Tag: Mounam

  • ಊಹಿಸಲಾಗದ ರೋಚಕ ಟ್ವಿಸ್ಟ್- ಪ್ರೇಕ್ಷಕರಿಗೆ ಶಾಕ್ ನೀಡಿದ ಮೌನಂ!

    ಊಹಿಸಲಾಗದ ರೋಚಕ ಟ್ವಿಸ್ಟ್- ಪ್ರೇಕ್ಷಕರಿಗೆ ಶಾಕ್ ನೀಡಿದ ಮೌನಂ!

    ನಿಶಬ್ದಕ್ಕೂ ಶಬ್ದವಿದೆ ಎಂಬ ಟ್ಯಾಗ್ಲೈನ್ ಮೂಲಕ ಸದ್ದು ಮಾಡಿದ್ದ ‘ಮೌನಂ’ ಚಿತ್ರ ಇಂದು ಬಿಡುಗಡೆಯಾಗಿದೆ. ತಂದೆ-ಮಗನ ನವಿರಾದ ಬಾಂಧವ್ಯ ಇರೋ ಚಿತ್ರ ಮೌನಂ. ತಂದೆಗೆ ಮಗನೇ ಸರ್ವಸ್ವ, ಮಗನಿಗೆ ಅಪ್ಪನೇ ಪ್ರಪಂಚ ತಂದೆ ಪಾತ್ರದಲ್ಲಿ ಅವಿನಾಶ್ ಅಭಿನಯ ಅಮೋಘುವಾಗಿ ಮೂಡಿ ಬಂದಿದೆ. ಕಥೆಗೆ ತಕ್ಕಂತೆ ಹಲವು ಶೇಡ್‍ನಲ್ಲಿ ಕಾಣಿಸಿಕೊಂಡಿರುವ ಅವಿನಾಶ್ ಈ ಚಿತ್ರದ ಜೀವಾಳ. ತಂದೆ-ಮಗನ ನಡುವೆ ಪ್ರೀತಿಸುವ ಹುಡುಗಿ ಬಂದಾಗ ಏನೆಲ್ಲ ಆಗುತ್ತೆ ಅನ್ನೋದನ್ನ ಮೌನಂ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

    ಫ್ಲ್ಯಾಶ್ ಬ್ಯಾಕ್‍ನಿಂದ ಶುರುವಾಗೋ ಕಥೆ ಆರಂಭದಲ್ಲೇ ಚಿತ್ರದ ಮೇಲೆ ಸೆಳೆತ ಉಂಟು ಮಾಡುತ್ತೆ. ಇದಕ್ಕೂ ಕಥೆಗೂ ಏನು ನಂಟಿದೆ ಅನ್ನೋದಕ್ಕೆ ನೀವು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಅಪ್ಪ-ಮಗನ ಬಾಂಧವ್ಯಕ್ಕೆ ಪ್ರೀತಿಯ ಲೇಪನ ಹಚ್ಚಿರುವ ನಿರ್ದೇಶಕರು ಮಯೂರಿ, ಬಾಲಾಜಿ ಪ್ರೇಮಕಥೆಯಲ್ಲಿ ಇಟ್ಟಿರುವ ಟ್ವಿಸ್ಟ್ ಶಾಕ್ ನೀಡುತ್ತದೆ. ಅಪ್ಪ-ಮಗ ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿರುತ್ತಾರೆ ಅನ್ನೋ ವಿಷ್ಯ ನೋಡುಗರಿಗೆ ಮುಂದೇನಾಗುತ್ತೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತೆ. ಊಹಿಸಲಾರದ ಸಡನ್ ಟ್ವಿಸ್ಟ್, ಟರ್ನ್‍ಗಳು ಚಿತ್ರದಲ್ಲಿ ಸಾಕಷ್ಟಿದ್ದು ಚಿತ್ರದುದ್ದಕ್ಕೂ ಸಖತ್ ಥ್ರಿಲ್ ನೀಡುತ್ತೆ. ಇಲ್ಲಿ ಮಯೂರಿ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆಗಿ ಅಭಿನಯಿಸಿದ್ದು, ಎರಡು ಶೇಡ್ ನಲ್ಲಿಯೂ ಗಮನ ಸೆಳೆಯುತ್ತಾರೆ.

