Tag: mother

  • ಎರಡು ಪುಟ್ಟ ಕಂದಮ್ಮಗಳ ಜೊತೆ ತಾಯಿ ಆತ್ಮಹತ್ಯೆ

    ಎರಡು ಪುಟ್ಟ ಕಂದಮ್ಮಗಳ ಜೊತೆ ತಾಯಿ ಆತ್ಮಹತ್ಯೆ

    ದಾವಣಗೆರೆ: ಮನೆಯಲ್ಲಿ ಕಿತ್ತು ತಿನ್ನುವ ಬಡತನಕ್ಕೆ ರೋಸಿ ಹೋಗಿ ಎರಡು ಪುಟ್ಟ ಕಂದಮ್ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ರಾಂಪುರ ಗ್ರಾಮದಲ್ಲಿ ನಡೆದಿದೆ.

    ಮಂಜಕ್ಕ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮಂಜಕ್ಕ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ.

    ಮಂಜಕ್ಕ ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಸುಟ್ಟ ಗಾಯಗಳಿಂದ ಒದ್ದಾಡುತ್ತಿದ್ದ ಮಕ್ಕಳನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಯಲ್ಲಿ ಐದು ವರ್ಷದ ಬಸವರಾಜ್ ಮೃತಪಟ್ಟಿದ್ದು, ಮೂರು ವರ್ಷದ ನಾಗಮ್ಮ ನ ಸ್ಥಿತಿ ಚಿಂತಾಜನಕವಾಗಿದೆ.

    ಈ ಘಟನೆ ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಪ್ರಾಪ್ತ ಮಾನಸಿಕ ಅಸ್ವಸ್ಥೆ ಗರ್ಭಿಣಿ- ವಿಷಯ ತಿಳಿದ ತಾಯಿ ಆತ್ಮಹತ್ಯೆಗೆ ಶರಣು

    ಅಪ್ರಾಪ್ತ ಮಾನಸಿಕ ಅಸ್ವಸ್ಥೆ ಗರ್ಭಿಣಿ- ವಿಷಯ ತಿಳಿದ ತಾಯಿ ಆತ್ಮಹತ್ಯೆಗೆ ಶರಣು

    ರಾಮನಗರ: ಅಪ್ರಾಪ್ತ ಮಾನಸಿಕ ಅಸ್ವಸ್ಥೆ ಗರ್ಭಿಣಿ ಆಗಿದ್ದಾಳೆ ಎಂಬ ವಿಷಯ ತಿಳಿದು ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ತಾಲೂಕಿನ ಗೊಲ್ಲರದೊಡ್ಡಿಯಲ್ಲಿ ನಡೆದಿದೆ.

    ಗರ್ಭಿಣಿ ತಾಯಿ ಪ್ರೇಮ(35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪ್ರೇಮ ತನ್ನ ಮಾನಸಿಕ ಅಸ್ವಸ್ಥೆ ಮಗಳು ಗರ್ಭಿಣಿ ಆಗಿದ್ದಾಳೆ ಎಂಬ ವಿಷಯ ತಿಳಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಪ್ರಾಪ್ತೆ ಎದುರು ಮನೆ ಯುವಕನಿಂದ ಗರ್ಭಿಣಿಯಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎದುರು ಮನೆ ಯುವಕನ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೇ ಮಾಗಡಿ – ರಾಮನಗರ ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಘಟನಾ ಸ್ಥಳಕ್ಕೆ ರಾಮನಗರ ಎಸ್‍ಪಿ ರಮೇಶ್ ಭಾನೋತ್ ಭೇಟಿ ನೀಡಿದ್ದಾರೆ. ಈ ಬಗ್ಗೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಡಿಯಲು ಹಣ ಕೊಡದ್ದಕ್ಕೆ ತಾಯಿಯನ್ನು ಕೊಂದು ಶವವನ್ನು ರಸ್ತೆಗೆ ಎಸೆದ!

    ಕುಡಿಯಲು ಹಣ ಕೊಡದ್ದಕ್ಕೆ ತಾಯಿಯನ್ನು ಕೊಂದು ಶವವನ್ನು ರಸ್ತೆಗೆ ಎಸೆದ!

    ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಣ ನೀಡಿಲ್ಲ ಎಂದು ವ್ಯಕ್ತಿಯೊಬ್ಬ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.

    ವೃದ್ಧೆ ಮೀನಾಕ್ಷಿ ಮಗನಿಂದ ಕೊಲೆಯಾದ ದುರ್ದೈವಿ. ಗಣೇಶ್(48) ಕುಡಿದ ಅಮಲಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಗಣೇಶ್ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದನು. ಕೆಲವು ವರ್ಷಗಳ ಹಿಂದೆ ಗಣೇಶ್ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದನು. ಆಗಿನಿಂದ ಗಣೇಶ್ ತಾಯಿಯೇ ದುಡಿದು ಸಂಸಾರವನ್ನು ನಡೆಸುತ್ತಿದ್ದರು.

    ಕೆಲವು ದಿನಗಳ ಹಿಂದೆ ಗಣೇಶ್ ತಾಯಿಗೆ ಸರ್ಕಾರದಿಂದ ಸುಮಾರು 1.5 ಸಾವಿರ ರೂ. ಪಿಂಚಣಿ ಹಣ ಬಂದಿತ್ತು. ಆ ಹಣವನ್ನು ಮಗ ತನಗೆ ಕೊಡು ಎಂದು ಪೀಡಿಸುತ್ತಿದ್ದನು. ಈ ವಿಚಾರವಾಗಿ ತಾಯಿ ಮಗನ ನಡುವೆ ಹಲವು ಬಾರಿ ಜಗಳ ಕೂಡ ನಡೆದಿತ್ತು. ಆದ್ರೆ ಬುಧವಾರ ರಾತ್ರಿ ಮನೆಗೆ ಕುಡಿದು ಬಂದಿದ್ದ ಗಣೇಶ್ ತನ್ನ ತಾಯಿಗೆ ಹಣ ನೀಡುವಂತೆ ಕಾಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೆ ಏರಿ ಕೋಪಗೊಂಡ ಗಣೇಶ್ ತಾಯಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ದೊಣ್ಣೆಯಿಂದ ಬಲವಾಗಿ ಏಟು ಬಿದ್ದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ತಾಯಿಯ ದೇಹವನ್ನು ಆರೋಪಿ ರಸ್ತೆಮೇಲೆ ಹಾಕಿ ಹೋಗಿದ್ದಾನೆ.

    ಇಂದು ಬೆಳಗ್ಗೆ ಗ್ರಾಮಸ್ಥರು ಓಡಾಡುವಾಗ ಶವವನ್ನು ನೋಡಿದಾಗ ಕೃತ್ಯ ಬೆಳಕಿಗೆ ಬಂದು, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ತಾಯಿಯನ್ನೇ ಕೊಂದು ಆಕೆಯ ರಕ್ತ ಕುಡಿದ ನರಭಕ್ಷಕ ಮಗ!

    ರಾಯ್‍ಪುರ: ನರಭಕ್ಷಕ ಮಗನೊಬ್ಬ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದಿರುವ ಭಯಾನಕ ಘಟನೆ ಛತ್ತಿಸ್‍ಗಢದ ಕೋರ್ಬಾ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ದಿಲೀಪ್ ಯಾದವ್(27) ಈ ಭಯಾನಕ ಕೃತ್ಯವೆಸಿಗಿದ್ದಾನೆ. ಸುಮಾರಿಯಾ(50) ಮೃತ ದುರ್ದೈವಿ. ಡಿಸೆಂಬರ್ 31ರಂದು ಈ ಭಯಂಕರ ಘಟನೆ ನಡೆದಿದೆ. ಆರೋಪಿ ಮನೆಗೆ ಯಾವಾಗಲು ನೆರೆಮನೆಯಲ್ಲಿದ್ದ ಸಮೀರನ್ ಎಂಬ ಮಹಿಳೆ ದಿಲೀಪ್ ತಾಯಿಯನ್ನು ಮಾತನಾಡಿಸಲು ಬರುತ್ತಿದ್ದರು. ಎಂದಿನಂತೆ ಘಟನೆ ನಡೆದ ದಿನವು ಬಂದಿದ್ದಾರೆ. ಆಗ ದಿಲೀಪ್ ತನ್ನ ತಾಯಿಯನ್ನೇ ತುಂಡು ತುಂಡಾಗಿ ಕತ್ತರಿಸಿ ಆಕೆಯ ರಕ್ತ ಕುಡಿದು, ನಂತರ ಮನೆಯೊಳಗೆ ಮೃತದೇಹದ ತುಂಡುಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ಹಚ್ಚಿ ಸುಟ್ಟಿದ್ದನ್ನು ನೋಡಿ ಭಯಬಿದ್ದು ಅಲ್ಲಿಂದ ಮನೆಗೆ ಓಡಿಹೋಗಿದ್ದಾರೆ.

    ಈ ಘಟನೆಯಿಂದ ಭಯಬಿದ್ದಿದ್ದ ಮಹಿಳೆ ಯಾರ ಬಳಿಯೂ ದಿಲೀಪ್ ವಿಚಾರವನ್ನು ಹೇಳಲು ಮುಂದೆ ಬಂದಿರಲಿಲ್ಲ. ಆದ್ರೆ ಸ್ವಲ್ಪ ದಿನಗಳ ಬಳಿಕ ಈ ಭಯದಿಂದ ಚೇತರಿಸಿಕೊಂಡ ನಂತರ ಪೊಲೀಸರ ಬಳಿ ಘಟನೆ ಕುರಿತು ತಿಳಿಸಿದ್ದಾರೆ. ಮಹಿಳೆಯ ದೂರಿನ ಮೆರೆಗೆ ಪೊಲೀಸರು ದಿಲೀಪ್‍ನನ್ನು ಬಂಧಿಸಲು ಹೋದಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

    ಬಳಿಕ ಆತನ ಕುರಿತು ಗ್ರಾಮಸ್ಥರಲ್ಲಿ ಪೊಲೀಸರು ವಿಚಾರಿಸಿದಾಗ ಆತ ತಾಂತ್ರಿಕ ವಿದ್ಯೆಯನ್ನು ತಿಳಿದಿದ್ದನು. ಅಲ್ಲದೆ ಯಾವಾಗಲು ತನ್ನ ತಂದೆ ಹಾಗೂ ಸಹೋದರನ ಸಾವಿಗೆ ನೀನೆ ಕಾರಣ ಎಂದು ತಾಯಿಯ ಬಳಿ ಜಗಳವಾಡುತ್ತಿದ್ದನು. ಅಲ್ಲದೆ ಯಾವಾಗಲು ನರಬಲಿ ಹಾಗೂ ಇತರೇ ವಿಚಿತ್ರ ವಿಷಯವನ್ನೇ ಮಾತನಾಡುತ್ತಿದ್ದನು ಎಂದು ತಿಳಿಸಿದ್ದಾರೆ.

    ಬಹುಶಃ ತಾಯಿಯ ಮೇಲಿನ ಸಿಟ್ಟಿಗೆ ಆಕೆಯನ್ನು ಕೊಂದಿರಬಹುದು ಅಥವಾ ನರಬಲಿ ಎಂದು ಹೆತ್ತವಳನ್ನು ಬಲಿ ಪಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 5.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಾತಾಯಿ

    5.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಾತಾಯಿ

    ರಾಯ್ಪುರ: ಸಾಮಾನ್ಯವಾಗಿ ನವಜಾತ ಶಿಶುಗಳು 2.5 ಕೆಜಿಯಿಂದ 3.5 ಕೆಜಿ ತೂಕವನ್ನು ಹೊಂದಿರುತ್ತವೆ. ಆದ್ರೆ 27 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 5.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಮಗು ಮತ್ತು ತಾಯಿ ಆರೋಗ್ಯದಿಂದ ಇದ್ದಾರೆಂದು ವೈದ್ಯರು ತಿಳಿಸಿದ್ದಾರೆ.

    ಛತ್ತೀಸ್ ಗಢ ರಾಜ್ಯದ ಬಿಸಲಾಪುರ ಜಿಲ್ಲಾಸ್ಪತ್ರೆಯಲ್ಲಿ 27 ವರ್ಷದ ಹೇಮಲತಾ ಎಂಬವರು ತಮ್ಮ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಮಗುವನ್ನು ಛತ್ತೀಸಗಢ ರಾಜ್ಯದ ಅತಿ ತೂಕದ ಮಗು ಎಂದು ಹೇಳಲಾಗುತ್ತಿದೆ. ಹೇಮಲತಾ ರೈತ ಮಹಿಳೆಯಾಗಿದ್ದು, ಚಾಕರಖೇಡಾ ಎಂಬ ಗ್ರಾಮದ ನಿವಾಸಿಯಾಗಿದ್ದಾರೆ. ಮೊದಲ ಮೂರು ಹೆರಿಗೆ ನಾರ್ಮಲ್ ಆಗಿದ್ದರಿಂದ ನಾಲ್ಕನೇ ಡೆಲಿವರಿ ಸಹ ನಾರ್ಮಲ್ ಆಗಿದೆ.

     

    ಸಾಮಾನ್ಯವಾಗಿ ನವಜಾತ ಶಿಶು 2.5 ರಿಂದ 3.5 ಕೆಜಿ ತೂಕವನ್ನು ಹೊಂದಿರುತ್ತದೆ. ನನ್ನ ವೃತ್ತಿ ಜೀವನದಲ್ಲಿ 5.3 ಕೆಜಿ ತೂಕದ ಮಗುವನ್ನು ಇದೇ ಮೊದಲ ಬಾರಿ ನೋಡಿದ್ದೇನೆ. ಅತಿ ಹೆಚ್ಚು ತೂಕ ಹೊಂದಿರುವ ಮಕ್ಕಳು ಡಯಾಬಿಟಿಸ್ ಪೀಡಿತರಾಗಿರುತ್ತವೆ. ಆದ್ರೆ ಈ ಮಗು ಆರೋಗ್ಯವಾಗಿದ್ದು, ಯಾವುದೇ ಕಾಯಿಲೆಗಳಿಗೆ ತುತ್ತಾಗಿಲ್ಲ ಎಂದು ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯ ಡಾ. ನೀಲೇಶ್ ಠಾಕೂರ ಹೇಳ್ತಾರೆ.

