟಿಕೆಟ್‍ಗಾಗಿ ಮುಗಿಬಿದ್ದು ಕ್ಯೂ ನಿಂತಿದ್ದಾರೆ. ಮೊದಲ ಪ್ರದರ್ಶನ ಮುಂಜಾನೆ 9 ಗಂಟೆಗೆ ಆರಂಭವಾಗಿದೆ. ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರ ವೀಕ್ಷಣೆಗಾಗಿ ಪೇಕ್ಷಕರು ಹೇಗೆ ಕಾತರಾಗಿದ್ದಾರೆ. ಟಿಕೆಟ್‍ಗೆ ಕ್ಯೂ ನಿಂತಿದ್ದಾರೆ.

  • ಇಂದಿನಿಂದ ಸಿನಿಮಾ ಪ್ರದರ್ಶನ

    ಇಂದಿನಿಂದ ಸಿನಿಮಾ ಪ್ರದರ್ಶನ

    ಬೆಂಗಳೂರು: ಅನ್‍ಲಾಕ್ 5ರಲ್ಲಿ ಕೇಂದ್ರ ಸರ್ಕಾರ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಚಿತ್ರರಂಗಗಳಲ್ಲಿ ಹೊಸ ಸಂಚಲನ ಮೂಡಿಸಿತ್ತು. ಆದರೆ ನಿರ್ಮಾಪಕರು, ಪ್ರದರ್ಶಕರು, ಡಿಜಿಟಲ್ ವಿತರಕರಗಳ ನಡುವಿನ ಗೊಂದಲದಿಂದಾಗಿ ಸದ್ಯ ಹೊಸ ಸಿನಿಮಾಗಳು ತೆರೆಗೆ ಬರುವುದು ಕಷ್ಟಸಾಧ್ಯವಾಗಿದೆ. ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇನೋ ಸಿಕ್ಕಿದೆ. ಅದಕ್ಕೆ ತಕ್ಕಂತೆ ರಾಜ್ಯಾದ್ಯಂತ ಹಲವು ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳು ಸಿನಿಮಾ ಮಂದಿರಗಳನ್ನು ಸಿದ್ಧತೆ ಕೂಡ ಮಾಡಿಕೊಂಡಿವೆ. ಆದರೆ ನಿರ್ಮಾಪಕರು, ಪ್ರದರ್ಶಕರು ಹಾಗೂ ಡಿಜಿಟಲ್ ಪ್ರೊವೈಡರ್ ಗಳ ನಡುವಿನ ಗೊಂದಲಗಳಿಂದಾಗಿ ಹೊಸ ಸಿನಿಮಾಗಳು ಈ ತಿಂಗಳು ತೆರೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗಿದೆ.

    ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಸೇರಿದ್ದರು. ಡಿಜಿಟಲ್ ಸರ್ವೀಸ್ ವಿತರಕರಾದ ಕ್ಯೂಬ್ ಮತ್ತು ಯೂಎಫ್‍ಓ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದರು. ಕಳೆದ ಏಳು ತಿಂಗಳಿನಿಂದ ಸಿನಿಮಾ ರಿಲೀಸ್ ಆಗದ ಕಾರಣ ನಿರ್ಮಾಪಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಎರಡು ವರ್ಷಗಳ ಕಾಲ ವರ್ಚುವಲ್ ಪ್ರಿಂಟ್ ಶುಲ್ಕದಲ್ಲಿ ಸಂಪೂರ್ಣ ರಿಯಾಯಿತಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಇವತ್ತು ಯೂಎಫ್‍ಓ ಮತ್ತು ಕ್ಯೂಬ್ ಪ್ರಕಟಣೆ ಹೊರಡಿಸಿವೆ. ಆ ಪ್ರಕಾರ ವರ್ಚುವಲ್ ಪ್ರಿಂಟ್ ಶುಲ್ಕವನ್ನು 2020ರ ಡಿಸೆಂಬರ್ ಅಂತ್ಯದವರೆಗೆ ಶೇಕಡ 50ರಷ್ಟು ವಿನಾಯಿತಿ ನೀಡಲು ಒಪ್ಪಿಕೊಂಡಿವೆ.

    ಇತ್ತ ನಿರ್ಮಾಪಕರು 2 ವರ್ಷಗಳ ಕಾಲ ಶೇಕಡ 100ರಷ್ಟು ವಿನಾಯಿತಿ ನೀಡಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ. ಯೂಎಫ್‍ಓ, ಕ್ಯೂಬ್‍ನಂತಹ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಗಳು ಸಿನಿಮಾಗಳ ಜತೆಗೆ ಟ್ರೈಲರ್ ಗಳು, ಜಾಹೀರಾತುಗಳನ್ನೂ ಪ್ರದರ್ಶಿಸಿ ಹಣಗಳಿಸುತ್ತಾರೆ. ಆದರೆ ನಿರ್ಮಾಪಕರಿಗೆ ಅದರಲ್ಲೇನೂ ಒಂದಿಷ್ಟು ಭಾಗ ಅಂತ ಲಾಭ ನೀಡುವುದಿಲ್ಲ. ಈಗ ಕಷ್ಟದ ಸಮಯದಲ್ಲೂ ನಮಗೆ ಸ್ಪಂದಿಸದಿದ್ದರೆ ಹೇಗೆ ಅಂತ ಪಟ್ಟುಹಿಡಿದಿದ್ದಾರೆ.

    ಇದರ ನಡುವೆ, ನಿರ್ಮಾಪಕರು ಹಾಗೂ ಪ್ರದರ್ಶಕರ ನಡುವೆಯೂ ಮತ್ತೊಂದು ಬಗೆಯ ಹಗ್ಗಜಗ್ಗಾಟ ಮುಂದುವರಿದಿದೆ. ಮಲ್ಟಿಪ್ಲೆಕ್ಸ್ ಗಳಂತೆ ಶೇರಿಂಗ್ ರೀತಿ ವ್ಯವಹಾರ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ವಾರದ ಬಾಡಿಗೆ ರೂಪದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ಗಳಿಗೆ ಹಣ ನೀಡುವುದು ಕಷ್ಟ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಈ ಕುರಿತೂ ಸದ್ಯ ಸ್ಪಷ್ಟನೆ ದೊರೆತಿಲ್ಲ.

    ಈ ಎಲ್ಲ ಗೊಂದಲಗಳ ನಡುವೆಯೇ ಸಿನಿಮಾ ಪ್ರದರ್ಶನಕ್ಕೆ ಕೆಲ ಥಿಯೇಟರ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳು ರೆಡಿಯಾಗಿದ್ದು, ಹಲವು ಥಿಯೇಟರ್ ಗಳೂ ಸಿದ್ಧತೆ ಮಾಡಿಕೊಂಡಿವೆ. ಹೊಸ ಸಿನಿಮಾಗಳ ನಿರ್ಮಾಪಕರು ಸದ್ಯ ರಿಲೀಸ್‍ಗೆ ಹಿಂದೇಟು ಹಾಕುತ್ತಿರುವ ಕಾರಣ ಈಗಾಗಲೇ ರಿಲೀಸ್ ಆಗಿದ್ದ ಶಿವಾರ್ಜುನ, ಲವ್ ಮಾಕ್‍ಟೇಲ್, ದಿಯಾ, ಶಿವಾಜಿ ಸೂರತ್ಕಲ್, 5 ಅಡಿ 7 ಅಂಗುಲ, ವಜ್ರಮುಖಿ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ರೀ-ರಿಲೀಸ್ ಆಗಲಿವೆ.

  • ಚಿತ್ರಮಂದಿರ ಬದಲು ಅಮೆಜಾನ್‍ನಲ್ಲಿ ಕನ್ನಡ ಸಿನಿಮಾ ರಿಲೀಸ್ – ವಿರೋಧ ವ್ಯಕ್ತ

    ಚಿತ್ರಮಂದಿರ ಬದಲು ಅಮೆಜಾನ್‍ನಲ್ಲಿ ಕನ್ನಡ ಸಿನಿಮಾ ರಿಲೀಸ್ – ವಿರೋಧ ವ್ಯಕ್ತ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಇತ್ತ ಈ ಲಾಕ್‍ಡೌನ್ ಯಾವಾಗ ಮುಗಿಯುತ್ತದೆ ಎಂಬುದು ಸಹ ತಿಳಿಯುತ್ತಿಲ್ಲ. ಹೀಗಾಗಿ ಚಿತ್ರಮಂದಿರಗಳು ಸದ್ಯಕ್ಕೆ ತೆರೆಯುದಿಲ್ಲ ಎಂದು ಅನೇಕ ನಿರ್ಮಾಪಕರು ಮತ್ತು ನಿರ್ಮಾಣ ಸಂಸ್ಥೆಗಳು ನೇರವಾಗಿ ಅಮೆಜಾನ್ ಪ್ರೈಮ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

    ಅನೇಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರರಂಗದಲ್ಲಿ ಆರ್ಥಿಕ ಹೊರೆಯನ್ನು ತಗ್ಗಿಸಿಕೊಳ್ಳಲು ಅನೇಕ ನಿರ್ಮಾಪಕರಿಗೆ ಒಟಿಟಿ ಬಿಡುಗಡೆ ಅನಿವಾರ್ಯವಾಗಿವೆ. ಮುಂದಿನ ತಿಂಗಳಿನಿಂದ ವಿವಿಧ ಭಾಷೆಗಳ, ಪ್ರಮುಖ ನಟರು ನಟಿಸಿರುವ ಸಿನಿಮಾಗಳು ಅಮೆಜಾನ್ ಪ್ರೈಮ್‍ನಲ್ಲಿ ತೆರೆಕಾಣುತ್ತಿವೆ. ಈ ಕುರಿತು ಅಮೆಜಾನ್ ಪ್ರೈಮ್ ಹಾಗೂ ನಿರ್ಮಾಣ ಸಂಸ್ಥೆಗಳು ಅಧಿಕೃತವಾಗಿ ತಿಳಿಸಿವೆ.

    ಪಿಆರ್‌ಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳು ಒಟಿಟಿ ಪ್ಲಾಟ್ ಫಾರ್ಮ್ ನ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡುವುದಾಗಿ ಪುನೀತ್ ರಾಜ್‍ಕುಮಾರ್ ತಿಳಿಸಿದ್ದಾರೆ. ಈ ಮೂಲಕ ಕನ್ನಡ ನಿರ್ಮಾಕಪರು ಕೂಡ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿದೆ.

    ರಘು ಸಮರ್ಥ ಚಿತ್ರಕಥೆ ಬರೆದು ನಿರ್ದೇಶಿಸಿದ ‘ಲಾ’ ಸಿನಿಮಾ ಜೂನ್ 26ರಂದು ಅಮೆಜಾನ್ ಪ್ರೈಮ್ ಮೂಲಕ ಜಗತ್ತಿನಾದ್ಯಂತ ತೆರೆ ಕಾಣುತ್ತಿದೆ. ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಪನ್ನಗಾಭರಣ ನಿರ್ದೇಶನದ ‘ಫ್ರೆಂಚ್ ಬಿರಿಯಾನಿ’ ಚಿತ್ರವು ಅಮೆಜಾನ್ ಪ್ರೈಮ್‍ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ ಎಂದು ಪಿಆರ್‌ಕೆ ಪ್ರೊಡಕ್ಷನ್ಸ್ ಅಧಿಕೃತವಾಗಿ ಮಾಹಿತಿ ತಿಳಿಸಿದೆ.

    https://www.facebook.com/139294346715675/posts/579010662744039/

    ಅಮೆಜಾನ್ ಫ್ರೈಂನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಪಿವಿಆರ್ ಮತ್ತು ಐನಾಕ್ಸ್ ಮಲ್ಟಿಪ್ಲೆಕ್ಸ್ ಪ್ರದರ್ಶಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆಯೊಂದು ತನ್ನ ಸಿನಿಮಾಗಳನ್ನು ಒಟಿಟಿ ಪ್ಲಾಟ್‍ಫ್ಲಾಮಂ ಮೂಲಕ ರಿಲೀಸ್ ಮಾಡಲು ಮುಂದಾಗಿದೆ. ಈ ಮೂಲಕ ಥಿಯೇಟರ್‌ನಲ್ಲಿ ಸಿನಿಮಾ ತೆರೆಕಾಣುವ ಸಂಪ್ರದಾಯವನ್ನು ಬ್ರೇಕ್ ಮಾಡಿದೆ. ಸಂಸ್ಥೆಯ ನಿರ್ಧಾರದಿಂದ ನಮಗೆ ಬೇಸರವಾಗಿದೆ ಎಂದು ಐನಾಕ್ಸ್ ಪತ್ರದ ಮೂಲಕ ತಿಳಿಸಿದೆ.

    https://www.facebook.com/prkproductionsofficial/photos/a.170301270281649/578996506078788/?type=3&theater

    ಈ ಹಿಂದೆ ಅಂದರೆ 2013ರಲ್ಲಿ ನಟ ಕಮಲ್‍ಹಾಸನ್ ತಮ್ಮ ಸಂಸ್ಥೆಯ ‘ವಿಶ್ವರೂಪಂ’ ಸಿನಿಮಾವನ್ನು ಡೈರೆಕ್ಟ್ ಟು ಹೋಮ್ (ಡಿಟಿಎಚ್) ಮೂಲಕ ವಿತರಣೆ ಮಾಡಲು ಮುಂದಾಗಿದ್ದರು. ಈ ವೇಳೆ ಚಿತ್ರ ಪ್ರದರ್ಶಕರು ಹಾಗೂ ಚಿತ್ರೋದ್ಯಮ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಸಂಪ್ರದಾಯವಾಗಿ ಸಿನಿಮಾವನ್ನು ಬಿಡುಗಡೆ ಮಾಡಬೇಕಾಯಿತು.

    ಕಳೆದ ತಿಂಗಳು ತಮಿಳು ನಟ ಸೂರ್ಯ ತಮ್ಮ ಸಂಸ್ಥೆಯಲ್ಲಿ ನಿರ್ಮಾಣವಾಗಿದ್ದ ‘ಪೂಣ್‍ಮಗಳ್ ವಂದಾಳ್’ ಸಿನಿಮಾವನ್ನು ಒಟಿಟಿ ಪ್ಲಾಟ್‍ಫ್ಲಾರ್ಮ್ ನಲ್ಲಿ ರಿಲೀಸ್ ಮಾಡಲು ಮುಂದಾಗಿದ್ದರು. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದರೆ ಬಹಿಷ್ಕರಿಸುವುದಾಗಿ ಘೋಷಿಸಿದ್ದರು. ನಂತರ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿತ್ತು.

    ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮನ್ ಖುರಾನಾ ಅಭಿನಯದ ‘ಗುಲಾಬೋ ಸಿತಾಬೋ’ ಸಿನಿಮಾವವನ್ನು ಜೂನ್ 12ಕ್ಕೆ ಜಗತ್ತಿನಾದ್ಯಂತ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

  • ಕೊರೊನಾ ಭೀತಿ – ಕೇರಳದಂತೆ ಕರ್ನಾಟಕದಲ್ಲೂ ಥಿಯೇಟರ್ ಬಂದ್ ಸಾಧ್ಯತೆ

    ಕೊರೊನಾ ಭೀತಿ – ಕೇರಳದಂತೆ ಕರ್ನಾಟಕದಲ್ಲೂ ಥಿಯೇಟರ್ ಬಂದ್ ಸಾಧ್ಯತೆ

    ಬೆಂಗಳೂರು: ಕರ್ನಾಟಕಕ್ಕೆ ಕಾಲಿಟ್ಟಿರುವ ಮಹಾಮಾರಿ ಕೊರೊನಾ ಭಾರೀ ಆತಂಕ ಸೃಷ್ಟಿಸಿದ್ದು, ಕೇರಳದಂತೆ ಕರ್ನಾಟಕದಲ್ಲಿ ಕೂಡ ಚಿತ್ರಮಂದಿರಗಳನ್ನು ಬಂದ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

    ಇನ್ನೊಂದು ವಾರ ಸಿನಿಮಾ ಪ್ರದರ್ಶನ ಬಂದ್ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ಲಭ್ಯವಾಗಿದೆ. ಮಾರ್ಚ್ 16ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡಲಾಗುವುದು ಎನ್ನಲಾಗಿದೆ. ಇತ್ತ ಕೇರಳದಲ್ಲಿ ಇಂದಿನಿಂದ ಮಾರ್ಚ್ 31ರವರೆಗೆ ಚಿತ್ರ ಮಂದಿರಗಳನ್ನು ಮುಚ್ಚಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇದೇ ರೀತಿ ಕರ್ನಾಟಕದಲ್ಲೂ ಚಿತ್ರಮಂದಿರಗಳನ್ನು ಬಂದ್ ಆಗುವ ಸಾಧ್ಯತೆ ಹೆಚ್ಚಾಗಿದೆ.

    ಇತ್ತ ಕೊರೊನಾ ವೈರಸ್ ಆತಂಕ ಹೆಚ್ಚಾದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಟ್ವೀಟ್ ಮಾಡಿದ್ದ ಶಿಕ್ಷಣ ಸಚಿವ ಸುರೇಶ್ ಕುಮಾರ್, ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದಂತೆ ಬಿಬಿಎಂಪಿ, ಬೆಂಗಳೂರುನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮುಂದಿನ ಆದೇಶದವರೆಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

    ದೇಶಾದ್ಯಂತ ಕೊರೊನಾ ತಾಂಡವ ಜೋರಾಗುತ್ತಿದ್ದು, ಕೇರಳದಲ್ಲಿ ಒಟ್ಟು 12 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಕೇರಳ ಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಸೇರಿದಂತೆ 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದೆ. ಇದಷ್ಟೇ ಅಲ್ಲದೇ ಮಾರ್ಚ್ 31ರವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಚಿತ್ರ ಸಂಘಟನೆಗಳು ನಿರ್ಧಾರ ತೆಗೆದುಕೊಂಡಿವೆ.

    ಕೇರಳದಲ್ಲಿ ಸ್ವಲ್ಪ ವೇಗವಾಗಿಯೇ ಕೊರೊನಾ ಹರಡುತ್ತಿದ್ದು, ಮೊದಲು ವೈರಸ್ ಕಾಣಿಸಿಕೊಂಡಿದ್ದ ಮೂವರು ಗುಣಮುಖರಾಗಿ ಡಿಸ್ಚಾರ್ಜ್ ಆದ ಬಳಿಕ ಇದೀಗ ಮತ್ತೆ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೇರಳ ತಲೆಕೆಡಿಸಿಕೊಂಡಿದ್ದು, ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಸೇರಿದಂತೆ 7ನೇ ತರಗತಿಯವರೆಗೆ ಎಲ್ಲ ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಆದೇಶಿಸಿದೆ.

    ಇಂದು ಹೊಸ ಆರು ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸಭೆ ನಡೆಸಿದ ಸಿಎಂ ಪಿಣರಾಯಿ ವಿಜಯನ್, ಏಳನೇ ತರಗತಿವರೆಗಿನ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ ನೀಡಿದ್ದಾರೆ. ಅಲ್ಲದೇ ಖಾಸಗಿಯಾಗಿ ನಡೆಸುವ ಟ್ಯೂಷನ್, ರಾಜಾ ದಿನದ ವಿಶೇಷ ತರಗತಿ, ಮದರಸಾಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸೂಚನೆ ನೀಡಿದ್ದರು.

  • ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಧಾರವಾಡ: ಅನಧಿಕೃತ ಹೂಡಿಕೆಗಳ ಕುರಿತು ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಚಲನಚಿತ್ರ ಮಂದಿರಗಳಲ್ಲಿ ವಿವಿಧ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸುತ್ತೋಲೆ ಹೊರಡಿಸಿದ್ದಾರೆ.

    ವಿವಿಧ ಅನಧಿಕೃತ ಕಂಪನಿಗಳ ಆಮಿಷಕ್ಕೆ ಮರುಳಾಗಿ ಹಣ ಕಳೆದುಕೊಳ್ಳುತ್ತಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ 15 ಸೆಕೆಂಡುಗಳ ಸಾರ್ವಜನಿಕ ಹಿತಾಸಕ್ತಿ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಉಚಿತವಾಗಿ ಧಾರವಾಡ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳ ಮಾಲೀಕರು ಪ್ರತಿ ಚಲನಚಿತ್ರ ಪ್ರದರ್ಶಿಸುವ ಆರಂಭದಲ್ಲಿ ಹಾಗೂ ವಿರಾಮ ಸಂದರ್ಭದಲ್ಲಿ ಪ್ರದರ್ಶಿಸಲು ಸುತ್ತೋಲೆ ಮೂಲಕ ನಿರ್ದೇಶಿಸಲಾಗಿದೆ.

    ಕರ್ನಾಟಕ ಚಲನಚಿತ್ರ ನಿಯಂತ್ರಣ ಕಾಯ್ದೆ 1964ರ ನಿಯಮ 12ರ ಅನ್ವಯ ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.