Tag: Mount Everest

  • ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಕಠ್ಮಂಡು: ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ (Mount Everest) ತೀವ್ರ ಹಿಮಪಾತವಾದ (Blizzard) ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

    ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    350 ಮಂದಿ ರಕ್ಷಣೆ
    ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಟಿಬೆಟ್‌ನ ಬ್ಲೂಸ್ಕೈ ತಂಡದ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಹವಾಮಾನ ವೈಪರೀತ್ಯದ ಹಿನ್ನೆಲೆ ಎವರೆಸ್ಟ್ ಪರ್ವತಾರೋಹಣಕ್ಕೆ ಟಿಕೆಟ್ ಕಾಯ್ದಿರಿಸುವಿಕೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ

  • ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಸಾವು

    ಮೌಂಟ್ ಎವರೆಸ್ಟ್ ಏರಿದ ಭಾರತೀಯ ಪರ್ವತಾರೋಹಿ ಸಾವು

    ಕಠ್ಮಂಡು: ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್(Mount Everest) ಏರಿದ ಭಾರತೀಯ ಪರ್ವತಾರೋಹಿಯೊಬ್ಬರು ಇಳಿಯುವಾಗ ಮೃತಪಟ್ಟಿದ್ದಾರೆ ಎಂದು ಪರ್ವತಾರೋಹಣ ಆಯೋಜಕರು ಶುಕ್ರವಾರ ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳದ(West Bengal) ಸುಬ್ರತಾ ಘೋಷ್(45) ಮೃತ ಪರ್ವತಾರೋಹಿ. ಗುರುವಾರ 29,032 ಅಡಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ ನಂತರ ಹಿಂತಿರುಗುವಾಗ ಹಿಲರಿ ಸ್ಟೆಪ್ಸ್(Hillary Step) ಬಳಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಾರತದ ದಾಳಿಗೆ ಬೆದರಿ ರಾವಲ್ಪಿಂಡಿಯಿಂದ ಪಾಕ್‌ ಸೇನಾ ಪ್ರಧಾನ ಕಚೇರಿ ಇಸ್ಲಾಮಾಬಾದ್‌ಗೆ ಶಿಫ್ಟ್‌!

    ಸುಬ್ರತಾ ಘೋಷ್(Subrata Ghosh) ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಿಖರವನ್ನು ತಲುಪಿದರು. ಬಳಿಕ ಪರ್ವತ ಇಳಿಯುವಾಗ ಅವರಿಗೆ ಇದ್ದಕ್ಕಿದ್ದಂತೆ ಆಯಾಸ ಮತ್ತು ಹೈಟ್ ಫೋಬಿಯಾ ಕಾಣಿಸಿಕೊಂಡಿದೆ ಎಂದು ಪರ್ವತಾರೋಹಣ ಕಂಪನಿ ಸ್ನೋವಿ ಹರೈಸನ್ ಟ್ರೆಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬೋಧರಾಜ್ ಭಂಡಾರಿ ತಿಳಿಸಿದರು. ಇದನ್ನೂ ಓದಿ: ಪಾಕ್‌ ವಿರುದ್ಧ ಅಗತ್ಯ ಇದ್ರೆ ಯುದ್ಧ ಮಾಡಿ ಅಂದಿದ್ದೆ, ಕಟ್ ಮಾಡಿ ತೋರಿಸಿ ಬಿಟ್ಟಿದ್ದಾರೆ: ಸಿದ್ದರಾಮಯ್ಯ

    ಹೆಚ್ಚು ಆಯಾಸವಾದ ಬಳಿಕ ಘೋಷ್ ಕೆಳಗೆ ಇಳಿಯಲು ನಿರಾಕರಿಸಿದರು. ಅವರ ಮಾರ್ಗದರ್ಶಿ ಚಂಪಲ್ ತಮಾಂಗ್ ಅವರನ್ನು ಕೆಳಗೆ ಕರೆತರಲು ಪ್ರಯತ್ನಿಸಿದರು. ಆದರೆ ಘೋಷ್‌ರಿಂದ ಇಳಿಯಲು ಸಾಧ್ಯವಾಗಲಿಲ್ಲ. ತಮಾಂಗ್ ಗುರುವಾರ ರಾತ್ರಿ ಒಂಟಿಯಾಗಿ ಕ್ಯಾಂಪ್‌ಗೆ ಹಿಂತಿರುಗಿ ಮಾಹಿತಿ ನೀಡಿದರು ಎಂದರು.

    ಹಿಲರಿ ಸ್ಟೆಪ್ಸ್‌ನಲ್ಲಿ ಆಮ್ಲಜನಕದ ಮಟ್ಟವು ತೀವ್ರ ಕಡಿಮೆ ಇರುವುದರಿಂದ ಈ ಪ್ರದೇಶವನ್ನು ಸಾವಿನ ವಲಯ ಎಂದೇ ಕರೆಯಲಾಗುತ್ತದೆ. ಇದನ್ನೂ ಓದಿ: ವಿದೇಶದಲ್ಲಿ ಪದವಿ ಪಡೆದ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ

    ಬುಧವಾರವಷ್ಟೇ ಫಿಲಿಪೈನ್ಸ್‌ನ ಪರ್ವತಾರೋಹಿ ಫಿಲಿಪ್ ಸ್ಯಾಂಟಿಯಾಗೊ ದಕ್ಷಿಣ ಶಿಖರವನ್ನು ಏರುವಾಗ ಸಾವನ್ನಪ್ಪಿದ್ದರು. ಸ್ಯಾಂಟಿಯಾಗೊ ನಾಲ್ಕನೇ ಹೈ ಕ್ಯಾಂಪ್ ತಲುಪಿದಾಗ ದಣಿದು, ಟೆಂಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅಸುನೀಗಿದ್ದರು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಹಿಮಾಲ್ ಗೌತಮ್ ತಿಳಸಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಸ್ಯಾಂಟಿಯಾಗೊ ಮತ್ತು ಸುಬ್ರತಾ ಘೋಷ್ ಇಬ್ಬರೂ ಸ್ನೋವಿ ಹರೈಸನ್ ಟ್ರೆಕ್ಸ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಪರ್ವತಾರೋಹಣದ ಸದಸ್ಯರಾಗಿದ್ದರು.

  • ಮೌಂಟ್‌ ಎವರೆಸ್ಟ್‌ ಇನ್ನು ಮುಂದೆ ದುಬಾರಿ| ಶುಲ್ಕ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆ?

    ಮೌಂಟ್‌ ಎವರೆಸ್ಟ್‌ ಇನ್ನು ಮುಂದೆ ದುಬಾರಿ| ಶುಲ್ಕ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆ?

    ಕಠ್ಮಂಡು: ಜಗತ್ತಿನ ಎತ್ತರದ ಪರ್ವತವಾದ ಮೌಂಟ್‌ ಎವರೆಸ್ಟ್‌ (Mount Everest) ಏರುವ ಕನಸು ಕಾಣುತ್ತಿದ್ದೀರಾ? ಹಾಗಾದ್ರೆ ಇನ್ನು ಮುಂದೆ ನೀವು ದುಬಾರಿ ಶುಲ್ಕವನ್ನು (Climbing Fees) ಪಾವತಿಸಿ ಪರ್ವತ ಏರಬೇಕು. ನೇಪಾಳ (Nepal) ಸರ್ಕಾರ 8 ವರ್ಷದ ಬಳಿಕ ದರವನ್ನು ಪರಿಷ್ಕರಿಸಿದೆ. ಶೇ.36ರಷ್ಟು ಶುಲ್ಕವನ್ನು ಏರಿಸಿ ಚಾರಣಿಗರಿಗೆ ಶಾಕ್‌ ನೀಡಿದೆ.

