Tag: moti masjid

  • ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

    ಮಸೀದಿ ಗುಮ್ಮಟದ ಮೇಲಿದ್ದ 100 ವರ್ಷದಷ್ಟು ಹಳೆಯ ಚಿನ್ನದ ಭಾಗ ಕಳ್ಳತನ

    ಭೋಪಾಲ್: (Bhopal) ಇಲ್ಲಿನ ತಲೈಯಾ ಪ್ರದೇಶದ ಐತಿಹಾಸಿಕ ಮೋತಿ ಮಸೀದಿಯ (Moti Masjid) ಮೇಲಿನ ಗುಮ್ಮಟದ ಚಿನ್ನದ ಲೇಪಿತ ಒಂದು ಭಾಗವನ್ನು ಗುರುವಾರ ನಸುಕಿನಲ್ಲಿ ಕಳವು ಮಾಡಲಾಗಿದೆ.

    ಗುಮ್ಮಟದ ಭಾಗಕ್ಕೆ ಅಲಂಕಾರ ಮಾಡಲಾಗಿದ್ದ ಏಳು ಅಡಿ ಎತ್ತರದ ಚಿನ್ನ ಲೇಪಿತ ಭಾಗ ಕಳ್ಳತನವಾಗಿದೆ. ಕಳ್ಳರು ಇಡೀ ವಸ್ತುವನ್ನು ಸಾಗಿಸಲು ಸಾಧ್ಯವಾಗದೇ ಒಂದು ಭಾಗವನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಉಳಿದ ಭಾಗವನ್ನು ಛಾವಣಿಯ ಮೇಲೆಯೇ ಬಿಟ್ಟಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಭಗವಾಧ್ವಜದ ಫೋಟೋ- ಸ್ಟೇಟಸ್ ಹಾಕಿದ್ದ 8 ಮಂದಿ ವಿರುದ್ಧ ಪ್ರಕರಣ

    ಕಳ್ಳರ ಕೃತ್ಯಕ್ಕೆ ಜನಾಕ್ರೋಶ ವ್ಯಕ್ತವಾಗಿದೆ. ಪೊಲೀಸರಿಗೆ ಇನ್ನೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಕಳ್ಳರನ್ನು ಗುರುತಿಸಲು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ.

    ಸೆಕ್ಯೂರಿಟಿ ಮೊಹಮ್ಮದ್ ಲಯೀಕ್ (50), ಅವರು ಮತ್ತು ಅವರ ಸಹೋದ್ಯೋಗಿಗಳು ಗುರುವಾರ ಬೆಳಗ್ಗೆ ನಮಾಜ್ ಸಲ್ಲಿಸಿದ ನಂತರ ಮಲಗಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಸೀದಿಯ ಮುಂಭಾಗದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ನಮ್ಮನ್ನು ಎಚ್ಚರಿಸಿ ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದಾರೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಚಮಚಾಗಿರಿ ಎಂದ ಕಾಂಗ್ರೆಸ್ ನಾಯಕ

    ಕಳುವಾದ ಚಿನ್ನದ ಭಾಗವು ಕನಿಷ್ಠ 100 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ. ಪೊಲೀಸರಿಗೆ ದೂರು ನೀಡಿದ ನಂತರ ಸಮಾಜದ ಹಿರಿಯರು ಮಸೀದಿಗೆ ಧಾವಿಸಿದರು. ತಲೈಯಾ ಪೊಲೀಸ್ ಮತ್ತು ಅಪರಾಧ ವಿಭಾಗದ ಹಲವು ತಂಡಗಳು ಕಳ್ಳತನದ ತನಿಖೆ ನಡೆಸುತ್ತಿವೆ.

    ಮೋತಿ ಮಸೀದಿಯನ್ನು 1860 ರಲ್ಲಿ ಖುದ್ಸಿಯಾ ಬೇಗಂ ಅವರ ಮಗಳು ಸಿಕಂದರ್ ಜಹಾನ್ ಬೇಗಂ ನಿರ್ಮಿಸಿದ್ದರು. 160 ವರ್ಷಗಳ ಕಾಲ ಕೆಂಪು ಮರಳುಗಲ್ಲಿನ ಗೋಪುರಗಳು, ಮುತ್ತಿನ ಬಿಳಿ ಗುಮ್ಮಟಗಳು ಮತ್ತು ಹೊಳೆಯುವ ಗೋಲ್ಡನ್ ಸ್ಪೈಕ್‌ಗಳು ಭೋಪಾಲ್ ಸ್ಕೈಲೈನ್‌ನಲ್ಲಿ ಮೋಡಿ ಮಾಡುವ ದೃಶ್ಯವಾಗಿದೆ.

    Live Tv
    [brid partner=56869869 player=32851 video=960834 autoplay=true]