Tag: mother

  • ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಮಗಳನ್ನು ಶಾಲೆಗೆ ಸೇರಿಸಿದ್ರೆ ಹೊಡೆಯುತ್ತೇನೆ – ಮನವಿ ಮಾಡಿದ್ದ ಶಿಕ್ಷಕಿಯರಿಗೆ ತಾಯಿ ಅವಾಜ್

    ಹುಬ್ಬಳ್ಳಿ: ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕಳುಹಿಸಿ ಎಂದು ಪೋಷಕರ ಬಳಿ ವಿನಂತಿ ಮಾಡಿದ ಶಿಕ್ಷಕಿಯರಿಗೆ ತಾಯಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೇಶದ ಪ್ರತಿಯೊಂದು ಮಗು ಶಿಕ್ಷಣ ಪಡೆಯಬೇಕು ಎಂದು ಸರ್ಕಾರ ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮವನ್ನು ಮಾಡಿದೆ. ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಎಂದು ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ತಕ್ಕಂತೆ ಶಿಕ್ಷಕರು ಮಕ್ಕಳನ್ನು ಶಾಲೆಯತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಹೀಗೆ ಶಾಲೆ ಬಿಟ್ಟಿದ್ದ ವಿದ್ಯಾರ್ಥಿನಿಯನ್ನು ಮರಳಿ ಶಾಲೆಗೆ ಕರೆಯಲು ಹೋದ ಶಿಕ್ಷಕಿಯರಿಗೆ ಕಹಿ ಅನುಭವವಾಗಿದೆ.

    ಪಾಲಕರ ನಿಷ್ಕಾಳಜಿಯಿಂದಾಗಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಇದು ಉತ್ತರ ಕರ್ನಾಟಕ ಭಾಗದಲ್ಲಿ ನಡೆದ ಘಟನೆಯ ವಿಡಿಯೋ ಆಗಿದ್ದು, ನಡೆದಿದ್ದು ಎಲ್ಲಿ? ಯಾವ ಜಿಲ್ಲೆ ಎನ್ನುವ ಖಚಿತ ಮಾಹಿತಿ ದೊರಕಿಲ್ಲ. ಆದ್ರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ವಿಡಿಯೋದಲ್ಲಿ ತಾಯಿಯೊಬ್ಬರು ಮಗಳನ್ನು ಶಾಲೆಗೆ ಕರೆದೊಯ್ಯಲು ಬಂದಿದ್ದ ಶಿಕ್ಷಕಿಯರಿಗೆ ಹಿಗ್ಗಾಮುಗ್ಗಾ ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿದ್ದಾರೆ. ಅಲ್ಲದೆ ಸುಮ್ಮನೆ ಹೋಗಿ, ಶಾಲೆ ಕಲಿಯದಿದ್ದರೆ ಏನಾಗುತ್ತೆ? ನನ್ನ ಮಗಳನ್ನು ನಾನು ಶಾಲೆಗೆ ಕಳುಹಿಸಲ್ಲ. ಏನು ಜೈಲಿಗೆ ಹಾಕ್ಕುತ್ತೀರಾ ಎಂದು ಪ್ರಶ್ನಿಸಿ, ಶಿಕ್ಷಕರಿಗೆ ಹೊಡೆಯುವುದಾಗಿ ಅವಾಜ್ ಹಾಕಿದ್ದಾರೆ.

    ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು ಎಂಬ ಸದುದ್ದೇಶದಿಂದ ಶಿಕ್ಷಕಿಯರು ಪರಿಪರಿಯಾಗಿ ತಾಯಿಯನ್ನು ಅಂಗಲಾಚಿದರೂ ಕೂಡ ಆ ತಾಯಿ ಯಾವುದೇ ಕಾರಣಕ್ಕೂ ನನ್ನ ಮಗಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಶಿಕ್ಷಕರಿಗೆ ಬಾಯಿಗೆ ಬಂದ ಹಾಗೆ ನಿಂದಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  • ಗೋಡೆ ಕುಸಿದು 1 ವರ್ಷದ ಮಗು ಸೇರಿ ತಾಯಿ ಸಾವು

    ಗೋಡೆ ಕುಸಿದು 1 ವರ್ಷದ ಮಗು ಸೇರಿ ತಾಯಿ ಸಾವು

    ದಾವಣಗೆರೆ: ಮನೆಯ ಗೋಡೆ ಕುಸಿದ ಪರಿಣಾಮ ಒಂದು ವರ್ಷದ ಮಗು ಸೇರಿ ತಾಯಿ ಸಾವನ್ನಪ್ಪಿರುವ ಘಟನೆ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ವೇಳೆ ನಿದ್ರಿಸುತ್ತಿದ್ದಾಗ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆ ಕುಸಿದ ಪರಿಣಾಮ 30 ವರ್ಷದ ತಾಯಿ ಉಮಾ ಮತ್ತು ಅವರ ಮಗ ಧನುಷ್ ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ತಾಯಿ ಮಗುವಿನ ಮೇಲೆ ಗೋಡೆ ಕುಸಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಇಂಥ ಅಪ್ಪ ಇನ್ಯಾರಿಗೂ ಸಿಗದಿರಲಿ – ತಾಯಿ ಜೊತೆಗೆ ಇಬ್ಬರು ಮಕ್ಕಳು ಆತ್ಮಹತ್ಯೆ

    ಇಂಥ ಅಪ್ಪ ಇನ್ಯಾರಿಗೂ ಸಿಗದಿರಲಿ – ತಾಯಿ ಜೊತೆಗೆ ಇಬ್ಬರು ಮಕ್ಕಳು ಆತ್ಮಹತ್ಯೆ

    ಬೆಂಗಳೂರು: ಅಪ್ಪನ ವರ್ತನೆ ಸರಿ ಇಲ್ಲ ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿ ತಾಯಿ ಹಾಗೂ ಇಬ್ಬರು ಮಕ್ಕಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ.

    ರಾಜೇಶ್ವರಿ, ಮಾನಸ ಹಾಗೂ ಭೂಮಿಕ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಕ್ಕಳು. ಮೂಲತಃ ಮಂಡ್ಯದವರಾದ ರಾಜೇಶ್ವರಿ 18 ವರ್ಷಗಳ ಹಿಂದೆ ಸಿದ್ದಯ್ಯ ಎಂಬವನನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದರು. ಸಿದ್ದಯ್ಯನಿಗೆ ಅನುಕಂಪದ ಅಧಾರದಲ್ಲಿ ಕೆಇಬಿಯಲ್ಲಿ ಕೆಲಸ ಸಿಕ್ಕಿತ್ತು. ಆಗ ಸಿದ್ದಯ್ಯನ ಸಂಸಾರದಲ್ಲಿ ಬಿರುಕು ಶುರುವಾಗಿದೆ. ಸಿದ್ದಯ್ಯ ಈ ವಯಸ್ಸಿನಲ್ಲೂ, ಹೆಣ್ಣಿನ ಶೋಕಿಗೆ ಬಿದ್ದಿದ್ದನು. ಇದೇ ವಿಚಾರವಾಗಿ ಸಂಸಾರದಲ್ಲಿ ಪದೇ ಪದೇ ಜಗಳವಾಗುತ್ತಿತ್ತು.

    ಅಲ್ಲದೆ ಎದೆಯೆತ್ತರಕ್ಕೆ ಬೆಳೆದಿರುವ ಇಬ್ಬರು ಹೆಣ್ಣು ಮಕ್ಕಳ ಮುಂದೆಯೇ ಪತಿ-ಪತ್ನಿ ಜಗಳವಾಡುತ್ತಿದ್ದರು. ವರಮಹಾಲಕ್ಷ್ನೀ ಹಬ್ಬಕ್ಕೆ ಮನೆಗೆ ಬಾರದ ಪತಿ, ಬೇರೊಂದು ಹೆಣ್ಣಿನ ಜೊತೆ ಟ್ರಿಪ್ ಹೋಗಿದ್ದನು. ಇದರಿಂದ ತೀವ್ರವಾಗಿ ಬೇಸತ್ತ ಮೂವರು ಆತ್ಮಹತ್ಯೆಗೆ ನಿರ್ಧರಿಸಿದ್ದರು. ಮಗಳು ಭೂಮಿಕ, “ಎಲ್ಲರಿಗೂ ಒಳ್ಳೆಯ ತಂದೆ ಸಿಗಬೇಕು. ನಮ್ಮ ಜೀವನನ ಹಾಳು ಮಾಡಿಬಿಟ್ಟ. ನಮ್ಮ ಸಾವಿಗೆ ಸಿದ್ದನೇ ಕಾರಣ” ಎಂದು ವಾಟ್ಸಾಪ್‍ನಲ್ಲಿ ಸ್ಟೇಟಸ್ ಹಾಕಿಕೊಂಡಳು. ಬಳಿಕ ರಾತ್ರಿ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಆರೋಪಿ ಸಿದ್ದಯ್ಯ ತಮಿಳುನಾಡಿನ ಕಡೆಗೆ ಟ್ರಿಪ್ ಹೋಗಿದ್ದು, ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

     

  • ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ಮಗನ ಕಣ್ಣೆದುರೇ ಮಣ್ಣಿನಡಿ ಸಿಲುಕಿದ ತಾಯಿ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

    ತಿರುವನಂತಪುರಂ: ಕೇರಳದ ಮಲಪ್ಪುರಂ ಪ್ರದೇಶದಲ್ಲಿ ಉಂಟಾದ ಗುಡ್ಡ ಕುಸಿತದಲ್ಲಿ ವ್ಯಕ್ತಿಯೊಬ್ಬರು ಕೆಲವೇ ಇಂಚುಗಳ ಅಂತರದಿಂದ ಸಾವಿನಿಂದ ಪಾರಾಗಿದ್ದು, ಇದೇ ಸಂದರ್ಭದಲ್ಲಿ ಆತನ ತಾಯಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.

    ಸ್ಥಳಿ ಮಾಧ್ಯಮದ ವರದಿಯ ಅನ್ವಯ ಘಟನೆ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಗುಡ್ಡ ಕುಸಿತ ಭಯಾನಕ ದೃಶ್ಯಗಳನ್ನು ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿ ತನ್ನ ಅಮ್ಮನಿಗೆ ಮಣ್ಣು ಕುಸಿತ ಬಗ್ಗೆ ಅನುಮಾನಗೊಂಡು ಎಚ್ಚರಿಕೆ ನೀಡಲು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣು ಏಕಾಏಕಿ ಮನೆಯತ್ತ ಹರಿದು ಬಂದಿದೆ.

    ಮಣ್ಣು ಕುಸಿಯುತ್ತಿರುವುದು ಅವರ ಅರಿವಿಗೆ ಬರುವುದೊಳಗೆ ಇಡೀ ಗುಡ್ಡ ಮನೆಯ ಮೇಲೆ ಕುಸಿದಿದೆ. ಕಳೆದ 3 ದಿನಗಳ ಅವಧಿಯಲ್ಲಿ 40 ಮಂದಿ ಮಹಾಮಳೆಗೆ ಕೇರಳದಲ್ಲಿ ಬಲಿಯಾಗಿದ್ದು, 1 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.

    ವಯನಾಡು ಮತ್ತು ಮಲಪ್ಪುರಂ ಬಳಿ ಕಳೆದ 2 ದಿನದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಪ್ರಕರಣಗಳು ನಡೆದಿದೆ. ಸಿಎಂ ಪಿಣರಾಯಿ ವಿಜಯನ್ ಅವರು ಅಧಿಕೃತವಾಗಿ ನೀಡಿರುವ ಮಾಹಿತಿಯ ಅನ್ವಯ 40ಕ್ಕೂ ಹೆಚ್ಚು ಮಂದಿ ಮಣ್ಣಿನ ಅಡಿ ಸಿಲುಕಿಕೊಂಡಿದ್ದು, 3 ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಡೆದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ. ಕೇರಳದಲ್ಲಿ ನೀಡಲಾಗಿದ್ದ ರೆಡ್ ಅಲರ್ಟನ್ನು ಮುಂದುವರಿಸಲಾಗಿದ್ದು, ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಪ್ರವಾಹಕ್ಕೆ ಸಿಲುಕಿರುವ, ಗುಡ್ಡ ಕುಸಿತ ಸಂಭವಿಸಬಹುದಾದ ಪ್ರದೇಶ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿರುವುದರಿಂದ ಹಲವು ಮಂದಿ ಸ್ವಯಂ ಪ್ರೇರಿತವಾಗಿ ನಿವಾಸಿಗಳು ಭಾರೀ ಮಳೆಯಿಂದ ಕೇರಳದಲ್ಲಿ ರೈಲ್ವೇ ಸೇವೆ ಕೂಡ ಬಂದ್ ಆಗಿದೆ.

  • ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಪತಿಯ ಮೇಲಿನ ಕೋಪಕ್ಕೆ ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆಗೈದ ತಾಯಿ

    ಬೆಂಗಳೂರು: ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಸಂಪ್‍ಗೆ ತಳ್ಳಿ ಕೊಲೆ ಮಾಡಿದ ಮನಕಲುಕುವ ಘಟನೆ ಆನೇಕಲ್ ತಾಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

    ಚಂದನ್(7) ಹಾಗೂ ಯುವರಾಣಿ(5) ತಾಯಿಯ ಕೃತ್ಯಕ್ಕೆ ಬಲಿಯಾದ ಮಕ್ಕಳು. ಮುನಿರತ್ನಮ್ಮ ಎಸಗಿದ ತಾಯಿ. ಮುನಿರಾಜು ಹಾಗೂ ಮುನಿರತ್ನಮ್ಮ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ನಿತ್ಯವೂ ಸಣ್ಣ ಪುಟ್ಟ ವಿಚಾರಕ್ಕೆ ಇಬ್ಬರು ಜಗಳವಾಡುತ್ತಿದ್ದರು.

    ಕೌಟುಂಬಿಕ ಕಲಹದ ಹಿನ್ನೆಲೆ ಮುನಿರತ್ನಮ್ಮ ಗುರುವಾರ ಯಾರು ಮನೆಯಲ್ಲಿ ಇಲ್ಲದಿದ್ದಾಗ ಮಕ್ಕಳನ್ನು ಮನೆಯ ಮುಂದಿನ ಸಂಪ್‍ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನು ಕೂಡ ಸಂಪ್‍ನಲ್ಲಿ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ ಸಂಪ್‍ನಲ್ಲಿ ನೀರು ಕಡಿಮೆ ಇದ್ದಿದ್ದರಿಂದ ಮೇಲೆ ಬಂದು ಮನೆಯಲ್ಲಿ ನೇಣು ಹಾಕಿಕೊಳ್ಳಲು ಮುಂದಾಗಿದ್ದಳು. ಇದನ್ನು ನೋಡಿದ ಸ್ಥಳೀಯರು ಮುನಿರತ್ನಮ್ಮಳನ್ನು ರಕ್ಷಣೆ ಮಾಡಿದ್ದಾರೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೋಲಿಸರು, ದಂಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹದಿಂದ ಮನನೊಂದು, ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಗಿ ಮುನಿರತ್ನಮ್ಮ ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾಳೆ.

  • ಅನೈತಿಕ ಸಂಬಂಧಕ್ಕಾಗಿ ಒಂದೂವರೆ ವರ್ಷದ ಮಗುವನ್ನೇ ಕೊಂದ ತಾಯಿ

    ಅನೈತಿಕ ಸಂಬಂಧಕ್ಕಾಗಿ ಒಂದೂವರೆ ವರ್ಷದ ಮಗುವನ್ನೇ ಕೊಂದ ತಾಯಿ

    ಚೆನ್ನೈ: ತಾಯಿಯೊಬ್ಬಳು ಅನೈತಿಕ ಸಂಬಂಧಕ್ಕಾಗಿ ತನ್ನ ಒಂದೂವರೆ ವರ್ಷದ ಮಗುವನ್ನು ಕೊಲೆ ಮಾಡಿದ ಘಟನೆ ತಮಿಳು ನಾಡಿನ ನೆಲೈನಲ್ಲಿ ನಡೆದಿದೆ.

    ವದಕಾಶಿ (35) ಮಗುವನ್ನು ಕೊಲೆ ಮಾಡಿದ ತಾಯಿ. ವದಕಾಶಿ ತಿರುವೆಂಕಟಂನ ಪಾಲಂಗಿಟಿಯ ನಿವಾಸಿಯಾಗಿರುವ ರಾಜ್ ಎಂಬವರನ್ನು ಮದುವೆಯಾಗಿದ್ದಳು. ವದಕಾಶಿಗೆ ಬೇರೆ ವ್ಯಕ್ತಿ ಜೊತೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಆಕೆ ತನ್ನ ಒಂದೂವರೆ ವರ್ಷದ ಮಗ ತನೀಶ್ ಪ್ರಭಾಕರನ್‍ನನ್ನು ಕೊಲೆ ಮಾಡಿದ್ದಾಳೆ.

    ತನ್ನ ಮನೆಗೆ ಹಾಲು ವಿತರಿಸುತ್ತಿದ್ದ ಸ್ವಾಮಿನಾಥನ್ ಜೊತೆ ವದಕಾಶಿಗೆ ಅನೈತಿಕ ಸಂಬಂಧ ಇತ್ತು. ಈ ವಿಷಯ ವದಕಾಶಿ ಪತಿ ರಾಜ್‍ಗೆ ತಿಳಿಯಿತು. ಆಗ ವದಕಾಶಿ ಮಗ ತನೀಶ್‍ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಇದರಿಂದ ಭಯಗೊಂಡ ರಾಜ್ ತನ್ನ ಮಗನನ್ನು ಚಿಕ್ಕಪ್ಪನ ಮನೆಗೆ ಕಳುಹಿಸಿದ್ದನು.

    ಸೋಮವಾರ ವದಕಾಶಿ ತನ್ನ ಮಗನನ್ನು ನೋಡಲು ಕೋವಿಲ್ಪಟ್ಟಿಗೆ ಹೋಗಿದ್ದಳು. ಬಳಿಕ ತನ್ನ ಮಗನನ್ನು ಸ್ವಾಮಿನಾಥನ್ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಯೇ ವಾಸಿಸುತ್ತಿದ್ದಳು. ಈ ವೇಳೆ ತನೀಶ್ ಹೊಟ್ಟೆ ಹಸಿವು ತಾಳಲಾರದೇ ಅಳಲು ಶುರು ಮಾಡಿದ್ದನು. ಆಗ ವದಕಾಶಿ ಹಾಗೂ ಸ್ವಾಮಿನಾಥನ್ ಆತನನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.

    ತನೀಶ್ ತೀವ್ರವಾಗಿ ಹಲ್ಲೆಗೆ ಒಳಗಾದಾಗ ವದಕಾಶಿ ಹಾಗೂ ಸೋಮನಾಥನ್ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲೇ ತನೀಶ್ ಮೃತಪಟ್ಟಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ವದಕಾಶಿ ಹಾಗೂ ಸ್ವಾಮಿನಾಥನ್ ಇಬ್ಬರು ಸೇರಿ ಮಗುವನ್ನು ಕೊಲೆ ಮಾಡಿದ್ದಾರೆ ಎಂಬ ವಿಷಯ ಬಹಿರಂಗವಾಯಿತು.

  • ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಪ್ರಕರಣ – ಪತಿಯ ಬಂಧನ

    ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಪ್ರಕರಣ – ಪತಿಯ ಬಂಧನ

    ಬೆಂಗಳೂರು: 7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.

    ಆಗಸ್ಟ್ 4ರಂದು ಜ್ಯೋತಿ ತನ್ನ 7 ವರ್ಷದ ಮಗಳನ್ನು ಕೊಲೆ ಮಾಡಿ ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಾಡೆಲ್ ಆಗಿರುವ ಜ್ಯೋತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದಳು.

    ವಿಡಿಯೋದಲ್ಲಿ ಜ್ಯೋತಿ, ತನ್ನ ಗಂಡ ನನ್ನ ಮೇಲೆ ಕೀಳಾಗಿ ಸಂಶಯಿಸುತ್ತಾನೆ. ಅಲ್ಲದೆ ತನ್ನ ಶೀಲದ ಬಗ್ಗೆ ಸಂಶಯ ಮಾಡಿ ಜಗಳವಾಡುತ್ತಾನೆ. ಇದೇ ವಿಚಾರಕ್ಕೆ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಳು.

    ಈ ವಿಡಿಯೋ ನೋಡಿದ ಜ್ಯೋತಿ ಸಹೋದರ ಪ್ರಶಾಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಜ್ಯೋತಿಯ ಪತಿ ಪಂಕಜ್ ವಿರುದ್ಧ ದೂರು ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಏನಿದು ಘಟನೆ?
    ಜ್ಯೋತಿ ಭಾನುವಾರ ತನ್ನ ಮಗಳನ್ನು ಕೊಲೆ ಮಾಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಜ್ಯೋತಿ ಕಳೆದ 10 ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು. ಇದರಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಳು.

  • ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ: ಶ್ರೀರಾಮುಲು

    ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ: ಶ್ರೀರಾಮುಲು

    ಬೆಂಗಳೂರು: ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ ಎಂದು ಮೊಳಕಾಲ್ಮೂರು ಶಾಸಕರಾದ ಶ್ರೀರಾಮುಲು ಅವರು ಪತ್ರ ಬರೆಯುವ ಮೂಲಕ ಮಾಜಿ ವಿದೇಶಾಂಗ ಸಚಿವೆ, ಹಿರಿಯ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಶ್ರೀರಾಮುಲು ಅವರು ಪತ್ರದಲ್ಲಿ, ಸುಷ್ಮಾ ಸ್ವರಾಜ್ ಇಂದು ನಮ್ಮೊಂದಿಗೆ ಇಲ್ಲ. ಅವರ ಅಗಲಿಕೆ ನಮ್ಮನ್ನು ಅನಾಥರನ್ನಾಗಿದೆ. ಇಷ್ಟು ಬೇಗ ಸುಷ್ಮಾ ಅವರು ನಮ್ಮನ್ನು ಅಗಲಿ ಹೋಗುತ್ತಾರೆ ಎಂದು ಊಹಿಸಿರಲಿಲ್ಲ. ಬಳ್ಳಾರಿಗೂ ಸುಷ್ಮಾ ಅವರಿಗೂ ಅವಿನಾಭಾವ ಸಂಬಂಧ ಇದೆ. ನಮ್ಮನ್ನು ಅವರು ತಮ್ಮ ಮಕ್ಕಳಂತೆ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ತಾಯಿ ಅವರು. ನಾವು ಇಂದು ತಾಯಿಯನ್ನು ಕಳೆದುಕೊಂಡ ಮಕ್ಕಳಾಗಿದ್ದೇವೆ. ಗೌರಿ ಹಬ್ಬ, ವರಮಹಾಲಕ್ಷ್ಮೀ ಹಬ್ಬ ಬಂತು ಎಂದರೆ ಬಳ್ಳಾರಿಯಲ್ಲಿ ಸಡಗರ ಶುರುವಾಗುತ್ತಿತ್ತು. ಇಡೀ ಬಳ್ಳಾರಿಯ ಜನ ಅವರನ್ನು ಅಮ್ಮ ಎಂದೇ ಕರೆಯುತ್ತಿದ್ದರು. ಅವರಿಗೂ ಬಳ್ಳಾರಿ ನೆಲದ ಮೇಲೆ ಅಗಾಧ ಪ್ರೀತಿ ಇತ್ತು. ಬಳ್ಳಾರಿಯಲ್ಲಿ ಎಷ್ಟೋ ಬಾರಿ ಅವರು ಕನ್ನಡದಲ್ಲಿ ಭಾಷಣ ಮಾಡಿದ್ದು, ಇದೆ. ಇಂದು ನಮ್ಮ ಮನೆ ಅಮ್ಮನಿಲ್ಲದ ಮನೆಯಂತಾಗಿದೆ.

    ನಾವು ರಾಜಕಾರಣಿಗಳ ಮಕ್ಕಳಲ್ಲ. ನಾವು ರಾಜಕೀಯ ಪ್ರವೇಶಕ್ಕೆ ಸುಷ್ಮಾ ಸ್ವರಾಜ್ ಅವರೇ ಕಾರಣ. ನಮ್ಮ ಸೇವೆ ಸಮಾಜಕ್ಕೆ ಬಹಳ ಇದೆ ಎಂದು ಅವರು ಅರಿವು ಮೂಡಿಸಿ ರಾಜಕಾರಣಕ್ಕೆ ನಮ್ಮನ್ನು ರಾಜಕರಾಣಕ್ಕೆ ತಂದವರು. ಹಾಗಾಗಿ ಸಾಮಾನ್ಯ ಕುಟುಂಬದಲ್ಲಿ ಬೆಳೆದ ನಾವು ಇಂದು ಅವರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದ್ದೇವು. ಅವರ ಪ್ರೀತಿ, ವಾತ್ಸಲ್ಯವನ್ನು ಉಸಿರು ಇರುವ ತನಕ ಮರೆತುವ ಹಾಗಿಲ್ಲ. ಅಲ್ಲದೆ ಸುಷ್ಮಾ ಅವರು ಬಳ್ಳಾರಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧೆ ಕೂಡ ಮಾಡಿದ್ದರು ಎಂದರು.

    ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಫೋಟ, ಕೊಯ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸಿಲುಕಿಕೊಂಡಾಗ ತಾಯಿ ಸುಷ್ಮಾ ಸ್ವರಾಜ್ ಕನ್ನಡಿಗರಂತೆಯೆ ಮಿಡಿದರು. ಪಾಕಿಸ್ತಾನದ ಅಧ್ಯಕ್ಷರಾಗಿದ್ದಾಗ ಮುಷರಫ್ ಅವರನ್ನು ಕೂಡ ತಣ್ಣಗಾಗಿದ್ದ ಗಟ್ಟಿಗಿತ್ತಿ ನಮ್ಮ ಸುಷ್ಮಾ ತಾಯಿ. ಹಿಂದೂ ಮುಸ್ಲಿಂ ಎಲ್ಲರನ್ನು ಭಾವೈಕ್ಯತೆ ಸಾರುತ್ತಿದ್ದವರು. ಇಂದಿರಾ ಗಾಂಧಿ ನಂತರ ನಮ್ಮ ಸುಷ್ಮಾ ಅಮ್ಮ ವಿದೇಶಾಂಗ ಸಚಿವೆಯಾಗಿದ್ದವರು. ವಿದೇಶಾಂಗ ಸಚಿವೆಯಾಗಿದ್ದಾಗ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದ ಅವರಿಗೆ ಇಡೀ ವಿಶ್ವವೇ ಬೆಂಬಲವಾಗಿ ನಿಂತಿತ್ತು. ವಿಶ್ವಸಂಸ್ಥೆಯಲ್ಲಿ ಕೂಡ ಅವರು ಭಯೋತ್ಪಾದನೆ ವಿರುದ್ಧ ಗುಡುಗಿದ್ದರು.

    ಸುಷ್ಮಾ ಅವರ ವಾತ್ಸಲ್ಯದ ಹೃದಯದಿಂದಲೇ ‘ಸೂಪರ್ ಮಾಮ್ ಆಫ್ ಇಂಡಿಯಾ’ ಎಂಬ ಬಿರುದು ಪಡೆದಿದ್ದರು. ಅಂತ ವಾತ್ಸಲ್ಯಮಯಿ ಇಂದು ನಮ್ಮನ್ನು ಅಗಲಿದ್ದಾರೆ. ಅವರನ್ನು ಕಳೆದುಕೊಂಡ ನಾವು ಇಂದು ಅನಾಥ ಮಕ್ಕಳಂತೆ ಆಗಿದ್ದೇವೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಬರಿಸುವ ಶಕ್ತಿ ನೀಡಲಿ. ಅವರನ್ನು ಕಳೆದುಕೊಂಡ ನಾವು ಇಂದು ತಬ್ಬಲಿಗಳಾಗಿದ್ದೇವೆ. ನಾವು ಹೇಳೋದು ಒಂದೇ ನಮ್ಮ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಅಮ್ಮ ಮತ್ತೆ ಹುಟ್ಟಿ ಬರಲಿ ಎಂದು ಬೇಡಿಕೊಳ್ತೀನಿ.

  • 7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

    7 ವರ್ಷದ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ

    ಬೆಂಗಳೂರು: ಏಳು ವರ್ಷ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ ನಡೆದಿದೆ.

    ಜ್ಯೋತಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಜ್ಯೋತಿ ಕಳೆದ 10 ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು.

    ಕೌಟುಂಬಿಕ ಕಲಹದಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಈ ಬಗ್ಗೆ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಂದಮ್ಮಗಳನ್ನ ನೀರಿನಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

    ಕಂದಮ್ಮಗಳನ್ನ ನೀರಿನಲ್ಲಿ ಮುಳುಗಿಸಿ ತಾಯಿಯೂ ಆತ್ಮಹತ್ಯೆ

    ಬಳ್ಳಾರಿ: ಕೌಟುಂಬಿಕ ಕಲಹದಿಂದ ಮಕ್ಕಳಿಬ್ಬರಿಗೆ ವಿಷ ಕುಡಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ತಾಯಿ ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಳ್ಳಾರಿಯ ಮೇದರಾಕೇತಯ್ಯ ನಗರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ ತನ್ನ ಮಕ್ಕಳಿಬ್ಬರನ್ನು ನೀರಿನಲ್ಲಿ ಮುಳುಗಿಸಿ ಕೊಂದು ತಾನೂ ಕೂಡ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಬಳ್ಳಾರಿಯ ಮೇದಾರಕೇತಯ್ಯ ನಗರ ನಿವಾಸಿ ಲಕ್ಷ್ಮೀ ತಮ್ಮ ಇಬ್ಬರು ಮಕ್ಕಳಾದ ಮೂರು ವರ್ಷದ ಮಗು ಉದಯ್ ಹಾಗೂ ಒಂದೂವರೆ ವರ್ಷದ ಭೂಮಿಕಾಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಬಳಿಕ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮಾಹಿತಿ ತಿಳಿದು ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ನಡೆಯುವ ಮುನ್ನ ಜಿಲ್ಲೆಯ ಕುರುಗೋಡು ತಾಲೂಕಿನ ಹಳೆ ನೆಲ್ಲೂಡಿ ಗ್ರಾಮದಲ್ಲಿ ತಾಯಿ ಮಕ್ಕಳಿಬ್ಬರಿಗೆ ವಿಷ ಕುಡಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಘಟನೆಯಲ್ಲಿ ತಾಯಿ ಮತ್ತು ಒಬ್ಬ ಮಗಳು ಮೃತಪಟ್ಟಿದ್ದು, ಮತ್ತೋರ್ವ ಮಗಳು ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.