Tag: mother

  • ಅಮ್ಮನ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ

    ಅಮ್ಮನ ಮೇಣದ ಪ್ರತಿಮೆ ನಿರ್ಮಿಸಿದ ಪುತ್ರ

    ಬೆಂಗಳೂರು: ಇಂದಿನ ಕಾಲದಲ್ಲಿ ಹೆತ್ತವರು ಮಕ್ಕಳಿಗೆ ಹೊರೆಯಾಗಿ ಬಿಡುತ್ತಾರೆ. ಕೆಲವರು ಪೋಷಕರಿಂದ ಆಸ್ತಿ ಬರೆಸಿಕೊಂಡು ಹೊರ ಹಾಕುವ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಹಲವರು ಪೋಷಕರನ್ನು ನೋಡಿಕೊಳ್ಳಲಾಗದೇ ವೃದ್ಧಾಶ್ರಮಕ್ಕೆ ಸೇರಿಸಿ ಒಂದಿಷ್ಟು ಹಣ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿರುವ ಉದ್ಯಮಿಯೊಬ್ಬರು ಅಮ್ಮನ ನೆನಪಿಗಾಗಿ 2.5 ಲಕ್ಷ ರೂ. ಖರ್ಚು ಮಾಡಿ ಮೇಣದ ಪ್ರತಿಮೆಯನ್ನ ಮಾಡಿಸಿದ್ದಾರೆ.

    ಬೆಂಗಳೂರಿನ ನಿವಾಸಿಯಾಗಿರವ ಉದ್ಯಮಿ ವೆಂಕಟೇಶ್ ತಾಯಿಯ ಪ್ರತಿಮೆ ಮಾಡಿಸುವ ಮೂಲಕ ಪುತ್ರ ಪ್ರೇಮ ಮೆರೆದಿದ್ದಾರೆ. ಒಂದು ವರ್ಷದ ಹಿಂದೆ ವೆಂಕಟೇಶ್ ಅವರ ತಾಯಿ ಮನೋರಾಮ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ತಾಯಿಯ ವೈಕುಂಠ ಸಮಾರಾಧನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ 1,500ಕ್ಕೂ ಹೆಚ್ಚು ಪುರೋಹಿತರನ್ನು ಕರೆಸಿ ಮಂತ್ರ ಪಠಣೆ ಮಾಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಸಾವಿರ ಮುತ್ತೈದೆಯರು ಭಾಗಿಯಾಗಿದ್ದು ಮತ್ತೊಂದು ವಿಶೇಷ.

    ಇಷ್ಟಲ್ಲದೇ 2.5 ಲಕ್ಷ ರೂ. ವೆಚ್ಚ ಮಾಡಿ 5 ಅಡಿ ಎತ್ತರದ ಮೇಣದ ಪ್ರತಿಮೆಯನ್ನು ಸಹ ಮಾಡಿಸಿದ್ದಾರೆ. ಮನೋರಮಾ ಅವರು ಧರಿಸುತ್ತಿದ್ದ ಚಿನ್ನದ ಬಳೆ, ಕಾಟನ್ ಸೀರೆ, ನೀಲಿ ಶಾಲು, ಕನ್ನಡಕ, ದಿಂಬು ಸೇರಿದಂತೆ ಅವರೊಂದಿಗೆ ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಸಾಕ್ಷಚಿತ್ರದ ಮೂಲಕ ಸೆರೆ ಹಿಡಿದಿದ್ದಾರೆ. ವೆಂಕಟೇಶ್ ಅವರ ಪುತ್ರ ಪ್ರೇಮಕ್ಕೆ ಕುಟುಂಬಸ್ಥರು ಮತ್ತು ಸ್ನೇಹಿತ ವರ್ಗ ಮೆಚ್ಚುಗೆ ಸೂಚಿಸಿದ್ದಾರೆ.

  • ತಾಯಿಯನ್ನು ಕೊಂದು ಮೆದುಳು ಫ್ರೈ ಮಾಡಿದ ಪಾಪಿ ಮಗ

    ತಾಯಿಯನ್ನು ಕೊಂದು ಮೆದುಳು ಫ್ರೈ ಮಾಡಿದ ಪಾಪಿ ಮಗ

    ರಾಯ್‍ಪುರ: ಕುಡಿಯುವುದಕ್ಕೆ ಹಣ ನೀಡಲಿಲ್ಲ ಎಂದು ಪಾಪಿ ಮಗನೊಬ್ಬ ತಾಯಿಯನ್ನು ಕೊಲೆ ಮಾಡಿ ಆಕೆಯ ಮೆದುಳನ್ನು ಫ್ರೈ ಮಾಡಿದ ಘನಘೋರ ಘಟನೆ ಛತ್ತೀಸ್‍ಗಢದ ಖಾರ್ಸಿ ಜಿಲ್ಲೆಯಲ್ಲಿ ನಡೆದಿದೆ.

    ಸೀತಾರಾಮ್ ಒರಾನ್ ತಾಯಿಯನ್ನು ಕೊಂದ ಮಗ. ಸೀತಾರಾಮ್ ತನ್ನ ತಾಯಿ ಫುಲೋಬಾಯಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ಕುಡಿತದ ಚಟಕ್ಕೆ ಬಲಿಯಾಗಿದ್ದನು. ಸೀತಾರಾಮ್ ಮದ್ಯ ಸೇವಿಸಲು ತನ್ನ ತಾಯಿಯ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ಕೊಡಲು ನಿರಾಕರಿಸಿದ್ದರು.

    ತಾಯಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಸೀತಾರಾಮ್ ಹರಿತವಾದ ವಸ್ತುವಿನಿಂದ ತನ್ನ ತಾಯಿಗೆ ಹೊಡೆದಿದ್ದಾನೆ. ನಂತರ ಆಕೆಯ ತಲೆ ಬುರುಡೆಯನ್ನು ತೆರೆದು ಮೆದುಳನ್ನು ಫ್ರೈ ಮಾಡಲು ಹಾಕಿದ್ದಾನೆ. ಆದರೆ ಸೀತಾರಾಮ್ ಆ ಮೆದುಳನ್ನು ತಿನ್ನುವ ಮೊದಲು ಅವರ ಕಿರಿಯ ಸಹೋದರನ ಪತ್ನಿ ಸ್ಥಳಕ್ಕೆ ಬಂದಿದ್ದಾರೆ. ಸಹೋದರನ ಪತ್ನಿಯನ್ನು ನೋಡುತ್ತಿದ್ದಂತೆ ಸೀತಾರಾಮ್ ಸ್ಥಳದಿಂದ ಪರಾರಿ ಆಗಿದ್ದಾನೆ.

    ಸೀತಾರಾಮ್ ಕೃತ್ಯ ನೋಡಿದ ಮಹಿಳೆ ತನ್ನ ಪತಿಗೆ ಅತ್ತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಹುಡುಕಾಡಲು ಶುರು ಮಾಡಿದ್ದಾರೆ. ಈ ವೇಳೆ ಸೀತಾರಾಮ್ ರಕ್ತ ಆಗಿರುವ ಬಟ್ಟೆಯಲ್ಲೇ ಯಾವುದೋ ಪ್ರದೇಶದಲ್ಲಿ ಅಡಗಿಕೊಂಡಿದ್ದನು. ಬಳಿಕ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಆತ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಸದ್ಯ ಪೊಲೀಸರು ಸೀತಾರಾಮ್ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಸೀತಾರಾಮ್ ಕಿರಿಯ ಸಹೋದರ ಆತನನ್ನು ಮದ್ಯ ಸೇವಿಸಬೇಡ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಈ ವಿಷಯಕ್ಕಾಗಿ ಸೀತಾರಾಮ್ ತನ್ನ ಸಹೋದರನ ಬಳಿ ಜಗಳವಾಡುತ್ತಿದ್ದನು. ಹಾಗಾಗಿ ಕಿರಿಯ ಸಹೋದರ ಆ ಮನೆಯಿಂದ ಹೊರಗೆ ಬಂದು ಬೇರೆ ಮನೆಯಲ್ಲಿ ವಾಸಿಸುತ್ತಿದ್ದನು. ಅಲ್ಲದೆ ತನ್ನ ತಾಯಿಯನ್ನು ಸೀತಾರಾಮ್ ಜೊತೆಯಲ್ಲಿ ಬಿಟ್ಟು ಹೋಗಿದ್ದರು.

  • ತಾಯಿಯನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿ ಲಂಡನ್ ಸುತ್ತಾಡಿಸಿದ ಅಕ್ಷಯ್: ವಿಡಿಯೋ

    ತಾಯಿಯನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿ ಲಂಡನ್ ಸುತ್ತಾಡಿಸಿದ ಅಕ್ಷಯ್: ವಿಡಿಯೋ

    ಲಂಡನ್: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರು ತಮ್ಮ ತಾಯಿಯನ್ನು ವ್ಹೀಲ್ ಚೇರ್‌ನಲ್ಲಿ ಕೂರಿಸಿ ಲಂಡನ್ ಸುತ್ತಾಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಸಂದೇಶವನ್ನು ನೀಡಿದ್ದಾರೆ.

    ಅಕ್ಷಯ್ ಕುಮಾರ್ ತಮ್ಮ ತಾಯಿ ಅರುಣಾ ಭಾಟಿಯಾ ಅವರ ಜೊತೆ ಕಾಲ ಕಳೆದಿದ್ದಾರೆ. ಈ ವಿಡಿಯೋದಲ್ಲಿ ಅಕ್ಷಯ್ ತಮ್ಮ ತಾಯಿ ಕುಳಿತಿರುವ ವ್ಹೀಲ್ ಚೇರ್‌ ತಳ್ಳುತ್ತಾ ಅವರ ಜೊತೆ ಮಾತನಾಡುತ್ತಾ ಹೋಗುತ್ತಿದ್ದಾರೆ.

    ವಿಡಿಯೋ ಹಾಕಿ ಅಕ್ಷಯ್ ಅದಕ್ಕೆ, “ಅಮ್ಮನ ಜೊತೆ ಸಮಯ ಕಳೆಯಲು ಶೂಟಿಂಗ್‍ನಿಂದ ಬಿಡುವು ಮಾಡಿಕೊಂಡಿದ್ದೇನೆ. ನೀವು ಎಷ್ಟೇ ಬ್ಯುಸಿಯಿದ್ದರೂ ಹಾಗೂ ಬೆಳೆಯುತ್ತಿದ್ದರೂ, ನಿಮ್ಮ ಪೋಷಕರಿಗೆ ವಯಸ್ಸಾಗುತ್ತಿದೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ಸಾಧ್ಯವಾದಾಗಲೆಲ್ಲಾ ಅವರೊಂದಿಗೆ ಸಮಯ ಕಳೆಯಿರಿ” ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

    ಅಕ್ಷಯ್ ಅವರ ಈ ವಿಡಿಯೋ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. ಅಲ್ಲದೆ ಕಮೆಂಟ್ ಮಾಡುವ ಮೂಲಕ ಅಕ್ಷಯ್ ಅವರನ್ನು ಹೊಗಳುತ್ತಿದ್ದಾರೆ. ಈ ಪೋಸ್ಟ್ ಗೆ ನಟಿ, ಅಕ್ಷಯ್ ಅವರ ಪತ್ನಿ ಟ್ವಿಂಕಲ್ ಖನ್ನಾ ಕಿಸ್ ಎಮೋಜಿ ಹಾಕುವ ಮೂಲಕ ಕಮೆಂಟ್ ಮಾಡಿದ್ದಾರೆ.

    ಕೆಲವು ದಿನಗಳ ಹಿಂದೆ ಅಕ್ಷಯ್ ಅವರ ತಾಯಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಆಗಿದೆ. ಅಂತರಾಷ್ಟ್ರೀಯ ಯೋಗ ದಿನದಂದು ಅಕ್ಷಯ್ ಕುಮಾರ್ ಅವರು ತಮ್ಮ ತಾಯಿ ಯೋಗ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು.

  • 4 ತಿಂಗ್ಳ ಹೆಣ್ಣು ಮಗುವನ್ನು ಬೀದಿಯಲ್ಲೇ ಬಿಟ್ಟು ಹೋದ ಕಟುಕ ತಾಯಿ

    4 ತಿಂಗ್ಳ ಹೆಣ್ಣು ಮಗುವನ್ನು ಬೀದಿಯಲ್ಲೇ ಬಿಟ್ಟು ಹೋದ ಕಟುಕ ತಾಯಿ

    ವಿಜಯಪುರ: 4 ತಿಂಗಳ ಪುಟ್ಟ ಕಂದಮ್ಮನನ್ನು ಕಟುಕ ತಾಯಿಯೊಬ್ಬಳು ರಸ್ತೆ ಪಕ್ಕದಲ್ಲೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಗೋಡ್ಯಾಳ್-ಬರಡೋಲ ಗ್ರಾಮದಲ್ಲಿ ನಡೆದಿದೆ.

    ಗೋಡ್ಯಾಳ್-ಬರಡೋಲ ಗ್ರಾಮಗಳ ರಸ್ತೆ ಪಕ್ಕದಲ್ಲಿ ಪುಟ್ಟ ಮಗುವನ್ನು ತಾಯಿ ಬಿಟ್ಟು ಹೋಗಿದ್ದಾಳೆ. ಮಗುವನ್ನು ನೋಡಿದ ಸ್ಥಳೀಯರು ರಕ್ಷಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

    ಮಗುವನ್ನು ರಸ್ತೆಯಲ್ಲಿ ಬಿಟ್ಟು ಹೋಗಿರುವ ತಾಯಿಗೆ ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಗುವನ್ನು ತಾಯಿಯ ಮಡಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

    ಇತ್ತೀಚೆಗೆ ಹೆಣ್ಣು ಶಿಶುವನ್ನು, ಮಗುವನ್ನು ರಸ್ತೆಗಳಲ್ಲಿ, ಕಸದ ಬುಟ್ಟಿಯಲ್ಲಿ ಹೀಗೆ ಹಲವು ಕಡೆಯಲ್ಲಿ ಹೆತ್ತವರು ಬಿಟ್ಟು ಹೋಗಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ಪುಟ್ಟ ಕಂದಮ್ಮಗಳು ಬೀದಿನಾಯಿಗೆ ಆಹಾರವಾಗಿದ್ದೂ ಇದೆ.

  • ಜನ್ಮಾಷ್ಟಮಿ ದಿನ ತಾಯಿ ಹಣ ನೀಡದಕ್ಕೆ ನೇಣಿಗೆ ಶರಣಾದ ಮಗ

    ಜನ್ಮಾಷ್ಟಮಿ ದಿನ ತಾಯಿ ಹಣ ನೀಡದಕ್ಕೆ ನೇಣಿಗೆ ಶರಣಾದ ಮಗ

    ನವದೆಹಲಿ: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಯಿ ಹಣ ನೀಡದ್ದಕ್ಕೆ ಸಿಟ್ಟಾಗಿ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ದೆಹಲಿಯ ಅಮಾನ್ ವಿಹಾರ್ ಪ್ರದೇಶದ ಶನಿವಾರದಂದು ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ನೇಣಿಗೆ ಶರಣಾಗಿದ್ದಾನೆ. ಕೃಷ್ಣ ಜನ್ಮಾಷ್ಟಮಿ ದಿನ ಬಾಲಕ ತಾಯಿ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದಳು. ಇದರಿಂದ ಬಾಲಕ ಕೋಪಗೊಂಡಿದ್ದನು. ನಂತರ ದೇವರ ದರ್ಶನಕ್ಕೆ ದೇವಸ್ಥಾನಕ್ಕೆ ತಾಯಿ ತೆರೆಳುತ್ತಿದ್ದ ವೇಳೆ ಮಗ ಸಿಟ್ಟಿನಿಂದ ಬರುವುದಿಲ್ಲ ಎಂದು ಮನೆಯಲ್ಲೇ ಉಳಿದಿದ್ದನು.

    ಸಿಟ್ಟು ಕಡಿಮೆಯಾದ ಮೇಲೆ ಸರಿಯಾಗುತ್ತಾನೆ ಎಂದು ತಾಯಿ ಅವನನ್ನು ಮನೆಯಲ್ಲಿಯೇ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಮೊದಲೇ ಸಿಟ್ಟಿನಲ್ಲಿದ್ದ ಬಾಲಕನಿಗೆ ಏನು ಆಲೋಚನೆ ಬಂತೋ ಗೊತ್ತಿಲ್ಲ. ಯಾರು ಇಲ್ಲದ ಸಂದರ್ಭದಲ್ಲಿ ಆತ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ದೇವರ ದರ್ಶನ ಮುಗಿಸಿ ಮನೆಗೆ ಬಂದ ತಾಯಿ ಮಗನ ಮೃತದೇಹ ನೋಡಿ ಕಂಗಾಲಾಗಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸೆಲ್ಫಿ ಕ್ಲಿಕ್ಕಿಸಿಕೊಂಡು ಕಪಿಲಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಸೆಲ್ಫಿ ಕ್ಲಿಕ್ಕಿಸಿಕೊಂಡು ಕಪಿಲಾ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

    ಮೈಸೂರು: ಕಪಿಲಾ ನದಿ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಬಳಿಕ ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಂಡಿಪಾಳ್ಯ ಗ್ರಾಮದ ನಿವಾಸಿಗಳಾದ ಮುಂಜುಳಾ(38) ಹಾಗೂ ಸೌಮ್ಯ(19) ಆತ್ಮಹತ್ಯೆ ಮಾಡಿಕೊಂಡವರು. ಮನೆಯವರಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ತಾಯಿ, ಮಗಳು ತೆರಳಿದ್ದರು. ಆದರೆ ನದಿಯ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಂಡ ನಂತರ ನದಿಗೆ ಹಾರಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ತಾಯಿ, ಮಗಳ ಮೃತದೇಹ ನೀರಿನಲ್ಲಿ ತೇಲುತ್ತಿದ್ದುದನ್ನು ನೋಡಿದ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ನದಿಯಿಂದ ಹೊರ ತೆಗೆದಿದ್ದಾರೆ.

    ಸದ್ಯ ತಾಯಿ, ಮಗಳ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ತಾಯಿಯ ಮೇಲೆ ರೇಪ್ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

    ತಾಯಿಯ ಮೇಲೆ ರೇಪ್ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಕೋರ್ಟ್

    ಮುಂಬೈ: ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ 20 ವರ್ಷದ ಆರೋಪಿಯನ್ನು ಮುಂಬೈ ಕೋರ್ಟ್ ಖುಲಾಸೆಗೊಳಿಸಿದೆ.

    ಆರೋಪಿ ತನ್ನ ತಾಯಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಅಷ್ಟೇ ಅಲ್ಲದೆ ಅತ್ಯಾಚಾರವಾಗಿಲ್ಲ ಎಂದು ವೈದ್ಯಕೀಯ ಪರೀಕ್ಷೆಯ ವರದಿಯಲ್ಲೂ ತಿಳಿದು ಬಂದಿದೆ. ಹೀಗಾಗಿ ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ.

    ಏನಿದು ಪ್ರಕರಣ?:
    ಆರೋಪಿಯು ಮದ್ಯ ವ್ಯಸನಿಯಾಗಿದ್ದು 2018ರ ಜನವರಿ 1ರಂದು ಕುಡಿದು ಮನೆಗೆ ಬಂದಿದ್ದ. ಈ ವೇಳೆ ಹಣ ನೀಡುವಂತೆ ನನ್ನ ಮೇಲೆ ಹಲ್ಲೆ ಮಾಡಿದ್ದ ಹಾಗೂ ಅಸಭ್ಯವಾಗಿ ವರ್ತಿಸಿದ್ದ ಎಂದು ತಾಯಿಯು ಪೊಲೀಸರಿಗೆ ದೂರು ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

    ಈ ಹಿಂದೆ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಆರೋಪಿ, ತಾನು ಮದ್ಯದ ಅಮಲಿನಲ್ಲಿ ಹಣ ಕೇಳಿ ತಾಯಿ ಮೇಲೆ ಹಲ್ಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಜೊತೆಗೆ ಕ್ಷಮೆಯಾಚಿಸಿದ್ದ. ಅಲ್ಲದೆ ತಾನು ತಾನು ತಾಯಿ ಮೇಲೆ ಅತ್ಯಾಚಾರ ಎಸಗುವ ನೀಚ ವ್ಯಕ್ತಿಯಲ್ಲ ಎಂದು ಹೇಳಿದ್ದ.

  • ಬಾರದ ಅಂಬುಲೆನ್ಸ್ – ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಬಾರದ ಅಂಬುಲೆನ್ಸ್ – ಹೆದ್ದಾರಿಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಭೋಪಾಲ್: ಅಂಬುಲೆನ್ಸ್ ಬಾರದೇ ಗರ್ಭಿಣಿಯೊಬ್ಬರು ಹೆದ್ದಾರಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಮಧ್ಯಪ್ರದೇಶದ ಬುರ್ಹಾನ್‍ಪುರ್‍ದಲ್ಲಿ ನಡೆದಿದೆ.

    ಕೂಲಿ ಕೆಲಸ ಮಾಡುತ್ತಿದ್ದ ಕಮಲ ಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅಂಬುಲೆನ್ಸ್ ಕಳುಹಿಸಿ ಎಂದು ಕುಟುಂಬದವರು ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಸುಮಾರು ಸಮಯ ಕಳೆದರೂ ಅಂಬುಲೆನ್ಸ್ ಬಾರದ ಕಾರಣ ಕಮಲ ಬಾಯಿ ಪತಿ ತುಂಬು ಗರ್ಭಿಣಿಯನ್ನು ತನ್ನ ಬೈಕಿನ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಹೆದ್ದಾರಿಯಲ್ಲೇ ಕಮಲ ಬಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

    ಹೆರಿಗೆ ನೋವು ಬಂದ ತಕ್ಷಣ ನಾವು ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದೇವೆ ಮತ್ತು ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಕಳುಹಿಸಿ ಎಂದು ಹೇಳಿದ್ದೆವು. ಆದರೆ ಅಂಬುಲೆನ್ಸ್ ಎಷ್ಟು ಹೊತ್ತು ಕಾದರೂ ಬರಲಿಲ್ಲ. ಅದ್ದರಿಂದ ಆಕೆಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದೆವು. ಅ ಸಮಯದಲ್ಲಿ ಅವಳು ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಎಂದು ಕಮಲ ಬಾಯಿ ಅತ್ತೆ ಚಂದ್ರ ಬಾಯಿ ಹೇಳಿದ್ದಾರೆ.

    ತಾಯಿ ಮಗುವನ್ನು ಶಹಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಪರೀಕ್ಷೆ ಮಾಡಿದ ವೈದ್ಯರು ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

  • ಮೊಬೈಲಿನಲ್ಲಿ ಮಾತನಾಡುತ್ತಾ ಮಗುವನ್ನು ಆಟೋದಲ್ಲೇ ಮರೆತ ತಾಯಿ: ವಿಡಿಯೋ

    ಮೊಬೈಲಿನಲ್ಲಿ ಮಾತನಾಡುತ್ತಾ ಮಗುವನ್ನು ಆಟೋದಲ್ಲೇ ಮರೆತ ತಾಯಿ: ವಿಡಿಯೋ

    ಮೊಬೈಲಿನಲ್ಲಿ ಮಾತನಾಡುತ್ತಾ ತಾಯೊಯೊಬ್ಬಳು ತನ್ನ ಮಗುವನ್ನು ಆಟೋದಲ್ಲಿ ಮರೆತು ಹೋದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶುಕ್ರವಾರದಿಂದ ಟ್ವಿಟ್ಟರಿನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. 25 ಸೆಕೆಂಡ್ ಇರುವ ಈ ವಿಡಿಯೋ ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಟ್ವೀಟ್ ಮಾಡಲಾಗಿತ್ತು. ಈ ವಿಡಿಯೋ ಹಾಕಿದ ಒಂದು ಗಂಟೆಯಲ್ಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋದಲ್ಲಿ ಮಹಿಳೆ ಮೊಬೈಲಿನಲ್ಲಿ ಮಾತನಾಡುತ್ತಾ ಮುಂದೆ ಹೋಗುತ್ತಿರುತ್ತಾಳೆ. ಹಿಂದೆ ಆಟೋ ಚಾಲಕ ಮಗುವನ್ನು ಎತ್ತಿಕೊಂಡು ಮಹಿಳೆಯನ್ನು ಕರೆಯುತ್ತಿರುತ್ತಾರೆ. ಚಾಲಕ ಕರೆಯುತ್ತಿರುವುದನ್ನು ಕೇಳಿದ ಮಹಿಳೆ ತಕ್ಷಣ ನಿಂತು ಹಿಂದೆ ತಿರುಗಿದ್ದಾಳೆ. ಈ ವೇಳೆ ಚಾಲಕ ಇದು ನಿಮ್ಮ ಮಗು ತಾನೇ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಹೌದು ಎಂದು ಉತ್ತರಿಸಿದ್ದಾಳೆ.

    ಅಮಿತ್ ಸ್ಮೈಲಿಂಗ್ ಎಂಬವರು ಈ ವಿಡಿಯೋವನ್ನು ಮೊದಲು ಟ್ವೀಟ್ ಮಾಡಿ ಅದಕ್ಕೆ, “ಸಾಮಾನ್ಯವಾಗಿ ಜನರು ಆಟೋದಲ್ಲಿ ತಮ್ಮ ಜೊತೆಯಲ್ಲಿ ಇರುವ ಕೊಡೆ ಅಥವಾ ಬ್ಯಾಗ್ ಮರೆತು ಹೋಗುತ್ತಾರೆ. ಆದರೆ ಈ ಮೆಡೆಮ್ ತಮ್ಮ ಮಗುವನ್ನೇ ಮರೆತು ಹೋಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ಈ ಘಟನೆ ಎಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಚಿತ್ರದ ಅಥವಾ ಜಾಹೀರಾತಿನ ಚಿತ್ರೀಕರಣನಾ ಎಂಬುದರ ಬಗ್ಗೆಯೂ ಸ್ಪಷ್ಟವಾಗಿಲ್ಲ. ಆದರೆ ಟ್ವಿಟ್ಟರಿನಲ್ಲಿ ಈ ವಿಡಿಯೋ ನೋಡಿ ಕೆಲವರು, “ಇದು ಜಾಹೀರಾತಿನ ಶೂಟಿಂಗ್” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಇದು ಫೇಕ್ ವಿಡಿಯೋ” ಎಂದು ಕಮೆಂಟ್ ಮಾಡಿದ್ದಾರೆ.

    https://twitter.com/Amit_smiling/status/1164831756324749313?ref_src=twsrc%5Etfw%7Ctwcamp%5Etweetembed%7Ctwterm%5E1164831756324749313&ref_url=https%3A%2F%2Fnavbharattimes.indiatimes.com%2Fviral-adda%2Fvideo%2Fsocial-masala%2Fwatch-women-forgets-his-child-in-auto-was-busy-talking-on-the-phone-video-goes-viral-28415%2F

  • ನಿಶ್ಚಿತಾರ್ಥ ನಿಲ್ಲಿಸಿ ಬಾಂಗ್ಲಾದಿಂದ ಬೆಂಗ್ಳೂರಿಗೆ ಬಂದು ಮಗಳಿಂದ ತಾಯಿಗೆ ಕಿಡ್ನಿ ದಾನ

    ನಿಶ್ಚಿತಾರ್ಥ ನಿಲ್ಲಿಸಿ ಬಾಂಗ್ಲಾದಿಂದ ಬೆಂಗ್ಳೂರಿಗೆ ಬಂದು ಮಗಳಿಂದ ತಾಯಿಗೆ ಕಿಡ್ನಿ ದಾನ

    ಬೆಂಗಳೂರು: ಇತ್ತೀಚೆಗೆ ಗೆಳೆಯನ ಜೊತೆ ಸೇರಿಕೊಂಡು ಮಗಳೇ ತಂದೆಯನ್ನು ಕೊಲೆ ಮಾಡಿರುವ ಘಟನೆ ನಡೆದಿತ್ತು. ಆದರೆ ಇಲ್ಲೊಬ್ಬ ಮಗಳು ತನ್ನ ತಾಯಿಗಾಗಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಿಲ್ಲಿಸಿ ಬಾಂಗ್ಲಾದೇಶದಿಂದ ನಗರಕ್ಕೆ ಬಂದು ಕಿಡ್ನಿ ದಾನ ಮಾಡಿದ್ದಾಳೆ.

    ಸೊರ್ಬೋಜಯ ಸಿತಿ ದೇಬ್(26) ತಾಯಿಗೆ ಕಿಡ್ನಿ ದಾನ ಮಾಡಿದ ಮಗಳು. ದೇಬ್ ತಾನು ಮದುವೆಯಾಗುವ ಹುಡುಗನ ವಿರೋಧದ ನಡುವೆಯೂ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ತಾಯಿ ಶಿಖಾ ರಾಣಿಗೆ ತನ್ನದೊಂದು ಕಿಡ್ನಿ ದಾನ ಮಾಡಿದ್ದಾಳೆ. ಈ ಮೂಲಕ ತಾಯಿಯ ಪ್ರಾಣ ಉಳಿಸಿದ್ದಾಳೆ. “ತಾಯಿ ಇಲ್ಲದೆ ನನ್ನ ಜೀವನವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲಿಗೆ ಅಮ್ಮ ಇದಕ್ಕೆ ಒಪ್ಪಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಲು ಒಂದು ವರ್ಷ ಬೇಕಾಯಿತು” ಎಂದು ಓಲ್ಡ್ ಏರ್‌ಪೋರ್ಟ್‌ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ತಾಯಿ ಜೊತೆಗೆ ಚೇತರಿಸಿಕೊಳ್ಳುತ್ತಿರುವ ಮಗಳು ವೇಬ್ ತಿಳಿಸಿದ್ದಾಳೆ. ಇದನ್ನೂ ಓದಿ: ತಾಯಿಯಿಂದಲೇ ಮಗ ದಗ್ಗುಬಾಟಿಗೆ ಕಿಡ್ನಿ ದಾನ

    “ನನ್ನ ತಾಯಿ ತಾನು ಕಿಡ್ನಿ ಸಮಸ್ಯೆಯಿಂದ ಸಾಯುತ್ತೇನೆಂದು ನನ್ನ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು. ಆದರೆ ಅವರು ಕಿಡ್ನಿ ಪಡೆಯಲು ಒಪ್ಪಿದ ನಂತರ, ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದ ಹುಡುಗನ ಕುಟುಂಬಕ್ಕೆ ನನ್ನ ನಿರ್ಧಾರವನ್ನು ತಿಳಿಸಿದೆ. ಆದರೆ ಇದಕ್ಕೆ ಅವರು ಒಪ್ಪಲಿಲ್ಲ. ಕೊನೆಗೆ ನಾನು ನಿಶ್ಚಿತಾರ್ಥ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಯಾಕೆಂದರೆ ನನ್ನ ತಾಯಿಗಿಂತ ನನಗೆ ಬೇರೆನೂ ಮುಖ್ಯವಲ್ಲ” ಎಂದು ಹೇಳಿದ್ದಾಳೆ. ಇದನ್ನೂ ಓದಿ: ಈ ತಾಯಿ ತನ್ನ ಮಗಳಿಗಾಗಿ ಮಾಡಿದ ತ್ಯಾಗಕ್ಕೆ ಮಹಿಳಾ ದಿನಾಚರಣೆಯಂದು ಸನ್ಮಾನ

    ಇದೊಂದು ಅಪರೂಪದ ಸಂಗತಿಯಾಗಿದೆ, ಯಾಕೆಂದರೆ ಸಾಮಾನ್ಯವಾಗಿ ಮಹಿಳೆಯರು ತಮ್ಮ ಅಂಗಾಂಗಗಳನ್ನು ದಾನ ಮಾಡುತ್ತಾರೆ. ಆದರೆ ಅವಿವಾಹಿತ ಯುವತಿಯ ಕಿಡ್ನಿ ದಾನಕ್ಕೆ ಒಪ್ಪುವುದಿಲ್ಲ. ಇದರಿಂದ ಭವಿಷ್ಯದಲ್ಲಿ ಅವರ ಆರೋಗ್ಯದ ಪರಿಣಾಮ ಬೀರುತ್ತದೆ ಎಂದು ಯಾರು ಒಪ್ಪುವುದಿಲ್ಲ. ದೇಬ್ ಕಿಡ್ನಿ ದಾನ ಮಾಡಲು ನಿರ್ಧರಿಸಿದಾಗ ಆಕೆಯ ಜೊತೆ ಅನೇಕ ಬಾರಿ ಸಮಾಲೋಚನೆ ನಡೆಸಿದ್ದೇನೆ. ನಂತರ ನಾವು ಕಿಡ್ನಿ ದಾನ ಮಾಡಲು ಒಪ್ಪಿಕೊಳ್ಳಲಾಯಿತು. ಅಂತಹ ಮಗಳನ್ನು ಪಡೆದ ಪೋಷಕರನ್ನು ಅಭಿನಂದಿಸುವುದಾಗಿ ನೆಪ್ರೋಲಾಜಿಸ್ಟ್ ಡಾ. ಶಂಕರನ್ ಸುಂದರ್ ತಿಳಿಸಿದ್ದಾರೆ.

    2015 ರಲ್ಲಿ ಶಿಖಾ ರಾಣಿಗೆ ಬಾಂಗ್ಲಾದೇಶದಲ್ಲಿ ಕಿಡ್ನಿ ಕಾಯಿಲೆ ಕಂಡು ಬಂದಿತ್ತು. ನಂತರ ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ತೋರಿಸಲಾಗಿತ್ತು. ವೈದ್ಯರು ಅವರಿಗೆ ಕಿಡ್ನಿ ಬದಲಾಯಿಸಬೇಕೆಂದು ಸೂಚಿಸಿದ್ದರು. ಆದರೆ ಹಣದ ಕೊರತೆಯಿಂದ ದಾನಿಗಳು ಸಿಗಲಿಲ್ಲ. ಕೊನೆಗೆ 2018 ರಲ್ಲಿ ದಂಪತಿಯ ಕಿರಿಯ ಮಗಳಾದ ವೇಬ್ ಕಿಡ್ನಿಯನ್ನು ದಾನ ಮಾಡಲು ನಿರ್ಧರಿಸಿದ್ದಳು. ಈಗ ತಾಯಿ ಮತ್ತು ಮಗಳು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ.