Tag: Motherland

  • ಏನೂ ಬೇಕಾದರೂ ಮಾಡಿ, ಮಾತೃಭೂಮಿಗೆ ಮಾತ್ರ ತೊಂದರೆ ಮಾಡಬೇಡಿ: ಸಲ್ಮಾನ್ ಖಾನ್

    ಏನೂ ಬೇಕಾದರೂ ಮಾಡಿ, ಮಾತೃಭೂಮಿಗೆ ಮಾತ್ರ ತೊಂದರೆ ಮಾಡಬೇಡಿ: ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್‍ನ ಬಾಹಿಜಾನ್ ಎಂದೇ ಗುರುತಿಸಿಕೊಂಡಿರುವ ನಟ ಸಲ್ಮಾನ್ ಖಾನ್‍ರವರು ಮಾಡಿರುವ ನೂತನ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

    ಸಲ್ಮಾನ್ ಖಾನ್ ತಮ್ಮ ಟ್ವೀಟ್‍ನಲ್ಲಿ ಭಾರತ ದೇಶ ಸ್ವಚ್ಛ ಇದ್ದರೆ, ನಾವು ಸಹ ಫಿಟ್ ಆಗಿರುತ್ತೇವೆ. ನಾವು ಫಿಟ್ ಆಗಿದ್ದರೆ, ದೇಶ ಕೂಡ ಫಿಟ್ ಆಗಿರುತ್ತದೆ. ನಿಮಗೆ ಏನು ಅನಿಸುತ್ತದೆಯೋ ಅದನ್ನೇ ಮಾಡಿ, ಆದರೆ ಮಾತೃಭೂಮಿಗೆ ಮಾತ್ರ ಯಾವುದೇ ತೊಂದರೆ ಕೊಡಬೇಡಿ ಎಂದು ಬರೆದುಕೊಂಡಿದ್ದಾರೆ.

    ಸಲ್ಲು ಟ್ವೀಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದ್ದು, 40 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 5 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿ, 1,800 ಮಂದಿ ಕಾಮೆಂಟ್ ಸಹ ಹಾಕಿದ್ದಾರೆ.

    ಸಲ್ಮಾನ್ ಖಾನ್‍ರವರು ತಮ್ಮ ಸಿನಿಮಾ, ರಿಯಾಲಿಟಿ ಶೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಟ್ವೀಟ್‍ನಲ್ಲಿ ಮಾತೃಭೂಮಿಯ ಬಗ್ಗೆ ಕಾಳಜಿಯನ್ನು ಹೊಂದಿರುವ ಅವರು, ತಮ್ಮ ಅಭಿಮಾನಿಗಳಿಗೆ ಮಾತೃಭೂಮಿಯ ಬಗ್ಗೆ ಹೆಚ್ಚು ಅಭಿಮಾನ ಹೊಂದಿರಬೇಕೆಂದು ಪರೋಕ್ಷವಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews