Tag: mother

  • 25 ಸಾವಿರ ರೂ.ಗೆ ನವಜಾತ ಶಿಶುವನ್ನೇ ಮಾರಿದ ತಾಯಿ- ಈಗ ಮಗುವಿಗಾಗಿ ಕಣ್ಣೀರು

    25 ಸಾವಿರ ರೂ.ಗೆ ನವಜಾತ ಶಿಶುವನ್ನೇ ಮಾರಿದ ತಾಯಿ- ಈಗ ಮಗುವಿಗಾಗಿ ಕಣ್ಣೀರು

    ಧಾರವಾಡ: ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು 25 ರೂ.ಗೆ ಮಾರಿ, ಈಗ ಕಂದಮ್ಮನಿಗಾಗಿ ಕಣ್ಣೀರು ಹಾಕುತ್ತಿರುವ ಮನಕಲುಕುವ ಘಟನೆ ನಗರದಲ್ಲಿ ನಡೆದಿದೆ.

    ರೇಖಾ ನರೇಂದ್ರ ಚಾವಲಾ ಮಗು ಮಾರಾಟ ಮಾಡಿ ಪರದಾಡಿದ ತಾಯಿ. ನಗರದ ಮಾಳಮಡ್ಡಿಯಲ್ಲಿ ಕಳೆದ ತಿಂಗಳು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರೇಖಾ ಚಾವಲಾ ಕಳೆದ ಜೂನ್ 20ರಂದು ತೌಹಿದ್ ಶೇಖ್, ಆಸ್ಮಾ ಮತ್ತು ಉಜ್ಮಾ ಎಂಬವರಿಗೆ 25 ಸಾವಿರ ರೂ. ತನ್ನ ಗಂಡು ಮಗುವನ್ನು ಮಾರಾಟ ಮಾಡಿದ್ದಳು. ನಂತರ ಮಗು ನೆನಪಾಗಿ ವಾಪಸ್ ಕೇಳಿದಾಗ, ಮಗು ಖರೀದಿಸಿದ್ದ ಮೂವರು ಮಗುವಿಗೆ ಖರ್ಚು ಮಾಡಿದ್ದ 8 ಸಾವಿರ ರೂ. ಹಾಗೂ ತಾವು ನೀಡಿದ್ದ 25 ಸಾವಿರ ರೂ. ಹಣ ಕೇಳಿದ್ದಾರೆ. ತನ್ನ ಬಳಿ ಹಣವಿಲ್ಲದ ಕಾರಣ ಮಗುವನ್ನು ವಾಪಸ್ ಪಡೆಯಲು ರೇಖಾಗೆ ಸಾಧ್ಯವಾಗಿರಲಿಲ್ಲ.

    ಈ ಸಂಬಂಧ ರೇಖಾ ಮಕ್ಕಳ ರಕ್ಷಣಾ ಘಟಕಕ್ಕೆ ಹೋಗಿ ದೂರು ನೀಡಿದ್ದಾರೆ. ನಂತರ ಧಾರವಾಡ ವಿದ್ಯಾಗಿರಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ವಾಪಸ್ ಪಡೆದು, ಮಗು ಖರೀದಿ ಮಾಡಿದ್ದ ಮೂವರನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ.

    ಮೂವರು ಆರೋಪಿಗಳು ಪೊಲೀಸರ ವಶದಲ್ಲಿದ್ದು, ಮಗು ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2 ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    2 ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಂದ ತಾಯಿ

    ಲಕ್ನೋ: ಪಾಪಿ ತಾಯಿಯೊಬ್ಬಳು ಎರಡು ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

    ಎರಡು ತಿಂಗಳ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಅಷ್ಟೇ ಅಲ್ಲದೇ ಯಾವುದೇ ಚಿಕಿತ್ಸೆಗೂ ಮಗು ಸ್ಪಂದಿಸುತ್ತಿರಲಿಲ್ಲ. ಇದರಿಂದ ಆರೋಪಿ ತಾಯಿ ಖಿನ್ನತೆಗೆ ಒಳಗಾಗಿದ್ದಳು. ಮಗು ಸದಾ ಅನಾರೋಗ್ಯದಿಂದ ಇರುತ್ತದೆ ಎಂದು ನೊಂದು ಪಾಪಿ ತಾಯಿ ಎರಡು ತಿಂಗಳ ಕಂದಮ್ಮನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ.

    ಮಗು ಮೃತಪಟ್ಟ ಬಳಿಕ ಆರೋಪಿ ತಾಯಿ ಸಂಪೂರ್ಣ ಮನೆಗೆ ಬೆಂಕಿ ಹಚ್ಚಿದ್ದಾಳೆ. ಬಳಿಕ ಆಕೆಯ ಮನೆಯಿಂದ ಹೊರಗೆ ಬಂದು ನೆರೆಹೊರೆಯವರಿಗೆ ತಾನು ಮಾಡಿದ ಕೃತ್ಯದ ಬಗ್ಗೆ ತಿಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ ಎಂದು ಎಸಿಪಿ ಮಧುಬನ್ ಸಿಂಗ್ ತಿಳಿಸಿದರು.

    ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಹೋಗಿ ಪರಿಶೀಲನೆ ನಡೆಸಿ ಮೃತ ಮಗುವಿನ ಶವವನ್ನು ವಶಪಡಿಸಿಕೊಂಡಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

  • ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ

    ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ತಾಯಿ

    ಲಕ್ನೋ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಭದೋಹಿಯ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಥೇನ್ (6) ಮತ್ತು ಸಹೋದರ ಹಸನ್ (3) ಮೃತ ಬಾಲಕರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

    ಮೃತ ಬಾಲಕರ ತಂದೆ ಮಾಲು ಅನ್ಸಾರಿ ಖಮರಿಯಾದ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಕ್ಕಳನ್ನು ನೋಡಿದ್ದಾರೆ. ಆದರೆ ಮಕ್ಕಳು ಕಾಣದಿದ್ದಾಗ ಗಾಬರಿಗೊಂಡು ಎಲ್ಲ ಕಡೆ ಹುಡುಕಿದ್ದಾರೆ. ಬಹಳ ಸಮಯದ ಬಳಿಕ ಬಟ್ಟೆ ಇಡಲು ಪೆಟ್ಟಿಗೆ ತೆರೆದಾಗ ಮಕ್ಕಳು ಅದರಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಯಾದವ್ವೇಂದ್ರ ಯಾದವ್ ಹೇಳಿದ್ದಾರೆ.

    ಮಕ್ಕಳನ್ನು ತಪಾಸಣೆ ಮಾಡಿದ ವೈದ್ಯರು, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮಾನಸಿಕ ಅಸ್ವಸ್ಥ ತಾಯಿಯಿಂದ ಘಟನೆ ನಡೆದಿದೆ. ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿಲ್ಲ. ಖಮಾರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ.

  • ರೆಫ್ರಿಜರೇಟರ್ ಸ್ಫೋಟ, ಮೂವರ ಸಾವು

    ರೆಫ್ರಿಜರೇಟರ್ ಸ್ಫೋಟ, ಮೂವರ ಸಾವು

    ಚೆನ್ನೈ: ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿ ದಂಪತಿ ಹಾಗೂ ತಾಯಿ ಒಟ್ಟು ಮೂವರು ಮೃತಪಟ್ಟಿರುವ ಘಟನೆ ಚೆನ್ನೈ ಬಳಿಯ ತಂಬರಂ ಪೂರ್ವದ ಸೆಲಾಯುರ್‍ನಲ್ಲಿ ನಡೆದಿದೆ.

    ಖಾಸಗಿ ಸುದ್ದಿ ವಾಹಿನಿ ವರದಿಗಾರ ಪ್ರಸನ್ನ(35) ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ರೆಫ್ರಿಜಿರೇಟರ್ ಗ್ಯಾಸ್ ಸ್ಫೋಟಗೊಂಡು ದಂಪತಿ ಹಾಗೂ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ಸ್ಫೋಟದ ತೀವ್ರತೆಗೆ ಮನೆಯಲ್ಲಿನ ವಸ್ತುಗಳು ಚೂರು ಚೂರಾಗಿದ್ದು, ಗೋಡೆ ಕಪ್ಪಾಗಿದ್ದರಿಂದ ರೆಫ್ರಿಜರೇಟರ್ ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

    https://www.facebook.com/IETamil/videos/2134065873549946/

    ಗುರುವಾರ ಬೆಳಗ್ಗೆ ಪಕ್ಕದ ಮನೆಯವರು ಮನೆಯತ್ತ ನೋಡಿದ್ದಾರೆ. ತುಂಬಾ ಹೊತ್ತಾದರೂ ಯಾರೂ ಮನೆಯಿಂದ ಹೊರಗೆ ಬಾರದ್ದನ್ನು ಮನಗಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ಧಾವಿಸಿದ್ದು, ಬಾಗಿಲನ್ನು ಮುರಿದು ಒಳಗೆ ತೆರಳಿದ್ದಾರೆ.

    ಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆ ಚೂರು ಚೂರಾದ ವಸ್ತುಗಳು ಹಾಗೂ ಗೋಡೆ ಕಪ್ಪಾಗಿರುವುದನ್ನು ಕಂಡಿದ್ದಾರೆ. ಪ್ರಸನ್ನ, ಪತ್ನಿ ಅರ್ಚನಾ(32) ಹಾಗೂ ತಾಯಿ ರೇವತಿ(59) ಅವರ ದೇಹ ಮನೆಯ ವಿವಿಧ ಸ್ಥಳಗಳಲ್ಲಿ ಕಂಡಿವೆ. ಮನೆಯೊಳಗಿನ ರೆಫ್ರಿಜರೇಟರ್ ಸ್ಫೋಟಗೊಂಡಿದ್ದು, ರೆಫ್ರಿಜರೇಟರ್‍ನಿಂದ ಸ್ಫೋಟಗೊಂಡ ವಿಷಕಾರಿ ಅನಿಲದಿಂದ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ.

  • ಬಾಲ್ಕನಿಯಿಂದ ಬೀಳ್ತಿದ್ದ ಮಗುವಿನ ರಕ್ಷಣೆ: ವಿಡಿಯೋ

    ಬಾಲ್ಕನಿಯಿಂದ ಬೀಳ್ತಿದ್ದ ಮಗುವಿನ ರಕ್ಷಣೆ: ವಿಡಿಯೋ

    ಮೊಬೈಲಿನಲ್ಲಿ ಮಾತನಾಡುತ್ತಿದ್ದಾಗ ಬಾಲ್ಕನಿಯಿಂದ ಬೀಳುತ್ತಿದ್ದ ಮಗುವನ್ನು ತಾಯಿ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ತಾಯಿ ತನ್ನ ಮಗನ ಕೈ ಹಿಡಿದುಕೊಂಡು ನಾಲ್ಕನೇ ಮಹಡಿಗೆ ಲಿಫ್ಟ್ ನಿಂದ ಹೊರಗೆ ಬರುತ್ತಾರೆ. ಈ ವೇಳೆ ಮಹಿಳೆ ಬಾಲ್ಕನಿ ಮುಂದೆ ಮೊಬೈಲಿನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ಮಾತನಾಡುವಾಗ ಮಹಿಳೆ ಮಗುವಿನ ಕೈ ಬಿಟ್ಟು ಬಿಡುತ್ತಾರೆ.

    ತಾಯಿ ಕೈ ಬಿಟ್ಟ ತಕ್ಷಣ ಮಗು ಬಾಲ್ಕನಿ ಹತ್ತಿರ ಹೋಗಿ ಕಂಬಿಗಳಿಂದ ಇಣುಕಿ ನೋಡಿದೆ. ಈ ವೇಳೆ ಕಂಬಿಯ ಗ್ಯಾಪ್‍ನಲ್ಲಿ ಮಗು ಬೀಳುತ್ತಿದ್ದು, ಇದನ್ನು ನೋಡಿದ ತಾಯಿ ಕೆಳಗೆ ಕುಳಿತು ಮಗುವನ್ನು ಹಿಡಿದುಕೊಂಡಿದ್ದಾರೆ.

    ತಾಯಿ ಬೀಳುತ್ತಿದ್ದ ಮಗುವನ್ನು ಹಿಡಿದುಕೊಂಡಿದ್ದನ್ನು ನೋಡಿದ ಸ್ಥಳೀಯರು ಮಗುವನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಲ್ಲದೆ ಮಹಿಳೆಯ ಸಮಯಪ್ರಜ್ಞೆ ನೋಡಿ ಜನರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು, ಪರ್ಸ್, ಮೊಬೈಲ್ ಹಿಡಿದುಕೊಂಡೇ ತಾಯಿ ಮಗುವಿಗೆ ರಕ್ಷಿಸಿದ್ದಾರೆ. ಇವರು ನಿಜವಾಗಿಯೂ ‘ಸೂಪರ್ ವುಮೆನ್’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋ ನೋಡಿ ಎಲ್ಲ ಹೃದಯದ ಬಡಿತ ಒಂದು ಕ್ಷಣ ನಿಲ್ಲುತ್ತದೆ. ‘ಒಳ್ಳೆಯ ಕ್ಯಾಚ್ ಮಾಮ್’ ಎಂದು ಕಮೆಂಟ್ ಮಾಡಿದ್ದಾರೆ.

    https://www.youtube.com/watch?v=21IAY-NtNrA

  • ರಾಜ್ಯದಲ್ಲಿ ವರುಣನ ಅಬ್ಬರ – ತಾಯಿ, ಮಗ ಸೇರಿ ಮೂವರು ಬಲಿ

    ರಾಜ್ಯದಲ್ಲಿ ವರುಣನ ಅಬ್ಬರ – ತಾಯಿ, ಮಗ ಸೇರಿ ಮೂವರು ಬಲಿ

    ಬೆಂಗಳೂರು: ಬೀದರ್, ಧಾರವಾಡ, ಗದಗ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ತಾಯಿ ಮಗ ಸೇರಿ ಒಟ್ಟು ಮೂವರು ಬಲಿಯಾಗಿದ್ದಾರೆ.

    ಅರ್ಧಗಂಟೆ ಸುರಿದ ದಿಢೀರ್ ಮಳೆಗೆ ತಾಯಿ ಹಾಗೂ ಮಗ ನೀರುಪಾಲಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದಲ್ಲಿ ನಡೆದಿದೆ. ತಾಯಿ ಅನಿತಾ (35), ಮಗ ಭಾಗೇಶ್ (15) ನೀರು ಪಾಲಾದ ದುರ್ದೈವಿಗಳು. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಅವರು ಹಳ್ಳ ದಾಟುತ್ತಿದ್ದರು. ಈ ವೇಳೆ ಕಾಲು ಜಾರಿ ನೀರಿನಲ್ಲಿ ಮಗ ಕೊಚ್ಚಿ ಹೋಗುವುದನ್ನು ನೋಡಿ ಕಾಪಾಡಲು ಹೋಗಿ ಅನಿತಾ ಅವರು ಕೂಡ ನೀರು ಪಾಲಾಗಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಮಂಠಾಳ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಿದರು. ಸ್ವಲ್ಪ ಸಮಯದ ಬಳಿಕ ಭಾಗೇಶ್ ಮೃತದೇಹ ಪತ್ತೆಯಾಗಿದ್ದು, ಅನೀತಾ ಅವರ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮಂಠಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗದಗ ಜಿಲ್ಲೆಯ ಲಿಂಗದಾಳ ಗ್ರಾಮದಲ್ಲಿ ನಡೆದಿದೆ. ದೇವಕ್ಕ ಚನ್ನಪ್ಪ ದೊಡ್ಡನವರ್ (61) ಮೃತ ರೈತ ಮಹಿಳೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ದೇವಕ್ಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಲ್ಲೆ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಧಾರಕಾರ ಮಳೆಯಾಗಿದೆ. ವರಣನ ಅಬ್ಬರದಿಂದಾಗಿ ರಸ್ತೆಗಳು ನೀರಿನಲ್ಲಿ ಮುಚ್ಚಿಹೋಗಿ, ಸವಾರರು ಪರದಾಡುವಂತಾಯಿತು. ರಾಯಭಾಗ ಜೋಡಕುರಳಿ ಗ್ರಾಮದಲ್ಲಿ ಸಿಡಿಲಿಗೆ 2 ಎಮ್ಮೆ ಬಲಿಯಾಗಿವೆ.

    ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣ ಆರ್ಭಟಿಸಿದ್ದಾನೆ. ಮಳೆ ನೀರಿಗೆ ರಸ್ತೆಗಳು ಕೆರೆಯಂತಾಗಿದ್ದವು. ಇದರಿಂದಾಗಿ ಬೈಕ್ ಸವಾರರು ಪರದಾಡುವಂತಾಯಿತು. ದಾವಣಗೆರೆಯಲ್ಲೂ ಭರ್ಜರಿ ಮಳೆಯಾಗಿದೆ.

    ರಾಮನಗರ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದ್ದು, ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೊಣಕಾಲು ನೋವಿನ ನಡ್ವೆಯೂ ಅಕ್ಷಯ್ ಕುಮಾರ್ ತಾಯಿಯಿಂದ ಯೋಗ

    ಮೊಣಕಾಲು ನೋವಿನ ನಡ್ವೆಯೂ ಅಕ್ಷಯ್ ಕುಮಾರ್ ತಾಯಿಯಿಂದ ಯೋಗ

    ಮುಂಬೈ: ಪ್ರಪಂಚದ ಎಲ್ಲಾ ಕಡೆ ಅಂತಾರಾಷ್ಟೀಯ ಯೋಗ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಭಾರತದಲ್ಲೂ ಸೆಲಿಬ್ರಿಟಿಗಳು ಸೇರಿ ರಾಜಕಾರಣಿಗಳು ಇಂದು ಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಬಾಲಿವುಡ್ ಮಂದಿಯೂ ಇದಕ್ಕೆ ಹೊರತಾಗಿಲ್ಲ ಶಿಲ್ಪಾ ಶೆಟ್ಟಿ, ಬಿಪಾಶಾ ಬಸು, ಅನುಪಮ್ ಖೇರ್ ಮತ್ತು ಟ್ವಿಂಕಲ್ ಖನ್ನಾ ಸೇರಿದಂತೆ ಹಲವಾರು ಬಾಲಿವುಡ್ ಮಂದಿ ಅಂತಾರಾಷ್ಟೀಯ ಯೋಗ ದಿನದ ಅಂಗವಾಗಿ ಯೋಗ ಮಾಡಿ ತಮ್ಮ ಫೋಟೋಗಳನ್ನು ಸಾಮಾಜಿಕ ಜಾತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈಗ ಈ ಸಾಲಿಗೆ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರು ಸಹ ಸೇರಿಕೊಂಡಿದ್ದಾರೆ. ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಾಯಿ ಅರುಣಾ ಭಾಟಿಯಾ ಯೋಗ ಮಾಡುತ್ತಿರುವ ಫೋಟೋ ಹಾಕಿರುವ ಅಕ್ಷಯ್ ನಾವು ನೋಡುವ ಸ್ಪೂರ್ತಿದಾಯಕ ಫೋಟೋ ಇದು ಎಂದು ಹೇಳಿದ್ದಾರೆ.

    ತಾಯಿ ಯೋಗ ಮಾಡುತ್ತಿರುವ ಫೋಟೋ ಹಾಕಿರುವ ಅಕ್ಷಯ್, “75 ವಯಸ್ಸಿನ ನನ್ನ ತಾಯಿ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಯೋಗ ಮಾಡಲು ಪ್ರಾರಂಭಿಸಿದರು. ಈಗ ಯೋಗ ಮಾಡುವುದು ಅವರ ದೈನಂದಿನ ದಿನಚರಿಯ ಭಾಗವಾಗಿದೆ. ದಿನ ಕಳೆದಂತೆ ಮೊಣಕಾಲಿನ ನೋವು ಸುಧಾರಿಸುತ್ತಿದೆ. ಈ ಫೋಟೋವನ್ನು ಹಂಚಿಕೊಳ್ಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.

    ಅಕ್ಷಯ್ ಕುಮಾರ್ ಅವರು ತಮ್ಮ ತಾಯಿ ಫೋಟೋ ಟ್ವಿಟ್ಟರ್‍ನಲ್ಲಿ ಹಾಕಿದ ತಕ್ಷಣ ಅವರ ಅಭಿಮಾನಿಗಳು ಕೂಡ ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಒಬ್ಬ ಅಭಿಮಾನಿ ತನ್ನ ಅಂಗವಿಕಲ ತಾಯಿ ಯೋಗ ಮಾಡುತ್ತಿರುವ ಫೋಟೋ ಹಾಕಿದ್ದಾರೆ. ಇದನ್ನು ನೋಡಿದ ಅಕ್ಷಯ್ ಆ ಫೋಟೋಗೆ ನಿಮ್ಮ ತಾಯಿ ಸೂಪರ್‌ಮಾಮ್‌ ಎಂದು ರೀಟ್ವೀಟ್ ಮಾಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಅಪಘಾತದಲ್ಲಿ ಮೃತಪಟ್ಟ ತಂದೆ-ತಾಯಿಯನ್ನು ಎಬ್ಬಿಸಲು ಮಗ ಪ್ರಯತ್ನ

    ಅಪಘಾತದಲ್ಲಿ ಮೃತಪಟ್ಟ ತಂದೆ-ತಾಯಿಯನ್ನು ಎಬ್ಬಿಸಲು ಮಗ ಪ್ರಯತ್ನ

    – ಚಾಮರಾಜನಗರದಲ್ಲೊಂದು ಮನಕಲಕುವ ಘಟನೆ

    ಚಾಮರಾಜನಗರ: ಅಪಘಾತದಲ್ಲಿ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಬಾಲಕನೋರ್ವ ಕಣ್ಣೀರಿಡುತ್ತಿರುವ ಮನಕಲಕುವ ಘಟನೆ ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಬಳಿ ನಡೆದಿದೆ.

    ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದ ದಂಪತಿ ಮಾದೇಶ್ ಮತ್ತು ಮಣಿ ಎಂಬವರು ತಮ್ಮ ಮಗನನ್ನು ಕರೆದುಕೊಂಡು ಬೈಕ್‍ನಲ್ಲಿ ನಂಜನಗೂಡಿಗೆ ಮದುವೆಗೆ ತೆರಳುತ್ತಿದ್ದರು. ಈ ವೇಳೆ ಮುತ್ತಿಗೆ ಗ್ರಾಮದ ಬಳಿ ಈಚರ್ ಟೆಂಪೋ ಮತ್ತು ಬೈಕ್ ನಡುವೆ ಅಪಘಾತವಾಗಿದೆ.

    ಅಪಘಾತವಾದ ಬಳಿಕ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಬಾಲಕ ಸಾವಿನಿಂದ ಪಾರಾಗಿದ್ದು, ತಂದೆ-ತಾಯಿಗಳ ಶವದ ಮುಂದೆ ಕಣ್ಣೀರಿಟ್ಟು. ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾನೆ. ಈ ದೃಶ್ಯ ಕಂಡ ಅಕ್ಕ-ಪಕ್ಕದ ಜನರ ಕಣ್ಣು ಒದ್ದೆಯಾಗುವಂತೆ ಮಾಡಿದೆ.

    ಅಪಘಾತ ಸಂಬಂಧ ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹಂಡೆ, ಬಕೆಟ್, ಟ್ಯಾಂಕಿನಲ್ಲಿ ಮುಳುಗಿಸಿ ಮೂವರು ಮಕ್ಕಳನ್ನು ಕೊಲೆಗೈದು ತಾಯಿ ಆತ್ಮಹತ್ಯೆ

    ಹಂಡೆ, ಬಕೆಟ್, ಟ್ಯಾಂಕಿನಲ್ಲಿ ಮುಳುಗಿಸಿ ಮೂವರು ಮಕ್ಕಳನ್ನು ಕೊಲೆಗೈದು ತಾಯಿ ಆತ್ಮಹತ್ಯೆ

    ಕೊಪ್ಪಳ: ತನ್ನ ಮೂವರು ಮಕ್ಕಳನ್ನು ಸಾಯಿಸಿದ ಬಳಿಕ ತಾಯಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾಹಕ ಘಟನೆಯೊಂದು ಕೊಪ್ಪಳದಲ್ಲಿ ನೆಡದಿದೆ.

    ಕೂಕುನೂರು ತಾಲೂಕಿನ ಯರೇ ಹಂಚಿನಾಳ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ತಾಯಿ ಯಲ್ಲಮ್ಮ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ.

    ಹಿರಿಯ ಮಗಳದಾ ಅಕ್ಷತಾಳನ್ನು ನೀರು ತುಂಬಿಸುವ ಹಂಡೆಯಲ್ಲಿ ಮುಳುಗಿಸಿ ಮತ್ತು ಎರಡು ವರ್ಷದ ಮಗ ನಾಗರಾಜನನ್ನು ನೀರಿರುವ ಬಕೆಟ್ ನಲ್ಲಿ ಮುಳುಗಿಸಿ, ನಾಲ್ಕು ವರ್ಷದ ಮಗಳು ಕಾವ್ಯಳನ್ನು ನೀರಿನ ಟ್ಯಾಂಕಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ. ನಂತರ ತಾನೂ ಮನೆಯಲ್ಲೇ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಸ್ಥಳಕ್ಕೆ ಕೂಕುನೂರು ಪೊಲೀಸರು ಆಗಮಿಸಿ ಪರಿಶೀಲನೆ ನೆಡಸಿದ್ದಾರೆ. ಯಲ್ಲಮ್ಮಾ ಆತ್ಮಹತ್ಯೆಗೆ ಪತಿಯ ಕಿರುಕುಳವೇ ಕಾರಣ ಎನ್ನಲಾಗಿದೆ. ಯಲ್ಲಮ್ಮಾ ಪತಿ ಉಮೇಶ್ ದಿನನಿತ್ಯ ಕುಡಿದು ಬಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಶೀಲ ಶಂಕಿಸಿ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ.

    ಪತಿಯ ಕಿರುಕುಳದಿಂದ ಯಲ್ಲಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತದೆ. ಆದರೆ ಪೊಲೀಸರ ತನಿಖೆ ನಂತರ ಘಟನೆಗೆ ನಿಜವಾದ ಕಾರಣ ಏನು ಎಂಬುದು ತಿಳಿಯಬೇಕಿದೆ.

  • ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ

    ತಾಯಿಯ ಪುನರ್ ವಿವಾಹದ ಬಗ್ಗೆ ಮಗನ ಭಾವನಾತ್ಮಕ ಪೋಸ್ಟ್ – ನೆಟ್ಟಿಗರಿಂದ ಶ್ಲಾಘನೆ

    ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಗನೊಬ್ಬ ತನ್ನ ತಾಯಿ ಪುನರ್ ವಿವಾಹ ಆಗಿದ್ದಕ್ಕೆ ಶುಭಾಶಯವನ್ನು ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಗೋಕುಲ್ ಶ್ರೀಧರ್ ತಾಯಿಯ ಪುನರ್ ವಿವಾಹಕ್ಕೆ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದಾನೆ. ಶ್ರೀಧರ್ ಕೊಲ್ಲಂನಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾನೆ. ತಾಯಿಯ ತ್ಯಾಗದ ಬಗ್ಗೆ ನೆನಪಿಸಿಕೊಂಡು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.

    ಶ್ರೀಧರ್ ‘ಇದು ನನ್ನ ತಾಯಿಯ ವಿವಾಹವಾಗಿದ್ದು’ ಎಂದು ಮಲೆಯಾಳಂ ಭಾಷೆಯಲ್ಲಿ ಬರೆದಿದ್ದು, ಜೊತೆಗೆ ತನ್ನ ತಾಯಿಯ ಫೋಟೋವನ್ನು ಹಂಚಿಕೊಂಡಿದ್ದಾನೆ.

    ಪೋಸ್ಟ್ ನಲ್ಲಿ ಏನಿದೆ?
    ನನ್ನನ್ನು ಹೆತ್ತು, ನನಗಾಗಿ ಬದುಕು ನಡೆಸಿಕೊಂಡು ಬಂದು, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ನನ್ನ ತಾಯಿಯ ಮೊದಲನೇ ಮದುವೆಯಿಂದ ಸಾಕಷ್ಟು ನೋವು ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ. ಅದರಲ್ಲಿ ಒಂದು ಘಟನೆಯನ್ನು ನೆನಪಿಸಿಕೊಂಡು “ಒಮ್ಮೆ ಪತಿಯಿಂದ ಹೊಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದನ್ನು ನೋಡಿದೆ. ಆಗ ನಾನು ಯಾಕೆ ಇಷ್ಟು ಕಷ್ಟವನ್ನು ಸಹಿಸಿಕೊಳ್ಳುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಅಮ್ಮ ನಿನಗಾಗಿ ನಾನು ಬದುಕುತ್ತಿದ್ದೇನೆ. ಹೀಗಾಗಿ ನಿನಗಾಗಿ ನಾನು ಇದೆಲ್ಲವನ್ನು ಸಹಿಸಿಕೊಳ್ಳುತ್ತಿರುವುದು ಎಂದು ಹೇಳಿದ್ದರು ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾನೆ.

    ಕೊನೆಗೆ ನನ್ನ ತಾಯಿ ಮೊದಲನೆ ಪತಿಯನ್ನು ಬಿಟ್ಟು ನನ್ನ ಕೈಯನ್ನು ಹಿಡಿದು ಆ ಮನೆಯಿಂದ ಹೊರಬಂದರು. ಆಗ ನಾನು ತಾಯಿಗೆ ಪುನರ್ ವಿವಾಹವನ್ನು ಮಾಡಬೇಕು ಎಂದು ನಿರ್ಧರಿಸಿದ್ದೆ. ಆಗ ನಾನು 10ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅಮ್ಮ ನನಗಾಗಿ ಅವರ ಕಸುಗಳೆಲ್ಲವನ್ನು ತ್ಯಾಗ ಮಾಡಿದ್ದರು. ನಂತರ ಅಮ್ಮ ಕೆಲಸ ಬಿಟ್ಟರು. ಈಗ ನಾನು ಕೆಲಸದ ನೆಪದಲ್ಲಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾರೆಂದು ಪುನರ್ ವಿವಾಹದ ಬಗ್ಗೆ ತಾಯಿಗೆ ಹೇಳಿದೆ.

    https://www.facebook.com/gokul.sreedar/posts/2056174421177935

    ಮೊದಲಿಗೆ ಅವರು ಒಪ್ಪಲಿಲ್ಲ. ಅಮ್ಮನ ಸಹೋದ್ಯೋಗಿಗಳ ಕಡೆಯಿಂದಲೇ ಪುನರ್ ವಿವಾಹ ಸಂಬಂಧ ಬಂದಿತ್ತು. ನಂತರ ನಾನು ಬಲವಂತ ಮಾಡಿ ಒಪ್ಪಿಸಿದೆ. ಈಗ ಅಮ್ಮ ಮರು ಮದುವೆಯಾಗಿ ಸಂತೋಷದಿಂದ ಇದ್ದಾರೆ ಎಂದು ಬರೆದಿದ್ದಾನೆ.

    ಶ್ರೀಧರ್ ಈ ಪೋಸ್ಟ್ ಮಾಡಿದ ಬಳಿಕ ಇದುವರೆಗೂ 37,000 ಜನರು ಲೈಕ್ಸ್ ಮಾಡಿದ್ದು, 4.1 ಸಾವಿರ ಮಂದಿ ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲದೇ 3.3 ಸಾವಿರ ಜನರು ಕಮೆಂಟ್ಸ್ ಮೂಲಕ ಶುಭಕೋರಿದ್ದಾರೆ. ಜೊತೆಗೆ ಮಗನ ಕಾರ್ಯವನ್ನು ಶ್ಲಾಘಿಸಿದ್ದಾರೆ.