    ಚಿತ್ರ: ಮೌನಂ
    ನಿರ್ದೇಶನ: ರಾಜ್ ಪಂಡಿತ್
    ನಿರ್ಮಾಪಕ: ಶ್ರೀಹರಿ
    ಸಂಗೀತ: ಆರವ್ ರಿಶಿಕ್
    ಛಾಯಾಗ್ರಹಣ: ಶಂಕರ್
    ತಾರಾಬಳಗ: ಮಯೂರಿ, ಬಾಲಾಜಿ, ಅವಿನಾಶ್, ರಿತೇಶ್, ನಯನ, ಕೆಂಪೇಗೌಡ, ಇತರರು.

    Rating: 3.5/5

  • ಅಪ್ಪ-ಮಗನ ನವಿರಾದ ಬಾಂಧವ್ಯದ `ಮೌನಂ’ ಗೀತೆ!

    ಅಪ್ಪ-ಮಗನ ನವಿರಾದ ಬಾಂಧವ್ಯದ `ಮೌನಂ’ ಗೀತೆ!

    ಸ್ಯಾಂಡಲ್‍ವುಡ್‍ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ `ಮೌನಂ’ ಫೆಬ್ರವರಿ 21ಕ್ಕೆ ಯಶಸ್ವಿಯಾಗಿ ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರ ಒಂದಕ್ಕಿಂತ ಒಂದು ಚೆಂದದ ಹಾಡುಗಳ ರಸದೌತಣ ನೀಡುತ್ತಿದೆ. ಈ ಹಿಂದೆ ನಿನ್ನ ಉಸಿರಲ್ಲಿಯೇ ಎಂಬ ರೋಮ್ಯಾಂಟಿಕ್ ಸಾಂಗ್ ಮೂಲಕ ಗಮನ ಸೆಳೆದ ಈ ಚಿತ್ರ ಇದೀಗ ಚಿತ್ರ ಬಹು ನಿರೀಕ್ಷಿತ `ಕಂದ ನಿನ್ನ ಕನಸಿಗೆ’ ಹಾಡಿನ ವಿಡಿಯೋ ರಿಲೀಸ್ ಮಾಡಿದೆ.

    ನಿರೀಕ್ಷೆ ಹುಟ್ಟಿಸಿರುವ ಮೌನಂ ಚಿತ್ರದ ವಿಜಯ್ ಪ್ರಕಾಶ್ ಹಾಡಿರುವ ಕಂದ ನಿನ್ನ ಕನಸಿಗೆ ಎಂಬ ಹಾಡನ್ನ ಶ್ರೀ ಪರಮಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಮೌನಂ ಚಿತ್ರದ ಯಶಸ್ಸಿಗೆ ಆಶೀರ್ವದಿಸಿ, ಸಿನಿಮಾ ಬಿಡುಗಡೆಗೆ ಕಾಯ್ತಿರೋದಾಗಿ ಹೇಳಿದ್ದಾರೆ.

