Tag: Motors

  • ಟಾಟಾ ಮೋಟಾರ್ಸ್‌ನಿಂದ ಸೇಫ್ಟಿ ಬಬಲ್‌ – ವಾಹನ ಫುಲ್‌ ಸ್ಯಾನಿಟೈಸ್‌

    ಟಾಟಾ ಮೋಟಾರ್ಸ್‌ನಿಂದ ಸೇಫ್ಟಿ ಬಬಲ್‌ – ವಾಹನ ಫುಲ್‌ ಸ್ಯಾನಿಟೈಸ್‌

    ಬೆಂಗಳೂರು: ಗ್ರಾಹಕರಲ್ಲಿ ಕೋವಿಡ್ ಭೀತಿ ಹೋಗಲಾಡಿಸಲು ಟಾಟಾ ಮೋಟಾರ್ಸ್ ಕಂಪನಿಯು ಹೊಸ ಸುರಕ್ಷಾ ಮಾರ್ಗ ಒಂದನ್ನು ಅಳವಡಿಸಿಕೊಂಡಿದೆ. ಹೊಸ ವಾಹನಗಳ ವಿತರಣೆ ವೇಳೆ ಗ್ರಾಹಕರಿಗೆ ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾದ ವಾಹನ ಒದಗಿಸುವ ಸಂಬಂಧ ‘ಸೇಫ್ಟಿ ಬಬಲ್’ ಬಳಕೆ ಮಾಡುತ್ತಿದೆ.

    ಕಂಪನಿಯ ಪ್ರಕಾರ, ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ಕಾರನ್ನು ರಕ್ಷಿಸುವ ಹೆಚ್ಚುವರಿ ಹೆಜ್ಜೆಯಾಗಿದೆ. ಕಾರುಗಳ ವಿತರಣೆಗೆ ಮುಂಚಿತವಾಗಿ ದೈಹಿಕ ಸಂಪರ್ಕವನ್ನು ಕಡಿಮೆ ಮಾಡಲು ವಿಶೇಷ ಪ್ಲಾಸ್ಟಿಕ್ ಕ್ಯಾನೋಪಿ ಸೇಫ್ಟಿ ಬಬಲ್ ಆಗಿ ಕಾರ್ಯನಿರ್ವಹಿಸುತ್ತದೆ.

    ಸೇಫ್ಟಿ ಬಬಲ್ ಅನ್ನು ‘Sanitized by Tata Motors’ ಉಪಕ್ರಮದಡಿ ಪರಿಚಯಿಸಲಾಗಿದೆ. ಈ ಉಪಕ್ರಮದಡಿ ವಾಹನಗಳನ್ನು ಸಂಪೂರ್ಣ ಶುಚಿಗೊಳಿಸಿ, ಸ್ಯಾನಿಟೈಜ್ ಮಾಡಲಾಗುತ್ತದೆ ಮತ್ತು ಗ್ರಾಹಕರು ತಮ್ಮ ಹೊಸ ವಾಹನದ ಡೆಲಿವರಿ ತೆಗೆದುಕೊಳ್ಳುವ ಸಮಯದಲ್ಲಿ ನೇರ ದೈಹಿಕ ಸಂಪರ್ಕವನ್ನು ಕಡಿಮೆ ಮಾಡುವ ಕ್ರಮಗಳನ್ನು ಒಳಗೊಂಡಿದೆ.

    ‘ಸೇಫ್ಟಿ ಬಬಲ್’ ಮೂಲಕ ಕಾರುಗಳನ್ನು ಸಂಪೂರ್ಣವಾಗಿ ಒಂದೇ ಬಾರಿಗೆ ಸ್ಯಾನಿಟೈಜ್ ಮಾಡಬಹುದಾಗಿದ್ದು, ಸಾಮಾನ್ಯ ಸ್ಯಾನಿಟೈಜ್ ಮಾದರಿಗಿಂತಲೂ ಸೇಫ್ಟಿ ಬಬಲ್ ಮೂಲಕ ಮಾಡಲಾದ ಸ್ಯಾನಿಟೈಜ್ ಪರಿಣಾಮಕಾರಿಯಾಗಿರಲಿದೆ. ‘ಸೇಫ್ಟಿ ಬಬಲ್’ ಒಳಗೆ ವಿವಿಧ ರಾಸಾಯನಿಕಗಳ ಸಿಂಪರಣೆ ಮೂಲಕ ವೈರಸ್‌ಗಳಿಂದ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.

    ಶೀಘ್ರದಲ್ಲೇ ತನ್ನ ಎಲ್ಲಾ ಡೀಲರ್ ಶಿಪ್‌ಗಳಲ್ಲಿ ಈ ಸೇಫ್ಟಿ ಬಬಲ್‌ಗಳನ್ನು ಕಾಣಬಹುದಾಗಿದೆ.