Tag: mouth

  • ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಬ್ರೂಸ್ಲಿ ಅಭಿಮಾನಿಯ ಸಾಹಸ – ಹಲ್ಲಿನಿಂದ 1 ಟನ್ ತೂಕದ ಕಾರು ಎಳೆದ ಯುವಕ

    ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಬ್ರೂಸ್ಲಿ ಅಭಿಮಾನಿಯ ಸಾಹಸ – ಹಲ್ಲಿನಿಂದ 1 ಟನ್ ತೂಕದ ಕಾರು ಎಳೆದ ಯುವಕ

    ರಾಯಚೂರು: ಸ್ವಾತಂತ್ರ‍್ಯ ದಿನಾಚರಣೆ (Independence Day) ಹಿನ್ನೆಲೆ ರಾಯಚೂರಿನಲ್ಲಿ (Raichur) ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮದ ವೇಳೆ ಯುವ ಸಾಹಸಿ ಮಾನ್ವಿಯ (Manvi) ಸತೀಶ್ ಕೊನಾಪುರಪೇಟೆ ಹಲ್ಲಿನಿಂದ 1 ಟನ್ ತೂಕದ ಕಾರನ್ನು ಎಳೆಯುವ ಮೂಲಕ ಸಾಹಸ ಮೆರೆದಿದ್ದಾನೆ.

    ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಸುಮಾರು 1 ಟನ್ ತೂಕದ ಸ್ವಿಫ್ಟ್ ಡಿಸೈರ್ (Swift Dzire) ಕಾರಿಗೆ ಹಗ್ಗ ಕಟ್ಟಿ ಬಾಯಿಂದ 100 ಮೀಟರ್ ದೂರದವರೆಗೆ ಎಳೆಯುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ಬ್ರೂಸ್ಲಿ ಅಭಿಮಾನಿಯಾಗಿರುವ ಈತ ಈಗಾಗಲೇ ಹಲವೆಡೆ ತನ್ನ ಸಾಹಸ ಪ್ರದರ್ಶಿಸಿ ಪ್ರಶಂಸೆ ಪಡೆದಿದ್ದಾನೆ. ಇದನ್ನೂ ಓದಿ: 12 ವರ್ಷಗಳಲ್ಲೇ ಬೆಂಗ್ಳೂರು ಮೆಟ್ರೋದಲ್ಲಿ ದಾಖಲೆ ಪ್ರಯಾಣ

    ಇನ್ನೂ ಇದೇ ವೇಳೆ ಅಗ್ನಿ ಶಾಮಕದಳ ಸಿಬ್ಬಂದಿ, ಬೆಂಕಿ ಅವಘಡಗಳಾದಾಗ ರಕ್ಷಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಣಕು ಪ್ರದರ್ಶನ ಮಾಡಿದರು. ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಾಗ ಏನು ಮಾಡಬೇಕು? ಅಡುಗೆ ಅನಿಲದ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡಾಗ ಏನು ಮಾಡಬೇಕು ಎಂಬ ಕುರಿತು ಅಣಕು ಪ್ರದರ್ಶನ ಮಾಡಿದರು. ಇದನ್ನೂ ಓದಿ: ನೀರಜ್‌ ಚೋಪ್ರಾ – ಮನು ಭಾಕರ್‌ ಮದುವೆ ವದಂತಿ: ಎಲ್ಲವೂ ಆಧಾರ ರಹಿತ ಎಂದ ಮನು ಭಾಕರ್‌

  • ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಅಳ್ತಿದ್ದ ಮಗನ ತುಟಿಗೆ ಗಮ್ ಹಾಕಿದ ತಾಯಿ!

    ಪಾಟ್ನಾ: ತಾಯಿಯೊಬ್ಬಳು ಯಾವಾಗಲೂ ಅಳುತ್ತಿದ್ದಾನೆ ಎಂದು ಮಗನ ತುಟಿಗಳಿಗೆ ಗಮ್ ಹಾಕಿರುವ ವಿಲಕ್ಷಣ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ.

    ಶೋಭಾ ಮಗುವಿನ ಬಾಯಿಗೆ ಗಮ್ ಹಾಕಿದ ತಾಯಿ. ಈಕೆ ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದನ್ನು ನಿಲ್ಲಿಸಿಲ್ಲ ಎಂದು ಕೊನೆಗೆ ಮನೆಯಲ್ಲಿಯೇ ಇದ್ದ ಗಮ್ ತೆಗೆದುಕೊಂಡು ಮಗುವಿನ ತುಟಿಗೆ ಹಾಕಿದ್ದಾಳೆ.

    ನಾನು ಕೆಲಸಕ್ಕೆ ಹೋಗಿ ಮನೆಗೆ ಮರಳಿದ್ದೆ. ಆಗ ಮಗು ಏನು ಮಾತನಾಡದೆ ಸುಮ್ಮನೆ ಕುಳಿತ್ತಿದ್ದ. ನಂತರ ಆತನನ್ನು ನೋಡಿದಾಗ ಬಾಯಿಯಿಂದ ನೊರೆ ಬರುತ್ತಿತ್ತು. ತಕ್ಷಣ ನಾನು ಮಗನಿಗೆ ಏನಾಗಿದೆ ಎಂದು ಪತ್ನಿ ಶೋಭಾಳನ್ನು ಕೇಳಿದೆ. ಆಗ ಶೋಭಾ, ಆತನೂ ಯಾವಾಗಲೂ ಅಳುತ್ತಿದ್ದನು. ಏನೇ ಮಾಡಿದರು ಅಳುವನ್ನು ನಿಲ್ಲಿಸಲಿಲ್ಲ. ಆದ್ದರಿಂದ ತುಟಿಗಳಿಗೆ ಗಮ್ ಹಾಕಿರುವುದಾಗಿ ತಿಳಿಸಿದಳು ಎಂದು ಮಗುವಿನ ತಂದೆ ಹೇಳಿದ್ದಾರೆ.

    ತುಟಿಗಳಿಗೆ ಗಮ್ ಹಾಕಿದ್ದ ಪರಿಣಾಮ ಮಗು ಅಳುವುದನ್ನು ನಿಲ್ಲಿಸಿದ್ದನು. ಆದರೆ ಗಮ್ ಅಂಟಿಕೊಂಡಿದ್ದ ಪರಿಣಾಮ ಮಗು ಬಾಯಿಯನ್ನು ತೆರೆಯಲು ಸಾಧ್ಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ವೈದ್ಯರು ಪರೀಕ್ಷೆ ಮಾಡಿ ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

  • ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆಯಾಗ್ತಿರೋದನ್ನ ಕಂಡು ಮಾಲೀಕನೇ ದಂಗಾದ!

    ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆಯಾಗ್ತಿರೋದನ್ನ ಕಂಡು ಮಾಲೀಕನೇ ದಂಗಾದ!

    ಅಂಕಾರ: ಒಂದೇ ದೇಹ ಎರಡು ಮುಖದೊಂದಿಗೆ ಜನಿಸಿದ ಕರುವಿನ ಬಗ್ಗೆ ಕೇಳಿದ್ದೀರ. ಹಾಗೆ ಒಂದೇ ಮೇಕೆಗೆ ಎರಡಕ್ಕಿಂತ ಹೆಚ್ಚು ಕೊಂಬುಗಳು ಇರೋ ಸ್ಟೋರಿಯನ್ನೂ ಕೇಳಿದ್ದೀರ. ಆದ್ರೆ ಕುರಿಯ ಕಿವಿಯಲ್ಲಿ ಬಾಯಿ ಬೆಳವಣಿಗೆ ಆಗಿರೋದನ್ನ ಎಲ್ಲಾದ್ರೂ ಕೇಳಿದ್ದೀರಾ?

    ಹೌದು. ಇಂತಹದ್ದೊಂದು ಅಪರೂಪದ ಕುರಿ ಟರ್ಕಿಯಲ್ಲಿದೆ. ಮಾಲೀಕ ಅಲಿ ದುಮಾನ್ ಒಮ್ಮೆ ಕುರಿಗಳ ಉಣ್ಣೆ ಕತ್ತರಿಸುತ್ತಿದ್ರು. ಎರಡು ಮೂರು ಕುರಿಗಳ ಉಣ್ಣೆಯನ್ನ ಕಟ್ ಮಾಡಿ ಮತ್ತೊಂದು ಕುರಿಯ ಉಣ್ಣೆ ಕಟ್ ಮಾಡುವಾಗ ಆಕಸ್ಮಿಕವಾಗಿ ಅದರ ಕಿವಿಯನ್ನ ಕಟ್ ಮಾಡಿದ್ದರು. ನಂತರ ಗಾಬರಿಯಿಂದ ಅದರ ಕಿವಿಯನ್ನ ಪರಿಶೀಲಿಸಿದ್ದಾರೆ. ಈ ವೇಳೆ ಕುರಿಯ ಕಿವಿಯೊಳಗೆ ಬಾಯಿ ಬೆಳವಣಿಗೆಯಾಗಿರೋದನ್ನ ಕಂಡು ಅಚ್ಚರಿಗೊಂಡಿದ್ದಾರೆ.

