Tag: mourning

  • ಬ್ರಿಟನ್ ರಾಣಿ ನಿಧನ – ಸೆ.11ಕ್ಕೆ ಭಾರತದಾದ್ಯಂತ ಶೋಕಾಚರಣೆ

    ನವದೆಹಲಿ: ಬ್ರಿಟನ್ ರಾಣಿ(Queen of Britain) 2ನೇ ಎಲಿಜಬೆತ್(Elizabeth II) ಅವರ ನಿಧನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂದತೆ ಗಣ್ಯ ವ್ಯಕ್ತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನಕ್ಕೆ ಗೌರವಾರ್ಥವಾಗಿ ಸೆಪ್ಟೆಂಬರ್ 11ರಂದು(ಭಾನುವಾರ) ಭಾರತದಲ್ಲಿ 1 ದಿನದ ಶೋಕಾಚರಣೆ(Mourning) ನಡೆಸುವುದಾಗಿ ಗೃಹಸಚಿವಾಲಯ ತಿಳಿಸಿದೆ.

    ಬ್ರಿಟನ್‌ನ ರಾಣಿ 2ನೇ ಎಲಿಜಬೆತ್ ಅವರು ಸೆಪ್ಟೆಂಬರ್ 8ರಂದು ನಿಧನರಾದರು. ಅಗಲಿದ ಗಣ್ಯರಿಗೆ ಗೌರವಾರ್ಥವಾಗಿ ಭಾರತ ಸರ್ಕಾರ ಸೆಪ್ಟೆಂಬರ್ 11 ರಂದು 1 ದಿನದ ಶೋಕಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದ್ನನೂ ಓದಿ: ಮಹೀಂದ್ರಾ ಎಕ್ಸ್‌ಯುವಿ 400 ಎಲೆಕ್ಟ್ರಿಕ್ ಕಾರು ಅನಾವರಣ

    ಬ್ರಿಟಿಷ್ ಇತಿಹಾಸದಲ್ಲಿಯೇ ಸುದೀರ್ಘ ಕಾಲ ರಾಣಿಯಾಗಿದ್ದ ಹಿರಿಮೆ 2ನೇ ಎಲಿಜಬೆತ್ ಅವರಿಗಿದ್ದು, ನಿನ್ನೆ ರಾತ್ರಿ ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು. ಇದ್ನನೂ ಓದಿ: ಗೋಧಿ ಬಳಿಕ ಇದೀಗ ನುಚ್ಚಕ್ಕಿ ರಫ್ತನ್ನು ನಿಷೇಧಿಸಿದ ಕೇಂದ್ರ

    ರಾಣಿಗೆ ಗೌರವಾರ್ಥವಾಗಿ ಬ್ರಿಟನ್‌ನಲ್ಲಿ 10 ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಅಬೆಯೊಂದಿಗಿನ ಹಳೆ ಕ್ಷಣ ನೆನೆದ ಮೋದಿ – ಜುಲೈ 9ರಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ

    ಅಬೆಯೊಂದಿಗಿನ ಹಳೆ ಕ್ಷಣ ನೆನೆದ ಮೋದಿ – ಜುಲೈ 9ರಂದು ರಾಷ್ಟ್ರೀಯ ಶೋಕಾಚರಣೆ ಘೋಷಣೆ

    ನವದೆಹಲಿ: ದುಷ್ಕರ್ಮಿಯೊಬ್ಬನ ಗುಂಡೇಟಿಗೆ ಗಂಭೀರವಾಗಿ ಗಾಯಗೊಂಡಿದ್ದ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ(62) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಮ್ಮ ಆತ್ಮೀಯನ ಅಗಲಿಕೆಯಿಂದ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಆಳವಾದ ಗೌರವದ ಸಂಕೇತವಾಗಿ ಜುಲೈ 9ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆ ನಡೆಸಲು ಸೂಚಿಸಿದ್ದಾರೆ.

    ನರೇಂದ್ರ ಮೋದಿ ತಮ್ಮ ಗೆಳೆಯ ಶಿಂಜೋ ಅಬೆಯವರ ಒಡನಾಟದ ನೆನಪನ್ನು ಭಾವುಕರಾಗಿ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮೋದಿ, ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಶಿಂಜೋ ಅಬೆ ಅವರ ದುರಂತ ನಿಧನದಿಂದ ನಾನು ಪದಗಳಲ್ಲಿ ಹೇಳಲಾಗದಷ್ಟು ಆಘಾತ ಮತ್ತು ದುಃಖಿತನಾಗಿದ್ದೇನೆ. ಅವರು ಅತ್ಯುನ್ನತ ಜಾಗತಿಕ ರಾಜಕಾರಣಿ, ಅತ್ಯುತ್ತಮ ನಾಯಕ ಹಾಗೂ ಗಮನಾರ್ಹ ಆಡಳಿತಗಾರರಾಗಿದ್ದರು. ಜಪಾನ್ ಹಾಗೂ ಜಗತ್ತನ್ನು ಉತ್ತಮವಾಗಿಸಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು – ಆಸ್ಪತ್ರೆಯಲ್ಲಿ ನಿಧನ

    ಅಬೆ ಅವರೊಂದಿಗಿನ ನನ್ನ ಒಡನಾಟ ಹಲವು ವರ್ಷಗಳ ಹಿಂದಿನದು. ನಾನು ಗುಜರಾತ್ ಸಿಎಂ ಆಗಿದ್ದಾಗ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಾನು ಪ್ರಧಾನಿಯಾದ ಬಳಿಕವೂ ನಮ್ಮ ಸ್ನೇಹ ಮುಂದುವರಿಯಿತು. ಆರ್ಥಿಕತೆ ಮತ್ತು ಜಾಗತಿಕ ವ್ಯವಹಾರಗಳ ಬಗ್ಗೆ ಅವರ ತೀಕ್ಷ್ಣವಾದ ಒಳನೋಟ ಯಾವಾಗಲೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿತ್ತು ಎಂದರು.

    ನನ್ನ ಇತ್ತೀಚಿನ ಜಪಾನ್ ಪ್ರವಾಸದ ಸಂದರ್ಭದಲ್ಲಿ ಅಬೆ ಅವರನ್ನು ಮತ್ತೊಮ್ಮೆ ಭೇಟಿ ಮಾಡಲು ಹಾಗೂ ಅನೇಕ ವಿಷಯಗಳನ್ನು ಚರ್ಚಿಸಲು ನನಗೆ ಅವಕಾಶ ಸಿಕ್ಕಿತು. ಅವರು ಎಂದಿನಂತೆ ಬುದ್ಧಿವಂತ ಮತ್ತು ಒಳನೋಟವುಳ್ಳವರಾಗಿದ್ದರು. ಆದರೆ ಅದು ನಮ್ಮ ಕೊನೆಯ ಸಭೆ ಎಂದು ನನಗೆ ತಿಳಿದಿರಲಿಲ್ಲ ಎಂದು ಆಘಾತ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು

    ಅಬೆ ಅವರು ಭಾರತ-ಜಪಾನ್ ಸಂಬಂಧಗಳನ್ನು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ಅಪಾರ ಕೊಡುಗೆ ನೀಡಿದ್ದಾರೆ. ಇಂದು, ಇಡೀ ಭಾರತ ಜಪಾನ್‌ನೊಂದಿಗೆ ದುಃಖಿಸುತ್ತಿದೆ. ಈ ಕಷ್ಟದ ಕ್ಷಣದಲ್ಲಿ ನಾವು ಜಪಾನಿನ ಸಹೋದರ-ಸಹೋದರಿಯರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

    ಮಾಜಿ ಪ್ರಧಾನಿ ಅಬೆ ಶಿಂಜೋ ಅವರಿಗೆ ನಮ್ಮ ಆಳವಾದ ಗೌರವದ ಸಂಕೇತವಾಗಿ, ಜುಲೈ 9 ರಂದು ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ದಿ. ಶಾಸಕ ಚಿಕ್ಕಮಾದು ಶ್ರದ್ಧಾಂಜಲಿಗೆ ಮಾಡಿದ್ದ ಊಟ ಕೊಳೆತು ವ್ಯರ್ಥ – ಮೈಸೂರಲ್ಲಿ 3 ದಿನದಿಂದ ದುರ್ವಾಸನೆ

    ಮೈಸೂರು: ದಿವಂಗತ ಶಾಸಕ ಚಿಕ್ಕಮಾದು ಶ್ರದ್ಧಾಂಜಲಿ ಆಚರಣೆಯಲ್ಲಿ ಆಯೋಜಕರು ಎಡವಟ್ಟು ಮಾಡಿದ್ದಾರೆ. ನಾಯಕನ ನೆನಪಿಗೆ ಭರ್ಜರಿ ಊಟ ತಯಾರಿಸಿದ್ದ ಆಯೋಜಕರು ಉಳಿದ ಅನ್ನವನ್ನ ಯಾರಿಗೂ ನೀಡದೆ ಗಬ್ಬೆದ್ದು ನಾರುವಂತೆ ಮಾಡಿದ್ದಾರೆ.

    ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ನ.28 ರಂದು ಶ್ರದ್ಧಾಂಜಲಿ ಸಭೆ ನಡೆದಿತ್ತು. ಇದಕ್ಕಾಗಿ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ನಿರೀಕ್ಷೆಯಂತೆ ಅಭಿಮಾನಿಗಳು ಬಾರದ ಹಿನ್ನೆಲೆಯಲ್ಲಿ ಮಾಡಿದ ಅಡುಗೆಯೆಲ್ಲ ಹಾಗೆ ಉಳಿದಿತ್ತು. ಉಳಿದ ಊಟವನ್ನ ಆಯೋಜಕರು ಸಮುದಾಯ ಭವನವದಲ್ಲೆ ಬಿಟ್ಟು ಹೋಗಿದ್ದು, ಇದೀಗ ಸಮುದಾಯ ಭವನವೆಲ್ಲ ಹಳಸಿದ ಆಹಾರದಿಂದ ದುರ್ವಾಸನೆ ಬೀರುತ್ತಿದೆ.

    ಎರಡು ಮೂರು ದಿನದಿಂದ ಊಟವೆಲ್ಲ ಕೊಳೆತು ದುರ್ವಾಸನೆ ಬರುತ್ತಿದ್ದು, ಸಮುದಾಯ ಭವನದ ಸುತ್ತ ಜನ ಮೂಗುಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಮುಖಂಡರು ಈವರೆಗೂ ಆಹಾರ ತೆರವುಗೊಳಿಸಿಲ್ಲ.