Tag: mother

  • ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ತಾಯಿಯನ್ನ ಕಾಪಾಡಲು ಹೋಗಿ ಪ್ರಾಣ ಕಳೆದುಕೊಂಡ ಮಗಳು

    ರಾಯಚೂರು: ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಗಳು ಕಲ್ಲು ಕ್ವಾರಿಯ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಮಾನ್ವಿಯಲ್ಲಿ ನಡೆದಿದೆ.

    ಮಾನ್ವಿ ಪಟ್ಟಣದ ಅಕ್ಬರ್ ಸಾಬ್ ಕಂಕರ್ ಮಿಲ್ ಹತ್ತಿರ ಈ ದುರ್ಘಟನೆ ನಡೆದಿದೆ. ಪಟ್ಟಣದ ಬೆಳಗಂಪೇಟೆ ನಿವಾಸಿಗಳಾದ ಲಕ್ಷ್ಮಿ(41) ಹಾಗು ಮಗಳು ಮಲ್ಲಮ್ಮ(12) ಸಾವನ್ನಪ್ಪಿದ್ದಾರೆ. ಬಾವಿಯಂತೆ ಬಳಸುತ್ತಿದ್ದ ಕಲ್ಲು ಕ್ವಾರಿಯ ಗುಂಡಿಯಲ್ಲಿ ತಾಯಿ ಲಕ್ಷ್ಮಿ ಕಾಲು ಜಾರಿ ಬಿದ್ದಿದ್ದರು. ತಾಯಿಯನ್ನ ಕಾಪಾಡಲು ಹೋಗಿ ಮಗಳು ಸಹ ಪ್ರಾಣ ಬಿಟ್ಟಿದ್ದಾಳೆ.

    ಸದ್ಯ ಮೃತ ದೇಹಗಳನ್ನ ಹೊರಗೆ ತೆಗೆಯಲಾಗಿದೆ.ಈ ಬಗ್ಗೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 3 ವರ್ಷದ ಮಗುವಿನ ಶವದೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ

    3 ವರ್ಷದ ಮಗುವಿನ ಶವದೊಂದಿಗೆ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆ

    ಬಾಗಲಕೋಟೆ: ಮೂರು ವರ್ಷದ ಮಗನ ಶವದ ಜೊತೆ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆಯಾಗಿರೋ ಘಟನೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.

    25 ವರ್ಷದ ದೀಪಾ ಮೇಟಿ ಮೃತ ಮಹಿಳೆ. ದೀಪಾ ಅವರ ಮೂರು ವರ್ಷದ ಮಗ ಶೌರ್ಯ ಶವ ಕೂಡ ಮನೆಯಲ್ಲಿ ಪತ್ತೆಯಾಗಿದೆ. ತಾಯಿ ಮತ್ತು ಮಗುವಿನ ಸಾವಿಗೆ ಇದೂವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.

    ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿಯಲ್ಲಿ ಕಾಣುತ್ತಿದೆ. ಆದ್ರೆ ತಾಯಿ ಮಗುವನ್ನು ನೀರಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಶಂಕೆಯಿದೆ. ಶವ ಪರೀಕ್ಷೆಯ ನಂತರವಷ್ಟೆ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ ಎಂದು ಎಸ್‍ಪಿ ರಿಷ್ಯಂತ್ ತಿಳಿಸಿದ್ದಾರೆ.

    ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಗಂಡನ ಬಿಟ್ಟು ಲವ್ವರ್ ಜೊತೆ ಮಗಳ ಚೆಲ್ಲಾಟ: ಸಹಕರಿಸದ ಅಪ್ಪನ ಕೊಂದೇ ಬಿಟ್ಟ ತಾಯಿ-ಮಗಳು!

    ಬೆಳಗಾವಿ: ಕೈಹಿಡಿದು ಬಾಳಪೂರ್ತಿ ಜೀವನ ಸಂಗಾತಿಯಾಗಿರುವೆ ಎಂದು ಸಪ್ತಪದಿ ತುಳಿದ ಹೆಂಡತಿಯೇ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ ಭಯಾನಟಕ ಘಟನೆ ಬೆಳಗಾವಿಯ ಗೋಕಾಕ ಹೊರವಲಯದ ಕಡಬಗಟ್ಟಿ ಗ್ರಾಮದಲ್ಲಿ ನಡೆದಿದೆ.

    ಮೂಲತಃ ಗೋಕಾಕ ತಾಲೂಕಿನ ಕೈತನಾಳ ಹೊಸೂರು ಗ್ರಾಮದ ಕೆಂಚಪ್ಪಾ ನೊಗನಿಹಾಳ ತನ್ನ ಪತ್ನಿ ಗೌರವ್ವಾ ನೊಗನಿಹಾಳ ಹಾಕಿದ ಮರ್ಡರ್ ಸ್ಕೆಚ್‍ಗೆ ಬಲಿಯಾಗಿದ್ದಾನೆ. ಕೊಲೆಯಾದ ಕೆಂಚಪ್ಪಾ ಮಗಳು ಸಿದ್ದವ್ವಾ ಕಟ್ಟಿಕಾರ, ಪತ್ನಿ ಗೌರಮ್ಮ ನೋಗನಿಹಾಳ ಸೇರಿ 70 ಸಾವಿರ ಸುಪಾರಿ ನೀಡಿ ಕೊಲೆಮಾಡಿಸಿದ್ದಾರೆ.

    ಮನೆ ಯಜಮಾನ ಮಿಸ್ಸಿಂಗ್ ಆಗಿದ್ದಾನೆ ಎಂದು ಊರಲ್ಲಿ ಸುದ್ದಿ ಹರಡಿಸಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಪಾಪಿ ಪತ್ನಿ ಗೌರವ್ವ ಯತ್ನಿಸಿದ್ದಾಳೆ. ಆದ್ರೆ ಊರ ತುಂಬೆಲ್ಲಾ ಕೆಂಚಪ್ಪಾ ಕಾಣೆಯಾಗಿಲ್ಲ ಬದಲಾಗಿ ಕೊಲೆಯಾಗಿದ್ದಾನೆ ಎಂಬ ಗುಸು ಗುಸು ಸುದ್ದಿ ಹರಡಿತ್ತು. ಸಂಶಯದ ಮೆರೆಗೆ ಕೆಂಚಪ್ಪಾ ಸಹೋದರ ವಿಠ್ಠಲ ಪೊಲೀಸ್ ಠಾಣೆಗೆ ದೂರು ಕೊಟ್ಟರು. ತನಿಖೆ ಆರಂಭಿಸಿದ ಗೋಕಾಕ ಗ್ರಾಮೀಣ ಪೋಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ.

    ಪ್ರಕಣದಲ್ಲಿ ಸುಪಾರಿ ಪಡೆದ ಪ್ರಮೂಖ ಆರೋಪಿ ಶಿವಾಜಿ ಹೊಳೆವ್ವಗೋಳ, ಶಂಕರ ದೇಶಿಂಗೆ, ದುರ್ಗಪ್ಪಾ ನಂದಿ, ರಾಮಸಿದ್ದದ್ದಪ್ಪ ನಂದಿ, ಗೌರವ್ವಾ ನೊಗನಿಹಾಳ ಹಾಗೂ ಸಿದ್ದವ್ವ ಕಟ್ಟಿಕಾರಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಒಟ್ಟಾರೆ ಪತ್ನಿ ಗೌರವ್ವ, ಮಗಳ ನೀಚ ಕೆಲಸಕ್ಕೆ ಅಪ್ಪ ಸಹಕರಿಸಲಿಲ್ಲ ಅಂತ ಸುಪಾರಿ ಕೊಟ್ಟು ಮುಗಿಸಿರುವುದು ಬೆಳಕಿಗೆ ಬಂದಿದೆ.

  • ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ!

    ಕುಡಿಯಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ!

    ಯಾದಗಿರಿ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

    ಅಮಾತೆವ್ವ ಕಂಪ್ಲಿ(70) ಮಗನಿಂದಲೇ ಹತಳಾದ ತಾಯಿ. ಅಮಾತೆವ್ವರ ಮಗ ರಾಮಣ್ಣ ತಾಯಿಗೆ ಪ್ರತಿಬಾರಿಯೂ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನು. ಸೋಮವಾರ ತಾಯಿ ಹಣ ಕೊಡದಕ್ಕೆ ಕುಡಿದ ಅಮಲಿನಲ್ಲಿ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಅಮಾತೆವ್ವ ತಾವು ಪಡೆಯುತ್ತಿದ್ದ ವೃದ್ಧಾಪ್ಯ ವೇತನವನ್ನು ಕೂಡಿಟ್ಟುಕೊಂಡಿದ್ದರು. ಹೀಗಾಗಿ ತಾಯಿಯ ಈ ವೃದ್ಧಾಪ್ಯ ವೇತನದ ಮೇಲೆ ಮಗ ರಾಮಣ್ಣ ಕಣ್ಣು ಹಾಕಿದ್ದು, ಹಣ ಕೊಡುವಂತೆ ಕೇಳುತ್ತಿದ್ದನು. ದೊಣ್ಣೆಯಿಂದ ಹಲ್ಲೆಗೊಳಗಾದ ಅಮಾತೆವ್ವ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಸದ್ಯ ಪೊಲೀಸರು ಆರೋಪಿ ರಾಮಣ್ಣನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

     

  • ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ನೇಮಿಸಿದ್ಳು ತಾಯಿ!

    ಮಗನಿಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ನೇಮಿಸಿದ್ಳು ತಾಯಿ!

    ಲಂಡನ್: ತಾಯಂದಿರು ತಮ್ಮ ಮಕ್ಕಳ ಒಳ್ಳೆಯದಕ್ಕಾಗಿ ಏನಾದ್ರೂ ಮಾಡಲು ಸಿದ್ಧವಿರ್ತಾರೆ. ಆದರೆ ಇಲ್ಲೊಬ್ಬ ತನ್ನ ಮಗನಿಗೆ ಜೀವನದಲ್ಲಿ ಸೆಕ್ಸ್ ಪಾಠ ಹೇಳಿಕೊಡಲು ಸ್ವತಃ ತಾನೇ ಕಾಲ್ ಗರ್ಲ್ ಬುಕ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

    ಇಂಗ್ಲೆಂಡಿನ ಕೇಥಿ ಲೆಟ್ಟೆ ಎಂಬಾಕೆ ತನ್ನ ಮಗ ಜೂಲಿಯಸ್ ಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ಒಬ್ಬಳನ್ನು ನೇಮಿಸಿದ್ದಾಳೆ. ಲಂಡನ್ ನಿವಾಸಿಯಾಗಿರೋ ಕೇಥಿಗೆ ತನ್ನ ಮಗ ಒಂದು ದಿನ `ಅಮ್ಮ ನನಗೆ ಯಾರು ಗರ್ಲ್ ಫ್ರೆಂಡ್ ಇಲ್ಲ, ನಾನು ಜೀವನ ಪೂರ್ತಿಯಾಗಿ ಒಂಟಿಯಾಗಿರಬೇಕಾ ಎಂದು ಕೇಳಿದ್ದಾನೆ. ಮಗನ ನೋವುಭರಿತ ಮಾತುಗಳನ್ನು ಕೇಳಿದ ತಾಯಿ ಕೂಡಲೇ ಸೆಕ್ಸ್ ವರ್ಕ್‍ರೊಬ್ಬರನ್ನು ಬುಕ್ ಮಾಡಿ ಮಗನನ್ನು ಖುಷಿ ಪಡಿಸಿದ್ದಾಳೆ.

    ಮಂದಬುದ್ಧಿಯ ಮಗ: ಜೂಲಿಯಸ್ ಹುಟ್ಟಿದಾಗಿನಿಂದಲೂ ಮಂದಬುದ್ದಿಯವನಾಗಿ ಬೆಳೆದಿದ್ದ. ಜೂಲಿಯಸ್‍ಗೆ ತನ್ನ ಸುತ್ತಮುತ್ತ ನಡೆಯುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಷ್ಟು ಸಹ ಜ್ಞಾನವಿರಲಿಲ್ಲ. ಜೂಲಿಯಸ್ ಶಾಲೆಗೆ ಹೋಗುವಾಗ ಒಂದು ದಿನ ತಾಯಿ ಅವನ ಬೆನ್ನ ಮೇಲೆ ಬರಹವುಳ್ಳ ಪೋಸ್ಟರ್ ಅಂಟಿಸಿ ಕಳುಹಿಸಿದ್ದರು. ಆ ಪೋಸ್ಟರ್‍ನಲ್ಲಿ `ನಾನು ಮಂದಬುದ್ಧಿಯವ ನನಗೆ ಎಲ್ರೂ ನನ್ನ ಎದೆ ಮೇಲೆ ಒದೆಯಿರಿ’ ಎಂದು ಬರಯಲಾಗಿತ್ತು. ಆದ್ರೆ ಜೂಲಿಯಸ್‍ಗೆ ಮಾತ್ರ `ಮಂದಬುದ್ಧಿ’ ಪದದ ಅರ್ಥವೇ ಗೊತ್ತಿರಲಿಲ್ಲ.

    ಜೂಲಿಯಸ್ 20 ವರ್ಷದವನಾದ ಆತನ ಸಹಪಾಠಿಗಳೆಲ್ಲ ಓದುವುದರಲ್ಲಿ, ಆಡುವುದರಲ್ಲಿ ಸೇರಿದಂತೆ ಎಲ್ಲ ಚಟುವಟಿಕೆಗಳಲ್ಲಿ ಮುಂದಿದ್ದರೂ, ಜೂಲಿಯಸ್ ಮಾತ್ರ ಎಂದಿನಂತೆ ಹಿಂದುಳಿಯುತ್ತಿದ್ದ, ಜೂಲಿಯಸ್‍ಗೆ ಕಾಲೇಜಿನಲ್ಲಿ ಒಂದು ದಿನ ಆತನ ಗೆಳತಿಯರು ನೀನು ನಾಮರ್ದ ಎಂದು ಕರೆದು ಚುಡಾಯಿಸಿದ್ದಾರೆ. ಸ್ಥಳದಲ್ಲಿದ್ದ ಆತನ ಇನ್ನುಳಿದ ಸ್ನೇಹಿತರು ಸಹ ಅವನನ್ನು ಅವಮಾನಿಸಿ ಚುಡಾಯಿಸಿದ್ದಾರೆ.

    ಕಾಲೇಜ್‍ನಲ್ಲಿ ನಡೆದ ಘಟನೆ ಬಳಿಕ ಮನೆಗೆ ಬಂದ ಜೂಲಿಯಸ್ ತಾಯಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾನೆ. ಅಮ್ಮಾ ನನಗೆ ಜೀವನದಲ್ಲಿ ಗರ್ಲ್ ಫ್ರೆಂಡ್ ಸಿಗಲ್ವಾ? ನಾನೇಕೆ ಹೀಗಿದ್ದೇನೆ? ನಾನೇನು ಮಾಡ್ಲಿ? ಇದರಲ್ಲಿ ನನ್ನ ತಪ್ಪೇನು? ಎಂದು ಕೇಳಿದ್ದಾನೆ. ಮುಂದೆ ಜೂಲಿಯಸ್ ಇದೇ ವಿಚಾರವಾಗಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಲು ಆರಂಭಿಸಿದನು. ಮಗನ ಸ್ಥಿತಿಯನ್ನು ಕಂಡ ಕೇಥಿ ಯಾವ ತಾಯಿಯೂ ಮಾಡದ ಕೆಲಸವನ್ನು ಮಗನಿಗಾಗಿ ಮಾಡಿದ್ದು, ಮಗನಿಗೆ ಜೀವನದಲ್ಲಿ ಎಲ್ಲರಂತೆ ಹೇಗಿರಬೇಕು ಮತ್ತು ಸೆಕ್ಸ್ ಜೀವನ ಎಂದರೇನು ಹೇಳಿಕೊಡಲು ಕಾಲ್ ಗರ್ಲ್ ಬುಕ್ ಮಾಡಿದ್ದಾಳೆ.

    ಸದ್ಯ ಜೂಲಿಯಸ್ 21 ವರ್ಷದವನಾಗಿದ್ದಾನೆ. ಜೂಲಿಯಸ್‍ನ 21 ನೇ ಬರ್ತ್ ಡೇ ಆಚರಣೆಯ ವೇಳೆ ಆತನಿಗೆ ಸುಂದರವಾದ ಗೆಳತಿಯೊಬ್ಬಳು ಸಿಕ್ಕಿದ್ದಾಳೆ. ಸದ್ಯ ಜೂಲಿಯಸ್ ಎಲ್ಲರಂತೆ ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಬೆಳವಣಿಗೆ ಹೊಂದಿದ್ದು, ಗೆಳತಿಯೊಂದಿಗೆ ಖುಷಿಯಾಗಿದ್ದಾನೆ.

  • ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಮಗಳ ಸಾವಿನ ಸುದ್ದಿಗೆ ಶಾಕ್ ಆಗಿ ತಾಯಿಯೂ ಮೃತಪಟ್ಟಳು!

    ಚಿತ್ರದುರ್ಗ: ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೂರು ವರ್ಷದ ಮಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಆಘಾತಕ್ಕೆ ಒಳಗಾದ ತಾಯಿ ಕೂಡ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಂಡೇನಹಳ್ಳಿ ಗ್ರಾಮದ ಬಾಲಕಿ ಕೀರ್ತನಾ(3) ಹಾಗೂ ತಾಯಿ ರಂಜಿತಾ(23) ಮೃತ ದುರ್ದೈವಿಗಳು.

    ಸೋಮವಾರ ಬೆಳಗ್ಗೆ 5 ಘಂಟೆ ಸುಮಾರಿಗೆ ತೀವ್ರ ಅಸ್ವಸಳಾಗಿದ್ದ ತೀರ್ತನಾಳನ್ನ ಧರ್ಮಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ಆದರೆ ಆ ವೇಳೆಗೆ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಹಿರಿಯೂರು ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಬಾಲಕಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ. ಮಗುವಿನ ಮರಣದಿಂದ ಆಘಾತಕ್ಕೆ ಒಳಗಾದ ತಾಯಿ ಕೂಡ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಬ್ಬಿನ ಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

    ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

    ಬಾಗಲಕೋಟೆ: ಶೀಲ ಶಂಕಿಸಿ ತಾಯಿಯನ್ನೆ ಮಗ ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ರುದ್ರವ್ವ ಹಡಪದ(48) ಕೆಲೆಯಾದ ದುರ್ದೈವಿ ಮಹಿಳೆ. ಸದ್ಯ ಆರೋಪಿ ಮಗ ಮಹಾಂತೇಶ್ ಹಡಪದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮಗ ಮಹಾಂತೇಶ್ ಹಡಪದ ಮೊದಲಿನಿಂದಲೂ ತಾಯಿ ರುದ್ರವ್ವಳ ಶೀಲದ ಬಗ್ಗೆ ಸಂಶಯ ವ್ಯಕ್ತಪಡಿಸ್ತಿದ್ದನು. ಹೀಗಾಗಿ ನಿನ್ನೆ ರಾತ್ರಿ ರುದ್ರವ್ವ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದು ಕೊಲೆಗೈದಿದ್ದಾನೆ ಎಂಬುವುದಾಗಿ ತಿಳಿದುಬಂದಿದೆ.

    ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಮಗನ ಕೊಳೆತ ಶವದ ಜೊತೆ 4 ದಿನ ಸ್ವಾಧೀನವಿಲ್ಲದ ತಾಯಿ ನರಳಾಟ- ಕಾರವಾರದಲ್ಲಿ ಘೋರ ಘಟನೆ

    ಮಗನ ಕೊಳೆತ ಶವದ ಜೊತೆ 4 ದಿನ ಸ್ವಾಧೀನವಿಲ್ಲದ ತಾಯಿ ನರಳಾಟ- ಕಾರವಾರದಲ್ಲಿ ಘೋರ ಘಟನೆ

    ಕಾರವಾರ: ಆನಾರೋಗ್ಯದಿಂದ ಮೃತಪಟ್ಟ ಮಗನ ಶವದೊಂದಿಗೆ ಹೆತ್ತ ತಾಯಿ ನಾಲ್ಕು ದಿನ ಮನೆಯಲ್ಲಿ ದಿನ ಕಳೆದ ಮನಕಲಕುವ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಮಠಕೇರಿಯಲ್ಲಿ ನಡೆದಿದೆ.

    ವಿನಯ್ ಭಟ್ ಎಂಬವರು ತೀವ್ರ ಮದ್ಯವ್ಯಸನಿಯಾಗಿದ್ದು, ನಾಲ್ಕು ದಿನದ ಹಿಂದೆ ಲಿವರ್ ಸಮಸ್ಯೆಯಿಂದ ಮೃತಪಟ್ಟಿದ್ರು. ಇತ್ತ 80 ವರ್ಷದ ತಾಯಿ ಆಶಾ ವಿಷ್ಣುಭಟ್ ಕೂಡ ವಯೋಸಹಜತೆಯಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಮಾತನಾಡುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ತಾಯಿಗೂ ಕೂಡ ಮಗ ಸಾವನ್ನಪ್ಪಿರುವುದು ತಿಳಿದರೂ ಕೂಡ ಮನೆಯ ಬಾಗಿಲು ತೆರೆದು ಬೇರೆಯವರಿಗೆ ಹೇಳುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಮಗನ ಶವದ ಮುಂದೆಯೇ ಕುಳಿತು ರೋಧಿಸುವಂತಾಗಿತ್ತು.

    ಮಗ ಸತ್ತು ನಾಲ್ಕು ದಿನ ಕಳೆದಿದ್ದ ಪರಿಣಾಮ ಹೆಣ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ಒಡೆದು ಒಳಹೋದಾಗ ವಿಷಯ ಬೆಳಕಿಗೆ ಬಂದಿದೆ.

    ಸದ್ಯ ಅನಾರೋಗ್ಯ ಪೀಡಿತ ತಾಯಿ ಆಶಾರವರನ್ನು ಅಂಕೋಲದ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತಿದ್ದಾರೆ ಅಂತ ಾಸ್ಪತ್ರೆ ಮೂಲಗಳು ತಿಳಿಸಿವೆ.

  • ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ವಿಶಾಖಪಟ್ಟಣ: ಮೂವರು ಮಕ್ಕಳ ಕಣ್ಣೆದುರೇ ಮೂವತ್ತೈದು ವರ್ಷದ ಮಹಿಳೆಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಆಂಧ್ರದಲ್ಲಿ ನಡೆದಿದೆ

    ನಗರದ ಇಬ್ಬರು ಪುರುಷರು ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆಯಲ್ಲಿ ನನ್ನ ಮೂವರು ಮಕ್ಕಳ ಮುಂದೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸೋಮವಾರ ಸಂಜೆ ತನ್ನ ಗಂಡ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ನಡೆದಿದೆ ಅಂತಾ ಗಾಜುವಾಕ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ನಾಲ್ವರ ಗುಂಪು ತನ್ನ ಮನೆಯನ್ನೂ ಹಾನಿಗೊಳಿಸಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

    ನಾಲ್ವರ ಪೈಕಿ ಇಬ್ಬರು ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ. ಜತೆಗೆ, ಈ ವಿಷಯವನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಯ ಎಸ್‍ಐ ಟಿ ಇಮ್ಮಾನ್ವೆಲ್ ರಾಜು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ 376ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • ಕಿರಿಯ ಮಗನ ಜೊತೆ ಸೇರಿ ಹಿರಿಯ ಮಗನನ್ನು ಕೊಲೆಗೈದು ತಾನೇ ದೂರು ನೀಡಿದ ತಾಯಿ!

    ಕಿರಿಯ ಮಗನ ಜೊತೆ ಸೇರಿ ಹಿರಿಯ ಮಗನನ್ನು ಕೊಲೆಗೈದು ತಾನೇ ದೂರು ನೀಡಿದ ತಾಯಿ!

    ಧಾರವಾಡ: ಆಸ್ತಿಗಾಗಿ ತಾಯಿಯೊಬ್ಬಳು ತನ್ನ ಕಿರಿಯ ಮಗನ ಜೊತೆ ಸೇರಿ ಹಿರಿಯ ಮಗನನ್ನು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಚನ್ನಪ್ಪ ಹೊಸಮನಿಯೇ ತಾಯಿ ಹಾಗೂ ಸಹೋದರನಿಂದ ಕೊಲೆಯಾದ ವ್ಯಕ್ತಿ. ಕಳೆದ ಜೂನ್ 29 ರಂದು ದೇವಿಕೊಪ್ಪ ಗ್ರಾಮದ ಬಳಿಯ ಇಂಚಗೇರಿ ಕ್ರಾಸ್ ಬಳಿ ಚನ್ನಪ್ಪ ಶವ ಪತ್ತೆಯಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕಲಘಟಗಿ ಪೊಲೀಸರು, ತನಿಖೆ ಕೈಗೊಂಡಿದ್ದರು.

    ಇತ್ತ ಕೊಲೆಯಾದ ಚನ್ನಪ್ಪನ ತಾಯಿ ಮಲ್ಲವ್ವ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮಗನ ಕೊಲೆಯಾಗಿದೆ ಎಂದು ದೂರನ್ನು ನೀಡಿದ್ದಳು. ನಂತರ ಪೊಲೀಸರು ತನಿಖೆ ನಡೆಸಿದ ಬಳಿಕ ಮಲ್ಲವ್ವ, ಸಹೋದರ ಬಸವರಾಜ್, ಸುಪಾರಿ ಹಂತಕರಾದ ನಾಗಯ್ಯ ಹಿರೇಮಠ ಹಾಗೂ ಚನ್ನಬಸಪ್ಪ ಎಂಬವರನ್ನು ಬಂಧಿಸಿದ್ದರು.

    ವಿಚಾರಣೆ ನಡೆಸಿದ ವೇಳೆ 2 ಎಕರೆ ಆಸ್ತಿಗಾಗಿ ಮಗನ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ತಾಯಿ ಮಲ್ಲವ್ವ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಈ ಕೊಲೆ ದೇವಿಕೊಪ್ಪ ಗ್ರಾಮದ ಚನ್ನಪ್ಪನ ಮನೆಯಲ್ಲೇ ನಡೆದಿದ್ದು, ಕೊಲೆಯ ನಂತರ ಹಂತಕರು ಶವವನ್ನ ಇಂಚಗೇರಿ ಕ್ರಾಸ್ ಬಳಿ ತಂದು ಎಸೆದು ಹೋಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

    ಸದ್ಯ ಈ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಲಘಟಗಿ ಪೊಲೀಸರು, ಅರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.