Tag: Moustache

  • ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ಧೋನಿ ಮಾಸ್ ಮೀಸೆಗೆ ಅಭಿಮಾನಿಗಳು ಫಿದಾ

    ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಮಾಸ್ ಮೀಸೆಯೊಂದಿಗೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಮಾಹಿ ಫ್ಯಾನ್ಸ್ ಫಿದಾ ಆಗಿದ್ದಾರೆ.

    ರಾಂಚಿ ರಾಜಕುಮಾರ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ಅವರ ಉದ್ದನೆಯ ಕೂದಲು ಭಾರೀ ಟ್ರೆಂಡ್ ಸೃಷ್ಟಿಸಿತ್ತು. ಯುವಕರೆಲ್ಲಾ ಮಾಹಿಯಂತೆ ಕೂದಲು ಬೆಳೆಸಿ ಹೊಸ ಸಂಚಲನ ಸೃಷ್ಟಿಸಿದ್ದರು. ಆ ಬಳಿಕ ಧೋನಿ ಹಲವು ರೀತಿಯ ಕೇಶ ವಿನ್ಯಾಸಗಳಲ್ಲಿ ಗಮನ ಸೆಳೆದಿದ್ದರು. ಇದೀಗ ಧೋನಿ ತನ್ನ ಮೀಸೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಲು ಹೊರಟಿದ್ದಾರೆ. ಈ ರಗಡ್ ಲುಕ್ ಕಂಡು ಮಾಹಿ ಅಭಿಮಾನಿಗಳು ಫುಲ್ ಖುಷಿ ಆಗಿದ್ದಾರೆ. ಇದನ್ನೂ ಓದಿ: ಅಪ್ಪನಿಗೆ ಮಸಾಜ್ ಮಾಡಿದ ಧೋನಿ ಪುತ್ರಿ ಝೀವಾ: ವಿಡಿಯೋ

    ಧೋನಿ 14ನೇ ಆವೃತ್ತಿಯ ಐಪಿಎಲ್ ಕೊರೋನಾದಿಂದಾಗಿ ಮುಂದೂಡಲ್ಪಟ್ಟ ಮೇಲೆ ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ತನ್ನ ಮುದ್ದಿನ ಮಗಳು ಝೀವಾ ಜೊತೆ ತುಂಟಾಟಗಳನ್ನು ಆಡುವ ಧೋನಿ ಇದೀಗ ಫೋಟೋ ಒಂದರಲ್ಲಿ ಈ ರೀತಿ ಮೀಸೆ ಬಿಟ್ಟು ಫೋಸ್ ನೀಡಿದ್ದಾರೆ. ಮಾಹಿಯ ಈ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ ಫ್ರಾಂಚೈಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಕುದುರೆ ಜೊತೆ ಧೋನಿ ರೇಸ್

    ಈ ಪೋಸ್ಟ್ ನೋಡಿದ ಅಭಿಮಾನಿಗಳು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದು, ಧೋನಿಗೆ ಈ ಲುಕ್ ಸೂಟ್ ಆಗುತ್ತದೆ ಹೀಗೆ ಇರಲಿ ಎಂದು ಅಭಿಮಾನಿಯೊಬ್ಬರು ಬರೆದುಕೊಂಡರೆ. ಇನ್ನೊಬ್ಬರು ಸಿಂಗಂ ಸ್ಟೈಲ್‍ನಂತಿದೆ ಎಂದಿದ್ದಾರೆ. ಒಟ್ಟಿನಲ್ಲಿ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು ಕೂಡ ತಮ್ಮ ಬೇರೆ ಬೇರೆ ಕಾರ್ಯ ವೈಖರಿಗಳಿಂದ ಆಗಾಗ್ಗೆ ಸುದ್ದಿಯಾಗುತ್ತಿದ್ದಾರೆ.

  • ಅಭಿನಂದನ್‍ ಮೀಸೆಯನ್ನು ರಾಷ್ಟ್ರೀಯ ಮೀಸೆಯನ್ನಾಗಿ ಮಾಡಿ: ಎ.ಆರ್ ಚೌಧರಿ ಮನವಿ

    ಅಭಿನಂದನ್‍ ಮೀಸೆಯನ್ನು ರಾಷ್ಟ್ರೀಯ ಮೀಸೆಯನ್ನಾಗಿ ಮಾಡಿ: ಎ.ಆರ್ ಚೌಧರಿ ಮನವಿ

    ನವದೆಹಲಿ: ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಿ, ಗೌರವ ನೀಡಿ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮನವಿ ಮಾಡಿದ್ದಾರೆ.

    ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಅವರು, ವಿಂಗ್ ಕಮಾಂಡರ್ ಅಭಿನಂದನ್ ಅವರು ನಮ್ಮ ಹೆಮ್ಮೆಯ ಯೋಧ. ಸರ್ಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು ಹಾಗೂ ಅವರ ಮೀಸೆಯನ್ನು ರಾಷ್ಟ್ರೀಯ ಮೀಸೆಯೆಂದು ಘೋಷಿಸಬೇಕು ಎಂದು ಹೇಳಿದರು.

    ಬಾಲಕೋಟ್ ನಲ್ಲಿರುವ ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ ಬಳಿಕ ಫೆ.27 ರಂದು ಪಾಕಿಸ್ತಾನ ಭಾರತದ ಮೇಲೆ ವಾಯು ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಪಾಕ್ ವಿಮಾನದ ಜೊತೆಗಿನ ಡಾಗ್ ಫೈಟ್ ಕಾಳಗದಲ್ಲಿ ಎಫ್-16 ವಿಮಾನವನ್ನು ಅಭಿನಂದನ್ ಹೊಡೆದು ಉರುಳಿಸಿದ್ದರು. ಈ ವೇಳೆ ಪಾಕ್ ಅಭಿನಂದನ್ ಅವರಿದ್ದ ಮಿಗ್ -21 ವಿಮಾನದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಪರಿಣಾಮ ಅಭಿನಂದನ್ ವಿಮಾನ ಪತನಗೊಂಡು ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಬಿದ್ದಿತ್ತು. ನಂತರ ಪಾಕ್ ಸೇನೆ ಅಭಿನಂದನ್ ಅವರನ್ನು ವಶಕ್ಕೆ ಪಡೆದು ಮಾರ್ಚ್ 1 ರಂದು ರಾತ್ರಿ ಬಿಡುಗಡೆ ಮಾಡಿತ್ತು.

    ವೀರಯೋಧ ಅಭಿನಂದನ್ ಭಾರತಕ್ಕೆ ಹಿಂದಿರುಗಿದ ಬಳಿಕ ಇಡೀ ದೇಶವೇ ಸಂಭ್ರಮಾಚರಣೆ ಮಾಡಿತ್ತು. ಅಲ್ಲದೆ ಹೆಮ್ಮೆಯಿಂದ ಹಲವು ಪೋಷಕರು ಅಭಿನಂದನ್ ಅವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದರು. ಅಲ್ಲದೆ ಅವರ ಹೇರ್ ಸ್ಟೈಲ್, ಮಿಸೆ ಎಲ್ಲೆಡೆ ಸಖತ್ ಫೇಮಸ್ ಆಗಿತ್ತು.

  • ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

    ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

    ಗಾಂಧಿನಗರ: ದಲಿತ ಯುವಕ ಮೀಸೆ ಬೆಳೆಸಿದಕ್ಕೆ ಮೇಲ್ಜಾತಿಯ ಜನರು ಅವನ ಮೇಲೆ ಹಲ್ಲೆ ನಡೆಸಿರುವ ಘಟನೆ ಸೆಪ್ಟೆಂಬರ್ 25ರಂದು ಗುಜರಾತ್‍ನ ಗಾಂಧಿನಗರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ದರ್ಬಾರ್ ಸಮುದಾಯದ ಮೂವರು ಯುವಕರು ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ಲಿಂಬೋದರ ಗ್ರಾಮದ ಪಿಯೂಷ್ ಪರ್ಮರ್(24) ಯುವಕರೊಬ್ಬರಿಗೆ ಬೈದು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಮಯೂರ್‍ಸಿನ್ ವಗೆಲಾ, ರಾಹುಲ್ ವಿಕ್ರಮ್‍ಸಿನ್ ಸೆರಾತಿಯ ಮತ್ತು ಅಜಿತ್‍ಸಿನ್ ವಗೆಲಾ ವಿರುದ್ಧ ದೂರು ದಾಖಲಾಗಿದ್ದು ಪ್ರಕರಣ ದಾಖಲಾಗಿದೆ.

    ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಸಹೋದರ ದಿಗಂತ್ ಜೊತೆ ಗರ್ಬಾ ಮುಗಿಸಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದೆವು. ಆಗ ಅವರನ್ನು ಯಾರೋ ನಿಂದಿಸಲು ಶುರು ಮಾಡಿದ್ದರು. ಯಾರು ಎಂದು ನೋಡಲು ನೋಡಿದಾಗ ಗೊತ್ತಾಗಿರಲಿಲ್ಲ. ನಂತರ ಅವರ ಹತ್ತಿರ ಹೋಗಿ ನೋಡಿದ್ದಾಗ ದರ್ಬಾರ್ ಸಮುದಾಯದ ಮೂವರು ಯುವಕರಿದ್ದರು. ಜಗಳ ಆಗಬಾರದು ಎನ್ನುವ ಕಾರಣಕ್ಕೆ ನಾವು ಅವರನ್ನು ನಿರ್ಲಕ್ಷಿಸಿದ್ದೇವು. ನಾವು ಮನೆಗೆ ಹೋಗುವಾಗ ನಮ್ಮನ್ನು ಹಿಂಬಾಲಿಸುತ್ತಿದ್ದರು. ನಂತರ ಮನೆಯ ಹತ್ತಿರ ಬಂದು ಬೈಯಲು ಆರಂಭಿಸಿದ್ದರು. ಮೊದಲು ನನ್ನ ಸಹೋದರ ದಿಗಂತ್‍ನನ್ನು ನಿಂದಿಸಿದ್ದರು ಬಳಿಕ ನನ್ನನ್ನು ಹೊಡೆಯಲು ಆರಂಭಿಸಿದ್ದರು. ದಲಿತನಾಗಿ ಮೀಸೆ ಏಕೆ ಬೆಳೆಸಿದ್ದೀಯ ಎಂದು ಹೊಡೆಯುತ್ತಿದ್ದರು ಎಂದು ಪಿಯೂಷ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.