Tag: Mouth Organ

  • ವಿಡಿಯೋ: ಮೌತ್ ಆರ್ಗನ್ ನುಡಿಸಿದ ಗಜರಾಜ

    ವಿಡಿಯೋ: ಮೌತ್ ಆರ್ಗನ್ ನುಡಿಸಿದ ಗಜರಾಜ

    ನವದೆಹಲಿ: ತಮಿಳುನಾಡಿನ ಕೊಯಮತ್ತೂರಿನ ಆನೆಯೊಂದು ತನ್ನ ವಿಶಿಷ್ಟ ಕಲೆಯಿಂದ ಮೌತ್ ಆರ್ಗನ್ ನುಡಿಸುವ ಮೂಲಕ ನೋಡುಗರನ್ನು ನಿಬ್ಬೆರಗೊಳಿಸಿದೆ.

    ಕೊಯಮತ್ತೂರ ಥೇಕ್ಕಂಪಟ್ಟಿ ಗ್ರಾಮದ ಪುನರ್‍ವಸತಿ ಕೇಂದ್ರದಲ್ಲಿ 32ಕ್ಕೂ ಹೆಚ್ಚು ದೇವಸ್ಥಾನದ ಆನೆಗಳಿವೆ. ಇದರಲ್ಲಿ ಒಂದು ಆನೆ ಮೌತ್ ಆರ್ಗನ್ ನುಡಿಸುವ ಮೂಲಕ ಜನರನ್ನು ಆಕರ್ಷಿಸುತ್ತಿದೆ. ಆಂಡಾಲ್ ಹೆಸರಿನ ಆನೆ ಮೌತ್ ಆರ್ಗನ್ ನುಡಿಸಿ ಪ್ರವಾಸಿಗರನ್ನು ಮೂಕಪ್ರೇಕ್ಷಕರಾಗಿ ಮಾಡಿದೆ.

    ಆನೆ ಮೌತ್ ಆರ್ಗನ್ ನುಡಿಸಿದ ವಿಡಿಯೋ ಕ್ಲಿಪ್ ನನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಆನೆಗೆ ಮೌತ್ ಆರ್ಗನ್ ನೀಡುತ್ತಾರೆ. ನಂತರ ಆನೆ ಮೌತ್ ಆರ್ಗನ್ ನುಡಿಸುತ್ತದೆ. ಬಳಿಕ ಆ ವ್ಯಕ್ತಿ ಆನೆಯ ಬಾಯಿಯಿಂದ ಮೌತ್ ಆರ್ಗನ್ ತೆಗೆದುಕೊಳ್ಳುತ್ತಾರೆ.

    ವಿಡಿಯೋ ಎಲ್ಲರ ಗಮನ ಸೆಳೆದಿದ್ದು, ಪೋಸ್ಟ್ ಮಾಡಿದ 2 ಗಂಟೆಯಲ್ಲಿಯೇ 400ಕ್ಕಿಂತ ಹೆಚ್ಚಾಗಿ ಲೈಕ್ ಆಗಿದೆ. 6 ಸಾವಿರಕ್ಕೂ ಹೆಚ್ಚಾಗಿ ವೀವ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸುಮಾರು 191 ಜನರು ರಿ ಟ್ವೀಟ್ ಮಾಡಿದ್ದಾರೆ. ಒಬ್ಬರು `ಕ್ಯೂಟ್’ ಎಂದು, ಮತ್ತೊಬ್ಬರು `ಭಾರತದಲ್ಲಿ ಮಾತ್ರ ನಡೆಯುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.