    ಮೊದಲ ಮೂರು ಹರಿಗೆಗಳು ನಾರ್ಮಲ್ ಆಗಿದ್ದರಿಂದ ನಾಲ್ಕನೇ ಹೆರಿಗೆಯನ್ನು ನಾರ್ಮಲ್ ಮಾಡಿಸಿಕೊಳ್ಳಲು ವೈದ್ಯರು ತೀರ್ಮಾನಿಸಿದ್ರು. ಹೆರಿಗೆ ನೋವು ಕಾಣಿಸಿಕೊಂಡ ಒಂದು ಗಂಟೆಯಲ್ಲಿ ಮಗುವಿಗೆ ಜನ್ಮ ನೀಡಿದೆ. ಗರ್ಭಿಣಿಯಾಗಿದ್ದಾಗಲೂ ಗದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಗರ್ಭಿಣಿಯಾದ ಮೊದಲ ಮಾಸದಲ್ಲಿ ದಾಳಿಂಬೆ ಹಣ್ಣು ಹೆಚ್ಚು ತಿಂದಿದ್ದೆ ಎಂದು ಹೇಮಲತಾ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

    ಬೆಂಗಳೂರು: ಸರಿಗಮಪ ಕಾರ್ಯಕ್ರಮದಲ್ಲಿ ಕುರಿಗಾಯಿ ಎಂದೇ ಖ್ಯಾತಿಯಾಗಿರುವ ಹನುಮಂತ ಅವರ ತಾಯಿ ಶೀಲವ್ವ ಅವರು ಕೊನೆಗೂ ನಿರೂಪಕಿ ಅನುಶ್ರೀ ಆಸೆಯನ್ನು ನೆರವೇರಸಿದ್ದು, ಈ ಮೂಲಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

    ಈ ಬಗ್ಗೆ ಅನುಶ್ರೀ ತಮ್ಮ ಫೇಸ್‍ಬುಕ್, ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ತಮ್ಮ ಹನುಮಂತ ಕೊಟ್ಟ ಕೊಡಿಗೆ, ಅವರ ತಾಯಿಯ ಉಡುಗೆ” ಎಂದು ಬರೆದು ಕೊಂಡಿದ್ದು, ಅವರ ತಾಯಿ ಕೊಟ್ಟ ಉಡುಪನ್ನು ತೊಟ್ಟು ಹನುಮಂತ ಮತ್ತು ತಾಯಿ ಶೀಲವ್ವ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

    ಇಂದು ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಪ್ರೋಮೋವನ್ನು ವಾಹಿನಿ ತನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದೆ. ಅದರಲ್ಲಿ ಮೊದಲಿಗೆ ಹನುಮಂತ್ ದಿವಂಗತ ಡಾ. ರಾಜ್‍ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್, ಸಿನಿಮಾದ ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡನ್ನು ಹಾಡಿದ್ದಾರೆ. ಆಗ ಅನುಶ್ರೀ ಹನುಮಂತನ ತಾಯಿ ಕೊಟ್ಟಿರುವ ಉಡುಗೆ ತೊಟ್ಟು ವೇದಿಕೆಯ ಮೇಲೆ ಎಂಟ್ರಿಕೊಟ್ಟಿದ್ದಾರೆ. ಅನುಶ್ರೀ ಅವರನ್ನು ಆ ಉಡುಪಿನಲ್ಲಿ ನೋಡಿ ಸಂಗೀತ ನಿರ್ದೇಶಕ ಹಂಸಲೇಖ ಅವರು, ಈ ಭೂಷಣ ಧರಿಸಿರುವುದರಿಂದ ನಮಗೆ ಹೆಮ್ಮೆ, ಗೌರವವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ. ಇದನ್ನೂ ಓದಿ: ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

    https://www.instagram.com/p/BsQCrpuhQN4/

    ಅನುಶ್ರೀಗೆ ನೀಡಿರುವ ಉಡುಗೊರೆಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಅವರು ಧರಿಸಿದ್ದ ಉಡುಪಿನಲ್ಲಿದ್ದ ಮುತ್ತು-ಹವಳ, ಮಣಿ, ಕನ್ನಡಿ ಎಲ್ಲವನ್ನು ಹನುಮಂತನ ತಾಯಿ ಶೀಲವ್ವ ಅವರು ಸ್ವತಃ ತಮ್ಮ ಕೈಯಾರೆ ಪೋಣಿಸಿದ್ದಾರೆ. ಶೀಲವ್ವ ಪ್ರೀತಿಯಿಂದ ಕೊಟ್ಟಂತಹ ಉಡುಗೆಯಿಂದ ಅನುಶ್ರೀ ಸಂತಸ ಪಟ್ಟಿದ್ದು, ಪ್ರತಿಯಾಗಿ ವೇದಿಕೆಯ ಮೇಲೆಯೇ ಶೀಲವ್ವ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟಿದ್ದಾರೆ.

    ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹನುಮಂತನ ತಾಯಿ ಶೀಲವ್ವ ಅವರನ್ನು ವೇದಿಕೆಯ ಮೇಲೆ ಕರೆಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ, ಶೀಲವ್ವ ಧರಿಸಿದ್ದ ಉಡುಗೆಯನ್ನು ತನಗೂ ಕೊಡಿಸುವಂತೆ ಕೇಳಿಕೊಂಡಿದ್ದರು. ಅಂದರಂತೆಯೇ ಅವರ ತಾಯಿ ಅನುಶ್ರೀಗಾಗಿ ಲಂಬಾಣಿ ಶೈಲಿಯ ಉಡುಗೆಯನ್ನು ತಂದು ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆಚ್ಚು ಪ್ರೀತಿಸ್ತಿದ್ದ ಅಮ್ಮನ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು!

