Tag: mother

  • ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ತಾಯಿ ಅಸ್ಥಿ ವಿಸರ್ಜನೆ ವೇಳೆ ಕಾವೇರಿ ಸಂಗಮದಲ್ಲಿ ಕೊಚ್ಚಿಹೋದ ಮಗ

    ಮಂಡ್ಯ: ತಾಯಿಯ ಅಸ್ಥಿ ವಿಸರ್ಜನೆಗೆ ಆಗಮಿಸಿದ್ದ ಮಗ ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ, ಗಂಜಾಂ ಬಳಿಯ ಕಾವೇರಿ ನದಿ ಸಂಗಮದಲ್ಲಿ ನಡೆದಿದೆ.

    ಶ್ರೀಕಾಂತ್ (45) ಕೊಚ್ಚಿ ಹೋದ ವ್ಯಕ್ತಿ. ಬೆಂಗಳೂರಿನ ರಾಜಾಜಿ ನಗರದ ನಿವಾಸಿ ಶ್ರೀಕಾಂತ್ ಅವರ ತಾಯಿ ಅಂಬುಜಾ ಸಾವಿಗೀಡಾಗಿದ್ದರು. ಅವರ ಅಸ್ಥಿ ವಿಸರ್ಜನೆಗಾಗಿ 5 ಜನರ ಜೊತೆ ಸಂಗಮಕ್ಕೆ ಶ್ರೀಕಾಂತ್ ಆಗಮಿಸಿದ್ದರು.

    ಈ ವೇಳೆ ಅಸ್ಥಿ ವಿಸರ್ಜನೆಗೆ ಕಾವೇರಿ ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಕೂಲ್ ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ಕುಡಿದು ತಾಯಿ ಆತ್ಮಹತ್ಯೆ

    ಕೂಲ್ ಡ್ರಿಂಕ್ಸ್‌ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ಕುಡಿದು ತಾಯಿ ಆತ್ಮಹತ್ಯೆ

    ಬಳ್ಳಾರಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿಯೊಬ್ಬಳು ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ತಾಯಿ ಮತ್ತು ಒಂದು ಮಗು ಸಾವನ್ನಪ್ಪಿದೆ. ಮತ್ತೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಘಟನೆ ಜಿಲ್ಲೆಯ ಕೊರುಗೋಡು ತಾಲೂಕಿನ ಹಳೇ ನಲ್ಗುಡಿ ಗ್ರಾಮದಲ್ಲಿ ನಡೆದಿದೆ.

    ಶಾಂತಮ್ಮ (28) ಮತ್ತು ವರಲಕ್ಷ್ಮಿ (6) ಮೃತ ತಾಯಿ-ಮಗಳು. ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ಶಾಂತಮ್ಮಳನ್ನು ಕುರುಗೋಡು ತಾಲೂಕಿನ ಹಳೇನೆಲ್ಲುಡಿ ಗ್ರಾಮದ ಮಾರೆಪ್ಪನಿಗೆ ಕೊಟ್ಟು ಕಳೆದ 9 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದಗಿನಿಂದಲೂ ಪತಿ, ಅತ್ತೆ ಮತ್ತು ಮಾವ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.


    ಪ್ರತಿ ದಿನದಂತೆ ಬುಧವಾರವೂ ಕೂಡ ಕ್ಷುಲ್ಲಕ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ. ಆದರೆ ಇದರಿಂದ ತೀವ್ರ ಮನನೊಂದ ನನ್ನ ಮಗಳು ತನ್ನೆರಡು ಮಕ್ಕಳಾದ ವರಲಕ್ಷ್ಮಿ ಮತ್ತು ನೇತ್ರಾವತಿಗೆ ಕೂಲ್ ಡ್ರಿಂಕ್ಸ್ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಅದನ್ನು ಕುಡಿದಿದ್ದಾಳೆ ಎಂದು ಮೃತ ತಾಯಿ ಅಂಕಮ್ಮ ತಿಳಿಸಿದ್ದಾರೆ.

    ಪತಿ ಮತ್ತು ಅತ್ತೆ ಸೇರಿದಂತೆ ಮನೆಯವರೆಲ್ಲ ಹೊಲಕ್ಕೆ ಹೋದಾಗ ಈ ಘಟನೆ ನಡೆದಿದ್ದರಿಂದ ಯಾರು ಕೂಡ ಗಮನಿಸಿರಲಿಲ್ಲ. ಸಂಜೆ ವಾಪಸ್ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ತಾಯಿ ಶಾಂತಮ್ಮ ಮತ್ತು ವರಲಕ್ಷ್ಮಿ ಸಾವನ್ನಪ್ಪಿದ್ದರು. 4 ವರ್ಷದ ಮಗಳು ನೇತ್ರಾವತಿ ಸಾವು ಬದುಕಿನ ಮಧ್ಯೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾಳೆ. ಮೃತ ಶಾಂತಮ್ಮಳ ತಾಯಿ ಅಂಕಮ್ಮ ಪತಿ ಮನೆಯ ಕಿರುಕುಳದಿಂದಲೇ ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ಕುರುಗೋಡು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಎಸ್.ಪಿ ಸಿ.ಕೆ. ಬಾಬಾ ಹೇಳಿದ್ದಾರೆ.

