Tag: mother

  • ಮಗಳಿಂದಲೇ ತಾಯಿಯ ಕೊಲೆಗೆ ರೋಚಕ ಟ್ವಿಸ್ಟ್ – ಶವದ ಮುಂದೆಯೇ ಜೋಡಿಯಿಂದ ಸೆಕ್ಸ್

    ಮಗಳಿಂದಲೇ ತಾಯಿಯ ಕೊಲೆಗೆ ರೋಚಕ ಟ್ವಿಸ್ಟ್ – ಶವದ ಮುಂದೆಯೇ ಜೋಡಿಯಿಂದ ಸೆಕ್ಸ್

    – ಯುವತಿಗೆ ಇಬ್ಬರ ಜೊತೆ ಸ್ನೇಹ
    – ಮದ್ಯ ಕುಡಿಸಿ ಕೊಲೆಗೆ ಪ್ರೇರೇಪಿಸಿದ ಪ್ರಿಯಕರ

    ಹೈದರಾಬಾದ್: ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದು ಬುದ್ಧಿಮಾತು ಹೇಳಿದ ತಾಯಿಯನ್ನೇ ಮಗಳು ಕೊಲೆ ಮಾಡಿದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ತಾಯಿಯನ್ನು ಕೊಲೆ ಮಾಡುವಂತೆ ಯುವತಿಗೆ ಪ್ರಿಯಕರನೇ ಪ್ರೇರೆಪಿಸಿದ್ದನು ಎಂಬುದು ಬಯಲಾಗಿದೆ.

    ಕೀರ್ತಿ ತಾಯಿಯನ್ನೇ ಕೊಲೆ ಮಾಡಿದ ಮಗಳು. ಕೀರ್ತಿ, ಶಶಿಕುಮಾರ್ ಎಂಬವನನ್ನು ಪ್ರೀತಿಸುತ್ತಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೀರ್ತಿ ಹಾಗೂ ಶಶಿಕುಮಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದರು. ಬಳಿಕ ಇಬ್ಬರ ಮೊಬೈಲಿನಲ್ಲಿ ಇದ್ದ ವಿಡಿಯೋ ಹಾಗೂ ವಾಟ್ಸಾಪ್ ಚಾಟಿಂಗ್, ಕಾಲ್ ಡೇಟಾ ಪರಿಶೀಲಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದ ತಾಯಿಯನ್ನೇ ಕೊಂದ್ಳು

    ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿದ:
    ಲಾರಿ ಚಾಲಕನಾಗಿದ್ದ ಕೀರ್ತಿ ತಂದೆ ಮನೆಯಿಂದ ಹೊರಗಡೆಯೇ ಹೆಚ್ಚು ಸಮಯ ಕಳೆಯುತ್ತಿದ್ದನು. ಮನೆಗೆ ಬಂದರೆ ಮದ್ಯ ಸೇವಿಸಿ ತನ್ನ ಪತ್ನಿ ರಜಿತಾ ಜೊತೆ ಜಗಳವಾಡುತ್ತಿದ್ದನು. ಈ ದಂಪತಿಗೆ ಕೀರ್ತಿ ಒಬ್ಬಳೇ ಮಗಳಾಗಿದ್ದು, ಈಕೆ ಬಿ.ಟೆಕ್ ಮುಗಿಸಿದ್ದಳು. ಈ ವೇಳೆ ಕೆಲಸವಿಲ್ಲದೆ ಅಲೆದಾಡುತ್ತಿದ್ದ ಶಶಿಕುಮಾರ್, ಕೀರ್ತಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನು. ಕೀರ್ತಿ, ಶಶಿಕುಮಾರ್‌ನನ್ನು ನಂಬಲು ಶುರು ಮಾಡಿದ್ದಳು. ಇತ್ತ ಶಶಿಕುಮಾರ್ ನನ್ನ ತಂದೆ ಬಳಿ ಕೋಟ್ಯಂತರ ರೂ. ಆಸ್ತಿ ಇದೆ ಎಂದು ಬಿಲ್ಡಪ್ ಕೊಟ್ಟಿದ್ದನು. ಇದನ್ನೆಲ್ಲಾ ಕೇಳಿದ ಕೀರ್ತಿಗೆ ಶಶಿಕುಮಾರ್ ಮೇಲಿದ್ದ ನಂಬಿಕೆ ಹೆಚ್ಚಾಯಿತು. ಬಳಿಕ ಶಶಿಕುಮಾರ್, ಕೀರ್ತಿ ಜೊತೆ ಕಳೆದ ಖಾಸಗಿ ಕ್ಷಣಗಳನ್ನು ಆಕೆಗೆ ತಿಳಿಯದಂತೆ ವಿಡಿಯೋ ಮಾಡುತ್ತಿದ್ದನು.

    ಅಬಾರ್ಷನ್ ಮಾಡಿಸ್ದ:
    ಕೀರ್ತಿ ಗರ್ಭಿಣಿ ಆದಾಗ ಶಶಿಕುಮಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗರ್ಭಪಾತ ಮಾಡಿಸಿದ್ದನು. ಇದಾದ ಬಳಿಕ ಶಶಿಕುಮಾರ್ ತನ್ನ ತಂದೆ-ತಾಯಿ ಬಳಿ ಹೋಗಿ ಕೀರ್ತಿಯನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ಅಲ್ಲದೆ ಆಕೆಯನ್ನೇ ಮದುವೆಯಾಗುವುದಾಗಿ ಹೇಳಿದ್ದಾನೆ. ಆದರೆ ಆತನ ಪೋಷಕರು ಇದಕ್ಕೆ ಒಪ್ಪಲಿಲ್ಲ. ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದನು. ಮಗನ ಹಠದಿಂದ ಬೇಸತ್ತ ಪೋಷಕರು ‘ನಿನಗೆ ಏನು ಬೇಕು ಅದನ್ನು ಮಾಡಿಕೋ’ ಎಂದಿದ್ದಾರೆ. ಹೀಗಾಗಿ ಶಶಿಕುಮಾರ್, ಕೀರ್ತಿ ತಾಯಿಯ ಬಳಿ ಹೋಗಿ ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಹಾಗೂ ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ.

    ಮತ್ತೊಬ್ಬನ ಜೊತೆ ಕೀರ್ತಿ ಮದುವೆ:
    ಶಶಿಕುಮಾರ್ ಮಾತು ಕೇಳಿದ ಕೀರ್ತಿ ತಾಯಿ ರಜಿತಾ, ನನ್ನ ಮಗಳು ಮುಂದೆ ಇನ್ನೂ ಓದುವುದು ಇದೆ ಎಂದು ಹೇಳಿ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ರಜಿತಾ ಮಾತಿನಿಂದ ಶಶಿಕುಮಾರ್ ಕೋಪಗೊಂಡಿದ್ದನು. ಈ ನಡುವೆ ಕೀರ್ತಿ ಮನೆಯ ಹಿಂಬದಿ ರಸ್ತೆಯಲ್ಲಿ ವಾಸಿಸುವ ಬಾಲರೆಡ್ಡಿಯನ್ನು ಪ್ರೀತಿಸುತ್ತಿರುವ ವಿಷಯ ಆಕೆಯ ಪೋಷಕರಿಗೆ ತಿಳಿಯಿತು. ಬಾಲರೆಡ್ಡಿ ಹಾಗೂ ಕೀರ್ತಿ ಪೋಷಕರು ಪರಸ್ಪರ ಮಾತನಾಡಿ ಇಬ್ಬರಿಗೂ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈ ವಿಷಯ ಶಶಿಕುಮಾರ್ ಗೆ ತಿಳಿಯುತ್ತಿದ್ದಂತೆ ಆತ ಕೀರ್ತಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕೊಲೆ ಮಾಡುವ ಬೆದರಿಕೆ ನೀಡಿದಲ್ಲದೆ ಸೆಕ್ಸ್ ವಿಡಿಯೋವನ್ನು ವೈರಲ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿದ್ದಾನೆ.

    ಬ್ಯ್ಲಾಕ್‍ಮೇಲ್:
    ಕೀರ್ತಿ ಮೊದಲಿನಿಂದಲೂ ಶಶಿಕುಮಾರ್‌ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಳು. ಇದರಿಂದ ಕೋಪಗೊಂಡ ಶಶಿಕುಮಾರ್, ಆಕೆ ಮದುವೆಯಾಗುವ ಹುಡುಗ ಬಾಲರೆಡ್ಡಿಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಈ ವಿಷಯವನ್ನು ತಾಯಿಯ ಬಳಿ ಹೇಳಲಾಗದೆ ಕೀರ್ತಿ, ಶಶಿಕುಮಾರ್ ಹೇಳಿದಂತೆ ಮಾಡಲು ಶುರು ಮಾಡಿದ್ದಳು. ಇದೇ ವೇಳೆ ಅಕ್ಟೋಬರ್ 19ರಂದು ಶಶಿಕುಮಾರ್, ಕೀರ್ತಿಗೆ ಮದ್ಯ ಕುಡಿಸಿ ಆಕೆಯ ತಾಯಿಯನ್ನು ಕೊಲೆ ಮಾಡಲು ಪ್ರೇರೇಪಿಸುತ್ತಾನೆ. ಬಳಿಕ ಕೀರ್ತಿ ಚೂಡಿದಾರದ ಶಾಲಿನಿಂದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಕೊಲೆ ಮಾಡಿ ಮೂರು ದಿನಗಳವರೆಗೂ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಇಬ್ಬರು ದೈಹಿಕ ಸಂಪರ್ಕ ಬೆಳೆಸುತ್ತಿದ್ದರು.

    ತಂದೆಗೆ ಅನುಮಾನ:
    ಮೃತದೇಹದ ವಾಸನೆ ಬರುತ್ತಿದ್ದಂತೆ ಮೃತದೇಹವನ್ನು ರಾಮನ್ನಪೇಟೆ ರೈಲ್ವೆ ಹಳಿ ಮೇಲೆ ಎಸೆದಿದ್ದರು. ಇದಾದ ಬಳಿಕ ಶಶಿಕುಮಾರ್ ಹೇಳಿದಂತೆ ಕೀರ್ತಿ ತನ್ನ ತಂದೆ ಬಳಿ ಸುಳ್ಳು ಹೇಳಿ ಪೊಲೀಸ್ ಠಾಣೆಗೆ ಹೋಗಿ ತನ್ನ ತಾಯಿ ಕಾಣೆಯಾಗಿರುವುದಾಗಿ ದೂರು ನೀಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಕೀರ್ತಿ ತಂದೆ ಶ್ರೀನಿವಾಸ್ ರೆಡ್ಡಿ ತಮ್ಮ ಮಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯರು ಶಶಿಕುಮಾರ್ ನೀಡಿದ ಬೆದರಿಕೆ ಬಗ್ಗೆ ಕೀರ್ತಿ ತನ್ನ ತಂದೆ, ತಾಯಿ ಅಥವಾ ಬೇರೆ ಯಾರ ಬಳಿಯಾದರೂ ಹೇಳಿಕೊಂಡಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

  • ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಸಾವು- ತಾಯಿ ಗಂಭೀರ

    ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಸಾವು- ತಾಯಿ ಗಂಭೀರ

    ಬಾಗಲಕೋಟೆ: ಮನೆ ಮೇಲ್ಛಾವಣಿ ಕುಸಿದು 11 ತಿಂಗಳ ಕೂಸು ಮೃತಪಟ್ಟು, ತಾಯಿಗೆ ಗಂಭೀರ ಗಾಯಗಳಾಗಿರುವ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ತಾಲೂಕಿನ ತಮದಡ್ಡಿಯಲ್ಲಿ ನಡೆದಿದೆ.

    ಅಚಲ ಬುಜಬಲಿ ತಿಮ್ಮಣ್ಣವರ ಮೃತ ಬಾಲಕ. ತಮದಡ್ಡಿ ಗ್ರಾಮ ಪ್ರವಾಹಕ್ಕೆ ಸಿಲುಕಿತ್ತು. ಹೀಗಾಗಿ ಮಣ್ಣಿನ ಮನೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಮಗುವಿನ ತಾಯಿ ಅಕ್ಷತಾ ಬುಜಬಲಿ ತಿಮ್ಮಣ್ಣವರ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬುಧವಾರ ರಾತ್ರಿ ಮನೆಯಲ್ಲಿ ನಾಲ್ವರು ಮಲಗಿದ್ದರು. ಬಳಿಕ ಇಂದು ಬೆಳಗ್ಗಿನ ನ ಜಾವ ಸುಮಾರು ನಾಲ್ಕು ಗಂಟೆಗೆ ಇಬ್ಬರು ಎದ್ದು ಹೊರಗಡೆ ಬಂದಿದ್ದರು. ಆದರೆ ತಾಯಿ, ಮಗು ಇನ್ನೂ ಮಲಗಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಮಗು ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿದೆ.

    ಈ ಘಟನೆ ತೇರದಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ: ರಾಕಿಂಗ್ ಸ್ಟಾರ್ ತಾಯಿ

    ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ: ರಾಕಿಂಗ್ ಸ್ಟಾರ್ ತಾಯಿ

    ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಮೊಮ್ಮಗ ಯಶ್‍ನಂತೆಯೇ ಕಾಣುತ್ತಾನೆ ಎಂದು ಹೇಳುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಪ, ಇಂದು ಬೆಳಗ್ಗೆ ರಾಧಿಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. 9 ಗಂಟೆಗೆ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಕರ್ನಾಟಕದ ಜನತೆಯ ಆಶೀರ್ವಾದ ಇಬ್ಬರ ಮೇಲೆ ಹೇಗಿತ್ತೋ, ಹಾಗೆಯೇ ನಮ್ಮ ಮೊಮ್ಮಕ್ಕಳ ಮೇಲೆಯೂ ಇರಲಿ. ಮೊಮ್ಮಗನನ್ನು ನೋಡಿದೆ. ಆತ ಯಶ್‍ನಂತೆಯೇ ಇದ್ದಾನೆ. ಅಮ್ಮ-ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದರು. ಇದನ್ನೂ ಓದಿ: ಎರಡನೇ ಮಗುವಿಗೆ ತಂದೆ-ತಾಯಿಯಾದ ರಾಕಿಂಗ್ ಜೋಡಿ

    ದೇವರ ಆಶೀರ್ವಾದದಿಂದ ಇಂದು ನಾವು ಖುಷಿಯಾಗಿದ್ದೇವೆ. ನನ್ನ ಸೊಸೆ ಕೂಡ ಆರೋಗ್ಯವಾಗಿದ್ದಾಳೆ. ಕರ್ನಾಟಕದ ಜನತೆ ಇಷ್ಟು ದಿನ ಯಶ್ ಹಾಗೂ ರಾಧಿಕಾಳನ್ನು ಹೇಗೆ ಆಶೀರ್ವಾದ ಮಾಡಿದ್ದಾರೋ, ಹಾಗೆ ನನ್ನ ಮೊಮ್ಮಕ್ಕಳಿಗೂ ಆಶೀರ್ವಾದ ಮಾಡಲಿ. ವೈದ್ಯರಿಗೂ ಡೇಟ್ಸ್ ಬಗ್ಗೆ ಕನ್ಫರ್ಮ್ ಇರಲಿಲ್ಲ. ಈ ತಿಂಗಳಿನಲ್ಲಿ ಮಗು ಆಗುತ್ತೆ ಎಂದು ಹೇಳಿದ್ದರು. ಆದರೆ ಇಂದು ಬೆಳಗ್ಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದರು.

    ಐರಾಳನ್ನು ಇಷ್ಟು ಹೊತ್ತು ಎತ್ತುಕೊಂಡಿದ್ದೆವು. ಅವಳು ಕೂಡ ತಮ್ಮನನ್ನು ನೋಡಿ ಖುಷಿಪಡುತ್ತಿದ್ದಾಳೆ. ಡಿಸ್ಚಾರ್ಜ್ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಅದೇನಿದ್ದರೂ ಯಶ್ ನಿರ್ಧಾರ ಮಾಡುತ್ತಾನೆ. ನಾವೇನಿದ್ದರೂ ಬಂದು ಮಗುವನ್ನು ನೋಡಿಕೊಂಡು ಹೋಗುತ್ತೇವೆ. ವೈದ್ಯರು ಇಂದು ಅಥವಾ ನಾಳೆ ಡೆಲಿವರಿ ಆಗುತ್ತೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಹೇಳುವುದಕ್ಕೆ ಆಗಲ್ಲ. ವೈದ್ಯರು ಪ್ರತಿದಿನ ನಮ್ಮ ಸಂಪರ್ಕದಲ್ಲಿದ್ದರು ಎಂದು ಯಶ್ ಅವರ ತಾಯಿ ತಿಳಿಸಿದರು.

     

  • ಡಿಕೆಶಿ ತಾಯಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆ

    ಡಿಕೆಶಿ ತಾಯಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆಯ ಆರೋಪ ಹೊತ್ತಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ತಾಯಿ ಹಾಗೂ ಪತ್ನಿಯ ಅರ್ಜಿ ವಿಚಾರಣೆ ನವೆಂಬರ್ 4ಕ್ಕೆ ಮುಂದೂಡಿಕೆಯಾಗಿದೆ.

    ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ದೆಹಲಿ ಹೈಕೋರ್ಟಿನಲ್ಲಿ ಇಂದು ವಿಚಾರಣೆಗೆ ಬಂದಿತ್ತು. ಹೀಗಾಗಿ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಇದೀಗ ವಿಚಾರಣೆಯನ್ನು ಮುಂದೂಡಿದೆ.

    ವಿಚಾರಣೆಯ ವೇಳೆ ಗೌರಮ್ಮ ಪರ ವಕೀಲರು ಬೆಂಗಳೂರಿನಲ್ಲಿ ವಿಚಾರಣೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಈ ಬಗ್ಗೆ ಜಾರಿ ನಿರ್ದೇಶನಾಲಯ(ಇಡಿ) ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಇದುವರೆಗೂ ಯಾವುದೇ ಸಮನ್ಸ್ ಸಿಕ್ಕಿಲ್ಲ ಎಂದು ಡಿಕೆಶಿ ಪತ್ನಿ, ತಾಯಿ ಗೌರಮ್ಮ ಪರ ವಕೀಲರು ತಿಳಿಸಿದರು. ಈ ವೇಳೆ ಜಡ್ಜ್, ಹೊಸ ಸಮನ್ಸ್ ನೀಡಿ ಎಂದಾಗ ಇಡಿ ಪರ ವಕೀಲರು ಈಗಾಗಲೇ ಸಮನ್ಸ್ ನೀಡಲಾಗಿದ್ದು, ಹೊಸ ಸಮನ್ಸ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ಹಾಗಾದ್ರೆ ಸ್ವಲ್ಪ ಕಾಯಿರಿ. ಸಮನ್ಸ್ ತಲುಪಬಹುದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದು, ವಿಚಾರಣೆ ನ.4ಕ್ಕೆ ಮುಂದೂಡಿದರು.

    ಈ ಹಿಂದೆ ಅಕ್ಟೋಬರ್ 17 ಕ್ಕೆ ವಿಚಾರಣೆ ಬರುವಂತೆ ಡಿಕೆ ತಾಯಿ ಮತ್ತು ಮಡದಿಗೆ ಇಡಿಯಿಂದ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ರದ್ದು ಮಾಡಬೇಕು, ಬೆಂಗಳೂರಿನಲ್ಲಿ ವಿಚಾರಣೆ ನಡೆಸಬೇಕು ಅಂತ ಕೋರಿ ಡಿಕೆಶಿ ಪತ್ನಿ ಮತ್ತು ತಾಯಿ ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಇಂದಿಗೆ ವಿಚಾರಣೆ ನಿಗದಿ ಮಾಡಿತ್ತು. ಅಲ್ಲದೆ 7 ದಿನಗಳ ಕಾಲ ಸಮನ್ಸ್ ನೀಡದಂತೆ ಇಡಿಗೆ ಸೂಚನೆ ನೀಡಿತ್ತು. ಈಗಾಗಲೇ 7 ದಿನ ಕಳೆದಿರುವ ಹಿನ್ನೆಲೆಯಲ್ಲಿ ನಾಳೆ ವಿಚಾರಣೆ ಬನ್ನಿ ಅಂತ ಡಿಕೆ ತಾಯಿ ಮತ್ತು ಮಡದಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.

  • ಹೆತ್ತವಳನ್ನು ಆಸ್ಪತ್ರೆಯಲ್ಲೇ ಬಿಟ್ಟೋದ ಮಗಳು- 15 ದಿನಗಳಿಂದ ಸಿಬ್ಬಂದಿಯೆದುರೇ ನರಳಾಟ!

    ಹೆತ್ತವಳನ್ನು ಆಸ್ಪತ್ರೆಯಲ್ಲೇ ಬಿಟ್ಟೋದ ಮಗಳು- 15 ದಿನಗಳಿಂದ ಸಿಬ್ಬಂದಿಯೆದುರೇ ನರಳಾಟ!

    ಚಿತ್ರದುರ್ಗ: ಕಾಯಿಲೆಗೆ ಚಿಕಿತ್ಸೆ ಕೊಡಿಸುವುದಾಗಿ ಸುಳ್ಳು ಹೇಳಿ ಹೆತ್ತ ತಾಯಿಯನ್ನು ಪಾಪಿ ಮಗಳು-ಅಳಿಯ ಆಸ್ಪತ್ರೆಯಲ್ಲಿಯೇ ಬಿಟ್ಟು ಹೋಗಿದ್ದು, ವೃದ್ಧ ತಾಯಿ ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿರುವ ಮನಕಲಕುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ.

    ಕಾಯಿಲೆಯಿಂದ ಬಳಲುತ್ತಿರುವ ವೃದ್ಧೆ ಪಾಪಮ್ಮ ಅವರನ್ನು ಮಗಳು ಹಾಗೂ ಅಳಿಯ ಆಸ್ಪತ್ರೆಯಲ್ಲೇ ಬಿಟ್ಟು ಕೈತೊಳೆದುಕೊಂಡಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೋರೊಪ್ಪನಹಟ್ಟಿ ಗ್ರಾಮದ ನಿವಾಸಿಯಾಗಿರುವ ಪಾಪಮ್ಮ ಕಾಯಿಲೆಯಿಂದ ಬಳಲುತ್ತಿದ್ದರು. ಇದೇ ನೆಪವನ್ನು ಇಟ್ಟುಕೊಂಡು ನಿಮ್ಮ ಕಾಯಿಲೆಗೆ ಚಿಕಿತ್ಸೆ ಕೊಡಿಸುತ್ತೇವೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಸುಳ್ಳು ಹೇಳಿ ಪಾಪಮ್ಮ ಅವರನ್ನು ಮಗಳು ಮತ್ತು ಅಳಿಯ ನಂಬಿಸಿದ್ದರು. ಇದನ್ನೂ ಓದಿ:ಚಳ್ಳಕೆರೆ ತಾಲೂಕಾಸ್ಪತ್ರೆಯಲ್ಲಿ ಡಾ. ಕಸ ಗುಡಿಸಮ್ಮ – ಡಿ ಗ್ರೂಪ್ ಉದ್ಯೋಗಿ ನೀಡ್ತಾರೆ ಮೆಡಿಸಿನ್

    ಮಗಳು, ಅಳಿಯನನ್ನು ನಂಬಿ ಪಾಪಮ್ಮ ಅವರ ಜೊತೆಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಆದರೆ ಮಗಳು ಮತ್ತು ಅಳಿಯ ತಾಯಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಆಸ್ಪತ್ರೆ ಸಿಬ್ಬಂದಿ ಕೂಡ ವೃದ್ಧೆಗೆ ಚಿಕಿತ್ಸೆ ಕೊಡದೆ ನಿರ್ಲಕ್ಷ್ಯಿಸಿ ಅಮಾನವೀಯತೆ ಪ್ರದರ್ಶಿಸಿದ್ದಾರೆ.

    ಅಷ್ಟೇ ಅಲ್ಲದೆ ಆಸ್ಪತ್ರೆ ಆವರಣದಲ್ಲಿಯೇ ಪಾಪಮ್ಮ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ಕ್ಯಾರೆ ಎಂದಿಲ್ಲ. ಇತ್ತ ಮಗಳು ಮತ್ತು ಅಳಿಯ ಕೂಡ ಪಾಪಮ್ಮ ಅವರನ್ನು ಕರೆದುಕೊಂಡು ಹೋಗಲು ಬರುತ್ತಿಲ್ಲ. ಅತ್ತ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ವೃದ್ಧ ತಾಯಿಗೆ ಯಾರ ಆಸರೆಯೂ ಇಲ್ಲದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿಯೇ ಆಹಾರ, ನೀರಿಲ್ಲದೆ ನಿತ್ರಾಣ ಸ್ಥಿತಿಗೆ ತಲುಪಿದ್ದಾರೆ. ಇದನ್ನು ಗಮಿನಿಸಿದ ಸಾರ್ವಜನಿಕರು ವೃದ್ಧೆಯ ಮಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದ ತಾಯಿಯನ್ನೇ ಕೊಂದ್ಳು

    ಇಬ್ಬರು ಯುವಕರನ್ನು ಪ್ರೀತಿಸಬೇಡ ಎಂದ ತಾಯಿಯನ್ನೇ ಕೊಂದ್ಳು

    ಹೈದರಾಬಾದ್: ಇಬ್ಬರನ್ನು ಪ್ರೀತಿಸಬೇಡ ಎಂದು ಬುದ್ಧಿಮಾತು ಹೇಳಿದ ತಾಯಿಯನ್ನೇ ಮಗಳು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ರಜಿತಾ(38) ಕೊಲೆಯಾದ ತಾಯಿಯಾಗಿದ್ದು, ಕೀರ್ತಿ ಕೊಲೆ ಮಾಡಿದ ಆರೋಪಿ. ರಾಮನ್ನಪೇಟೆ ನಿವಾಸಿ ಶ್ರೀನಿವಾಸ್ ರೆಡ್ಡಿ ಕೆಲವು ದಿನಗಳಿಂದ ತನ್ನ ಪತ್ನಿ ರಜಿತಾ ಹಾಗೂ ಮಗಳು ಕೀರ್ತಿ ಜೊತೆ ಮುನಗನೂರಿನಲ್ಲಿ ವಾಸಿಸುತ್ತಿದ್ದರು. ಶ್ರೀನಿವಾಸ್ ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ರಜಿತಾ ತನ್ನ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು.

    ತನ್ನ ಮಗಳು ಇಬ್ಬರು ಯುವಕರನ್ನು ಪ್ರೀತಿಸುತ್ತಿರುವ ವಿಷಯ ರಜಿತಾಗೆ ತಿಳಿಯಿತು. ಆಗ ಆಕೆ ತನ್ನ ಮಗಳಿಗೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕೀರ್ತಿ ತಂದೆ ಕೆಲಸಕ್ಕೆ ಹೋದ ಸಮಯದಲ್ಲಿ ತಾಯಿಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು.

    ಕೀರ್ತಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಮೂರು ದಿನ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡು ಅಲ್ಲೇ ತನ್ನ ಪ್ರಿಯಕರನ ಜೊತೆ ವಾಸಿಸುತ್ತಿದ್ದಳು. ಬಳಿಕ ಮೃತದೇಹದ ವಾಸನೆ ಬರುತ್ತಿರುವುದನ್ನು ಕಂಡು ಮೃತದೇಹವನ್ನು ರಾಮನ್ನಪೇಟೆ ರೈಲ್ವೆ ಹಳಿ ಮೇಲೆ ಎಸೆದಿದ್ದಳು.

    ಇದಾದ ಬಳಿಕ ಕೀರ್ತಿ ತನ್ನ ತಂದೆ ಬಳಿ ವಿಶಾಖಪಟ್ಟಣಂ ಪ್ರವಾಸ ಹೋಗುವುದಾಗಿ ಹೇಳಿ ಮನೆಯ ಹಿಂದಿನ ರಸ್ತೆಯಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಪ್ರೇಮಿ ಜೊತೆ ವಾಸಿಸುತ್ತಿದ್ದಳು. ಈ ನಡುವೆ ಆಕೆ ಪೊಲೀಸ್ ಠಾಣೆಗೆ ಹೋಗಿ, ನನ್ನ ತಾಯಿ ಕಾಣೆಯಾಗಿದ್ದಾರೆ. ಕೆಲವು ದಿನಗಳಿಂದ ನನ್ನ ತಂದೆ-ತಾಯಿ ಜಗಳವಾಡುತ್ತಿದ್ದರು ಎಂದು ದೂರು ದಾಖಲಿಸಿದ್ದಳು.

    ಕೆಲಸ ಮುಗಿಸಿ ಬಂದಾಗ ರಜಿತಾ ಕಾಣೆಯಾಗಿರುವುದನ್ನು ನೋಡಿ ಕೀರ್ತಿಯನ್ನು ಪ್ರಶ್ನಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಶ್ರೀನಿವಾಸ್ ರೆಡ್ಡಿ ದೂರಿನ ಮೇರೆಗೆ, ಕೀರ್ತಿ ತನ್ನ ಪ್ರಿಯಕರನ ಜೊತೆ ಸೇರಿ ತಾಯಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.

  • ಗಡಿಯಿಂದ ಹಿಂದಿರುಗಿ ಬಂದ ಮಗನಿಗೆ ಸೆಲ್ಯೂಟ್ ಹೊಡೆದು ಸ್ವಾಗತಿಸಿದ ತಾಯಿ- ವಿಡಿಯೋ

    ಗಡಿಯಿಂದ ಹಿಂದಿರುಗಿ ಬಂದ ಮಗನಿಗೆ ಸೆಲ್ಯೂಟ್ ಹೊಡೆದು ಸ್ವಾಗತಿಸಿದ ತಾಯಿ- ವಿಡಿಯೋ

    ಡಿಯಿಂದ ಹಿಂದಿರುಗಿ ಬಂದ ಮಗನಿಗೆ ತಾಯಿ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    12 ಸೆಕೆಂಡ್ ಇರುವ ಈ ವಿಡಿಯೋವನ್ನು ಹತಿಂದರ್ ಸಿಂಗ್ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಯೋಧರೊಬ್ಬರು ಕರ್ತವ್ಯದಿಂದ ಹಿಂದಿರುಗಿ ಮನೆಯೊಳಗೆ ಹೋಗುವ ಮೊದಲು ತನ್ನ ತಾಯಿಯನ್ನು ನೋಡಿ ಸೆಲ್ಯೂಟ್ ಹೊಡೆಯುತ್ತಾರೆ. ಬಳಿಕ ತಾಯಿ ಕೂಡ ಸೆಲ್ಯೂಟ್ ಹೊಡೆದಿದ್ದಾರೆ. ಎಲ್ಲ ಸೈನಿಕರು ಹೀಗೆ ಕ್ಷೇಮವಾಗಿ ಮನೆಗೆ ಹಿಂದಿರುಗಲಿ. ಸಾಮಾಜಿಕ ಜಾಲತಾಣದಲ್ಲಿ ನೋಡಿದ ಅತ್ಯುತ್ತಮ ವಿಡಿಯೋ ಇದೆ ಎಂದು ಬರೆದುಕೊಂಡಿದ್ದಾರೆ.

    ಈ ವಿಡಿಯೋದಲ್ಲಿ ಗಡಿಯಿಂದ ಹಿಂದಿರುಗಿದ ಯೋಧ ಮನೆಯ ಮುಖ್ಯದ್ವಾರದ ಬಳಿ ನಿಂತಿದ್ದ ತನ್ನ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ವೇಳೆ ಕೈಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ನಿಂತಿದ್ದ ತಾಯಿ ಕೂಡ ತನ್ನ ಮಗನಿಗೆ ಸೆಲ್ಯೂಟ್ ಮಾಡುತ್ತಾರೆ. ಸೆಲ್ಯೂಟ್ ಮಾಡಿದ ಬಳಿಕ ಯೋಧ ತನ್ನ ತಾಯಿಯನ್ನು ತಬ್ಬಿಕೊಂಡು ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ.

    ಈ ವಿಡಿಯೋ ಎಲ್ಲಿ ಹಾಗೂ ಯಾವಾಗ ಸೆರೆ ಆಗಿದ್ದು ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ ಈ ವೈರಲ್ ವಿಡಿಯೋಗೆ ಇದುವರೆಗೂ 12 ಸಾವಿರಕ್ಕೂ ಹೆಚ್ಚು ವ್ಯೂ ಹಾಗೂ 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರು ಯೋಧನಿಗೆ ಹಾಗೂ ಅವರ ಕುಟುಂಬಸ್ಥರಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

    ಕೆಲವರು ಈ ವಿಡಿಯೋ ನೋಡಿ, ಇದು ತುಂಬಾ ಸುಂದರವಾಗಿದೆ. ತಾಯಿಯ ಸೆಲ್ಯೂಟ್ ಅದ್ಭುತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು “ಹೆಮ್ಮೆಯ ಮಗ ಹಾಗೂ ಅವರಷ್ಟೇ ಹೆಮ್ಮೆಯ ತಾಯಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ನನ್ನ ಮುಖದಲ್ಲಿ ಭಾವನಾತ್ಮಕ ನಗುವನ್ನು ತಂದಿತು. ಯೋಧನಿಗೆ ಹಾಗೂ ಅವರ ಕುಟುಂಬಸ್ಥರಿಗೆ ನನ್ನ ಕಡೆಯಿಂದ ಹಾಟ್ಸ್ ಆಫ್ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.

    https://twitter.com/hatindersinghr1/status/1186885537464045568?ref_src=twsrc%5Etfw%7Ctwcamp%5Etweetembed%7Ctwterm%5E1186885537464045568&ref_url=https%3A%2F%2Fwww.timesnownews.com%2Fthe-buzz%2Farticle%2Fvideo-soldier-salutes-mother-after-coming-back-from-duty-she-returns-it-with-pride%2F507770

  • ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

    ಅಪಘಾತದಲ್ಲಿ ಅಮ್ಮನನ್ನು ಕಳೆದುಕೊಂಡ ಮಕ್ಕಳು – ತಾಯಿ ಎದೆಹಾಲಿಗಾಗಿ ಅತ್ತ ಕಂದಮ್ಮ

    ಚಿಕ್ಕಬಳ್ಳಾಪುರ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಮೃತ ಪಟ್ಟಿದ್ದು, ಎರಡು ಮಕ್ಕಳು ತಬ್ಬಲಿಗಳಾದಂತಹ ಘಟನೆ ಚಿಕ್ಕಬಳ್ಳಾಪುರ ಹೊರಲವಯದ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ತಾಯಿಯನ್ನು ಸರಸ್ವತಿ (24) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ 3 ವರ್ಷದ ಮಗಳು ದಿವ್ಯಾ ಹಾಗೂ ಒಂದು ವರ್ಷದ ಮಗ ಶಿವಕುಮಾರ್ ಮತ್ತು ಪತಿ ತಾಯಪ್ಪ ಪ್ರಾಣಾಪಾಯದಿಂದ ಪಾರಾಗಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳ ಅಕ್ರಂದನ ಮುಗಿಲು ಮುಟ್ಟಿದೆ.

    ಆಂಧ್ರದ ಆಧೋನಿಯಿಂದ ಕೆಲಸಕ್ಕೆ ಎಂದು ತಾಯಪ್ಪ ಹಾಗೂ ಆಕೆಯ ಮಡದಿ ಸರಸ್ವತಿ ಜೊತೆಗೆ ಮಕ್ಕಳು ಸೇರಿ ತನ್ನದೇ ಎಪಿ 21 ಸಿ ಎಚ್ 1855 ಬೈಕಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಆದರೆ ಚಿಕ್ಕಬಳ್ಳಾಪುರ ನಗರ ಹೊರವಲಯದ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕೆ.ಎ 40 ಎಂ 2854 ನಂಬರಿನ ಸ್ವಿಫ್ಟ್ ಡಿಝೈರ್ ಕಾರು ದಿಢೀರ್ ಹೈವೆಗೆ ಎಂಟ್ರಿ ಕೊಟ್ಟು ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಸರಸ್ವತಿ ಮೃತಪಟ್ಟಿದ್ದಾರೆ.

    ಅದೃಷ್ಟವಶಾತ್ ಬೈಕಿನಲ್ಲಿದ್ದ ತಾಯಪ್ಪ ಹಾಗೂ ಇಬ್ಬರು ಮಕ್ಕಳು ಸಣ್ಣಪುಟ್ಟ ತರುಚಿದ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಸೇರಿದ್ದಾರೆ. ಆದರೆ ಅತ್ತ ಆಸ್ಪತ್ರೆಯಲ್ಲಿ ತಾಯಿಯಿಲ್ಲದೆ ತಬ್ಬಲಿಗಳಾದ ಇಬ್ಬರು ಮಕ್ಕಳನ್ನು ಸಂತೈಸಲಾಗದ ತಾಯಪ್ಪ ಇನ್ನಿಲ್ಲದ ಪರಿತಪಿಸುವಂತಾಗಿದ್ದು ಇದು ನೋಡುಗರ ಕರಳು ಕಿವುಚವಂತಾಗಿದೆ. ಆದರಲ್ಲೂ ಮಗ ಶಿವಕುಮಾರ್ ಚಿಕ್ಕವನಿದ್ದು, ಬಾಟಲಿ ಹಾಲು ಕುಡಿಯದೇ ತಾಯಿ ಎದೆಹಾಲಿಗಾಗಿ ಅಳುತ್ತಿದ್ದನ್ನು ನೋಡಿ ಸ್ಥಳೀಯರು ಕೂಡ ಕಂಬನಿ ಮಿಡಿದಿದ್ದಾರೆ.

    ಅಪಘಾತ ಸಂಬಂಧ ಕಾರು ಹಾಗೂ ಬೈಕ್ ಸಮೇತ ಕಾರು ಚಾಲಕನನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಆದರೆ ಕಾರು ಚಾಲಕ ಮಾಡಿದ ಆ ಒಂದು ಕ್ಷಣದ ಯಡವಟ್ಟಿನಿಂದ ಇಡೀ ಜೀವನವೆಲ್ಲಾ ತಾಯಿಯಿಲ್ಲದೆ ಇಬ್ಬರು ಮಕ್ಕಳು ತಬ್ಬಲಿಗಳಾಗಿ ಬಾಳುವಂತಯಿತಲ್ಲಾ ಅನ್ನೋದೆ ದುರಂತ.

  • ಸತ್ತರೂ ನಿನ್ನ ಮುಖ ನೋಡಲ್ಲ ಎಂದಿದ್ದ ರಾಜುಗೆ ತಾಯಿಯ ಅಂತಿಮ ದರ್ಶನವಾಗಲೇ ಇಲ್ಲ

    ಸತ್ತರೂ ನಿನ್ನ ಮುಖ ನೋಡಲ್ಲ ಎಂದಿದ್ದ ರಾಜುಗೆ ತಾಯಿಯ ಅಂತಿಮ ದರ್ಶನವಾಗಲೇ ಇಲ್ಲ

    ಬೆಂಗಳೂರು: ಸತ್ತರೂ ನಿನ್ನ ಮುಖ ನೋಡಲ್ಲ ಎಂದಿದ್ದ ಹಾಸ್ಯನಟ ರಾಜು ತಾಳಿಕೋಟೆಗೆ ಕೊನೆಗೂ ತಾಯಿಯ ಅಂತಿಮ ದರ್ಶನವಾಗಲೇ ಇಲ್ಲ. ಈ ವಿಷಯವನ್ನು ರಾಜು ಬಿಗ್ ಬಾಸ್‍ ಮನೆಯಲ್ಲಿ ಹಂಚಿಕೊಂಡು ಭಾವುಕರಾಗಿದ್ದಾರೆ.

    ಬುಧವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾರಿಗಾದರೂ ಕ್ಷಮೆ ಕೇಳಬೇಕೆಂದರೆ ವೇದಿಕೆ ಮೇಲೆ ನೀವು ಕೇಳಬಹುದು ಎಂದು ಹೇಳಿದ್ದರು. ಈ ವೇಳೆ ರಾಜು, ನನ್ನ ತಾಯಿ ನನ್ನ ಅಕ್ಕನಿಗಾಗಿ ವಾಚ್ ತಂದಿದ್ದರು. ನಾನು ಆ ವಾಚ್ ನೋಡುವಾಗ ನನ್ನ ಅಕ್ಕ ನೀನು ಅದನ್ನು ಹಾಳು ಮಾಡುತ್ತೀಯಾ ಎಂದು ಕಿತ್ತುಕೊಂಡಳು. ಈ ವೇಳೆ ನಾನು ಗಡಿಯಾರವನ್ನು ಬಿಸಾಡಿದೆ. ಇದರಿಂದ ಕೋಪಗೊಂಡ ನನ್ನ ತಾಯಿ ನನಗೆ ಹೊಡೆಯಲು ಬಂದರು. ಆಗ ನಾನು ಅವರ ಎರಡು ಕೈಯನ್ನು ಹಿಡಿದು ನಿಲ್ಲಿಸಿದೆ. ನನ್ನ ಕೈಯನ್ನೇ ತಡೆಯುವಷ್ಟು ನಿನಗೆ ಧೈರ್ಯವೇ? ಈಗಲೇ ಮನೆ ಬಿಟ್ಟು ಹೋಗು. ನಾನು ಸಾಯೋವರೆಗೂ ನೀನು ಮನೆಗೆ ಬರಬೇಡ ಎಂದು ನನ್ನ ತಾಯಿ ಹೇಳಿದ್ದರು.

    ನನ್ನ ತಾಯಿ ಆ ರೀತಿ ಹೇಳಿದಾಗ ನಾನು ಕೂಡ ಕೋಪದಲ್ಲಿ ನೀನು ಸತ್ತರೆ ಅಲ್ಲ ಮನೆಯಲ್ಲಿ ಯಾರು ಸತ್ತರು ನಾನು ಮನೆಗೆ ಹಿಂತಿರುಗಲ್ಲ ಎಂದು ಹೇಳಿದೆ. ಬಳಿಕ ನಾನು ಪ್ರಚಾರಕ್ಕೆಂದು ಹೋದಾಗ ವ್ಯಕ್ತಿಯೊಬ್ಬರು ನಿಮ್ಮ ಮನೆಯಲ್ಲಿ ತುಂಬಾ ಜನ ಸೇರಿದ್ದಾರೆ ಎಂದು ಹೇಳಿದ್ದರು. ಆಗ ನಾನು ಏನೂ ಆಗಿರಲ್ಲ ಎಂದು ಸುಮ್ಮನಿದೆ. ಆದರೆ ಅದಕ್ಕೂ ಮೊದಲು ನನ್ನ ಕುಟುಂಬಸ್ಥರು ಟೆಲಿಗ್ರಾಂ ಕಳುಹಿಸಿದ್ದರು. ಆದರೆ ನನ್ನ ನಾಟಕವಿದ್ದ ಕಾರಣ ಮಾಲೀಕರು ಅದನ್ನು ಮುಚ್ಚಿಟ್ಟಿದ್ದರು ಎಂದು ಹೇಳುವ ಮೂಲಕ ರಾಜು ಭಾವುಕರಾದರು.

    ನನ್ನ ತಾಯಿ ನಿಧನರಾದ ವಿಷಯ ಹೇಗೋ ನನಗೆ ತಿಳಿಯಿತು. ಆದರೆ ಅಷ್ಟರಲ್ಲಿ ಸಂಜೆಯಾಗಿತ್ತು. ನಾನು ಬಸ್, ಟ್ರೈನ್ ಹಿಡಿದುಕೊಂಡು ಹೋಗುವಷ್ಟರಲ್ಲಿ ನನ್ನ ತಾಯಿಯನ್ನು ಮಣ್ಣು ಮಾಡಿದ್ದರು. ಕೊನೆಗೂ ನನ್ನ ತಾಯಿಯ ಮುಖ ನೋಡುವುದಕ್ಕೆ ನನಗೆ ಆಗಲಿಲ್ಲ. ನೀನು ಸತ್ತರು ನಾನು ಬರುವುದಿಲ್ಲ ಎಂದು ಹೇಳಿದೆ. ಅದು ಹಾಗೆಯೇ ಆಯಿತು. ನನ್ನ ತಾಯಿ ನನಗೆ ತಮ್ಮ ಮುಖವನ್ನು ತೋರಿಸಲೇ ಇಲ್ಲ ಎಂದು ರಾಜು ಕಣ್ಣೀರು ಹಾಕಿದರು.

  • ಹಣ ನೀಡದ್ದಕ್ಕೆ ಪೂಜೆ ಮಾಡುತ್ತಿದ್ದ ತಾಯಿಯನ್ನು ರಾಡ್‍ನಿಂದ ಹೊಡೆದು ಕೊಲೆಗೈದ ಮಗ

    ಹಣ ನೀಡದ್ದಕ್ಕೆ ಪೂಜೆ ಮಾಡುತ್ತಿದ್ದ ತಾಯಿಯನ್ನು ರಾಡ್‍ನಿಂದ ಹೊಡೆದು ಕೊಲೆಗೈದ ಮಗ

    ನವದೆಹಲಿ: ಹಣ ನೀಡದ್ದಕ್ಕೆ 22 ವರ್ಷದ ಯುವಕನೊಬ್ಬ ತನ್ನ ತಾಯಿಗೆ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಈಶಾನ್ಯ ದೆಹಲಿಯ ಜ್ಯೋತಿ ನಗರದಲ್ಲಿ ಘಟನೆ ನಡೆದಿದ್ದು, ಶಿಕ್ಷಾ ದೇವಿ ಎಂಬುವರನ್ನು ಮಗ ಅಶುತೋಷ್ ರಾಡ್‍ನಿಂದ ಹೊಡೆದಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಇನ್ನೊಬ್ಬ ಮಗ ಮುಕುಲ್ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಗುರು ತೇಜ್ ಬಹದ್ದೂರ್(ಜಿಟಿಬಿ) ಆಸ್ಪತ್ರೆಯಿಂದ ಘಟನೆ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಆರೋಪಿ ಅಶುತೋಷ್ ಕಾಣೆಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಾ ದೇವಿ ಸೋಮವಾರ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವೇದ ಪ್ರಕಾಶ್ ಸೂರ್ಯ ಮಾಹಿತಿ ನೀಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಆರೋಪಿ ಅಶುತೋಷ್‍ನನ್ನು ಉತ್ತರ ಪ್ರದೇಶದ ಮೋದಿ ನಗರದಿಂದ ಸೋಮವಾರವೇ ಬಂಧಿಸಲಾಗಿದೆ. ಅಶುತೋಷ್ ಶಿಕ್ಷಾ ದೇವಿಯನ್ನು ಕಬ್ಬಿಣದ ರಾಡ್‍ನಿಂದ ಹಲವು ಬಾರಿ ತಲೆಗೆ ಹೊಡೆದಿದ್ದಾನೆ ಎಂದು ಸೂರ್ಯ ತಿಳಿಸಿದರು. ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ತಾಯಿ ತಲೆಗೆ ಹೊಡೆದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

    ಸುಮಾರು ಏಳರಿಂದ ಎಂಟು ಬಾರಿ ತನ್ನ ತಾಯಿ ಬಳಿ ಹಣಕ್ಕಾಗಿ ಪೀಡಿಸಿದ್ದಾನೆ. ಆದರೆ ತಾಯಿ ಇದಕ್ಕೆ ಉತ್ತರಿಸಿಲ್ಲ. ಇದರಿಂದ ಕೋಪಗೊಂಡ ಅಶುತೋಷ್ ಕಬ್ಬಿಣದ ರಾಡ್ ತೆಗೆದುಕೊಂಡು ಅವರ ತಲೆಗೆ ಹಲವು ಬಾರಿ ಹೊಡೆದಿದ್ದಾನೆ. ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಸೂರ್ಯ ವಿವರಿಸಿದರು.

    ಘಟನೆ ನಂತರ ಆರೋಪಿಯು ಉತ್ತರ ಪ್ರದೇಶದ ಬೆಹ್ತಾ ರೈಲು ನಿಲ್ದಾಣ ಸೇರಿದಂತೆ ಶರಣಪುರ, ಶಾಮ್ಲಿ, ಹರಿದ್ವಾರ, ಲೋನಿ ಹಲವು ಸ್ಥಳಗಳಲ್ಲಿ ತಂಗಿದ್ದನು. ಆರೋಪಿಯನ್ನು ಬಂಧಿಸಿ, ಕಬ್ಬಿಣದ ರಾಡ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.