    ಅಪ್ಪ-ಮಗನ ಬಾಂದವ್ಯ ಈ ಹಾಡಿನಲ್ಲಿದ್ದು, ವಿಜಯ್ ಪ್ರಕಾಶ್ ಹಾಡಿರುವ ಈ ಹಾಡು ಪ್ರತಿಯೊಬ್ಬರನ್ನು ಕಾಡಲು ಶುರುಮಾಡಿದೆ. ಆರವ್ ರಿಶಿಕ್ ಸಂಗೀತ, ಆಕಾಶ್ ಎಸ್ ಸಾಹಿತ್ಯದಲ್ಲಿ ಅರಳಿದ ಈ ಹಾಡು ಮೆಚ್ಚುಗೆ ಪಡೆದುಕೊಂಡಿದೆ. ನಿಶಬ್ದಕ್ಕೂ ಶಬ್ದವಿದೆ ಎಂಬ ಟ್ಯಾಗ್ ಲೈನ್ ಮೂಲಕ ಗಮನ ಸೆಳೆದಿರುವ `ಮೌನಂ’ ಚಿತ್ರದಲ್ಲಿ ಬಾಲಾಜಿ ಶರ್ಮಾ, ನಟಿ ಮಯೂರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಹಿರಿಯ ನಟ ಅವಿನಾಶ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ಹೊಸ ಪ್ರತಿಭೆ ರಾಜ್ ಪಂಡಿತ್ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿರುವ `ಮೌನಂ’ ಚಿತ್ರ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ಸಸ್ಪೆನ್ಸ್ ಅಂಡ್ ಥ್ರಿಲ್ಲಿಂಗ್ ಸಬ್ಜೆಕ್ಟ್ ಒಳಗೊಂಡಿರೋ ಈ ಚಿತ್ರಕ್ಕೆ ಶ್ರೀಹರಿ ಬಂಡವಾಳ ಹೂಡಿದ್ದಾರೆ. ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಈ ಚಿತ್ರ ಇದೇ ತಿಂಗಳ 21ಕ್ಕೆ ಬಿಡುಗಡೆಯಾಗುತ್ತಿದೆ.

  • ‘ಮೌನಂ’ಗಾಗಿ ಕಾಯುತ್ತಿದ್ದಾರೆ ಸ್ಯಾಂಡಲ್‍ವುಡ್ ಸ್ಟಾರ್ಸ್!

    ‘ಮೌನಂ’ಗಾಗಿ ಕಾಯುತ್ತಿದ್ದಾರೆ ಸ್ಯಾಂಡಲ್‍ವುಡ್ ಸ್ಟಾರ್ಸ್!

    ನಿಶ್ಯಬ್ದಕ್ಕೂ ಶಬ್ದವಿದೆ ಎಂದು ವಿಭಿನ್ನ ಟ್ಯಾಗ್ ಲೇನ್ ಮೂಲಕವೇ ಈಗಾಗಲೇ ‘ಮೌನಂ’ ಸಿನಿಮಾ ಎಲ್ಲರ ಗಮನ ಸೆಳೆದಿದೆ. ಇದೇ ತಿಂಗಳ. 21 ರಂದು ತೆರೆಗೆ ಬರಲು ಸಜ್ಜಾಗಿರುವ ‘ಮೌನಂ’ ಚಿತ್ರಕ್ಕೆ ಇಡೀ ಚಿತ್ರರಂಗವೇ ಕಾದು ಕುಳಿತಿದೆ. ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ಸಿನಿಮಾ ಟ್ರೇಲರ್ ರಿಲೀಸ್ ಮಾಡಿ ಒಂದಷ್ಟು ಮಂದಿಗೆ ಕುತೂಹಲದ ಜೊತೆಗೆ ಗೊಂದಲವನ್ನು ಹುಟ್ಟು ಹಾಕಿದೆ. ಅದರಲ್ಲೂ ನಟ ಪ್ರಜ್ವಲ್ ದೇವರಾಜ್, ನಟಿ ತೇಜಸ್ವಿನಿ ಸೇರಿದಂತೆ ಅನೇಕರು ‘ಮೌನಂ’ ಸಿನಿಮಾದ ಟ್ರೇಲರ್ ನೋಡಿ ಸಿನಿಮಾವನ್ನ ನೋಡಲೇಬೇಕೆಂಬ ಆತುರವನ್ನ ವ್ಯಕ್ತ ಪಡಿಸಿದ್ದಾರೆ.

