Tag: moulvi

  • 10ರ ಬಾಲಕನಿಗೆ ಬಡಿಗೆಯಿಂದ ಥಳಿಸಿ, ಕುತ್ತಿಗೆ ಮೇಲೆ ಕಾಲಿಟ್ಟ ಮೌಲ್ವಿ..!

    10ರ ಬಾಲಕನಿಗೆ ಬಡಿಗೆಯಿಂದ ಥಳಿಸಿ, ಕುತ್ತಿಗೆ ಮೇಲೆ ಕಾಲಿಟ್ಟ ಮೌಲ್ವಿ..!

    ಹುಬ್ಬಳ್ಳಿ: ಮದರಸಾಗಳಲ್ಲಿ ಹೀಗೆಲ್ಲ ಶಿಕ್ಷಣ ಕೊಡುತ್ತಾರೆ ಅಂದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಹೌದು. ತಾನು ಹೇಳಿಕೊಟ್ಟ ಪಾಠ ಕೇಳಿಲ್ಲ ಎಂದು ಸಿಟ್ಟುಗೊಂಡ ಮೌಲ್ವಿಯೊಬ್ಬ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.

    ಹಳೆ ಹುಬ್ಬಳ್ಳಿಯ ಆನಂದ ನಗರದ ನಿವಾಸಿಯಾದ 10 ವರ್ಷದ ರಿಯಾನ್ ಹಲ್ಲೆಗೊಳಗಾದ ಬಾಲಕನಾಗಿದ್ದು, ಈತನಿಗೆ 22 ವರ್ಷದ ಸಲೀಂ ಮದ್ರಾಸಿ ಎಂಬ ಮೌಲಾ ಮನಬಂದಂತೆ ಹೊಡೆದಿದ್ದಾನೆ.

    ತಾನೂ ಹೇಳಿ ಕೊಟ್ಟ ಪಾಠವನ್ನು ಕೇಳುತಿಲ್ಲ ಎನ್ನುವ ಕಾರಣಕ್ಕೆ ಸಲೀಂ ಮದ್ರಾಸಿ ಈ ರೀತಿಯ ಶಿಕ್ಷೆ ನೀಡಿದ್ದಾನೆ. ಕೈಯಲ್ಲಿ ಇರುವ ಬಡಿಗೆಯಿಂದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ನೆಲಕ್ಕೆ ಹಾಕಿ ಕುತ್ತಿಗೆ ಮೇಲೆ ಕಾಲು ಇಟ್ಟಿದ್ದಾನೆ. ಅಲ್ಲದೆ ಮೇಲಿನಿಂದ ಎತ್ತಿ ನೆಲಕ್ಕೆ ಬಿಸಾಕಿದ್ದಾನೆ.

    ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಗಾಯಾಳು ರಿಯಾನ್ ತಂದೆ ತಾಯಿಗಳು ಮತ್ತು ಸಮಾಜ್ ಮುಖಂಡರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ-  ಸಚಿವರ ಎದುರಲ್ಲೇ ಮೌಲ್ವಿ ಪ್ರಚೋದನಕಾರಿ ಹೇಳಿಕೆ!

    ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ- ಸಚಿವರ ಎದುರಲ್ಲೇ ಮೌಲ್ವಿ ಪ್ರಚೋದನಕಾರಿ ಹೇಳಿಕೆ!

    ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟಿಲ್ ಎದುರಲ್ಲೇ ಮುಂದಿನ ತಿಂಗಳುಗಳಲ್ಲಿ ಬರುವ ಬಕ್ರೀದ್ ನಂದು ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ ನಡೆಯುತ್ತದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಇಂದು ನಡೆದ ರಂಜಾನ್ ಆಚರಣೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ ತನ್ವೀರ್ ಪೀರಾ ಎಂಬುವರು ಮುಂದಿನ ತಿಂಗಳುಗಳಲ್ಲಿ ಬಕ್ರೀದ್ ಬರುತ್ತದೆ ಆಗ ನಾವು ಗೋವುಗಳನ್ನು ಕೊಲ್ಲುತ್ತೇವೆ. ಅದನ್ನು ಸೈತಾನ್ ವಿರೋಧಿಸುತ್ತಾರೆ. ನಾವು ಇದಕ್ಕೆ ಸುಮ್ಮನೇ ಕೂರುಬಾರದು. ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಆಫೀಸ್‍ಗೆ ಬುರ್ಖಾ ಧಾರಿಗಳು ಬರೋದೇ ಬೇಡ: ಶಾಸಕ ಯತ್ನಾಳ್

    ಈ ವೇಳೆ ಸಭೆಯಲ್ಲಿಯೇ ಇದ್ದ ಸಚಿವ ಶಿವಾನಂದ ಪಾಟೀಲ್‍ರು ಮೌಲ್ವಿಗಳ ವಿರುದ್ಧ ತುಟುಕ್ ಪಿಟಕ್ ಎನ್ನದೆ ಸುಮ್ಮನೇ ಕುಳಿತಿದ್ದರು.

  • ಸೆಕ್ಸ್ ವಿಡಿಯೋ ತೋರಿಸಿ 12 ವರ್ಷದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ

    ಸೆಕ್ಸ್ ವಿಡಿಯೋ ತೋರಿಸಿ 12 ವರ್ಷದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ

    ಮುಂಬೈ: ಮೌಲ್ವಿಯೊಬ್ಬ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ 12 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಮತ್ತೊಬ್ಬ ಅಪ್ರಾಪ್ತೆಗೂ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ನಾಂದೇಡದಲ್ಲಿ ನಡೆದಿದೆ.

    ಆರೋಪಿಯನ್ನು ಮಜಲ್‍ಗಾಂವ್ ಗ್ರಾಮದಲ್ಲಿನ ಮೌಲ್ವಿ ಸಬೆರ್ ಫರೂಕಿ ಎಂದು ಗುರುತಿಸಲಾಗಿದ್ದು, ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಮೌಲ್ವಿ ಪರಾರಿಯಾಗಿದ್ದಾನೆ. ಆರೋಪಿ ವಿರುದ್ಧ ದೂರು ನೀಡದಂತೆ ಅದೇ ಗ್ರಾಮದ ಮೂವರು ರಾಜಕಾರಣಿಗಳು ಸಂತ್ರಸ್ತೆಯ ತಾಯಿಗೆ ಒತ್ತಾಯಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಮೂವರು ರಾಜಕಾರಣಿಗಳಾದ ಖಲೀಲ್ ಪಟೇಲ್, ನವಾಬ್ ಪಟೇಲ್ ಮತ್ತು ಐಬ್ರಿಶ್ ಬಗ್ವಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ನವಾಬ್ ಪಟೇಲ್ ನಾಂದೇಡ್ ನಗರ ಘಟಕದ ಮಾಜಿ ಅಧ್ಯಕ್ಷನಾಗಿದ್ದನು. ಬಗ್ವಾನ್ ಮಜಲ್‍ಗಾಂವ್ ನ ತಾಲೂಕು ಅಧ್ಯಕ್ಷನಾಗಿದ್ದ. ಖಲೀಲ್‍ಪಟೇಲ್ ಮಾಜಿ ಕೌನ್ಸಿಲರ್ ಆಗಿದ್ದನು ಎಂದು ತಿಳಿದು ಬಂದಿದೆ.

    ಕೆಲವು ದಿನಗಳ ಹಿಂದೆ ನಾಂದೇಡದ ಡಿಗ್ಲರ್ ನಾಕದಲ್ಲಿನ ಇಸ್ಲಾಮಿಯಾ ಅರೇಬಿಯಾ ಸೆಮಿನರಿಯಲ್ಲಿ ಬಾಲಕಿಯ ಮೇಲೆ ಫರೂಕಿ ಅತ್ಯಾಚಾರ ಎಸಗಿದ್ದಾನೆ. ಮರಾಠವಾಡ ಪ್ರದೇಶದ ಅನೇಕ ಹೆಣ್ಣು ವಿದ್ಯಾರ್ಥಿಗಳು ಮದ್ರಸಾದಲ್ಲಿ ಅಧ್ಯಯನ ನಡೆಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತನ್ನ ಮೊಬೈಲ್ ಫೋನ್‍ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಗಿದ್ದಾನೆ. ಅಷ್ಟೇ ಅಲ್ಲದೇ 8 ವರ್ಷದ ಮತ್ತೊಬ್ಬ ಹುಡುಗಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡಲು ವಿಶೇಷ ತನಿಖಾ ತಂಡ(ಎಸ್‍ಐಟಿ) ನೇಮಿಸಲಾಗಿದೆ.

    ಆರೋಪಿಯ ವಿರುದ್ಧ ಮತ್ತಷ್ಟು ದೂರುಗಳನ್ನು ದಾಖಲಿಸಬಹುದಾಗಿದೆ. ಪೊಲೀಸರು ಮದ್ರಸಾದಿಂದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಹಾಗೂ ತಂಡಗಳು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ ಎಂದು ಎಸ್‍ಐಟಿ ಮುಖ್ಯಸ್ಥೆ ಸುನೀತಾ ಬೋರ್ ಗಾಂವ್ಕರ್ ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಸಂತ್ರಸ್ತೆಯ ತಾಯಿಯೊಂದಿಗೆ ಆರೋಪಿ ಫರೂಕಿ ರಾಜಿ ಮಾಡಿಕೊಳ್ಳುವಂತೆ ಮಾತನಾಡಲು ಬಂದಿದ್ದ. ಆದ್ರೆ ಸ್ಥಳೀಯ ಯುವಕ ಆತನಿಗೆ ಥಳಿಸಿದ್ದರು ಎಂದು ವರದಿಯಾಗಿದೆ.

     

  • ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

    ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿ ಬಂಧನ

    ಹಾವೇರಿ: ಯುವತಿಯ ಫೋಟೋ ಕ್ಲಿಕ್ಕಿಸಿದ ಮೌಲ್ವಿಯನ್ನ ಜಿಲ್ಲೆಯ ಬ್ಯಾಡಗಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನ ಮೊಹಮ್ಮದ್ ಶಹಜಮಾಲ್ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಶಹಜಮಾಲ್ ಮೂಲತಃ ಪಶ್ಚಿಮ ಬಂಗಾಳದ ಇಸ್ಲಾಂಪುರ ನಿವಾಸಿ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಧರ್ಮ ಬೋಧನೆ ಮಾಡಿಕೊಂಡಿದ್ದನು.

    ಭಾನುವಾರ ಯುವತಿ ದರ್ಗಾದ ಬಳಿ ಇದ್ದ ಅಂಗಡಿವೊಂದಕ್ಕೆ ತೆರಳಿದ್ದಾರೆ. ಈ ವೇಳೆ ಮೌಲ್ವಿ ಯುವತಿಯ ಫೋಟೋ ತೆಗೆದಿದ್ದಾನೆ. ಅದನ್ನು ಗಮನಿಸಿದ ಯುವತಿ ಮೌಲ್ವಿಯ ಮೊಬೈಲ್ ಕಸಿದುಕೊಂಡು ತಂದೆಗೆ ವಿಚಾರ ತಿಳಿಸಿದ್ದಾರೆ. ನಂತರ ತಂದೆ ಜೊತೆಗೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.

     

  • ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತದೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅರೆಸ್ಟ್

    ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತದೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅರೆಸ್ಟ್

    ಹುಬ್ಬಳ್ಳಿ: ನಗರದ ಗಣೇಶ್ ಪೇಟೆ ಪಾಕಿಸ್ತಾನದ ಹಾಗೆ ಕಾಣುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿಯನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಖೈರಾತಿಯನ್ನು ನಾಲ್ಕನೇ ಜೆಎಂಎಫ್‍ಸಿ ನ್ಯಾಯಾಧೀಶೆ ದೀಪ್ತಿ ನಾಡಗೌಡ ಅವರೆದುರು ಹಾಜರುಪಡಿಸಲಾಗಿದ್ದು, 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೌಲ್ವಿ ವಿರುದ್ಧ ಶಾಂತಿ ಭಂಗ ಮತ್ತು ಪ್ರಚೋದನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿತ್ತು.

    ಏನಿದು ಪ್ರಕರಣ?: ನಗರದ ಗಣೇಶ್ ಪೇಟೆಯಲ್ಲಿ ಶನಿವಾರ ನಡೆದ ಈದ್ ಮಿಲಾದ್ ಹಬ್ಬದ ವೇಳೆ ಗಣೇಶ ಪೇಟೆಯ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಎನ್ನುವ ಮೌಲ್ವಿ, ಗಣೇಶ ಪೇಟೆ ನನಗೆ ಪಾಕಿಸ್ತಾನದಂತೆ ಕಾಣುತ್ತದೆ. ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ. ನಾವು ಒಗ್ಗಟ್ಟಿನಿಂದ ಹಾಗೂ ಎದೆ ಸೆಟೆದು ನಡೆದರೆ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ಮೌಲ್ವಿಯ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಮೌಲ್ವಿ ಈ ರೀತಿ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲೇ ಉತ್ತರ ವಲಯ ಎಸಿಪಿ ದಾವೂದ್ ಖಾನ್ ಹಾಗೂ ಪೊಲೀಸರು ಇದ್ದರು. ಪೊಲೀಸರ ಎದುರು ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಪೊಲೀಸರು ಸುಮ್ಮನೆ ಕುಳಿತುಕೊಂಡಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

  • ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತೆ- ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

    ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದಂತೆ ಕಾಣುತ್ತೆ- ಮೌಲ್ವಿಯಿಂದ ವಿವಾದಾತ್ಮಕ ಹೇಳಿಕೆ

    ಹುಬ್ಬಳ್ಳಿ: ನಗರದ ಗಣೇಶ ಪೇಟೆ ನನಗೆ ಪಾಕಿಸ್ತಾನದಂತೆ ಕಾಣುತ್ತದೆ. ಪಾಕಿಸ್ತಾನಕ್ಕೆ ಹೋಗುವ ಅವಶ್ಯಕತೆ ಇಲ್ಲ ಎಂದು ಮೌಲ್ವಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿಯ ಗಣೇಶ್ ಪೇಟೆಯಲ್ಲಿ ಶನಿವಾರ ನಡೆದ ಈದ್ ಮಿಲಾದ್ ಹಬ್ಬದ ವೇಳೆ ಗಣೇಶ ಪೇಟೆಯ ಮಜೀದ ಮುತವಲಿ ಅಬ್ದುಲ್ ಹಮೀದ್ ಖೈರಾತಿ ಎನ್ನುವ ಮೌಲ್ವಿಯೇ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

    ಗಣೇಶ್ ಪೇಟೆ ನನಗೆ ಪಾಕಿಸ್ತಾನ ಹಾಗೇ ಕಾಣುತ್ತಿದೆ, ಪಾಕಿಸ್ತಾನಕ್ಕೆ ಹೋಗಿ ನೋಡುವ ಅವಶ್ಯಕತೆ ಇಲ್ಲ. ಇಲ್ಲಿಯೇ ಪಾಕಿಸ್ತಾನ ನಿರ್ಮಾಣವಾಗಿದೆ. ನಾವು ಒಗ್ಗಟ್ಟಿನಿಂದ ಹಾಗೂ ಎದೆ ಸೆಟೆದು ನಡೆದರೆ ನಮ್ಮ ತಂಟೆಗೆ ಯಾರೂ ಬರುವುದಿಲ್ಲ ಎಂದು ಹೇಳಿದ್ದಾರೆ.

    ಮೌಲ್ವಿಯ ಈ ಹೇಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಮೌಲ್ವಿ ಈ ರೀತಿ ಹೇಳಿಕೆ ನೀಡುವಾಗ ಅವರ ಪಕ್ಕದಲ್ಲೇ ಉತ್ತರ ವಲಯ ಎಸಿಪಿ ದಾವೂದ್ ಖಾನ್ ಹಾಗೂ ಪೊಲೀಸರು ಇದ್ದರು. ಪೊಲೀಸರ ಎದುರು ವಿವಾದಾತ್ಮಕ ಹೇಳಿಕೆ ನೀಡಿದ್ದರು ಪೊಲೀಸರು ಸುಮ್ಮನೆ ಕುಳಿತುಕೊಂಡಿದ್ದಕ್ಕೆ ವ್ಯಾಪಕ ಟೀಕೆ ಬಂದಿದೆ.

    ವಿವಾದಾತ್ಮಕ ಹೇಳಿಕೆ ನೀಡಿದ್ರು ಸುಮ್ಮನೇ ಕುಳಿತ ಪೊಲೀಸರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇಂತ ದೇಶದ್ರೋಹ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ ಮೌಲ್ವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.


  • ಮಹಿಳೆಯೊಂದಿಗೆ ಕಾಮದಾಟ ನಡೆಸಿದ್ದ ಮೌಲ್ವಿಗೆ ಜಮಾತ್ ಸದಸ್ಯರಿಂದ ಧರ್ಮದೇಟು..!

    ಮಹಿಳೆಯೊಂದಿಗೆ ಕಾಮದಾಟ ನಡೆಸಿದ್ದ ಮೌಲ್ವಿಗೆ ಜಮಾತ್ ಸದಸ್ಯರಿಂದ ಧರ್ಮದೇಟು..!

    ಉಡುಪಿ: ಮೌಲ್ವಿಯೊಬ್ಬನ ಕಾಮಪ್ರಸಂಗ ಬೀದಿಗೆ ಬಂದಿದೆ. ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಮೌಲ್ವಿಯೊಬ್ಬ ಪರಸ್ತ್ರೀ ಸಂಗ ನಡೆಸಲು ಹೋಗಿ ಊರ ಮಂದಿಯಿಂದ ಧರ್ಮದೇಟಿಗೆ ಒಳಗಾಗಿದ್ದಾನೆ.

    ಜಮಾತ್ ಸದಸ್ಯರೇ ಸೇರಿ ಮೌಲ್ವಿ ಖತೀಬ್ ನ ಚಳಿ ಬಿಡಿಸಿದ್ದಾರೆ. ಈ ವಿಡಿಯೋ ತುಣುಕು ಇದೀಗ ವಾಟ್ಸಪ್, ಫೇಸ್ ಬುಕ್ ನಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

    ಉಡುಪಿಯ ಕಾಪು ತಾಲೂಕಿನ ಬೆಳಪು ಮಸೀದಿಯಲ್ಲಿ ಈ ಘಟನೆ ನಡೆದಿದೆ. ಕೆಲವು ತಿಂಗಳ ಹಿಂದಷ್ಟೇ ಬೆಳಪು ಮಸೀದಿಗೆ ಖತೀಬ್ ಮುಖ್ಯ ಧರ್ಮಗುರುವಾಗಿ ನೇಮಕಗೊಂಡಿದ್ದ. ನಂತರ ಈತ ವಿವಾಹಿತ ಮಹಿಳೆಯೊಬ್ಬರ ಜೊತೆ ಸಖ್ಯ ಬೆಳೆಸಿದ್ದ. ಧಾರ್ಮಿಕ ವಿಚಾರ ಹೇಳುತ್ತಲೇ ಆಕೆಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್ ವೊಂದಕ್ಕೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ದುರಾದೃಷ್ಟಕ್ಕೆ ಆ ಮಹಿಳೆಯ ಸಂಬಂಧಿಕರೊಬ್ಬರು ಇವರನ್ನು ಕಂಡಿದ್ದು ತಕ್ಷಣ ಬೆಳಪು ಮಸೀದಿಯ ಆಡಳಿತ ಮಂಡಳಿಯವ್ರಿಗೆ ತಿಳಿಸಿದ್ದಾರೆ.

    ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು, ಹೆಣ್ಣು ಮಕ್ಕಳು ಹೇರ್ ಸ್ಟ್ರೈಟ್ನಿಂಗ್ ಮಾಡಬಾರದು, ಮೇಕಪ್ ಮಾಡಬಾರದೆಂದು ಈತ ಉಪದೇಶ ಮಾಡುತ್ತಿದ್ದ. ಬಾಯಲ್ಲಿ ಉಪದೇಶ ಮಾಡುವ ನಿಮ್ಗೆ ಪರಸ್ತ್ರೀ ಜೊತೆ ಕಾಮದಾಟ ನಡೆಸಲು ನಾಚಿಕೆಯಾಗೋದಿಲ್ವೇ ಅಂತ ಪ್ರಶ್ನಿಸಿ ಜಮಾತ್ ಸದಸ್ಯರು ಧರ್ಮದೇಟು ನೀಡಿದ್ದಾರೆ.

    ಸದ್ಯ ಬೆಳಪು ಮಸೀದಿಯಿಂದ ಮೌಲ್ವಿಯನ್ನು ಹೊರದಬ್ಬಲಾಗಿದೆ. ಈ ಕುರಿತು ಇಲ್ಲಿಯವರೆಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.