Tag: movie

  • ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

    ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

    RRR ಚಿತ್ರದ ಬಳಿಕ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿಯ (SS Rajamouli) ಮಹತ್ವದ ಪ್ರಾಜೆಕ್ಟ್ ಎಸ್‌ಎಸ್‌ಎಂಬಿ29. ಸುಮಾರು ಒಂದು ಸಾವಿರ ಕೋಟಿಯಲ್ಲಿ ತಯಾರಾಗ್ತಿರುವ ಚಿತ್ರ ಎನ್ನಲಾಗುತ್ತಿದ್ದು ಈ ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗ್ಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಕೀನ್ಯಾದಲ್ಲಿ ನಡೆದ ರಹಸ್ಯದ ಚಿತ್ರೀಕರಣವನ್ನ ಅಲ್ಲಿನ ಸರ್ಕಾರವೇ ಬಹಿರಂಗಪಡಿಸಿದೆ. ಕೀನ್ಯಾದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮುಸಾಲಿಯ ಮುದವಾಡಿ ರಾಜಮೌಳಿಯವರೊಂದಿಗೆ ಸಮಯ ಕಳೆದಿರುವ ಫೋಟೋ ಪೋಸ್ಟ್ ಮಾಡಿ ಸಿನಿಮಾದ ಕುರಿತು, ರಾಜಮೌಳಿಯವರ ಸಾಧನೆ ಕುರಿತು ಮಹತ್ವದ ವಿಚಾರಗಳನ್ನ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

    ರಾಜಮೌಳಿಯವರ ಕೀನ್ಯಾ ಭೇಟಿಯನ್ನು ಸಚಿವ ಮುಸಾಲಿಯ ಮುದವಾಡಿ ಸುದೀರ್ಘ ಬರಹಗಳಿಂದ ವಿವರಿಸಿದ್ದಾರೆ. ಅವರ ಪ್ರಕಾರ ರಾಜಮೌಳಿ ಇಡೀ ಆಫ್ರಿಕಾ ಸುತ್ತಾಡಿ ಕೊನೆಗೆ ಚಿತ್ರೀಕರಣಕ್ಕಾಗಿ ಕೀನ್ಯಾವನ್ನ ಆರಿಸಿಕೊಂಡಿದೆ. ವಿಶ್ವದ 129 ದೇಶಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು ಶತಕೋಟಿಗೂ ಹೆಚ್ಚು ವೀಕ್ಷಕರನ್ನು ಈ ಚಿತ್ರ ತಲುಪುತ್ತದೆ ಎಂದಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಕೀನ್ಯಾ ದೇಶವು ಭಾರತದ ಶ್ರೇಷ್ಟ ನಿರ್ದೇಶಕರಲ್ಲಿ ಒಬ್ಬರಾದ ರಾಜಮೌಳಿಯವರಿಗೆ ವೇದಿಕೆಯಾಯಿತು ಎಂದಿದ್ದಾರೆ. ವಿಶ್ವದ ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿಯುವ ದಾರ್ಶನಿಕ ನಿರ್ದೇಶಕ ಎಸ್‌ಎಸ್ ರಾಜಮೌಳಿ ಎಂದು ಬಣ್ಣಿಸಿದ್ದಾರೆ.

    ರಾಜಮೌಳಿ ಬಗ್ಗೆ ಕೀನ್ಯಾ ಸಚಿವರ ನುಡಿ
    ಎರಡು ದಶಕಗಳಿಗೂ ಹೆಚ್ಚು ಕಾಲದ ವೃತ್ತಿಜೀವನವನ್ನು ಹೊಂದಿರುವ ರಾಜಮೌಳಿ, ಪ್ರಬಲ ನಿರೂಪಣೆ, ನವೀನ ದೃಶ್ಯ, ಆಳವಾದ ಸಾಂಸ್ಕೃತಿಕ ಅನುಕರಣೆಯನ್ನು ಒಟ್ಟಿಗೆ ಹೆಣೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಪೂರ್ವ ಆಫ್ರಿಕಾದಾದ್ಯಂತ ವ್ಯಾಪಕವಾದ ಪ್ರವಾಸದ ನಂತರ ಅವರ 120 ಸಿಬ್ಬಂದಿ ಸದಸ್ಯರ ತಂಡವು ಕೀನ್ಯಾವನ್ನು ಆಯ್ಕೆ ಮಾಡಿಕೊಂಡಿತು. ಸುಮಾರು 95% ಆಫ್ರಿಕನ್ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿರುವ ಪ್ರಾಥಮಿಕ ಚಿತ್ರೀಕರಣ ತಾಣವಾಗಿ ನಮ್ಮ ದೇಶವನ್ನು ಆಯ್ಕೆ ಮಾಡಿಕೊಂಡಿತು. ಮಹೇಶ್ ಬಾಬು ಅಭಿನಯದ ಈ ಚಿತ್ರವು 120 ದೇಶಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ವೀಕ್ಷಕರನ್ನು ತಲುಪಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

  • ಜೂ.ಎನ್‌ಟಿಆರ್‌ಗಾಗಿ ಸಿದ್ಧಸೂತ್ರ ಮುರಿಯಲು ಸಜ್ಜಾದ ಪ್ರಶಾಂತ್ ನೀಲ್

    ಜೂ.ಎನ್‌ಟಿಆರ್‌ಗಾಗಿ ಸಿದ್ಧಸೂತ್ರ ಮುರಿಯಲು ಸಜ್ಜಾದ ಪ್ರಶಾಂತ್ ನೀಲ್

    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸ್ಟೈಲ್‌ ಆಫ್ ಸಿನಿಮಾ ಮೇಕಿಂಗ್ ಎಲ್ಲರಿಗೂ ತಿಳಿದಿರುವುದೇ. ಇವರ ಸಿನಿಮಾ ಗ್ಲೋಬಲ್ ಲೆವೆಲ್ ಸೌಂಡ್ ಮಾಡುವ ಚಿತ್ರವಾಗಿದ್ದರೂ ಅವರು ಭಾರತದ ಭೂಪ್ರದೇಶ ಬಿಟ್ಟು ಚಿತ್ರೀಕರಣ ಮಾಡಿದವರಲ್ಲ. ಚಿತ್ರೀಕರಣಕ್ಕಾಗಿ ಸೆಟ್ ಬಳಸುವುದರ ಜೊತೆ ತಮ್ಮ ನೆಲದ ಸೊಗಡು ತೋರಿಸಬಹುದಾದ ಅತ್ಯದ್ಭುತ ಟೆಕ್ನಿಷಿಯನ್ ನೀಲ್. ಆದರೆ ಇದೀಗ ಮೊದಲ ಬಾರಿ ತಮ್ಮ ಸಿದ್ಧಸೂತ್ರ ಮುರಿಯಲು ಸಜ್ಜಾಗಿದ್ದಾರೆ ಪ್ರಶಾಂತ್ ನೀಲ್. ದೇಶ ಬಿಟ್ಟು ವಿದೇಶದಲ್ಲಿ ಚಿತ್ರೀಕರಣ ಮಾಡಲು ತಯಾರಾಗಿದ್ದಾರಂತೆ ಕೆಜಿಎಫ್ ಸಾರಥಿ.

    ಸ್ಟಾರ್ ಕಲಾವಿದರ ಜೊತೆಯಾಗಿ ನೂರಾರು ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡಿದರೂ ಚಿತ್ರೀಕರಣಕ್ಕಾಗಿ ಗಡಿದಾಟದ ಈಗಿನ ಕಾಲದ ಡೈರೆಕ್ಟರ್ ಅಂದ್ರೆ ಅವರು ಪ್ರಶಾಂತ್ ನೀಲ್. ಇದೀಗ ಚಿತ್ರೀಕರಣವಾಗ್ತಿರೋ ಡ್ರ್ಯಾಗನ್‌ ಸಿನಿಮಾದಲ್ಲೂ ಇದೇ ಸೂತ್ರ ಅನುಸರಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೀಗ ಮುಂದಿನ ಶೆಡ್ಯೂಲ್‌ನಲ್ಲಿ ನೀಲ್ ತಂಡದ ಜೊತೆ ವಿದೇಶಕ್ಕೆ ಹೊರಟಿದ್ದಾರೆ. ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಡ್ರ್ಯಾಗನ್‌ (Dragon) ಚಿತ್ರದ ಮೂರನೇ ಶೆಡ್ಯೂಲ್ ಶೂಟಿಂಗ್ ವಿದೇಶದಲ್ಲಿ ನಡೆಯಲಿರುವುದು ವಿಶೇಷ.

    ಗೆಳೆಯ ಹಾಗೂ ಅವರ ಸಿನಿಮಾ ನಾಯಕ ಜೂ.ಎನ್‌ಟಿಆರ್ (Jr NTR) ಜೊತೆಗೂಡಿ ವಿದೇಶಕ್ಕೆ ತೆರಳಿ ಹಲವು ದಿನ ಚಿತ್ರೀಕರಣ ಮುಗಿಸಿ ವಾಪಸ್ಸಾಗಲಿದೆಯಂತೆ ಟೀಮ್. ಸ್ರ್ಕಿಪ್ಟ್‌ ಬಯಸಿದ್ದರಿಂದ ನೀಲ್ ಈ ಬಾರಿ ತಮ್ಮ ಇದುವರೆಗಿನ ಟ್ರೆಂಡ್‌ನ್ನ ಬ್ರೇಕ್ ಮಾಡಲು ಮುಂದಾಗಿದ್ದಾರಂತೆ.

  • ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

    ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

    – ಕೇರಳದ ಮೃತ ಅರ್ಜುನ್‌ನಿಂದ ಹಿಡಿದು 11 ಜನರ ಕುರಿತು ಮೂಡಿ ಬರಲಿದೆ ಸಿನಿಮಾ
    – ಸಿನಿಮಾದ ಕಥೆ ಬರೆಯುತ್ತಿರುವ ಕೇರಳದ ಶಾಸಕ ಅಶ್ರಫ್‌

    ಕಾರವಾರ: ಶಿರೂರು ಭೂಕುಸಿತ (Shirur Landslide) ದುರಂತ ಬಗ್ಗೆ ಮಾಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇರಳದ ಶಾಸಕ ಅಶ್ರಫ್‌ (A.K.M.Ashraf) ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ.

    ಕಳೆದ ವರ್ಷ ಜುಲೈನಲ್ಲಿ ಅಂಕೋಲದ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತವಾಗಿ 11 ಜನ ಮೃತಪಟ್ಟರು. ಈವರೆಗೂ ಜಗನ್ನಾಥ, ಲೋಕೇಶ್ ಶವಗಳು ದೊರೆತಿಲ್ಲ. ಕೇರಳದ ಚಾಲಕ ಅರ್ಜುನ್ ಮೃತದೇಹ ಹುಡುಕಲು ಮೂರು ತಿಂಗಳಕಾಲ ಅವಿರತ ಕಾರ್ಯಾಚರಣೆ ನಡೆದು ಕೊನೆಗೆ ಆತನ ಶವವನ್ನು ಮಾತ್ರ ಹೊರತೆಗೆಯಲಾಯಿತು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಆತನು ಬದುಕಿ ಬರಲೆಂದು ಕೇರಳದ ಜನತೆ ಪ್ರಾರ್ಥನೆ ಮಾಡಿದ್ದರು. ಇದೀಗ ಶಿರೂರು ಘಟನೆ ನಡೆದು ಒಂದು ವರ್ಷವಾದ ಬೆನ್ನಲ್ಲೇ ಈ ದುರಂತ ಘಟನೆ ಕೇರಳದ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಸಟ್ಟೇರಲು ಸಿದ್ಧವಾಗಿದೆ.

    ಶಿರೂರು ದುರಂತ ಕಥೆಯನ್ನು ಬರೆಯುತ್ತಿರುವ ಕೇರಳದ ಶಾಸಕ ಅಶ್ರಫ್, ‘ಪಬ್ಲಿಕ್ ಟಿವಿ’ ಜೊತೆ ಸಿನಿಮಾ ನಿರ್ಮಾಣದ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ

  • ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್ – ಮೋಹನ್‌ಲಾಲ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್ – ಮೋಹನ್‌ಲಾಲ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ದೃಶ್ಯಂ ಸಿರೀಸ್ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ಹವಾ ಕ್ರಿಯೇಟ್ ಮಾಡಿವೆ. ಮಲಯಾಳಂ, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಈ ಸಿರೀಸ್ ಮಾಡಿದ ಸದ್ದು ಅಷ್ಟಿಸ್ಟಲ್ಲ. ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಕಥೆ ಪ್ರೇಕ್ಷಕರಿಗೆ ಹೊಸ ಅನುಭವವನ್ನ ನೀಡಿದ್ದವು.

    ಮೋಸ್ಟ್ ಅವೈಟೆಡ್ ದೃಶ್ಯಂ-3 (Drishyam 3) ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಈ ಬಗ್ಗೆ ಈಗಾಗಲೇ ಮೋಹನ್‌ಲಾಲ್ (Mohanlal) ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದ ಕಥೆ ಈ ಬಾರಿ ಡಿಫರೆಂಟ್ ಆಗಿ ಇರಲಿದ್ದು, ಮತ್ತೊಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಇರಲಿದೆಯಂತೆ.

    ನಿರ್ದೇಶಕ ಜೀತು ಜೊಶೆಫ್ ಈ ಬಾರಿ ಜಾರ್ಜ್ ಕುಟ್ಟಿ ಪಾತ್ರವನ್ನ ಎಂಡ್ ಮಾಡ್ತಾರಾ..? ಅಥವಾ ಮತ್ತೊಂದು ಪಾರ್ಟ್‌ಗೆ ಈ ಸಿನಿಮಾದ ಎಂಡ್‌ನಲ್ಲಿ ಹಿಂಟ್ ಕೊಡುತ್ತಾರಾ ಅಂತಾ ಕಾಯ್ತಿದೆ ಅಭಿಮಾನಿ ಬಳಗ. ಅಲ್ಲದೇ ದೃಶ್ಯಂ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾಗಳಿಗಿಂತ ಅಕ್ಟೋಬರ್‌ನಲ್ಲಿ ತೆರೆಗೆ ಬರುವ ದೃಶ್ಯಂ-3 ಸಿನಿಮಾ ವಿಭಿನ್ನವಾಗಿರಲಿದೆಯಂತೆ.

    ದೃಶ್ಯಂ ಪಾರ್ಟ್-1 ಹಾಗೂ ಪಾರ್ಟ್-2 ಮಲಯಾಳಂನಲ್ಲಿ ಮುಖ್ಯಪಾತ್ರದಲ್ಲಿ ಮೋಹನ್‌ಲಾಲ್ ನಟನೆ ಮಾಡಿದ್ರೆ, ತೆಲುಗಿನಲ್ಲಿ ವೇಂಕಟೇಶ್ ದಗ್ಗುಬಾಟಿ ನಟಿಸಿದ್ದರು. ಇನ್ನು ಕನ್ನಡ ಅವತರಣಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ಮಾಡಿ ಪ್ರೇಕ್ಷಕ ವರ್ಗಕ್ಕೆ ಬರಪೂರ ಮನರಂಜನೆ ನಿಡಿದ್ದರು. ಫಸ್ಟ್ ಲುಕ್ ನೋಡಿಯೇ ಫಿದಾ ಆಗಿರುವ ಫ್ಯಾನ್ಸ್ ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

  • ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಟಾಲಿವುಡ್ ನಟ, ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಭಿನಯದ, ಮಾರುತಿ ನಿರ್ದೇಶನದ ‘ದಿ ರಾಜಾಸಾಬ್’ (The Rajasaab) ಸಿನಿಮಾ, ಈಗಾಗಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಮೇಕಿಂಗ್ ಮೂಲಕ ಗಮನ ಸೆಳೆದ ಈ ಸಿನಿಮಾದ ಮೊದಲ ಟೀಸರ್ ಇದೀಗ ಬಿಡುಗಡೆ ಆಗಿದೆ. ತೆಲುಗಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಟಿಜಿ ವಿಶ್ವ ಪ್ರಸಾದ್ ಈ ಚಿತ್ರದ ನಿರ್ಮಾಪಕರು.

    ‘ದಿ ರಾಜಾ ಸಾಬ್’ ಟೀಸರ್ ನೋಡಿದ ಅಭಿಮಾನಿಗಳು ಸದ್ಯ ಪುಳಕಿತರಾಗಿದ್ದಾರೆ. ಇದರಲ್ಲಿ ಪ್ರಭಾಸ್ ಅವರ ವಿಂಟೇಜ್ ಲುಕ್ ಖಡಕ್ ಆಗಿದೆ. ಮೂವರು ನಾಯಕಿಯರು, ಪ್ರಭಾಸ್ ಅವರ ಎಂಟ್ರಿ, ನಗಿಸುವ ಕಾಮಿಡಿ ಡೈಲಾಗ್‌ಗಳು ರೊಮ್ಯಾಂಟಿಕ್ ಟ್ರ‍್ಯಾಕ್ ಅದ್ಭುತವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ನಟ ಸಂಜಯ್ ದತ್ ಅವರ ವಿಚಿತ್ರ ಗೆಟಪ್, ರಾಜಮನೆತನದ ಸುತ್ತ ನಡೆಯುವ ಕಥೆ ಮತ್ತು ಹಾರರ್ ಅಂಶಗಳು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

    ಟೀಸರ್‌ನಲ್ಲಿ, ಪ್ರಭಾಸ್ ಎರಡು ಲುಕ್‌ನಲ್ಲಿ ಕಂಡಿದ್ದಾರೆ. ಒಂದು ಪಕ್ಕಾ ಲವರ್‌ಬಾಯ್ ಲುಕ್ ಮತ್ತು ಮಾಸ್ ಆಕ್ಷನ್ ಅವತಾರದಲ್ಲಿ ಎದುರಾದರೇ, ಮತ್ತೊಂದರಲ್ಲಿ ಗಾಢವಾದ, ಅತೀಂದ್ರಿಯ ಶಕ್ತಿಯನ್ನು ಆವಾಹಿಸಿಕೊಂಡಂತೆ ಕಂಡಿದ್ದಾರೆ. ಟೀಸರ್‌ನಲ್ಲಿ ಮಸ್ತ್ ನೃತ್ಯ, ಪಂಚ್ ಡೈಲಾಗ್‌ಗಳಿಂದಲೂ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನ್ ಮತ್ತು ರಿದ್ಧಿ ಕುಮಾರ್ ಈ ಚಿತ್ರದ ತ್ರಿವಳಿ ನಾಯಕಿಯರು. ಪ್ರತಿ ಪಾತ್ರವೂ ಶಾಪಗ್ರಸ್ತ ಮಹಲಿನ ಕಥೆಗೆ ನಿಗೂಢತೆಯ ಪದರಗಳನ್ನು ಸೇರಿಸುತ್ತಾ ಹೋಗುತ್ತಾರೆ.

    ‘ದಿ ರಾಜಾಸಾಬ್’ ಚಿತ್ರದ ಮೂಲಕ ನಾವು ಏನನ್ನಾದರೂ ದೊಡ್ಡದನ್ನೇ ನಿರ್ಮಿಸಲು ಬಯಸಿದ್ದೇವೆ. ಈವರೆಗೂ ನೋಡದ ಸೆಟ್‌ಗಳು ಈ ಸಿನಿಮಾದಲ್ಲಿರಲಿದೆ. ನಮ್ಮ ಈ ಸಿನಿಮಾ ಇದೇ ವರ್ಷದ ಡಿಸೆಂಬರ್ 5ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್.

    ರಾಜಾಸಾಬ್ ಒಂದು ಪ್ರಕಾರದ ಪ್ರಯಾಣ – ಇದು ಭಯಾನಕ ಮತ್ತು ಫ್ಯಾಂಟಸಿ, ನೈಜ ಮತ್ತು ಅತಿವಾಸ್ತವಿಕತೆಯ ನಡುವೆ ಹರಿಯುತ್ತದೆ. ಥಮನ್ ಅವರ ರೋಮಾಂಚಕಾರಿ ಸಂಗೀತ ಇಡೀ ಸಿನಿಮಾದ ಹೈಲೈಟ್ ಎಂದಿದ್ದಾರೆ ನಿರ್ದೇಶಕ ಮಾರುತಿ.

  • ಅನ್ಯಭಾಷೆ ಸಿನಿಮಾ ಪ್ರದರ್ಶನ ಬಂದ್ ಮಾಡ್ತೀವಿ : ವಾಟಾಳ್ ನಾಗರಾಜ್

    ಅನ್ಯಭಾಷೆ ಸಿನಿಮಾ ಪ್ರದರ್ಶನ ಬಂದ್ ಮಾಡ್ತೀವಿ : ವಾಟಾಳ್ ನಾಗರಾಜ್

    ನ್ನಡದ ನಾಮಫಲಕ ಹಾಗೂ ಕನ್ನಡ ಹೋರಾಟಗಾರರನ್ನು ಬಂಧಿಸಿರುವ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj), ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಹೋರಾಟ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಬಂಧಿಸಿರುವುದನ್ನು ವಾಟಾಳ್ ಖಂಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ‘ಕನ್ನಡ ನಾಮಫಲಕ ಕಡ್ಡಾಯ ಮಾಡಬೇಕು. ಕನ್ನಡ ಹೋರಾಟಗಾರರನ್ನು ಬಂಧನದಿಂದ ಬಿಡುಗಡೆ ಮಾಡ್ಬೇಕು. ನಮ್ಮ ಬೇಡಿಕೆಯ ಮನವಿಯನ್ನು ಸಿಎಂಗೆ ನೀಡ್ತೀವಿ. ಸಿಎಂ ನಮ್ಮ‌ಬೇಡಿಕೆಗಳನ್ನ ಈಡೇರಿಸದಿದ್ದರೆ ಬಂದ್ ಮಾಡ್ತೀವಿ. ಫೆಬ್ರವರಿ ಎರಡನೇ ವಾರ ಬಂದ್ ಮಾಡ್ತೀವಿ. ಅನ್ಯ ಭಾಷೆ ಸಿನಿಮಾ ಪ್ರದರ್ಶನ ಬಂದ್ ಮಾಡ್ತೀವಿ’ ಎಂದಿದ್ದಾರೆ.

     

    ನಾರಾಯಣ ಗೌಡ ಅವರ ಬಂಧನವನ್ನು ವಿರೋಧಿಸಿ ಇವತ್ತು ಕೂಡ ಹಲವಾರು ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದಿವೆ. ಮೈಸೂರು ವೃತ್ತದ ಬಳಿ ಹೋರಾಟಕ್ಕೆ ಸಿದ್ಧರಾಗಿದ್ದ ವಾಟಾಳ್ ನಾಗರಾಜ್ ಮತ್ತು ಇತರರಿಗೆ ಪೊಲೀಸರು ನೋಟಿಸ್ ಕೊಡುವುದಕ್ಕೆ ಮುಂದಾಗಿದ್ದಾರೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸುವಂತೆ ಮನವೊಲಿಸುವ ಕೆಲಸವೂ ನಡೆದಿದೆ.

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪತ್ರಕರ್ತ ಬಾನಾಸುಗೆ ತವರಿನ ಗೌರವ

    ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಪತ್ರಕರ್ತ ಬಾನಾಸುಗೆ ತವರಿನ ಗೌರವ

    ಕೇಂದ್ರ ಸರಕಾರ ನೀಡುವ 69ನೇ ರಾಷ್ಟ್ರೀಯ ಚಲನಚಿತ್ರ  (National Award) ಪ್ರಶಸ್ತಿ ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ  (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯ ಪಡೆದ ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು (ಬಾನಾಸು) (Subramanya) ಅವರಿಗೆ ತವರಿನ ಗೌರವ ದೊರಕಿದೆ. ರಂಗ ಚಿನ್ನಾರಿ ಕಾಸರಗೋಡು ಮತ್ತು ಇತರ ಸಂಘಟನೆಗಳು ತನ್ನೂರಿನ ಸಾಧಕರಿಗೆ ಗೌರವಿಸಿವೆ.

    ಕಾಸರಗೋಡು (Kasaragod) ಪದ್ಮಗಿರಿ ಕಲಾಕುಟೀರ ಕರಂದಕ್ಕಾಡುವಿನಲ್ಲಿ ನಡೆದ ಹುಟ್ಟುರ ಗೌರವ ಕಾರ್ಯಕ್ರಮದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮಿ, ಕಾಸರಗೋಡು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಮಾಜಿ ಸಚಿವೆ, ನಟಿ ಉಮಾಶ್ರೀ, ನಿರ್ದೇಶಕ ಶಿವಧ್ವಜ್ ಮತ್ತು ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಾನಾಸು ಅವರಿಗೆ ಸನ್ಮಾನಿಸಿದ್ದಾರೆ.

    ಕರ್ನಾಟಕ ಸಮಿತಿ ಕಾಸರಗೋಡು, ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟ, ಕೂಡ್ಲು ಯುವಜನ ಸಂಘ, ಕನ್ನಡ ಭವನ ಮತ್ತು ಗ್ರಂಥಾಲಯ, ಯುವನಿಕಾ ಕಾಸರಗೋಡು, ಗಮಕ ಕಲಾ ಪರಿಷತ್ತು, ತರುಣ ಕಲಾ ವೃದ್ಧ ಉಪ್ಪಳ, ಗೀತಾ ವಿಹಾರ ಕಾಸರಗೋಡು, ಗಡಿನಾಡ ಕಲಾವಿದರು ಹೀಗೆ 24ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಬಾನಾಸು ಅವರಿಗೆ ಸನ್ಮಾನಿಸಿ ಗೌರವಿಸಿವೆ. ವರ್ಣರಂಜಿತ ಈ ಸಮಾರಂಭದಲ್ಲಿ ಕಾಸರಗೋಡು ಚಿನ್ನಾ, ಸತೀಶ್ಚಂದ್ರ, ಸತ್ಯನಾರಾಯಣ ಕೆ. ಮನೋಹರ್ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ನಾಲ್ಕು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ, ವಿಶ್ಲೇಷಕರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿರುವ ಸುಬ್ರಮಣ್ಯ ಬಾಡೂರು, ಕನ್ನಡ ಸಿನಿಮಾ ರಂಗಕ್ಕೆ ಬಾ.ನಾ.ಸುಬ್ರಮಣ್ಯ ಎಂದೇ ಖ್ಯಾತರಾದವರು. ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿ, ಸಂಪಾದಕರೂ ಆದವರು.

     

    ಈ ಹಿಂದೆ ಎರಡು ಬಾರಿ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯು ಕನ್ನಡಿಗರ ಪಾಲಾಗಿತ್ತು,  ಬ್ಯಾಂಕ್ ಉದ್ಯೋಗಿಯಾಗಿದ್ದ ಎನ್.ಕೆ ರಾಘವೇಂದ್ರ, ಉಪನ್ಯಾಸಕರಾಗಿದ್ದ ಮನು ಚಕ್ರವರ್ತಿ ಅವರು ಈ ಹಿಂದೆ ಇದೇ ಪ್ರಶಸ್ತಿಯನ್ನು ಪಡೆದಿದ್ದಾರೆ. ಆದರೆ, ಪತ್ರಿಕೋದ್ಯಮದಲ್ಲೇ ಹಲವು ದಶಕಗಳ ಕಾಲ ಕೆಲಸ ಮಾಡಿದ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ಸಂದಿದೆ ವಿಶೇಷ.

  • ನ.24ಕ್ಕೆ ಕನ್ನಡದಲ್ಲಿ ಮತ್ತೆ 5 ಸಿನಿಮಾಗಳು ರಿಲೀಸ್

    ನ.24ಕ್ಕೆ ಕನ್ನಡದಲ್ಲಿ ಮತ್ತೆ 5 ಸಿನಿಮಾಗಳು ರಿಲೀಸ್

    ನ್ನಡ ಚಿತ್ರೋದ್ಯಮಕ್ಕೆ ಮತ್ತೊಂದು ಶುಕ್ರವಾರ ಬಂದಿದೆ. ವಾರ ವಾರ ಕನ್ನಡದ ಐದಾರು ಸಿನಿಮಾಗಳು ರಿಲೀಸ್ (Release) ಆಗುವ ಮೂಲಕ ಒಂದು ರೀತಿಯಲ್ಲಿ ಸಂಭ್ರಮ ಮತ್ತೊಂದು ರೀತಿಯಲ್ಲಿ ಆತಂಕ ಸೃಷ್ಟಿ ಮಾಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಾರಕ್ಕೆ 20ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗುವುದರಿಂದ ಯಾವ ಸಿನಿಮಾವನ್ನು ನೋಡಬೇಕು ಎನ್ನುವ ಗೊಂದಲಕ್ಕೆ ಬಿದ್ದಿದ್ದಾನೆ ಪ್ರೇಕ್ಷಕ.

    ಈ ವಾರವೂ ಕನ್ನಡದ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ. ಸೂರಿ ಮತ್ತು ಅಭಿಷೇಕ್ ಅಂಬರೀಶ್ (Abhishek Ambarish) ಕಾಂಬಿನೇಷನ್ ನ ‘ಬ್ಯಾಡ್ ಮ್ಯಾನರ್ಸ್’, ಡಾರ್ಲಿಂಗ್ ಕೃಷ್ಣ ನಟನೆಯ ಶುಗರ್ ಫ್ಯಾಕ್ಟರಿ, ರಾಜ್ ಬಿ ಶೆಟ್ಟಿ (Raj B Shetty) ನಿರ್ದೇಶಿಸಿ, ನಟಿಸಿರುವ ಹಾಗೂ ರಮ್ಯಾ (Ramya) ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಸೇರಿದಂತೆ ಈ ವಾರ ಐದು ಚಿತ್ರಗಳು ಬಿಡುಗಡೆ ಆಗುತ್ತಿವೆ.

     

    ಈಗಾಗಲೇ ಬ್ಯಾಡ್ ಮ್ಯಾನರ್ಸ್ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಕುತೂಹಲ ಮೂಡಿಸಿವೆ. ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರಕ್ಕಾಗಿ ಸ್ವತಃ ದರ್ಶನ್ ಅವರೇ ಅಖಾಡಕ್ಕೆ ಇಳಿದಿದ್ದಾರೆ. ನಾಳೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ನಾಳೆ ಯಾರಿಗೆ ಗೆಲುವು ಸಿಗುತ್ತೆ ಕಾದು ನೋಡಬೇಕು.

  • ಸಿನಿ ಸುನಾಮಿ: ನಾಳೆ ಬರೋಬ್ಬರಿ 31 ಸಿನಿಮಾಗಳು ರಿಲೀಸ್

    ಸಿನಿ ಸುನಾಮಿ: ನಾಳೆ ಬರೋಬ್ಬರಿ 31 ಸಿನಿಮಾಗಳು ರಿಲೀಸ್

    ಸಾಮಾನ್ಯವಾಗಿ ಹಬ್ಬಗಳ ದಿನದಂದು ಹೆಚ್ಚೆಚ್ಚು ಸಿನಿಮಾಗಳು (Movie) ಬಿಡುಗಡೆ (Release) ಆಗುವುದು ವಾಡಿಕೆ. ಆದರೆ, ಹಬ್ಬ ಮುಗಿದ ನಂತರವೂ ಅಚ್ಚರಿ ಎನ್ನುವಂತೆ ನಾಳೆಗೆ 31 ಚಿತ್ರಗಳು ರಿಲೀಸ್ ಆಗುತ್ತಿವೆ. ಈ ನಡೆಯನ್ನು ಸಂಭ್ರಮಿಸಬೇಕೋ ಅಥವಾ ಆತಂಕ ಪಡಬೇಕು ಗೊತ್ತಿಲ್ಲ ಎನ್ನುತ್ತಾರೆ ಸಿನಿ ಪ್ರೇಮಿಗಳು.

    ರಿಲೀಸ್ ಆಗುತ್ತಿರುವ 31 ಚಿತ್ರಗಳೂ ಕನ್ನಡದಲ್ಲ. ತಮಿಳು, ತೆಲುಗು (Telugu), ಮಲಯಾಳಂ, ಕನ್ನಡ (Kannada), ಹಿಂದಿ ಹೀಗೆ ವಿವಿಧ ಭಾಷೆಯ ಸಿನಿಮಾಗಳು ಅವಾಗಿವೆ. ಇವುಗಳಲ್ಲಿ ಕನ್ನಡದ್ದೇ ಎಂಟು ಚಿತ್ರಗಳಿವೆ. ರಕ್ಷಿತ್ ಶೆಟ್ಟಿ ನಟನೆಯ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಕೂಡ ಸೇರಿಕೊಂಡಿದೆ.

     

    ತೆಲುಗಿನ 9 ಚಿತ್ರಗಳು, ತಮಿಳಿನ 4 (Tamil) ಹಾಗೂ ಮಲಯಾಳಂನ 9 (Malayalam) ಚಿತ್ರಗಳು ನಾಳೆ ತೆರೆಗೆ ಅಪ್ಪಳಿಸುತ್ತಿವೆ. ಈ ಪ್ರಮಾಣದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಯಾರಿಗೆ ಚಿತ್ರಮಂದಿರ ಸಿಗುತ್ತೋ, ಯಾರಿಗೆ ಸಿಗುವುದಿಲ್ಲವೋ ಕಾದು ನೋಡಬೇಕು. ಒಟ್ಟಿನಲ್ಲಿ ಸಿನಿ ಪ್ರಿಯರಿಗೆ ನಾಳೆ ಸಿನಿಮೋತ್ಸವ ನಡೆಯೋದು ಗ್ಯಾರಂಟಿ.

  • ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಪ್ಪುಗಾಗಿ ನಾನು ಸಿನಿಮಾ ಮಾಡಬೇಕು ಎಂದು ಹಲವಾರು ಹೇಳಿದ್ದರು ಶಿವರಾಜ್ ಕುಮಾರ್ (Shivaraj Kumar). ಅಲ್ಲದೇ, ಅಪ್ಪು, ರಾಘವೇಂದ್ರ ರಾಜಕುಮಾರ್ ಮತ್ತು ತಾವು ಒಟ್ಟಿಗೆ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ಎರಡೂ ಕನಸುಗಳು ಈಡೇರಲಿಲ್ಲ. ಇದೀಗ ಶಿವರಾಜ್ ಕುಮಾರ್ ಮತ್ತೊಂದು ಮನದ ಬಯಕೆಯನ್ನು ಹೊರ ಹಾಕಿದ್ದಾರೆ. ತಾವು ಸಿನಿಮಾವೊಂದನ್ನು ನಿರ್ದೇಶನ (Direction) ಮಾಡಬೇಕು ಎಂದಿದ್ದಾರೆ.

    ಈಗಾಗಲೇ ತಾವೊಂದು ಕಥೆಯನ್ನೂ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಈಡೇರಿಸಿಕೊಳ್ಳುವ ಮಾತುಗಳನ್ನೂ ಹೇಳಿದ್ದಾರೆ. ಈ ಕನಸು ನನಸಾಗತ್ತೋ ಇಲ್ಲವೋ ಗೊತ್ತಿಲ್ಲ. ನಿರ್ದೇಶನವನ್ನು ಮಾಡಬೇಕು ಎನ್ನುವ ತುಡಿತ ಇದ್ದೇ ಇದೆ ಎಂದಿದ್ದಾರೆ. ಅಪ್ಪು ಮತ್ತು ಅನಂತ್ ನಾಗ್ ಅವರಿಗೆ ಸಿನಿಮಾ ಮಾಡಬೇಕು ಎಂದು ಈ ಹಿಂದೆಯೂ ಶಿವಣ್ಣ ಹೇಳಿದ್ದರು.

     

    ತಾವು ಯಾವ ರೀತಿಯ ಮತ್ತು ಎಂತಹ ಕಥೆಯನ್ನು ಸಿನಿಮಾ ಮಾಡಬೇಕು ಎನ್ನುವ ಸ್ಪಷ್ಟತೆ ಇದೆಯಂತೆ. ಧನುಷ್ ರೀತಿಯ ಕಲಾವಿದರು ತಮ್ಮ ಕಥೆಗೆ ಒಪ್ಪುತ್ತಾರೆ ಎಂದೆಲ್ಲ ಅವರು ಹೇಳಿಕೊಂಡಿದ್ದಾರೆ. ಶಿವಣ್ಣರ ಆಸೆ ಆದಷ್ಟು ಬೇಗ ಈಡೇರಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]