Tag: mother

  • 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ- ಕರುಳಬಳ್ಳಿ ಜೊತೆ ಜೀವಂತವಾಗಿ ನೇತಾಡುತ್ತಿದ್ದ ಮಗು ರಕ್ಷಣೆ

    9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ- ಕರುಳಬಳ್ಳಿ ಜೊತೆ ಜೀವಂತವಾಗಿ ನೇತಾಡುತ್ತಿದ್ದ ಮಗು ರಕ್ಷಣೆ

    ಭೋಪಾಲ್: 9 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಹೊಟ್ಟೆಯಿಂದ ಕರುಳಬಳ್ಳಿಯೊಂದಿಗೆ ಜಾರಿ ನೇತಾಡುತ್ತಿದ್ದ ಮಗುವನ್ನು ರಕ್ಷಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಲಕ್ಷ್ಮಿ ಠಾಕೂರ್(36) ಆತ್ಮಹತ್ಯೆ ಮಾಡಿಕೊಂಡ ತುಂಬು ಗರ್ಭಿಣಿ. ಲಕ್ಷ್ಮಿ 9 ತಿಂಗಳು ಗರ್ಭಿಣಿಯಾಗಿದ್ದು, ಈಗಾಗಲೇ ಆಕೆಗೆ 4 ಮಕ್ಕಳಿದ್ದರು. ಲಕ್ಷ್ಮಿ ಗುರುವಾರ ಬೆಳಗ್ಗೆ 6.30ಕ್ಕೆ ತನ್ನ ಮನೆಯ ಬಳಿಯಿದ್ದ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಗಂಡು ಮಗು ಕರುಳಬಳ್ಳಿ ಸಮೇತ ಲಕ್ಷ್ಮಿ ಕಾಲಿನ ಮಧ್ಯೆ ಸೀರೆಯಲ್ಲಿ ಜೀವಂತವಾಗಿ ನೇತಾಡುತ್ತಿತ್ತು.

    ಈ ಘಟನೆ ಬಗ್ಗೆ ನಮಗೆ ಮಾಹಿತಿ ಬಂದಾಗ ನಾವು ಮೊದಲು ಸ್ಥಳಕ್ಕೆ ಭೇಟಿ ನೀಡಿದ್ದೇವು. ವೈದ್ಯರು ಬರುವವರೆಗೂ ನೇತಾಡುತ್ತಿದ್ದ ಗಂಡು ಮಗುವನ್ನು ಕ್ಲೀನ್ ಮಾಡಿ ಅದನ್ನು ಬೆಚ್ಚಗಿರಿಸಿದ್ದೇವು. ನಂತರ ವೈದ್ಯರು ಬಂದು ಮಗುವನ್ನು ತಾಯಿಯ ಕರುಳಬಳ್ಳಿಯಿಂದ ಬೇರ್ಪಡಿಸಿದ್ದಾರೆ. ಸದ್ಯ ಮಗುವನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಬದುಕುಳಿಯುವ ಎಲ್ಲ ಸಾಧ್ಯತೆ ಇದೆ ಎಂದು ಎಸ್‍ಐ ಕವಿತಾ ಸಹ್ನಿ ಹೇಳಿದ್ದಾರೆ.

    ತುಂಬು ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಗುರುವಾರ ಬೆಳಗ್ಗೆ 7.13 ಕರೆ ಬಂತು. ನಾವು ಆಕೆಯ ಮೃತದೇಹವನ್ನು ಪರಿಶೀಲಿಸಲು ಹೋಗಿದ್ದಾಗ ಆಕೆಯ ಸೀರೆಯಲ್ಲಿ ಮಗು ನೇತಾಡುತ್ತಿರುವುದು ಕಾಣಿಸಿತು. ಆಗ ವೈದ್ಯರನ್ನು ಕರೆಸಿ ಕರುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ತಾಯಿಯನ್ನು ಪ್ರತ್ಯೇಕಿಸಲಾಯಿತು. ಮಗುವನ್ನು ತೆಗೆದ ಬಳಿಕ ಲಕ್ಷ್ಮಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದರು.

    ಇದು ಒಂದು ದುರಾದೃಷ್ಟಕರ ಘಟನೆ. ಮಹಿಳೆಯನ್ನು ಜೀವಂತವಾಗಿ ಉಳಿಸಲು ಸಾಧ್ಯವಾಗಿಲ್ಲ. ಆದರೆ ಮಗುವನ್ನು ರಕ್ಷಿಸಿದ್ದೇವೆ. ಮಗು ಬದುಕಲಿ ಎಂದು ಬೇಡಿಕೊಳ್ಳುತ್ತಿದ್ದೇವು. ಸರಿಯಾದ ಸಮಯಕ್ಕೆ ನಮಗೆ ಕರೆ ಮಾಡಿದ್ದಕ್ಕೆ ಮಗು ಬದುಕುಳಿದಿದೆ, ಇಲ್ಲದಿದ್ದರೆ ಮಗು ಕೂಡ ಮೃತಪಡುತ್ತಿತ್ತು ಎಂದು ವೈದ್ಯರು ತಿಳಿಸಿದರು. ತಾಯಿ ಮೃತಪಟ್ಟರೂ ಮಗು ಜೀವಂತವಾಗಿರುವುದನ್ನು ನೋಡಿದರೆ ಇದೊಂದು ಪವಾಡವೇ ಎಂದು ಎನ್ನಿಸುತ್ತದೆ ಎಂದು ಕವಿತಾ ಹೇಳಿದರು.

    ಲಕ್ಷ್ಮಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನನ್ನ ಹಾಗೂ ಲಕ್ಷ್ಮಿ ನಡುವೆ ಯಾವುದೇ ಜಗಳ ಇರಲಿಲ್ಲ. ಇಬ್ಬರು ಬುಧವಾರ 9 ಗಂಟೆವರೆಗೂ ಟಿವಿ ನೋಡಿ ಮಲಗಲು ಹೋಗಿದ್ದೇವು. ಗುರುವಾರ ಬೆಳಗ್ಗೆ 6 ಗಂಟೆಗೆ ನಾನು ಎದ್ದಾಗ ಲಕ್ಷ್ಮಿ ಎಲ್ಲಿಯೂ ಕಾಣಿಸಲಿಲ್ಲ. ಆಕೆಯನ್ನು ಹುಡುಕುತ್ತಿದ್ದಾಗ ದನದ ಕೊಟ್ಟಿಗೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ನಾನು ಸ್ಥಳೀಯ ನಿವಾಸಿಗಳಿಗೆ ತಿಳಿಸಿದೆ ಎಂದು ಪತಿ ಸಂತೋಷ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

    ಮಹಿಳೆ ನೇಣಿಗೆ ಶರಣಾಗುವ ಮೊದಲು ಅಥವಾ ನಂತರ ಮಗು ಜನಿಸಿರುವುದು ಇದು ಮೊದಲ ಪ್ರಕರಣ ಎಂದು ವೈದ್ಯಕೀಯ ಲೋಕದಲ್ಲಿ ಹೇಳಲಾಗುತ್ತಿದೆ. ಲಕ್ಷ್ಮಿ ಆತ್ಮಹತ್ಯೆ ಹಾಗೂ ಡೆಲಿವರಿಯಾದ ಮಗುವಿನ ಬಗ್ಗೆ ಸಮಯ ಸರಿಯಾಗಿ ಗೊತ್ತಿಲ್ಲ. ಮಹಿಳೆ ನೇಣಿಗೆ ಶರಣಾದ ಹಿನ್ನಲೆಯಲ್ಲಿ ಮಗು ಜನಿಸಿರಬಹುದು ಪೊಲೀಸರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯಕರನ ಮದುವೆಗೆ ಬೇಸತ್ತು ಒಂದೇ ಹಗ್ಗದಲ್ಲಿ ತಾಯಿ, ಮಗಳು ಆತ್ಮಹತ್ಯೆ

    ಪ್ರಿಯಕರನ ಮದುವೆಗೆ ಬೇಸತ್ತು ಒಂದೇ ಹಗ್ಗದಲ್ಲಿ ತಾಯಿ, ಮಗಳು ಆತ್ಮಹತ್ಯೆ

    ದಾವಣಗೆರೆ: ಜಿಲ್ಲೆಯ ಎಂಸಿಸಿಬಿ ಬ್ಲಾಕ್‍ನ ಕುವೆಂಪು ನಗರದಲ್ಲಿ ಒಂದೇ ಹಗ್ಗದಲ್ಲಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

    ವಸಂತ ತನ್ನ ಪ್ರಿಯಕರನ ಮದುವೆ ಹಿನ್ನೆಲೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ತಾನು ಆತ್ಮಹತ್ಯೆಗೆ ಶರಣಾಗಿದ್ದು ಅಲ್ಲದೇ ತನ್ನ ಎಂಟು ವರ್ಷದ ಮಗಳನ್ನು ವಸಂತ ನೇಣಿಗೆ ಹಾಕಿದ್ದಾಳೆ.

    ವಿವಾಹಿತೆ ವಸಂತಾ ರಾಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಂದು ರಾಕೇಶ್ ಮದುವೆ ಇದ್ದು, ಪ್ರಿಯಕರ ತನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗುತ್ತಿದ್ದಾನೆ ಎನ್ನುವ ವಿಚಾರ ತಿಳಿದು ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಈಗ ವಿನೋಬ ನಗರದ ಸುಕೃತಿ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಗೆ ನಿಂತಿದ್ದ ರಾಕೇಶ್ ನನ್ನು ಮಂಟಪದಿಂದ ಬಡಾವಣೆ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

    ಮದುವೆ ಮುರಿದು ಬಿದ್ದಿದ್ದು ಹಸಮಣೆ ಏರಬೇಕಿದ್ದ ರಾಕೇಶ್ ಈಗ ಪೊಲೀಸ್ ಠಾಣೆಯಲ್ಲಿ ಕೂತಿದ್ದಾನೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಅಮ್ಮ ಶಾಲೆಗೆ ಕಳುಹಿಸುತ್ತಿಲ್ಲ- 3ರ ಪೋರಿಯಿಂದ ಪೊಲೀಸ್ ಠಾಣೆಯಲ್ಲಿ ದೂರು!

    ಲಕ್ನೋ: ಉತ್ತರಪ್ರದೇಶದ ಗೋರಖ್‍ಪುರ ಜಿಲ್ಲೆಯ ಮೂರು ವರ್ಷದ ಪೋರಿಯೊಬ್ಬಳು ತನ್ನ ತಾಯಿ ಶಾಲೆಗೆ ಕಳುಹಿಸುತ್ತಿಲ್ಲವೆಂದು ಪೊಲೀಸರ ಬಳಿಯೇ ದೂರನ್ನು ನೀಡಿದ್ದಾಳೆ.

    ಸಂತ ಕಬೀರ್ ನಗರದ ಮಕ್ಸೂದ್ ಖಾನ್ ಹಾಗೂ ಅಸ್ಮಾ ಖಾನ್ ದಂಪತಿಯ ಪುತ್ರಿ ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನು ನೀಡಿದ್ದಾಳೆ. ಫಾಲಕ್ ತನ್ನ ತಾಯಿಯ ವಿರುದ್ಧವೇ ದೂರನ್ನ ನೀಡಿದ್ದನ್ನು ಕಂಡ ಪೊಲೀಸರು ಬಾಲಕಿಯ ತೊದಲು ಮಾತಿಗೆ ಮರುಳಾಗಿದ್ದಾರೆ. ಅಲ್ಲದೇ ಆಕೆಯನ್ನು ಖುದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರವರು ಅವರ ಮನೆಗೆ ಕರೆದುಕೊಂಡು ಹೋಗಿ, ಬಾಲಕಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

    ಬಾಲಕಿಯ ತಂದೆ ಮುಂಬಯಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ತಾಯಿಯೊಂದಿಗೆ ಕಬೀರ್‍ನಗರದಲ್ಲಿ ವಾಸವಾಗಿದ್ದಳು. ತಾಯಿ ಯಾವಾಗಲೂ ತನ್ನ 7 ತಿಂಗಳ ತಮ್ಮನ್ನನ್ನು ನೋಡಿಕೊಳ್ಳುತ್ತಾ, ತನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲವೆಂದು ಕೋಪಗೊಂಡು ಮನೆಯ ಹತ್ತಿರವಿರುವ ಪೊಲೀಸ್ ಠಾಣೆಗೆ ಒಬ್ಬಳೇ ಹೋಗಿದ್ದಾಳೆ. ಅಲ್ಲದೇ ದಾರಿಯಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎಂದು ಕೇಳುತ್ತಾ, ಸರಿಯಾಗಿ ಪಂಚಪೋಖ್ರಿ ಪೊಲೀಸ್ ಠಾಣೆಗೆ ಹೋಗಿ ದೂರುನ್ನು ನೀಡಿದ್ದಾಳೆ.

    ಈ ಕುರಿತು ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ಯಾದವ್, ಮಕ್ಕಳು ಸಾಮಾನ್ಯವಾಗಿ ಪೊಲೀಸರೆಂದರೆ ಭಯಗೊಳ್ಳುತ್ತಾರೆ. ಆದರೆ ನನ್ನಲ್ಲಿಗೆ ಬಂದ ಬಾಲಕಿ, ನೀವು ನಮ್ಮ ಮನೆಗೆ ಬಂದು ಅಮ್ಮನಿಗೆ ಗದರಿಸಬೇಕು. ಆಕೆ ನನ್ನನ್ನು ಶಾಲೆಗೆ ಕಳುಹಿಸುತ್ತಿಲ್ಲ. ಒಣ ಹುಲ್ಲಿನ ಹಾಸಿಗೆ ಮೇಲೆ ಮಲಗಿಸುತ್ತಾಳೆ. ಅಷ್ಟೇ ಅಲ್ಲ ನನ್ನ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಸದಾ 7 ತಿಂಗಳ ತಮ್ಮನ ಕಡೆಗೆ ಕಾಳಜಿ ವಹಿಸುತ್ತಾಳೆ ಎಂದು ದೂರಿದ್ದಳು. ನನ್ನ ಜೀವನದ ಅತಿ ಚಿಕ್ಕ ದೂರುದಾರಳನ್ನು ಕಂಡು ನನಗೆ ರೋಮಾಂಚನವಾಯಿತು ಎಂದು ಹೇಳಿದ್ದಾರೆ.

    ಬಾಲಕಿಯೊಂದಿಗೆ ಆಕೆಯ ಮನೆಗೆ ಹೋಗಿ, ಆಕೆಯನ್ನು ಪ್ರತಿದಿನ ಶಾಲೆಗೆ ಕಳುಹಿಸಿ ಮತ್ತು ಮಗನಂತೆ ಆಕೆಯ ಬಗ್ಗೆ ಕೂಡ ಗಮನಹರಿಸುವಂತೆ ತಾಯಿಯ ಬಳಿ ಹೇಳಿದ್ದೇನೆ. ತಾಯಿಯೂ ಸಹ ಮಗಳನ್ನು ಪ್ರತಿದಿನ ಶಾಲೆಗೆ ಕಳುಹಿಸಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಪುಟ್ಟ ಮಗುವಿರುವುದರಿಂದ ಫಾಲಕ್ ಕಡೆ ಹೆಚ್ಚಿನ ಗಮನ ನೀಡಲಾಗದೇ ಇರುವುದನ್ನು ಆಕೆಯ ತಾಯಿ ಒಪ್ಪಿಕೊಂಡಿದ್ದಾರೆಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಫಾಲಕ್, ಪೊಲೀಸ್ ಅಂಕಲ್ ತುಂಬ ಒಳ್ಳೆಯವರು. ನಾನು ಇವತ್ತು ಶಾಲೆಗೆ ಹೋಗಿದ್ದೆ. ನಾನು ಒಂದು ದಿನ ಕೂಡ ಶಾಲೆ ತಪ್ಪಿಸಲು ಬಯಸುವುದಿಲ್ಲ. ನಾನು ಚೆನ್ನಾಗಿ ಓದಿ ಡಾಕ್ಟರ್ ಆಗಬೇಕೆಂದು ಹೇಳಿಕೊಂಡಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ- ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಬೇಸರ

    ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ- ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಬೇಸರ

    ಕೊಪ್ಪಳ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಗಂಗಾವತಿ ತಾಲೂಕಿನ ವಿಠಲಾಪುರದ ಗ್ರಾಮದ ರತ್ನಮ್ಮ ಮೂರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗ ತಾಯಿ ಹಾಗೂ ಮೂರು ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ರತ್ನಮ್ಮ ಅವರು ಈ ಮೊದಲು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

    ಈ ಮೊದಲು ರತ್ನಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೀಗ ಮತ್ತೆ ಮೂರು ತ್ರಿವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಟ್ಟು ನಾಲ್ಕು ಜನ ಹೆಣ್ಣು ಮಕ್ಕಳನ್ನು ಪಡೆದಿರುವ ರತ್ನಮ್ಮ ಅವರಿಗೆ ಒಂದು ಕಡೆ ಖುಷಿಯಾದರೆ, ಮತ್ತೊಂದೆಡೆ ಕಡುಬಡತನಕ್ಕೆ ಮಕ್ಕಳನ್ನು ಸಾಕುವುದು ಕಷ್ಟ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ತಾಯಿ ನಿಧನ

    ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ತಾಯಿ ನಿಧನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಿರ್ದೇಶಕ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ತಾಯಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

    ಎಸ್. ನಾರಾಯಣ್ ಅವರ ತಾಯಿ ಕಮಲಮ್ಮ(84) ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ 25 ದಿನಗಳಿಂದ ಆಸ್ಪತ್ರೆಗೆ ದಾಖಲಾಗಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು.

    ಕಮಲಮ್ಮ ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ನಿಧನರಾಗಿದ್ದಾರೆ. ಕಮಲಮ್ಮ ಅವರ ಅಂತ್ಯಕ್ರಿಯೆಯನ್ನು ಭದ್ರಾವತಿಯ ಹೊಳೆಹೊನ್ನೂರು ರಸ್ತೆಯಲ್ಲಿರುವ ಚಿತಾಗಾರದಲ್ಲಿ ಸಂಜೆ 3ರ ನಂತರ ನೆರವೇರಿಸಲಾಗುತ್ತದೆ ಎಂಬುದು ತಿಳಿದು ಬಂದಿದೆ. ಕಮಲಮ್ಮ ಅವರು ದಿವಂಗತ ಎಸ್. ವರದರಾಜ್ ಅವರ ಪತ್ನಿಯಾಗಿದ್ದು, ಇವರಿಗೆ ಮೂರು ಜನ ಗಂಡು ಮಕ್ಕಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಮೃತಪಟ್ಟ ಮರುದಿನವೇ ಪರೀಕ್ಷೆ ಬರೆದ ಮೂವರು ಮಕ್ಕಳು – ಮನಕಲಕುವ ದೃಶ್ಯ

    ತಾಯಿ ಮೃತಪಟ್ಟ ಮರುದಿನವೇ ಪರೀಕ್ಷೆ ಬರೆದ ಮೂವರು ಮಕ್ಕಳು – ಮನಕಲಕುವ ದೃಶ್ಯ

    ಚಾಮರಾಜನಗರ: ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಮೃತಪಟ್ಟಿದ್ದ ತಾಯಿಯ ಅಗಲಿಕೆಯ ನೋವಿನಲ್ಲೇ ಮೂವರು ಮಕ್ಕಳು ಪರೀಕ್ಷೆ ಬರೆದಿದ್ದಾರೆ.

    ಹನೂರು ತಾಲೂಕಿನ ಸುಲ್ವಾಡಿ ಮಾರಮ್ಮ ದೇವರ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ ಮಗೇಶ್ವರಿ ಭಾನುವಾರ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ನೋವಿನಲ್ಲೇ ಕಾವ್ಯ, ಕೀರ್ತನಾ ಮತ್ತು ವರುಣ್ ಕೌದಳ್ಳ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ತಮ್ಮ ತಾಯಿಯ ಅಗಲಿಕೆಯ ದುಃಖವನ್ನು ಹೊಟ್ಟೆಯಲ್ಲಿ ತುಂಬಿಕೊಂಡು ಅಮ್ಮನ ಆಶಯವನ್ನು ಸಾಕಾರಗೊಳಿಸಲು ಮುಂದಾಗಿದ್ದಾರೆ.

    ಸುಳ್ವಾಡಿ ಗ್ರಾಮದ ಮಾರಮ್ಮ ವಿಷ ಪ್ರಸಾದ ಸೇವನೆಯಿಂದ ಜಿಲ್ಲೆಯ ಎಂಜಿ ದೊಡ್ಡಿ ಗ್ರಾಮದ ನಿವಾಸಿ ಮಗೇಶ್ವರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇವರಿಗೆ ಮೂವರು ಮಕ್ಕಳಿದ್ದು, ಅವರು ಹನೂರು ತಾಲೂಕಿನ ಕೌಂದಳ್ಳಿಯ ಸೆಂಟ್ ಆಂಥೋಣಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಹಿರಿಯ ಮಗಳು ಕಾವ್ಯ 9ನೇ, ಎರಡನೇ ಮಗಳು ಕೀರ್ತನಾ 8ನೇ ಹಾಗೂ ಮಗ ವರುಣ್ 5ನೇ ತರಗತಿಯಲ್ಲಿ ಓದುತ್ತಿದ್ದಾರೆ.

    ಮೃತ ಮಗೇಶ್ವರಿ ಅವರು ಮೊದಲನೇ ಮಗಳಾದ ಕಾವ್ಯಳನ್ನು ಉಪನ್ಯಾಸಕಿಯಾಗಿ ಮತ್ತು ಎರಡನೇ ಮಗಳು ಕೀರ್ತಳಾನ್ನು ಪೊಲೀಸ್ ಮಾಡುವ ಆಸೆ ಹೊಂದಿದ್ದರು. ಕೂಲಿ ಮಾಡಿದರೂ ಮಕ್ಕಳನ್ನು ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಓದಿಸುತ್ತಿದ್ದರು.

    ತಾಯಿ ಕಳೆದುಕೊಂಡರೂ ಮಾರನೇ ದಿನವೇ ಮಕ್ಕಳು ತರಗತಿಗೆ ಬಂದು ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ತಾಯಿ ಮಗೇಶ್ವರಿಯ ಆಸೆಯನ್ನು ಪೂರೈಸುವಂತಹ ಕೆಲಸವನ್ನು ಮಕ್ಕಳು ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾಯಿ ಕಂಡಿದ್ದ ಕನಸನ್ನು ನನಸಾಗಿಸಿದರೆ ಅವರು ಸದಾ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂಬ ಭಾವನೆಯ ಛಲದಿಂದ ಓದುತ್ತಿದ್ದಾರೆ. ಮಕ್ಕಳು ಈ ಕಾರ್ಯ ಇತರರಿಗೆ ಮಾದರಿಯಾಗಿದ್ದು, ಅವರ ಛಲ ಕಂಡು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹೆಮ್ಮೆ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಅಂದು ತಂದೆ, ಇಂದು ತಾಯಿ – ದೇವಿ ಪ್ರಸಾದದಿಂದ ಮಕ್ಕಳು ಅನಾಥರಾದ್ರು!

    ಮೈಸೂರು: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಮವಾರ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಿಧನರಾಗಿದ್ದಾರೆ.

    ಬೆಳಗ್ಗೆ 8:45ಕ್ಕೆ ಮೋನಿ ಬಾಯಿ ಮೃತಪಟ್ಟಿದ್ದಾರೆ. ಮೈಲಿ ಬಾಯಿ ಪತಿ ಕೃಷ್ಣ ನಾಯಕ್ ಸಹ ಮೊನ್ನೆ ನಿಧನವಾಗಿದ್ದರು. ಮೃತರು ಕೋಟೆಪುದೆ ಗ್ರಾಮದವರು ಎಂದು ತಿಳಿದು ಬಂದಿದೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೈಲಿಬಾಯಿ ಕೂಡ ಮೃತಪಟ್ಟಿದ್ದಾರೆ. ಇತ್ತ ಅಪ್ಪ ಅಮ್ಮನನ್ನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.

    ಏನಾಗಿತ್ತು?
    ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೈಲಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದರು. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದು, ಅದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದರು. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದರು. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೈಲಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದರು.

    ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಲಾಗಿತ್ತು. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆ.ಆರ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ ವಿವರಿಸಿದ್ದರು.

    ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದಿಸುವವರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಪ್ರಿಯಾ ಗೋಗರೆದಿದ್ದಳು.

    ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ ಇಂದು ಅಮ್ಮ ಕೂಡ ಮಕ್ಕಳನ್ನು ತಬ್ಬಲಿ ಮಾಡಿ ಅಗಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 20 ಮಂದಿ ಮಹಿಳೆಯರ ಜೊತೆ ಸೇರಿ ಅತ್ತೆಯಿಂದ ಸೊಸೆಗೆ ಲೈಂಗಿಕ ಕಿರುಕುಳ

    20 ಮಂದಿ ಮಹಿಳೆಯರ ಜೊತೆ ಸೇರಿ ಅತ್ತೆಯಿಂದ ಸೊಸೆಗೆ ಲೈಂಗಿಕ ಕಿರುಕುಳ

    ನವದೆಹಲಿ: ಅತ್ತೆಯೊಬ್ಬಳು 20 ಜನ ಮಹಿಳೆಯರ ಜೊತೆ ಸೇರಿ ಸೊಸೆಗೆ ಲೈಂಗಿಕ ಕಿರುಕುಳ ಕೊಟ್ಟ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದಿದೆ.

    ಡಿಸೆಂಬರ್ 10ರಂದು ಈ ಘಟನೆ ನಡೆದಿದೆ. ಘಟನೆ ಸಂಬಂಧ ಸಂತ್ರಸ್ತ ಮಹಿಳೆ ಹಾಗೂ ತಾಯಿ ಆರೋಪಿಗಳ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ಡಿಸೆಂಬರ್ 14ರಂದು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    ಏನಿದು ಪ್ರಕರಣ?:
    27 ವರ್ಷದ ಸಂತ್ರಸ್ತ ಮಹಿಳೆ ತನ್ನ ತಾಯಿಯ ಜೊತೆಗೆ ಡಿಸೆಂಬರ್ 10ರಂದು ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಬಾಗಿಲು ತೆರೆಯುತ್ತಿದ್ದಂತೆಯೇ ಬಾರ್ ನಲ್ಲಿ ಕೆಲಸ ಮಾಡುವ 20 ಜನ ಮಹಿಳೆಯರು ಸೇರಿದಂತೆ 30 ಜನ ಗೂಂಡಾಗಳು ಹೊರಬಂದು ಏಕಾಏಕಿ ತಾಯಿ-ಮಗಳ ಮೇಲೆ ಹಲ್ಲೆ ಮಾಡಿದ್ದಾರೆ.

    ಅತ್ತೆ ಸುನಿತಾ ಚೌಧರಿ ಹಾಗೂ ಕೆಲ ಮಹಿಳೆಯರು ನನ್ನನ್ನು ಒಳಗೆ ಎಳೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇತ್ತ ನನ್ನ ತಾಯಿಯ ಮೇಲೂ ಹಲ್ಲೆ ಮಾಡಿ, ಕಿರುಕುಳ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ನನ್ನ ಪತಿ ತೇಜ್‍ವೀರ್ ಕೂಡ ಭಾಗಿಯಾಗಿದ್ದನು. ಆದರೆ ನಮ್ಮ ಮೇಲೆ ಹಲ್ಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಪತಿ ಜೊತೆಗೆ ಜೀವನ ನಡೆಸಲು ಅತ್ತೆ ಯಾಕೆ ಬಿಡುತ್ತಿಲ್ಲ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ನನ್ನಿಂದ ಪತಿಯನ್ನು ದೂರವಿಡಲು ಪ್ರಯತ್ನಿಸುತ್ತಿದ್ದಾಳೆ. ಎಷ್ಟೇ ಕೇಳಿಕೊಂಡರೂ ನನ್ನ ಪ್ರಶ್ನೆಗೆ ಉತ್ತರ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ನನಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನ್ನ ದುಃಖ ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ನಿನ್ನ ಹರಕೆಯಿಂದ ಮಗು ಹುಟ್ತು, ಆದರೆ ಈಗ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ – ಬಾಣಂತಿ ರೋಧನೆ

    ಚಾಮರಾಜನಗರ: “ಹರಕೆ ಮಾಡಿಕೊಂಡಿದ್ದಕ್ಕೆ ಮಗು ಕೊಟ್ಟೆ, ಆದರೆ ನನ್ನ ಪತಿಯನ್ನು ಕಿತ್ತುಕೊಂಡೆಯಾ ಅಮ್ಮಾ” ಎಂದು ಹೇಳಿ ಸುಳ್ವಾಡಿ ಗ್ರಾಮದ ಬಾಣಂತಿಯೊಬ್ಬರು ಈಗ ಕಣ್ಣೀರು ಹಾಕುತ್ತಿದ್ದಾರೆ.

    ಹುನೂರು ತಾಲೂಕಿನ ಸುಳ್ವಾಡಿ ಗ್ರಾಮದ ಶಾಂತರಾಜು ಅವರಿಗೆ ಮದುವೆಯಾಗಿ ಮಕ್ಕಳಾಗಿರಲಿಲ್ಲ. ಮಕ್ಕಳಾಗದ್ದಕ್ಕೆ ಓಂ ಶಕ್ತಿ ದೇವರಿಗೆ ಹರಕೆ ಹೊತ್ತಿಕೊಂಡಿದ್ದರು. ದೇವಿಯ ಅನುಗ್ರಹವೆಂಬಂತೆ ದಂಪತಿಗೆ ಮೂರು ತಿಂಗಳ ಹಿಂದೆ ಮಗು ಹುಟ್ಟಿತ್ತು.

    ದೇವಿಯ ಹರಕೆಯಿಂದಲೇ ಮಗು ಜನನವಾಗಿದೆ ಎಂದು ತಿಳಿದು ದಂಪತಿ ಖುಷಿಯಿಂದ ಈ ಹರಕೆ ತೀರಿಸಲು ಶುಕ್ರವಾರ ಬೆಳಗ್ಗೆ ಮಾರಮ್ಮ ದೇವಸ್ಥಾನಕ್ಕೆ ಆಗಮಿಸಿದ್ದರು. ವಿಧಿ ಬರಹ ಘೋರ ಎನ್ನುವಂತೆ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕ ಶಾಂತರಾಜು ಪ್ರಸಾದವನ್ನು ಸೇವಿಸಿದ್ದಾರೆ. ಪ್ರಸಾದವನ್ನು ತಿಂದು ಅಸ್ವಸ್ಥಗೊಂಡಿದ್ದ ಶಾಂತರಾಜು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಪತಿ ಮೃತಪಟ್ಟ ಶಾಕಿಂಗ್ ವಿಚಾರ ತಿಳಿದು ಮೂರು ತಿಂಗಳ ಮಗುವಿನೊಂದಿಗೆ ಬಾಣಂತಿ,”ಮಗುವನ್ನ ಕೊಟ್ಟು ಪತಿಯನ್ನ ಕಿತ್ತುಕೊಂಡಾ ದೇವರೇ. ಅಮ್ಮಾ, ಯಾಕೆ ನನಗೆ ಈ ಕಷ್ಟವನ್ನು ಕೊಟ್ಟೆ” ಎಂದು ಹೇಳಿ ರೋಧಿಸುತ್ತಿದ್ದಾರೆ. ಬಾಣಂತಿಯ ನೋವನ್ನು ಕೇಳಿ ಸ್ಥಳದಲ್ಲಿದ್ದ ಜನ ಸಹ ಕಣ್ಣೀರು ಹಾಕುತ್ತಿದ್ದಾರೆ. ಪುಟ್ಟ ಕಂದಮ್ಮನ್ನು ಹಿಡಿದು ಆಡಿಸಬೇಕಾದ ತಂದೆ ಈಗ ಶವವಾಗಿದ್ದಾರೆ. ಮಗುವಿನ ಜನನೊಂದಿಗೆ ಸಂಭ್ರಮದಲ್ಲಿದ್ದ ಕುಟುಂಬ ಈಗ ಸೂತಕದ ಛಾಯೆಯಲ್ಲಿದೆ.

    ಪ್ರಸಾದ ದುರಂತದಲ್ಲಿ ಒಂದೇ ಗ್ರಾಮದ 7 ಮಂದಿ ಮೃತಪಟ್ಟಿದ್ದು, ಈಗಾಗಲೇ ಮೃತದೇಹಗಳನ್ನು ಗ್ರಾಮಕ್ಕೆ ಅಂಬುಲೆನ್ಸ್ ಮೂಲಕ ರವಾನಿಸಲಾಗಿದೆ. ಗ್ರಾಮಸ್ಥರು ಸಾಮೂಹಿಕವಾಗಿ ಬೆಂಕಿ ಇಟ್ಟು ಅಂತ್ಯಸಂಸ್ಕಾರ ಮಾಡಲು ನಿರ್ಧಾರ ಮಾಡಿದ್ದಾರೆ.

    ಏನು ಹೇಳಲು ಸಾಧ್ಯವಿಲ್ಲ: ಸದ್ಯಕ್ಕೆ ಅಸ್ವಸ್ಥರಾಗಿರುವ ಜನರ ಆರೋಗ್ಯದ ಬಗ್ಗೆ ಇನ್ನೂ 15 ದಿನ ಏನೂ ಹೇಳುವುದಕ್ಕೆ ಆಗಲ್ಲ. ಮಾರಮ್ಮ ದೇವಿಯ ಭಕ್ತರ ದೇಹ ಸೇರಿರುವುದು ಅಪಾಯಕಾರಿ ವಿಷವಾಗಿದೆ. ಕೀಟನಾಶಕ ಮಿಶ್ರಣವಾಗಿರುವ ಕಾರಣ ಅಸ್ವಸ್ಥರು ಔಟ್ ಆಫ್ ಡೇಂಜರ್ ಅಂತ ಹೇಳಲು ಅಸಾಧ್ಯವಾಗಿದ್ದು, ಅದಕ್ಕೆ ಇನ್ನೂ ಸಮಯ ಬೇಕು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಿಂಚಣಿ ಹಣಕ್ಕಾಗಿ 92ರ ತಾಯಿಯ ಮೃತದೇಹ ಬಚ್ಚಿಟ್ಟಿದ್ದ ಮಗ!

    ಪಿಂಚಣಿ ಹಣಕ್ಕಾಗಿ 92ರ ತಾಯಿಯ ಮೃತದೇಹ ಬಚ್ಚಿಟ್ಟಿದ್ದ ಮಗ!

    ಮ್ಯಾಡ್ರಿಡ್: ಪಿಂಚಣಿ ಹಣದ ಆಸೆಗೆ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ವರ್ಷಗಟ್ಟಲೇ ಬಚ್ಚಿಟ್ಟ ಘಟನೆ ಸ್ಪೇನ್‍ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಸ್ಯ್ಪಾನಿಷ್ ಪ್ರಜೆಯೊಬ್ಬ ತನ್ನ (92) ವಯಸ್ಸಿನ ತಾಯಿಯ ಮೃತದೇಹವನ್ನು ಸರಿ ಸುಮಾರು ಒಂದು ವರ್ಷಗಳ ಕಾಲ ತನ್ನ ಮನೆಯಲ್ಲಿಯೇ ಬಚ್ಚಿಟ್ಟು ಆಕೆಯ ಪಿಂಚಣಿ ಹಣವನ್ನು ಪಡೆಯುತ್ತಿದ್ದನು. ಮ್ಯಾಡ್ರಿಡ್‍ನ ಫ್ಲಾಟ್‍ವೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯು ತನ್ನ ತಾಯಿಯ ಮೃತದೇಹವನ್ನು ಶವಪೆಟ್ಟಿಗೆಯಲ್ಲಿ ಇರಿಸಿ ಬಚ್ಚಿಟ್ಟಿದ್ದನು. ಅಷ್ಟೆ ಅಲ್ಲದೇ ತಾಯಿಗೆ ಬರುತ್ತಿದ್ದ ಪಿಂಚಣಿ ಹಣಕ್ಕಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾನೆ.

    ಬುಧವಾರದಂದು ಸ್ಥಳೀಯರು ಆರೋಪಿ ಮನೆಹತ್ತಿರ ಓಡಾಡುತ್ತಿದ್ದ ವೇಳೆ ಮನೆ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಆಗ ಸ್ಥಳೀಯರೆಲ್ಲಾ ಸೇರಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಮನೆಯನ್ನು ಪರಿಶೀಲಿಸಿದಾಗ ತಾಯಿಯ ಮೃತದೇಹ ಕೊಳೆತು ವಾಸನೆ ಬರುತ್ತಿದ್ದರೂ ಅದನ್ನು ಆರೋಪಿ ಬಚ್ಚಿಟ್ಟಿದ್ದನು ಎನ್ನುವ ಸತ್ಯಾಂಶ ಹೊರಬಿದ್ದಿದೆ.

    ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾಯಿಯ ದೇಹವನ್ನು ಆಕೆಯ ಪಿಂಚಣಿ ಹಣಕ್ಕಾಗಿ ಬಚ್ಚಿಟ್ಟು, ಮೃತಪಟ್ಟ ವಿಷಯವನ್ನು ಗುಟ್ಟಾಗಿ ಇರಿಸಿದ್ದ ಎಂಬುದು ತಿಳಿದು ಬಂದಿದೆ. ಸತ್ಯಾಂಶ ತಿಳಿಯುತ್ತಿದಂತೆ ಪಾಪಿ ಮಗನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv