Tag: motherhood

  • ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ತಾಯಿಯಾಗುತ್ತಿರುವ ಗುಡ್‌ ನ್ಯೂಸ್‌ ಕೊಟ್ರು ʻಯೇ ಜವಾನಿ ಹೇ ದಿವಾನಿ’ ನಟಿ

    ಬಾಲಿವುಡ್‌ನ `ಯೇ ಜವಾನಿ ಹೇ ದಿವಾನಿ’ ಚಿತ್ರದ ಪೋಷಕ ನಟಿ ಎವೆಲಿನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡೇ ವರ್ಷಗಳಲ್ಲಿ ಮತ್ತೊಮ್ಮೆ ತಾಯಿಯಾಗಿದ್ದಾರೆ. ಬೇಬಿ ಬಂಪ್ ಫೋಟೋ ಹಂಚಿಕೊಂಚಿಕೊಳ್ಳುವ ಮೂಲಕ ನಟಿ ತಾಯ್ತನದ ಸಂಭ್ರಮದಲ್ಲಿದ್ದಾರೆ.

     

    View this post on Instagram

     

    A post shared by Evelyn Sharma (@evelyn_sharma)

    ನಟಿ ಎವೆಲಿನ್ ಶರ್ಮಾ ಬಾಲಿವುಡ್‌ನ ಸಾಹೋ, ನೌಟಂಕಿ ಸಾಲಾ, ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮೊದಲ ಮಗುವನ್ನ ನಟಿ ಬರಮಾಡಿಕೊಂಡಿದ್ದರು. ಈಗ ನಟಿ, ಎರಡನೇ ಮಗುವಿನ ಬರುವಿಕೆಯ ಖುಷಿಯಲ್ಲಿದ್ದಾರೆ.

     

    View this post on Instagram

     

    A post shared by Evelyn Sharma (@evelyn_sharma)

    ಮೇ 15, 2021ರಂದು ತುಷಾನ್ ಜೊತೆ ಎವೆಲಿನ್ ಮದುವೆಯಾಗಿದ್ದರು. ನವೆಂಬರ್‌ನಲ್ಲಿ ಮೊದಲ ಮಗು ಜನಿಸಿತು. ಈಗ ನಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ತಾಯಿಯಾಗಿ ಒಂದೇ ವರ್ಷದಲ್ಲಿ ನಟಿ ಮತ್ತೊಂದು ಅಚ್ಚರಿಯ ಮಾಹಿತಿಯೊಂದನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ ಪತಿ ತುಷಾನ್ ಭಿಂಡಿ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ದಕ್ಷಿಣದ ಸಿನಿಮಾಗಳತ್ತ ಬಾಲಿವುಡ್ ನಟಿ ಐಶ್ವರ್ಯ ರೈ ಚಿತ್ತ

     

    View this post on Instagram

     

    A post shared by Evelyn Sharma (@evelyn_sharma)

    ಎವೆಲಿನ್ ಶರ್ಮಾ ಅವರು ಎರಡನೆಯ ಬಾರಿ ಪಾಲಕರಾಗಿರುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎವೆಲಿನ್ ಮಗುವಿನ ಬಂಪ್‌ನೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಕ್ಯಾಮೆರಾಗೆ ಪೋಸ್ ಕೊಡುವಾಗ ನಗು ಬೀರಿದ್ದಾರೆ. ನಟಿಯ ಸೆಲೆಬ್ರಿಟಿ ಸ್ನೇಹಿತರು ಮತ್ತು ಅಭಿಮಾನಿಗಳು ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಕದ್ದುಮುಚ್ಚಿ ಮದುವೆ ಆಗಿಲ್ಲ, ಬಾಡಿಗೆ ತಾಯಿ ಸುಳ್ಳು : ನಯನತಾರಾ

    ಕೆಲ ದಿನಗಳಿಂದ ತಮಿಳಿನ ಖ್ಯಾತ ನಟಿ ನಯನತಾರಾ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯಿತ್ತು. ಅಲ್ಲದೇ, ಅವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗಾಗಲೇ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ನಯನತಾರಾ ಸಹಜೀವನ ನಡೆಸುತ್ತಿದ್ದು, ಅವರಿಬ್ಬರೂ ಸದ್ಯದಲ್ಲೇ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲಿದ್ದಾರೆ ಎಂದು ಬಹುತೇಕ ಮಾಧ್ಯಮಗಳು ಸುದ್ದಿ ಮಾಡಿದ್ದವು. ಕೊನೆಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ವರ್ಷಗಳ ನಂತರ ನಯನತಾರಾ ಮೌನ ಮುರಿದಿದ್ದಾರೆ.

    ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಯನತಾರಾ ಒಟ್ಟಿಗೆ ಇರುವ ಹಲವು ಫೋಟೋಗಳು  ಲೀಕ್ ಆದರೂ, ಅವರಿಬ್ಬರೂ ಒಂದೇ ಮನೆಯಲ್ಲೇ ವಾಸ ಮಾಡುತ್ತಿದ್ದಾರೆಂಬ ವಿಷಯ ಹೊರ ಬಿದ್ದರೂ ಈ ಕುರಿತು ಇಬ್ಬರೂ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಮೊದಲ ಬಾರಿಗೆ ನಯನತಾರಾ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:  ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

    “ನಾನು ಕದ್ದುಮುಚ್ಚಿ ಮದುವೆ ಆಗಿಲ್ಲ. ಅಸಲಿಯಾಗಿ ನನಗೆ ಮದುವೆಯೇ ಆಗಿಲ್ಲ. ಮದುವೆ ಆಗದೇ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ. ಜತೆಗೆ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ನಯನತಾರಾ ಏನೇ ಹೇಳಿದರೂ ಅವರ ಆಪ್ತರು ಮಾತ್ರ ಅವರ ಮಾತನ್ನು ಒಪ್ಪುತ್ತಿಲ್ಲ. ಹಲವು ತಿಂಗಳಿಂದ ನಿರ್ದೇಶಕ ವಿಘ್ನೇಶ್ ಜತೆ ಒಂದೇ ಮನೆಯಲ್ಲೇ ನಯನತಾರಾ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ದೇವಸ್ಥಾನಗಳಿಗೆ ಒಟ್ಟಿಗೆ ಹೋಗಿದ್ದಾರೆ. ಖಾಸಗಿತನ ಕಳೆಯುವುದಕ್ಕಾಗಿ ಹಲವು ರೆಸಾರ್ಟ್ ಗಳಲ್ಲೂ ಈ ಜೋಡಿ ಕಾಣಿಸಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಮದುವೆ ವಿಷಯ ಪ್ರಸ್ತಾಪವಾಗಿದೆ ಎನ್ನುತ್ತಾರೆ.

  • ತಾಯ್ತನ ಕಠಿಣ, ಸವಾಲಿನ ಕೆಲಸ ಅಂದ್ರು ಮೇಘನಾ ರಾಜ್

    ತಾಯ್ತನ ಕಠಿಣ, ಸವಾಲಿನ ಕೆಲಸ ಅಂದ್ರು ಮೇಘನಾ ರಾಜ್

    ಬೆಂಗಳೂರು: ಮಗನ ಆರೈಕೆಯಲ್ಲಿರುವ ನಟಿ ಮೇಘನಾ ರಾಜ್ ಅವರು ತಾಯ್ತನ ಅನ್ನೋದು ಕಠಿಣ ಹಾಗೂ ಬಹಳ ಸವಾಲಿನ ಕೆಲಸ ಎಂದು ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ್ದ ಅವರು, ಈ ಭೂಮಿ ಮೇಲೆ ಅತ್ಯಂತ ಕಷ್ಟದ ಕೆಲಸ ಅಂದ್ರೆ ಅದು ತಾಯ್ತನ ಎಂಬುದನ್ನು ರಿವೀಲ್ ಮಾಡಿದ್ದಾರೆ. ತಾನೊಬ್ಬ ತಾಯಿಯಾದ ಬಳಿಕವೇ ಅದರ ಮೌಲ್ಯ ಅರ್ಥವಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡರು.

    ಈ ಜಗತ್ತಿನ ಅತ್ಯಂತ ಕಷ್ಟದ ಕೆಲಸವೆಂದರೆ ಅದು ತಾಯ್ತನ ಅನ್ನೋದು ನನಗೆ ಈಗ ಮನವರಿಕೆಯಾಗಿದೆ. ತಾಯಿಯ ಪ್ರೀತಿ ಹಾಗೂ ಮೌಲ್ಯವನ್ನು ಸ್ವತಃ ನೀವು ಅನುಭವಿಸುವವರೆಗೂ ಅರ್ಥಮಾಡಿಕೊಳ್ಳುವುದಿಲ್ಲ ಎಂಬ ಮಾತು ನಿಜವಾಗಲೂ ಸತ್ಯ ಅನಿಸಿದೆ. ನನ್ನ ತಾಯಿ ನನ್ನನ್ನು ಅತ್ಯಂತ ಮುದ್ದಿಸಿ ಬೆಳೆಸಿದ್ದಾರೆ. ನನಗೆ ಬೇಕಾದ್ದನ್ನೆಲ್ಲ ಮಾಡಿದ ತಾಯಿಗೆ ನನ್ನ ಸೆಲ್ಯೂಟ್ ಎಂದು ತಿಳಿಸಿದ್ದಾರೆ.

    ತಾಯಿ ಕೇವಲ ಚಿಕ್ಕಂದಿನಲ್ಲಿ ಮಾತ್ರವಲ್ಲ ಈಗಲೂ ನನಗೆ ಅವರೇ ಶಕ್ತಿ. ನನಗೆ ಧೈರ್ಯ ತುಂಬಿ ಜೀವನ ನಡೆಸಲು ಸಹರಿಸುತ್ತಾರೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪತಿಯನ್ನು ಕಳೆದುಕೊಂಡು ನೋವು ಅನುಭವಿಸುತ್ತಿದ್ದೆ. ಆಗ ಪ್ರತಿ ಹಂತದಲ್ಲಿಯೂ ನನ್ನ ಜೊತೆಯಾಗಿ ಬೆನ್ನಲುಬಾಗಿ ನಿಂತು ಧೈರ್ಯ ತುಂಬಿದರು. ಎಲ್ಲರೂ ನನ್ನ ಧೈರ್ಯವಂತೆ ಎಂದು ಹೇಳಿದರು. ಆದರೆ ನನ್ನೊಳಗಿದ್ದ ಸಂಕಟ, ನೋವನ್ನು ನನ್ನ ತಾಯಿ ಮಾತ್ರ ನೋಡಿದ್ದಾರೆ ಎಂದು ಹೇಳುತ್ತಾ ಮೇಘನಾ ಗದ್ಗದಿತರಾದರು.

    2020ರ ಅಕ್ಟೋಬರ್ 22ರಂದು ಮೇಘನಾ ರಾಜ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತರು. ಈ ಮೂಲಕ ಪತಿ ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಸ್ವತಃ ಚಿರುನೇ ಮತ್ತೆ ಹುಟ್ಟಿ ಬಂದಷ್ಟು ಸಂತಸವಾಗಿದೆ. ಈ ಮಧ್ಯೆ ತಾಯಿ- ಮಗು ಹಾಗೂ ಮೇಘನಾ ತಂದೆ-ತಾಯಿಯನ್ನು ಕೊರೊನಾ ವಕ್ಕರಿಸಿಕೊಂಡಿತ್ತು. ಹೀಗಾಗಿ ತಾಯಿ-ಮಗ ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯದ ಟೆಸ್ಟ್ ನಲ್ಲಿ ವರದಿ ನೆಗೆಟಿವ್ ಬಂದಿದ್ದು, ತಾಯಿ- ಮಗ ಆರೋಗ್ಯವಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಗನಿಗೆ ನಾಮಕರಣ ಕಾರ್ಯಕ್ರಮವನ್ನು ಕೂಡ ನೆರವೇರಿಸಲಿದ್ದು, ಆ ದಿನಕ್ಕಾಗಿ ಚಿರು ಹಾಗೂ ಮೇಘನಾ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಮೂರು ತಿಂಗಳು ತಾಯ್ತನವನ್ನು ಮುಂದೂಡಿ: ಡಾ. ಪದ್ಮಿನಿ ಪ್ರಸಾದ್ ಸಲಹೆ

    ಮೂರು ತಿಂಗಳು ತಾಯ್ತನವನ್ನು ಮುಂದೂಡಿ: ಡಾ. ಪದ್ಮಿನಿ ಪ್ರಸಾದ್ ಸಲಹೆ

    ಬೆಂಗಳೂರು: ಕೊರೊನಾ ವೈರಸ್ ಸೋಂಕು ಎಲ್ಲೆಡೆ ಹರಡುತ್ತಿರುವ ಹಿನ್ನೆಲೆ ಮೂರು ತಿಂಗಳುಗಳ ಕಾಲ ತಾಯ್ತನ ಮುಂದೂಡಿಕೆ ಮಾಡಿಕೊಂಡರೆ ಒಳ್ಳೆಯದು ಎಂದು ಸ್ತ್ರಿರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಸಲಹೆ ನೀಡಿದ್ದಾರೆ.

    ತಾಯ್ತನ ಮಹಿಳೆಯರ ಬಾಳಿನ ಪ್ರಮುಖ ಘಟ್ಟ. ಆದರೆ ಸದ್ಯ ಎಲ್ಲೆಡೆ ಕೊರೊನಾ ವೈರಸ್ ಭೀತಿ ಇರುವ ಕಾರಣಕ್ಕೆ ತಾಯ್ತನದ ಪ್ಲಾನ್ ಮಾಡಿದ ದಂಪತಿ ಇನ್ನು ಮೂರು ತಿಂಗಳ ಕಾಲ ಈ ಪ್ಲಾನ್ ಮುಂದೂಡಿಕೆ ಮಾಡಿದರೆ ಉತ್ತಮ ಅಂತ ಪದ್ಮಿನಿ ಅವರು ಸಲಹೆ ನೀಡಿದ್ದಾರೆ. ಗರ್ಭಧಾರಣೆಯಾದರೆ ಆಸ್ಪತ್ರೆಗೆ ಭೇಟಿ ಕೊಡಬೇಕಾಗುತ್ತೆ. ಈ ಸಮಯದಲ್ಲಿ ಸೋಂಕು ತಗುಲುವ ಭೀತಿ ಇರುತ್ತೆ. ಅಲ್ಲದೇ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಒಳ್ಳೆಯದು ಎಂದು ಸೂಚಿಸಿದ್ದಾರೆ.

    ಅಷ್ಟೇ ಅಲ್ಲದೇ ಕೊರೊನಾ ಭೀತಿಯಲ್ಲಿ ರೋಗಿಗಳಿಗೆ ಆಪರೇಷನ್ ಮುಂದೂಡಿಕೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ತೀರಾ ಎಮರ್ಜೆನ್ಸಿ ಅಲ್ಲದ ನಿಗದಿಯಾಗಿರುವ ಆಪರೇಷನ್ ಮುಂದೂಡಿಕೆ ಮಾಡಲು ವೈದ್ಯರು ರೋಗಿಗಳಿಗೆ ಸೂಚಿಸುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಯ್ತನದ ಪ್ಲಾನ್ ಮುಂದೂಡಿಕೆ ಮಾಡೋದೋ ಬೇಡ್ವೋ ಅಂತಾ ಕನ್‍ಫ್ಯೂಷನ್‍ನಲ್ಲಿ ದಂಪತಿಗಳು ವೈದ್ಯರ ಮೊರೆ ಹೋಗುತ್ತಿದ್ದಾರೆ.

    ಆಸ್ಪತ್ರೆ ಆವರಣದಲ್ಲಿ ನೂರಾರು ರೋಗಿಗಳು ಇರುತ್ತಾರೆ. ಅವರಿಗೆ ಸೋಂಕು ತಲುಲಿದ್ದರೆ ಅದು ಗರ್ಭಿಣಿಯರಿಗೆ ಹಾಗೂ ಇತರೆ ರೋಗಿಗಳಿಗೆ ತಗುಲುವ ಸಾಧ್ಯತೆ ಇರುತ್ತೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ತಗಲಿದರೆ ಗುಣಪಡಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಮುನ್ನೆಚ್ಚರಿಲಾ ಕ್ರಮಗಳನ್ನು ತೆಗೆದುಕೊಳ್ಳೋದು ಬಹಳ ಮುಖ್ಯವಾಗುತ್ತೆ. ಆದ್ದರಿಂದ ವೈದ್ಯರು ಆಪರೇಷನ್ ಮಾಡಿಸುವವರಿಗೆ ಹಾಗೂ ಮಗುವನ್ನು ಪಡೆಯಲು ಇಚ್ಛಿಸುವ ದಂಪತಿಗಳಿಗೆ ವೈದ್ಯರು ಹೀಗೆ ಸಲಹೆ ನೀಡುತ್ತಾರೆ ಎಂದು ಪದ್ಮಿನಿ ಅವರು ತಿಳಿಸಿದ್ದಾರೆ.

    ಇಂಗ್ಲೆಂಡ್‍ನಲ್ಲಿ ಜನಿಸಿದ ನವಜಾತ ಶಿಶುವಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆ ವೈದ್ಯರು ಮಹಿಳೆಯರಿಗೆ ತಮ್ಮ ತಾಯ್ತನವನ್ನು ಮುಂದೂಡಿಕೆ ಮಾಡಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಇಂಗ್ಲೆಂಡ್‍ನಲ್ಲಿ ತಾಯಿಗೆ ಸೋಂಕು ಇದ್ದ ಕಾರಣ ಅದು ಮಗುವಿಗೂ ತಗುಲಿದೆ. ತಾಯಿಗೆ ಹೆರಿಗೆಯ ಮೊದಲು ಕೊರೊನಾ ಸೋಂಕು ತಟ್ಟಿರುವ ಶಂಕೆ ಹಿನ್ನೆಲೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಆದರೆ ಅದರ ವರದಿ ತಾಯಿ ಮಗುವಿಗೆ ಜನ್ಮ ಕೊಟ್ಟ ನಂತರ ಬಂದಿದೆ. ಹೀಗಾಗಿ ಆಗ ತಾನೆ ಹುಟ್ಟಿದ ಶಿಶುವಿಗೂ ಸೋಂಕು ಹರಡಿದೆ. ವಿಶ್ವದಲ್ಲೇ ಅತೀ ಚಿಕ್ಕ ವಯಸ್ಸಿಗೆ ಕೊರೊನಾ ಸೋಂಕು ತಟ್ಟಿದ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿರುವ ಆಸ್ಪತ್ರೆಯಲ್ಲಿ ತಾಯಿ, ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

  • ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ರ್ಭಿಣಿಯರಿಗೆ ತಮ್ಮ ಡಯಟ್‍ನಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದೇ ಇರುತ್ತೆ. ತಾಯ್ತನದ ಖುಷಿಯನ್ನು ಸವಿಯಲು ನಾವು ನಿಮಗೆ ಸಹಾಯ ಮಾಡ್ತಿವಿ. ಹೌದು, ಗರ್ಭಾವಸ್ಥೆಯಲ್ಲಿ ಮಹಿಳೆಯರು ಯಾವ ರೀತಿ ಸಸ್ಯಹಾರಿ ಆಹಾರವನ್ನು ಸೇವಿಸಿದರೇ ಒಳ್ಳೆಯದು ಎನ್ನುವ ಒಂದೊಳ್ಳೆ ಸಸ್ಯಹಾರಿ ಆಹಾರಗಳ ಪಟ್ಟಿ ಇಲ್ಲಿದೆ. ಇದನ್ನು ಅನುಸರಿಸಿ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಿ.

    ಉತ್ತಮ ಪೌಷ್ಠಿಕಾಂಶವನ್ನು ಸಸ್ಯಹಾರ ಆಹಾರಗಳು ಹೊಂದಿರುತ್ತದೆ. ಅದರಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಗಿರುತ್ತದೆ. ಸಸ್ಯಹಾರಿ ಆಹಾರವನ್ನು ಸೇವಿಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಈ ರೀತಿಯ ಆಹಾರಗಳು ಸಹಾಯಕಾರಿ.

    ಸಸ್ಯಹಾರಿ ಆಹಾರಗಳ ಪಟ್ಟಿ ಈ ಕೆಳಗಿನಂತಿದೆ:

    1. ಒಣ ಹಣ್ಣು:
    ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ವಾಲ್‍ನಟ್, ಬಾದಾಮಿ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರೊಟೀನ್ ಅಂಶ ಅಡಕವಾಗಿರುತ್ತದೆ. ಇವುಗಳ ಸೇವನೆಯಿಂದ ದೇಹಕ್ಕೆ ಅವಶ್ಯಕವಾಗಿರುವ ವಿಟಮಿನ್-ಇ ಅಂಶ ಸಿಗುತ್ತದೆ. ಹಾಗೆಯೇ ನಿಮ್ಮ ತೂಕವನ್ನು ಹೆಚ್ಚಿಸಿ ಉತ್ತಮ ಆರೋಗ್ಯ ನೀಡುತ್ತದೆ.

    2. ತೆಂಗಿನಕಾಯಿ:
    ಇದರಲ್ಲಿ ಆರೋಗ್ಯಕರ ಕೊಬ್ಬಿನ ಅಂಶ ಹೇರಳವಾಗಿರುತ್ತದೆ. ದೇಹಕ್ಕೆ ಬೇಕಾಗುವ ಶಕ್ತಿಯನ್ನು ತೆಂಗಿನಕಾಯಿ ತಿನ್ನುವುದರಿಂದ ಪಡೆಯಬಹುದು. ಇದನ್ನು ನೀವು ನೇರವಾಗಿಯು ತಿನ್ನಬಹುದು, ಇಲ್ಲದಿದ್ದರೆ ಇದರಿಂದ ಚಟ್ನಿ ತಯಾರಿಸಿ ಬೇರೆ ಡಿಶ್ ಗಳ ಜೊತೆಗೆ ಸವಿಯಬಹುದು.

    3. ಧಾನ್ಯಗಳು:
    ಧಾನ್ಯಗಳು ಹಾಗೂ ಬೇಳೆಕಾಳುಗಳಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆ. ಇವುಗಳನ್ನು ತಾವು ಸೇವಿಸುವ ಆಹಾರಗಳಲ್ಲಿ ಬಳಸುವುದರಿಂದ ಗರ್ಭಿಣಿಯರಿಗೆ ಉತ್ತಮ ಪ್ರೊಟೀನ್ ದೊರೆಯುತ್ತದೆ.

    4. ಬೀನ್ಸ್:
    ಬೀನ್ಸ್ ಪ್ರೊಟೀನ್ ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಪ್ರತಿದಿನ ಬೀನ್ಸ್ ಸೇವನೆಯಿಂದ ನಮಗೆ ಉತ್ತಮ ಫೈಬರ್ ಅಂಶ ದೊರೆಯುತ್ತದೆ. ಸ್ಟ್ರಿಂಗ್ ಬೀನ್ಸ್, ಹಸಿರು ಬೀನ್ಸ್, ಫಾವಾ ಬೀನ್ಸ್ ಮುಂತಾದ ವಿವಿಧ ಬಗೆಯ ಬೀನ್ಸ್‍ಗಳನ್ನು ಸೇವಿಸಬಹುದು.

    5. ಕ್ಯಾರೆಟ್ (ಗಜ್ಜರಿ):
    ಕ್ಯಾರೆಟ್ ವಿಟಮಿನ್-ಎ ಅಂಶವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿಯರು ತಮ್ಮ ಆಹಾರದಲ್ಲಿ ಬಳಸುವುದು ಒಳ್ಳೆಯದು. ಕ್ಯಾರೇಟ್ ಸೇವನೆಯಿಂದ ನಿಮ್ಮ ಕಣ್ಣುಗಳ ದೃಷ್ಟಿ ಮಾತ್ರವಲ್ಲದೆ ಮಗುವಿನ ದೃಷ್ಟಿಯು ಉತ್ತಮವಾಗುತ್ತದೆ.

    6. ಸೋಯಾ:
    ಗರ್ಭಿಣಿಯರಿಗೆ ಅವಶ್ಯಕವಾಗಿರುವ ಪ್ರೊಟೀನ್ ಅಂಶವನ್ನು ಸೋಯಾ ಹೊಂದಿರುತ್ತದೆ. ಸೋಯಾದಲ್ಲಿ ವಿಟಮಿನ್-ಡಿ ಪೂರಕವಾಗಿರುತ್ತದೆ. ಹೀಗಾಗಿ ಗರ್ಭಿಣಿಯರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

    7. ಮೊಸರು:
    ಮೊಸರು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಒಳ್ಳೆಯ ಬ್ಯಾಕ್ಟೀರಿಯಾ ಹಾಗೂ ಕ್ಯಾಲ್ಸಿಯಂನ ಒಂದೊಳ್ಳೆ ಮಿಶ್ರಣ ಎಂದರೆ ಮೊಸರು. ಗರ್ಭಿಣಿಯರಲ್ಲಿ ಹೆಚ್ಚಾಗಿ ಎದೆಯುರಿ ಕಾಣಿಸಿಕೊಳ್ಳುತ್ತದೆ. ಮೊಸರು ಸೇವಿಸುವುದರಿಂದ ಎದೆಯುರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

    8. ಕಿಡ್ನಿ ಬೀನ್ಸ್:
    ಸಸ್ಯಹಾರಿ ಮೂಲವಾದ ಕಿಡ್ನಿ ಬೀನ್ಸ್ ನಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇದು ಮಗುವಿನ ಬೆಳವಣಿಗೆಗೆ ಸಹಾಯಕಾರಿ. ಅಲ್ಲದೇ ಇದು ಗರ್ಭಿಣಿಯರಿಗೆ ಉತ್ತಮ ಆಹಾರವಾಗಿರುತ್ತದೆ.

    9. ಹಸಿರು ತರಕಾರಿಗಳು:
    ಶೂನ್ಯ ಕ್ಯಾಲರಿ ಹಾಗೂ ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುವ ಅದ್ಭುತ ಆಹಾರವೆಂದರೆ ಅದು ಹಸಿರು ತರಕಾರಿಗಳು. ಪಾಲಕ್, ಬ್ರೊಕಲಿ, ಸೊಪ್ಪು ಇತ್ಯಾದಿಗಳನ್ನು ಅವಶ್ಯವಾಗಿ ಗರ್ಭಿಣಿಯರು ಸೇವಿಸಬೇಕು.

    10. ಪನ್ನೀರ್:
    ಪನ್ನೀರ್ ಹೆಚ್ಚಿನ ಪ್ರೋಟಿನ್ ಹೊಂದಿರುತ್ತದೆ. ಇದರಲ್ಲಿ ಹಾಲಿನ ಅಂಶ ಹಾಗೂ ಕ್ಯಾಲ್ಸಿಯಂ ಅಡಕವಾಗಿರುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆಗೆ ಪನ್ನೀರ್ ಸಹಕಾರಿ.

    ತಾಯ್ತನ ಎಂಬುದು ಮಹಿಳೆಯ ಜೀವನದಲ್ಲಿ ಬರುವ ಒಂದು ಅತ್ಯಮೂಲ್ಯವಾದ ಒಂದು ಭಾಗ. ತಾನು ನೋವು ತಿಂದು ಮತ್ತೊಂದು ಜೀವಕ್ಕೆ ಜನ್ಮಕೊಡುವ ಮೂಲಕ ತಾನು ಹೊಸ ಜನ್ಮ ಪಡೆಯುತ್ತಾಳೆ ತಾಯಿ. ಈ ವಿಶೇಷ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಉತ್ತಮ ಆರೈಕೆ ಹಾಗೂ ಪೌಷ್ಠಿಕ ಆಹಾರವನ್ನು ನೀಡಬೇಕು.

  • ಮಹಿಳಾ ಕೈದಿಯ ಮಗುವಿಗೆ ಎದೆಹಾಲುಣಿಸಿದ ಮಹಿಳಾ ಪೊಲೀಸ್

    ಮಹಿಳಾ ಕೈದಿಯ ಮಗುವಿಗೆ ಎದೆಹಾಲುಣಿಸಿದ ಮಹಿಳಾ ಪೊಲೀಸ್

    ಬೀಜಿಂಗ್: ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಹಿಳಾ ಕೈದಿಯ ಮಗುವಿಗೆ ಹಾಲುಣಿಸುವ ಮೂಲಕ ಚೀನಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಮಗುವಿಗೆ ಹಾಲುಣಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಹೆಣ್ಣಿನ ಮಾತೃತ್ವದ ಪ್ರೀತಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬರುತ್ತಿವೆ.

    ಮಧ್ಯ ಚೀನಾದ ಶಾಂಕ್ಸಿ ಜಿನ್ಝೊಂಗ್ ಮಧ್ಯಂತರ ಪೀಪಲ್ಸ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 23 ರಂದು ಪ್ರಕರಣವೊಂದರ ವಿಚಾರಣೆಗೆ ಮಹಿಳೆ ಕೈದಿ ಹಾಜರಾಗಿದ್ದಳು. ಕೋರ್ಟ್ ವಿಚಾರಣೆ ಆರಂಭವಾಗುತ್ತಿದಂತೆ ನಾಲ್ಕು ತಿಂಗಳ ಮಗು ಅಳಲು ಆರಂಭಿಸಿದೆ. ಈ ಸಂದರ್ಭದಲ್ಲಿ ಆರೋಪಿಯ ಅನುಮತಿಯನ್ನು ಪಡೆದ ಪೊಲೀಸ್ ಅಧಿಕಾರಿ ಹಾವೊ ಲಿನಾ ಮಗುವನ್ನು ಸಂತೈಸಲು ತಾನೇ ಮಗುವಿಗೆ ಹಾಲುಣಿಸಿದ್ದಾಳೆ.

    ಈ ದೃಶ್ಯಗಳನ್ನು ಮಹಿಳಾ ಪೊಲೀಸ್ ಅಧಿಕಾರಿಯ ಸಹೋದ್ಯೋಗಿಯೊಬ್ಬರು ಕ್ಲಿಕ್ಕಿಸಿದ್ದು, ಇವನ್ನು ಕೋರ್ಟ್ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಲಿನಾ ಮಾತೃತ್ವ ಪ್ರೀತಿಗೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿವೆ.

    ನಾನು ಒಂದು ಮಗುವಿನ ತಾಯಿಯಾಗಿದ್ದು ಮಗುವಿನ ಹಸಿವಿನ ಬಗ್ಗೆ ನನಗೆ ಅರಿವಿದೆ. ಮಗುವನ್ನು ಸಂತೈಸಲು ಕೈಯಲ್ಲಾದ ಕಾರ್ಯವನ್ನು ನಾನು ಮಾಡಿದ್ದೇನೆ. ಇಂತಹ ಸಂದರ್ಭದಲ್ಲಿ ಪ್ರತಿ ಪೊಲೀಸ್ ಅಧಿಕಾರಿಯು ಇದೇ ರೀತಿ ಮಾಡುತ್ತಾರೆ. ನಾನು ತಾಯಿಯಾಗಿರುವುದರಿಂದ ಈ ಸಹಾಯವನ್ನು ಮಾಡಲು ಸಾಧ್ಯವಾಯಿತು ಎಂದು ಲಿನಾ ಸ್ಥಳೀಯ ಮಾಧಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಪೊಲೀಸ್ ಅಧಿಕಾರಿ ತನ್ನ ಮಗುವಿಗೆ ಹಾಲುಣಿಸಿ ಸಂತೈಸಿದ ವಿಷಯ ತಿಳಿದ ಆರೋಪಿ ಆಕೆಯ ಪ್ರೀತಿಗೆ ಧನ್ಯವಾದ ತಿಳಿಸಿ ಕಣ್ಣಿರಿಡುತ್ತಾ ಕೋರ್ಟ್‍ನಿಂದ ಹೊರನಡೆದಿದ್ದಾರೆ.