Tag: mother

  • ತಾಯಿಯನ್ನೇ ಕೊಲ್ಲಲು ಯತ್ನಿಸಿದ್ದ ಮಗನಿಗೆ 5 ವರ್ಷ ಜೈಲು

    ತಾಯಿಯನ್ನೇ ಕೊಲ್ಲಲು ಯತ್ನಿಸಿದ್ದ ಮಗನಿಗೆ 5 ವರ್ಷ ಜೈಲು

    ರಾಯಚೂರು: ತಾಯಿಯನ್ನೇ ಕೊಲೆ ಮಾಡಲು ಯತ್ನಿಸಿದ್ದ ಆರೋಪಿ ಮಗನಿಗೆ ಜಿಲ್ಲಾ ಸತ್ರ ನ್ಯಾಯಾಲವು 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

    ರಾಯಚೂರು ತಾಲೂಕಿನ ಹಿರಾಪುರದ ಗ್ರಾಮದ ಈರೇಶ್ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ. ನರಸಮ್ಮ ಹಲ್ಲೆಗೊಳಗಾಗಿದ್ದ ತಾಯಿ. ಕೋರ್ಟ್ ಆರೋಪಿಗೆ 5 ವರ್ಷ ಜೈಲು ಶಿಕ್ಷೆಯ ಜೊತೆಗೆ 27,500 ರೂ. ದಂಡವನ್ನು ವಿಧಿಸಿದೆ.

    ಏನಿದು ಪ್ರಕರಣ?:
    ನರಸಮ್ಮ ಅವರು ಆಸ್ತಿಯನ್ನು ಮಾರಿ ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಆ ಹಣವನ್ನು ತನಗೆ ನೀಡುವಂತೆ ಮಗ ಈರೇಶ್ ಒತ್ತಾಯಿಸಿದ್ದ. ಆದರೆ ನರಸಮ್ಮ ನನ್ನ ಜೀವನೋಪಾಯಕ್ಕೆ ಈ ಹಣ ಬೇಕು. ನಾನು ಕೊಡುವುದಿಲ್ಲ ಅಂತ ಮಗನಿಗೆ ಹೇಳಿದ್ದರು. ಇದರಿಂದಾಗಿ ಇಬ್ಬರ ನಡುವೆ ವಾಗ್ದಾಳಿ ಕೂಡ ಆಗಿತ್ತು. ಹಣ ಕೊಡಲಿಲ್ಲವೆಂದು ಈರೇಶ್ 2017ರ ಜುಲೈನಲ್ಲಿ ತಾಯಿಯ ಮೇಲೆ ಹಲ್ಲೆ ಮಾಡಿದ್ದ.

    ಈ ಕುರಿತು ನರಸಮ್ಮ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈರೇಶ್‍ನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು. ಪ್ರಕರಣ ನಡೆದು 18 ತಿಂಗಳ ಬಳಿಕ ಆರೋಪಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ತಿಗಾಗಿ ಹಂದಿಗೂಡಿನಂತ ಮನೆಯಲ್ಲಿ ತಾಯಿಯನ್ನೇ ಕೂಡಿ ಹಾಕಿದ ಪುತ್ರ!

    ಆಸ್ತಿಗಾಗಿ ಹಂದಿಗೂಡಿನಂತ ಮನೆಯಲ್ಲಿ ತಾಯಿಯನ್ನೇ ಕೂಡಿ ಹಾಕಿದ ಪುತ್ರ!

    – ವರದಿ ಪ್ರಸಾರದ ಬೆನ್ನಲ್ಲೇ ಬಂಧ ಮುಕ್ತಗೊಳಿಸಿದ ಪೊಲೀಸರು

    ಆನೇಕಲ್: ಆಸ್ತಿಗಾಗಿ ಮಗನೇ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಆಹಾರ ನೀಡದೇ ನರಕಯಾತನೆ ಪಡುವಂತೆ ಮಾಡಿದ ಘಟನೆ ನಗರದ ಮಾರತಹಳ್ಳಿ ಸಮೀಪದ ಕಾಡಬಿಸನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೆಂಕಟಸ್ವಾಮಿ ಎಂಬಾತ ತಾಯಿ ಮುನಿಯಮ್ಮ ಅವರನ್ನು ಹಂದಿಗೂಡಿನಂತೆ ಇದ್ದ ಮನೆಯಲ್ಲಿ ಕೂಡಿ ಹಾಕಿದ್ದ. ಅಲ್ಲದೇ ಪತ್ನಿ ಸುಜಾತ ಜೊತೆ ಸೇರಿಕೊಂಡು ಸರಿಯಾಗಿ ಊಟವೂ ನೀಡದೆ ಹಿಂಸೆ ನೀಡಿದ್ದ. ಮನೆಯಲ್ಲಿ ಕೂಡಿ ಹಾಕಿದ್ದ ಪರಿಣಾಮ ಯಾರೋಬ್ಬರು ಇವರ ಸಹಾಯಕ್ಕೂ ಬಂದಿರಲಿಲ್ಲ. ಮನೆಯಲ್ಲಿ ಸರಿಯಾಗಿ ಗಾಳಿ ಬೆಳಕು ಬಾರದ ಕಾಣದ ಕಿಟಕಿಯ ಬಳಿಯೇ ನಿಂತು ದಾರಿಯಲ್ಲಿ ಓಡಾಡುವ ಜನರಲ್ಲಿ ಸಹಾಯ ಕೇಳಿ ಮುನಿಯಮ್ಮ ಅವರು ಜೀವನ ನಡೆಸುತ್ತಿದ್ದರು.

    ಈ ಬಗ್ಗೆ ಮಾಹಿತಿ ಪಡೆದ ಪಬ್ಲಿಕ್ ಟಿವಿ ಮುನಿಯಮ್ಮ ಅವರು ಸ್ಥಿತಿಯನ್ನು ವರದಿ ಮಾಡಿತ್ತು. ವರದಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತ ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮುನಿಯಮ್ಮರನ್ನು ಬಂಧನದಿಂದ ಮುಕ್ತ ಮಾಡಿದ್ದರು. ಅಲ್ಲದೇ ಮಗ ವೆಂಕಟಸ್ವಾಮಿಗೆ ಎಚ್ಚರಿಕೆ ನೀಡಿ ಸರಿಯಾಗಿ ನೋಡಿಕೊಳ್ಳುವಂತೆ ತಿಳಿಸಿದ್ದಾರೆ.

    ಅಂದಹಾಗೇ ಕಾಡಬಿಸನಹಳ್ಳಿ ಸುತ್ತಮುತ್ತಲೂ ಭೂಮಿಗೆ ಬಂಗಾರದ ಬೆಲೆ ಇದ್ದು, ಮುನಿಯಮ್ಮ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ವೆಂಕಟಸ್ವಾಮಿ ತನ್ನ ಹೆಸರಿಗೆ ಮಾಡಿಸಿಕೊಂಡಿದ್ರು. ಬಳಿಕ ಪತ್ನಿ ಮಕ್ಕಳೊಂದಿಗೆ ಮೂರು ಅಂತಸ್ತಿನ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ವಿಜಯಪುರ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿನಿ ಎಂಬವರು ತಮ್ಮ ಮೊದಲ ಹೆರಿಗೆಯಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ.

    ಸಿಂದಗಿ ತಾಲೂಕಿನ ಖೈನೂರು ಗ್ರಾಮದ ಅಶ್ವಿನಿ ಮೊದಲ ಹೆರಿಗೆಯಲ್ಲಿಯೇ ಎರಡು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮೂರು ಮಕ್ಕಳು ಆರೋಗ್ಯವಾಗಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

    ಮೂರು ವರ್ಷಗಳ ಹಿಂದೆ ಅಶ್ವಿನಿ ಅವರನ್ನು ಶಾಂತಪ್ಪ ಎಂಬವರನ್ನು ವರಿಸಿದ್ದರು. ಕಳೆದ ಜನವರಿ ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನಿ ಅವರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಂದಹಾಗೇ ವೃತ್ತಿಯಲ್ಲಿ ಶಾಂತಪ್ಪ ಹೊಸಮನಿ ಜೆಸಿಬಿ ಆಪರೇಟರ್ ಆಗಿದ್ದು, ಪತ್ನಿ ನೀಡಿದ ಬಂಪರ್ ಕೊಡುಗೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಗಳ ಕೆನ್ನೆ, ಕೈ ಮೇಲೆ ಬರೆ ಹಾಕಿದ ತಂದೆ – ಪತಿಯ ಬೆಂಬಲಕ್ಕೆ ನಿಂತ ಪತ್ನಿ

    ಮಗಳ ಕೆನ್ನೆ, ಕೈ ಮೇಲೆ ಬರೆ ಹಾಕಿದ ತಂದೆ – ಪತಿಯ ಬೆಂಬಲಕ್ಕೆ ನಿಂತ ಪತ್ನಿ

    – ಆಸ್ಪತ್ರೆಗೆ ದಾಖಲಿಸದೇ ಮಗಳನ್ನ ಕೂಡಿ ಹಾಕಿದ ತಾಯಿ

    ಚಂಡೀಗಢ: ಕ್ರೂರಿ ತಂದೆಯೊಬ್ಬ ತನ್ನ 18 ವರ್ಷದ ಮಗಳ ಮುಖ, ಕೈಗಳ ಮೇಲೆ ಇಕ್ಕಳದಿಂದ ಬರೆ ಹಾಕಿರುವ ಘಟನೆ ಪಂಜಾಬ್ ರಾಜ್ಯದ ರಾಮದರ್ಬಾರ್ ಎಂಬಲ್ಲಿ ನಡೆದಿದೆ.

    ಸದ್ಯ ಆರೋಪಿ ತಂದೆಯ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಾಗಿದೆ. ತಂದೆ ಮಗಳ ಮೇಲೆ ಹಲ್ಲೆ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ತಾಯಿ ಪುತ್ರಿಯ ರಕ್ಷಣೆಗೆ ಮುಂದಾಗದೇ ಪತಿಯ ಬೆಂಬಲಕ್ಕೆ ನಿಂತಿದ್ದಾಳೆ. ತಂದೆ ಬರೆ ಹಾಕಿದ ಮೇಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೇ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ.

    ಹಲ್ಲೆಗೊಳಗಾದ ಯುವತಿ ನೋವಿನಿಂದ ಕಿರುಚಾಡೋದನ್ನು ಕೇಳಿಸಿಕೊಂಡ ನೆರೆಹೊರೆಯವರು ಮನೆಗೆ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಆಗಿದ್ದೇನು?
    ಯುವತಿ ಬೆಳಗ್ಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗಬೇಕೆಂದು ಹಠ ಹಿಡಿದಿದ್ದಳು. ಎಲ್ಲಿಯೂ ಹೋಗಬಾರದು ಅಂತಾ ಹೇಳಿ ಪೋಷಕರು ಕೆಲಸಕ್ಕೆ ತೆರಳಿದ್ದರು. ಮನೆಗೆ ಹಿಂದಿರುಗಿದಾಗ ಮಗಳು ಚಿಕ್ಕಮ್ಮನ ಮನೆಗೆ ಹೋಗಿರುವ ವಿಚಾರ ತಿಳಿದಿದೆ. ಇದ್ರಿಂದ ಕೋಪಗೊಂಡ ತಂದೆ ಮನೆಗೆ ಬಂದ ಮಗಳಿಗೆ ಬರೆ ಹಾಕಿದ್ದಾನೆ.

    ಬರೆ ಹಾಕಿದ ಪರಿಣಾಮ ಯುವತಿಯ ಕೆನ್ನೆ ಭಾಗದ ಚರ್ಮ ಸಂಪೂರ್ಣ ಸುಟ್ಟುಹೋಗಿದ್ದು, ಮಾತನಾಡಲು ಸಹ ಕಷ್ಟಪಡುತ್ತಿದ್ದಾಳೆ. ಠಾಣೆಯಲ್ಲಿ ಎಫ್‍ಐಆರ್ ದಾಖಲಾಗುತ್ತಿದ್ದಂತೆ ಯುವತಿಯ ತಂದೆ ಪರಾರಿಯಾಗಿದ್ದಾನೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆದಷ್ಟು ಬೇಗ ಕ್ರೂರಿ ತಂದೆಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮದ್ವೆ ದಿನ ಅಮ್ಮ ಮುನಿಸಿಕೊಂಡಿದ್ರು: ಪ್ರಿಯಾಂಕ ಚೋಪ್ರಾ

    ಮದ್ವೆ ದಿನ ಅಮ್ಮ ಮುನಿಸಿಕೊಂಡಿದ್ರು: ಪ್ರಿಯಾಂಕ ಚೋಪ್ರಾ

    ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್ ನಲ್ಲಿ ತಮ್ಮ ಗೆಳೆಯ ನಿಕ್ ಜೋನಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಆದ 2 ತಿಂಗಳ ಬಳಿಕ ನನ್ನ ತಾಯಿ ಮದುವೆಯಲ್ಲಿ ಬೇಸರದಿಂದ ಇದ್ದರು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಮದುವೆಯ ಅನುಭವವನ್ನು ಹೇಳಿಕೊಂಡಿದ್ದಾರೆ. ಭಾರತದ ಮದುವೆಯಲ್ಲಿ ಸಾವಿರಾರೂ ಮಂದಿ ಸೇರುತ್ತಾರೆ. ಆದರೆ ನನ್ನ ಮದುವೆಯಲ್ಲಿ ಕುಟುಂಬದ ಆಪ್ತರಿಗೆ ಮಾತ್ರ ನಾನು ಆಹ್ವಾನಿಸಲಾಗಿತ್ತು. ನನ್ನ ಹಾಗೂ ನಿಕ್ ಇಬ್ಬರ ಕುಟುಂಬದವರು ಸೇರಿ ಕೇವಲ 200 ಮಂದಿ ಮದುವೆಯಲ್ಲಿ ಭಾಗಿಯಾಗಿದ್ದರು. ನನ್ನ ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಆಗಮಿಸಬೇಕು ಎಂದು ನಾನು ನಿರ್ಧರಿಸಿದ್ದರಿಂದ ಅಮ್ಮ ಕೋಪಗೊಂಡಿದ್ದರು ಎಂದು ಪ್ರಿಯಾಂಕ ಎಂದು ಹೇಳಿಕೊಂಡಿದ್ದಾರೆ.

    ಮದುವೆಗೆ ಕೇವಲ 200 ಮಂದಿಗೆ ಆಹ್ವಾನ ಮಾಡಿದ್ದು, ನನ್ನ ತಾಯಿಗೆ ಇಷ್ಟವಿರಲಿಲ್ಲ. ತನ್ನ ಮಗಳ ಮದುವೆಗೆ ಎಲ್ಲರನ್ನು ಕರೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ನನ್ನ ತಾಯಿಗಿದೆ. ನನ್ನ ಮದುವೆ ಸಂದರ್ಭದಲ್ಲಿ ಅವರು ನನ್ನ ಮೇಲೆ ಬೇಸರಗೊಂಡಿದ್ದರು. ಅಲ್ಲದೇ 1,50,000 ಮಂದಿಗೆ ನಾನು ಮತ್ತೊಂದು ಪಾರ್ಟಿಯನ್ನು ಆಯೋಜಿಸಬೇಕೇ, ನನ್ನ ಮಗಳ ಮದುವೆಗೆ ನನ್ನ ಜಿವೆಲರ್ಸ್, ನನ್ನ ಹೇರ್ ಡ್ರೆಸ್ಸರ್ ನ ನಾನು ಹೇಗೆ ಆಹ್ವಾನಿಸದೇ ಇರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಪ್ರಿಯಾಂಕ ತಿಳಿಸಿದ್ದಾರೆ.

    ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕಾ ಗಾಯಕ ನಿಕ್ ಜೋಧಪುರದ ಉಮೈದ್ ಭವನದಲ್ಲಿ 2018 ಡಿಸೆಂಬರ್ 1 ಹಾಗೂ 2ರಂದು ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಪ್ರಿಯಾಂಕ ಹಾಗೂ ನಿಕ್ ಒಟ್ಟು ಮೂರು ಆರತಕ್ಷತೆ ಮಾಡಿಕೊಂಡಿದ್ದಾರೆ. ಅಲ್ಲದೇ ತಮ್ಮ ನಾಲ್ಕನೇ ಆರತಕ್ಷತೆಯನ್ನು ಅವರು ಅಮೆರಿಕಾದಲ್ಲಿ ಮಾಡಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಆಗಮಿಸಿ ನವದಂಪತಿಗೆ ಶುಭಕೋರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಓಡಿ ಹೋಗ್ತಿದ್ದ ಮಗ್ಳನ್ನು ತಡೆಯಲು ದೂರದಿಂದಲೇ ಚಪ್ಪಲಿ ಎಸೆದ ತಾಯಿ: ವಿಡಿಯೋ ವೈರಲ್

    ಓಡಿ ಹೋಗ್ತಿದ್ದ ಮಗ್ಳನ್ನು ತಡೆಯಲು ದೂರದಿಂದಲೇ ಚಪ್ಪಲಿ ಎಸೆದ ತಾಯಿ: ವಿಡಿಯೋ ವೈರಲ್

    ಮೆಕ್ಸಿಕೋ: ಓಡಿ ಹೋಗುತ್ತಿದ್ದ ಮಗಳನ್ನು ತಡೆಯಲು ತಾಯಿಯೊಬ್ಬರು ಕೋಪದಿಂದ ದೂರದಿಂದಲೇ ಆಕೆಯ ಮೇಲೆ ಚಪ್ಪಲಿ ಎಸೆದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತನ್ನ ಮಗಳು ಓಡಿ ಹೋಗುವುದನ್ನು ತಡೆಯಲು ತಾಯಿಯೂ ಕೂಡ ಆಕೆಯ ಹಿಂದೆ ಓಡಿ ಹೋಗಿದ್ದಾಳೆ. ಆದರೆ ಮಗಳು ತುಂಬಾ ದೂರ ಓಡಿ ಹೋಗಿದ ಕಾರಣ ಮಹಿಳೆ ಆಕೆಯನ್ನು ತಡೆಯಲು ತನ್ನ ಚಪ್ಪಲಿಯನ್ನು ಎಸೆದಿದ್ದಾಳೆ. ಚಪ್ಪಲಿ ನೇರವಾಗಿ ಮಗಳ ಮೇಲೆ ಬಿದ್ದು, ಆಕೆ ನೆಲಕ್ಕೆ ಉರುಳಿದ್ದಾಳೆ.

    ಮಗಳು ನೆಲಕ್ಕೆ ಬೀಳುತ್ತಿದ್ದಂತೆ ತಾಯಿ ಹಾಗೂ ಅಲ್ಲಿದ್ದ ಜನರು ಜೋರಾಗಿ ನಗಲು ಶುರು ಮಾಡಿದ್ದಾರೆ. ಅಲ್ಲದೇ ಮಹಿಳೆ ಮಗಳ ಮೇಲೆ ಚಪ್ಪಲಿ ಎಸೆಯಲು ಮುಂದಾದಾಗ ಅಲ್ಲಿದ್ದ ಜನರು ಹೊಡೆಯುವಂತೆ ಪ್ರೋತ್ಸಾಹಿಸುತ್ತಿದ್ದರು.

    ಚಪ್ಪಲಿ ನೇರವಾಗಿ ಮಗಳ ಮೇಲೆ ಬಿದ್ದು ಆಕೆ ನೆಲಕ್ಕೆ ಉರುಳಿದನ್ನು ನೋಡಿದ ತಾಯಿ ತನ್ನ ನಗುವನ್ನು ನಿಯಂತ್ರಿಸಲಾಗದೆ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದುವರೆಗೂ 16 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು – ಬಿಗ್‍ಬಾಸ್ ಸ್ಪರ್ಧಿಯಿಂದ ಭಾವನಾತ್ಮಕ ಪೋಸ್ಟ್

    ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು – ಬಿಗ್‍ಬಾಸ್ ಸ್ಪರ್ಧಿಯಿಂದ ಭಾವನಾತ್ಮಕ ಪೋಸ್ಟ್

    ಬೆಂಗಳೂರು: ಬಿಗ್‍ಬಾಸ್ ಸೀಸನ್ 5ರ ಸ್ಪರ್ಧಿ, ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರು ತನ್ನ ತಾಯಿಯನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

    ಆಶಿತಾ ಅವರ ತಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಆದ್ದರಿಂದ ತಮ್ಮ ತಾಯಿ ಕಳೆದುಕೊಂಡ ನೋವಿನಲ್ಲಿ ಆಶಿತಾ ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

    ಇನ್ ಸ್ಟಾಗ್ರಾಂ ಪೋಸ್ಟ್:
    “ಅಮ್ಮಾ ನೀವು ನಮ್ಮನ್ನು ಬಿಟ್ಟು ಹೋಗಿ 13 ದಿನಗಳು ಕಳೆದಿವೆ. ಆದರೂ ನೀವಿಲ್ಲದೇ ಪ್ರತಿದಿನವೂ ತುಂಬಾ ಕಠಿಣ ಅನ್ನಿಸುತ್ತಿದೆ. ನೀವು ನಮ್ಮನ್ನು ಅಗಲಿ ಹೋಗಿದ್ದರು, ಮೇಲಿನಿಂದ ನಮ್ಮನ್ನು ನೋಡುತ್ತಿದ್ದೀರಿ ಅಂತ ಗೊತ್ತು. ನಾವು ಅಳುವುದನ್ನು ನೋಡುತ್ತಿದ್ದೀರ. ಅಷ್ಟೇ ಅಲ್ಲದೇ ಎಂದಿನಂತೆ ನಮ್ಮನ್ನು ಬೈಯುತ್ತಾ ಇರುತ್ತೀರಾ, ಆದರೆ ನಾವು ಈಗ ಅದನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಐ ಮಿಸ್ ಯೂ ಅಮ್ಮಾ.. ಎಂದು ದುಃಖದಿಂದ ಹೇಳಿಕೊಂಡಿದ್ದಾರೆ.

    ಅಮ್ಮಾ.. ನೀವಿಲ್ಲದ ನನ್ನ ಜೀವನ ಎಂದಿನಂತೆ ಇಲ್ಲವಾಗಿದೆ. ಪ್ರತಿದಿನ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ದೆಯಿಲ್ಲದ ದಿನಗಳು ಯಾವಾಗ ಕೊನೆಯಾಗುತ್ತದೊ ಗೊತ್ತಿಲ್ಲ. ಅಮ್ಮಾ..ನಾನು ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು ಅನ್ನಿಸುತ್ತಿದೆ. ಐ ಲವ್ ಯು, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಮ್ಮಾ…” ಎಂದು ಆಶಿತಾ ತಾಯಿಯನ್ನು ನೆನಪಿಸಿಕೊಂಡು ಅವರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/BtJ5QyVltj7/

    ಆಶಿತಾ ಬಿಗ್‍ಬಾಸ್ ಸೀಸನ್ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಗೆ ಹೋಗಿದ್ದರು. ಸದ್ಯಕ್ಕೆ ಆಶಿತಾ ಖಾಸಗಿ ವಾಹಿನಿಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.

    https://www.instagram.com/p/Bs7PvgolHCI/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಒಬ್ಬ ರೈತನ ಮಗನಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು ಸಂತಸ ನೀಡಿದೆ: ಶಶಿಕುಮಾರ್ ತಾಯಿ

    ಬೆಂಗಳೂರು: ಒಬ್ಬ ರೈತನ ಮಗನಾಗಿ ಬಿಗ್ ಬಾಸ್‍ನಲ್ಲಿ ಭಾಗವಹಿಸಿದ್ದು, ನನಗೆ ಹೆಚ್ಚು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಫೈನಲ್ ಪ್ರವೇಶ ಮಾಡಿದ್ದು ಮತ್ತಷ್ಟು ಖುಷಿ ನೀಡಿದ್ದು, ಒಬ್ಬ ಆಧುನಿಕ ರೈತನಾಗಿ ನಾಡಿನ ಜನರ ಪ್ರೀತಿ ಪಡೆದಿದ್ದಾರೆ ಎಂದು ಬಿಗ್‍ಬಾಸ್ ಸ್ಪರ್ಧಿ ಶಶಿಕುಮಾರ್ ಅವರ ತಾಯಿ ಪದ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಸ್ಪರ್ಧೆಯಲ್ಲಿ ಫೈನಲ್ ವರೆಗೂ ಬರಲು ಆತನ ಸ್ಟ್ರೈಟ್ ಫಾವರ್ಡ್ ನಡೆಯೇ ಕಾರಣ. ಬಿಗ್‍ಬಾಸ್ ಹೋಗುವ ಮುನ್ನ ಹೇಗಿದ್ದನೋ ಕಾರ್ಯಕ್ರಮದಲ್ಲೂ ತನ್ನ ತನವನ್ನು ಉಳಿಸಿಕೊಂಡು ಬಂದಿದ್ದಾನೆ. ಅವನಿಗೆ ಅವನ ಮೇಲೆ ಇರುವ ನಂಬಿಕೆಯೇ ಶಕ್ತಿ ಎಂದರು.

    ಪ್ರತಿದಿನ ಕಾರ್ಯಕ್ರಮವನ್ನು ನೋಡುತ್ತಿದ್ದು, ವಿಷ ಸರ್ಪ ಹಾಗೂ ಸಿನಿಮಾ ನಿರ್ದೇಶನ ಮಾಡಿದ ಆಟಗಳು ನನಗೆ ತುಂಬಾ ಇಷ್ಟ ಆಯ್ತು. ಆತನನ್ನು ಭೇಟಿ ಆಗಿ 3 ತಿಂಗಳು ಆಗಿದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದು, ಆತನ ಸಹಾಯ ಮಾಡುವ ಗುಣವೇ ಆತನನ್ನು ಇಲ್ಲಿಯವರೆಗೂ ಕರೆದುಕೊಂಡು ಹೋಗಿದೆ. ನಾಡಿನ ಅಷ್ಟು ಮಂದಿ ತನ್ನ ಮಗನಿಗೆ ಬೆಂಬಲ ನೀಡಿದ್ದು, ಅದು ಹಾಗೆಯೇ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಮಗ ಬಿಗ್‍ಬಾಸ್ ಆಯ್ಕೆ ಆಗಿದ್ದು ಮೊದಲಿಗೆ ನನಗೆ ಖುಷಿ ತಂದಿದ್ದು, ಆತ ಶಿಕ್ಷಣ ಪಡೆಯುತ್ತಿರುವ ವೇಳೆಯೇ ರೈತನಾಗಿ ಮಾಡಿದ ಕಾರ್ಯಗಳು ನನಗೆ ಮೆಚ್ಚುಗೆ ಇತ್ತು. ಯಾರೇ ಕೃಷಿ ಬಗ್ಗೆ ಮಾಹಿತಿ ಕೇಳಿದ್ರು ತಪ್ಪದೇ ಕೊಡುತ್ತಿದ್ದ. ಬಿಗ್‍ಬಾಸ್ ಶೋ ಸ್ಪರ್ಧೆಯಲ್ಲಿ ಒಬ್ಬ ರೈತ ಯುವಕನಿಗೆ ಅವಕಾಶ ನೀಡುತ್ತಾರೆ ಎಂಬ ಊಹೆಯೂ ನನಗೆ ಇರಲಿಲ್ಲ. ರಾಮನಗರದಲ್ಲಿ ಫಾರ್ಮಿಂಗ್ ಮಾಡುತ್ತಿದ್ದ ಮಗ 3 ತಿಂಗಳಿನಿಂದ ನಮ್ಮೊಂದಿಗೆ ಇಲ್ಲದಿರುವುದು ಮತ್ತೊಂದೆಡೆ ತುಂಬಾ ಬೇಸರ ತಂದಿದೆ. ಆದ್ರೆ ಆತನ ಪ್ರಯತ್ನಗಳು ಈ ನಾಡಿಗೆ ಈ ಮೂಲಕ ತಿಳಿಯಿತು. ಇಷ್ಟು ದಿನ ಶಶಿಕುಮಾರ್ ಗೆ ಬೆಂಬಲ ನಿಂತ ಕನ್ನಡಿಗರಿಗೆ ವಂದನೆ ಎಂದು ಶಶಿಕುಮಾರ್ ತಂದೆ ಶ್ರೀರಾಮ್ ರೆಡ್ಡಿ ಅವರು ತಿಳಿಸಿದರು.

    ಶಶಿಕುಮಾರ್ ಭಾವ ಹರೀಶ್ ಹಾಗೂ ಸತೀಶ್ ಗೌಡ ಮಾತನಾಡಿ, 6 ಆವೃತ್ತಿಗಳಿಂದ ಬಿಗ್‍ಬಾಸ್ ನೀಡುತ್ತಿದ್ದ ಮನರಂಜನೆ ಈ ಬಾರಿ ಡಬಲ್ ಆಗಿದ್ದು, ಒಬ್ಬ ರೈತ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬಲ್ಲ ಎಂಬುದು ಶಶಿ ಅವರಿಂದ ನಿಜವಾಗಿದೆ. ವಿವಿಧ ಕ್ಷೇತ್ರದಲ್ಲಿ ಶಶಿ ಅವರು ಗಳಿಸಿರುವ ಜ್ಞಾನವೇ ಅವರನ್ನು ಪ್ರಬಲ ಸ್ಪರ್ಧಿಯಾಗಿ ನಿಲ್ಲಿಸಿದೆ. ಬೇರೆ ಸ್ಪರ್ಧಿಗಳ ಬಗ್ಗೆ ಹಿಂದೆ, ಮುಂದೆ ಒಂದು ರೀತಿ ಮಾತನಾಡದೇ ಇರುವುದು ಆತನ ಪ್ಲಸ್ ಪಾಯಿಂಟ್. ಇದುವರೆಗೂ ಸ್ಪರ್ಧೆಯಲ್ಲಿ ಆತ ಜೈಲಿಗೆ ಹೋಗದಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

    ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

    ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    8 ವರ್ಷದ ಮಗ ಶಮಂತ್ ಹಾಗೂ 2 ವರ್ಷದ ಶಾನವಿ ಮೃತ ದುರ್ದೈವಿ ಮಕ್ಕಳು. ಉಷಾ(30) ತನ್ನಿಬ್ಬರು ಮಕ್ಕಳನ್ನ ಕೊಂದು ಆತಹತ್ಯೆಗೆ ಶರಣಾದ ತಾಯಿ.

    ಉಷಾ ಪತಿ ಅಶ್ವತ್ಥನಾರಾಯಣ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಈ ಕುಟುಂಬ ನಗರದ ಮುನಿಸಿಪಾಲ್ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಆತ್ಮಹತ್ಯೆಗೂ ಮುನ್ನ ಉಷಾ ಡೆತ್ ನೋಟ್ ಬರೆದಿದ್ದು ತನ್ನ ಸಾವಿಗೆ ಯಾರೂ ಕಾರಣ ಅಲ್ಲ ಅಂತ ಬರೆದಿದ್ದಾಳೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.

    ಕಾರಣವೇನು..?
    ಜ್ಯೋತಿಷಿ ನಿನ್ನ ಮಕ್ಕಳ ಭವಿಷ್ಯ ಸರಿ ಇಲ್ಲ ಎಂದು ಹೇಳಿದ್ದಕ್ಕೆ ಕಳೆದ 15 ದಿನಗಳಿಂದ ತಾಯಿ ಉಷಾ ಖಿನ್ನತೆಗೆ ಓಳಗಾಗಿದ್ದಳಂತೆ. ಪತಿ ಈ ಬಗ್ಗೆ ಬುದ್ಧಿವಾದ ಹೇಳಿದ್ದರೂ ಇಂದು ಅಶ್ವತ್ಥ ನಾರಾಯಣ ಅವರು ಮನೆಯಲ್ಲಿ ಇಲ್ಲದ ವೇಳೆ ಮಕ್ಕಳಿಗೆ ಮೊದಲು ನಿದ್ರೆ ಮಾತ್ರೆ ಹಾಕಿ ತದನಂತರ ಕತ್ತುಹಿಸುಕಿ ಕೊಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

    ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಪತಿ ಅಶ್ವಥ್ ನಾರಾಯಣರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಳಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

    ಅವಳಿ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ತಾಯಿ

    ಮೈಸೂರು: ಅವಳಿ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮೈಸೂರಿನ ಬಂಡಿಪಾಳ್ಯದಲ್ಲಿ ನಡೆದಿದೆ.

    ಆಶಾ(30), ಅವಳಿ ಮಕ್ಕಳಾದ ಶೌರ್ಯಗೌಡ(8), ಸುಪ್ರೀತ್ ಗೌಡ(8) ಮೃತ ದುರ್ದೈವಿಗಳು. ಆಶಾ ತನ್ನ ಮಕ್ಕಳಿಗೆ ವಿಷ ಕೊಟ್ಟು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ತದನಂತರ ಆಕೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಶಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟ್ ಬರೆದಿದ್ದಳು.

    ಆಶಾ ತನ್ನ ಡೆತ್‍ನೋಟ್‍ನಲ್ಲಿ, “ನನ್ನ ಸಾವಿಗೆ ನಾನೇ ಕಾರಣ. ನನ್ನ ಕುಟುಂಬಕ್ಕೆ ನನ್ನಿಂದ ಅವಮಾನ ಆಗಿದೆ. ನಾನು ಇದರಿಂದ ದಿನ ಕೊರಗಿ ಸಾಯುವ ಬದಲು ಒಂದೇ ಸಾರಿ ಸಾಯಲು ನಿರ್ಧರಿಸಿದ್ದೇನೆ. ನಾನು ಸತ್ತ ಮೇಲೆ ನನ್ನ ಮಕ್ಕಳು ತಬ್ಬಲಿ ಆಗುತ್ತಾರೆ ಎಂದು ನಾನೇ ಅವರನ್ನು ಕೊಂದಿದ್ದೇನೆ. ಮೂವರನ್ನು ಒಟ್ಟಿಗೆ ಚಿತೆಯಲ್ಲಿ ಸುಟ್ಟು ಹಾಕಿ” ಎಂದು ಮನವಿ ಮಾಡಿಕೊಂಡಿದ್ದಾಳೆ.

    ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv