Tag: mother

  • ತಾಯಿ, ತಂಗಿಯನ್ನ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

    ತಾಯಿ, ತಂಗಿಯನ್ನ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

    ಬೆಂಗಳೂರು: ತಾಯಿ ಮತ್ತು ತಂಗಿಗೆ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.

    ತಾಯಿ ಶ್ಯಾಮಲಾ ಮತ್ತು ತಂಗಿ ಮೂಕಾಂಬಿಕಾ ಸಾವನ್ನಪ್ಪಿದ ದುರ್ದೈವಿಗಳು. ತಾಯಿ ಮತ್ತು ತಂಗಿ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದು, ವೈದ್ಯ ಗೋವಿಂದರಾಜು ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ವೈಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

    ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ತಾನೋರ್ವ ವೈದ್ಯನಾಗಿದ್ದರೂ, ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.

    ಈ ಎಲ್ಲ ತೊಂದರೆಗಳಿಂದ ಬೇಸತ್ತ ಗೋವಿಂದರಾಜು ತಾಯಿ ಮತ್ತು ತಂಗಿಗೆ ಓವರ್ ಡೋಸ್ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ, ತಾನು ಅದೇ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗೋವಿಂದರಾಜು ಸಂಬಂಧಿಕರು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಸಂಬಂಧಿಕರು ಬರುವಷ್ಟರಲ್ಲಿ ತಾಯಿ ಮತ್ತು ತಂಗಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ತೀವ್ರ ಅಸ್ವಸ್ಥನಾಗಿದ್ದ ಗೋವಿಂದರಾಜುನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Eqq6OdIyUYI

  • ತಾಯಿಯ ಚಿಕಿತ್ಸೆಗೆ ಹಣವಿಲ್ಲವೆಂದು ಆಕೆಯನ್ನು ಕೊಂದೇ ಬಿಟ್ಟ ಮಗ

    ತಾಯಿಯ ಚಿಕಿತ್ಸೆಗೆ ಹಣವಿಲ್ಲವೆಂದು ಆಕೆಯನ್ನು ಕೊಂದೇ ಬಿಟ್ಟ ಮಗ

    ಮುಂಬೈ: ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ ಎಂದು ಪಾಪಿ ಮಗ ಆಕೆಯನ್ನು ಕೊಲೆ ಮಾಡಿದ ಘಟನೆಯೊಂದು ಶುಕ್ರವಾರ ನಸುಕಿನ ಜಾವ ಮಹಾರಾಷ್ಟ್ರದ ಮುಂಬೈನ ದಹಿಸರ್ ವೆಸ್ಟ್ ನಲ್ಲಿ ನಡೆದಿದೆ.

    ಯೋಗೇಶ್(52) ತನ್ನ 80 ವರ್ಷದ ತಾಯಿ ಲಲೀತಾ ಶೆಣೈಯನ್ನು ಕೊಲೆ ಮಾಡಿದ ವ್ಯಕ್ತಿ. ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲವೆಂದು ಯೋಗೇಶ್ ಮೊದಲು ತಾಯಿಯ ಮುಖವನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ನಂತರ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.

    ಯೋಗೇಶ್‍ಗೆ ತಾಯಿಯ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಕೆಲವು ವರ್ಷಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿ ನಮ್ಮ ಬಳಿ ಶರಣಾಗಿ ಕಋತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ಎಂಎಚ್‍ಬಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

    ಯೋಗೇಶ್ ಖಾಸಗಿ ಕಂಪನಿಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದನು. ಕೆಲವು ವರ್ಷಗಳ ಹಿಂದೆ ಪತ್ನಿ ಕೂಡ ಆತನನ್ನು ಬಿಟ್ಟು ಹೋಗಿದ್ದರಿಂದ ಆತ ಖಿನ್ನತೆಗೊಳಗಾಗಿದ್ದನು. ತಾಯಿಯ ಚಿಕಿತ್ಸೆಗೆ ಹಣವಿಲ್ಲದೇ ಆಕೆಯ ಜೊತೆ ದಿನ ಜಗಳವಾಡುತ್ತಿದ್ದನು.

    ಶುಕ್ರವಾರ ನಸುಕಿನ ಜಾವ ಕೂಡ ತಾಯಿ ಹಾಗೂ ಮಗನ ನಡುವೆ ಜಗಳವಾಗಿದೆ. ಇಬ್ಬರ ಜಗಳದಿಂದ ಅಕ್ಕಪಕ್ಕದ ಮನೆಯವರು ಎದ್ದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಮೊದಲೇ ಯೋಗೇಶ್ ತನ್ನ ತಾಯಿಯನ್ನು ಕೊಲೆ ಮಾಡಿದ್ದಾನೆ.

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಲು ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಯೋಗೇಶ್ ಕೋಪದಲ್ಲಿ ನನ್ನ ತಾಯಿಯ ಕೊಲೆ ನಡೆದುಹೋಯಿತು ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಕುಡಿದ ಮತ್ತಿನಲ್ಲೇ ಶಸ್ತ್ರಚಿಕಿತ್ಸೆ- ವೈದ್ಯನ ಎಡವಟ್ಟಿಗೆ ತಾಯಿ, ಮಗು ಬಲಿ

    ಗಾಂಧಿನಗರ: ಕುಡಿತ ಮತ್ತಿನಲ್ಲೇ ವೈದ್ಯನೊಬ್ಬ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಬಾಣಂತಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ಗುಜರಾತ್ ರಾಜ್ಯದ ರಾಜ್‍ಕೋಟ್ ಜಿಲ್ಲೆಯಲ್ಲಿ ನಡೆದಿದೆ.

    ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಸಾವಿಗೆ ಕಾರಣವಾಗಿದ್ದ ಸೋನಾವಾಲಾ ಆಸ್ಪತ್ರೆಯ ಆರ್‍ಎಂಓ(ರೆಸಿಡೆಂಟ್ ಮೆಡಿಕಲ್ ಆಫೀಸರ್) ಡಾ.ಪರೇಶ್ ಲಖಾನಿ (50)ಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ವೈದ್ಯ ಕಳೆದ 15 ವರ್ಷಗಳಿಂದ ಸೋನಾವಾಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದನು. ಸದ್ಯ ತನಿಖೆಯನ್ನು ಆರಂಭಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಳಿಕ ತಾಯಿ-ಮಗು ವೈದ್ಯಕೀಯ ಕಾರಣಕ್ಕೆ ಮೃತ ಪಟ್ಟಿದ್ದಾರಾ ಅಥವಾ ವೈದ್ಯನ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆಂಬುದು ಸಾಬೀತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಘಟನೆ?
    ಸೋಮವಾರ ಸಂಜೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯನ್ನು ರಾಜ್‍ಕೋಟ್ ನ ಸೋನಾವಾಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗರ್ಭಿಣಿಯ ಪರಿಸ್ಥಿತಿಯನ್ನು ಅರಿತ ಡಾ. ಲಖಾನಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದ್ದನು. ನಂತರ ಸಿಸೇರಿಯನ್ ಮಾಡಿ ಮಗುವನ್ನು ಹೊರತೆಗೆಯಲಾಯಿತು.

    ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು. ಇತ್ತ ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಇದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಯತ್ನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ.

    ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯ ಕುಡಿದ ಅಮಲಿನಲ್ಲಿದ್ದು, ಆತನ ನಿರ್ಲಕ್ಷ್ಯದಿಂದಲೇ ತಾಯಿ-ಮಗು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗ್ಳನ್ನ ರಕ್ಷಿಸಲು ಬಾವಿಗೆ ಹಾರಿದ ತಾಯಿ-ಇಬ್ಬರೂ ನೀರು ಪಾಲು

    ಮಗ್ಳನ್ನ ರಕ್ಷಿಸಲು ಬಾವಿಗೆ ಹಾರಿದ ತಾಯಿ-ಇಬ್ಬರೂ ನೀರು ಪಾಲು

    ಬೆಳಗಾವಿ (ಚಿಕ್ಕೋಡಿ): ಕುಡಿಯುವ ನೀರು ತರಲು ಹೋಗಿದ್ದ ತಾಯಿ ಮಗಳಿಬ್ಬರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ.

    ಕಮತನೂರು ಗ್ರಾಮದ ಭಾರತಿ ಮನೋಹರ ಕಮತೆ (45), ಶ್ರೀದೇವಿ ಮನೋಹರ ಕಮತೆ (21) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಮನೆಬಳಿ ಇದ್ದ ಬಾವಿಯಿಂದ ಕುಡಿಯುವ ನೀರು ತರಲು ತಾಯಿ ಭಾರತಿ ಹಾಗೂ ಮಗಳು ಶ್ರೀದೇವಿ ಹೋಗಿದ್ದರು.

    ನೀರು ಸೇದುತ್ತಿದ್ದ ವೇಳೆ ಆಯ ತಪ್ಪಿ ಮಗಳು ಬಾವಿಗೆ ಬಿದ್ದಿದ್ದಾಳೆ. ತಕ್ಷಣ ಮಗಳನ್ನು ರಕ್ಷಿಸಲು ಹೋಗಿ ತಾಯಿ ಕೂಡ ಬಾವಿಗೆ ಹಾರಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ಸಂಕೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ಮನೆಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯ- ಹೆತ್ತ ತಂದೆ ತಾಯಿಯನ್ನೇ ಹೊರ ಹಾಕಿದ ಪಾಪಿ ಮಗ

    ತುಮಕೂರು: ಹೆತ್ತ ತಂದೆ ತಾಯಿಯನ್ನೇ ಪಾಪಿ ಮಗನೊಬ್ಬ ಮನೆಯಿಂದ ಹೊರಹಾಕಿರುವ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ.

    ತುಮಕೂರು ತಾಲೂಕಿನ ಲಕ್ಕೇನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾದ ನರಸಿಂಹಮೂರ್ತಿ ತನ್ನ ವೃದ್ಧ ತಂದೆ ವೆಂಕಟಪ್ಪ ಹಾಗೂ ತಾಯಿ ಗಂಗಮ್ಮನನ್ನ ದಿನನಿತ್ಯ ಹಿಂಸಿಸಿ ಮನೆಯಿಂದ ಹೊರದಬ್ಬಿದ್ದಾನೆ. ಬೀದಿಗೆ ಬಂದ ಹೆತ್ತವರು ಸೂರಿಲ್ಲದೇ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.

    ಅಷ್ಟಕ್ಕೂ ಪಾಪಿ ಪುತ್ರ ನರಸಿಂಹಮೂರ್ತಿ ವಾಸವಿರುವ ಮನೆ ಸಹೋದರ ಮೂಡಲಗಿರಿಯಪ್ಪ ಕಟ್ಟಿಸಿದ್ದು, ಮೂಡಲಗಿರಿಯಪ್ಪ ಉದ್ಯೋಗದ ನಿಮಿತ್ತ ಬೆಂಗಳೂರಲ್ಲಿ ವಾಸ ಇದ್ದು ತಾನು ಕಟ್ಟಿಸಿದ ಮನೆಯಲ್ಲಿ ತಂದೆ ತಾಯಿಯನ್ನ ಇರಿಸಿದ್ದ. ಈ ನಡುವೆ ಬೇರೆ ಊರಲ್ಲಿ ವಾಸವಿದ್ದ ನರಸಿಂಹ ಮೂರ್ತಿ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುವ ನೆಪದಲ್ಲಿ ಮನೆಗೆ ಬಂದಿದ್ದಾನೆ.

    ಇದೀಗ ಆ ಮನೆಯನ್ನೇ ತನ್ನ ಹೆಸರಿಗೆ ಬರೆದುಕೊಂಡುವಂತೆ ತಂದೆ ತಾಯಿಗೆ ಇನ್ನಿಲ್ಲದ ಹಿಂಸೆ ನೀಡಿ ಅವರು ಒಪ್ಪದಿದ್ದಾಗ ಹೆಂಡತಿ ಜೊತೆ ಸೇರಿ ಮನೆಯಿಂದ ಹೊರಹಾಕಿದ್ದಾನೆ. ಈವರೆಗೂ ಪ್ರತಿನಿತ್ಯ ಮಗ ಹಾಗೂ ಸೊಸೆ ಲತಾ ವೃದ್ಧರಿಗೆ ದೊಣ್ಣೆಯಲ್ಲಿ ಹೊಡೆಯುತ್ತಿದ್ದರು ಅಂತಾ ವೃದ್ಧ ದಂಪತಿ ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ಹೆಬ್ಬೂರು ಪೊಲೀಸರಿಗೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಜರಿಗಿಸಲ್ಲ ಅಂತಾ ವೃದ್ಧ ದಂಪತಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮನಿಯ ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ಕಿಚ್ಚನ ಸಹಾಯ

    ಅಭಿಮನಿಯ ಕ್ಯಾನ್ಸರ್ ಪೀಡಿತ ತಾಯಿಯ ಚಿಕಿತ್ಸೆಗೆ ಕಿಚ್ಚನ ಸಹಾಯ

    ಬೆಂಗಳೂರು: ತನ್ನ ಅಭಿಮಾನಿಯ ಕ್ಯಾನ್ಸರ್ ಪೀಡಿತ ತಾಯಿಗೆ ಚಿಕಿತ್ಸೆಗೆ ಸಹಾಯ ಮಾಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ.

    ಸುದೀಪ್ ಅವರ ಅಭಿಮಾನಿಯಾಗಿರುವ ಲಕ್ಷ್ಮಣ್ ಗೌಡ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಸುದೀಪ್ ಅವರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಅಭಿಮಾನಿಯ ಟ್ವೀಟ್ ಗೆ ಸುದೀಪ್ ಸಹಾಯ ನೀಡುವ ಭರವಸೆ ನೀಡಿದ್ದಾರೆ.

    ಅಭಿಮಾನಿಯ ಮನವಿ ಹೀಗಿತ್ತು
    “ಅಣ್ಣ ನಮ್ಮ ಅಮ್ಮ ಇವರು. ಹೆಸರು ಮಂಗಳಮ್ಮ ವಯಸ್ಸು 40. ಇವರು 4 ವರ್ಷಗಳಿಂದ ಬ್ರೆಸ್ಟ್ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. 2 ಸಲ ಆಪರೇಷನ್ ಆಗಿದೆ. ಮತ್ತೆ ಕಾಯಿಲೆ ಜಾಸ್ತಿ ಆಗಿದೆ. ಈಗ ಮತ್ತೆ ಆಪರೇಷನ್ ಮಾಡಿಸಬೇಕು. ಮತ್ತೆ ಆಪರೇಷನ್ ಅಂದರೆ ನಾವು ತುಂಬಾ ತೊಂದರೆಯಲ್ಲಿ ಇದ್ದೇವೆ. ಆದ್ದರಿಂದ ಸಹಾಯ ಅನಿವಾರ್ಯತೆ ಇದೆ ದಯವಿಟ್ಟು ಅಣ್ಣ” ಎಂದು ಲಕ್ಷ್ಮಣ್ ಗೌಡ ಟ್ವೀಟ್ ಮಾಡಿ ಮನವಿ ಮಾಡಿದ್ದರು.

    ಕಿಚ್ಚ ಸುದೀಪ್ ಯಾವಾಗಲೂ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಸದ್ಯ ಲಕ್ಷ್ಮಣ್ ಗೌಡ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ “ನಾನು ನನ್ನ ಕೈಯಲಾದ ಸಹಾಯ ಮಾಡುತ್ತೇನೆ. ಆಸ್ಪತ್ರೆ ಬಗ್ಗೆ ನನಗೆ ಮಾಹಿತಿ ನೀಡಿ. ನನ್ನ ಜನರು ನಿಮ್ಮನ್ನು ಅಲ್ಲಿ ಸಂರ್ಪಕಿಸುತ್ತಾರೆ. ನಿಮ್ಮ ತಾಯಿ ಬೇಗ ಗುಣಮುಖವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ” ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಕಿಚ್ಚ ಸುದೀಪ್ ಅವರ ಈ ಟ್ವೀಟ್‍ಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಕಿಂಗ್ ಜಾಗದಲ್ಲಿ 17 ವರ್ಷದ ಮಗನ ಮೇಲೆ ತಾಯಿಯಿಂದಲೇ ರೇಪ್!

    ಪಾರ್ಕಿಂಗ್ ಜಾಗದಲ್ಲಿ 17 ವರ್ಷದ ಮಗನ ಮೇಲೆ ತಾಯಿಯಿಂದಲೇ ರೇಪ್!

    ವಾಷಿಂಗ್ಟನ್: ಕಾರ್ ಪಾರ್ಕಿಂಗ್ ಜಾಗದಲ್ಲಿ 17 ವರ್ಷದ ಸಾಕು ಮಗನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಅಮೆರಿಕದ ಮಹಿಳೆಯ ಮೇಲಿನ ಆರೋಪ ಸಾಬೀತಾಗಿದೆ.

    ಒಮಾಹಾ ನಗರದ ನಿವಾಸಿ ಕಿಮ್ ಕ್ಯಾರೆರಾ (50) ಸಾಕು ಮಗನ ಜೊತೆ ಪಾರ್ಕಿಂಗ್ ಜಾಗದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಈಗ ದೋಷಿ ಎಂದು ತೀರ್ಪು ನೀಡಿದ್ದು, ಫೆಬ್ರವರಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

    ಏನಿದು ಪ್ರಕರಣ?:
    ಕಿಮ್ ಕ್ಯಾರೆರಾ ತನ್ನ 17 ವರ್ಷದ ಸಾಕು ಮಗನ ಜೊತೆಗೆ ಕಾರ್ ಪಾರ್ಕಿಂಗ್ ಜಾಗದಲ್ಲಿ ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಇದನ್ನು ನೋಡಿದ ಪೊಲೀಸರು ಆಕೆಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸಿ ನೆಬ್ರಸ್ಕಾದ ಕುಟುಂಬದ ಜೊತೆಗೆ ಬಿಟ್ಟಿದ್ದರು.

    ಈ ಪ್ರಕರಣ 2015ರಲ್ಲಿಯೇ ನಡೆದಿದ್ದು, ಆರೋಪಿ ಮಹಿಳೆಯ ವಿರುದ್ಧ ಲೈಂಗಿಕ ಕ್ರಿಯೆಗೆ ಒತ್ತಾಯ ಹಾಗೂ ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯದಡಿ ಪ್ರಕರಣ ದಾಖಲಾಗಿತ್ತು.

    ಮಹಿಳೆಯ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಪ್ರಕರಣದ ಪ್ರಮುಖ ಸಾಕ್ಷಿಯಾಗಿತ್ತು. ಆದರೆ ಕಿಮ್ ಕ್ಯಾರೆರಾ ವಿಡಿಯೋವನ್ನು ನಾಶ ಮಾಡಿದ್ದಳು. ಇಬ್ಬರ ನಡುವೆ ಸಂಪರ್ಕ ಇರುವುದಕ್ಕೆ ಯಾವುದೇ ಸೂಕ್ತ ಸಾಕ್ಷಾಧಾರಗಳು ಸಿಗದ ಕಾರಣ ಪ್ರಕರಣ ವಿಚಾರಣೆ ತಡವಾಗಿ ಆರಂಭಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆಗೆ 7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಆಸ್ತಿಗಾಗಿ ಅತ್ತೆಯನ್ನೇ ಮನೆಯಿಂದ ಹೊರದಬ್ಬಿದ ಸೊಸೆ – ಮಗನ ಹೆಂಡ್ತಿಯಿಂದಾಗಿ ಬೀದಿಗೆ ಬಿದ್ದ ವೃದ್ಧರು

    ಬೆಂಗಳೂರು: ಆಸ್ತಿಗಾಗಿ ಅತ್ತೆ ಮಾವನನ್ನ ಸೊಸೆಯೇ ಮನೆಯಿಂದ ಹೊರದಬ್ಬಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕಾಸರಘಟ್ಟ ಗ್ರಾಮದಲ್ಲಿ ನಡೆದಿದೆ.

    ಇಲ್ಲಿನ ನಿವಾಸಿಗಳಾದ ವೃದ್ದ ದಂಪತಿ ನಂಜಪ್ಪ ಮತ್ತು ಚಿಕ್ಕಮ್ಮ, ಆಸ್ತಿಗಾಗಿ ತನ್ನ ಎರಡನೇ ಮಗ ಸುರೇಶ್‍ಕುಮಾರ್ ಹೆಂಡತಿ ಮಂಗಳಾ ತಮ್ಮನ್ನು ಮನೆಯಿಂದ ಹೊರ ಹಾಕಿದ್ದಾಗಿ ಆರೋಪ ಮಾಡಿದ್ದಾರೆ. ವೃದ್ಧೆ ಚಿಕ್ಕಮ್ಮ ತನ್ನ ಕೈನಲ್ಲಿರುವ ಬೆರಳುಗಳನ್ನು ಕಳೆದುಕೊಂಡಿದ್ದು, ಕೈಲಾಗದ ಪರಿಸ್ಥಿತಿಯಲಿದ್ದಾರೆ. ವೃದ್ಧ ನಂಜಪ್ಪನ ಹೆಸರಿನಲ್ಲಿ 1 ಎಕರೆ 7 ಗುಂಟೆ ಜಮೀನಿದೆ. ಈ ಜಮೀನನ್ನು ಸೊಸೆ ಮಂಗಳ ಮಾರಾಟ ಮಾಡಲು ಇಂತಹ ಹೀನ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ. ಹೀಗಾಗಿ ಕಟ್ಟಿಕೊಂಡ ಗಂಡ ಹಾಗೂ ಅತ್ತೆ ಮಾವರನ್ನು ಸಹ ಮನೆಯಿಂದ ಹೊರಗೆ ಹಾಕಿದ್ದಲ್ಲದೆ ಥಳಿಸಿದ್ದಾಳೆ ಎಂದು ದಂಪತಿಗಳು ಬೀದಿ ಬದಿಯಲ್ಲಿ ಕಣ್ಣೀರಿಡುತ್ತಿದ್ದಾರೆ.

    ವೃದ್ಧ ದಂಪತಿ ಡಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಪೊಲೀಸರು ವೃದ್ಧ ದಂಪತಿಯನ್ನೆ ಹೀಯಾಳಿಸಿ, ನಿಮ್ಮ ಸಮಸ್ಯೆಯನ್ನ ನಾವು ಬಗೆಹರಿಸಲು ಆಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೇ ಸೊಸೆ ಮಂಗಳಾ ಅತ್ತೆ ಮಾವ ಹಾಗೂ ಗಂಡನಿಗೆ ತನ್ನ ಸಹೋದರರಿಂದ ಕೊಲೆ ಮಾಡುವುದಾಗಿ ಧಮ್ಕಿ ಹಾಕಿಸುತ್ತಾರಂತೆ ಎಂದು ತಿಳಿಸಿದ್ದಾರೆ.

    ಸೊಸೆಯ ಈ ಕೃತ್ಯದಿಂದ ಬೀದಿ ಪಾಲಾಗಿರುವ ವೃದ್ಧೆ ಸದ್ಯ ಮತ್ತೊಬ್ಬ ಮಗನ ಆಶ್ರಯ ಪಡೆದಿದ್ದು, ಬೆಂಗಳೂರಿನ ಜೀವನಕ್ಕೆ ಹೊಂದಿಕೊಳ್ಳಲಾಗದ ಇವರು ತಮ್ಮ ಜೀವನಕ್ಕಾಗಿ ಕೃಷಿ ಮಾಡಲು ಅವಕಾಶ ಕೊಡಬೇಕು ಹಾಗೂ ವಾಸಿಸಲು ಮನೆಯಲ್ಲಿ ಜಾಗ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 5 ವರ್ಷದ ಹೆಣ್ಣು ಮಗಳಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ!

    5 ವರ್ಷದ ಹೆಣ್ಣು ಮಗಳಿಗೆ ಬೆಂಕಿ ಹಚ್ಚಿ ತಾನು ಆತ್ಮಹತ್ಯೆ ಮಾಡಿಕೊಂಡ ತಾಯಿ!

    ಮಂಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಐದು ವರ್ಷದ ಮಗಳಿಗೆ ಬೆಂಕಿ ಹಚ್ಚಿ ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ನಿವಾಸಿಯಾದ ಸುಮಾ (25), ಅಂಜಲಿ (5) ಮೃತಪಟ್ಟಿದ್ದಾರೆ. ಕುಟುಂಬದಲ್ಲಿ ನಿರಂತರ ಕಲಹ ಉಂಟಾದ ಕಾರಣ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಮನೆಯಲ್ಲಿಯೇ ಮಗುವಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ತಾಯಿ ಸುಮಾ ಬಳಿಕ ತನಗೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಈ ವೇಳೆ ಮನೆಯಲ್ಲಿ ಮಗುವಿನ ಚೀರಾಟ ಕೇಳಿದ ಮನೆಯವರು ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದಾರೆ. ಆದರೆ ತೀವ್ರ ಸುಟ್ಟಗಾಯಗಳಿಂದ ಅಂಜಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಸುಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

    ಘಟನೆ ಬಗ್ಗೆ ಮಾಹಿತಿ ಪಡೆದ ಶ್ರೀರಂಗಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಾಮುಕರಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕನನ್ನೇ ಕೊಲೆಗೈದ್ರು!

    ಕಾಮುಕರಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕನನ್ನೇ ಕೊಲೆಗೈದ್ರು!

    ಪಟ್ನಾ: ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋದ ಬಾಲಕನನ್ನು ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಘಟನೆ ಬಿಹಾರದ ಮುಜಾಫರ್‍ಪುರ ಜಿಲ್ಲೆಯಲ್ಲಿ ಭಾನುವಾರದಂದು ನಡೆದಿದ್ದು, ಸೋಮವಾರ ಬೆಳಕಿಗೆ ಬಂದಿದೆ.

    17 ವರ್ಷದ ಬಾಲಕ ಮೃತ ದುರ್ದೈವಿ. ಬಾಲಕ ಹಾಗೂ ಅವನ ತಾಯಿ ಧರಮ್‍ಪುರ ಗ್ರಾಮದ ನಿವಾಸಿಗಳು. ಭಾನುವಾರ ರಾತ್ರಿ ವೇಳೆ ತಾಯಿ ಹಾಗೂ ಮಗ ತಮ್ಮ ಮನೆ ಬಳಿ ಇದ್ದ ರಾಜೇಂದ್ರ ಸಾ ಎಂಬವರ ಕಿರಾಣಿ ಅಂಗಡಿಗೆ ಹೋಗಿದ್ದರು. ಈ ವೇಳೆ ಅಂಗಡಿ ಮಾಲೀಕನ ಮಗ ಪಪ್ಪು ಹಾಗೂ ಅವನ ಸ್ನೇಹಿತರು ಸೇರಿ ಬಾಲಕನ ತಾಯಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.

    ಇದನ್ನು ಕಂಡ ಬಾಲಕ ಕೋಪೋದ್ರಿಕ್ತನಾಗಿ ತಾಯಿಯನ್ನು ಕಾಮುಕರಿಂದ ರಕ್ಷಿಸಲು ಹೋಗಿದ್ದಾನೆ. ಈ ವೇಳೆ ಬಾಲಕನನ್ನು ಪಪ್ಪು ಹಾಗೂ ಅವನ ಸ್ನೇಹಿತರು ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಬಳಿಕ ರಾಜ್ಯ ಹೆದ್ದಾರಿ- 74 ರಲ್ಲಿ ರಸ್ತೆ ತಡೆಗಟ್ಟಿ ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಘಟನೆ ಕುರಿತು ಬಾಲಕನ ತಂದೆ ಧರಮ್‍ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews