Tag: mother

  • ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿಗೆ ಹೃದಯಾಘಾತ!

    ಮಂಗಳೂರು: ಮಗಳ ಕೊರಳಿಗೆ ತಾಳಿ ಬಿದ್ದ ಕೆಲವೇ ಕ್ಷಣಗಳಲ್ಲಿ ತಾಯಿ ಮೃತಪಟ್ಟ ಹೃದಯವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.

    50 ವರ್ಷದ ವಾರಿಜಾ ಮೃತ ದುರ್ದೈವಿ. ಇವರು ಬೆಳ್ತಂಗಡಿಯ ಪಿಲಿಗೂಡು ನಿವಾಸಿ ತನಿಯಪ್ಪರ ಪತ್ನಿ.

    ಇಂದು ವಾರಿಜಾ ಅವರ ಮಗಳ ಮದುವೆ ಉಪ್ಪಿನಂಗಡಿಯ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ಮಗಳ ಕೊರಳಿಗೆ ತಾಳಿ ಬೀಳುತ್ತಿದ್ದಂತೆಯೇ ವಾರಿಜಾ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಷ್ಟರಲ್ಲೇ ವಾರಿಜ ಮೃತಪಟ್ಟಿದ್ದಾರೆ.

    ವಾರಿಜಾ- ತನಿಯಪ್ಪ ದಂಪತಿಗೆ ಒಬ್ಬಳೇ ಮಗಳು ನವ್ಯ. ಈಕೆಗೆ ಮೊಗ್ರು ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಎಂಬವರ ಜೊತೆ  ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಇಂದು ನವ್ಯಳ ವಿವಾಹದಲ್ಲಿ ತಾಯಿ ವಾರಿಜಾ ಸಂತೋಷದಿಂದಲೇ ಓಡಾಡುತ್ತಿದ್ದರು. ಅತಿಯಾದ ಸಂತೋಷ ಹಾಗೂ ಭಾವದ್ವೇಗದಿಂದಲೇ ವಾರಿಜಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

    ವಧುವಿನ ತಾಯಿಯ ಮರಣದಿಂದಾಗಿ ಇದೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಗಿದೆ.

  • ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ಗೆಳೆಯರಿಂದ್ಲೇ ಮಗಳ ಮೇಲೆ ಗ್ಯಾಂಗ್‍ರೇಪ್ – ವೀಡಿಯೋ ಮಾಡಿದ ನಿಷ್ಕರುಣಿ ತಾಯಿ

    ರೋಹ್ಟಕ್: ಅಪ್ರಾಪ್ತೆಯ ಮೇಲೆ ಆಕೆಯ ತಾಯಿಯ ಗೆಳೆಯರೇ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು, ಅಮ್ಮನೇ ಅದರ ವೀಡಿಯೋ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹರಿಯಾಣದ ರೋಹ್ಟಕ್‍ನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿ ಓದುತ್ತಿರುವ 16 ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ ರಾಮ್ಬಗತ್, ದಿನೇಶ್ ಮತ್ತು ಕಮಲ್ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಇದನ್ನು ತಾಯಿ ವೀಡಿಯೋ ಮಾಡಿದ್ದಾಳೆ ಅಂತಾ ಬಾಲಕಿ ಪೊಲೀಸರ ಮುಂದೆ ಹೇಳಿದ್ದಾಳೆ.

    ಬಾಲಕಿಯ ತಾಯಿ ಈ ಮೂವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಂತೆಯೇ ತಾಯಿ ಅವರೊಂದಿಗೆ ಕಾಲ ಕಳೆಯುತ್ತಿರುವುದನ್ನು ಬಾಲಕಿ ಗಮನಿಸಿದ್ದಾಳೆ. ಆ ಬಳಿಕ ತಾಯಿ ತನ್ನ ಮಗಳ ಮೇಲೆಯೇ ಮೂವರಿಂದ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾಳೆ

    ವೀಡಿಯೋ ಕೂಡ ಮಾಡಿಕೊಂಡಿದ್ದು, ವಿಚಾರ ಬಹಿರಂಗಪಡಿಸಿದ್ರೆ ವೀಡಿಯೋವನ್ನು ವೈರಲ್ ಮಾಡುತ್ತೇನೆ ಅಷ್ಟೇ ಅಲ್ಲದೇ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಮಗಳು ದೂರಿನಲ್ಲಿ ಆರೋಪಿಸಿದ್ದಾಳೆ.

    ಸದ್ಯ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪೂಜೆಗಾಗಿ ತಾಯಿಯ ರುಂಡವನ್ನೇ ಮಚ್ಚಿನಿಂದ ಕೊಚ್ಚಿದ ಮಗ..!

    ಪೂಜೆಗಾಗಿ ತಾಯಿಯ ರುಂಡವನ್ನೇ ಮಚ್ಚಿನಿಂದ ಕೊಚ್ಚಿದ ಮಗ..!

    ಚಿತ್ರದುರ್ಗ: ಪೂಜೆಗಾಗಿ ಹೆತ್ತ ತಾಯಿಯ ರುಂಡವನ್ನೇ ಕಡಿದು ಭೀಕರವಾಗಿ ಕೊಲೆಗೈದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿಗೊಲ್ಲರ ಹಟ್ಟಿಯಲ್ಲಿ ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ನಡೆದಿದೆ.

    ಸಾವಿತ್ರಮ್ಮ (60) ಮಗನಿಂದ ಹತಳಾದ ತಾಯಿ. ತಿಮ್ಮರಾಜು ಎಂಬುವನೇ ತಾಯಿಯ ರುಂಡವನ್ನು ಕಡಿದು ಕೊಲೆ ಮಾಡಿದ ವ್ಯಕ್ತಿ. ಎರಡು ವರ್ಷಗಳ ಹಿಂದೆ ತಿಮ್ಮರಾಜುನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಮಾನಸಿಕ ಅಸ್ವಸ್ಥನಾದ ತಿಮ್ಮರಾಜು ಪ್ರತಿದಿನ ತಾಯಿಯ ಜೊತೆ ಜಗಳ ಮಾಡುತ್ತಿದ್ದನು ಎನ್ನಲಾಗಿದೆ.

    ಮೈಮೇಲೆ ದೇವರು ಬಂದು ತಾಯಿಯನ್ನು ಕೊಲೆ ಮಾಡಲು ಹೇಳಿತು. ಹಾಗಾಗಿ ಕೊಲೆ ಮಾಡಿದ್ದೇನೆ ಎಂದು ಇದೀಗ ತಿಮ್ಮರಾಜು ಪೊಲೀಸ್ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾನೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಕಲಬುರಗಿ: ಬಾವಿಗೆ ಬಿದ್ದು ತಾಯಿ, ಮಗಳ ಸಾವು

    ಕಲಬುರಗಿ: ಬಾವಿಗೆ ಬಿದ್ದು ತಾಯಿ, ಮಗಳ ಸಾವು

    ಕಲಬುರಗಿ: ಬಾವಿಗೆ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿಗಳು ಹೋಡೆಬೀರನಹಳ್ಳಿ ಗ್ರಾಮದ ಅಂಬಿಕಾ ಜಮಾದಾರ ಮತ್ತು ಆಕೆಯ ಮಗಳಾದ ಚೆನ್ನಮ್ಮಾ ಎಂದು ಗುರುತಿಸಲಾಗಿದೆ. ಮುಖ ತೊಳೆಯಲು ಹೋಗಿ ಬಾಲಕಿ ಚೆನ್ನಮ್ಮಾ ಕಾಲು ಜಾರಿ ಬಾವಿಗೆ ಬಿದ್ದಿದಾಳೆ. ಆಕೆಯನ್ನು ರಕ್ಷಿಸಲು ಹೋದ ತಾಯಿ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಮೈದಾನದಲ್ಲಿ ಹಾಕಿ ಆಡುವುದರ ಜೊತೆ ಮಗುವನ್ನೂ ನೋಡಿಕೊಳ್ತಾರೆ ಈ ತಾಯಿ

    ಧಾರವಾಡ: ಒಂದು ಕಡೆ ಮಗುವನ್ನು ನೋಡಿಕೊಳ್ಳಬೇಕು. ಇನ್ನೊಂದು ಕಡೆ ಆಟವಾಡಬೇಕು, ಗೆಲ್ಲಬೇಕು ಎನ್ನುವ ತವಕ. ಹಾಕಿ ಆಡುವುದರ ಜೊತೆಗೆ ತನ್ನ ಮಗುವನ್ನ ಸಂಭಾಳಿಸುತ್ತಿರುವ ತಾಯಿಯ ದೃಶ್ಯ ಧಾರವಾಡದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಡು ಬಂತು.

    ರಾಜ್ಯ ಒಲಂಪಿಕ್ ಕ್ರೀಡಾಕೂಟದ ಹಾಕಿ ತಂಡದಲ್ಲಿ ಆಡುತ್ತಿರುವ ಬಳ್ಳಾರಿ ತಂಡದ ಸಯೀದಾ ಅವರ ಕಥೆಯಿದು. ರಾಷ್ಟ್ರಮಟ್ಟದ ಹಾಕಿ ಕ್ರೀಡಾಪಟುವಾಗಿರುವ ಇವರು ಮೂರು ವರ್ಷಗಳ ನಂತರ ಮತ್ತೆ ಹಾಕಿ ತಂಡದಲ್ಲಿ ಆಡಲು ಬಂದಿದ್ದಾರೆ. 10 ತಿಂಗಳ ಮಗು ಜೊತೆ ಧಾರವಾಡದಕ್ಕೆ ಬಂದಿರುವ ಇವರು ಮಗುವಿನ ಆರೈಕೆಯ ಜೊತೆಗೆ ಹಾಕಿ ಆಟವನ್ನು ಆಡುತ್ತಿದ್ದಾರೆ.

    ಕಳೆದ 13 ವರ್ಷಗಳಿಂದ ಹಾಕಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಸಯೀದಾ ಹಾಕಿಗಾಗಿ ಮಗುವನ್ನ ಬಿಟ್ಟಿಲ್ಲ. ಹಾಗೇ ಮಗುವಿಗಾಗಿ ಹಾಕಿಯನ್ನ ಬಿಡಲಿಲ್ಲ. ಎರಡನ್ನೂ ಒಟ್ಟಿಗೆ ನಿಭಾಯಿಸುತ್ತಿದ್ದಾರೆ. ಸಯೀದಾ ಅವರು ಆಟದ ಜೊತೆಯಲ್ಲೇ ತನ್ನ ಮಗುವನ್ನ ನೋಡಿಕೊಳ್ಳುತ್ತಿರುವುದು ಎಲ್ಲರ ಗಮನ ಸೆಳೆದಿದೆ.

    ಸಯೀದಾ ಅವರಿಗೆ ಎರಡು ಮಕ್ಕಳಿವೆ. 3 ವರ್ಷದ ಮಗನನ್ನ ಬೆಂಗಳೂರಿನ ಪತಿಯ ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಆಟದ ಮಧ್ಯದಲ್ಲಿ ಮಗುಗೆ ಹಾಲುಣಿಸುತ್ತಲೇ ಆಟದ ಮೈದಾನಕ್ಕೆ ಇಳಿಯುತ್ತಾರೆ. ಕಳೆದ 3 ವರ್ಷಗಳಿಂದ ಆಟವಾಡದೇ ಇದ್ರೂ, ಈಗಲೂ ಮೊದಲಿನಷ್ಟು ಹುಮ್ಮಸ್ಸು, ಆಟ ಗೆಲ್ಲಿಸುವ ಶಕ್ತಿ ಇದ್ದೇ ಇದೆ. ಇನ್ನು ಸಯೀದಾ ಹಾಕಿ ತಂಡಕ್ಕೆ ಮರಳಿದ್ದರಿಂದ ಉಳಿದ ಆಟಗಾರರಿಗೆ ಆನೆ ಬಲ ಬಂದಂತಾಗಿದೆ ಎಂದು ಸಯೀದಾರ ಸಹ ಹಾಕಿ ಆಟಗಾರರು ಹೇಳುತ್ತಾರೆ.

    ಈಗಾಗಲೇ ಬಳ್ಳಾರಿ ತಂಡ ಹಾಸನ ತಂಡದ ಜೊತೆ ಗೆಲುವು ಸಾಧಿಸಲು ಸಯೀದಾನೇ ಕಾರಣವಾಗಿದ್ದಾರೆ. ಮುಂದೆ ಇನ್ನೂ ಹಲವು ಜಿಲ್ಲೆಗಳ ಜೊತೆ ಇವರು ಸೆಣಸಲಿದ್ದಾರೆ.