Tag: moulvi

  • ಉದಯಗಿರಿ ದಾಂಧಲೆ ಕೇಸ್- ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಗೆ ನ್ಯಾಯಾಂಗ ಬಂಧನ

    ಉದಯಗಿರಿ ದಾಂಧಲೆ ಕೇಸ್- ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿಗೆ ನ್ಯಾಯಾಂಗ ಬಂಧನ

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ದಾಂಧಲೆ ಪ್ರಕರಣ ಸಂಬಂಧ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ (Moulvi) ಮುಸ್ತಾಕ್ ಮಕ್ಬೋಲಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ನೀಡಿದೆ.

    2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದ್ದು, ಆರೋಪಿಯನ್ನು ಸಿಸಿಬಿ ಪೊಲೀಸರು ಮೈಸೂರು ಜೈಲಿನತ್ತ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಪುತಿನ, ಕೆಎಸ್‌ನ ಟ್ರಸ್ಟ್‌ಗಳ ಚಟುವಟಿಕೆಗಳಿಗೆ ಸರ್ಕಾರದ ನೆರವು: ಸಚಿವ ಚಲುವರಾಯಸ್ವಾಮಿ

    ಫೆ. 10ರಂದು ಉದಯಗಿರಿ ಪೊಲೀಸ್ ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸಿತ್ತು. ಇದಕ್ಕೂ ಮುನ್ನ ಆರೋಪಿ ಮೌಲ್ವಿ ಮುಫ್ತಿ ಮಕ್ಬೋಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಇದನ್ನೂ ಓದಿ: ಸ್ಟಾರ್ಕ್‌ ದಾಖಲೆ ಉಡೀಸ್‌ – ಕಡಿಮೆ ಎಸೆತಗಳಲ್ಲಿ 200 ವಿಕೆಟ್‌ ಪಡೆದು ಶಮಿ ರೆಕಾರ್ಡ್‌

    ಪ್ರಕರಣ ನಡೆದ 11 ದಿನಗಳ ಬಳಿಕ ಆರೋಪಿ ಮೌಲ್ವಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬ್ಲ್ಯಾಕ್ ಪೇಪರ್ ಬಿಡುಗಡೆ: ಬೊಮ್ಮಾಯಿ

  • ಮೈಸೂರಿನ ಉದಯಗಿರಿ ಠಾಣೆ ಗಲಭೆ ಕೇಸ್‌ – ಪ್ರಚೋದನೆ ನೀಡಿದ್ದ ಮೌಲ್ವಿ 11 ದಿನಗಳ ಬಳಿಕ ಅರೆಸ್ಟ್‌

    ಮೈಸೂರಿನ ಉದಯಗಿರಿ ಠಾಣೆ ಗಲಭೆ ಕೇಸ್‌ – ಪ್ರಚೋದನೆ ನೀಡಿದ್ದ ಮೌಲ್ವಿ 11 ದಿನಗಳ ಬಳಿಕ ಅರೆಸ್ಟ್‌

    ಮೈಸೂರು: ಉದಯಗಿರಿ ಪೊಲೀಸ್ ಠಾಣೆ (Udayagiri Police Station) ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣ ಮಾಡಿದ್ದ ಮೌಲ್ವಿ ಮುಫ್ತಿ ಮುಸ್ತಾಕ್ ಮಕ್ಬೋಲಿಯನ್ನ ಸಿಸಿಬಿ ಪೊಲೀಸರು (CCB Police) ಕೊನೆಗೂ ಬಂಧಿಸಿದ್ದಾರೆ.

    ಗಲಭೆ ನಡೆದ 11 ದಿನಗಳ ಬಳಿಕ ಮೌಲ್ವಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಮುಂಜಾಗ್ರತ ಕ್ರಮವಾಗಿ ಉದಯಗಿರಿ ಪೊಲೀಸ್ ಠಾಣೆಗೆ ಬಿಗಿ ಬಂದೂಬಸ್ತ್ ನಿಯೋಜಿಸಲಾಗಿದೆ. ಇದನ್ನೂ ಓದಿ: ಚಿನ್ನದಂಗಡಿ ದೋಚಿ ಸಲೀಸಾಗಿ ನಾಕಬಂದಿ ದಾಟಿದ ಕಳ್ಳರು – ಮೂವರು ಪೊಲೀಸರು ಸಸ್ಪೆಂಡ್