    ಹೆಚ್ಚು ಪ್ರೀತಿಸ್ತಿದ್ದ ಅಮ್ಮನ ಅಂತ್ಯಸಂಸ್ಕಾರದ ವೇಳೆ ಮಗನೂ ಸಾವು!

    ಹಾಸನ: ತಾಯಿ ಸಾವಿನಿಂದ ಆಘಾತಗೊಂಡ ಮಗ ಹೆತ್ತವಳ ಅಂತ್ಯಕ್ರಿಯೆ ವೇಳೆ ತಾನು ಸಾವನ್ನಪ್ಪಿರೋ ಮನಕಲಕುವ ಘಟನೆ ಜಿಲ್ಲೆಯ ಬೇಲೂರು ತಾಲೂಕು ಬಕ್ರವಳ್ಳಿ ಗ್ರಾಮದಲ್ಲಿ ನಡೆದಿದೆ.

    ಪಾಲಮ್ಮ(70) ಮತ್ತು ಮಂಜು(48) ಸಾವಿನಲ್ಲೂ ಒಂದಾದ ತಾಯಿ-ಮಗ. ಮಂಜು ಅರೇಹಳ್ಳಿ ಹೋಬಳಿ ಕಿತ್ತಾವರ ಗ್ರಾಮದಲ್ಲಿ ಇದ್ದರೆ ತಾಯಿ ಪಾಲಮ್ಮ ಬಕ್ರವಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಮಂಜು ಅವರಿಗೆ ತಾಯಿ ಅಂದ್ರೆ ಹೆಚ್ಚು ಪ್ರೀತಿ. ಆದ್ರೆ ದುರದೃಷ್ಟವಶಾತ್ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜನವರಿ 4ರಂದು ಮೃತಪಟ್ಟಿದ್ದರು. ತಾಯಿ ಸಾವಿನಿಂದ ಮಂಜು ಅವರು ಬಹಳ ನೊಂದುಕೊಂಡಿದ್ದರು. ಹೆತ್ತವಳ ಅಂತ್ಯಸಂಸ್ಕಾರ ಮಾಡಲು ಬಂದ ವೇಳೆ ಮಂಜು ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

    ಶನಿವಾರ ತಾಯಿಯ ಅಂತ್ಯಕ್ರಿಯೆ ನಡೆಸುವ ವೇಳೆ ಈ ಮನಕಲಕುವ ಘಟನೆ ಸಂಭವಿಸಿದೆ. ತಾಯಿಯ ಅಂತ್ಯಸಂಸ್ಕಾರಕ್ಕೆ ಬಂದ ಮಗನೂ ತಾಯಿಯೊಟ್ಟಿಗೆ ಇಹಲೋಕ ತ್ಯಜಿಸಿರುವುದು ಕುಟುಂಬಸ್ಥರಲ್ಲಿ ಅತೀವ ನೋವು ಉಂಟು ಮಾಡಿದೆ. ಕೊನೆಗೆ ಸಾವಿನಲ್ಲೂ ಒಂದಾದ ತಾಯಿ-ಮಗನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಹಾಗೂ ಸಂಬಂಧಿಕರು ಒಂದೇ ಕಡೆಯಲ್ಲಿ ನೆರವೇರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಅಮ್ಮನನ್ನು ಕಳೆದುಕೊಂಡ ನಾಯಿ ಮರಿಗಳಿಗೆ ಹಾಲುಣಿಸಿದ ಗೋ ಮಾತೆ

    ಳೆದ ಕೆಲವು ದಿನಗಳಿಂದ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

    ಅಪಘಾತದಲ್ಲಿ ತಾಯಿಯನ್ನು ಕಳೆದುಕೊಂಡ ನಾಲ್ಕೈದು ನಾಯಿಮರಿಗಳಿಗೆ ಹಸು ತಾನಾಗಿಯೇ ಹಾಲು ನೀಡುತ್ತಿದೆ. ಸಾಮಾನ್ಯವಾಗಿ ಹಸು ನಿಂತಿದ್ದರೆ, ಅದರ ಕರು ಹಾಲು ಕುಡಿಯವಷ್ಟು ಎತ್ತರವಾಗಿರುತ್ತದೆ. ಇಲ್ಲಿ ಪುಟ್ಟ ನಾಯಿ ಮರಿಗಳಿಗೆ ಕಷ್ಟವಾಗಬಾರದು ಅಂತಾ ಗೋ ಮಾತೆ ಮಲಗಿ ಹಾಲು ನೀಡುತ್ತಿದೆ. ಘಟನೆ ನಿಖರವಾಗಿ ಎಲ್ಲಿ ನಡೆದಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