    ವಿದೇಶಿಯರಿಗೆ ಪರ್ವತಾರೋಹಣ ಶುಲ್ಕವನ್ನು ಈ ಮೊದಲು 11,000 ಡಾಲರ್‌ ( ಅಂದಾಜು 9 ಲಕ್ಷ ರೂ.) ಇತ್ತು. ಈಗ ಈ ಶುಲ್ಕವನ್ನು 15,000 ಡಾಲರ್‌ಗೆ(13 ಲಕ್ಷ ರೂ.) ಏರಿಕೆ ಮಾಡಿದೆ.

    ಹೊಸ ದರವು ಈ ವರ್ಷದ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಇದ್ದ 2,750 ಡಾಲರ್‌ (ಅಂದಾಜು 2.37 ಲಕ್ಷ ರ) ಶುಲ್ಕವನ್ನು 3,750 ಡಾಲರ್‌ (ಅಂದಾಜು 3.23 ಲಕ್ಷ ರೂ.) ಏರಿಸಲಾಗಿದೆ. ನೇಪಾಳಿ ಪರ್ವಾತರೋಹಿಗಳಿಗೆ 75,000 ನೇಪಾಳಿ ರೂಪಾಯಿ (545 ಡಾಲರ್‌) ಇದ್ದರೆ ಈಗ ಶುಲ್ಕವನ್ನು 1,50,000 ನೇಪಾಳಿ ರೂಪಾಯಿಗೆ(1,090 ಡಾಲರ್) ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಕಾಂತಾರ 2ಗೆ ಬಿಗ್ ರಿಲೀಫ್ – ಅಧಿಕಾರಿಗಳಿಂದ ಕ್ಲೀನ್ ಚಿಟ್

    ನೇಪಾಳ ಕೊನೆಯದಾಗಿ ಜನವರಿ 1, 2015 ರಂದು ಪರ್ವತಾರೋಹಣ ಶುಲ್ಕವನ್ನು ಪರಿಷ್ಕರಿಸಿತ್ತು. ಸಾಮಾನ್ಯವಾಗಿ ಏಪ್ರಿಲ್‌ನಿಂದ ಮೇ ವರೆಗೆ ಹೆಚ್ಚಿನ ಸಂಖ್ಯೆಯ ಚಾರಣಿಗರು ಪರ್ವತವನ್ನು ಹತ್ತಲು ಬಯಸುತ್ತಾರೆ. ಪರ್ವತ ಏರಲು ಪಾವತಿಸುವ ಅನುಮತಿ ಶುಲ್ಕ ಹಾಗೂ ವಿದೇಶಿ ಪರ್ವತಾರೋಹಿಗಳು ಮಾಡುವ ಖರ್ಚು ನೇಪಾಳ ಆದಾಯದ ಮೂಲಗಳಲ್ಲಿ ಒಂದಾಗಿದೆ.

    8,848.86 ಮೀಟರ್ ಎತ್ತರ ಹೊಂದಿರುವ ಮೌಂಟ್‌ ಎವರೆಸ್ಟ್‌ ಅನ್ನು ಎರಡು ಮಾರ್ಗ ಬಳಸಿ ಹತ್ತಬಹುದು. ನೇಪಾಳದ ಆಗ್ನೇಯ ಭಾಗ ಮತ್ತು ಟಿಬೆಟ್‌ನ ಉತ್ತರದಿಂದ ಹತ್ತಬಹುದು. ನೇಪಾಳ ಮಾರ್ಗದಲ್ಲಿ ಸವಾಲುಗಳು ಕಡಿಮೆ ಇದ್ದರೂ ಹಿಮಪಾತ, ವಿಪರೀತ ಗಾಳಿ ಬೀಸುವ ಸಾಧ್ಯತೆ ಇರುತ್ತದೆ.

     

  • 16ನೇ ವಯಸ್ಸಿಗೆ ವಿಶ್ವದ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಭಾರತದ ಬಾಲಕಿ ಸಾಧನೆ

    16ನೇ ವಯಸ್ಸಿಗೆ ವಿಶ್ವದ ಎತ್ತರದ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಭಾರತದ ಬಾಲಕಿ ಸಾಧನೆ

    ನವದೆಹಲಿ: ಭಾರತದ 16 ವಯಸ್ಸಿನ ಬಾಲಕಿ ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ್‌ (Mount Everest) ಶಿಖರವನ್ನು ನೇಪಾಳ (Nepal) ಕಡೆಯಿಂದ ಏರುವ ಮೂಲಕ ಸಾಧನೆ ಮಾಡಿದ್ದಾರೆ. ಎತ್ತರದ ಶಿಖರ ಏರಿದ ಅತ್ಯಂತ ಕಿರಿಯ ಭಾರತೀಯ ವರ್ವತಾರೋಹಿ ಎನಿಸಿಕೊಂಡಿದ್ದಾರೆ.

    ಭಾರತೀಯ ನೌಕಾಪಡೆಯ ಅಧಿಕಾರಿ ಮಗಳು ಹಾಗೂ 12ನೇ ತರಗತಿ ವಿದ್ಯಾರ್ಥಿನಿ ಕಾಮ್ಯ ಕಾರ್ತಿಕೇಯನ್‌ (Kaamya Karthikeyan), ತನ್ನ ತಂದೆ ಜೊತೆ ಏ.3 ರಂದು ಮೌಂಟ್‌ ಎವರೆಸ್ಟ್‌ ಏರುವ ಕಾರ್ಯ ಶುರುಮಾಡಿದ್ದರು. ಮೇ 20 ರಂದು 8,849 ಮೀಟರ್‌ ಎವರೆಸ್ಟ್‌ ಯಶಸ್ವಿಯಾಗಿ ಏರಿದ್ದಾರೆ. ಇದನ್ನೂ ಓದಿ: ಆರೋಪಿ ಬಂಧನಕ್ಕೆ ಏಮ್ಸ್‌ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!

    ಪಶ್ಚಿಮ ನೌಕಾ ಕಮಾಂಡ್ ಎಕ್ಸ್‌ನಲ್ಲಿ ಕಾಮ್ಯ ಫೋಟೊ ಹಂಚಿಕೊಂಡು ಆಕೆಯ ಸಾಧನೆ ಕೊಂಡಾಡಿದೆ. ಮೌಂಟ್‌ ಎವರೆಸ್ಟ್‌ ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ ಎಂದು ಬರೆದುಕೊಂಡಿದೆ.

    2020 ರಲ್ಲಿ ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹೊರಗಿನ ಅತ್ಯುನ್ನತ ಶಿಖರವಾದ ಮೌಂಟ್ ಅಕೊನ್‌ಕಾಗುವಾವನ್ನು ಏರಿದ ವಿಶ್ವದ ಅತ್ಯಂತ ಕಿರಿಯ ಹುಡುಗಿ ಎನಿಸಿಕೊಂಡಿದ್ದಾರೆ. ಏಳು ಖಂಡಗಳ ಪೈಕಿ ಆರರಲ್ಲಿ ಅತ್ಯುನ್ನತ ಶಿಖರಗಳನ್ನು ಏರುವಲ್ಲಿ ಅಪಾರ ಧೈರ್ಯ ಪ್ರದರ್ಶಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಕಾಮ್ಯಳನ್ನು ಶ್ಲಾಘಿಸಿದೆ. ಇದನ್ನೂ ಓದಿ: ಮೊದಲ ಬಾರಿ ನೈಟ್ ವಿಷನ್ ಗಾಗಲ್ಸ್ ಬಳಸಿ ವಿಮಾನ ಲ್ಯಾಂಡ್ ಮಾಡಿದ ಐಎಎಫ್

    ಎಲ್ಲಾ ಏಳು ಖಂಡಗಳ ಅತಿ ಎತ್ತರದ ಶಿಖರಗಳನ್ನು ಏರುವ ಆಕಾಂಕ್ಷೆ ಹೊಂದಿರುವ ಕಾಮ್ಯಳಿಗೆ ಭಾರತೀಯ ನೌಕಾಪಡೆ ಶುಭಹಾರೈಸಿದೆ.

  • ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ: ನೇಪಾಳ, ಚೀನಾ

    ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ: ನೇಪಾಳ, ಚೀನಾ

    ನವದೆಹಲಿ: ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಎತ್ತರ ಮತ್ತಷ್ಟು ಹೆಚ್ಚಿದೆ ಎಂದು ನೇಪಾಳ ಹಾಗೂ ಚೀನಾ ಹೇಳಿವೆ.

    ಹೊಸ ಅಧ್ಯಯನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848.86 ಮೀಟರ್ ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಘೋಷಣೆ ಮಾಡಿವೆ. ಈ ಮೂಲಕ ಮೌಂಟ್ ಎವರೆಸ್ಟ್ ಮತ್ತಷ್ಟು ಎತ್ತರ ಬೆಳೆದಿದೆ. 1954ಕ್ಕೆ ಹೋಲಿಸಿದರೆ ಮೌಂಟ್ ಎವರೆಸ್ಟ್ ಎತ್ತರ 86 ಸೆಂಟಿಮೀಟರ್ ಹೆಚ್ಚಿದೆ ಎಂದು ತಿಳಿಸಿದೆ.

    2015ರಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಹಲವು ಕಾರಣಗಳಿಂದಾಗಿ ಪರ್ವತದ ಎತ್ತರ ಹೆಚ್ಚಿರಬಹುದು ಎನ್ನಲಾಗಿದ್ದು, ನೇಪಾಳ ಸರ್ಕಾರ ನಿರ್ಧರಿಸಿತ್ತು. ಇದೀಗ ಎರಡೂ ದೇಶಗಳು ಮೌಂಟ್ ಎವರೆಸ್ಟ್ ಎತ್ತರ ಹೆಚ್ಚಿದ ಕುರಿತು ಘೋಷಿಸಿವೆ. 1954ರಲ್ಲ ಭಾರತದ ನಡೆಸಿದ ಸಮೀಕ್ಷೆ ಪ್ರಕಾರ ಮೌಂಟ್ ಎವರೆರಸ್ಟ್ ಎತ್ತರ 8,848 ಮೀ. ಇತ್ತು. ಬಳಿಕ 1975 ಹಾಗೂ 2005ರಲ್ಲಿ ಚೀನಾದ ಸರ್ವೇಯರ್‍ಗಳು ನಡೆಸಿದ 6 ಸುತ್ತಿನ ಸಮೀಕ್ಷೆ ಹಾಗೂ ಸಂಶೋಧನೆಯಲ್ಲಿ ಮೌಂಟ್ ಎವರೆಸ್ಟ್ ಎತ್ತರ 8,848.13 ಮೀಟರ್ ಹಾಗೂ 8,844.43 ಮೀ. ಎಂದು ದಾಖಲಿಸಲಾಗಿದೆ.

    ಮೌಂಟ್ ಎವರೆಸ್ಟ್ ತುದಿಯ ಮೂಲಕ ಗಡಿ ರೇಖೆ ಸಾಗುವುದಕ್ಕೆ ಒಪ್ಪಿಗೆ ನೀಡಿ 1961ರಲ್ಲಿ ಚೀನಾ ಹಾಗೂ ನೇಪಾಳ ಗಡಿ ಸಮಸ್ಯೆಯನ್ನು ಇತ್ಯರ್ಥಗೊಳಡಿಸಿಕೊಂಡಿದ್ದವು. ಮೌಂಟ್ ಎವರೆಸ್ಟ್ ನಿಖರ ಎತ್ತರ ಪತ್ತೆಯಿಂದ ಹಿಮಾಲಯ ಹಾಗೂ ಕ್ವಿನ್‍ಘೈ-ಟಿಬೆಟ್ ಪ್ರಸ್ಥಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಚೈನೀಶ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ಞನಿ ಗಾವ್ ಡೆಂಗೈ ತಿಳಿಸಿದ್ದಾರೆ.

    ಪೀಕ್ ಕ್ಲೈಂಬಿಂಗ್ ವೇಳೆ 2015ರಲ್ಲಿ ಸಂಭವಿಸಿದ ಭಾರೀ ಭೂಕಂಪನದಿಂದ ನೇಪಾಳದ ಸುಮಾರು 9 ಸಾವಿರ ಜನ ಸಾವನ್ನಪ್ಪಿದ್ದರು. ವಿಶ್ವದಲ್ಲಿನ ಅತೀ ಎತ್ತರದ 14 ಶಿಖರಗಳ ಪೈಕಿ ನೇಪಾಳದಲ್ಲಿ 7 ಪರ್ವತ ಶಿಖರಗಳಿವೆ. ಇದೀಗ ಎವರೆಸ್ಟ್ ಅಳತೆ ಮಾಡಲು ಕಳೆದ ವರ್ಷ ಮೇನಲ್ಲಿ ಸರ್ವೇ ತಂಡವನ್ನು ಕಳುಹಿಸಿತ್ತು.

  • ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    ಗಂಗಾ ನದಿಯಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನ ಆರಂಭ

    – ಪರಿಸರ ದಿನದಂದು ಘನ ತ್ಯಾಜ್ಯ ಪ್ರದರ್ಶನ

    ಕಠ್ಮಂಡು: ನಮ್ಮ ದೇಶದಲ್ಲಿ ಗಂಗಾ ನದಿ ಸ್ವಚ್ಛತಾ ಅಭಿಯಾನದಂತೆ ನೇಪಾಳದಲ್ಲೂ ಬೃಹತ್ ಸ್ವಚ್ಛತಾ ಅಭಿಯಾನವೊಂದು ಆರಂಭವಾಗಿದೆ.

    ಜಗತ್ತಿನ ಎತ್ತರದ ಮೌಂಟ್ ಎವರೆಸ್ಟ್ ಶಿಖರದ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ನೇಪಾಳದಲ್ಲಿ ಹೊಸ ವರ್ಷದ ಆಚರಣೆಯ ಅಂಗವಾಗಿ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಹಮ್ಮಿಕೊಂಡಿದೆ.

    ಏಪ್ರಿಲ್ 14 ರಿಂದ ಆರಂಭವಾಗಿರುವ ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯ ಸ್ವಚ್ಛತಾ ಅಭಿಯಾನ ಮೇ 29ಕ್ಕೆ ಮುಗಿಯಲಿದೆ. ಈಗಾಗಲೇ ಸುಮಾರು 3,000 ಕೆಜಿ ಘನ ತ್ಯಾಜ್ಯವನ್ನು ಎವರೆಸ್ಟ್ ಪರ್ವತ ಶ್ರೇಣಿಯಿಂದ ಸಂಗ್ರಹಿಸಲಾಗಿದೆ. ಒಟ್ಟು ಸುಮಾರು 10,000 ಕೆಜಿಯಷ್ಟು ತ್ಯಾಜ್ಯ ಸಂಗ್ರಹ ಗುರಿ ಹೊಂದಲಾಗಿದೆ. ಎವರೆಸ್ಟ್ ಬೇಸ್ ಕ್ಯಾಂಪಿನಲ್ಲಿ 5,000 ಕೆಜಿಗೂ ಅಧಿಕ ತ್ಯಾಜ್ಯ ಸಂಗ್ರಹವಾಗುವ ನಿರೀಕ್ಷೆಯಿದೆ. ಕ್ಯಾಂಪ್ 2 ಹಾಗೂ 3 ಸೇರಿದಂತೆ 3000 ಕೆಜಿ ತ್ಯಾಜ್ಯ ಸಂಗ್ರಹ ಗುರಿಯಿದೆ.

    ತ್ಯಾಜ್ಯದ ಜೊತೆಗೆ ಟ್ರೆಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟು ಅಲ್ಲೇ ಉಳಿದ ಶವಗಳಿದ್ದರೆ, ಅವುಗಳನ್ನು ಕೆಳಗಿಳಿಸಲಾಗುತ್ತದೆ. ಜೂನ್ 5ರ ಪರಿಸರ ದಿನದಂದು ಈ ಬೃಹತ್ ಘನ ತ್ಯಾಜ್ಯವನ್ನು ಪ್ರದರ್ಶನ ಮಾಡಿ ನಂತರ ಮರು ಬಳಕೆಗೆ ಸಂಸ್ಕರಣೆ ಮಾಡಲಾಗುತ್ತದೆ.

  • ಮೌಂಟ್ ಎವರೆಸ್ಟ್ ಸುತ್ತಿ ಬಂದ ಕಿಚ್ಚನ ಪತ್ನಿ-ಮಗಳು

    ಮೌಂಟ್ ಎವರೆಸ್ಟ್ ಸುತ್ತಿ ಬಂದ ಕಿಚ್ಚನ ಪತ್ನಿ-ಮಗಳು

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ಕಿಚ್ಚ ಸುದೀಪ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವರ ಪತ್ನಿ ಮತ್ತು ಮುದ್ದಿನ ಮಗಳು ಮೌಂಟ್ ಎವರೆಸ್ಟ್ ಸುತ್ತಾಡಿಕೊಂಡು ಬಂದಿದ್ದಾರೆ.

    ಸುದೀಪ್ ಮಲ್ಟಿ ಟ್ಯಾಲೆಂಟೆಡ್ ಆಗಿದ್ದು, ನಟನೆ, ನಿರ್ದೇಶನ, ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಹಾಡುವ ಸಾಮರ್ಥ್ಯ  ಹೊಂದಿದ್ದಾರೆ. ಅವರ ಪತ್ನಿ ಪ್ರಿಯಾ ಕೂಡ ಒಬ್ಬ ಗೃಹಿಣಿಯಾಗಿ ಮನೆಯನ್ನ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲದೆ ಇವೆಂಟ್ ಕಂಪನಿ ಹಾಗೂ ನಿರ್ಮಾಣ ಸಂಸ್ಥೆಯನ್ನೂ ನೋಡಿಕೊಳ್ಳುತ್ತಿದ್ದಾರೆ.

    ಇವುಗಳ ನಡುವೆಯೂ ಬಿಡುವು ಮಾಡಿಕೊಂಡು ಪ್ರಿಯಾ ಸುದೀಪ್ ಇತ್ತೀಚಿಗೆ ವಿಮಾನದಲ್ಲಿ ಮೌಂಟ್ ಎವೆರೆಸ್ಟ್ ಪರ್ವತವನ್ನ ಸುತ್ತಿ ಬಂದಿದ್ದಾರೆ. ಪ್ರಿಯಾ ಅವರು ಒಬ್ಬರೇ ಹೋಗದೇ ಜೊತೆಯಲ್ಲಿ ತಮ್ಮ ಮಗಳು ಸ್ವಾನಿಯನ್ನು ಕರೆದುಕೊಂಡು ಹೋಗಿದ್ದು, ಹೊಸ ವರ್ಷದ ನೆನಪಿಗಾಗಿ ಸುಮಧುರ ಕ್ಷಣಗಳನ್ನು ಕಳೆದು ಬಂದಿದ್ದಾರೆ.

    ಮೌಂಟ್ ಎವರೆಸ್ಟ್ ನಲ್ಲಿ ಕಳೆದ ಕ್ಷಣಗಳು, ಖುಷಿ, ಎಲ್ಲಾ ಅನುಭವಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. “ಹದ್ದಿನ ರೀತಿಯಲ್ಲಿ ಪರ್ವತವನ್ನ ಸುತ್ತಿದ ಹಾಗೆ ಅನುಭವ ಆಯ್ತು. ಭವ್ಯವಾದ ಮೌಂಟ್ ಎವೆರೆಸ್ಟ್ ನೋಡಿದ ಅನುಭವ ಎಂದಿಗೂ ಮರೆಯಲಾಗದು” ಎಂದು ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.