    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಮಾರೆಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಮೂವರು ಮಕ್ಕಳನ್ನ ಕೊಂದು ಕರ್ನಾಟಕ ಮೂಲದ ತಾಯಿ ನೇಣಿಗೆ ಶರಣು

    ಮೂವರು ಮಕ್ಕಳನ್ನ ಕೊಂದು ಕರ್ನಾಟಕ ಮೂಲದ ತಾಯಿ ನೇಣಿಗೆ ಶರಣು

    ಪುಣೆ: 28 ವರ್ಷದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಕೊಂದು ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಅಲಿಯಾ ಭಗ್ಬಾನ್ (9), ಜೋಭಾ (7) ಮತ್ತು ಜಿಯಾನ್ (6) ಮೂವರು ಮಕ್ಕಳನ್ನು ಕೊಂದು ತಾಯಿ ಫಾತಿಮಾ ಅಕ್ರಮ್ ಭಗ್ವಾನ್ (28) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ. ಫಾತಿಮಾ ತನ್ನ ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮೃತರು ಕರ್ನಾಟಕ ಮೂಲದವರಾಗಿದ್ದು, ಮೃತ ಫಾತಿಮಾ ಮನೆ ಕೆಲಸ ಮಾಡುತ್ತಿದ್ದಳು. ಈಕೆ ಮೂವರು ಮಕ್ಕಳು ಮತ್ತು ಪತಿ ಅಕ್ರಮ್ ಜೊತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಮೂವರು ಮಕ್ಕಳು ಸಾವಿತ್ರಿಬಾಯಿ ಫುಲೆ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಜೀವನೋಪಾಯಕ್ಕಾಗಿ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಲು ಇತ್ತೀಚೆಗೆ ಪುಣೆಯ ಪಿಂಪ್ರಿ-ಚಿಂಚ್‍ವಾಡ್ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಪತಿ ಅಕ್ರಮ್ ಭಾನುವಾರ ಸಂಜೆ ಮನೆಗೆ ಮರಳಿದಾಗ ಒಳಗಿನಿಂದ ಬಾಗಿಲು ಲಾಕ್ ಆಗಿತ್ತು. ಎಷ್ಟೆ ಬಡಿದರೂ ಬಾಗಿಲು ತೆರಯಲಿಲ್ಲ. ಇದರಿಂದ ಗಾಬರಿಗೊಂಡ ಅಕ್ರಮ್ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಆಗ ಮೂವರು ಮಕ್ಕಳು ಮೃತಪಟ್ಟಿದ್ದು, ಫಾತಿಮಾ ಬೇರೆ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಶಂಕರ್ ಅವತಡೆ ಹೇಳಿದ್ದಾರೆ.

    ಪತಿ ಅಕ್ರಮ್ ಹಣ್ಣು ಮಾರಾಟಗಾರನಾಗಿದ್ದು, ಹೆಚ್ಚು ಹಣ ಸಂಪಾದಿಸುತ್ತಿರಲಿಲ್ಲ. ಜೊತೆಗೆ ಇತ್ತೀಚೆಗೆ ವ್ಯಾಪಾರದಲ್ಲಿ ಭಾರೀ ನಷ್ಟವನ್ನು ಅನುಭವಿಸಿದ್ದನು. ಈ ವಿಚಾರಕ್ಕೆ ಕೆಲವು ದಿನಗಳಿಂದ ದಂಪತಿಯ ಮಧ್ಯೆ ಜಗಳ ನಡೆಯುತಿತ್ತು. ಇತ್ತ ಫಾತಿಮಾ ತಂದೆ ಕೂಡ ಸಾವನ್ನಪ್ಪಿದ್ದು, ಫಾತಿಮಾ ಖಿನ್ನತೆಗೆ ಒಳಗಾಗಿದ್ದಳು. ಹೀಗಾಗಿ ಆರ್ಥಿಕ ಸಮಸ್ಯೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ನಾವು ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮನೆಯಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಮಗ ಶಾಲೆಗೆ ಹೋಗ್ತಿಲ್ಲವೆಂದು ಪೊಲೀಸ್ರನ್ನು ಮನೆಗೆ ಕರೆಸಿದ ತಾಯಿ

    ಮಗ ಶಾಲೆಗೆ ಹೋಗ್ತಿಲ್ಲವೆಂದು ಪೊಲೀಸ್ರನ್ನು ಮನೆಗೆ ಕರೆಸಿದ ತಾಯಿ

    ಹೈದರಾಬಾದ್: ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗದಿದ್ದರೆ ಟೀಚರ್ ಗೆ ಹೇಳ್ತೀನಿ ಎಂದು ಪೋಷಕರು ಹೆದರಿಸಿ ಕಳುಹಿಸುತ್ತಾರೆ. ಆದರೆ ತೆಲಂಗಾಣದಲ್ಲಿ ತಾಯಿಯೊಬ್ಬಳು ಪೊಲೀಸರನ್ನೇ ಮನೆಗೆ ಕರೆಸಿದ ವಿಚಿತ್ರ ಘಟನೆಯೊಂದು ನಡೆದಿದೆ.

    ಹೌದು. ಮೆಹಬೂಬ್ ನಗರದ ನಿವಾಸಿ ಮಹಿಳೆಯ ಮಗ ಶಾಲೆಗೆ ಹೋಗುವುದಿಲ್ಲ ಎಂದು ಹಠಮಾಡುತ್ತಿದ್ದನು. ಶಾಲೆಗೆ ಹೋಗುವಂತೆ ತಾಯಿ ಪರಿಪರಿಯಾಗಿ ಮಗನ ಬಳಿ ಕೇಳಿಕೊಂಡರೂ ಆತ ಶಾಲೆಗೆ ಹೋಗಲು ನಿರಾಕರಿಸಿದ್ದಾನೆ. ಇದರಿಂದ ಗಾಬರಿಗೊಂಡ ತಾಯಿ, ಬೇರೆ ದಾರಿ ಇಲ್ಲದೆ ನೇರವಾಗಿ `100′ ನಂಬರಿಗೆ ಕರೆ ಮಾಡಿದ್ದಾರೆ.

    ಕರೆಯಲ್ಲಿ ಮಹಿಳೆ, ಯಾರಾದ್ರೂ ಡ್ಯೂಟಿಯಲ್ಲಿದ್ದ ಪೊಲೀಸರನ್ನು ತಕ್ಷಣವೇ ಮನೆಗೆ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯ ಮಾತು ಆಲಿಸಿದ ಪೊಲೀಸರು, ಏನೋ ಅನಾಹುತ ಸಂಭವಿಸಿರಬೇಕೆಂದು ತಕ್ಷಣವೇ ತಮ್ಮ ವಾಹನದಲ್ಲಿ ಮಹಿಳೆ ತಿಳಿಸಿದ ವಿಳಾಸದಂತೆಯೇ ಮನೆಗೆ ಬಂದಿದ್ದಾರೆ.

    ಹೀಗೆ ಬಂದ ಪೊಲೀಸರಿಗೆ ಶಾಕ್ ಕಾದಿತ್ತು. ಮಹಿಳೆ, ನನ್ನ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ. ಅಲ್ಲದೆ ನಾನು ಯಾವುದೇ ಕಾರಣಕ್ಕೂ ಕ್ಲಾಸಿಗೆ ಹೋಗಲ್ಲವೆಂದು ಹಠ ಮಾಡಿ ಮನೆಯಲ್ಲಿ ಅಡಗಿ ಕೂತಿದ್ದಾನೆ. ಹೀಗಾಗಿ ನೀವೇ ಅವನಿಗೆ ಬುದ್ಧಿ ಹೇಳಿ ಶಾಲೆಗೆ ಹೋಗುವಂತೆ ಪ್ರೇರೇಪಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.

    ಏನೋ ಅಂದುಕೊಂಡು ಬಂದು ಇನ್ನೇನೋ ಆಗೋಯ್ತು ಎಂದು ಸಿಟ್ಟಾದ ಪೊಲೀಸರು, ಮಹಿಳೆಯ ಪರಿಸ್ಥಿತಿಯನ್ನು ಅರಿತುಕೊಂಡು ಅಡಗಿ ಕುಳಿತಿದ್ದ ಬಾಲಕನನ್ನು ಕರೆದು ಆತನಿಗೆ ಕೌನ್ಸಿಲಿಂಗ್ ಮಾಡಿದ್ದಾರೆ. ನಂತರ ತಮ್ಮ ವಾಹನದಲ್ಲಿಯೇ ಆತನನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾರೆ.

    ಪೊಲೀಸರು ಅಪ್ರಾಪ್ತ ಬಾಲಕನಿಗೆ ಕೌನ್ಸಿಲಿಂಗ್ ನೀಡಿದ್ದಕ್ಕೆ ಮಕ್ಕಳ ಹಕ್ಕುಗಳ ಸಂಸ್ಥೆ ವಿರೋಧ ವ್ಯಕ್ತಪಡಿಸಿದೆ. ಅವನಿಗೆ ಯಾಕೆ ಶಾಲೆಗೆ ಹೋಗಲು ಇಷ್ಟವಿಲ್ಲ ಹಾಗೂ ಯಾವ ಸಮಸ್ಯೆಗಳನ್ನು ಆತ ಎದುರಿಸುತ್ತಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಸಬೇಕಿತ್ತು. ಆದರೆ ಈ ಘಟನೆ ದೌರ್ಜನ್ಯವೆಸಗಿದಂತಿದೆ. ಇದೊಂದು ಗಂಭೀರ ವಿಚಾರವಾಗಿದೆ. ರಾಜ್ಯದಲ್ಲಿ ಇದು 2ನೇ ಘಟನೆಯಾಗಿದ್ದು, ಇದು ಹೀಗೆ ಮುಂದುವರಿದರೆ ತುಂಬಾ ಅಪಾಯಕಾರಿಯಾಗಲಿದೆ. ಪೊಲೀಸರಿಗೆ ಮಕ್ಕಳ ಸಮಸ್ಯೆಗಳು ಗೊತ್ತಿರುತ್ತದೆ. ಹೀಗಾಗಿ ಅವರು ಇಂತಹ ವಿಚಾರಗಳು ಬಂದಾಗ ವೃತ್ತಿಪರರ ಸಹಾಯ ಪಡೆದುಕೊಳ್ಳಬೇಕು ಎಂದು ಬಲಾಲ ಹಕ್ಕು ಸಂಘಂನ ಕಾರ್ಯಕರ್ತ ಅಚ್ಚಯು ರಾವ್ ತಿಳಿಸಿದ್ದಾರೆ.

  • ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    ಹೈದರಾಬಾದ್: ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನಾಗಿ ಮಿಂಚಿದ್ದ ರಾಣಾ ದಗ್ಗುಬಾಟಿಗೆ ಅವರ ತಾಯಿಯೇ ಕಿಡ್ನಿ ದಾನ ಮಾಡಿದ್ದಾರೆ.

    ತೆಲುಗು ಮಾತ್ರವಲ್ಲದೆ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ರಾಣಾ ದಗ್ಗುಬಾಟಿ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದ್ ಮತ್ತು ಮುಂಬೈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಚಿಕಾಗೋಗೆ ತನ್ನ ಕುಟುಂಬಸ್ಥರೊಂದಿಗೆ ತೆರಳಿದ್ದರು.

    ಕಿಡ್ನಿ ಸಮಸ್ಯೆ ಇರುವ ಕಾರಣ ರಾಣಾ ದಗ್ಗುಬಾಟಿ ಗೆ ಕಿಡ್ನಿ ಕಸಿ ಅಗತ್ಯವಿದ್ದು ಅವರ ತಾಯಿ ಲಕ್ಷ್ಮಿ ಅವರೇ ಮೂತ್ರಪಿಂಡ ದಾನಕ್ಕೆ ಮುಂದಾಗಿದ್ದಾರೆ. ಸದ್ಯ ರಾಣಾ ಅವರ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ರಾಣಾ ಅವರು ಅಪಾಯದಿಂದ ಪಾರಾಗಿರುವುದರಿಂದ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ರಾಣಾ ಅವರು ಸರಿ ಸುಮಾರು 1 ತಿಂಗಳು ವಿಶ್ರಾಂತಿಯಲ್ಲಿರಬೇಕಾಗುತ್ತದೆ. ಹೀಗಾಗಿ ಅವರು ಸೆಪ್ಟೆಂಬರ್ ನಿಂದ ಮತ್ತೆ ಶೂಟಿಂಗ್ ನಲ್ಲಿ ತೊಡಗಿಕೊಳ್ಳಲಿದ್ದಾರೆ. ವೇಣು ಉಡುಗಲ ಅವರ ನಿರ್ದೇಶನದ `ವಿರಾಟ ಪರ್ವಂ’ ಚಿತ್ರದಲ್ಲಿ ರಾಣಾ ಅಭಿನಯಿಸುತ್ತಿದ್ದಾರೆ.

  • ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಅಮ್ಮನಾಗುತ್ತಿರುವ ಸಂತಸ ರಿವೀಲ್ ಮಾಡಿದ ಶ್ವೇತಾ ಚಂಗಪ್ಪ

    ಬೆಂಗಳೂರು: ಮಜಾ ಟಾಕೀಸ್ ಖ್ಯಾತಿಯ ಶ್ವೇತಾ ಚಂಗಪ್ಪ ಅವರು ಅಮ್ಮ ಆಗುತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಪತಿಯೊಂದಿಗೆ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿರುವ ಅವರು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

    ಕಿರುತೆರೆಯಲ್ಲಿ ಸಾಕಷ್ಟು ಹೆಸರು ಪಡೆದಿರುವ ಶ್ವೇತಾ ಚಂಗಪ್ಪ ‘ಮಜಾ ಟಾಕೀಸ್’ ಕಾರ್ಯಕ್ರಮದ ರಾಣಿ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ. ಸದ್ಯ ಶೋದಿಂದ ಬ್ರೇಕ್ ಪಡೆದಿರುವ ಶ್ವೇತಾ ಅಮ್ಮನಾಗುತ್ತಿರುವ ಹರ್ಷದಲ್ಲಿದ್ದಾರೆ. ಇಂದು ಶ್ವೇತಾ ಚಂಗಪ್ಪ ಅವರ ಪತಿಯ ಹುಟ್ಟುಹಬ್ಬದ ವಿಶೇಷವಾಗಿ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಮಾಹಿತಿ ನೀಡಿ ಆರ್ಶೀವಾದ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ಅಮ್ಮನಾಗುತ್ತಿರುವ ಸಂತಸದ ಬೇಬಿ ಬಂಪ್‍ನ ಫೋಟೋ ಶೂಟ್ ನಡೆಸಿದ್ದಾರೆ.

    ಮೂಲತಃ ಕೊಡಗಿನವರಾದ ಶ್ವೇತಾ ಅವರು ಕಿರಣ್ ಅಪ್ಪಚ್ಚು ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಿರ್ದೇಶಕ ಎಸ್. ನಾರಾಯಣ್ ಅವರ ‘ಸುಮತಿ’ ಧಾರಾವಾಹಿ ಮೂಲಕ ಕಿರುತೆರೆಗೆ ಪಾರ್ದಾಪಣೆ ಮಾಡಿದ ಅವರು, ಯಾರಿಗುಂಟು ಯಾರಿಗಿಲ್ಲ ಎಂಬ ಕಾರ್ಯಕ್ರಮದ ನಿರೂಪನೆಯನ್ನು ಮಾಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಸೀಸನ್ 2ರಲ್ಲೂ ಭಾಗವಹಿಸಿದ್ದರು. ವರ್ಷ, ತಂಗಿಗಾಗಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇವರಿಗೆ 2013ರ ಕರ್ನಾಟಕ ಸರ್ಕಾರ ನೀಡುವ ಮಾಧ್ಯಮ ಸನ್ಮಾನ ಪ್ರಶಸ್ತಿಯೂ ಲಭಿಸಿದೆ.

     

    View this post on Instagram

     

    Hi my dear friends ❣️I’m very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade????. U guys have LIKED ME, LOVED ME,n BLESSED ME for the kind of roles I have been doing in the television & cinemas???????? on this SPECIAL DAY being my HUSBAND’S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A “MOTHER”???? With the BLESSINGS of GOD, Me and My Hubby are gonna welcome our BUNDLE OF JOY very soon???? Need all your BEST WISHES and BLESSINGS to us and our family???? like u guys have always shown????????. LOVE YOU All????????. Photography-@aashish__photography ography. thank u soo much aashish for the beautiful pics.im happy that my first ever maternity shoot is done by u???? Makeup and hair- @karishmauthappa_makeup p. Karishma u rock girl…. amazing job. Love u???? Outfit- @paramparika_vastra . U guys are too good. And made my outfit look really cute and beautiful on pics ???? Tiyara- @sscreations719 ons719 thank u guys for the lovely tiyara which is adding it’s magic for these pics????. Love u all guys????. #happy #goodnews @bangalore_times #maternity #journey #godsgift #blessed????. #lovemylife #loveuzindagi,????

    A post shared by Swetha Changappa (@swethachangappa) on

  • ತಾಯಿ ಜೊತೆ ಸಲ್ಮಾನ್ ಖಾನ್ ಡ್ಯಾನ್ಸ್ – ವಿಡಿಯೋ ನೋಡಿ

    ತಾಯಿ ಜೊತೆ ಸಲ್ಮಾನ್ ಖಾನ್ ಡ್ಯಾನ್ಸ್ – ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ಬಾಯಿ ಜಾನ್ ಸಲ್ಮಾನ್ ಖಾನ್ ತಮ್ಮ ತಾಯಿ ಸಲ್ಮಾ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ತಮ್ಮ ತಾಯಿಯ ಜೊತೆ ಅವರ ಮನೆಯಲ್ಲಿ ಇಂಗ್ಲಿಷ್ ಗೀತೆಗೆ ಹೆಜ್ಜೆ ಹಾಕಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾಯಿಗೆ ತಕ್ಕಂತೆ ಸಲ್ಮಾನ್ ಖಾನ್ ಹೆಜ್ಜೆ ಹಾಕಿದ್ದಾರೆ.

    https://www.instagram.com/p/B0NphR1FQ-r/?utm_source=ig_embed&utm_campaign=embed_video_watch_again

    ತಾಯಿ ಸಲ್ಮಾ ಅವರು ವಿಡಿಯೋ ಮಾಡುತ್ತಿರುವ ವ್ಯಕ್ತಿಗೆ ವಿಡಿಯೋವನ್ನು ಮಾಡಬೇಡ ಎಂದು ಹೇಳುತ್ತಿರುವುದು ಕಂಡುಬಂದಿದೆ. ವಿಡಿಯೋ ಹಾಕಿರುವ ಸಲ್ಮಾನ್ ಖಾನ್ ಅಮ್ಮ ವಿಡಿಯೋ ಮಾಡುವುದನ್ನು ಬಂದ್ ಮಾಡಿ ಡ್ಯಾನ್ಸ್ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಸಲ್ಮಾನ್ ಖಾನ್ ಅವರು ಅವರ ತಾಯಿಯನ್ನು ತುಂಬಾ ಇಷ್ಟಪಡುತ್ತಾರೆ. ಈ ಹಿಂದೆ ಫಬ್ರವರಿಯಲ್ಲಿ ಸಲ್ಮಾನ್ ಖಾನ್ ಅವರು ತಮ್ಮ ತಾಯಿಗೆ ಐಷಾರಾಮಿ ಕಾರನ್ನು ಖರೀದಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://www.instagram.com/p/BztSlvyFWLx/?utm_source=ig_embed

    ಪ್ರಸ್ತುತ ಸಲ್ಮಾನ್ ಖಾನ್ ಅವರು ಪ್ರಭುದೇವ ನಿರ್ದೇಶನದ ದಬಾಂಗ್-3 ನಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಸಲ್ಮಾನ್ ಖಾನ್ ಅವರು, ಊರ್ವಶಿ ಊರ್ವಶಿ ಎಂಬ ಹಾಡಿಗೆ ಕನ್ನಡದ ನಟ ಕಿಚ್ಚ ಸುದೀಪ್, ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋವನ್ನು ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

  • ತಾಯಿಯನ್ನು ಹುಡುಕಿಕೊಂಡು ಜರ್ಮನಿಯಿಂದ ಬಂದ ಮಗಳು

    ತಾಯಿಯನ್ನು ಹುಡುಕಿಕೊಂಡು ಜರ್ಮನಿಯಿಂದ ಬಂದ ಮಗಳು

    – 10 ವರ್ಷಗಳಿಂದ ತಾಯಿಗಾಗಿ ಹುಡುಕಾಟ

    ರಾಯಚೂರು: ಕರಳು ಸಂಬಂಧ ಅದರಲ್ಲೂ ತಾಯಿ ಮಗಳ ಸಂಬಂಧ ಅಷ್ಟು ಸುಲಭಕ್ಕೆ ಒಂದೇ ಮಾತಿನಲ್ಲಿ ಹೇಳಿ ಮುಗಿಸುವಂತದ್ದಲ್ಲ. ಹೌದು ಎಲ್ಲಿಯ ಜರ್ಮನ್ ಎಲ್ಲಿಯ ರಾಯಚೂರು. ಜರ್ಮನ್ ಮಹಿಳೆಯೊಬ್ಬರು ಭಾರತದ ತಾಯಿಯನ್ನ ಕಳೆದ 10 ವರ್ಷಗಳಿಂದ ಹುಡುಕುತ್ತಿದ್ದಾರೆ.

    ‘ಭಾರತದಲ್ಲಿ ಮಹಿಳೆಯರು’ ಎನ್ನುವ ವಿಷಯದ ಮೇಲೆ ಸಂಶೋಧನೆ ಮಾಡಿ ಪಿಎಚ್‍ಡಿ ಪಡೆದಿರುವ ಜರ್ಮನ್ ದೇಶದ ಡಾ.ಮರಿಯಾ ಛಾಯ ಸೂಪ್ ತಮ್ಮ ತಾಯಿ ಗಿರಿಜಾ ಗಾಣಿಗರನ್ನ ಹುಡುಕುತ್ತಲೇ ಇದ್ದಾರೆ. ಆದರೆ ತಾಯಿ ಎಲ್ಲಿದ್ದಾಳೆ ಎನ್ನುವ ಸುಳಿವು ಮಾತ್ರ ಸಿಕ್ಕಿಲ್ಲ.

    ಮಂಗಳೂರಿನ ಉಲ್ಲಾಳದಲ್ಲಿ ಮರಿಯಾ ಹುಟ್ಟಿದ್ದಾರೆ. ಆದರೆ ಬಡತನ ಕಾರಣದಿಂದ ತಾಯಿ ಗಿರಿಜಾ ಅವರು ಮಾರಿಯಾ 6 ವರ್ಷದವರಿದ್ದಾಗಲೇ 1981ರಲ್ಲಿ ಜರ್ಮನ್ ದಂಪತಿಗಳಿಗೆ ದತ್ತು ನೀಡಿದ್ದರು. ಉಲ್ಲಾಳ ಕಾನ್ವೆಂಟ್‍ನಲ್ಲಿ ಓದುತ್ತಿದ್ದ ಮಗಳ ಉತ್ತಮ ಭವಿಷ್ಯಕ್ಕಾಗಿ ಮಗಳನ್ನು ತಾಯಿ ದೂರ ಮಾಡಿಕೊಂಡಿದ್ದರು. ಜರ್ಮನ್‍ನಲ್ಲಿ ಚೆನ್ನಾಗಿ ಓದಿ ಶಿಕ್ಷಕಿಯಾಗಿರುವ ಮರಿಯಾ ಛಾಯಾ ಈಗ ತನ್ನ ತಾಯಿಯನ್ನ ನೋಡುವ ಹಂಬಲದಿಂದ ಹುಡುಕಾಟ ನಡೆಸಿದ್ದಾರೆ.

    ಮಂಗಳೂರಿನಲ್ಲಿ ತಾಯಿಯ ಕೆಲವು ಸಂಬಂಧಿಕರು ಇದ್ದರೂ ಯಾರಿಗೂ ಗಿರಿಜಾ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ದತ್ತು ನೀಡಲು ಸಹಾಯ ಮಾಡಿದ ಉಲ್ಲಾಳದ ನಿರ್ಮಲಾ ವೆಲ್ ಫೆರ್ ಸೆಂಟರ್ ನಲ್ಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ತಾಯಿಯನ್ನು ಹುಡುಕಲು ಸಹಾಯ ಕೇಳಿ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುವ ಮರಿಯಾ ಹುಡುಕಾಟವನ್ನು ಮುಂದುವರಿಸಿದ್ದಾರೆ. ಊರು ಊರುಗಳನ್ನು ಅಲೆದು ಈಗ ರಾಯಚೂರಿಗೆ ಬಂದಿದ್ದಾರೆ.

    ತಾಯಿಯ ಪರಿಚಯಸ್ಥರೊಬ್ಬರು ಗಿರಿಜಾ ಈ ಹಿಂದೆಯೇ ರಾಯಚೂರಿಗೆ ಹೋಗಿದ್ದಾರೆ ಎಂದು ಹೇಳಿದ್ದರಂತೆ. ಹೀಗಾಗಿ ಈಗ ಮರಿಯಾ ರಾಯಚೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಕನಿಷ್ಠ ಮಾಧ್ಯಮಗಳ ಮೂಲಕವಾದರೂ ತಾಯಿ ಸಿಗಬಹುದು ಅಂತ ನಂಬಿಕೆಯಿಟ್ಟುಕೊಂಡಿದ್ದಾರೆ. ತಾಯಿಯಿಂದ ಆರು ವರ್ಷದವರಿದ್ದಾಗಲೇ ದೂರವಾದರೂ ನೆನಪಿನ ಶಕ್ತಿಯಿಂದ ಗಿರಿಜಾ ಅವರ ಚಿತ್ರ ಬರೆಯಿಸಿ ಹುಡುಕಾಟ ನಡೆಸಿದ್ದಾರೆ. ಸಂಬಂಧಿಕರೊಬ್ಬರಿಂದ ಹಳೆಯ ಫೋಟೋವೂ ಸಿಕ್ಕಿದ್ದು, ಮುಂದೆ ತಾಯಿಯೂ ಸಿಗಬಹುದು ಅಂತ ಮಗಳು ನಂಬಿದ್ದಾರೆ.

    ಯಾವುದೋ ಸಿನಿಮಾ ಕತೆಯಂತೆ ಕಂಡರೂ ಇದು ಕತೆಯಲ್ಲಾ ಖಂಡಿತ ಜೀವನ. ಮರಿಯಾ ಅವರಿಗೆ ತಂದೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ತಾಯಿಯ ಕಷ್ಟ ಅರಿಯುವುದರೊಳಗೆ ಇನ್ನೊಬ್ಬರ ಮಡಿಲು ಸೇರಿದ್ದ ಮಗಳು ಈಗ ಹೆತ್ತಕರುಳನ್ನು ಹುಡುಕುತ್ತಿದೆ.

  • ಪತಿಯನ್ನು ಥಳಿಸಿ ಹೊರಗೆ ಹಾಕಿ 5 ಮಕ್ಕಳ ತಾಯಿ ಮೇಲೆ ಗ್ಯಾಂಗ್‍ರೇಪ್

    ಪತಿಯನ್ನು ಥಳಿಸಿ ಹೊರಗೆ ಹಾಕಿ 5 ಮಕ್ಕಳ ತಾಯಿ ಮೇಲೆ ಗ್ಯಾಂಗ್‍ರೇಪ್

    ಗಾಂಧೀನಗರ: ಪತಿಯನ್ನು ಥಳಿಸಿ ಬಳಿಕ ಮಕ್ಕಳೊಂದಿಗೆ ಆತನನ್ನೂ ಮನೆಯಿಂದ ಹೊರಗೆ ಹಾಕಿ ಮಹಿಳೆಯ ಮೇಲೆ ಆಕೆಯ ಮನೆಯೊಳಗಡೆಯೇ ಗ್ಯಾಂಗ್ ರೇಪ್ ಎಸಗಿದ ಘಟನೆಯೊಂದು ಗುಜರಾತ್ ನಲ್ಲಿ ನಡೆದಿದೆ.

    ಗುಜರಾತ್ ನ ಸಬರಕಾಂತ್ ಜಿಲ್ಲೆಯ ಹಿಮ್ಮತ್ ನಗರ ತಾಲೂಕಿನ ಗಥೋಡಾ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ.

    32 ವರ್ಷದ ಮಹಿಳೆಯ ಮೇಲೆ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಆರೋಪಿಗಳು ಕಾರ್ಮಿಕರಾಗಿದ್ದು, ಅವರ ಹೆಸರು ತಿಳಿದಿಲ್ಲವೆಂದು ಮಹಿಳೆ ಹೇಳಿದ್ದಾರೆ. ಈ ಘಟನೆಯಲ್ಲಿ ಐವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

    ಮಹಿಳೆಯ ಮನೆಯೊಳಗಡೆ ಏಕಾಏಕಿ ನುಗ್ಗಿದ ದುಷ್ಕರ್ಮಿಗಳಿಬ್ಬರು ಪತಿಗೆ ಚೆನ್ನಾಗಿ ಥಳಿಸಿ, ಮಕ್ಕಳೊಂದಿಗೆ ಆತನನ್ನೂ ಮನೆಯಿಂದ ಹೊರಗೆ ಹಾಕಿದ್ದಾರೆ. ಆ ಬಳಿಕ 5 ಮಕ್ಕಳ ತಾಯಿಯ ಮೇಲೆ ಇಬ್ಬರು ಅತ್ಯಾಚಾರವೆಸಗಿದ್ದಾರೆ. ಉಳಿದ ಮೂವರು ಮನೆಯ ಹೊರಗಡೆ ಕಾಯುತ್ತಾ ನಿಂತಿದ್ದರು ಎಂದು ಹಿಮ್ಮತ್ ನಗರದ ಹಿರಿಯ ಪೊಲೀಸ್ ಅಧಿಕಾರಿ ಎಚ್ ಡಿ ಧಂಧಾಲಿಯಾ ತಿಳಿಸಿದ್ದಾರೆ.

    ಕಾರಿನಲ್ಲಿ ಬಂದಿರುವ ಆರೋಪಿಗಳು ಮೊದಲು ಮನೆಯ ಬಾಗಿಲು ತಟ್ಟಿದ್ದಾರೆ. ಈ ವೇಳೆ ನಾನು ಬಾಗಿಲು ತೆರೆದೆ. ಆಗ ಅವರು ನಮ್ಮ ಕಾರು ತುಂಬಾ ಬೆಚ್ಚಗಾಗಿದೆ, ಹೀಗಾಗಿ ಸ್ವಲ್ಪ ನೀರು ಕೊಡಿ ಎಂದು ಹೇಳಿದ್ದಾರೆ. ನಾನು ನೀರು ತರಲು ಒಳಗಡೆ ಹೋಗುತ್ತಿದ್ದಂತೆಯೇ ಅವರು ಏಕಾಏಕಿ ಮನೆಯೊಳಗಡೆ ನುಗ್ಗಿ ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

    ಘಟನೆ ಸಂಬಂಧ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ ಸಂತ್ರಸ್ತೆ ನೀಡಿದ ಮಾಹಿತಿಯಂತೆ ಕಾರಿನ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಆರೋಪಿಗಳ ಪತ್ತೆಗೆ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

    ತಾಯಿಯಿಂದ್ಲೇ ಮಗಳ ಅಪಹರಣಕ್ಕೆ ಯತ್ನ

    ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಎಂಬಲ್ಲಿ ತಾಯಿಯೇ ತನ್ನ ಸ್ವಂತ ಮಗಳನ್ನು ಅಪಹರಣ ಮಾಡಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ತಾನು ಆಯ್ಕೆ ಮಾಡಿಕೊಂಡ ಯುವಕನ ಜೊತೆ ಇತ್ತೀಚೆಗೆ ಮಗಳು ಮದುವೆ ಮಾಡಿಕೊಂಡಿದ್ದಳು. ಈ ಮದುವೆಗೆ ತಾಯಿಯ ವಿರೋಧವಿತ್ತು. ಮದುವೆಯಾದ ಬಳಿಕ ತನ್ನ ಪತಿ ಜೊತೆ ಮಗಳು ತನ್ನ ತಾಯಿ ಮನೆಗೆ ಬಂದಿದ್ದಾಳೆ. ಈ ವೇಳೆ, ತಾಯಿ ಅಳಿಯನ ವಿರುದ್ಧ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಮಗಳ ಮದುವೆಗೆ ತಾಯಿಯ ವಿರೋಧವಿತ್ತು. ಹೀಗಾಗಿ ಕಿರುಕುಳ ನೀಡಿರುವ ಆರೋಪದ ಮೇಲೆ ಅಳಿಯನ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿದ್ದೇವೆ. ಆದರೆ ಇಂದು ಜೋಡಿ ಮತ್ತೊಂದು ವಿಚಿತ್ರ ವಿಷಯವನ್ನಿಟ್ಟುಕೊಂಡು ಬಂದಿದ್ದಾರೆ. ತಾಯಿ ನನ್ನನ್ನು ಅಪಹರಣ ಮಾಡಲು ಯತ್ನಿಸಿದ್ದಾಳೆ ಎಂದು ಜೋಡಿ ಪೊಲೀಸ್ ಠಾಣೆಗೆ ಬಂದಿದೆ. ಈ ಸಂಬಂಧವೂ ಕ್ರಮ ಕೈಗೊಂಡಿರುವುದಾಗಿ ಎಎಸ್‍ಪಿ ಮಧುಬಾನ್ ಸಿಂಗ್ ಹೇಳಿದ್ದಾರೆ.

    ಇಬ್ಬರು ವ್ಯಕ್ತಿಗಳೊಂದಿಗೆ ಬಂದ ನನ್ನ ತಾಯಿ ಹಾಗೂ ಸಹೋದರಿ ನನ್ನನ್ನು ಎಳೆದು ಕಾರಿನೊಳಗೆ ಹಾಕಲು ಯತ್ನಿಸಿದ್ದಾರೆ. ಆದರೆ ಇದನ್ನು ನಾನು ವಿರೋಧಿಸಿದ್ದೇನೆ. ನನ್ನ ಮದುವೆಗೆ ತಾಯಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ನಾನು ಓಡಿ ಹೋಗಿ ಮದುವೆಯಾಗಿದ್ದೇನೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.