    ಮನುಷ್ಯರಲ್ಲಿ ನಾನು, ನೀನು ಎಂಬ ಭೇದ ಭಾವವಿರುತ್ತೆ ಹೊರತು ಪ್ರಾಣಿಗಳಲ್ಲಿರಲ್ಲ ಎಂಬುವುದಕ್ಕೆ ತಾಜಾ ಉದಾಹರಣೆ ಇಂದು ನಮ್ಮ ಮುಂದಿದೆ. ಕೆಲ ಪ್ರಾಣಿಗಳು ಪರಸ್ಪರ ಬದ್ಧವೈರಿಗಳಾಗಿದ್ದರು, ಒಂದಕ್ಕೊಂದು ಹಾಲುಣಿಸುವ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಜಾತಿ-ಧರ್ಮ ಎಂದು ಹೊಡೆದಾಡುತ್ತಿರುವ ಮನುಷ್ಯ ಜನ್ಮ ಕೆಲವೊಮ್ಮೆ ಮೂಕ ಪ್ರಾಣಿಗಳ ಪ್ರೀತಿ-ಸಾಮರಸ್ಯವನ್ನು ನೋಡಿ ಕಲಿಯಬೇಕಾಗುತ್ತದೆ.

    ಚೆನ್ನೈನ ಪುದುಕೊಟ್ಟೈ ಗ್ರಾಮದಲ್ಲಿ ಅನಾಥ ಮೇಕೆ ಮರಿಗೆ ಶ್ವಾನವೊಂದು ತಾಯಿಯಾಗಿತ್ತು. ಕನ್ನ ಎಂಬ ಮೇಕೆ ಮರಿ ಕೆಲ ದಿನಗಳ ಹಿಂದೆ ನಡೆದ ಗಜ ಚಂಡಮಾರುತದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿತ್ತು. ತಬ್ಬಲಿ ಮೇಕೆಗೆ ಅದೇ ಮನೆಯಲ್ಲಿದ್ದ ಶ್ವಾನವೇ ತಾಯಿಯಾಗಿ ಆಸರೆಯಾಗಿತ್ತು.

    https://www.youtube.com/watch?v=uQca3sM_wfw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4ನೇ ಮಹಡಿಯಿಂದ ಬಿದ್ರೂ ಪವಾಡಸದೃಶವಾಗಿ ಬದುಕುಳಿದ ಪುಟ್ಟ ಕಂದಮ್ಮ..!

    4ನೇ ಮಹಡಿಯಿಂದ ಬಿದ್ರೂ ಪವಾಡಸದೃಶವಾಗಿ ಬದುಕುಳಿದ ಪುಟ್ಟ ಕಂದಮ್ಮ..!

    ಮುಂಬೈ: 4ನೇ ಮಹಡಿಯಿಂದ ಬಿದ್ದ 1 ವರ್ಷ 3 ತಿಂಗಳ ಪುಟ್ಟ ಕಂದಮ್ಮವೊಂದು ಪವಾಡ ಸದೃಶವಾಗಿ ಬದುಕುಳಿದ ಘಟನೆ ಮುಂಬೈನಲ್ಲಿ ನಡೆದಿದೆ.

    ಅಥರ್ವ ಬದುಕಿ ಬಂದ ಬಾಲಕ. ಈತ ಮನೆಯ 4ನೇ ಮಹಡಿಯ ಬಾಲ್ಕನಿಯಿಂದ ಗುರುವಾರ ಬೆಳಗ್ಗೆ ಬಿದ್ದಿದ್ದಾನೆ. ಘಟನೆಯಿಂದ ಬಾಲಕನಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗದೇ ಬದುಕಿದ್ದು, ಆದ್ರೆ ಮುನ್ನೆಚ್ಚರಿಕಾ ಕ್ರಮವಾಗಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ವಿವರ:
    ಬಾಲಕನ ತಂದೆ ಬರ್ಕದೆಸ್ ಅವರು ಡಿಯೋನರ್ ಜೆ ಗೋಪಿ ಕೃಷ್ಣ ಸಿಎಚ್‍ಎಸ್ ನ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಗ್ಗೆ 8.45ರ ಸುಮಾರಿಗೆ ಅಥರ್ವ ತಂದೆ ಅಜಿತ್ ಅವರು ಕಚೇರಿಗೆ ತೆರಳಲೆಂದು ರೆಡಿಯಾಗುತ್ತಿದ್ದರು. ಇನ್ನೊಂದೆಡೆ ಮನೆಯ ಮೂಲೆಯಲ್ಲಿರೋ ಲಿವಿಂಗ್ ರೂಂ ಪಕ್ಕ ಇರೋ ಬಾಲ್ಕನಿಯಲ್ಲಿ ಅಥರ್ವ ಅಜ್ಜಿ ಒಗೆದ ಬಟ್ಟೆಗಳೆನ್ನೆಲ್ಲಾ ಒಣಗಲು ಹಾಕೋದ್ರಲ್ಲಿ ಬ್ಯುಸಿಯಾಗಿದ್ದರು. ಅಜ್ಜಿ ಹಿಂದೆಯೇ ತೆವಳುತ್ತಾ ಹೋಗಿದ್ದ ಅಥರ್ವ ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಾನೆ.

    ಇತ್ತ ಆಫೀಸಿಗೆ ರೆಡಿಯಾಗಿದ್ದ ಅಜಿತ್ ಲಿವಿಂಗ್ ರೂಂಗೆ ಬರುತ್ತಿರುವಾಗ ಅಥರ್ವ ತೆವಳುತ್ತಾ ಬಾಲ್ಕನಿಯಲ್ಲಿ ನೋಡ ನೋಡುತ್ತಿದ್ದಂತೆಯೇ ಕೆಳಗೆ ಬಿದ್ದಿದ್ದಾನೆ. ನಾನು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದೆ. ಈ ವೇಳೆ ಅಜಿತ್ ಜೋರಾಗಿ ಕಿರುಚಿಕೊಂಡಿದ್ದು ಕೇಳಿಸಿತ್ತು. ಕೂಡಲೇ ನಾವೆಲ್ಲರೂ ಲಿವಿಂಗ್ ರೂಮ್ ನತ್ತ ಓಡಿದೆವು. ಆಗ ಆತ ಬಾಲ್ಕನಿಯಿಂದ ಕೆಳಗೆ ಬಿದ್ದಿರುವುದು ತಿಳಿಯಿತು ಅಂತ ಅಥರ್ವ ಆಂಟಿ ಅಂಜಲಿ ತಿಳಿಸಿದ್ದಾರೆ.

    ಘಟನೆಯನ್ನರಿತ ತಕ್ಷಣವೇ ನಾವೆಲ್ಲರೂ ಕೆಳಗಿನ ಮಹಡಿಗೆ ಬಂದೆವು. ಆಗ ಅಲ್ಲಿ ನಾವು ಅಥರ್ವ ಕಂಡು ಅಚ್ಚರಿಗೊಳಗಾದೆವು. ಆತ ಅಲ್ಲಿ ಜೋರಾಗಿ ಅಳುತ್ತಾ, ನಿಲ್ಲಲು ಪ್ರಯತ್ನಿಸುತ್ತಿದ್ದನು. ಹೀಗಾಗಿ ಬಿದ್ದಿರುವುದನ್ನು ಕಂಡು ಭಯದಿಂದ ನಾವು ಆತನಿಗೆ ಏನೂ ಆಗಿಲ್ಲ. ಹುಷಾರಾಗಿದ್ದಾನೆ ಅಂತ ನಿಟ್ಟಿಸಿರುಬಿಟ್ಟೆವು ಎಂದು ಅವರು ವಿವರಿಸಿದ್ರು.

    ಘಟನೆಯ ಬಳಿಕ ಅನುಮಾನಗೊಂಡ ಅಜಿತ್ ಮತ್ತು ಮಂಗಳ್ ಮಗ ಅಥರ್ವನನ್ನು ಆಸ್ಪತ್ರೆಗೆ ಕರೆದೊಯ್ದು ಆತನ ದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಗ ಬಾಲಕನ ಹಿಂಬಂದಿಗೆ ಸಣ್ಣಮಟ್ಟಿನ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದ್ರೂ ಆತಂಕಗೊಂಡಿದ್ದ ಅಥರ್ವ ಹೆತ್ತವರು ನುರಿತ ತಜ್ಞರ ಬಳಿ ಪರೀಕ್ಷೆ ನಡೆಸಲು ಚಿಂತಿಸಿದ್ದಾರೆ. ಅಲ್ಲದೇ ಅಲ್ಲಿಂದ ನೇರವಾಗಿ ಆಟೋ ಹಿಡಿದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ವೈದ್ಯರು ನಮ್ಮಲ್ಲಿ ಮಗುವನ್ನು ಅಡ್ಮಿಟ್ ಮಾಡಿಕೊಳ್ಳಲು ಯಾವುದೇ ಸೌಲಭ್ಯಗಳಿಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಬಳಿಕ ನಾವು ಮುಲುಂದ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಥರ್ವ ತಾಯಿ ಮಂಗಳ್ ಹೇಳಿದ್ದಾರೆ.

    ಸದ್ಯ ಬಾಲಕ ಐಸಿಯುನಲ್ಲಿ ದಾಖಲಾಗಿದ್ದಾನೆ. ಬಾಲಕನ ದೇಹವನ್ನು ಸ್ಕ್ಯಾನ್ ಮಾಡಿದಾಗ ಆತನ ಶರೀರದೊಳಗೆ ಯಾವುದೇ ರೀತಿಯ ಗಾಯಗಳಾಗಿರುವುದು ಕಂಡು ಬಂದಿಲ್ಲ ಎಂಬುದಾಗಿ ವರದಿಯಾಗಿದೆ.

    ಬಾಲಕ ಮೊದಲು ಬಾಲ್ಕನಿ ಹೊಂದಿಕೊಂಡಿದ್ದ ಮರದ ರೆಂಬೆಗಳಲ್ಲಿ ಸಿಲುಕಿಕೊಂಡು ನಂತರ ಅಲ್ಲಿಂದ ನೆಲಕ್ಕೆ ಬಿದ್ದಿದ್ದಾನೆ. ಹೀಗಾಗಿ ಬಿದ್ದ ರಭಸವನ್ನು ರೆಂಬೆ ಕಡಿಮೆ ಮಾಡಿದೆ. ಒಂದು ವೇಳೆ ಆತ ಬಾಲ್ಕನಿಯಿಂದ ನೇರವಾಗಿ ಕೆಳಗೆ ಬೀಳುತ್ತಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಒಟ್ಟಿನಲ್ಲಿ ಬಾಲ್ಕನಿಯಿಂದ ಬೀಳುತ್ತಿದ್ದಂತೆಯೇ ಮಗು ಮರದ ಕೊಂಬೆಯ ಮೇಲೆ ಬಿದ್ದು ನಂತರ ಅಲ್ಲಿ ನಿಯಂತ್ರಣ ಸಿಗದೇ ಕೆಳಕ್ಕೆ ಬಿದ್ದಿದ್ದಾನೆ. ಯಾಕಂದ್ರೆ ಬಿದ್ದ ಮಗುವಿನ ಕೈಯಲ್ಲಿ ಎಲೆಗಳಿದ್ದವು ಅಂತ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    20ಕೆಜಿ ಬೆಳ್ಳಿ, 450ಗ್ರಾಂ ಚಿನ್ನ, 1 ವಜ್ರದ ಸರ, 2 ಪ್ಲಾಟಿನಂ ಸರ- ಯಶ್ ಮನೆಯಲ್ಲಿ ಪತ್ತೆ..?

    – 40 ಕೋಟಿ ಸಾಲ ಮಾಡಿದ್ದಾರಂತೆ ರಾಕಿಂಗ್ ಸ್ಟಾರ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳಿಂದ ಶೋಧಕಾರ್ಯ ಮುಂದುವರಿದಿದೆ. ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ಯಶ್ ಮನೆಯಲ್ಲಿ ಸಿಕ್ಕಿರುವ ದಾಖಲೆಗಳನ್ನಿಟ್ಟುಕೊಂಡು ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಯಶ್ ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಮನೆಗೆ ಮುಂಜಾನೆ ಮೂರು ಗಂಟೆಗೆ ಬಂದಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸಹನೆಯಿಂದ ಯಶ್ ಅವರ ತಾಯಿ ಉತ್ತರಿಸುತ್ತಿದ್ದಾರೆ.

    ಯಶ್ ಅವರ ತಾಯಿ ಮನೆಯಲ್ಲಿರುವ ಚಿನ್ನ, ಆಸ್ತಿ ಪತ್ರ, ಬ್ಯಾಂಕ್‍ನ ಡಿಟೈಲ್ ನೀಡುತ್ತಿದ್ದಾರೆ. ಐಟಿ ಅಧಿಕಾರಿಗಳು ಯಶ್ ಮನೆಯಲ್ಲಿರುವ ಚಿನ್ನ ನಗನಾಣ್ಯ ಯಶ್ ಅವರ ತಾಯಿ ಮುಂದೆ ಲೆಕ್ಕ ಮಾಡಿದ್ದಾರೆ. 20 ಕೆಜಿಗೂ ಅಧಿಕ ಬೆಳ್ಳಿ, ಸುಮಾರು 450ಗ್ರಾಂ ಚಿನ್ನ, ಒಂದು ವಜ್ರದ ಸರ ಹಾಗೂ ಎರಡು ಪ್ಲಾಟಿನಮ್ ಸರ ಇರುವುದು ಬೆಳಕಿಗೆ ಬಂದಿದೆ.

    ಯಶ್ 8 ಬ್ಯಾಂಕ್ ಖಾತೆ ಹೊಂದಿದ್ದು, ನಾಲ್ಕು ಖಾತೆ ತಾಯಿಯೊಂದಿಗೆ ಜಂಟಿ ಖಾತೆ ಹೊಂದಿದ್ದಾರೆ. ಎರಡು ಬ್ಯಾಂಕ್ ನಲ್ಲಿ ಯಶ್ ಅವರಿಗೆ 40 ಕೋಟಿ ಸಾಲ ಇದೆ. ಬ್ಯಾಂಕ್ ನಲ್ಲಿ 13 ಕೋಟಿ, ಮತ್ತೊಂದರಲ್ಲಿ 17 ಕೋಟಿ ಸಾಲ ಇದೆ ಎಂದು ಹೇಳಲಾಗುತ್ತಿದೆ. ಮಂಡ್ಯದ ಬಳಿ ಜಮೀನೂ ಖರೀದಿ ಮಾಡಿರುವುದಾಗಿ ಯಶ್ ತಾಯಿ ಹೇಳಿದ್ದಾರೆ. ಅಲ್ಲದೇ 8 ಎಕರೆ ಯಶ್ ಮನೆ ಅವರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಎಂಬುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv