Tag: mother

  • ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

    ಮದ್ವೆಯಲ್ಲಿ ತಾಯಿಯ 35 ವರ್ಷದ ಹಳೆ ಸೀರೆಯನ್ನು ಧರಿಸಿದ ಇಶಾ!

    ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ನಡೆದಿದ್ದು, ಮದುವೆಯಲ್ಲಿ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆ ಧರಿಸಿದ್ದು ವಿಶೇಷವಾಗಿತ್ತು.

    ಮದುವೆಯಲ್ಲಿ ಇಶಾ ಹಾಫ್ ವೈಟ್ ಬಣ್ಣದ ಲೆಹೆಂಗಾ ಧರಿಸಿದ್ದರು. ಆನಂದ್ ಕೂಡ ಇಶಾರನ್ನು ಮ್ಯಾಚ್ ಮಾಡಲು ಹಾಫ್ ವೈಟ್ ಬಣ್ಣದ ಶೆರ್ವಾನಿ ಧರಿಸಿ ಮಿಂಚಿದ್ದರು. ಈ ಲೆಹೆಂಗಾ ಮೇಲೆ ಇಶಾ ತನ್ನ ತಾಯಿಯ 35 ವರ್ಷದ ಹಳೆಯ ಸೀರೆಯನ್ನು ದುಪ್ಪಟಾ ರೀತಿಯಲ್ಲಿ ಹಾಕಿಕೊಂಡಿದ್ದರು.

    ಇಶಾ ತನ್ನ ವೈಟ್ ಹಾಫ್ ಲೆಹೆಂಗಾ ಮೇಲೆ ತಮ್ಮ ಹಳೆಯ ಕೆಂಪು ಸೀರೆಯನ್ನು ದುಪ್ಪಟಾ ಸ್ಟೈಲಿನಲ್ಲಿ ಧರಿಸಲು ತಾಯಿ ನೀತಾ ಅಂಬಾನಿ ಸಲಹೆ ನೀಡಿದ್ದರು. ಇಶಾ ಕೂಡ ತನ್ನ ತಾಯಿಯ ಮಾತನ್ನು ಕೇಳಿ ಸೀರೆಯನ್ನು ದುಪ್ಪಟಾ ರೀತಿ ಧರಿಸಿದ್ದರು.

    ಇಶಾ ತನ್ನ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾದಲ್ಲಿ 16 ಮೊಗ್ಗುಯಿದ್ದು, ಪ್ರತಿಯೊಂದು ಮೊಗ್ಗಿನ ಮೇಲೆ ಜರ್ದೋಝಿ ಹಾಗೂ ಮುಕೇಶ್ ವರ್ಕ್ ಮಾಡಲಾಗಿತ್ತು. ಇಶಾ ಧರಿಸಿದ್ದ ಲೆಹೆಂಗಾವನ್ನು ಕೈಯಿಂದಲೇ ಕಸೂತಿ ಮಾಡಲಾಗಿದೆ. ಲೆಹೆಂಗಾದಲ್ಲಿದ್ದ ಫ್ಲೋರಲ್ ಜಾಲಿಯನ್ನು ಕ್ರಿಸ್ಟಲ್ ಹಾಗೂ ಸೀಕ್ವೆನ್ಸ್ ನಿಂದ ಹೈಲೈಟ್ ಮಾಡಲಾಗಿದೆ.

    ಇಶಾ ಮದುವೆಯಲ್ಲಿ ಧರಿಸಿದ್ದ ಲೆಹೆಂಗಾವನ್ನು ಖ್ಯಾತ ಡಿಸೈನರ್ ಅಬು ಜಾನಿ ಮತ್ತು ಸಂದೀಪ್ ಕೊಸಲಾ ಡಿಸೈನ್ ಮಾಡಿದ್ದಾರೆ. ಇಂದು ಇಶಾ ಹಾಗೂ ಆನಂದ್ ಅವರ ರಾಯಲ್ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯಲ್ಲಿ ಬಾಲಿವುಡ್ ಹಾಗೂ ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ಯದ ಮತ್ತಿನಲ್ಲಿ ಪಾತ್ರೆ ಹಿಡಿದು ಮನಬಂದಂತೆ ತಾಯಿಯನ್ನ ಹೊಡೆದ ಕ್ರೂರಿ ಮಗ

    ಮದ್ಯದ ಮತ್ತಿನಲ್ಲಿ ಪಾತ್ರೆ ಹಿಡಿದು ಮನಬಂದಂತೆ ತಾಯಿಯನ್ನ ಹೊಡೆದ ಕ್ರೂರಿ ಮಗ

    – ತಾಯಿಯನ್ನೇ ಕೊಲೆಗೈಲು ಯತ್ನಿಸಿದ ನಿರುದ್ಯೋಗಿ ಮಗ ಅರೆಸ್ಟ್

    ಮುಂಬೈ: ಮದ್ಯದ ಮತ್ತಿನಲ್ಲಿ ತಾಯಿ ಹಾಗೂ ಪತ್ನಿಯನ್ನು ಕೊಲೆಗೈಲು ಯತ್ನಿಸಿದ್ದ ನಿರುದ್ಯೋಗಿ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ದಿಂಡೋಶಿ ನಿವಾಸಿ ಆನಂದ್ ಲಾಲ್‍ಜಿ ವಿಶ್ವಕರ್ಮ ಹಲ್ಲೆ ಮಾಡಿದ ಆರೋಪಿ. ಘಟನೆಯ ಕುರಿತು ಆನಂದ್ ಸಹೋದರಿ ಅರ್ಚನಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಬಂದ ದಿಂಡೋಶಿ ಠಾಣಾ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಆನಂದ್ ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದ. ಈ ನಡುವೆ ಮದ್ಯ ಸೇವನೆಯನ್ನು ಬೆಳೆಸಿಕೊಂಡಿದ್ದ. ಮದ್ಯದ ಮತ್ತಿನಲ್ಲಿ ತಾಯಿ ಸರಸ್ವತಿ ಹಾಗೂ ಪತ್ನಿ ಪ್ರಿಯಾಂಕಾ ಜೊತೆಗೆ ಜಗಳವಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿದ್ದ ಆನಂದ್ ಮಂಗಳವಾರ ಮನೆಗೆ ಬಂದಿದ್ದ. ಇದನ್ನು ವಿರೋಧಿಸಿದ ಪತ್ನಿ ಪ್ರಿಯಾಂಕ ನೀನು ಮದ್ಯಪಾನ ಮುಂದುವರಿಸಿದರೆ ನಾನು ಕೂಡ ಕುಡಿಯಲು ಆರಂಭಿಸುತ್ತೇನೆ ಎಂದಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಪತ್ನಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.

    ಸೊಸೆಯನ್ನು ಬೆಂಬಲಿಸಿ ಸರಸ್ವತಿ ಮಗನಿಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಈ ವೇಳೆ ಕೋಪಗೊಂಡ ಆನಂದ್ ಮದ್ಯದ ಮತ್ತಿನಲ್ಲಿ ಕೈಗೆ ಸಿಕ್ಕ ಪಾತ್ರೆಗಳನ್ನು ಎತ್ತಿಕೊಂಡು ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಂಡ ಪ್ರಿಯಾಂಕಾ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ತಪ್ಪಿಸಿಕೊಂಡಿದ್ದಾಳೆ.

    ಏಕಾಂಗಿಯಾಗಿ ಕೈಗೆ ಸಿಕ್ಕ ವೃದ್ಧ ತಾಯಿಯನ್ನು ಆನಂದ್ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಸರಸ್ವತಿ ಅಸ್ವಸ್ಥಗೊಂಡು ಬಿದ್ದಿದ್ದಾಳೆ. ಈ ಘಟನೆಯಿಂದ ಗಾಬರಿಗೊಂಡ ಅರ್ಚನಾ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

    ವೃದ್ಧೆ ಸರಸ್ವತಿ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯ ವೇಳೆ ಪ್ರಿಯಾಂಕಾಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿ ಆನಂದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬಿಗ್ ಮನೆಯಲ್ಲಿ ತಾಯಿಯ ಮಾತನ್ನೇ ಧಿಕ್ಕರಿಸಿದ ಅಕ್ಷತಾ

    ಬೆಂಗಳೂರು: ಬಿಗ್ ಬಾಸ್ ಸೀಸನ್ 6ರಲ್ಲಿ ಅಕ್ಷತಾ ಪಾಂಡವಪುರ ತನ್ನ ತಾಯಿಯ ಮಾತಿಗೆ ಸ್ವಲ್ಪವೂ ಬೆಲೆ ನೀಡದೇ ಮತ್ತೆ ತಮ್ಮ ಗೆಳೆಯ ರಾಕೇಶ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

    ಶನಿವಾರ ಬಿಗ್ ಬಾಸ್ 50 ದಿನಗಳನ್ನು ಪೂರೈಸಿತ್ತು. ಈ ವೇಳೆ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ತಮ್ಮ ಕುಟುಂಬಸ್ಥರ ಆಡಿಯೋವೊಂದು ಬರುತ್ತದೆ ಎಂದು ಹೇಳಿದರು. ಹಾಗೆಯೇ ಅಕ್ಷತಾ ತಾಯಿ ಅವರ ಆಡಿಯೋ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರಸಾರವಾಗಿತ್ತು.

    ಸಂದೇಶವೇನು?
    ನಮಸ್ಕಾರ ಮಗಳೇ. ನೀನು ಚೆನ್ನಾಗಿ ಆಟ ಆಡುತ್ತಿದ್ದೀಯಾ. ಆದರೆ ಕೆಲವೊಂದು ಸಲ ನಿನ್ನ ನೋಡುವುದಕ್ಕೆ ಕಷ್ಟ ಆಗುತ್ತೆ. ನೀನು ರಾಕೇಶ್‍ನಿಂದ ದೂರು ಇದ್ದರೆ ಒಳ್ಳೆಯದು. ನಿನ್ನನ್ನು ನಂಬಿರುವ ಸಾಕಷ್ಟು ಜೀವ ಇಲ್ಲಿದೆ. ಹಾಗಾಗಿ ನೀನು ಎಲ್ಲರನ್ನೂ ಚೆನ್ನಾಗಿ ನೋಡಿಕೋ ಹಾಗೂ ನಿನ್ನ ಆಟವನ್ನು ನೀನು ಯಾರಿಗೂ ಬಿಟ್ಟುಕೊಡಬೇಡ. ಆಡಿಕೊಳ್ಳುವವರ ಬಾಯಿಗೆ ಆಹಾರವಾಗಬೇಡ. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ. ನಿನ್ನ ತಮಾಷೆ ಗುಣ ಇಲ್ಲಿ ಕಾಣಿಸುತ್ತಿಲ್ಲ ಎಂದು ಅಕ್ಷತಾ ತಾಯಿ ಸಂದೇಶ ಕಳುಹಿಸಿದ್ದರು.

    ಈ ಸಂದೇಶ ಬಂದ ಬಳಿಕ ರಾಕೇಶ್, ನನ್ನಿಂದ ದೂರ ಇರಬೇಕೆಂದು ನಿಮ್ಮ ಕುಟುಂಬದವರು ಒಂದು ಸಂದೇಶ ನೀಡಿದ್ದಾರೆ. ನೀವು ಈ ವಿಷಯವನ್ನು ನಿರ್ಧಾರ ಮಾಡಿ. ನಾನು ಈ ವಿಷಯವನ್ನು ನಿಮಗೆ ಬಿಡುವೆ ಹಾಗೂ ನಿಮ್ಮ ನಿರ್ಧಾರವನ್ನು ನಾನು ಗೌರವಿಸುತ್ತೇನೆ ಎಂದು ಅಕ್ಷತಾಗೆ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಕ್ಕಳನ್ನೇ ಕೊಂದ ತಾಯಿ ಪ್ರಕರಣಕ್ಕೆ ಟ್ವಿಸ್ಟ್

    ಮಕ್ಕಳನ್ನೇ ಕೊಂದ ತಾಯಿ ಪ್ರಕರಣಕ್ಕೆ ಟ್ವಿಸ್ಟ್

    ಹುಬ್ಬಳ್ಳಿ/ಧಾರವಾಡ: ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆತ್ತ ಮಕ್ಕಳನ್ನೆ ತಾಯಿಯೊಬ್ಬಳು ವೇಲ್ ನಿಂದ ಬಿಗಿದು ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನ ಜೊತೆ ಸೇರಿ ಈ ಕೃತ್ಯವೆಸಗಿದ್ದಾಳೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

    ಹುಬ್ಬಳ್ಳಿಯ ಆಯೋಧ್ಯನಗರದಲ್ಲಿ ಈ ಘಟನೆ ನಡೆದಿತ್ತು. ಪ್ರೇಮಾ ಪರುಶುರಾಮ ಹುಲಕೋಟಿ ಎಂಬವಳು ರೋಹಿತ್ (6) ಮತ್ತು ರೋಹಿಣಿ (4) ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಳು. ಬಳಿಕ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಆರೋಪಿ ತಾಯಿ ಪ್ರೇಮಾ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಗಂಡ ಕೆಲಸಕ್ಕೆ ಹೋದಾಗ ಪರ ಪುರುಷ ಮನೆಗೆ ಬಂದು ಹೋಗುತ್ತಿದ್ದನು. ಆಗ ಅವರಿಬ್ಬರ ಅನೈತಿಕ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಿದ್ದರು. ಆದ್ದರಿಂದ ಪ್ರಿಯಕರನ ಜೊತೆ ಸೇರಿ ಮಕ್ಕಳನ್ನೇ ಕೊಲೆ ಮಾಡಿದ್ದಾಳೆ ಎಂದು ನೆರೆಹೊರೆಯವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಂದು ಮಗುವಿನ ಮೈ ಮೇಲೆ ಬೂಟಿನ ಗುರುತು ಪತ್ತೆಯಾಗಿದ್ದು, ಬಾಯಲ್ಲಿ ರಕ್ತ ಬಂದಿದೆ. ಆದ್ದರಿಂದ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪ್ರೇಮಾ ಮತ್ತು ಪರುಶುರಾಮ ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ರೋಹಿತ್ ಮತ್ತು ರೋಹಿಣಿ ಇಬ್ಬರು ಮಕ್ಕಳಿದ್ದು, ಸಂಸಾರಿಕ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು. ಪತಿ ಪರುಶರಾಮ್ ಗಾರೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದನು. ಹೀಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮಕ್ಕಳನ್ನು ಸಾಕಲು, ಮನೆಯ ನಿರ್ವಹಣೆ ಮಾಡಲು ಕೂಡ ಹಣ ಕೊಡುತ್ತಿರಲಿಲ್ಲ.

    ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಆರೋಪಿ ತಾಯಿ ಮತ್ತು ಪತಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ನಮ್ಮಿಬ್ಬರ ಸಂಸಾರದಲ್ಲಿ ಮಕ್ಕಳೇ ನಮಗೆ ಭಾರವಾಗಿದ್ದು, ಮಕ್ಕಳನ್ನು ಸಾಕಲು ಪತಿ ಹಣ ಕೊಡುತ್ತಿರಲಿಲ್ಲ. ಪತಿ ಕುಡಿತ ಚಟಕ್ಕೆ ದಾಸನಾಗಿದ್ದನು. ಆದ್ದರಿಂದ ಇಂದು ಬೆಳಗ್ಗೆ ಕತ್ತು ಹಿಸುಕಿ ಕೊಂದಿರುವುದಾಗಿ ತಾಯಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಳು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ಮಕ್ಕಳ ಕತ್ತು ಹಿಸುಕಿ ಕೊಂದ ಹೆತ್ತತಾಯಿ

    ಬೆಳ್ಳಂಬೆಳಗ್ಗೆ ಮಕ್ಕಳ ಕತ್ತು ಹಿಸುಕಿ ಕೊಂದ ಹೆತ್ತತಾಯಿ

    ಹುಬ್ಬಳ್ಳಿ/ಧಾರವಾಡ: ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆತ್ತ ಮಕ್ಕಳನ್ನೆ ತಾಯಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯ ಆಯೋಧ್ಯನಗರದಲ್ಲಿ ನಡೆದಿದೆ.

    ರೋಹಿತ್ (6) ಮತ್ತು ರೋಹಿಣಿ (4) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಆರೋಪಿ ತಾಯಿ ಪ್ರೇಮಾ ಪರುಶುರಾಮ ಹುಲಕೋಟಿ ಇಬ್ಬರು ಮಕ್ಕಳನ್ನು ವೇಲ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಪತಿ ಪರಶುರಾಮ ಕೆಲಸಕ್ಕೆ ಹೋದ ಸಮಯದಲ್ಲಿ ತಾಯಿ ಈ ಕೃತ್ಯ ಎಸಗಿದ್ದಾಳೆ.

    ಏನಿದು ಪ್ರಕರಣ?
    ಆರೋಪಿ ಪ್ರೇಮ ಮತ್ತು ಪರುಶುರಾಮ ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ರೋಹಿತ್ ಮತ್ತು ರೋಹಿಣಿ ಇಬ್ಬರು ಮಕ್ಕಳಿದ್ದು, ಸಂಸಾರಿಕ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು. ಪತಿ ಪರುಶರಾಮ್ ಗಾರೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದನು. ಹೀಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮಕ್ಕಳನ್ನು ಸಾಕಲು, ಮನೆಯ ನಿರ್ವಹಣೆ ಮಾಡಲು ಕೂಡ ಹಣ ಕೊಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ತಮಗೆ ಹೊರೆಯಾಗಿದ್ದಾರೆ ಎಂದು ತಿಳಿದು ತಾಯಿ ಮಕ್ಕಳ ಕುತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

    ನಮ್ಮಿಬ್ಬರ ಸಂಸಾರದಲ್ಲಿ ಮಕ್ಕಳೇ ನಮಗೆ ಭಾರವಾಗಿದ್ದು, ಮಕ್ಕಳನ್ನು ಸಾಕಲು ಹಣ ಕೊಡುತ್ತಿರಲಿಲ್ಲ. ಪತಿ ಕುಡಿತ ಚಟಕ್ಕೆ ದಾಸನಾಗಿದ್ದನು. ಆದ್ದರಿಂದ ಇಂದು ಬೆಳಗ್ಗೆ ಕತ್ತು ಹಿಸುಕಿ ಕೊಂದಿರುವುದಾಗಿ ತಾಯಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ.

    ಸದ್ಯಕ್ಕೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತಾಯಿ ಮತ್ತು ಪತಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದೆ ಮದ್ವೆಯಾಗೋಳು, ನಿನ್ಗೆ ಇದೆಲ್ಲ ಗೊತ್ತಿರ್ಬೇಕು ಬಾ- ಅಪ್ರಾಪ್ತ ಮಗ್ಳನ್ನ ಕಾಮತೃಷೆಗೆ ಬಳಸಿಕೊಂಡ ಪಾಪಿ ತಂದೆ

    ಮುಂದೆ ಮದ್ವೆಯಾಗೋಳು, ನಿನ್ಗೆ ಇದೆಲ್ಲ ಗೊತ್ತಿರ್ಬೇಕು ಬಾ- ಅಪ್ರಾಪ್ತ ಮಗ್ಳನ್ನ ಕಾಮತೃಷೆಗೆ ಬಳಸಿಕೊಂಡ ಪಾಪಿ ತಂದೆ

    ಬೆಂಗಳೂರು: ನೀನು ಮುಂದೆ ಮದುವೆಯಾಗುವವಳು, ನಿನಗೆ ಇದೆಲ್ಲ ಗೊತ್ತಿರಬೇಕು ಬಾ ಎಂದು ತನ್ನ 16 ವರ್ಷದ ಅಪ್ರಾಪ್ತ ಮಗಳನ್ನು ಪಾಪಿ ತಂದೆಯೊಬ್ಬ ಕಾಮತೃಷೆಗೆ ಬಳಸಿಕೊಂಡ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಆಟೋ ಚಾಲಕ ಸಯ್ಯದ್ ಸ್ವಂತ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ದೂರು ನೀಡಿದ್ದಾರೆ. ಪತ್ನಿ ಕೆಲಸಕ್ಕೆ ಹೋದ ವೇಳೆಯಲ್ಲಿ ಸ್ವಂತ ಮಗಳ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

    ‘ನೀನು ಮುಂದೆ ಮದುವೆಯಾಗುವವಳು, ನಿನಗೆ ಇದೆಲ್ಲ ಗೊತ್ತಿರಬೇಕು ಬಾ’ ಎಂದು ಸಯ್ಯದ್ ಮಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಮಗಳ ಮೇಲೆ ಲೈಂಗಿಕ ದೌರ್ಜನ್ಯದ ವಿಚಾರ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಕಳೆದ ಎರಡು ವರ್ಷಗಳಿಂದಲೂ ಇದೇ ರೀತಿ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ.

    ಕೆಲ ದಿನಗಳ ಹಿಂದೆಯೂ ಇದೇ ರೀತಿ ಸಯ್ಯದ್ ಪುನಃ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ. ಆಗ ಸಂತ್ರಸ್ತ ಬಾಲಕಿ ತನ್ನ ತಾಯಿ ಬಳಿ ತಂದೆಯ ಕ್ರೌರ್ಯದ ಬಗ್ಗೆ ತಿಳಿಸಿದ್ದಾಳೆ. ಯಾರಿಗಾದರೂ ಹೇಳಿದರೆ ಸಾಯಿಸುತ್ತೇನೆ ಅಂತ ಬೆದರಿಸಿದರು ಎಂದು ಸಂತ್ರಸ್ತ ಬಾಲಕಿ ತಾಯಿ ಬಳಿ ಅಳಲು ತೋಡಿಕೊಂಡಿದ್ದಾಳೆ. ಹೀಗಾಗಿ ತಾಯಿ ಮೊದಲು ಮಗಳನ್ನು ಮನೆಗೆ ಕಳುಹಿಸಿ ಮನೆಗೆ ಬರಲು ಕೆಲಕಾಲ ತಡ ಮಾಡುತ್ತಾಳೆ. ಹೆಂಡತಿ ಬಂದಿಲ್ಲ ಮಗಳೊಬ್ಬಳೇ ಮನೆಯಲ್ಲಿದ್ದಾಳೆ ಅಂತ ತಿಳಿದ ಆರೋಪಿ ಸಯ್ಯದ್ ಮತ್ತೆ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ. ಪತಿ ಸಯ್ಯದ್‍ನ ಈ ನೀಚ ಕೃತ್ಯಕ್ಕೆ ಪತ್ನಿ ಸಾಕ್ಷಿಯಾಗಿದ್ದಾಳೆ.

    ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ತಾಯಿಯಿಂದ ಕಾಮುಕ ತಂದೆ ವಿರುದ್ಧ ದೂರು ದಾಖಲಿಸಿದ್ದಾರೆ. ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 506, 376, 511 ಹಾಗೂ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಾಗಿದೆ. ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಸಯ್ಯದ್ ಎಸ್ಕೇಪ್ ಆಗಿದ್ದಾನೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಆಟೋ ಚಾಲಕ ಸಯ್ಯದ್ ವಿರುದ್ಧ ಕಳೆದ 15 ದಿನಗಳ ಹಿಂದೆ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ದೂರನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆಯನ್ನು ಬನಶಂಕರಿ ಪೊಲೀಸರು ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಪೊರಕೆಯಲ್ಲಿ ಹೊಡೆದ್ರೂ ಮಗನಿಗಾಗಿ ಮಿಡಿದ ತಾಯಿ ಹೃದಯ

    ಬೆಂಗಳೂರು: ಹೆತ್ತ ಕಂದ ಅಮ್ಮನ ಮೇಲೆ ಕೈ ಮಾಡಿದ್ರು, ಕ್ಷಮಿಸಿ ತನ್ನ ಮಗನನ್ನು ಬಂಧ ಮುಕ್ತಗೊಳಿಸಲು ತಾಯಿ ಮುಂದಾಗಿದ್ದಾರೆ.

    ಅಮ್ಮನನ್ನ ಪೊರಕೆಯಲ್ಲಿ ಹೊಡೆದ ಮಗನಿಗೆ ಕ್ಷಮಾ ಬಿಕ್ಷೆ ನೀಡಲು ತಾಯಿ ನಿರ್ಧರಿಸಿದ್ದಾರೆ. ಶನಿವಾರದಂದು ಜೆ ಪಿ ನಗರದಲ್ಲಿ ತಾಯಿ ಮೇಲೆ ಪೊರಕೆಯಲ್ಲಿ ಮಗನೊಬ್ಬ ಹಲ್ಲೆ ಮಾಡಿದ್ದನು. ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಪೊರಕೆಯಿಂದ ಮಗ ಹೊಡೆದಿದ್ದನು. ಇದೀಗ ತನ್ನ ಕಂದನ ಮೇಲೆ ದೂರು ದಾಖಲಿಸಬೇಡಿ ಎಂದು ಪೊಲೀಸರ ಮೊರೆ ಹೋಗಿ ಮಗನ ಭವಿಷ್ಯ ಹಾಳಾಗುತ್ತೆ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.

    ನಾನು ನನ್ನ ಮಗನಿಗೆ ಬುದ್ಧಿ ಹೇಳ್ತೀನಿ ಇಷ್ಟಕ್ಕೆ ಇದು ಸಾಕು, ದಯಮಾಡಿ ಅವನನ್ನ ಬಿಟ್ಟು ಬಿಡಿ ಎಂದು ಪೊಲೀಸರಿಗೆ ತಾಯಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ ಜೆಪಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ಹುಡುಗನ ಅಮ್ಮ ಮನವಿ ಮಾಡಿದ್ದಕ್ಕೆ ಮಗನಿಗೆ ಎಚ್ಚರಿಕೆ ಕೊಟ್ಟು ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: ಹೆತ್ತಮ್ಮನಿಗೆ ಪೊರಕೆಯಲ್ಲಿ ಹೊಡೆದು ಮಗನಿಂದ ಕ್ಲಾಸ್..!

    ಭಾನುವಾರ ರಾತ್ರಿ ಹುಡುಗನ ಮೇಲೆ ಎಫ್‍ಐಆರ್ ದಾಖಲಾಗಿದ್ದ ಹಿನ್ನೆಲೆ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಹುಡುಗ ಬಾಲಾಪರಾಧಿ ಎಂದು ಪತ್ತೆಯಾದ ಬಳಿಕ ತಾಯಿ ಮನವಿ ಮೇರೆಗೆ ಆತನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಅಲ್ಲದೆ ಮಂಗಳವಾರ ಬಾಲಾಪರಾಧಿಗಳ ನ್ಯಾಯಾಲಯಕ್ಕೆ ಹುಡುಗನನ್ನ ಹಾಜರು ಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ಮಗ!

    ತಾಯಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದ ಮಗ!

    ಬೆಂಗಳೂರು: ಶನಿವಾರ ತನ್ನನ್ನು ಪ್ರಶ್ನಿಸಿದ ತಾಯಿಗೆ ಪೊರಕೆಯಿಂದ ಹೊಡೆದು ಮಗನೊಬ್ಬ ಕ್ರೌರ್ಯ ಮೆರೆದಿದ್ದನು. ಈಗ ಮತ್ತೊಬ್ಬ ಮಗ ತಾಯಿಯ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಶ್ವಥ್ ನಗರದ ಮನೆಯಲ್ಲಿ ಡಿಸೆಂಬರ್ 6ರ ರಾತ್ರಿ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಉತ್ತಮ್‍ಕುಮಾರ್ ಹೆತ್ತ ತಾಯಿ ಭಾರತಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪುತ್ರ. ಮಗ ಉತ್ತಮ್‍ಕುಮಾರ್ ಮದ್ಯ ಸೇವಿಸಲು ಹಣ ನೀಡದ್ದಕ್ಕೆ ರೊಚ್ಚಿಗೆದ್ದು ಬೆಂಕಿ ಹಚ್ಚಿ ತಾಯಿಯನ್ನ ಕೊಲ್ಲಲು ಯತ್ನಿಸಿದ್ದಾನೆ.

    ಹಣ ನೀಡದ್ದಕ್ಕೆ ತಾಯಿಗೆ ಬೆಂಕಿ ಹಚ್ಚಿ ಉತ್ತಮ್ ಕುಮಾರ್ ಪರಾರಿಯಾಗಿದ್ದಾನೆ. ಇತ್ತ ತಾಯಿ ಭಾರತಿ ಎದೆ, ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿತ್ತು. ಕೂಡಲೇ ಭಾರತಿ ಪತಿ, ಪತ್ನಿಯನ್ನು ರಕ್ಷಣೆ ಮಾಡಿ ಹೊಯ್ಸಳ ಪೊಲೀಸರಿಗೆ ಕರೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಕೂಡಲೇ ಘಟನೆ ಸ್ಥಳಕ್ಕೆ ಸಂಜಯ ನಗರದ ಹೊಯ್ಸಳ ಪೊಲೀಸರು ಬಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ಭಾರತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ತಾಯಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಈ ಕುರಿತು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ಆರಂಭವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ

    ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ

    ಬೆಂಗಳೂರು: ಕೌಟುಂಬಿಕ ಕಲಹಕ್ಕೆ ನೊಂದು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿ ನಡೆದಿದೆ.

    ಸರ್ಕಾರ್ ಗುಟ್ಟಹಳ್ಳಿ ನಿವಾಸಿ 40 ವರ್ಷದ ಲಕ್ಷ್ಮಮ್ಮ, 4 ವರ್ಷದ ಮೋನಿಷ, 6 ವರ್ಷದ ಮೋಹಿತ್‍ರನ್ನ ಪೆತ್ತನಹಳ್ಳಿ ಗೇಟ್‍ನಲ್ಲಿರುವ ಕೃಷಿ ಹೊಂಡಕ್ಕೆ ತಳ್ಳಿ ಕೊಲೆ ಮಾಡಿ ನಂತ್ರ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಿರುಮಲಶೆಟ್ಟಿ ಹಳ್ಳಿ ಪೊಲೀಸರು ಸ್ಥಳೀಯರ ಸಹಾಯದಿಂದ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆಯ ಎಂವಿಜೆ ಆಸ್ಪತ್ರೆಗೆ ರವಾನಿಸಿದ್ದಾರೆ.

    ಸಾವಿಗೆ ಕೌಟುಂಬಿಕ ಕಲಹವೆಂದು ಹೇಳಲಾಗುತ್ತಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಗಂಡ-ಹೆಂಡತಿ ಜಗಳದಲ್ಲಿ ಜಗತ್ತನ್ನ ಅರಿಯದ ಮುಗ್ಧ ಮಕ್ಕಳು ಸಾವನ್ನಪ್ಪಿರೋದು ದುರಂತ. ಈ ಸಂಬಂಧ ತಿರುಮಲಶೆಟ್ಟಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

    ಕಾಲು ಸ್ವಾಧೀನವಿಲ್ಲದ ಯುವಕನಿಗೆ ತಾಯಿಗಾಗಿ ದುಡಿಯುವ ಹಂಬಲ

    ಚಿತ್ರದುರ್ಗ: ಕಾಲು ಸ್ವಾಧೀನ ಇಲ್ಲದಿದ್ದರು ತಾಯಿಗಾಗಿ ದುಡಿಯುವ ಹಂಬಲದ ಯುವಕ ಸಹಾಯ ಯಾಚಿಸಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಹೆಸರು ಮಂಜುನಾಥ್, ಚಿತ್ರದುರ್ಗ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ನಿವಾಸಿ. ಕಳೆದ ಎರಡು ವರ್ಷಗಳ ಹಿಂದೆ ಕಂಬದ ಮೇಲೆ ಏರಿ ಕೇಬಲ್ ಕೆಲಸ ಮಾಡುವಾಗ ಉಂಟಾದ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಮೇಲಿಂದ ಕೆಳಗೆ ಬಿದ್ದು ತನ್ನ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ.

    ಕೇಬಲ್ ಕಂಪನಿ ಹಾಗು ತನ್ನ ಕುಟುಂಬದವರ ನೆರವಿನಿಂದ ಈಗಾಗಲೇ ಮೂರು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡಿರುವ ಮಂಜುನಾಥ್ ಸಂಪೂರ್ಣ ಗುಣಮುಖವಾಗದೇ ಕಂಗಾಲಾಗಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೂ ಅರ್ಜಿ ಸಲ್ಲಿಸಿದ್ದೂ, ಸಿಎಂ ಕಚೇರಿಯಿಂದ ಪೂರಕವಾಗಿ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ರವಾನೆಯಾಗಿದೆ. ಅಷ್ಟೇ ಅಲ್ಲ ಸ್ವತಃ ಗ್ರಾಮಸ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ.

    ತಾಯಿಗೆ ಆಸರೆಯಾಗಬೇಕಾಗಿದ್ದ ಮಗ ಮಂಜುನಾಥ್ ತನ್ನ ಕೈಯಲ್ಲಿ ದುಡಿಯಲಾಗುತ್ತಿಲ್ಲ ಅಂತಾ ಮರುಗುತ್ತಿದ್ದರೆ, ಇತ್ತ ತಾಯಿ ಮಗನಿಗಾಗಿ ಕೂಲಿ ಕೆಲಸ ಮಾಡಿ ಮಗನ ಆರೈಕೆ ಮಾಡುತ್ತಿದ್ದಾರೆ. ತಾಯಿ ಮಗ ಸ್ವಾವಲಂಬಿಯಾಗಿ ಜೀವನ ಮಾಡಲು ಒಂದು ಸಣ್ಣದಾದ ಚಿಲ್ಲರೆ ಅಂಗಡಿಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಮೂಲಕ ದಾನಿಗಳ ಸಹಾಯ ಬಯಸುತ್ತಿದ್ದಾರೆ.

    https://www.youtube.com/watch?v=qOKdDFVoMwk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv