Tag: mothers

  • ಆಂಧ್ರಪ್ರದೇಶದ ಬಸ್‍ಗಳಲ್ಲಿ 4 ಲಕ್ಷ ಮಹಿಳೆಯರಿಗೆ ಉಚಿತ ಪ್ರಯಾಣ

    ಆಂಧ್ರಪ್ರದೇಶದ ಬಸ್‍ಗಳಲ್ಲಿ 4 ಲಕ್ಷ ಮಹಿಳೆಯರಿಗೆ ಉಚಿತ ಪ್ರಯಾಣ

    ಅಮರಾವತಿ: ಗರ್ಭಿಣಿ, ಬಾಣಂತಿ ಹಾಗೂ ಶಿಶುಗಳ ಸುರಕ್ಷಿತೆಗಾಗಿ 500 ಡಾ. ವೈಎಸ್‍ಆರ್ ತಲ್ಲಿ ಬಿಡ್ಡ ಎಕ್ಸ್‍ಪ್ರೆಸ್ ವಾಹನಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಚಾಲನೆ ನೀಡಿದರು.

    ಈ ವಾಹನಗಳ ಮೂಲಕ ವರ್ಷಕ್ಕೆ ನಾಲ್ಕು ಲಕ್ಷ ತಾಯಂದಿರು ಹಾಗೂ ಶಿಶುಗಳಿಗೆ ಉಚಿತ ಸಾರಿಗೆಯನ್ನು ಒದಗಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗೆ ಸುಮಾರು 30 ವಾಹನಗಳನ್ನು ಹಂಚಲಾಗಿದೆ. ಜೊತೆಗೆ ಅಲ್ಲಿನ ಗರ್ಭಿಣಿಯರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ಜಿಪಿಎಸ್ ಸಕ್ರಿಯಗೊಳಿಸಿದ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈ ಮೂಲಕ ಪ್ರತಿಯೊಂದು ವಾಹನವು ಕಾರ್ಮಿಕರಿಗೆ ಸಂಬಂಧಿಸಿದ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸುಧಾರಿತ ಸಾಧನಗಳನ್ನು ಹೊಂದಿರುತ್ತದೆ ಎಂದು ಮಾಹಿತಿ ನೀಡಿದೆ.

    ಪ್ರಸವದ ನಂತರದ ಮಹಿಳೆಯರು ವಾಹನಕ್ಕಾಗಿ ಕಾಯಬೇಕಾಗಿಲ್ಲ. ಏಕೆಂದರೆ ಅವರು ನೈಜ ಸಮಯದ ಆಧಾರದ ಮೇಲೆ ವಾಹನದ ಸ್ಥಳವನ್ನು ಗುರುತಿಸಬಹುದು ಮತ್ತು ಟ್ರ್ಯಾಕ್ ಮಾಡಬಹುದು ಎಂದು ಹೇಳಿದೆ. ಇದನ್ನೂ ಓದಿ: ಉಡುಪಿಯಲ್ಲಿ ಮುಸ್ಲಿಂ ಅಂಗಡಿ ಹೆಸರು ಬದಲಿಸುವಂತೆ ಪಟ್ಟು

    ಪ್ರಸವಾನಂತರದ ಮಹಿಳೆಯರ ಸಹಾಯಕ್ಕಾಗಿ ಕೇಂದ್ರೀಕೃತ ಕಾಲ್ ಸೆಂಟರ್ ಅನ್ನು ಸಹ ಸ್ಥಾಪಿಸಲಾಗಿದೆ. ಗರ್ಭಿಣಿಯರು, ನರ್ಸ್‍ಗಳು ಮತ್ತು ಚಾಲಕರ ನಡುವಿನ ಸಮನ್ವಯಕ್ಕಾಗಿ ಕಾಲ್ ಸೆಂಟರ್ ಜೊತೆಗೆ ಡಾ. ವೈಎಸ್‍ಆರ್ ಥಲ್ಲಿ ಬಿಡ್ಡ ಎಕ್ಸ್‍ಪ್ರೆಸ್ ಆ್ಯಪ್ ಅನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಪ್ರಸವೋತ್ತರ ಸೇವೆಗಳ ಭಾಗವಾಗಿ ಸರ್ಕಾರವು ವೈಎಸ್‍ಆರ್ ಆರೋಗ್ಯ ಆಸರ ಅಡಿಯಲ್ಲಿ ತಾಯಂದಿರಿಗೆ 5,000 ರೂ. ಚೇತರಿಸಿಕೊಳ್ಳುವ ಭತ್ಯೆಯಾಗಿ ನೀಡಿದೆ. ವೈಎಸ್‍ಆರ್ ತಳ್ಳಿ ಬಿಡ್ಡ ಎಕ್ಸ್‍ಪ್ರೆಸ್ ವಾಹನಗಳ ಮೂಲಕ ಸಾರಿಗೆ ಸೌಲಭ್ಯದ ಜೊತೆಗೆ ಮಹಿಳೆಯರು ಮತ್ತು ನವಜಾತ ಶಿಶುಗಳನ್ನು ಸರ್ಕಾರಿ ಆಸ್ಪತ್ರೆಗಳಿಂದ ಸುರಕ್ಷಿತವಾಗಿ ಅವರ ಮನೆಗೆ ಸಾಗಿಸುತ್ತದೆ. ಇದನ್ನೂ ಓದಿ: ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ: ಅಖಿಲೇಶ್ ಯಾದವ್

  • ಕೊರೊನಾದಿಂದ ಮೃತಪಟ್ಟ ತಾಯಿಯ ಪ್ರತಿಮೆ ಪ್ರತಿಷ್ಠಾಪಿಸಿದ ಮಗ

    ಕೊರೊನಾದಿಂದ ಮೃತಪಟ್ಟ ತಾಯಿಯ ಪ್ರತಿಮೆ ಪ್ರತಿಷ್ಠಾಪಿಸಿದ ಮಗ

    ಹೈದರಾಬಾದ್: ಕೊರೊನಾ(CORONA)ದಿಂದ ಮೃತಪಟ್ಟ ತಾಯಿಯ (MOTHER) ನೆನಪಿಗಾಗಿ ಮಗ ಪ್ರತಿಮೆ ಪ್ರತಿಷ್ಠಾಪಿಸಿದ್ದಾನೆ. ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಸಿಂಹಪುರಿ ಕಾಲೋನಿಯಲ್ಲಿ ವಾಸವಾಗಿರುವ ರಾಮ್‍ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ರಾಮ್‍ಕುಮಾರ್ ಅವರ ತಾಯಿ ವಿಜಯಲಕ್ಷ್ಮಿ(59) ಕಳೆದ ವರ್ಷ ಮೇ 26 ರಂದು ಕೊರೊನಾದಿಂದ ಮೃತಪಟ್ಟಿದ್ದರು. ತಾಯಿಯ ನಿಧನವನ್ನು ಅರಗಿಸಿಕೊಳ್ಳಲಾಗದ ಪುತ್ರ ಅಮ್ಮನ ಚಿತ್ರವನ್ನು ಬಿಡಿಸಿ ಅದನ್ನು ದೇವರಂತೆ ಪೂಜಿಸಿದರು. ಇದೂ ಕೂಡ ರಾಮ್‍ಕುಮಾರ್‌ಗೆ ತೃಪ್ತಿ ನೀಡಲಿಲ್ಲ. ಆಗ ಒಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: 26ವರ್ಷ ಸಿನಿ ಜರ್ನಿಗೆ ಜೊತೆಯಾದ ಪತ್ನಿಗೆ ಕಿಚ್ಚನ ಧನ್ಯವಾದ

    ತಾಯಿಯ ಪ್ರತಿಮೆ ಮಾಡುವ ಆಲೋಚನೆ ಬಂದಿದೆ. ನಂತರ ಈ ಪ್ರತಿಮೆ ತಯಾರಿಸಲು ರಾಜಸ್ಥಾನದ ಕಲಾವಿದನಿಗೆ ರಾಮ್‍ಕುಮಾರ್ ಹೇಳಿದ್ದನು. ಎರಡು ದಿನಗಳ ಹಿಂದೆಯಷ್ಟೇ ತಾಯಿಯ ಪ್ರತಿಮೆ ಕೈಸೇರಿದೆ. ಅಮೃತಶಿಲೆಯಿಂದ ಮಾಡಿರುವ ಮೂರೂವರೆ ಅಡಿ ಎತ್ತರದ ಈ ಪ್ರತಿಮೆಗಾಗಿ ಇವರು ಸುಮಾರು ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಪ್ರತಿಮೆಯನ್ನು ಮನೆಯಲ್ಲೇ ಸ್ಥಾಪಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಈ ಕೂರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿ ರಾಮ್‍ಕುಮಾರ್, ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ. ಅವರ ನೆನಪನ್ನು ಹಿಡಿದಿಡಬೇಕು. ಕೇವಲ  ಫೋಟೋವನ್ನು ಗೋಡೆಗೆ ನೇತುಹಾಕುವ ಬದಲು ದೇವರಂತೆ ಪೂಜಿಸಲು ಬಯಸುತ್ತೇನೆ. ಈ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಮನಸ್ಸಲ್ಲಿ ಆಲೋಚನೆ ಬಂದ ಕೂಡಲೇ ಕಂಚಿನ ವಿಗ್ರಹ ಮಾಡಿಸೋದಾ, ಸಿಮೆಂಟ್ ವಿಗ್ರಹ ಮಾಡಿಸೋದಾ ಅನ್ನೋ ಗೊಂದಲದಲ್ಲಿದ್ದೆ. ಆದರೆ ಅಮೃತ ಶಿಲೆಯಲ್ಲಿ ಮಾಡಿಸಿದರೆ ನಮ್ಮೊಂದಿಗೆ ಅಮ್ಮ ಶಾಶ್ವತವಾಗಿ ಇರುತ್ತಾಳೆ ಎನ್ನುವ ಭಾವನೆ ನನಗೆ ಇದೆ ಎಂದು ಹೇಳಿದ್ದಾರೆ.

  • ನಾವು ಏನಾದ್ರು ತಿಂದ್ರೆ ತಾನೆ ಮಗುವಿಗೆ ಹಾಲು ಕೊಡಲು ಸಾಧ್ಯ: ತಾಯಂದಿರ ಕಣ್ಣೀರು

    ನಾವು ಏನಾದ್ರು ತಿಂದ್ರೆ ತಾನೆ ಮಗುವಿಗೆ ಹಾಲು ಕೊಡಲು ಸಾಧ್ಯ: ತಾಯಂದಿರ ಕಣ್ಣೀರು

    – ರೈಲ್ವೆ ನಿಲ್ದಾಣದಲ್ಲಿ ಬಸ್ಸಿನೊಳಗೆ ಬಸವಳಿದ ಪುಟ್ಟ ಮಕ್ಕಳು

    ಬೆಂಗಳೂರು: ದೂರದ ಊರಿನಿಂದ ರಾಜ್ಯಕ್ಕೆ ವಾಪಸ್ ಬಂದ ಜನರಿಗೆ ಸರ್ಕಾರ ಸೂಕ್ತವಾದ ವ್ಯವಸ್ಥೆ ಕಲ್ಪಿಸದೇ ಜನಸಾಮಾನ್ಯರು ಬಿಎಂಟಿಸಿ ಬಸ್ಸಿನೊಳಗೆ ಕುಳಿತು ಪರದಾಡಿದ್ದಾರೆ.

    ಬೇರೆ ರಾಜ್ಯದಿಂದ ಪುಟ್ಟಪುಟ್ಟ ಮಕ್ಕಳನ್ನು ಕಟ್ಟಿಕೊಂಡು, ಮನೆಸೇರಿಕೊಳ್ಳಲು ಬಂದಿರುವ ಈ ತಾಯಂದಿರ ಕಣ್ಣೀರು ನೋಡಿದ್ರೆ ಕರಳು ಚುರುಕ್ ಅನ್ನುತ್ತೆ. ನಿನ್ನೆ ಇಂದು ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಕಾರಣ ಸರಿಯಾಗಿ ಊಟ ತಿನ್ನದೇ ಮಗುವಿಗೆ ಹಾಲು ಉಣಿಸಲು ಎದೆಹಾಲು ಬರುತ್ತಿಲ್ಲ ಎಂದು ಬಿಸಿಲಿನಲ್ಲಿ ಬಸ್ಸಿನೊಳಗೆ ಕುಳಿತು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.

    ನಾವು ದೂರದ ಮೆಹಬೂಬ್ ನಗರದಿಂದ ಬಂದಿದ್ದೇವೆ. ಅಲ್ಲಿ ಮೂರು ತಿಂಗಳು ಕೆಲಸವಿಲ್ಲದೇ ಮನೆಯಲ್ಲೇ ಕುಳಿತ್ತಿದ್ದು. ನಮ್ಮ ಬಳಿ ಹಣವಿಲ್ಲ. ಹೀಗಿರುವಾಗ ರೈಲಿನಲ್ಲಿ 200 ರೂಪಾಯಿ ಟಿಕೆಟ್‍ಗೆ 1,200 ತೆಗೆದುಕೊಂಡಿದ್ದಾರೆ. ಈಗ ನೋಡಿದರೆ ಹೋಟೆಲ್‍ನಲ್ಲಿ ಕ್ವಾರಂಟೈನ್ ಮಾಡಲು ಒಬ್ಬರಿಗೆ 700 ರಿಂದ 900 ರೂ. ಕೇಳುತ್ತಿದ್ದಾರೆ. ಫ್ರೀ ಕ್ವಾರಂಟೈನ್‍ನಲ್ಲಿ ಅವ್ಯವಸ್ಥೆ ಇದೆ. ಈ ಮಕ್ಕಳನ್ನು ಕಟ್ಟಿಕೊಂಡು ನಾವು ಹೇಗೆ ನಿಭಾಯಿಸುವುದು ಎಂದು ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ.

    ನಮಗೆ ಈ ರೀತಿ ಕ್ವಾರಂಟೈನ್ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಮನೆಯಲ್ಲಿ ಕ್ವಾರಂಟೈನ್ ಮಾಡುತ್ತಾರೆ ಎಂದುಕೊಂಡು ಬಂದಿದ್ದೇವೆ. ಆದರೆ ಇಲ್ಲಿ ಹೀಗೆ ಹೇಳುತ್ತಿದ್ದಾರೆ. ಬೆಳಗ್ಗೆಯಿಂದ ಕುಡಿಯಲು ನೀರು ಕೂಡ ಕೊಟ್ಟಿಲ್ಲ. ಈ ಬಸ್ಸಿನಲ್ಲೇ ಕೂರಿಸಿದ್ದಾರೆ. ಮಕ್ಕಳು ಹಾಲು ಬೇಕು ಎಂದು ಅಳುತ್ತಿವೆ. ಬಿಸಿಲಿನ ತಾಪಕ್ಕೆ ಬಳಲಿ ಹೋಗುತ್ತಿವೆ. ದಯವಿಟ್ಟು ಸೀಲ್ ಹಾಕಿ ಮನೆಗೆ ಕಳುಹಿಸಿದರೆ ನಾವು ಮನೆಯಲ್ಲೇ ಇರುತ್ತೇವೆ. ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ವಿದೇಶದಿಂದ ಬಂದವರು ಮತ್ತು ಹೊರ ರಾಜ್ಯದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ವೇಳೆ ರೋಗ ಲಕ್ಷಣ ಕಂಡು ಬಾರದೇ ಇದ್ದಲ್ಲಿ ಮಾತ್ರ ಅವರನ್ನು ಮನೆಗೆ ಕಳುಹಿಸಲಾಗುತ್ತದೆ.

    ಈ ವಾರದ ಆರಂಭದಲ್ಲೇ ಸರ್ಕಾರ ಹೊರ ರಾಜ್ಯದಿಂದ ಬಂದವರು ಜಿಲ್ಲೆಗಳಿಗೆ ತೆರಳುವ ಮೊದಲು ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಆಗಲು ಒಪ್ಪಿಗೆ ನೀಡಿದರೆ ಮಾತ್ರ ಪ್ರಯಾಣಿಸಿ ಎಂದು ಹೇಳಿತ್ತು. ಈ ವಿಚಾರ ಹಲವು ಮಂದಿಗೆ ತಿಳಿಯದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ.

  • ಹರಕೆ ತೀರಿಸಿಲು ತೆಪ್ಪದಲ್ಲಿ ಹಸುಗೂಸನ್ನು ತೇಲಿ ಬಿಟ್ಟ ಬಾಣಂತಿಯರು

    ಹರಕೆ ತೀರಿಸಿಲು ತೆಪ್ಪದಲ್ಲಿ ಹಸುಗೂಸನ್ನು ತೇಲಿ ಬಿಟ್ಟ ಬಾಣಂತಿಯರು

    ಕಾರವಾರ: ಹರಕೆ ತೀರಿಸಲು ಬಾಳೆಯ ತೆಪ್ಪದಲ್ಲಿ ಹುಟ್ಟಿದ ಮಗುವನ್ನು ತೇಲಿ ಬಿಡ್ತಾರಾ? ಈಗಲೂ ಈ ರೀತಿ ಆಚರಣೆ ಇದೆಯಾ ಎಂದು ಆಶ್ಚರ್ಯ ಆಗಬಹುದು. ಆದರೂ ಇದು ಸತ್ಯ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಇನ್ನೂ ಈ ರೀತಿಯ ಆಚರಣೆ ಜೀವಂತವಾಗಿದೆ.

    ಮುಂಡಗೋಡು ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿರುವ ಬಾಣಂತಿ ದೇವಿಯ ಬಳಿ ಹರಕೆ ಕಟ್ಟಿಕೊಳ್ಳುವ ಮೂಲಕ ಸಂತಾನ ಭಾಗ್ಯ ಪಡೆದ ಮಹಿಳೆಯರು ಬಾಣಂತಿ ಕೆರೆಯಲ್ಲಿ ತಮ್ಮ ಮಗುವನ್ನು ತೆಪ್ಪದಲ್ಲಿ ತೇಲಿಬಿಡುವ ಮೂಲಕ ದೇವಿಯ ಹರಕೆ ತೀರಿಸಿ ಪುನೀತರಾಗುತ್ತಾರೆ.

    ಪ್ರತಿ ವರ್ಷ ಮಕರ ಸಂಕ್ರಾಂತಿ ದಿನದಿಂದ ಮೂರು ದಿನಗಳ ಕಾಲ ಸಾಲಗಾಂವ್ ಗ್ರಾಮದಲ್ಲಿ ಬಾಣಂತಿ ದೇವಿ ಜಾತ್ರೆ ನಡೆಸಲಾಗುತ್ತದೆ. ಈ ಜಾತ್ರೆ ವೇಳೆ ಮಕ್ಕಳಾಗದ ದಂಪತಿ ದೇವಿ ಬಳಿ ಹರಕೆ ಕಟ್ಟಿಕೊಳ್ಳುತ್ತಾರೆ. ಹೀಗೆ ಹರಕೆ ಕಟ್ಟಿಕೊಂಡ ದಂಪತಿಗಳಿಗೆ ಮಕ್ಕಳಾದರೇ ಈ ದೇವಸ್ಥಾನದ ಬಳಿ ಇರುವ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತಮಗೆ ಹುಟ್ಟಿದ ಮಗುವನ್ನು ತೇಲಿಬಿಟ್ಟು ಹರಕೆ ತೀರಿಸುವುದು ಪ್ರತೀತಿ.

    ಹೀಗೆ ಪ್ರತಿ ವರ್ಷ ನೂರಾರು ಬಾಣಂತಿಯರು ತಮ್ಮ ಮಗುವನ್ನು ಈ ಬಾಣಂತಿ ಕೆರೆಯಲ್ಲಿ ತೆಪ್ಪದಲ್ಲಿ ತೇಲಿ ಬಿಟ್ಟು ಸ್ನಾನ ಮಾಡಿಸಿ ಹರಕೆ ತೀರಿಸುತ್ತಾರೆ. ಬಹಳಷ್ಟು ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆದವರು ಸಹ ಇಲ್ಲಿ ಬಂದು ಹರಕೆ ಕಟ್ಟಿಕೊಂಡ ನಂತರ ಮಕ್ಕಳಾದ ಉದಾಹರಣೆ ಇದೆ ಎಂದು ಇಲ್ಲಿನ ಭಕ್ತರು ಹೇಳುತ್ತಾರೆ.

    ಈ ದೇವಿಯು ಬಾಣಂತಿ ದೇವಿ ಎಂದೇ ಪ್ರಸಿದ್ಧಿ ಹೊಂದಿದ್ದು, ಈ ಹಿಂದೆ ಪ್ರತಿ ವರ್ಷ ಸಂಕ್ರಾಂತಿ ದಿನದಿಂದ ಒಂದು ತಿಂಗಳು ಜಾತ್ರೆ ನಡೆಯುತಿತ್ತು. ಈ ಜಾತ್ರೆಯಲ್ಲಿ ತೆಪ್ಪೋತ್ಸವ, ಜಾನುವಾರುಗಳ ವ್ಯಾಪಾರ ತುಂಬಾ ಪ್ರಸಿದ್ಧಿಯಾಗಿತ್ತು. ಆದರೇ ಕಾಲ ಬದಲಾದಂತೆ ಆಚರಣೆ ಸಹ ಬದಲಾಗಿದ್ದು, ಈಗ ಈ ಜಾತ್ರೆ ಮೂರು ದಿನ ನಡೆಸಲಾಗುತ್ತಿದೆ. ಕೊನೆಯ ದಿನ ದೇವಿಯ ತೆಪ್ಪೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ.

    ಇಂದೂ ಕೂಡ ನೂರಾರು ಬಾಣಂತಿಯರು ಬಾಣಂತಿ ದೇವಿಯ ಆರ್ಶಿರ್ವಾದ ಪಡೆದು ಪೂಜೆ ಸಲ್ಲಿಸಿದ್ದು, ವಿಜ್ರಂಭಣೆಯಿಂದ ಬಾಣಂತಿ ದೇವಿಯ ಹರಕೆ ಜಾತ್ರೆ ನೆರವೇರಿತು.

  • ಹೊಸ ವರ್ಷಕ್ಕೆ ಮಕ್ಕಳಿಗೆ ಜನ್ಮ ನೀಡಿದ 22 ತಾಯಂದಿರು

    ಹೊಸ ವರ್ಷಕ್ಕೆ ಮಕ್ಕಳಿಗೆ ಜನ್ಮ ನೀಡಿದ 22 ತಾಯಂದಿರು

    ಬೆಂಗಳೂರು: ಅಮ್ಮಂದಿರ ಪಾಲಿಗೆ ಹೊಸ ವರ್ಷ ಡಬಲ್ ಸಂಭ್ರಮ. ಏಕೆಂದರೆ ಹೊಸ ವರ್ಷಕ್ಕೆ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    2020ರ ಮಧ್ಯರಾತ್ರಿ 12 ಗಂಟೆಯಿಂದ ಇದುವರೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಒಟ್ಟು 22 ತಾಯಂದಿರು ಮಕ್ಕಳಿಗೆ ಜನ್ಮವಿತ್ತಿದ್ದಾರೆ ಎಂದು ಆಸ್ಪತ್ರೆಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ಮಾಹಿತಿ ನೀಡಿದ್ದಾರೆ.

    ಹೊಸ ವರ್ಷ ದಿನವೇ ಪುಟಾಣಿಗಳು ಅಮ್ಮನ ಬಿಸಿಯಪ್ಪುಗೆಯಲ್ಲಿ ಇದ್ರೆ, ತಾಯಂದಿರ ಮುಖದಲ್ಲಿ ಸಂತೋಷದ ಆನಂದ ಭಾಷ್ಪ. ಹೊಸ ವರ್ಷದ ಸಂಭ್ರಮದ ಜೊತೆಗೆ ಮನೆಗೆ ಕಂದಮ್ಮ ಬಂದ ಖುಷಿಯನ್ನು ತಾಯಂದಿರು ವ್ಯಕ್ತಪಡಿಸಿದರು.

    ವೈದ್ಯರು ಕೂಡ ಹೊಸ ವರ್ಷದಂದು ಹುಟ್ಟಿದ ಪುಟಾಣಿಗಳ ತಾಯಂದಿರಿಗೆ ಶುಭಾಶಯ ತಿಳಿಸಿ ಸಂಭ್ರಮಿಸಿದರು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸ್ಪೆಷಲ್ ಡೇ ಯಂದು ಹುಟ್ಟಿದ ಮಕ್ಕಳನ್ನು ನೋಡಿ ಎಲ್ಲರೂ ಖುಷಿಪಟ್ಟರು.