Tag: mother

  • ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಪಶುವೈದ್ಯೆಯನ್ನು ಕೊಂದಂತೆ ನನ್ನ ಮಗನನ್ನು ಕೊಲ್ಲಿ – ಸಿಡಿದೆದ್ದ ಅತ್ಯಾಚಾರಿಯ ತಾಯಿ

    ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಯೊರ್ವನ ತಾಯಿ, ಸಂತ್ರಸ್ತೆಯನ್ನು ಕೊಲೆ ಮಾಡಿದ ಹಾಗೆಯೇ ತಪ್ಪು ಮಾಡಿದ ನನ್ನ ಮಗನನ್ನು ಕೊಂದುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    26 ವರ್ಷದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

    ಈ ಪ್ರಕರಣ ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದು, ಪ್ರಿಯಾಂಕಾ ರೆಡ್ಡಿ ಸಾವಿಗೆ ನ್ಯಾಯ ಕೊಡಿಸಿ ಆರೋಪಿಗಳನ್ನು ಗಲ್ಲಿಗೇರಿಸಿ ಎಂದು ಜನರು ಸಿಡಿದೆದ್ದಿದ್ದಾರೆ. ಈ ಮಧ್ಯೆ ಆರೋಪಿ ಚೆನ್ನಕೇಶವುಲು ತಾಯಿ ಪ್ರತಿಕ್ರಿಯಿಸಿ, ಮಗನ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ನನ್ನ ಮಗ ಈ ಪಾಪ ಮಾಡಿದ್ದಾನೆ ಎಂದು ಸಾಬೀತಾದರೆ ಖಂಡಿತಾ ಆತನಿಗೆ ಶಿಕ್ಷೆಯಾಗಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಹತ್ಯೆ ಮಾಡಿ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನ ಕೊಲೆಗೈದ ಜಾಗದ ಸಮೀಪದಲ್ಲೇ ಸಿಕ್ತು ಮತ್ತೋರ್ವ ಮಹಿಳೆ ಶವ

    ನಾನು ಒಬ್ಬಳು ಹೆಣ್ಣು. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಹೀಗಾದರೆ ಹೆತ್ತ ಕರುಳು ಎಷ್ಟು ನೋವು ಪಡುತ್ತದೆ ಎಂದು ನನಗೂ ತಿಳಿದಿದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಆಗ ಮುಂದೆ ಇಂತಹ ದುಷ್ಕೃತ್ಯಕ್ಕೆ ಯಾರು ಕೈ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್‍ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು

    ಈಗಾಗಲೇ ದೇಶಾದ್ಯಂತ ಈ ಪ್ರಕರಣ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಿ ಬಿಸಿ ಮುಟ್ಟಿಸಿ ನಿಯಮ ಪಾಲಿಸುವಂತೆ ಸರ್ಕಾರ ಮಾಡಿದೆ. ಅದರಂತೆ ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿ, ಆಗ ಕಾಮುಕರ ಅಟ್ಟಹಾಸ ಅಂತ್ಯವಾಗುತ್ತದೆ. ಇಂಥವರಿಗೆ ಜೀವಾವಧಿ ಶಿಕ್ಷೆ ನೀಡರೆ ಆರಾಮಾಗಿ ಸಾಯುವ ತನಕ ಜೈಲಿನಲ್ಲಿ ಇರುತ್ತಾರೆ. ಅದರ ಬದಲು ಶಿಕ್ಷೆ ಸಾಬೀತಾದ ಕೂಡಲೇ ಗಲ್ಲಿಗೇರಿಸಿ ಎಂದು ಆಗ್ರಹಿಸಿದ್ದಾರೆ.

    ಆರೋಪಿಗಳ ವೈದ್ಯಕೀಯ ಪರೀಕ್ಷೆ ಆದ ಬಳಿಕ ಪೊಲೀಸರು ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ಕಾಲ ರಿಮ್ಯಾಂಡ್‍ನಲ್ಲಿ ಇರಿಸುವಂತೆ ಆದೇಶಿಸಿದೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿತ್ರದುರ್ಗದ ‘ಮಹಾತಾಯಿ’ ಸಹಾಯಕ್ಕೆ ನಿಂತ ಶಾಸಕ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿತ್ರದುರ್ಗದ ‘ಮಹಾತಾಯಿ’ ಸಹಾಯಕ್ಕೆ ನಿಂತ ಶಾಸಕ

    – ಮಗು ದತ್ತು ಪಡೆದ ಜಿ.ಪಂ ಸದಸ್ಯೆ

    ಚಿತ್ರದುರ್ಗ: ಜಿಲ್ಲೆಯಲ್ಲಿ ತಾಯಿಯೊಬ್ಬರು ವಿದ್ಯಾಭ್ಯಾಸಕ್ಕಾಗಿ ತನ್ನ ಅಂಗವಿಕಲ ಮಗನನ್ನು ನಿತ್ಯ ಹೆಗಲ ಮೇಲೆ ಹೊತ್ತು ಶಾಲೆಗೆ ಕರೆ ತರುತ್ತಿದ್ರು. ಇದನ್ನ ಕಂಡ ಪಬ್ಲಿಕ್ ಟಿವಿ ತಾಯಿಯ ವಾತ್ಸಲ್ಯ ಕುರಿತು ”ಮಹಾತಾಯಿ” ಎಂಬ ಶೀರ್ಷಕೆಯಡಿ ವರದಿ ಬಿತ್ತರಿಸಿತ್ತು.

    ವರದಿ ಗಮನಿಸಿದ ಚಳ್ಳಕೆರೆ ಶಾಸಕ ರಘುಮೂರ್ತಿ ಈ ಕುಟುಂಬಕ್ಕೆ ಮನೆಭಾಗ್ಯ ಕರುಣಿಸಿದ್ದಾರೆ. ಅಲ್ಲದೆ ಜಿಲ್ಲಾಪಂಚಾಯ್ತಿ ಸದಸ್ಯೆ ಚಂದ್ರಿಕಾ ಶ್ರೀನಿವಾಸ್ ವಿದ್ಯಾಭ್ಯಾಸದ ಹೊಣೆ ಹೊತ್ತು ಮಗುವನ್ನು ದತ್ತು ಪಡೆದಿದ್ದಾರೆ. ಜೊತೆಗೆ ತಾಲೂಕು ಪಂಚಾಯ್ತಿ ಈಓ ಶ್ರೀಧರ್ ಬಾರೆಕಾರ್ ಸ್ಥಳ ಪರಿಶೀಲನೆ ನಡೆಸಿ ಮನೆ ಮಂಜೂರು ಮಾಡಿದ್ದಾರೆ.

    ಈತನ ಅಂಗವಿಕಲತೆಯನ್ನು ಗಮನಿಸಿರೋ ಮಹಿಳಾ ಮತ್ತು ಮಕ್ಕಳ ಇಲಾಖೆ ಕಲ್ಯಾಣಾಧಿಕಾರಿ ಶಾಲೆಗೆ ತೆರಳಲು ಸಹಕಾರಿಯಾಗುವಂತಹ ಮೂರು ಗಾಲಿಯ ಸೈಕಲ್ ಹಾಗು ಕಿವಿಗೆ ಶ್ರವಣ ಸಾಧನಗಳನ್ನು ವಿತರಿಸಿದ್ದಾರೆ.

    ತಾಯಿಯ ಹೆಗಲೇ ಆಸರೆ:
    ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಬಂಡಿಯಾಗಿರುವ ದೃಶ್ಯವೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ಬೆಳಕಿಗೆ ಬಂದಿತ್ತು. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ.

    ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶ್ ನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್‍ಗೆ ಅಂಗವಿಕಲತೆ ಕಾಡುತ್ತಿದೆ. ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ.

  • ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಕೀಟ್ಲೆ ಮಾಡಿದರೆಂದು ಮಕ್ಕಳಿಗೇ ಬರೆ ಹಾಕಿದ ಪಾಪಿ ತಂದೆ

    ಚಿಕ್ಕಮಗಳೂರು: ಮಕ್ಕಳು ಕೀಟಲೆ ಮಾಡಿದರು ಎಂದು ತಂದೆಯೊಬ್ಬ ದೋಸೆ ಕಡ್ಡಿ ಬಿಸಿ ಮಾಡಿ ಬರೆ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಸ್ಗಲ್‍ನಲ್ಲಿ ನಡೆದಿದೆ.

    ಹರೀಶ್ ಬರೆ ಹಾಕಿದ ಕ್ರೂರ ತಂದೆ. 10 ವರ್ಷದ ಹಿಂದೆ ಮದುವೆಯಾದ ಹರೀಶ್ ಹಾಗೂ ಪುಷ್ಪ ದಂಪತಿಗೆ 2 ಹೆಣ್ಣು, 2 ಗಂಡು ಮಕ್ಕಳಿವೆ. ಪಾಪಿ ತಂದೆಯ ಕೃತ್ಯದಿಂದ ಇದೀಗ ಎರಡು ಮಕ್ಕಳು ಓಡಾಡುವುದಕ್ಕೂ ಆಗದೇ ನರಕ ಅನುಭವಿಸುತ್ತಿದ್ದಾರೆ. ಮಕ್ಕಳ ದಯನೀಯ ಸ್ಥಿತಿ ಕಂಡು ಹೆತ್ತೊಡಲು ಕಣ್ಣೀರಲ್ಲಿ ಮುಳುಗಿದೆ.

    ಸೈಕೋ ಹರೀಶ್ ವರ್ಷದ ಹಿಂದೆಯೂ ಪತ್ನಿ, ಮಕ್ಕಳಿಗೆ ವೈರ್‍ನಿಂದ ಹೊಡೆದು, ಮನೆಗೆ ಬೆಂಕಿ ಇಟ್ಟಿದ್ದನು. ಆಗ ಪತ್ನಿಯೇ ದೂರು ನೀಡಿ ಜೈಲಿಗೆ ಹಾಕಿಸಿದ್ದರು. ಮತ್ತೆ ಅವರೇ ಪತಿ ಸರಿ ಹೋಗಬಹುದು ಎಂದು ತಾನೇ ಹೋಗಿ ಜಾಮೀನು ನೀಡಿ ಮನೆಗೆ ಕರೆ ತಂದಿದ್ದರು. ಜೈಲಿನಿಂದ ಬಂದ ನಂತರ ಹರೀಶ್ ಮತ್ತೆ ತನ್ನ ವರಸೆ ಮುಂದುವರಿಸಿದ್ದಾನೆ.

    ಮಕ್ಕಳ ಮುಗ್ಧತೆ ಕಂಡರೆ ಎಂಥವರು ಕೂಡ ಕರಗುತ್ತಾರೆ. ಇಲ್ಲಿ ಐ ಲವ್ ಯೂ ಅಪ್ಪ ಎಂದು ಎನಿಸಿಕೊಳ್ಳಬೇಕಿದ್ದ ಕುಡುಕ ಹರೀಶ್, ಮಕ್ಕಳ ಪಾಲಿಗೆ ವಿಲನ್ ಆಗಿದ್ದಾನೆ. ಸೈಕೋ ಪತಿಯ ಕಾಟ ತಡೆಯಲಾಗದೆ ಪುಷ್ಪ ತನ್ನ ನಾಲ್ಕು ಮಕ್ಕಳ ಸಮೇತ ತವರು ಸೇರಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಕೂಡಲೇ ಹರೀಶ್ ವಿರುದ್ಧ ಕ್ರಮ ಕೈಗೊಂಡು, ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಕ್ಕಳಿಗೆ ಉತ್ತಮ ಚಿಕಿತ್ಸೆ ಕೊಡಿಸಬೇಕಿದೆ.

  • ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸ ಬಿಟ್ಟ ತಾಯಿ

    ಜೈಪುರ: ರಾಜಸ್ಥಾನದ ತಾಯಿಯೊಬ್ಬರು ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ಬೈ ಹೇಳಿ ಜಮೀನಿನಲ್ಲಿ ದುಡಿಯುತ್ತಿದ್ದಾರೆ.

    ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ.

    ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿರಬಹುದು. ದುಡ್ಡು ಇದ್ದರೆ ಏನಂತೆ ನಾವು ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ. ಈ ನಡುವೆ ಮನೆಯೊಳಗೆ ಬಿಸಿಲು ಕೂಡ ಬರುವುದಿಲ್ಲ. ಹೀಗಿರುವಾಗ ಎಷ್ಟು ಸಂಪಾದನೆ ಮಾಡಿದರೂ ಪ್ರಯೋಜನ ಏನು? ಈ ಕಾರಣದಿಂದಾಗಿ ನಾವು ನಮ್ಮ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿದ್ದೇವೆ ಎಂದು ದಂಪತಿ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ.

    2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ವಿಚಾರಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು “ಇದು ತಪ್ಪು ನಿರ್ಧಾರ” ಎಂದು ಹೇಳಿದರು. ಆದರೆ ಮಗನಿಗೆ ಆರೋಗ್ಯಕರ ಮತ್ತು ಸ್ವಚ್ಛ ಜೀವನವನ್ನು ನೀಡಲು ನಾನು ತೆಗೆದುಕೊಂಡ ನಿರ್ಧಾರ ಸರಿ ಎಂದು ಅವರಿಗೆ ಹೇಳಿದೆ ಎಂಬುದಾಗಿ ಚಂಚಲ್ ಹೇಳಿದರು.

    2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈಯಿಂಗ್ ಕಲಿತಿದ್ದಾರೆ.

    ಈ ಬದಲಾವಣೆಯನ್ನು ಮಗ ಹೇಗೆ ಎದುರಿಸುತ್ತಾನೆ ಎಂದು ರಾಜೇಂದ್ರ ಹಾಗೂ ಚಂಚಲ್ ಚಿಂತಿಸುತ್ತಿದ್ದರು. ಆದರೆ ಗುರುಭಕ್ಷ್ ಈ ಹೊಸ ಜೀವನದಿಂದ ಖುಷಿಯಾಗಿದ್ದ. ಈಗ ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಆತ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು, ಗುರುಭಕ್ಷ್ ಅವರಿಗೆ ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಸುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ ಈ ಹಣವನ್ನು ಸಂಪಾದಿಸುವಾಗ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ನಾವು ಯಾವಾಗಲೂ ನಮ್ಮ ಮಗನಿಗೆ ನೀನು ಯಾವುದೇ ರೇಸ್‍ನಲ್ಲಿ ಇಲ್ಲ. ನೀನು ಯಾರಿಂದಲೂ ಮುಂದೆ ಅಥವಾ ಹಿಂದಕ್ಕೆ ನಡೆಯಬೇಕಿಲ್ಲ. ಕೇವಲ ತನ್ನ ವೇಗದಲ್ಲಿ ನಡೆಯಬೇಕು ಎಂದು ಹೇಳುತ್ತಿರುತ್ತೇವೆ ಅಂತಾ ರಾಜೇಂದ್ರ ಹಾಗೂ ಚಂಚಲ್ ತಿಳಿಸಿದ್ದಾರೆ.

    ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಒಬ್ಬರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ. ರಾಜೇಂದ್ರ ಉದ್ಯೋಗದಿಂದಾಗಿ ಇಂದೋರ್ ಮನೆಯಲ್ಲಿ ಹೆಚ್ಚು ಸಮಯ ಇರುವುದಿಲ್ಲ. ಪತಿ ಮನೆಯಲ್ಲಿ ಇಲ್ಲದೇ ಇದ್ದರೂ ಚಂಚಲ್, ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ.

  • ಐಎಎಸ್ ಕನಸು ಕಂಡಿರುವ ಮಗನ ವಿದ್ಯಾಭ್ಯಾಸಕ್ಕೆ ತಾಯಿಯ ಹೆಗಲೇ ಆಸರೆ

    ಐಎಎಸ್ ಕನಸು ಕಂಡಿರುವ ಮಗನ ವಿದ್ಯಾಭ್ಯಾಸಕ್ಕೆ ತಾಯಿಯ ಹೆಗಲೇ ಆಸರೆ

    ಚಿತ್ರದುರ್ಗ: ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಬಂಡಿಯಾಗಿರುವ ದೃಶ್ಯವೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ಕಂಡು ಬಂದಿದೆ.

    ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ.

    ಏಳನೇ ತರಗತಿಯವರೆಗೆ ತಮ್ಮ ಸ್ವ-ಗ್ರಾಮವಾಗಿರುವ ಕಡುದರಹಳ್ಳಿಯಲ್ಲಿ ಓದಿದ್ದ ಬಾಬುಗೆ ಓಡಾಡಲು ಶಕ್ತಿಯಿಲ್ಲವಾದರೂ ವಿದ್ಯಾಭ್ಯಾಸದ ಚಿತ್ತ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ತನ್ನ ತಾಯಿಯ ಹೆಗಲ ಆಸರೆ ಪಡೆದು ಕಡುದರಹಳ್ಳಿಯಿಂದ ಮಿರಾಸಾಬಿಹಳ್ಳಿಯ ರಾಣಿಕೆರೆ ಹೈಸ್ಕೂಲಿಗೆ ಬಂದು ಎಂಟನೇ ತರಗತಿ ಓದುತ್ತಿದ್ದಾನೆ.

    ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್‍ಗೆ ಅಂಗವಿಕಲತೆ ಕಾಡುತ್ತಿದೆ. ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ.

    ಸರ್ಕಾರದಿಂದ ರಾಜೇಶ್ ಬಾಬುಗೆ ನೀಡಿದ್ದ ತ್ರಿಚಕ್ರ ಸೈಕಲ್ ಹಾಳಾಗಿ ಮೂಲೆ ಸೇರಿದೆ. ನಿತ್ಯವೂ ತನ್ನ ತಾಯಿಯ ಹೆಗಲ ಮೇಲೆ ಶಾಲೆಗೆ ಬರುವ ರಾಜೇಶ್‍ಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂಬ ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಹುಟ್ಟಿದ 3 ಗಂಟೆಯಲ್ಲೇ ನವಜಾತ ಶಿಶು ಸಾವು – ತಾಯಿಯಿಂದ 63 ದಿನದಲ್ಲಿ 15 ಲೀ. ಎದೆಹಾಲು ದಾನ

    ಹುಟ್ಟಿದ 3 ಗಂಟೆಯಲ್ಲೇ ನವಜಾತ ಶಿಶು ಸಾವು – ತಾಯಿಯಿಂದ 63 ದಿನದಲ್ಲಿ 15 ಲೀ. ಎದೆಹಾಲು ದಾನ

    ವಾಷಿಂಗ್ಟನ್: ಹುಟ್ಟಿದ್ದ ಮೂರು ಗಂಟೆಯಲ್ಲೇ ನವಜತ ಶಿಶು ಮೃತಪಟ್ಟ ಕಾರಣ ತಾಯೊಯೊಬ್ಬರು 63 ದಿನದಲ್ಲಿ 15 ಲೀಟರ್ ತಮ್ಮ ಎದೆ ಹಾಲನ್ನು ದಾನ ಮಾಡಿದ್ದಾರೆ.

    ಅಮೆರಿಕ ಮೂಲದ ಸಿಯೆರಾ ಸ್ಟ್ರಾಂಗ್ಫೆಲ್ಡ್ ತಮ್ಮ ಮಗು ಹುಟ್ಟಿದ್ದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪುತ್ತದೆ ಎಂಬ ವಿಷಯ ಅವರಿಗೆ ಮೊದಲೇ ತಿಳಿದಿತ್ತು. ಜನ್ಮ ಪಡೆದ ಬಳಿಕ ಮಗು ಮೂರು ಗಂಟೆಗಳ ಕಾಲ ತನ್ನ ತಾಯಿಯ ತೋಳಿನಲ್ಲಿಯೇ ಇತ್ತು.

    ನೀವು ಜನ್ಮ ನೀಡುವ ಮಗುವಿಗೆ ಟ್ರೈಸೊಮಿ 18 ಇದೆ ಎಂದು ವೈದ್ಯರು ಮೊದಲೇ ಸಿಯೆರಾಗೆ ತಿಳಿಸಿದ್ದರು. ಟ್ರೈಸೊಮಿ ಇದು ಅಪರೂಪದ ಅನುವಂಶಿಕ ಸ್ಥಿತಿಯಾಗಿದ್ದು, ಜನ್ಮ ಪಡೆಯುವಾಗಲೇ ಇದು ಮಕ್ಕಳಿಗೆ ಮಾರಕವಾಗಲಿದೆ. ಈ ಸಮಸ್ಯೆ ಇದ್ದರೆ ದೇಹದ ಬೆಳವಣಿಗೆಯನ್ನು ವಿಳಂಬಗೊಳಿಸುತ್ತದೆ. ಪತ್ರಿಕೆಯೊಂದರಲ್ಲಿ ಮಾತನಾಡಿದ ಸಿಯೆರಾ, “ವೈದ್ಯರು ನನಗೆ ಅರ್ಬಾಷನ್ ಮಾಡಿಸುವಂತೆ ಸಲಹೆ ನೀಡಿದ್ದರು. ಆದರೆ ನಾನು ನನ್ನ ನವಜಾತ ಶಿಶುವನ್ನು ನೋಡಬೇಕತ್ತು. ಕೆಲವೇ ಗಂಟೆಗಳಾಗಲಿ ನನಗೆ ಮಗುವಿನ ಜೊತೆ ಇರಬೇಕು ಎಂದು ನಾನು ಹೇಳಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸ್ಯಾಮ್ಯೂಯಲ್ (ನವಜಾತ ಶಿಶು) ಕೇವಲ ಒಂದು ಬಾರಿ ಮಾತ್ರ ನನ್ನ ತೋಳಿನಲ್ಲಿದ್ದನು. ಆಗ ವೈದ್ಯರಿಗೆ ಆತನಿಗೆ ಆಕ್ಸಿಜನ್ ಟ್ಯೂಬ್ ಹಾಕಿದ್ದರು. ನಾವಿಬ್ಬರು ಮೂರು ಗಂಟೆಗಳ ಕಾಲ ಜೊತೆಯಲ್ಲಿದ್ದೇವೆ. ನಾನು ಆತನನ್ನು ಮುಟ್ಟಿದ ತಕ್ಷಣ ಆತನ ಹಾರ್ಟ್ ರೇಟ್ ಹಾಗೂ ಆಕ್ಸಿಜನ್ ರೇಟ್ ಇದಕ್ಕಿದ್ದಂತೆ ಹೆಚ್ಚಾಯಿತು. ಆ ಕ್ಷಣ ಅವನು ತನ್ನ ತಾಯಿ ಜೊತೆ ಇರುವುದು ಆತನಿಗೆ ತಿಳಿದಿರುವಂತಿತ್ತು. ಆ ಮೂರು ಗಂಟೆಗಳ ಕಾಲ ನಾನು ಆತನನ್ನೇ ನೋಡುತ್ತಿದ್ದೆ. ಆದರೆ ಆ ಮೂರು ಗಂಟೆ ನಿಮಿಷಗಳಲ್ಲಿ ಮುಗಿದುಹೋಯಿತು ಎಂದರು.