    ಇದನ್ನ ನೋಡಿ ನಾನು ನಡುಗಲು ಶುರುವಾದೆ. ನಾನು ಈ ರೀತಿ ನೋಡಿರುವುದು ಇದೇ ಮೊದಲು. ಪಶುವೈದ್ಯರು ಕೂಡ ಈ ರೀತಿ ಎಂದೂ ನೋಡಿಲ್ಲ ಎಂದಿದ್ದಾರೆ ಅಂತ ಅಲಿ ಹೇಳಿದ್ದಾರೆ.

    ಪಶುವೈದ್ಯರಾದ ಯೂಸಫ್ ಯಿಲ್ಡಿಸ್ ಕುರಿಯನ್ನ ಪರೀಕ್ಷಿಸಿದ್ದು, ಅದರ ಕಿವಿಯೊಳಗೆ ಬೆಳವಣಿಗೆಯಾಗ್ತಿರೋ ಬಾಯಿಯಲ್ಲಿ ಹಲ್ಲು ಕೂಡ ಇದ್ದು, ಅದರಿಂದ ಜೊಲ್ಲು ಕೂಡ ಉತ್ಪತ್ತಿಯಾಗುತ್ತಿದೆ ಎಂದು ಹೇಳಿದ್ದಾರೆ. ಆದ್ರೆ ಕಿವಿಯೊಳಗೆ ಬೆಳವಣಿಗೆಯಾಗಿರೋ ಬಾಯಿ ಕುರಿಯ ಜೀರ್ಣಾಂಗದೊಂದಿಗೆ ಸಂರ್ಪಕವಾಗಿಲ್ಲ ಎಂದು ಹೇಳಿದ್ದಾರೆ.

    ನಾವು ಈ ರೀತಿಯ ಪ್ರಕರಣ ಹಿಂದೆಂದೂ ನೋಡಿಲ್ಲ. ಮಾಲೀಕರು ಇದನ್ನು ನೋಡಿ ಭಯಪಟ್ಟಿದ್ದಾರೆ. ಬಹುಶಃ ಕುರಿಯ ತಾಯಿ ಗರ್ಭ ಧರಿಸಿದ್ದ ವೇಳೆ ರಾಸಾಯನಿಕಗಳನ್ನ ತಿಂದು ಹೀಗಾಗಿರಬಹುದು. ಅಥವಾ ವಿಕಿರಣಗಳಿಂದಲೋ, ಹಾರ್ಮೋನಲ್ ಔಷಧಿಗಳಿಂದಲೋ ಹೀಗಾಗಿರಬಹುದು. ಈ ಬಗ್ಗೆ ಗಂಭೀರವಾಗಿ ತನಿಖೆ ಮಾಡಬೇಕು ಎಂದು ಪಶುವೈದ್ಯರು ಅಭಿಪ್ರಾಯಪಟ್ಟಿರವುದಾಗಿ ಮಿರರ್ ಪತ್ರಿಕೆ ವರದಿ ಮಾಡಿದೆ.

    ಕುರಿಯಲ್ಲಿನ ಈ ಅಸಹಜತೆಗೆ ತಜ್ಞರು ಕಾರಣ ಕಂಡುಕಳ್ಳುವವರೆಗೆ ಕುರಿಯನ್ನು ಮಾರುವುದಾಗಲೀ ಅದನ್ನು ಬಲಿ ಕೊಡುವುದಾಗಲಿ ಮಾಡುವುದಿಲ್ಲ ಎಂದು ಮಾಲೀಕ ಅಲಿ ಹೇಳಿದ್ದಾರೆ.

    https://www.youtube.com/watch?v=_0590Xbf2Sc