Tag: mother

  • ಸ್ವಂತ ಮಗನನ್ನೇ ಗೃಹಬಂಧನದಲ್ಲಿಟ್ಟ ತಾಯಿ!

    ಸ್ವಂತ ಮಗನನ್ನೇ ಗೃಹಬಂಧನದಲ್ಲಿಟ್ಟ ತಾಯಿ!

    ದಾವಣಗೆರೆ: ಹೆತ್ತ ತಾಯಿಯೇ ತನ್ನ ಮಗನನ್ನು ಕೂಡಿ ಹಾಕಿ, ಗೃಹ ಬಂಧನದಲ್ಲಿಟ್ಟು ಅಮಾನವೀಯವಾಗಿ ನಡೆದುಕೊಂಡ ಘಟನೆ ದಾವಣಗೆರೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ವಿನಯ್ ಎಂಬಾತನೇ ಗೃಹಬಂಧನದಲ್ಲಿದ್ದ ಮಗ. ಈತ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ತಾಯಿ ವಿನಯ್‍ನನ್ನು ಮನೆಯಲ್ಲಿಯೇ ಕೂಡಿ ಹಾಕಿದ್ದರು. ನಗರದ ದೇವರಾಜ್ ಅರಸ್ ಬಡಾವಣೆಯಲ್ಲಿರುವ ಮನೆಯಲ್ಲಿ ತಾಯಿ ವಿನಯ್‍ನನ್ನು ಕೂಡಿ ಹಾಕಿದ್ದರು. ಕಳೆದ ಹಲವು ತಿಂಗಳಿಂದ ಮಗನನ್ನ ಅಮಾನವೀಯವಾಗಿ ತಾಯಿ ನಡೆಸಿಕೊಂಡಿದ್ದಾರೆ. ಇದೀಗ ಸ್ಥಳೀಯರು ಯುವಕನನ್ನು ಬಂಧನದಿಂದ ಮುಕ್ತಿಗೊಳಿಸಿದ್ದಾರೆ.

    ಸದ್ಯ ವಿನಯ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲು ಸಹಾಯ ಮಾಡಿದ್ದಾರೆ. ಅಲ್ಲದೆ ವಿನಯ್ ತಾಯಿ ಕೂಡ ಅರೆ ಹುಚ್ಚಿಯಾಗಿದ್ದು, ಸಾರ್ವಜನಿಕರು ಏನಾದರು ಪ್ರಶ್ನಿಸಿದರೆ ಅವರ ಮೇಲೆ ಹಲ್ಲೆ ಮಾಡುತ್ತಿದ್ದರು. ಹಾಗೆಯೇ ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದರು. ಆದರಿಂದ ಸಾರ್ವಜನಿಕರು ಆ ತಾಯಿಯಿಂದ ಮಗನನ್ನು ಬಿಡಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 1 ತಿಂಗಳ ಮಟ್ಟಿಗೆ ಕೆಲ್ಸದಿಂದ ಮನೆಗೆ ಬಂದಾಗ ತಾಯಿಯ ರಹಸ್ಯ ಬಯಲು

    1 ತಿಂಗಳ ಮಟ್ಟಿಗೆ ಕೆಲ್ಸದಿಂದ ಮನೆಗೆ ಬಂದಾಗ ತಾಯಿಯ ರಹಸ್ಯ ಬಯಲು

    – ಮಗನ ಸ್ನೇಹಿತನ ಜೊತೆ ತಾಯಿಯ ಅಕ್ರಮ ಸಂಬಂಧ
    – ಸ್ನೇಹಿತನ ಜೊತೆಗೂಡಿ ಮಗನನ್ನು ಕೊಂದ ತಾಯಿ
    – ವ್ಯಕ್ತಿಯನ್ನು ವಶಕ್ಕೆ ಪಡೆದಾಗ ಪ್ರಕರಣ ಬೆಳಕಿಗೆ

    ಚಂಡೀಗಢ: ನಿತ್ಯದ ತಪಾಸಣೆ ವೇಳೆ ಪೊಲೀಸರು ಅನುಮಾನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸ್ಫೋಟಕ ಕೊಲೆ ಪ್ರಕರಣವೊಂದು ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ವಿಚಾರಣೆ ವೇಳೆ ತಾಯಿಯ ಸೂಚನೆ ಮೇರೆಗೆ 23 ವರ್ಷದ ಮಗ ಸೇರಿದಂತೆ ಅನೇಕ ಅಪರಾಧಗಳನ್ನು ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

    ಹರಿಯಾಣದ ಜಝರ್ ಜಿಲ್ಲೆಯ ಚಮನ್‍ಪುರ ಗ್ರಾಮದ ನಿವಾಸಿ 44 ವರ್ಷದ ಮೀನಾದೇವಿ ಮಗನಾದ ಪ್ರಮೋದ್ ನನ್ನು ಕೊಲೆ ಮಾಡಿಸಿದ ತಾಯಿ. ಮೃತ ಪ್ರಮೋದ್ ಗುರುಗ್ರಾಮದಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಒಬ್ಬಳೆ ವಾಸಿಸುತ್ತಿದ್ದಳು. ಆದರೆ ತನ್ನ ಪ್ರಿಯಕರನ ಜೊತೆ ಪ್ರದೀಪ್ ಅನೈತಿಕ ಸಂಬಂಧವನ್ನು ಮುಂದುವರಿಸಲು ಸ್ವಂತ ಮಗನನ್ನೇ ಕೊಲೆ ಮಾಡಿದ್ದಾಳೆ ಎಂದು ಎಂದು ಪೊಲೀಸರು ಹೇಳಿದ್ದಾರೆ.

    ಏನಿದು ಪ್ರಕರಣ?
    ವಿಧವೆ ಮೀನಾದೇವಿಗೆ ಮಗನ ಸ್ನೇಹಿತ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ದಿನಕಳೆದಂತೆ ಇಬ್ಬರು ನಡುವೆ ಅಕ್ರಮ ಸಂಬಂಧ ಬೆಳೆದಿದೆ. ಅನೇಕ ದಿನಗಳ ನಂತರ ಮಗ ಪ್ರಮೋದ್ ಒಂದು ತಿಂಗಳ ಮಟ್ಟಿಗೆ ತಾಯಿ ವಾಸಿಸುತ್ತಿದ್ದ ಮನೆಗೆ ಬಂದಿದ್ದಾನೆ. ಈ ವೇಳೆ ತನ್ನ ತಾಯಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನಗೊಂಡಿದ್ದಾನೆ. ಮಗ ಸ್ನೇಹಿತನ ಜೊತೆಗೆ ತನಗೆ ಇರುವ ಅಕ್ರಮ ಸಂಬಂಧದ ವಿಚಾರ ತಿಳಿದಿದ್ದಾನೆ ಎನ್ನುವುದು ಮೀನಾದೇವಿಗೆ ಗೊತ್ತಾಗಿದೆ. ಇದಾದ ಬಳಿಕ ಮೀನಾದೇವಿ ಹಾಗೂ ಪ್ರಿಯಕರ ಪ್ರದೀಪ್ ಇಬ್ಬರು ಸೇರಿ ಪ್ರಮೋದ್ ಕೊಲೆಗೆ ಪ್ಲಾನ್ ಮಾಡಿದ್ದರು.

    ಅದರಂತೆಯೇ ಫೆಬ್ರವರಿ 19ರ ರಾತ್ರಿ ಮನೆ ಮುಂಭಾಗವೇ ಪ್ರದೀಪ್ ಸ್ನೇಹಿತನೊಬ್ಬ ಪ್ರಮೋದ್‍ಗೆ ಗುಂಡು ಹೊಡೆದು ಪರಾರಿಯಾಗಿದ್ದಾನೆ. ಗುಂಡೇಟು ತಿಂದ ಪ್ರಮೋದ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೇ ತಾನೆ ಕೊಲೆ ಮಾಡಿಸಿ ಮರುದಿನ ಈ ಕುರಿತು ತನಿಖೆ ಮಾಡುವಂತೆ ತಾಯಿ ಪೊಲೀಸರಿಗೆ ದೂರು ನೀಡುವ ನಾಟಕವಾಡಿದ್ದಾಳೆ. ಗುರುಗ್ರಾಮ ಪೊಲೀಸರು ಈ ಪ್ರಕರಣದ ತನಿಖೆ ಶುರುಮಾಡಿದ್ದಾರೆ.

    ಬುಧವಾರ ರಾತ್ರಿ ಪೊಲೀಸರು ದಿನನಿತ್ಯದ ತಪಾಸಣೆ ಮಾಡುವಾಗ ಅನುಮಾನದ ಮೇರೆಗೆ ಪ್ರಮೋದ್‍ಗೆ ಗುಂಡು ಹೊಡೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಪ್ರಮೋದ್ ಕೊಲೆ ಜೊತೆಗೆ ಇತರೆ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. ಆಗ ಪ್ರಮೋದ್ ಕೊಲೆಯ ರಹಸ್ಯ ಬಯಲಾಗಿದೆ. ಸದ್ಯಕ್ಕೆ ಪೊಲೀಸರು ಮೀನಾ ದೇವಿ, ಪ್ರದೀಪ್ ಮತ್ತು ಆತನ ಇಬ್ಬರು ಸ್ನೇಹಿತರಾದ ಸೌರಭ್ ಮತ್ತು ಮೊನುರನ್ನು ಪೊಲೀಸರು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಿಳಾ ದಿನದ ವಿಶೇಷ: ಅಮ್ಮನಿಗೆ ವಿಶೇಷ ಗಿಫ್ಟ್ ಕೊಟ್ಟ ಸಚಿನ್

    ಮಹಿಳಾ ದಿನದ ವಿಶೇಷ: ಅಮ್ಮನಿಗೆ ವಿಶೇಷ ಗಿಫ್ಟ್ ಕೊಟ್ಟ ಸಚಿನ್

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರರ ಸಚಿನ್ ತೆಂಡೂಲ್ಕರ್ ಮಹಿಳಾ ದಿನಾಚರಣೆಯ ಅಂಗವಾಗಿ ತಾವೇ ಸ್ವತಃ ಅಡುಗೆ ಮನೆಗೆ ತೆರಳಿ ಅಮ್ಮನಿಗಾಗಿ ವಿಶೇಷ ಖಾದ್ಯ ಸಿದ್ಧ ಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸಚಿನ್, ಮಹಿಳಾ ದಿನಾಚರಣೆ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಟ್ವೀಟ್ ನೊಂದಿಗೆ ವಿಶೇಷ ವಿಡಿಯೋವನ್ನು ನೀಡಿದ್ದಾರೆ. ನಮ್ಮ ಜೀವನದಲ್ಲಿ ಅತಿ ಹೆಚ್ಚು ಮುಖ್ಯವಾಗಿರುವ ಮಹಿಳೆ ಇಂದು ವಿಶೇಷ ನೀಡೋಣ ಎಂದು ತಿಳಿಸಿರುವ ಸಚಿನ್ ಅಮ್ಮನಿಗೆ ಬದನೆಕಾಯಿ ಖಾದ್ಯ ಮಾಡಿಕೊಟ್ಟಿದ್ದಾರೆ.

    ಈಗಾಗಲೇ ಸಚಿನ್ ತಮ್ಮ ತಾಯಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುವುದು ಎಲ್ಲ ಅಭಿಮಾನಿಗಳಿಗೂ ತಿಳಿದಿದೆ. ಇದೇ ವೇಳೆ ತಮ್ಮ ಈ ದಿನದ ವಿಶೇಷ ಗಿಫ್ಟ್‍ನಂತೆ ನೀವು ಕೂಡ ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವಹಿಸಿರುವವರಿಗೆ ಏನಾದರು ಮಾಡಿ ಎಂದು ಮನವಿ ಮಾಡಿದ್ದಾರೆ.

    ನಮಗಾಗಿ ಅಮ್ಮ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆದಿರುತ್ತಾರೆ. ಅದ್ದರಿಂದ ಇಂದು ನಾನು ಅವರಿಗಾಗಿ ಅಡುಗೆ ಮಾಡಿದ್ದೇನೆ. ಸದ್ಯ ಪತ್ನಿ ಬೇರೆಡೆ ತೆರಳಿರುವುದಿಂದ ನಾನು ಅಮ್ಮನಿಗೆ ಮಾತ್ರ ಇದನ್ನು ನೀಡುತ್ತಿದ್ದೇನೆ. ಅಮ್ಮ ಜೀವನದಲ್ಲಿ ಎಂದು ನಮಗೇ ಉನ್ನತ ಸ್ಥಾನದಲ್ಲೇ ಇರುತ್ತಾರೆ. ಅವರಿಗೆ ಬೇರೆ ಯಾರನ್ನು ಹೋಲಿಕೆ ಮಾಡಲು ಆಗಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತಿಯ ಕಿರುಕುಳಕ್ಕೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆಗೆ ಯತ್ನ

    ಪತಿಯ ಕಿರುಕುಳಕ್ಕೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆಗೆ ಯತ್ನ

    ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತು ತಾಯಿ- ಮಗಳು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದಲ್ಲಿ ನಡೆದಿದೆ.

    ಶಶಿಕಲಾ ಹಾಗೂ ಪಲ್ಲವಿ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ- ಮಗಳು. ಪತಿ ಮಹೇಶ್ ಕುಮಾರ್ ಮತ್ತು ಪತ್ನಿ ಶಶಿಕಲಾ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ದೂರವಾಗಿದ್ದರು.

    ಬುಧವಾರ ಮಗಳು ಪಲ್ಲವಿ ಜೊತೆಯಿದ್ದ ವೇಳೆ ಮನೆಗೆ ಬಂದ ರವಿಕುಮಾರ್ ಪತ್ನಿ ಶಶಿಕಲಾ ಮತ್ತು ಮಗಳು ಪಲ್ಲವಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದನು. ಇದರಿಂದ ಬೇಸತ್ತ ತಾಯಿ, ಮಗಳು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಸದ್ಯ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಳೆ ವಿಚಾರಣೆಗೆ ಹಾಜರಾಗಿ- ಡಿಕೆಶಿ ತಾಯಿಗೆ ಐಟಿ ಸೂಚನೆ

    ನಾಳೆ ವಿಚಾರಣೆಗೆ ಹಾಜರಾಗಿ- ಡಿಕೆಶಿ ತಾಯಿಗೆ ಐಟಿ ಸೂಚನೆ

    ಬೆಂಗಳೂರು: ಬೇನಾಮಿ ಆಸ್ತಿ ಪ್ರಕರಣ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿಗೆ ಐಟಿ ಬೇನಾಮಿ ಸೆಲ್ ನಿಂದ ಮತ್ತೆ ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ಕಳೆದ ನಾಲ್ಕು ದಿನದ ಹಿಂದೆಯೇ ಡಿಕೆಶಿ ಅವರ ತಾಯಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದ್ರೆ ಇಂದು ಮತ್ತೆ ಡಿಕೆಶಿ ಹಾಗೂ ಅವರ ತಾಯಿ ಗೌರಮ್ಮ ಇಬ್ಬರೂ ನಾಳೆ ವಿಚಾರಣೆಗೆ ಹಾಜರಾಬೇಕು ಎಂದು ಸೂಚಿಸಿ ನೋಟಿಸ್ ಜಾರಿಮಾಡಲಾಗಿದೆ.

    ಪ್ರಾಪರ್ಟಿ ಅಟ್ಯಾಚ್‍ಮೆಂಟ್ ನೋಟಿಸ್ ನೀಡಿ ಒಂದು ತಿಂಗಳಾಗಿದ್ದರೂ ಪದೇ ಪದೇ ಡಿಕೆಶಿ ಅವರು ಉತ್ತರ ನೀಡಲು ಕಾಲಾವಕಾಶ ಕೇಳಿತ್ತಿದ್ದಾರೆ. ಇದರಿಂದ ಐಟಿ ಬೇನಾಮಿ ಸೆಲ್ ಅಧಿಕಾರಿಗಳು ಗರಂ ಆಗಿದ್ದಾರೆ.

    ಬೇನಾಮಿ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ 15 ದಿನಗಳ ಒಳಗಡೆ ಉತ್ತರ ನೀಡುವಂತೆ ನಿನ್ನೆ ಡಿಕೆಶಿಗೆ ಸೂಚಿಸಿತ್ತು. ಒಂದು ವೇಳೆ ಈ ನೋಟಿಸಿಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಡಿಕೆ ಶಿವಕುಮಾರ್ ಆಸ್ತಿ ಜಪ್ತಿಯಾಗುವ ಸಾಧ್ಯತೆಯಿದೆ.

    ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಐಟಿ:
    2008 ರಲ್ಲಿ 75 ಕೋಟಿ ರೂ. 2013 ರಲ್ಲಿ 251 ಕೋಟಿ ರೂ. ಆದಾಯವನ್ನು ಡಿಕೆ ಶಿವಕುಮಾರ್ ಘೋಷಿಸಿದ್ದರೆ, 2018ರ ವಿಧಾನಸಭಾ ಚುನಾವಣೆ ವೇಳೆ 840 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಚಿವರ ಆದಾಯ ಪ್ರತಿ 5 ವರ್ಷಗಳಿಗೊಮ್ಮೆ ಶೇ.230 ರಷ್ಟು ಹೆಚ್ಚಳ ಕಂಡಿದೆ. ಶಿವಕುಮಾರ್ ಅವರ ಸಂಪಾದನೆಗೂ ಅವರಲ್ಲಿರುವ ಆದಾಯಕ್ಕೆ ತಾಳೆ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ಐಟಿ ಪತ್ರ ಬರೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿ ಚಿತೆಗೆ ಬೆಂಕಿ ಇಡುವಾಗ್ಲೇ ಮಗನಿಗೆ ಹೃದಯಾಘಾತ..!

    ತಾಯಿ ಚಿತೆಗೆ ಬೆಂಕಿ ಇಡುವಾಗ್ಲೇ ಮಗನಿಗೆ ಹೃದಯಾಘಾತ..!

    ಕಾರವಾರ: ಮೃತಪಟ್ಟ ತಾಯಿಯ ಚಿತೆಗೆ ಬೆಂಕಿ ಇಟ್ಟು ಮಗನೂ ಪ್ರಾಣಬಿಟ್ಟ ಮನಕಲಕುವ ಘಟನೆ ಕಾರವಾರ ತಾಲೂಕಿನ ಸಿದ್ಧರದಲ್ಲಿ ನಡೆದಿದೆ.

    ಮಂಜುನಾಥ ಆತ್ಮಾರಾಮ ಕೊಳಂಬಕರ್(49) ಮೃತಪಟ್ಟ ವ್ಯಕ್ತಿ. ಮಂಜುನಾಥ್ ಅವರ ತಾಯಿ ಸಾವಿತ್ರಿ ಕೊಳಂಬಕರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಮೃತಪಟ್ಟಿದ್ದಾರೆ. ಹೀಗಾಗಿ ಅಂತ್ಯಸಂಸ್ಕಾರಕ್ಕೆಂದು ಅವರ ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು.

    ತಾಯಿಯ ಏಕೈಕ ಮಗನಾಗಿದ್ದ ಮಂಜುನಾಥ್ ಎಲ್ಲ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಚಿತೆಗೆ ಬೆಂಕಿ ಇಡುತ್ತಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಸಿದ್ಧರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಜಿಲ್ಲಾಸ್ಪತ್ರೆಗೆ ಕರೆ ತರುವಷ್ಟರಲ್ಲಿ ಮಂಜುನಾಥ್ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

    ಮೃತ ಮಂಜುನಾಥ್‍ನಿಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ತಾಯಿಯ ಸಾವು ಮಗನನ್ನೂ ಕರೆಸಿಕೊಂಡಿದ್ದು ಇಡೀ ಕುಟುಂಬ ತಾಯಿ- ಮಗನ ಸಾವಿಗೆ ಕಂಬನಿ ಮಿಡಿದಿದೆ.

    ಈ ಘಟನೆ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ಮಕ್ಕಳಿಗೆ ಜನ್ಮ ನೀಡಿದ 25 ವರ್ಷದ ಮಹಾತಾಯಿ

    7 ಮಕ್ಕಳಿಗೆ ಜನ್ಮ ನೀಡಿದ 25 ವರ್ಷದ ಮಹಾತಾಯಿ

    ಬಾಗ್ದಾದ್: ಇರಾಕ್ ಮಹಿಳೆಯೊಬ್ಬರು ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆರು ಹೆಣ್ಣು ಮತ್ತು ಓರ್ವ ಪುತ್ರನಿಗೆ ಮಹಿಳೆ ಜನ್ಮ ನೀಡಿದ್ದು, ಶಿಶುಗಳೆಲ್ಲಾ ಆರೋಗ್ಯವಾಗಿವೆ ಎಂದು ವರದಿಯಾಗಿದೆ. ಇರಾಕ್ ನಲ್ಲಿ ಏಳು ಮಕ್ಕಳಿಗೆ ಜನ್ಮ ನೀಡಿದ ಮೊದಲ ಮಹಾತಾಯಿ ಎಂದು ಕರೆಸಿಕೊಂಡಿದ್ದಾರೆ.

    ಪಶ್ಮಿಮ ಇರಾಕ್ ನ ದಿಯಾಲಿ ಪ್ರಾಂತ್ಯದ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ ವಕ್ತಾರ ಫಿರಾಸ್ ಅಲಿ ಲಿಝ್ವಿ, 25 ವರ್ಷದ ಮಹಿಳೆಗೆ ಸಹಜ ಹೆರಿಗೆಯಾಗಿದ್ದು, 7 ಮಕ್ಕಳಿಗೆ ಏಕಕಾಲದಲ್ಲಿ ತಾಯಿಯಾಗಿದ್ದಾರೆ. ತಾಯಿಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.

    ಏಕಕಾಲದಲ್ಲಿ ಏಳು ಮಕ್ಕಳ ತಂದೆಯಾಗಿದ್ದಕ್ಕೆ ಖುಷಿಯಾಗಿದೆ. ನಾನು ಮತ್ತು ಪತ್ನಿ ಇದು ನಮ್ಮ ಕೊನೆಯ ಮಗು ಅಂತಾ ನಿರ್ಧರಿಸಿದ್ದೇವು. ಈ ಏಳು ಮಕ್ಕಳು ಸೇರಿ ನಮಗೆ 10 ಮಕ್ಕಳಾದವು ಎಂದು ತಂದೆ ಯೂಸುಫ್ ಪಾದಲ್ ಸಂತಸ ವ್ಯಕ್ತಪಡಿಸುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಯಾವುದಾದ್ರೂ ತಾಯಿ ಹೊಟ್ಟೇಲಿ ಮತ್ತೆ ಹುಟ್ಟಿ ಬಾ – ಗುರು ನನ್ನ ಮಗನಲ್ಲ, ರಾಜ್ಯದ ಮಗ: ತಾಯಿ ರೋಧನೆ

    ಯಾವುದಾದ್ರೂ ತಾಯಿ ಹೊಟ್ಟೇಲಿ ಮತ್ತೆ ಹುಟ್ಟಿ ಬಾ – ಗುರು ನನ್ನ ಮಗನಲ್ಲ, ರಾಜ್ಯದ ಮಗ: ತಾಯಿ ರೋಧನೆ

    – ಸೇನಾಧಿಕಾರಿಗಳಲ್ಲಿ ಚಿಕ್ಕತಾಯಮ್ಮ ಮನವಿ

    ಮಂಡ್ಯ: ಅಪಾರ ಜನಸಾಗರದ ಕಣ್ಣೀರ ವಿದಾಯದೊಂದಿಗೆ ಹುತಾತ್ಮ ಯೋಧ ಗುರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಗುರು ಇಲ್ಲದ ಮನೆಯಲ್ಲೀಗ ಸ್ಮಶಾನ ಮೌನ ಆವರಿಸಿದ್ದು, ಗುರು ಅವರ ಚಿಕ್ಕಂದಿನ ಫೋಟೋ ಹಿಡಿದು ತಾಯಿ ಗೋಳಾಡುತ್ತಿದ್ದಾರೆ.

    ಯೋಧ ಗುರು ತಾಯಿ ಚಿಕ್ಕತಾಯಮ್ಮ, ಗುರು ಅವರು ಬಾಲ್ಯದಲ್ಲಿ ಪೊಲೀಸ್ ಡ್ರೆಸ್‍ನಲ್ಲಿ ತೆಗೆಸಿಕೊಂಡಿದ್ದ ಫೋಟೋ ನೋಡುತ್ತಾ ಕಣ್ಣಿರು ಹಾಕುತ್ತಿದ್ದು, ಈ ಫೋಟೋದಲ್ಲಿ ಏನ್ ಚಂದಾ ಕಾಣ್ತಾ ಇದ್ದೀಯಾ. ಯಾವುದಾದರೂ ತಾಯಿಯ ಹೊಟ್ಟೆಯಲ್ಲಿ ಮತ್ತೆ ಹುಟ್ಟಿ ಬಾ ಮಗನೇ ಎಂದು ತಾಯಿ ಗೋಳಾಡಿದ್ದಾರೆ. ಈ ದೃಶ್ಯಗಳು ನೋಡುಗರ ಕರುಳು ಕಿತ್ತುಬರುವಂತಿದೆ.

    ಗುರು ರಾಜ್ಯದ ಮಗ:
    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರು ತಾಯಿ, ಜನರು ಕೊಟ್ಟಿರುವ ಪ್ರೀತಿ ಏಳು ಜನ್ಮವಾದರೂ ಮುಗಿಯುವುದಿಲ್ಲ. ಅಷ್ಟೊಂದು ಪ್ರೀತಿಯನ್ನು ನನ್ನ ಮಗ ಎಲ್ಲರಿಗೂ ಕೊಟ್ಟು ಹೋಗಿದ್ದಾನೆ. ಗುರು ನನ್ನ ಮಗನಲ್ಲ, ರಾಜ್ಯದ ಮಗ ಅವನು. ಚಿತೆಯ ಮೇಲೆ ಮಗನನ್ನು ಮಲಗಿಸಿದಾಗ ಮಾತ್ರ ಮುಖ ತೋರಿಸಿದ್ದರು. ಮಗನ ಮುಖವನ್ನು ಒಮ್ಮೆ ಕೈಯಲ್ಲಿ ಸವರಿ ನೋಡಿದೆ. ನನ್ನ ಮಗನ ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸೇನಾಧಿಕಾರಿಗಳಲ್ಲಿ ಮನವಿ:
    ಇದೇ ವೇಳೆ ಗುರು ಮನೆಯ ಬಳಿ ಸೇನಾಧಿಕಾರಿಗಳು ಬಂದು ನಾವಿನ್ನು ಹೊರಡುತ್ತೇವೆ ಎಂದು ಹೇಳಿದಾಗ ಚಿಕ್ಕತಾಯಮ್ಮ, ನನ್ನ ಮಗ ನಿಮ್ಮ ಜೊತೆ ಇದ್ದಾನಾ..? ಏನು ಮಾಡುತ್ತಿದ್ದಾನೆ ಎಂದು ಕೇಳುತ್ತಾ ಮತ್ತೆ ಕಣ್ಣೀರು ಹಾಕಿದ್ದಾರೆ. ನೀವು ಚೆನ್ನಾಗಿರಿ, ನನ್ನ ಮಗನಿಗೆ ಹೀಗೆ ಮಾಡಿದವರನ್ನು ಯಾವತ್ತೂ ಬಿಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    https://www.youtube.com/watch?v=KifeAcf26G4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತುಂಟಾಟ ಸಹಿಸಲಾಗದೆ ಬಾಲಕನನ್ನು ಕಟ್ಟಿ ಹಾಕಿದ ತಾಯಿ..!

    ತುಂಟಾಟ ಸಹಿಸಲಾಗದೆ ಬಾಲಕನನ್ನು ಕಟ್ಟಿ ಹಾಕಿದ ತಾಯಿ..!

    ಬೆಂಗಳೂರು: ನಡೆಯೋಕೆ ಆರಂಭ ಮಾಡುವ ಮಕ್ಕಳಲ್ಲಿ ತುಂಟಾಟ ಕಾಮನ್. ಬೆಳೆಯುತ್ತಾ ಬೆಳೆಯುತ್ತಾ ಅವರು ಮಾಡುವ ಚೇಷ್ಟೆಗಳು ಅಷ್ಟಿಷ್ಟಲ್ಲ. ಹೀಗೆ ತುಂಟಾಟ ಮಾಡುತ್ತಿದ್ದ ಬಾಲಕನನ್ನು ತಾಯಿ ಕಟ್ಟಿ ಹಾಕಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಏಳು ವರ್ಷದ ಬಾಲಕ ಯಾವಾಗಲೂ ತುಂಟಾಟ ಹಾಗೂ ಚೇಷ್ಟೆ ಮಾಡುತ್ತಿತ್ತು. ತನ್ನ ಮಗನ ತುಂಟಾಟವನ್ನು ಸಹಿಸಲಾಗದೆ ತಾಯಿ ಆತನ ಕೈಗಳನ್ನು ಕಟ್ಟಿ ಹಾಕಿದ್ದಾಳೆ. ಇದನ್ನು ಗಮನಿಸಿದ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಿದ್ದು, ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.

    ಈ ವಿಡಿಯೋ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಸಿಕ್ಕಿದೆ. ಬೆಂಗಳೂರು ಮೂಲದಿಂದ ಈ ವಿಡಿಯೋ ಸಿಕ್ಕಿದರಿಂದ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ಎಚ್‍ಎಎಲ್ ಬಳಿ ಬಾಲಕನನ್ನು ಕಟ್ಟಿ ಹಾಕಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿಯಿತು.

    ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕನನ್ನು ರಕ್ಷಿಸಿದ್ದಾರೆ. ಬಳಿಕ ತಾಯಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಗೆ ಬುದ್ಧಿ ಹೇಳಿ ವಾಪಸ್ ಕಳುಹಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣದಾಸೆಗೆ ಅಪ್ರಾಪ್ತ ಮಗಳಿಗೆ ಧಾರೆಯೆರೆಯಲು ಮುಂದಾದ ಪಾಪಿ ತಾಯಿ..!

    ಹಣದಾಸೆಗೆ ಅಪ್ರಾಪ್ತ ಮಗಳಿಗೆ ಧಾರೆಯೆರೆಯಲು ಮುಂದಾದ ಪಾಪಿ ತಾಯಿ..!

    ಬೆಂಗಳೂರು: ಹಣದಾಸೆಗಾಗಿ ನೀಚ ತಾಯಿಯೊಬ್ಬಳು ತನ್ನ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗಳ ಮದುವೆಗೆ ಮುಂದಾಗಿದ್ದ ಘಟನೆ ನಗರದ ನ್ಯೂ ಬಾಗಲೂರು ಲೇಔಟ್‍ನಲ್ಲಿರುವ ದುರ್ಗದೇವಿ ದೇವಸ್ಥಾನ ಮುಂದೆ ನಡೆದಿದೆ.

    ತಾಯಿ ನಾಗಲಕ್ಷ್ಮಿ ತನ್ನ ಅಪ್ರಾಪ್ತ ಮಗಳಿಗೆ ಎರಡನೇ ಸಂಬಂಧದ ಮದುವೆ ಮಾಡಲು ಹೊರಟ್ಟಿದ್ದಳು. ಭಾನುವಾರ ತಾಯಿ ನಾಗಲಕ್ಷ್ಮಿ ಈಗಾಗಲೇ ಮದುವೆ ಆಗಿದ್ದವನ ಜೊತೆ ತನ್ನ ಮಗಳ ಮದುವೆ ಮಾಡಲು ಮುಂದಾಗಿದ್ದಳು. ಮಗಳು ಒಂಬತ್ತನೇ ತರಗತಿ ಓದುತ್ತಿದ್ದು, ಇದಕ್ಕೆ ನಾವು, ಬಾಲಕಿಯ ಅಣ್ಣ ಮತ್ತು ಸಂಬಂಧಿಕರು ಸೇರಿ ವಿರೋಧ ವ್ಯಕ್ತಪಡಿಸಿದ್ದೇವೆ. ಕೊನೆಗೆ ನಾವು ಕೆಲ ಮಹಿಳಾ ಸಂಘಟನೆಯ ಸಹಾಯದಿಂದ ಮದುವೆ ನಿಲ್ಲಿಸಿದ್ದೇವೆ ಎಂದು ಬಾಲಕಿಯ ಅತ್ತೆ ಹೇಳಿದ್ದಾರೆ.

    ಮದುವೆ ಗಂಡಿನ ಬಳಿ ಹಣ ಪಡೆದುಕೊಂಡು ಅಪ್ರಾಪ್ತಳಿಗೆ ತಾಯಿ ನಾಗಲಕ್ಷ್ಮಿ ಮದುವೆ ಮಾಡಲು ಹೊರಟಿದ್ದಳೆಂದು ಆರೋಪಿಸಲಾಗಿದೆ. ಮದುವೆಗೆ ವಿರೋಧವಾಗುತ್ತಿದ್ದಂತೆ ತಾಯಿ ತನ್ನ ಮಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಮಹಿಳಾ ಸಂಘಟನೆಯ ಸದಸ್ಯೆ ಜಯಮ್ಮ ತಿಳಿಸಿದ್ದಾರೆ.

    ಈ ಘಟನೆ ಸಂಬಂಧ ಬಾಣಸವಾಡಿಯಲ್ಲಿ ಸಂಬಂಧಿಕರು ಕೇಸ್ ದಾಖಲಿಸಲು ಮುಂದಾಗಿದ್ದು, ಹಣದಾಸೆಗೆ ಮಗಳ ಬಾಳನ್ನು ಬಲಿ ಕೊಡಲು ಹೊರಟ ತಾಯಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv