Tag: Motor Vehicle Tax

  • ವಾಹನ ತೆರಿಗೆ ಪರಿಷ್ಕರಣೆ – ಯಾವುದು ಎಷ್ಟು ಏರಿಕೆ?

    ವಾಹನ ತೆರಿಗೆ ಪರಿಷ್ಕರಣೆ – ಯಾವುದು ಎಷ್ಟು ಏರಿಕೆ?

    ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಬಜೆಟ್‍ನಲ್ಲಿ (Karnataka Budget) ಘೋಷಿಸಿದಂತೆ ಮೋಟಾರ್ ವಾಹನ ತೆರಿಗೆಯನ್ನು (Motor Vehicle Tax) ಪರಿಷ್ಕರಿಸಿದ್ದು ಸೋಮವಾರದಿಂದಲೇ ಜಾರಿಗೆ ಬಂದಿದೆ.

    ಶಾಲೆ-ಕಾಲೇಜು ವಾಹನ, ಕ್ಯಾಬ್, ಟ್ರಕ್‍ಗಳ ಮೇಲೆ ವಿಧಿಸುವ ತೆರಿಗೆಯನ್ನು ಹೆಚ್ಚಿಸಲಾಗಿದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಬೆಲೆಯ ಕ್ಯಾಬ್‍ಗಳಿಗೆ ಆ ವಾಹನದ 15% ರಷ್ಟು ತೆರಿಗೆ, 10 ಲಕ್ಷ ರೂ. ನಿಂದ 15 ಲಕ್ಷ ರೂ. ಬೆಲೆಯ ಕ್ಯಾಬ್‍ಗಳಿಗೆ ಅದರ ಮೌಲ್ಯದ 9% ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಹೆಚ್ಚಳದಿಂದ 472 ಕೋಟಿ ರೂ. ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.

    ಜುಲೈ 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ಆಯ್ದ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪ್ರಕಟಿಸಿದ್ದರು. ಅದಕ್ಕೆ ಪೂರಕವಾಗಿ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ಮಸೂದೆ 2023’ಕ್ಕೆ ಸದನದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಪರಿಚಯವಾದ ಪಾಕಿಸ್ತಾನಿ ಗೆಳೆಯನನ್ನು ವರಿಸಿದ ಅಂಜು – ಇಸ್ಲಾಂ ಧರ್ಮಕ್ಕೆ ಮತಾಂತರ

    ಯಾವುದಕ್ಕೆ ಎಷ್ಟು?
    ಆವರಣದಲ್ಲಿರುವುದು ಹಿಂದಿನ ತೆರಿಗೆ
    1.5-2 ಟನ್ ವಾಹನ – 20,000 ರೂ.(10,000 ರೂ.)
    2-3 ಟನ್ ವಾಹನ – 30,000 ರೂ. (15,000 ರೂ.)
    3-5.5 ಟನ್ ವಾಹನ – 40,000 ರೂ. (20,000 ರೂ.)

    5.5-7.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 60,000 ರೂ.)
    7.5-9.5 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 80,000 ರೂ.)
    9.5-12 ಟನ್ ವಾಹನ – ವರ್ಷಕ್ಕೆ 7,200 ರೂ. (ಪೂರ್ಣಾವಧಿಗೆ 1 ಲಕ್ಷ ರೂ.)

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋವಿಡ್ ಮಧ್ಯೆ ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ

    ಕೋವಿಡ್ ಮಧ್ಯೆ ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ

    ಬೆಂಗಳೂರು: ಕೋವಿಡ್-19 ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವು ಖಾಸಗಿ ವಾಹನ ಮಾಲೀಕರಿಗೆ ಬಿಎಸ್‍ವೈ ಸರ್ಕಾರದಿಂದ ಸಿಹಿ ಸುದ್ದಿ ನೀಡಿದೆ.

    ಹೌದು, ರಾಜ್ಯದ ಖಾಸಗಿ ಬಸ್, ಟೆಂಪೋ, ಟ್ಯಾಕ್ಸಿಗಳಿಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ನೀಡಿದೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಜ್ಯದ ವಿವಿಧ ಪ್ರದೇಶದಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಸೇರಿಸಲು ರಸ್ತೆಗೆ ಇಳಿದಿದ್ದವು. ಈ ಹಿನ್ನೆಲೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಇಲ್ಲವೆ ಅಧಿಕೃತ ಪ್ರಾಧಿಕಾರಗಳಿಂದ ಸಂಚಾರಕ್ಕೆ ಅನುಮತಿ ಪಡೆದ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

    ಈ ಮೂಲಕ ರಾಜ್ಯದ ಖಾಸಗಿ ವಾಹನಗಳಿಗೆ ಸರ್ಕಾರವು ಒಟ್ಟು ಎರಡು ತಿಂಗಳ ತೆರಿಗೆ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ.

    ಅಧಿಸೂಚನೆಯಲ್ಲಿ ಏನಿದೆ?:
    ಕೋವಿಡ್-19 ಹಿನ್ನೆಲೆ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್‍ಡೌನ್ ಮಾಡಲಾಗಿದೆ. ಆದರೆ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ರ ಕಲಂ 16(1)ರ ಅನ್ವಯ ರಾಜ್ಯದಲ್ಲಿ ನೋಂದಾಯಿಸಿರು (ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ) ಎಲ್ಲಾ ಪ್ರಯಾಣಿಕರು ಮತ್ತು ಸರಕು ಸಾರಿಗೆ ವಾಹನಗಳ ತೆರಿಗೆಯನ್ನು ಮಾರ್ಚ್ 24ರಿಂದ ಮೇ 23ರವರೆಗೆ ಒಟ್ಟು ಎರಡು ತಿಂಗಳ ಅವಧಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಆದೇಶಿಸಲಾಗಿದೆ.