    ಉದ್ರಿಕ್ತ ಭಾಷಣ ಮಾಡಿದ್ದ ಮೌಲ್ವಿ:
    ಇದೇ ಫೆ.10ರಂದು ಉದಯಗಿರಿ (Udayagiri) ಠಾಣೆ ಮೇಲೆ ಮುಸ್ಲಿಂ ಯುವಕರ ಗುಂಪು ಕಲ್ಲು ತೂರಾಟ ನಡೆಸುವುದಕ್ಕೂ ಮುನ್ನವೇ ಮೌಲ್ವಿ (Moulvi) ಮುಫ್ತಿ ಮುಷ್ತಾಕ್ ಮಕ್ಬೋಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಈತನ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದನ್ನೂ ಓದಿ: ಮುಡಾ ಕೇಸ್‌, ಸಿಎಂಗೆ ಕ್ಲೀನ್‌ ಚಿಟ್‌ – 11,200 ಪುಟಗಳ ತನಿಖಾ ವರದಿ ಸಲ್ಲಿಕೆ

    ಮೌಲ್ವಿ ಭಾಷಣದಲ್ಲಿ ಹೇಳಿದ್ದೇನು?
    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ. ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತೂ ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಮಾತನಾಡಿದ್ದ.

    ನಿಮ್ಮ ಇಚ್ಚೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳನ್ನ ಬೇಕಾದ್ರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದ. ಇದನ್ನೂ ಓದಿ: ಚಿನ್ನದಂಗಡಿ ದೋಚಿ ಸಲೀಸಾಗಿ ನಾಕಬಂದಿ ದಾಟಿದ ಕಳ್ಳರು – ಮೂವರು ಪೊಲೀಸರು ಸಸ್ಪೆಂಡ್

  • ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ: ಉದಯಗಿರಿ ದಾಂಧಲೆಗೂ ಮುನ್ನ ಮೌಲ್ವಿ ಪ್ರಚೋದನಕಾರಿ ಭಾಷಣ

    ಮೈಸೂರು: ಇಲ್ಲಿನ ಉದಯಗಿರಿಯಲ್ಲಿ (Udayagiri) ನಡೆದ ಕಲ್ಲು ತೂರಾಟ ಪ್ರಕರಣಕ್ಕೂ ಮುನ್ನ ಮೌಲ್ವಿಯೊಬ್ಬರು (Moulvi) ಪ್ರಚೋದನಕಾರಿ ಭಾಷಣ ಮಾಡಿರುವ ವೀಡಿಯೋ ವೈರಲ್ ಆಗಿದೆ.

    ಮೈಕ್ ಹಿಡಿದು ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ಮೌಲ್ವಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಲ್ಲು ಹೊಡೆಯುವುದು ಮುಸ್ಲಿಂ ಧರ್ಮದಲ್ಲೇ ಇದೆ: ಪ್ರತಾಪ್ ಸಿಂಹ

    ಧರ್ಮಕ್ಕಾಗಿ ಬದುಕಿರುವ ಮುಸ್ಲಿಮರು ಇನ್ನೂ ಇದ್ದಾರೆ. ಧರ್ಮ ರಕ್ಷಣೆಯ ಬದ್ಧತೆ ನಿನ್ನೆನೂ ಇತ್ತು, ಇವತ್ತು ಇದೆ. ಎಲ್ಲಾ ಘೋಷಣೆ ಕೂಗಿ ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ. ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು, ಮರಣದಂಡನೆ ವಿಧಿಸಬೇಕು ಎಂದು ಮೌಲ್ವಿ ಮಾತನಾಡಿದ್ದಾರೆ.

    ನಿಮ್ಮ ಇಚ್ಚೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುದು. ಮೈಸೂರಿನ ಎಲ್ಲಾ ಮುಸ್ಲಿಮರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಅವಶ್ಯಕತೆ ಬಂದರೆ ನಮ್ಮ ತಲೆ ಬೇಕಾದರೂ ಕತ್ತರಿಸಿಕೊಳ್ಳುತ್ತೇವೆ. ನಮ್ಮ ಮಕ್ಕಳ ತಲೆ ಬೇಕಾದರೂ ಬಲಿಕೊಡುತ್ತೇವೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಇದನ್ನೂ ಓದಿ: ಮೈಸೂರು: ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಠಾಣೆ ಮೇಲೆಯೇ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ

  • ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

    ಉಡುಪಿ| ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯಿಂದ ಪ್ರಾರ್ಥನೆ – ಹಿಂದೂ ಸಂಘಟನೆಗಳ ಅಸಮಾಧಾನ

    – ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
    ಉಡುಪಿ: ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬರು ಪ್ರಾರ್ಥನೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
    ಗ್ರಾಪಂ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಮಾಡುತ್ತಿರುವ ವೀಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಹಿಂದೂ ಸಂಘಟನೆಗಳು ಅಸಮಾಧಾನ ಹೊರಹಾಕಿವೆ.
    ಪಂಚಾಯತ್ ಉಪಾಧ್ಯಕ್ಷ ಅಧಿಕಾರ ಸ್ವೀಕರಿಸುವ ವೇಳೆ ಮುಸ್ಲಿಂ ಮೌಲ್ವಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಗಂಗೊಳ್ಳಿಯಲ್ಲಿ ಕಾಂಗ್ರೆಸ್-ಎಸ್‌ಡಿಪಿಐ ಅಧಿಕಾರ ಹಂಚಿಕೆ ವೇಳೆ ಘಟನೆ ನಡೆದಿದೆ.
    ಈ ಗ್ರಾಮ ಪಂಚಾಯಿತಿಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಎಸ್‌ಡಿಪಿಐ ಮುಖಂಡರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಮುಸ್ಲಿಂ ಮೌಲ್ವಿ ದುವಾ ಮಾಡಿಸಿದ್ದಾರೆ.
    ಕಾಂಗ್ರೆಸ್ ಸದಸ್ಯೆ ಜಯಂತಿ ಖಾರ್ವಿ ಎಂಬವರಿಗೆ ಅಧ್ಯಕ್ಷ ಸ್ಥಾನ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯ ತಬ್ರೇಜ್‌ಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ. ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ವೇಳೆ ಮೌಲ್ವಿ ಕರೆಸಿ ಪ್ರಾರ್ಥನೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
    ಗುರುವಾರ ಸಂಜೆ ದುವಾ- ಶುಕ್ರವಾರ ಬೆಳಗ್ಗೆ ಗಣಹೋಮ
    ಗುರುವಾರ ಸಂಜೆ ಉಪಾಧ್ಯಕ್ಷ ತಬ್ರೇಸ್ ಮುಸ್ಲಿಂ ಧಾರ್ಮಿಕ ಪ್ರಾರ್ಥನೆ ಮಾಡಿದ ಬಗ್ಗೆ ಅಕ್ಷೇಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಶುಕ್ರವಾರ ಕಾಂಗ್ರೆಸ್ ಸದಸ್ಯರಿಂದ ಗಂಗೊಳ್ಳಿ ಪಂಚಾಯತ್‌ನಲ್ಲಿ ಗಣಪತಿ ಹೋಮ ನಡೆಸಲಾಗಿದೆ.
    ಪಂಚಾಯತ್ ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಗಣಪತಿ ಹೋಮ ನಡೆದಿದೆ. 30 ವರ್ಷ ಬಿಜೆಪಿ ತೆಕ್ಕೆಯಲ್ಲಿದ್ದ ಪಂಚಾಯತ್ ಅಧಿಕಾರ, ಎರಡು ದಶಕದ ಬಳಿಕ ಕಾಂಗ್ರೆಸ್‌ ಪಾಲಾಗಿದೆ. ಎಸ್‌ಡಿಪಿಐ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ ಅಧಿಕಾರ ಹಿಡಿದಿದೆ. 12 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‌ಗೆ ಎಸ್‌ಡಿಪಿಐನ ಏಳು ಸದಸ್ಯರು ಬೆಂಬಲ ನೀಡಿದ್ದಾರೆ. ಪಂಚಾಯತ್‌ನಲ್ಲಿ ಬಿಜೆಪಿ 12 ಸದಸ್ಯ ಬಲ ಹೊಂದಿದೆ.
  • ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಹುಬ್ಬಳ್ಳಿ: ಇಲ್ಲಿನ ಗಲಭೆ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿವೆ. ಗಲಭೆ ವೇಳೆ ಉದ್ರಿಕ್ತರ ಗುಂಪು ಇಬ್ಬರು ಪೊಲೀಸ್ ಕಾನ್ಸ್ ಟೇಬಲ್‍ಗಳ ಹತ್ಯೆಗೆ ಪ್ರಯತ್ನಿಸಿದೆ. ಆದರೆ ಅದೃಷ್ಟವಶಾತ್ ಆ ಇಬ್ಬರು ಪೊಲೀಸರು ಪ್ರಾಣಾಯದಿಂದ ಪಾರಾಗಿದ್ದಾರೆ.

    HUBBALLI_ MOULVI 1

    ಕಬಾಸ್‍ಪೇಟೆ ಠಾಣೆಯ ಅನಿಲ್ ಖಾಂಡೇಕರ್ ಮತ್ತು ಮಂಜುನಾಥ್ ನೀಡಿರುವ ದೂರಿನ ಆಧಾರದ ಮೇಲೆ ಕಬಾಸ್‍ಪೇಟೆ ಠಾಣೆಯಲ್ಲಿ ಎಫ್‍ಐಆರ್ ನಮೂದಾಗಿದೆ. ಮಾರ್ಚ್ 16ರ ರಾತ್ರಿ ಗಲಾಟೆ ವಿಚಾರ ತಿಳಿದು ಹಳೇ ಹುಬ್ಬಳ್ಳಿ ಠಾಣೆ ಕಡೆಗೆ ಬೈಕಲ್ಲಿ ತೆರಳುವಾಗ ದಿಡ್ಡಿ ಓಣಿ ಹನುಮಪ್ಪನ ಗುಡಿ ಬಳಿ 100ರಿಂದ 150 ಜನರಿದ್ದ ಉದ್ರಿಕ್ತರ ಗುಂಪು ನಮ್ಮ ಬೈಕ್ ತಡೆದು, ನಿಂದಿಸುತ್ತಾ ಹಲ್ಲೆಗೆ ಯತ್ನಿಸಿತು. ಇದನ್ನೂ ಓದಿ: ಮಸೀದಿ ಮೈಕ್ ವಿರುದ್ಧ ಕ್ರಮಕ್ಕೆ ಡೆಡ್‍ಲೈನ್- ರಂಜಾನ್ ಒಳಗೆ ತೆರವಾಗದಿದ್ರೆ ಮಹಾ ಆರತಿ ಎಚ್ಚರಿಕೆ

    ಪ್ರವಾದಿ ಅಪಮಾನಿಸಿದ ಆರೋಪಿಯನ್ನು ಏಕೆ ಇನ್ನೂ ಬಂಧಿಸಿಲ್ಲ ಎಂದು ಅವಾಜ್ ಹಾಕಿದ್ರು. ಕೊನೆಗೆ ನಾವು ಬೈಕ್ ಬಿಟ್ಟು ಸ್ವಲ್ಪ ಮುಂದೆ ಹೋದಾಗ, ಇವ್ರನ್ನು ಬಿಡಬ್ಯಾಡ ಕೊಲ್ರಿ ಎಂಬ ಧ್ವನಿ ಕೇಳಿಬಂತು. ಇದರಿಂದ ಪ್ರಚೋದನೆಗೊಂಡ ಐದಾರು ಮಂದಿ ಪುಂಡರು, ಕೊಲೆ ಮಾಡುವ ಉದ್ದೇಶದಿಂದಲೇ ನಮ್ಮ ಮೇಲೆ ಸೈಜು ಗಲ್ಲು ಎಸೆದ್ರು. ಇದ್ರಿಂದ ನಾವು ತಪ್ಪಿಸಿಕೊಂಡೆವು. ಇದೇ ಕೋಪದಲ್ಲಿ ನಮ್ಮ ಬೈಕ್‍ನ ಪೆಟ್ರೋಲ್ ಟ್ಯಾಂಕ್ ಮೇಲೆ ಕಲ್ಲು ಹಾಕಿದ್ದಾರೆ ಅಂತ ಪೊಲೀಸರು ಠಾಣೆಗೆ ದೂರು ಕೊಟ್ಟಿದ್ದಾರೆ. ಈ ಮಧ್ಯೆ, ಮಾರ್ಚ್ 16ರ ರಾತ್ರಿ, 20ಕ್ಕೂ ಹೆಚ್ಚು ಮಂದಿಯಿದ್ದ ಉದ್ರಿಕ್ತರ ಗುಂಪು ಪೊಲೀಸ್ ಜೀಪ್ ಉರುಳಿಸುವ ದೃಶ್ಯಗಳು ಹೊರಗೆ ಬಂದಿವೆ.

    ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಪೊಲೀಸ್ ಕಾರು ಹತ್ತಿ ನಿಂತು ಪ್ರಚೋದನಕಾರಿ ಹೇಳಿಕೆ ನೀಡಿದ್ದವನು ಮೌಲ್ವಿಯಲ್ಲ. ಆತ ಮೌಲ್ವಿ ವೇಷದಲ್ಲಿದ್ದ ಲಾರಿ ಚಾಲಕ ವಾಸೀಂ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಇತ್ತೀಚಿಗೆ ಮೌಲ್ವಿ ವೇಷ ಹಾಕಿದ್ದ ವಾಸೀಂ ಪ್ರಚೋದನಾಕಾರಿ ಭಾಷಣಗಳ ಮೂಲಕ ಹಿಂಬಾಲಕರ ಸಂಖ್ಯೆ ಹೆಚ್ಚಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಈ ವಾಸಿಂ ಎಲ್ಲಿದ್ದಾನೆ ಎನ್ನುವುದು ಪೊಲೀಸರಿಗೆ ಗೊತ್ತಾಗಿಲ್ಲ. ಹೈದ್ರಾಬಾದ್‍ನಲ್ಲಿ ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಇದನ್ನೂ ಓದಿ: ಅಮಿತ್‌ ಶಾ ಮನೆ ಕೆಡವಲು ಬುಲ್ಡೋಜರ್‌ ಬಳಸಿ: ರಾಘವ್‌ ಛಡ್ಡಾ

    ಅತ್ತ ಈಗಾಗಲೇ 200ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸ್ರು, 115 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರನ್ನು ಬಿಟ್ಟು ಕಳಿಸಿದ್ದಾರೆ. ಆದರೆ ತಲೆಮರೆಸಿಕೊಂಡಿರುವ ಇನ್ನಷ್ಟು ಪುಂಡರ ಪತ್ತೆಗೆ ಪೊಲೀಸರು ಮೂರು ಸೂತ್ರ ಅನುಸರಿಸ್ತಿದ್ದಾರೆ. ಈ ಮಧ್ಯೆ ಹುಬ್ಬಳ್ಳಿಯಲ್ಲಿ ಏಪ್ರಿಲ್ 23ರವರೆಗೂ ನಿಷೇಧಾಜ್ಞೆಯನ್ನು ಪೊಲೀಸ್ ಇಲಾಖೆ ವಿಸ್ತರಿಸಿದೆ.

  • ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

    ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

    ಚಿಕ್ಕಮಗಳೂರು: ವಿವಾದಿತ ಬಾಬಾಬುಡೆನ್‍ಗಿರಿಯ ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ನೇಮಕ ಮಾಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.

    2018ರ ಮಾರ್ಚ್ 19ರಂದು ದತ್ತಾತ್ರೇಯ ಪೀಠದ ಪೂಜೆಗೆ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್‍ರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಿಸಿತ್ತು. ಇದನ್ನು ಪ್ರಶ್ನಿಸಿ ಸಂವರ್ಧನಾ ಸಮಿತಿ ಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ನೇತೃತ್ವದ ನ್ಯಾಯಪೀಠ, ಮೌಲ್ವಿ ನೇಮಕಾತಿಯನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.

    ಈ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಕಾನೂನಿನ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಬೆನ್ನಲ್ಲೇ ಹೈಕೋರ್ಟ್ ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇದು ಹಿಂದೂಗಳಿಗೆ ಸಿಕ್ಕ ದೊಡ್ಡ ಜಯವಾಗಿದ್ದು, ದಶಕಗಳ ಹೋರಾಟಕ್ಕೆ ಸಿಕ್ಕ ಫಲ ಎಂದು ಬಿಜೆಪಿ ನಾಯಕರು ಬಣ್ಣಿಸಿದ್ದಾರೆ. ಇದನ್ನೂ ಓದಿ: ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೆ ಪತ್ರ ಬರೆದ ಪುಟಾಣಿಗಳು

  • ಯಾವ ಮಸೀದಿಗೂ ನಮಾಜ್ ಮಾಡಲು ಬರಬೇಡಿ: ಮೌಲ್ವಿಗಳು ಮನವಿ

    ಯಾವ ಮಸೀದಿಗೂ ನಮಾಜ್ ಮಾಡಲು ಬರಬೇಡಿ: ಮೌಲ್ವಿಗಳು ಮನವಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ದೆಹಲಿಯ ನಿಜಾಮುದ್ದೀನ್ ಜಮಾಯತ್ ಸಭೆಗೆ 8 ಜನ ಭಾಗವಹಿಸಿದ ಹಾಗೂ ಕೊರೊನಾ ಸೊಂಕು ಹರಡುವ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವ ಮಸೀದಿಗೂ ನಮಾಜ್ ಮಾಡಲು ಬಾರದಂತೆ ಮೌಲ್ವಿಗಳು ಇಂದು ಮನವಿ ಮಾಡಿದ್ದಾರೆ.

    ಜಿಲ್ಲೆಯ ವಿವಿಧ ಮಸೀದಿಗಳ ಮೌಲ್ವಿಗಳಿಂದ ತಮ್ಮ ಜನಾಂಗದವರಿಗೆ ಮಸೀದಿಗೆ ಬಾರದಂತೆ ವಿಡಿಯೋ ಮಾಡಿ ಮನವಿ ಮಾಡಿದ್ದು, ನಮಾಜ್ ಮಾಡಲು ಮಸೀದಿಗೆ ಬರುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಇದ್ದು ನಮಾಜ್ ಮಾಡುವಂತೆ ಕೋರಿಕೊಂಡಿದ್ದಾರೆ. ದೆಹಲಿಯ ಧಾರ್ಮಿಕ ಸಭೆಗೆ ತೆರಳಿದವರಿಗೂ ಮನವಿ ಮಾಡಿ ಹೋಮ್ ಕ್ವಾರಂಟೈನ್ ಇರುವಂತೆ ತಿಳಿಸಿದ್ದಾರೆ.

    ಇಂದು ಶುಕ್ರವಾರ ವಾದ್ದರಿಂದ ಮಸೀದಿಗೆ ಜನರು ಬರುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ಮಸೀದಿಯ ಮೌಲ್ವಿಗಳು ಮನವಿ ಮಾಡಿದ್ದು ಇದಕ್ಕೆ ಸ್ಪಂದಿಸಿದ ಮುಸ್ಲಿಂ ಜನಾಂಗದವರು ಮಸೀದಿಗೆ ಆಗಮಿಸದೇ ಮನೆಯಲ್ಲಿಯೇ ಉಳಿದಿದ್ದು ಮಸೀದಿಗಳು ಸಂಪೂರ್ಣ ಬಂದ್ ಆಗಿತ್ತು.

  • ಐಎಂಎ ಕೇಸ್ – ಮೌಲ್ವಿ ಸೇರಿ ಇಬ್ಬರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ

    ಐಎಂಎ ಕೇಸ್ – ಮೌಲ್ವಿ ಸೇರಿ ಇಬ್ಬರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆ

    ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಮೌಲ್ವಿ ಅಫ್ಸರ್ ಹನೀಜ್ ಸೇರಿ ಇಬ್ಬರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ.

    ಆರ್.ಟಿ.ನಗರ ಮೂಲದ ಮೌಲ್ವಿ ಅಫ್ಸರ್ ಹನೀಜ್ ಮನ್ಸೂರ್ ಖಾನ್‍ನಿಂದ ಮೂರು ಕೋಟಿ ರೂ. ಮೌಲ್ಯದ ಬಂಗಲೆ ಪಡೆದುಕೊಂಡಿದ್ದ. ಬಂಗಲೆ ಪಡೆದಿದ್ದರಿಂದ ತನ್ನ ಸಮುದಾಯದವರಿಗೆ ಐಎಂಎನಲ್ಲಿ ಹೂಡಿಕೆ ಮಾಡುವಂತೆ ಪ್ರೇರಣೆ ನೀಡುತ್ತಿದ್ದ. ಮಸೀದಿಯಲ್ಲಿ ಪ್ರಾರ್ಥನೆಗೆ ಬಂದ ವೇಳೆ ಪ್ರೇರೇಪಣೆ ನೀಡಿ ಹೂಡಿಕೆ ಮಾಡುವಂತೆ ಸೂಚನೆ ನೀಡುತ್ತಿದ್ದ. ಈ ಹಿನ್ನೆಲೆ ಸೆಪ್ಟೆಂಬರ್‍ನಲ್ಲಿ ಎಸ್‍ಐಟಿ ಅಧಿಕಾರಿಗಳು ಮೌಲ್ವಿಯನ್ನು ಬಂಧಿಸಿದ್ದರು.

    ಹನೀಫ್ ಅಫ್ಸರ್ ಅಜೀಜ್ ಶಿವಾಜಿನಗರ ಒಪಿಎಚ್ ರಸ್ತೆಯ ಬೇಪಾರಿಯನ್ ಮಸೀದಿಯ ಧರ್ಮ ಗುರುವಾಗಿದ್ದು, 2017ರಲ್ಲಿ ಹೆಚ್‍ಬಿಆರ್ ಲೇಔಟ್ ನಲ್ಲಿ ಮೂರು ಕೋಟಿ ರೂ. ಮೌಲ್ಯದ ಮನೆ ಉಡುಗೊರೆ ಪಡೆದಿದ್ದ.

    ಮಸೀದಿಗೆ ಬರುವ ಸಾವಿರಾರು ಭಕ್ತರ ಭಾವನೆಗಳ ಜೊತೆ ಆಟವಾಡಿದ್ದ ಹನೀಫ್ ಅಫ್ಸರ್ ಜನಸಾಮಾನ್ಯರ ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಐಎಂಎ ನಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದ. ನಮಾಜ್‍ಗೆ ಬಂದ ಜನರಿಗೆ ಐಎಂಎನಲ್ಲಿ ಹಣ ಹೂಡುವಂತೆ ಪ್ರಚೋದನೆ ಮಾಡುತ್ತಿದ್ದ. ಈ ಧರ್ಮಗುರು ಮಾತನ್ನು ನಂಬಿ ಸಾವಿರಾರು ಜನ ಮುಸ್ಲಿಂ ಸಮುದಾಯದವರು ಐಎಂಎನಲ್ಲಿ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿಸಿದ್ದರಿಂದ ಧರ್ಮಗುರುವಿನ ಋಣ ತೀರಿಸಲು ಮೂರು ಕೋಟಿ ರೂ. ಮೌಲ್ಯದ ಮನೆಯನ್ನು ಮನ್ಸೂರ್ ಖಾನ್ ನೀಡಿದ್ದ.

  • ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಮೋಸ್ಟ್ ವಾಂಟೆಡ್ ಉಗ್ರ ದೊಡ್ಡಬಳ್ಳಾಪುರದಲ್ಲಿ ಅರೆಸ್ಟ್

    ಬೆಂಗಳೂರು: ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಶಂಕಿತ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದೆ.

    ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಇಂದು ಮಧ್ಯಾಹ್ನ ಬೆಂಗಳೂರು ಹಾಗೂ ಕೊಲ್ಕತ್ತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿಯೊಂದರ ಬಳಿ ಬಂಧಿಸಿದ್ದಾರೆ.

    ಬಂಧಿತ ಉಗ್ರ ಹಬೀಬರ್ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ 8 ಜನ ಭಾಗಿಯಾಗಿದ್ದು ಮೂವರ ಬಂಧನವಾಗಿತ್ತು. ಉಳಿದ 5 ಜನಕ್ಕೆ ಎನ್‍ಐಎ ಅಧಿಕಾರಿಗಳು ಶೋಧ ನಡೆಸಿದ್ದರು. ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಸಲಿಗೆ ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಮೌಲ್ವಿ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ಎಂದು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಸದ್ಯ ಬಂಧಿತ ಉಗ್ರ ಹಬೀಬುಲ್ ರೆಹಮಾನ್ ನನ್ನ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಗುತ್ತಿದ್ದು, ಮತ್ತೊಂದೆಡೆ ಮಸೀದಿಯ ಮೌಲ್ವಿ ಅನ್ವರ್ ನನ್ನ ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ. ಉಗ್ರನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಈ ಹಿಂದೆ ತಿಳಿಸಿತ್ತು.

  • ಧರ್ಮನಿಂದನೆ ಆರೋಪ – ಪಾಕಿನಲ್ಲಿ ಹಿಂದೂ ಡಾಕ್ಟರ್ ಅರೆಸ್ಟ್

    ಧರ್ಮನಿಂದನೆ ಆರೋಪ – ಪಾಕಿನಲ್ಲಿ ಹಿಂದೂ ಡಾಕ್ಟರ್ ಅರೆಸ್ಟ್

    ನವದೆಹಲಿ: ಧರ್ಮನಿಂದನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಹಿಂದೂ ಡಾಕ್ಟರ್ ಒಬ್ಬರನ್ನು ಅರೆಸ್ಟ್ ಮಾಡಲಾಗಿದೆ.

    ಈ ಘಟನೆ ಹಿಂದೂಗಳೇ ಹೆಚ್ಚಾಗಿ ವಾಸ ಮಾಡುವ ಪಾಕಿಸ್ತಾನದ ದಕ್ಷಿಣ ಸಿಂಧು ಪ್ರಾಂತ್ಯದಲ್ಲಿ ನಡೆದಿದ್ದು, ಬಂಧನಕ್ಕೊಳಪಟ್ಟ ಹಿಂದೂ ಪಶು ವೈದ್ಯನನ್ನು ರಮೇಶ್ ಕುಮಾರ್ ಎಂದು ಗುರುತಿಸಲಾಗಿದೆ.

    ಸ್ಥಳೀಯ ಮಸೀದಿಯೊಂದರ ಮುಖ್ಯಸ್ಥ ಮೌಲ್ವಿ ಇಶಾಕ್ ನೂಹಿ, ಪಶು ವೈದ್ಯ ರಮೇಶ್ ತಮ್ಮ ಧರ್ಮದ ಪವಿತ್ರ ಪುಸ್ತಕದ ಹಾಳೆಯನ್ನು ಹರಿದು ಅದರಲ್ಲಿ ಔಷಧಿಗಳನ್ನು ಸುತ್ತಿ ಜನರಿಗೆ ನೀಡಿದ್ದಾರೆ. ಈ ಮೂಲಕ ನಮ್ಮ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ದೂರಿನ ಅನ್ವಯ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಈ ವಿಚಾರ ತಿಳಿದು ಕೋಪಗೊಂಡ ಮುಸ್ಲಿಮರು ಸಿಂಧು ಪ್ರಾಂತ್ಯದಲ್ಲಿರುವ ಹಿಂದೂ ಧರ್ಮದವರ ಅಂಗಂಡಿಗಳನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ ಈಗ ಸಿಂಧು ಪ್ರಾಂತ್ಯದಲ್ಲಿ ಉದ್ವಿಗ್ನ ಪರಿಸ್ಥತಿ ಉಂಟಾಗಿದೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಅಹಿದ್ ಹುಸೇನ್ ಲೆಘಾರಿ, ಮೌಲ್ವಿ ನೂಹಿ ಅವರು ನೀಡಿದ್ದ ದೂರಿನ ಅನ್ವಯ ರಮೇಶ್ ಕುಮಾರ್ ಎಂಬ ಪಶು ವೈದ್ಯರನ್ನು ಬಂಧಿಸಲಾಗಿದೆ. ನಗರದಲ್ಲಿ ಅಶಾಂತಿ ಉಂಟಾದ ಕಾರಣ ಅವರನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ಮಾಡಿ ಕ್ರಮಕೈಗೊಳ್ಳಲಾಗುತ್ತೆದೆ ಎಂದು ಹೇಳಿದ್ದಾರೆ.

    https://twitter.com/timesofpak123/status/1132965562852810754

    ಪಾಕ್‍ನ ಸಿಂಧು ಪ್ರಾಂತ್ಯದಲ್ಲಿ ಅಪಾರ ಸಂಖ್ಯೆಯ ಹಿಂದೂ ಧರ್ಮದವರು ವಾಸಮಾಡುತ್ತಿದ್ದು, ನಮ್ಮ ಮೇಲೆ ಮುಸ್ಲಿಂ ಸಮುದಾಯದವರು ವೈಯಕ್ತಿಕ ದ್ವೇಷವನ್ನು ಇಟ್ಟಿಕೊಂಡಿದ್ದಾರೆ. ಈ ದ್ವೇಷದ ಪ್ರತೀಕಾರವನ್ನು ತೀರಿಸಿಕೊಳ್ಳಲು ಧರ್ಮನಿಂಧನೆ ಮಾಡಿದ್ದೇವೆ ಎಂದು ಆರೋಪ ಮಾಡಿ ನಮ್ಮನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಪಾಕ್‍ನಲ್ಲಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

    ಪಾಕಿಸ್ತಾನದಲ್ಲಿ 75 ಲಕ್ಷ ಹಿಂದೂಗಳು ವಾಸವಿದ್ದಾರೆ. ಇದರಲ್ಲಿ 1987 ರಿಂದ 2016 ವರೆಗೆ ಸುಮಾರು 1,472 ಹಿಂದೂಗಳನ್ನು ಧರ್ಮನಿಂದನೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದು ಲಾಹೋರ್‍ ನ ವಕೀಲರ ಸಂಘವೊಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿತ್ತು.