    ಸಿನಿಮಾದ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮಾತನಾಡಿದ್ದು, ಮೌನಂ ಸಿನಿಮಾ ವಿಭಿನ್ನವಾಗಿದೆ. ಅಪ್ಪ ಮಗನ ನಡುವಿನ ಬಾಂಧವ್ಯ ಕಾಣುತ್ತೆ. ಹೋಗ್ತಾ ಹೋಗ್ತಾ ಅವರಿಬ್ಬರೇ ವೈರಿಗಳ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಬಹಳ ವಿಭಿನ್ನವಾಗಿದೆ. ರಾಜ್ ಪಂಡಿತ್ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ಇನ್ನು ಅವಿನಾಶ್ ಅಂಕಲ್ ಲೆಜೆಂಡ್ ಇದ್ದ ಹಾಗೆ. ಅವರ ಆ?ಯಕ್ಟಿಂಗ್ ಕೂಡ ಸೂಪರ್ ಆಗಿದೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಸಿನಿಮಾ ರಿಲೀಸ್ ಗಾಗಿ ನಾನು ಕಾಯ್ತಾ ಇದ್ದೀನಿ ಎಂಬ ಮಾತನ್ನ ಹೇಳಿದ್ದಾರೆ.

    ಇನ್ನು ಇದೇ ಸಿನಿಮಾದ ಬಗ್ಗೆ ನಟಿ ತೇಜಸ್ವಿನಿ ಕೂಡ ಮಾತನಾಡಿದ್ದು, ರಾಜ್ ಪಂಡಿತ್ ಅವ್ರ ‘ಮೌನಂ’ ಚಿತ್ರದ ಟ್ರೇಲರ್ ನೋಡಿ ಸೀರಿಯಸ್ಲಿ ಫಿದಾ ಆಗೋದೆ. ಆನೆಸ್ಟ್ಲಿ ತುಂಬಾ ವಿಭಿನ್ನವಾಗಿ ಮಾಡಿದ್ದಾರೆ. ಈ ರೀತಿ ಕಥೆ ತೆಗೆದುಕೊಂಡು ಹೋಗ್ತಾರೆ ಅಂತ ನಿಜ ಗೊತ್ತಿರಲಿಲ್ಲ. ತುಂಬಾ ಕ್ಯೂರಿಯಾಸಿಟಿ ಇದೆ. ‘ಮೌನಂ’ ರಿಲೀಸ್ ಆದ ಕೂಡಲೇ ನೋಡ್ತೇನೆ. ಒಂದೊಳ್ಳೆ ಬಾಂಧವ್ಯವನ್ನ ಅಲ್ಲಿ ಕಟ್ಟಿಕೊಟ್ಟಿದ್ದಾರೆ. ಇವಾಗ್ಲೆ ಆ ಸಿನಿಮಾದ ಬಗ್ಗೆ ತಲೆಯಲ್ಲಿ ಹುಳ ಬಿಟ್ಟಾಗಿದೆ. ಸೋ ಸಿನಿಮಾಗಾಗಿ ಕಾಯ್ತಾ ಇದ್ದೀನಿ ಅಂದಿದ್ದಾರೆ.

    ಬಾಲಾಜಿ ಶರ್ಮಾ ಹಾಗೂ ಮಯೂರಿ ಮುಖ್ಯಭೂಮಿಕೆಯಲ್ಲಿದ್ದು, ಹಿರಿಯ ನಟ ಅವಿನಾಶ್ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ರಾಜ್ ಪಂಡಿತ್ ಸಿನಿಮಾ ನಿರ್ದೇಶನ ಮಾಡಿದ್ದು, ಶ್ರೀಹರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆರವ್ ರಿಶಿಕ್ ಸಂಗೀತ, ಶಂಕರ್ ಛಾಯಾಗ್ರಹಣ ಸಿನಿಮಾಗಿದೆ.

  • ದಚ್ಚು ರಿಲೀಸ್ ಮಾಡಿದ್ರು ಕುತೂಹಲ ಹುಟ್ಟಿಸೋ ‘ಮೌನಂ’ ಟ್ರೈಲರ್

    ದಚ್ಚು ರಿಲೀಸ್ ಮಾಡಿದ್ರು ಕುತೂಹಲ ಹುಟ್ಟಿಸೋ ‘ಮೌನಂ’ ಟ್ರೈಲರ್

    ಸ್ಯಾಂಡಲ್‍ವುಡ್‍ನಲ್ಲಿ ಟೈಟಲ್‍ನ ಮೂಲಕವೇ ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ ‘ಮೌನಂ’ ಸಿನಿಮಾ ಬಿಡುಗಡೆಗೆ ರೆಡಿಯಾಗಿ ನಿಂತಿದೆ. ಒಂದು ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಪ್ರೇಕ್ಷಕರೆದುರಿಗೆ ಬರುತ್ತಿರುವ ‘ಮೌನಂ’ ಚಿತ್ರದ ಟ್ರೈಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ದಾರೆ.

    ರಿಲೀಸ್ ಆದ ಟ್ರೈಲರಿನಲ್ಲಿ ಮಯೂರಿ ರಫ್ ಆ್ಯಂಡ್ ಟಫ್ ಲುಕ್‍ನ ಹಲವು ಶೇಡ್, ಮಗನನ್ನ ಹೆಚ್ಚಾಗಿ ಪ್ರೀತಿಸೋ ತಂದೆ ಅವಿನಾಶ್, ನಾಯಕ ಬಾಲಾಜಿ ಶರ್ಮಾರ ಫ್ರೀಡಂ ಎಲ್ಲವೂ ಟ್ರೈಲರಿನಲ್ಲಿ ಇದ್ದು, ಹಲವು ಭಾವನೆಗಳ ಮಿಶ್ರಣದೊಂದಿಗೆ ಕುತೂಹಲವನ್ನು ಹುಟ್ಟಿಸುವಂತಿದೆ.

    ನಿಶ್ಯಬ್ದಕ್ಕೂ ಅರ್ಥವಿದೆ ಎಂದು ಮೌನವನ್ನ ಮುರಿಯಲು `ಮೌನಂ’ ತಂಡ ರೆಡಿಯಾಗಿದೆ. ಇನ್ನೂ ಇದೊಂದು ಸೈಕಾಲಜಿಕಲ್, ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಪಂಚದಲ್ಲಿರುವ ಒಳ್ಳೆಯದು, ಕೆಟ್ಟದ್ದು ಎರಡನ್ನೂ ಮಕ್ಕಳಿಗೆ ಅರ್ಥ ಮಾಡಿಸಬೇಕೆಂಬ ಅನೇಕ ಸಂದೇಶಗಳಿವೆ. ಪ್ರೀತಿ, ಪ್ರೇಮ ಹಾಗೂ ಸ್ನೇಹ ಎಲ್ಲಾ ಭಾವನೆಗಳ ಸಮ್ಮಿಲನವಿದೆ.

    ರಾಜ್ ಪಂಡಿತ್ ಆ್ಯಕ್ಷನ್ ಕಟ್ ಹೇಳಿರೋ ಈ ಕಥೆಯಲ್ಲಿ ಜಗತ್ತಿನ ಪಾಸಿಟಿವ್, ನೆಗೆಟಿವ್, ಬ್ಯಾಡ್ ಹ್ಯಾಬಿಟ್ಸ್ ಹಾಗೂ ಹವ್ಯಾಸಕ್ಕೆ ತುತ್ತಾಗಿ ಜೀವನವನ್ನೇ ಮೌನವಾಗಿಸುವ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಶ್ರೀ ಹರಿ ರೆಡ್ಡಿ ಬಂಡವಾಳ ಹಾಕಿರುವ ‘ಮೌನಂ’ ಸಿನಿಮಾ ಒಂದೊಳ್ಳೆ ಸಂದೇಶವಿಟ್ಟು ಬರುತ್ತಿದೆ. ಸದ್ಯಕ್ಕೆ ರಿಲೀಸ್ ಆಗಿರುವ ಟ್ರೈಲರ್ ನೋಡಿ ಎಂಜಾಯ್ ಮಾಡಬೇಕಿದೆ.

  • ‘ಮೌನಂ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

    ‘ಮೌನಂ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಸ್ಯಾಂಡಲ್‍ವುಡ್‍ನಲ್ಲಿ ಬಿಡುಗಡೆಗೆ ಸಿದ್ಧವಾಗಿರೋ ವಿಭಿನ್ನ ಪ್ರಯೋಗದ ಚಿತ್ರ ‘ಮೌನಂ’. ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರವನ್ನೊಳಗೊಂಡ ಈ ಚಿತ್ರದ ಟ್ರೈಲರ್ ನಾಳೆ ಡಿ ಬೀಟ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗುತ್ತಿದೆ. ಸದಾ ಹೊಸಬರ ಪ್ರಯತ್ನಗಳಿಗೆ ಸಾರಥಿಯಾಗಿ ನಿಲ್ಲೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಮೌನಂ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

    ನಿಶಬ್ಧಕ್ಕೂ ಶಬ್ಧವಿದೆ ಎಂಬ ಟ್ಯಾಗ್ಲೈನ್ ಮೂಲಕ ಗಮನ ಸೆಳೆದಿರುವ ‘ಮೌನಂ’ ಚಿತ್ರದಲ್ಲಿ ಬಾಲಾಜಿ ಶರ್ಮಾ, ನಟಿ ಮಯೂರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಿರಿಯ ನಟ ಅವಿನಾಶ್ ಚಿತ್ರದ ಮುಖ್ಯ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ. ಸೈಕಾಲಾಜಿಕಲ್ ಸಬ್ಜೆಕ್ಟ್ ಇರೋ ಈ ಚಿತ್ರಕ್ಕೆ ರಾಜ್ ಪಂಡಿತ್ ನಿರ್ದೇಶನ ಮಾಡಿದ್ದಾರೆ. ಟೀಸರ್ ಚಿತ್ರದ ಮೇಲಿನ ಕ್ಯೂರಿಯಾಸಿಟಿಯನ್ನು ಹುಟ್ಟಿಸಿದ್ದು, ಟ್ರೈಲರ್ ಯಾವ ರೀತಿ ನಿರೀಕ್ಷೆಯನ್ನು ಮೂಡಿಸುತ್ತೆ ಅನ್ನೋದು ನಾಳೆ ರಿವೀಲ್ ಆಗಲಿದೆ.

    ರಿತೇಶ್, ಕಾಮಿಡಿ ಕಿಲಾಡಿ ಖ್ಯಾತಿಯ ನಯನ, ಸಿಂಚನ, ಕೆಂಪೇಗೌಡಸೇರಿದಂತೆ ಹಲವು ಕಲಾವಿದರು ‘ಮೌನಂ’ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಆರವ್ ರಿಶೀಕ್ ಸಂಗೀತ ಸಂಯೋಜನೆಯಲ್ಲಿ ಚಿತ್ರ ಮೂಡಿ ಬಂದಿದೆ. ಶ್ರೀಹರಿ `ಮೌನಂ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಮೋಶನಲ್ ಆಕ್ಟಿವಿಟೀಸ್‍ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಸದ್ಯದಲ್ಲೇ ಚಿತ್ರವನ್ನು ತೆರೆ ಮೇಲೆ ತರಲಿದೆ. ಚಾಲೆಂಜಿಂಗ್ ಸ್ಟಾರ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡ್ತಿರೋದು ಚಿತ್ರತಂಡಕ್ಕೆ ಸಂತಸ ನೀಡಿದೆ. ಜೊತೆಗೆ ಚಿತ್ರತಂಡದ ಕಾನ್ಫಿಡೆನ್ಸ್ ಕೂಡ ದುಪ್ಪಟ್ಟಾಗಿದೆ. ಅಂದಹಾಗೆ, ಫೆಬ್ರವರಿ 21ಕ್ಕೆ `ಮೌನಂ’ ಚಿತ್ರ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

  • ಬಹುನಿರೀಕ್ಷಿತ ‘ಮೌನಂ’ ಚಿತ್ರದ ಲಿರಿಕಲ್ ವಿಡಿಯೋ ಹಾಡು ರಿಲೀಸ್

    ಬಹುನಿರೀಕ್ಷಿತ ‘ಮೌನಂ’ ಚಿತ್ರದ ಲಿರಿಕಲ್ ವಿಡಿಯೋ ಹಾಡು ರಿಲೀಸ್

    ಸ್ಯಾಂಡಲ್‍ವುಡ್‍ನಲ್ಲಿ ಬಿಡುಗಡೆಗೆ ಸಿದ್ದವಾಗಿರುವ ವಿಶಿಷ್ಟ, ವಿಭಿನ್ನ ಕಥಾಹಂದರವಿರುವ ಚಿತ್ರ ಮೌನಂ. ನಟಿ ಮಯೂರಿ, ಹಿರಿಯ ನಟ ಅವಿನಾಶ್, ಬಾಲಾಜಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ.

    ‘ನಿನ್ನ ಉಸಿರಲ್ಲಿಯೇ’ ರೊಮ್ಯಾಂಟಿಕ್ ಹಾಡಿಗೆ ಆಕಾಶ್ ಎಸ್ ಸಾಹಿತ್ಯ ಬರೆದಿದ್ದಾರೆ. ಆರವ್ ರಿಶಿಕ್ ಸಂಗೀತ, ಅನಿರುದ್ಧ್ ಶಾಸ್ತ್ರಿ, ಶ್ವೇತಾ ದೇವನಹಳ್ಳಿ ಇಂಪಾದ ದನಿ ಈ ಹಾಡಿಗಿದೆ. ‘ಮೌನಂ’ ನಿಶ್ಯಬ್ದಕ್ಕೂ ಶಬ್ದವಿದೆ ಎಂಬ ಸಬ್ ಟೈಟಲ್ ಚಿತ್ರಕ್ಕಿದ್ದು ರಾಜ್ ಪಂಡಿತ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇಂಟೆನ್ಸಿವ್ ಸ್ಟೋರಿ ಚಿತ್ರದಲ್ಲಿದ್ದು, ಈ ರೀತಿಯ ಪ್ರಯೋಗವನ್ನು ಇಲ್ಲಿಯವರೆಗೆ ಮಾಡಿಲ್ಲ ಎನ್ನುವುದು ಚಿತ್ರತಂಡದ ಮಾತು. ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಫೆಬ್ರವರಿ 21ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ.

    ಹಿರಿಯ ನಟ ಅವಿನಾಶ್, ಮಯೂರಿ, ಬಾಲಾಜಿ ಶರ್ಮಾ, ರಿತೇಶ್ಷ, ಕೆಂಪೇಗೌಡ, ಸಿಂಚನ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಶ್ರೀಹರಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿಹಾರಿಕ ಮೂವೀಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಇನ್ನಷ್ಟು ಸ್ಯಾಂಪಲ್ ಗಳು ಸದ್ಯದಲ್ಲೇ ಬಿಡುಗಡೆಯಾಗಲಿವೆ.

  • ಮೌನಂ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಮೌನಂ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಬೆಂಗಳೂರು: ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿದೆ.

    ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ ಅವಿನಾಶ್ 6 ಶೇಡ್‍ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ.

    ಅಮೃತವರ್ಷಿಣಿ ಖ್ಯಾತಿಯ ಬಾಲಾಜಿ ಶರ್ಮಾ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ.

  • ‘ಮೌನಂ’ ಡಬ್ಬಿಂಗ್ ಮುಕ್ತಾಯ

    ‘ಮೌನಂ’ ಡಬ್ಬಿಂಗ್ ಮುಕ್ತಾಯ

    ಬೆಂಗಳೂರು:  ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಚಂದ್ರಾ ಲೇಔಟ್‍ನಲ್ಲಿರುವ ವೈನಾಟ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.

    ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ – ಅವಿನಾಶ್- (6 ಶೇಡ್‍ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.) ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ.

    ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ), ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶದ ಸುತ್ತ ಕತೆ ಸಾಗುತ್ತದೆ.

  • ಮಯೂರಿಯ ‘ಮೌನಂ’ ಮೂಡ್!

    ಮಯೂರಿಯ ‘ಮೌನಂ’ ಮೂಡ್!

    ಕಿರುತೆರೆಯಲ್ಲಿ ನಾಯಕಿ ಪಾತ್ರ ಮಾಡಿ ಪ್ರಸಿದ್ಧಿ ಪಡೆಯುತ್ತಲೇ ಹಿರಿತೆರೆಗೂ ನಾಯಕಿಯರಾಗಿ ಎಂಟ್ರಿ ಕೊಟ್ಟವರ ಪಟ್ಟಿ ದೊಡ್ಡದಿದೆ. ಅದರಲ್ಲಿ ಯಶಸ್ವಿಯಾದವರ ಪಟ್ಟಿಯೂ ಮತ್ತೊಂದಿದೆ. ಅದರಲ್ಲಿ ತಮ್ಮ ಹೆಸರನ್ನೂ ಛಾಪಿಸಿಕೊಂಡಿರೋ ನಟಿ ಮಯೂರಿ. ಜಯ ಕಾರ್ತಿಕ್ ಅವರಿಗೆ ಜೋಡಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಮಯೂರಿಯೀಗ ಸ್ಯಾಂಡಲ್‍ವುಡ್ಡಿನ ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.

    ಕೃಷ್ಣಲೀಲಾ ಚಿತ್ರದ ಮೂಲಕ ಅಜೇಯ್ ರಾವ್ ಜೋಡಿಯಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಆ ನಂತರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಿತ್ರರಂಗದಲ್ಲಿಯೂ ಗೆಲುವು ದಾಖಲಿಸಿದ ಅವರೀಗ ಮೌನಂ ಮೂಡಿಗೆ ಜಾರಿದ್ದಾರೆ!

    ಮೌನಂ ಮಯೂರಿ ನಾಯಕಿಯಾಗಿ ನಟಿಸಿರೋ ಹೊಸ ಚಿತ್ರದ ಶೀರ್ಷಿಕೆ. ನಿಹಾರಿಕಾ ಮೂವೀಸ್ ಬ್ಯಾನರಿನಡಿಯಲ್ಲಿ ಶ್ರೀಹರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಪಂಡಿತ್ ನಿರ್ದೇಶನದ ಈ ಚಿತ್ರದಲ್ಲಿ ಮಯೂರಿ ಎರಡು ಶೇಡ್ ಗಳಿರೋ ಪಾತ್ರದಲ್ಲಿ ನಟಿಸಿದ್ದಾರಂತೆ. ಅದರಲ್ಲೊಂದು ಮೌನಗೌರಿಯಂಥಾ ಹೋಮ್ಲೀ ಪಾತ್ರವಾದರೆ ಮತ್ತೊಂದು ಪಕ್ಕಾ ಮಾಸ್ ಶೇಡಿನ ಪಾತ್ರವಂತೆ.

    ವಿಶೇಷವೆಂದರೆ, ಎರಡನೇ ಶೇಡಿನ ಪಾತ್ರದಲ್ಲಿ ಮಯೂರಿ ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ನಟಿಸಿದ್ದಾರಂತೆ. ಇದು ಅವರ ಪಾಲಿಗೆ ಹೊಸಾ ಅನುಭವ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಮಯೂರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ವಿಭಿನ್ನವಾಗಿರಲಿವೆಯಂತೆ. ಅವಿನಾಶ್ ಕೂಡಾ ಅಷ್ಟೇ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪಾತ್ರಕ್ಕೆ ಬರೋಬ್ಬರಿ ಆರು ಶೇಡುಗಳಿವೆಯಂತೆ.

    ಜೀವನಕ್ಕೆ ಹತ್ತಿರವಾದ ಕಥೆ ಹೊಂದಿರೋ ಈ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಳ್ಳುತ್ತಾ ಬೇಗನೆ ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಮೌನಂ ತಮ್ಮ ಚಿತ್ರ ಜೀವನಕ್ಕೆ ಹೊಸ ಓಘ ಮತ್ತು ಮತ್ತೊಂದಷ್ಟು ಅವಕಾಶಗಳನ್ನು ತಂದು ಕೊಡಲಿದೆ ಎಂಬ ಗಾಢ ಭರವಸೆ ಮಯೂರಿಯದ್ದು.