    ಆ ಮೂರು ಗಂಟೆಯಲ್ಲಿ ನಾನು ನನ್ನ ಎದೆ ಹಾಲನ್ನು ದಾನ ಮಾಡಬೇಕೆಂದು ನಿರ್ಧಾರ ಮಾಡಿದೆ. ಅಗತ್ಯವಿರುವ ಮಕ್ಕಳಿಗೆ ನನ್ನ ಎದೆ ಹಾಲು ಉಪಯೋಗವಾಗಬೇಕು ಎಂಬುದು ನನ್ನ ಬಯಕೆ. ನನ್ನ ಮಗುವಿನ ಜೀವನ ಮತ್ತು ಸಾವಿನ ಮೇಲೆ ನನಗೆ ನಿಯಂತ್ರಣವಿಲ್ಲ. ಆದರೆ ನಂತರ ನಾನು ಮಾಡಿದ ಕೆಲಸ ನನ್ನ ನಿಯಂತ್ರಣದಲ್ಲಿತ್ತು. ನಾನು ಗರ್ಭಿಣಿಯಾಗಿದ್ದೇನೆ ಎಂದು ತಿಳಿದಾಗ ಸ್ತನ್ಯಪಾನ ಯಶಸ್ವಿಯಾಗಿ ನೀಡಬೇಕು ಎಂದುಕೊಂಡಿದ್ದೆ. ಆದರೆ ಸ್ಯಾಮ್ಯೂಯಲ್ ಆರೋಗ್ಯದ ಬಗ್ಗೆ ವೈದ್ಯಕೀಯ ರಿಪೋರ್ಟ್ ಸಿಕ್ಕಾಗ ಇದು ಸಾಧ್ಯವಾಗಲ್ಲ ಎಂದು ತಿಳಿಯಿತು ಎಂದು ಸಿಯೆರಾ ಹೇಳಿದ್ದಾರೆ.

    ನನ್ನ ಎದೆ ಹಾಲಿನಿಂದ ಬೇರೆ ನವಜಾತ ಶಿಶುವಿನ ಪ್ರಾಣ ಉಳಿಯುತ್ತದೆ. 63 ದಿನ ಪಂಪ್ ಮೂಲಕ ನಾನು ಎದೆ ಹಾಲನ್ನು ಸಂಗ್ರಹಿಸಿದ್ದೇನೆ. ನಾನು ಮದರ್ ಮಿಲ್ಕ್ ಬ್ಯಾಂಕಿಗೆ 15 ಲೀ. ಹಾಲನ್ನು ನೀಡಿದ್ದೇನೆ ಎಂದು ಸಿಯೆರಾ ಫೇಸ್‍ಬುಕ್‍ನಲ್ಲಿ ತಮ್ಮ ಪೋಸ್ಟ್ ಮಾಡುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

  • 41 ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ 43ರ ಮಗ

    41 ವರ್ಷದ ಬಳಿಕ ಅಮ್ಮನ ಮಡಿಲು ಸೇರಿದ 43ರ ಮಗ

    -ಅಮ್ಮ, ಮಗನ ಮಿಲನದ ಮನಮಿಡಿಯುವ ಕಥೆ
    -ಮಗನನ್ನು ದೂರ ಮಾಡಿತ್ತು ಬಡತನ

    ಚೆನ್ನೈ: 41 ವರ್ಷದ ಬಳಿಕ 43 ವರ್ಷದ ಮಗ ತಾಯಿಯ ಮಡಿಲು ಸೇರಿದ್ದಾರೆ. ತಮಿಳುನಾಡಿನ ರಾಜಧಾನಿ ಚೆನ್ನೈ ಈ ಅಪರೂಪದ ಮಿಲನಕ್ಕೆ ಸಾಕ್ಷಿಯಾಗಿತ್ತು. ಮಗನನ್ನ ನೋಡಿ ಭಾವುಕಳಾದ ತಾಯಿಯ ಮಮತೆ ನೋಡುಗರ ಕಣ್ಣಾಲಿಗಳು ತುಂಬಿದವು.

    ಡೇವಿಡ್ ನೀಲ್ಸನ್ ತಾಯಿ ಧನಲಕ್ಷ್ಮಿ ಮಡಿಲು ಸೇರಿದ್ದಾರೆ. ಡೆನ್ಮಾರ್ಕ್ ನಿಂದ ಬಂದಿರುವ ಡೇವಿಡ್ ಅಮ್ಮನನ್ನು ಸೇರಿದ್ದು ಹೇಗೆ? 41 ವರ್ಷಗಳ ಹಿಂದೆ 2ರ ಪೋರ ಚೆನ್ನೈನಿಂದ ಡೆನ್ಮಾರ್ಕ್ ತಲುಪಿದ್ದು ಹೇಗೆ? ಅಮ್ಮನಿಗಾಗಿ ಭಾರತಕ್ಕೆ ಬಂದ ಡೇವಿಡ್ ತಾಯಿಯನ್ನು ಹುಡುಕಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    1976ರಲ್ಲಿ ಚೆನ್ನೈನ RSRM ಆಸ್ಪತ್ರೆಯಲ್ಲಿ ಧನಲಕ್ಷ್ಮಿ ಅವರು ಪುತ್ರ ಡೇವಿಡ್ ಗೆ ಜನ್ಮ ನೀಡುತ್ತಾರೆ. ಧನಲಕ್ಷ್ಮಿ ತನ್ನಿಬ್ಬರು ಮಕ್ಕಳೊಂದಿಗೆ ಆಶ್ರಯ ಕೇಂದ್ರದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಒಮ್ಮೆ ಅಧಿಕಾರಿಗಳು ಧನಲಕ್ಷ್ಮಿ ಅವರಿಗೆ ಬೇರೆ ಕಡೆ ತೆರಳುವಂತೆ ಸೂಚಿಸಿದ್ದರು. ಬಡತನದಲ್ಲಿದ್ದ ಧನಲಕ್ಷ್ಮಿ ಮಗನನ್ನು ಆಶ್ರಯ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಹಾಗಾಗಿ ಆಶ್ರಯ ಕೇಂದ್ರದ ಸಿಬ್ಬಂದಿಗಳೇ ಡೇವಿಡ್ ನನ್ನು ನೋಡಿಕೊಳ್ಳುತ್ತಿದ್ದರು.

    ಕೆಲವು ದಿನಗಳ ಬಳಿಕ ಧನಲಕ್ಷ್ಮಿ ಪುತ್ರನನ್ನು ನೋಡಲು ಆಶ್ರಯ ಕೇಂದ್ರಕ್ಕೆ ಬಂದಿದ್ದರು. ಧನಲಕ್ಷ್ಮಿ ಬರುವ ಮೊದಲೇ ಡೆನ್ಮಾರ್ಕ್ ಮೂಲದ ದಂಪತಿಯನ್ನು ಡೇವಿಡ್ ನನ್ನು ದತ್ತು ಪಡೆದು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದರು.

    ಡೆನ್ಮಾರ್ಕ್ ಸೇರಿದ ಡೇವಿಡ್ ಐಷಾರಾಮಿ ಜೀವನ ನಡೆಸತೊಡಗಿದ. ದೊಡ್ಡವನಾಗುತ್ತಿದ್ದಂತೆ ಡೇವಿಡ್ ಗೆ ತನ್ನ ತಾಯಿಯನ್ನು ಹುಡುಕುವ ಆಸೆ ಮೊಳಕೆಯೊಡೆಯಿತು. ಡೇವಿಡ್ ಬಳಿ ತಾಯಿಯ ಒಂದು ಚಿಕ್ಕ ಫೋಟೋ ಮತ್ತು ಆಶ್ರಯ ಕೇಂದ್ರದ ವಿಳಾಸವಿತ್ತು. 39ನೇ ವಯಸ್ಸಿನಲ್ಲಿ ಫೋಟೋ ಮತ್ತು ಆಶ್ರಯ ಕೇಂದ್ರದ ವಿಳಾಸ ಹಿಡಿದು ಚೆನ್ನೈ ತಲುಪಿದ್ದ ಡೇವಿಡ್ ಆಶ್ಚರ್ಯ ಕಾದಿತ್ತು. ಕಾರಣ ತಾನು ವಾಸವಿದ್ದ ಆಶ್ರಯ ಕೇಂದ್ರ 1990ರಲ್ಲಿ ಮುಚ್ಚಿತ್ತು ಎಂಬ ವಿಷಯ ತಿಳಿದಿದೆ.

    ತಾಯಿಯನ್ನು ಹುಡುಕುವ ಹಠ ಬಿಡದ ಡೇವಿಡ್ ಅಮ್ಮನ ಫೋಟೋ ಹಿಡಿದು ಗಲ್ಲಿ ಗಲ್ಲಿ ಸುತ್ತಾಡಿದ್ದುಂಟು. 2013ರಲ್ಲಿ ಚೆನ್ನೈನ ಸಾಮಾಜಿಕ ಕಾರ್ಯಕರ್ತ ಅರುಣ್ ದೋಹಲೆ ಎಂಬವರನ್ನು ಭೇಟಿಯಾಗುತ್ತಾರೆ. ಅರುಣ್ ಸಹಾಯದಿಂದ ಡೇವಿಡ್ ಸತತ ಆರು ವರ್ಷ ಅಮ್ಮನಿಗಾಗಿ ಚೆನ್ನೈ ಸುತ್ತಿದ್ದಾರೆ. ಆರು ವರ್ಷಗಳ ಪರಿಣಾಮ ಕಳೆದ ತಿಂಗಳು ಧನಲಕ್ಷ್ಮಿ ಪುತ್ರ ಡೇವಿಡ್ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ಶನಿವಾರ ಚೆನ್ನೈಗೆ ಬಂದ ಡೇವಿಡ್ ಅಮ್ಮನನ್ನು ನೋಡಿ ಕಣ್ಣೀರು ಹಾಕಿದ್ದಾರೆ. ಇತ್ತ ಮಗನನ್ನು ನೋಡಿದ ತಾಯಿ ಸಹ ಅಪ್ಪಿಕೊಂಡು ಮುದ್ದಾಡಿ ಕಣ್ಣೀರಿಟ್ಟಿದ್ದಾರೆ.

  • ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಪ್ರೇಯಸಿ ಜೊತೆ ಮಜಾ ಮಾಡಲು ತಾಯಿಯ ಚಿನ್ನವನ್ನೇ ಕದ್ದ

    ಹೈದರಾಬಾದ್: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಮಜಾ ಮಾಡಲು ಮನೆಯಲ್ಲಿದ್ದ ತನ್ನ ತಾಯಿಯ ಚಿನ್ನಾಭರಣವನ್ನೇ ಕದ್ದ ಘಟನೆ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ಅರುಣ್ ಕುಮಾರ್ ಚಿನ್ನ ಕದ್ದ ಆರೋಪಿ. ಅರುಣ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ತನ್ನ ಪ್ರೀತಿಗಾಗಿ ಅವನು ಮನೆಯಲ್ಲಿ ಕದಿಯಲು ಶುರು ಮಾಡಿದ್ದನು. ಅಲ್ಲದೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ಕದಿಯುತ್ತಿದ್ದನು. ಮನೆಯಲ್ಲಿ ಕಳ್ಳತನ ಆಗುವುದನ್ನು ನೋಡಿ ಯುವಕನ ತಾಯಿ ಈ ಬಗ್ಗೆ ಸಂಜೀವ್ ರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಅರುಣ್ ಕುಮಾರ್ ಹಲವು ದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಯುವತಿಗೆ ಬೇಕಾದ ಅಗತ್ಯಗಳನ್ನು ಪೂರೈಸಲು ಅರುಣ್ ಕುಮಾರ್ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದನು. ಅಲ್ಲದೆ ಆಕೆಗೆ ಪ್ರತಿ ತಿಂಗಳು ಉಡುಗೊರೆ ನೀಡುತ್ತಿದ್ದನು. ಇದರ ಜೊತೆಗೆ ಆಕೆಯನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಿದ್ದನು ಎಂದು ತಿಳಿದು ಬಂದಿದೆ.

    ತನ್ನ ಪ್ರೇಯಸಿಗಾಗಿ ಅರುಣ್ ಮನೆಯಲ್ಲಿ ಕಳ್ಳತನ ಮಾಡುವ ನಿರ್ಧಾರ ಮಾಡುತ್ತಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅರುಣ್ 50 ಸಾವಿರ ನಗದು ಹಾಗೂ 80 ಗ್ರಾಂ ಚಿನ್ನಾಭರಣವನ್ನು ಕದ್ದಿದ್ದಾನೆ. ಚಿನ್ನಾಭರಣ ಹಾಗೂ ಹಣ ಕಾಣಿಸದಿದ್ದಾಗ ಯುವಕನ ತಾಯಿ ಮೊದಲು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಚಿನ್ನಾಭರಣ ಹಾಗೂ ಹಣ ಕಳ್ಳತನವಾಗಿದೆ ಎಂದು ಅರಿತ ಯುವಕನ ತಾಯಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರುಣ್‍ನನ್ನು ವಿಚಾರಣೆ ನಡೆಸಿದ್ದಾರೆ. ಆದರೆ ಆತ ಸರಿಯಾದ ಉತ್ತರ ನೀಡಲಿಲ್ಲ. ಹಾಗಾಗಿ ಪೊಲೀಸರು ಅರುಣ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಿದ್ದಾರೆ.

  • ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

    ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ

    ಚೆನ್ನೈ: ತಮಿಳುನಾಡಿನಲ್ಲಿ ತಾಯಿಯೊಬ್ಬರು ಮಗಳು ದಲಿತ ಯುವಕನ್ನು ಪ್ರೀತಿಸಿದ್ದಕ್ಕೆ ಆಕೆಯನ್ನು ಜೀವಂತ ಸುಟ್ಟು ಮರ್ಯಾದಾ ಹತ್ಯೆ ಎಸಗಿದ್ದಾರೆ.

    ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವಜ್ಮಂಗಲಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಜ್ಮಂಗಲಂ ನಿವಾಸಿ ಉಮಾ ಮಹೇಶ್ವರಿ ತನ್ನ 17 ವರ್ಷದ ಮಗಳಿಗೆ ಬೆಂಕಿ ಹಾಕಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮ ಯುವತಿ ಸಾವನ್ನಪ್ಪಿದ್ದು, ತಾಯಿಯ ದೇಹ ಶೇ. 80ರಷ್ಟು ಭಾಗ ಸುಟ್ಟುಹೋಗಿದೆ. ಸದ್ಯ ಆಸ್ಪತ್ರೆಯಲ್ಲಿ ತಾಯಿ ಸಾವು ನೋವಿನ ಮಧ್ಯೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    ಗ್ರಾಮದ ರಾಜ್‍ಕುಮಾರ್(22) ಹಾಗೂ ಯುವತಿ ಪ್ರೀತಿಸುತ್ತಿದ್ದಳು. ಆದರೆ ಮಗಳ ಪ್ರೀತಿ ಮನೆಯವರಿಗೆ ಇಷ್ಟವಿರಲಿಲ್ಲ. ರಾಜ್‍ಕುಮಾರ್ ದಲಿತ ಎಂಬ ಕಾರಣಕ್ಕೆ ಆತನ ಜೊತೆ ಮಗಳನ್ನು ಮದುವೆ ಮಾಡಿದರೆ ತಮ್ಮ ಮರ್ಯಾದೆ ಹೋಗುತ್ತದೆ ಎಂದು ಹೆತ್ತವರು ಅಂಜಿದ್ದರು. ಆತನನ್ನು ಬಿಟ್ಟುಬಿಡು ಎಂದು ಮಗಳಿಗೆ ಸಾಕಷ್ಟು ಬುದ್ಧಿ ಹೇಳಿದ್ದರು. ಆದರೆ, ಹೆತ್ತವರ ಮಾತು ಕೇಳದ ಯುವತಿ ಮುಂದಿನ ಸೋಮವಾರ ರಾಜ್‍ಕುಮಾರ್ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಇದೇ ಭಾನುವಾರ ಆಕೆಗೆ 18 ವರ್ಷ ತುಂಬುತ್ತಿತ್ತು. ಹೀಗಾಗಿ ತಡಮಾಡದೇ ಸೋಮವಾರವೇ ಮದುವೆ ಮಾಡಿಕೊಳ್ಳಲು ಪ್ರೇಮಿಗಳು ನಿರ್ಧರಿಸಿದ್ದರು. ಆದರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇದನ್ನೂ ಓದಿ:ನಿಶ್ಚಿತಾರ್ಥವಾದ ಯುವತಿಯನ್ನು ಪ್ರೀತಿಸಿ ಮದುವೆಯಾದವ ಇಂದು ಶವವಾಗಿ ಪತ್ತೆ

    ಈ ಮಧ್ಯೆ ಮಗಳಿಗೆ ತಮ್ಮ ಜಾತಿಯ ಯುವಕನಿಗೆ ಕೊಟ್ಟು ಮದುವೆ ಮಾಡಲು ಪೋಷಕರು ಸಿದ್ಧತೆ ನಾಡೆಸುತ್ತಿದ್ದರು. ಹೀಗಾಗಿ ಯುವತಿಗೆ ಮನೆಯವರು ಏನಾದರೂ ತೊಂದರೆ ಮಾಡಬಹುದು ಎಂದು ಯುವಕ ಆಕೆಯನ್ನು ಹಾಸ್ಟೆಲ್‍ನಲ್ಲಿ ಇರಿಸಿದ್ದ. ಆದರೆ ಮಗಳು ಮದುವೆಯಾಗುತ್ತಿದ್ದಾಳೆ ಎಂಬ ವಿಚಾರ ತಾಯಿಗೆ ತಿಳಿದಾಗ ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿ, ಮಗಳನ್ನು ಹಾಸ್ಟೆಲ್‍ನಿಂದ ಬಲವಂತವಾಗಿ ಮನೆಗೆ ಕರೆದುಕೊಂಡು ಬಂದಿದ್ದರು. ಇದನ್ನೂ ಓದಿ:ಮದ್ವೆಗೆ ಒಪ್ಪಿಲ್ಲವೆಂದು ಯುವತಿಯ ಕತ್ತು ಸೀಳಿ ಪೊಲೀಸರ ಅತಿಥಿಯಾದ

    ಇದೇ ವಿಚಾರಕ್ಕೆ ಮಗಳು ಹಾಗೂ ಹೆತ್ತವರ ಮಧ್ಯೆ ಜಗಳ ನಡೆದಿತ್ತು. ತಂದೆ-ತಾಯಿ ಎಷ್ಟೇ ಹೇಳಿದರೂ ಮಗಳು ಮಾತ್ರ ಅವರ ಮಾತನ್ನು ಕೇಳಲು ಸಿದ್ಧವಿರಲಿಲ್ಲ. ಮದುವೆಯಾಗಿ ಮರ್ಯಾದೆ ಕಳೆಯುವುದಕ್ಕಿಂದ ಮಗಳು ಸತ್ತರೆ ಒಳ್ಳೆದು ಎಂದು ತಾಯಿ ಯೋಚಿಸಿದ್ದಾರೆ. ರಾತ್ರಿ ಮಗಳು ಮಲಗಿದ್ದಾಗ ತಾಯಿಯೇ ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿದ್ದಾರೆ. ಹಾಗೆಯೇ ತಾನೂ ಕೂಡ ಬೆಂಕಿ ಹಚ್ಚಿಕೊಂಡಿದ್ದರು. ಈ ವೇಳೆ ತಾಯಿ ಮಗಳ ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ತಕ್ಷಣ ಸ್ಥಳಕ್ಕೆ ಬಂದು ಇಬ್ಬರನ್ನೂ ಆಸ್ಪತ್ರೆಗೆ ರವಾನಿಸಿದರು. ಆದರೆ ಯುವತಿ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದು, ತಾಯಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ತಾಯಿ, ಪತ್ನಿಯ ಭವಿಷ್ಯ ನಿರ್ಧಾರ

    ದೆಹಲಿ ಹೈಕೋರ್ಟಿನಲ್ಲಿ ಡಿಕೆಶಿ ತಾಯಿ, ಪತ್ನಿಯ ಭವಿಷ್ಯ ನಿರ್ಧಾರ

    ಬೆಂಗಳೂರು: ಇಡಿ(ಜಾರಿ ನಿರ್ದೇಶನಾಲಯ) ನೀಡಿರುವ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸುವಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಪತ್ನಿ ಉಷಾ, ತಾಯಿ ಗೌರಮ್ಮ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.

    ದೆಹಲಿ ಹೈ ಕೋರ್ಟಿನ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಿದ್ದು, ಡಿ.ಕೆ ಶಿವಕುಮಾರ್ ಆಪ್ತ ಸಹಾಯಕ ಆಂಜನೇಯ ಸಲ್ಲಿಸಿರುವ ಅರ್ಜಿಯನ್ನು ಈ ವೇಳೆ ಒಗ್ಗೂಡಿಸಿಕೊಳ್ಳಲಿದೆ. ಆಂಜನೇಯ ಅತ್ತೆ ಲಕ್ಷ್ಮಮ್ಮ, ಮಾವ ಹನುಮಂತಯ್ಯ ಸಂಬಂಧಿಗಳಾದ ಮೀನಾಕ್ಷಿ, ಜೈಶೀಲ ಅವರಿಗೂ ಇಡಿ ನೋಟಿಸ್ ನೀಡಿ ದೆಹಲಿ ಕಚೇರಿಗೆ ಬಂದು ಉತ್ತರಿಸುವಂತೆ ಸೂಚಿಸಿತ್ತು. ಈ ಸಮನ್ಸ್ ರದ್ದು ಮಾಡಿ ಬೆಂಗಳೂರಿನಲ್ಲಿ ವಿಚಾರಣೆ ನಡೆಸಲು ಇಡಿ ಅಧಿಕಾರಿಗಳಿಗೆ ಸೂಚಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.

    ಈಗಾಗಲೇ ಉಷಾ ಮತ್ತು ಗೌರಮ್ಮ ಪರ ವಕೀಲರ ವಾದ ಮಂಡನೆ ಮುಕ್ತಾಯವಾದ ಹಿನ್ನೆಲೆ ಇಂದು ಆಂಜನೇಯ ಅತ್ತೆ, ಮಾವನ ಪರ ವಕೀಲರು ವಾದ ಮಂಡಿಸಲಿದ್ದಾರೆ. ಬಳಿಕ ಇಡಿ ಪರ ವಕೀಲರು ವಾದ ಮಂಡಿಸಲಿದ್ದು, ಬೆಂಗಳೂರಿನಲ್ಲೆ ವಿಚಾರಣೆಗೆ ದೆಹಲಿ ಹೈಕೋರ್ಟ್ ಅವಕಾಶ ನೀಡುತ್ತಾ ಕಾದು ನೋಡಬೇಕು.