Tag: mother

  • ತಾಯಿಗೆ ವಿಡಿಯೋ ಕಾಲ್ ಮಾಡಿ ಗೃಹಿಣಿ ನಾಪತ್ತೆ ಪ್ರಕರಣ: ಸಹಾಯ ಮಾಡಿದ್ದ ಫೇಸ್ ಬುಕ್ ಗೆಳೆಯನಿಗೆ ಸಂಕಷ್ಟ

    ತಾಯಿಗೆ ವಿಡಿಯೋ ಕಾಲ್ ಮಾಡಿ ಗೃಹಿಣಿ ನಾಪತ್ತೆ ಪ್ರಕರಣ: ಸಹಾಯ ಮಾಡಿದ್ದ ಫೇಸ್ ಬುಕ್ ಗೆಳೆಯನಿಗೆ ಸಂಕಷ್ಟ

    ರಾಯಚೂರು: ತಾಯಿಗೆ ವಿಡಿಯೋ ಕಾಲ್ ಮಾಡಿ ಮೈಸೂರಿನಿಂದ ಮಗುವಿನೊಂದಿಗೆ ಪರಾರಿಯಾಗಿದ್ದ ಗೃಹಿಣಿಯ ಫೇಸ್ ಬುಕ್ ಗೆಳೆಯನಿಗೆ ಇದೀಗ ಕಾನೂನು ಭಯ ಶುರುವಾಗಿದೆ.

    ಹೌದು. ತನ್ನ ಪತಿ ಹಾಗೂ ಪತಿ ಮನೆಯವ ಕಿರುಕುಳ ತಾಳಲಾರದೆ ಹೊರಬಂದ ಮೈಸೂರು ಮೂಲದ ನಿಖಿತಾ ತನ್ನ ಫೆಸ್ ಬುಕ್ ಗೆಳೆಯನ ಮೂಲಕ ಆಶ್ರಮ ಸೇರಲು ರಾಯಚೂರಿಗೆ ಬಂದಿದ್ದರು. ಅಂತೆಯೇ ಸಹಾಯ ಮಾಡಿದ್ದ ಗೆಳೆಯ ಶಶಿಕಾಂತ್ ಇದೀಗ ಆತಂಕದಲ್ಲಿದ್ದಾರೆ.

    ಇದನ್ನೂ ಓದಿ: ತಾಯಿಗೆ ವಿಡಿಯೋ ಕಾಲ್ ಮಾಡಿ ನಾಪತ್ತೆಯಾಗಿದ್ದ ಗೃಹಿಣಿ ರಾಯಚೂರಿನಲ್ಲಿ ಪತ್ತೆ- ಪ್ರಕರಣಕ್ಕೆ ರೋಚಕ ಟ್ವಿಸ್ಟ್ 

    ರಾಯಚೂರಿನಿಂದ ನಿಖಿತಾಳ ಜೊತೆ ಶಶಿಕಾಂತ್ ಅವರನ್ನು ಕರೆದೊಯ್ದ ಮೈಸೂರಿನ ವಿಜಯನಗರ ಠಾಣೆ ಪೊಲೀಸರು, ಎರಡು ದಿನ ವಿಚಾರಣೆಗೊಳಪಡಿಸಿ ಬಿಟ್ಟಿದ್ದಾರೆ. ಇನ್ನು ನಿಖಿತಾಳನ್ನ ಆಕೆಯ ತಾಯಿ ಮನೆಗೆ ಬಿಟ್ಟಿದ್ದಾರೆ. ಆದ್ರೆ ತಂದೆಯ ಕಿರುಕುಳ ಇರುವುದರಿಂದ ತಾಯಿ ಹತ್ತಿರ ಬಿಟ್ಟರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿಖಿತಾ ಅವರು ಶಶಿಕಾಂತ್ ಬಳಿ ಹೇಳಿದ್ದರು.

    ಈಗ ನಿಖಿತಾ ಹೆಚ್ಚು ಕಡಿಮೆ ಮಾಡಿಕೊಂಡರೆ ನಾನು ಜವಾಬ್ದಾರನಲ್ಲ ನನ್ನದೇನು ತಪ್ಪಿಲ್ಲ. ಕಷ್ಟದಲ್ಲಿದ್ದಾಳೆ ಅಂತ ಸ್ನೇಹಿತೆ ಗೆ ಸಹಾಯ ಮಾಡಲು ಮುಂದಾಗಿರುವುದು ತಪ್ಪಾಗಿದೆ ಅಂತ ಶಶಿಕಾಂತ ಅಲವತ್ತುಕೊಳ್ಳುತ್ತಿದ್ದಾರೆ. ಈ ಕುರಿತು ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ತನ್ನ ಹೇಳಿಕೆ ನೀಡಲು ಮುಂದಾಗಿದ್ದಾರೆ.

    ಇದನ್ನೂ ಓದಿ: `ದಯವಿಟ್ಟು ಹುಡ್ಕೋ ಪ್ರಯತ್ನ ಮಾಡ್ಬೇಡಿ ಮಮ್ಮಿ’- ವಿಡಿಯೋ ಕಾಲ್ ಮಾಡಿ ಮಗುವಿನೊಂದಿಗೆ ಗೃಹಿಣಿ ನಾಪತ್ತೆ!

    https://www.youtube.com/watch?v=-CQL0kx4Nlc

     

  • ಇಬ್ಬರು ಹೆಣ್ಣುಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

    ಇಬ್ಬರು ಹೆಣ್ಣುಮಕ್ಕಳಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!

    ಬೆಂಗಳೂರು: ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನೇಣು ಬಿಗಿದು ಬಳಿಕ ತಾಯಿಯೂ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    34 ವರ್ಷದ ರೇಣುಕಾ, ಮಕ್ಕಳಾದ ಪಾವನಿ(10) ಹಾಗೂ ನಿಶಿತಾ (6) ಮೃತ ದುರ್ದೈವಿಗಳು. ರೇಣುಕಾ ಅವರ ಪತಿ 35 ಲಕ್ಷ ರೂ.ನಷ್ಟು ಸಾಲ ಮಾಡಿದ್ರು. ಮಕ್ಕಳಿಗಾಗಿ ಗಂಡ ಏನನ್ನೂ ಉಳಿತಾಯ ಮಾಡದ ಹಿನ್ನೆಲೆಯಲ್ಲಿ ಮನನೊಂದ ತಾಯಿ ರೇಣುಕಾ ಮಕ್ಕಳನ್ನು ಸಾಯಿಸಿ ಬಳಿಕ ಬೆಡ್‍ರೂಮ್‍ನಲ್ಲಿ ನೇಣು ಹಾಕಿಕೊಂಡಿದ್ದಾರೆ.

    ರೇಣುಕಾ ಚಿನ್ಮಯ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡ್ತಿದ್ದರು. ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಾಕಿಂಗ್: ತಾಯಿಯನ್ನೇ ಕೊಂದು ಹೃದಯ ತೆಗೆದು ಚಟ್ನಿಯೊಂದಿಗೆ ತಿಂದ!

    ಶಾಕಿಂಗ್: ತಾಯಿಯನ್ನೇ ಕೊಂದು ಹೃದಯ ತೆಗೆದು ಚಟ್ನಿಯೊಂದಿಗೆ ತಿಂದ!

    ಮುಂಬೈ: ತಿನ್ನಲು ಊಟ ಸಿಗದ ಕಾರಣ 27 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಕೊಂದು ಆಕೆಯ ಹೃದಯವನ್ನು ತಿಂದಿದ್ದಾನೆ ಎಂಬ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ.

    ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ತಾಯಿಯನ್ನು 65 ವರ್ಷದ ಯೆಲಾವಾ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ ನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸುನಿಲ್ ತನ್ನ ತಾಯಿಯನ್ನು ಇರಿದು ಕೊಂದು ಆಕೆಯ ಹೃದಯವನ್ನ ಚಟ್ನಿ ಹಾಗೂ ಮೆಣಸಿನಪುಡಿಯೊಂದಿಗೆ ನೆಂಚಿಕೊಂಡು ತಿಂದಿದ್ದಾನೆ. ಕೆಲವು ಗಂಟೆಗಳ ಬಳಿಕ ಆತ ಮನೆಯಿಂದ ಹೊರಬಂದಿದ್ದು, ಆತನ ಕೈಗಳು ರಕ್ತಸಿಕ್ತವಾಗಿತ್ತು ಎಂದು ವರದಿಯಾಗಿದೆ.

    ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಶಹಾಪುರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಮೋರೆ, ಸುನಿಲ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ. ಈತನಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಹೆಂಡತಿ ತನ್ನ ಮಕ್ಕಳೊಂದಿಗೆ ಮುಂಬೈನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಅಂತ ಹೇಳಿದ್ರು.

    ಘಟನೆ ನಡೆದ ದಿನ ಸುನಿಲ್ ಕಂಠಪೂರ್ತಿ ಕುಡಿದಿದ್ದ. ಮೊದಲು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದ. ಆದ್ರೆ ಅವರು ಏನೂ ಕೊಡದೇ ಇದ್ದಾಗ ತನ್ನ ಮನೆಗೆ ಹೋಗಿದ್ದಾನೆ. ಮನೆಗೆ ಹೋದ ನಂತರ ತಾಯಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೋಪದಲ್ಲಿ ಆಕೆಯನ್ನ ಇರಿದು ಕೊಂದಿದ್ದಾನೆ. ನಂತರ ಆಕೆಯ ಹೃದಯವನ್ನು ತೆಗೆದು ಪ್ಲೇಟ್‍ನಲ್ಲಿ ಇಟ್ಟಿದ್ದಾನೆ. ಮನೆಯಲ್ಲಿ ಚಟ್ನಿ ಹಾಗೂ ಪೆಪ್ಪರ್ ಸ್ಪ್ರೇ ಪತ್ತೆಯಾಗಿದೆ. ಅದನ್ನು ಆತ ಹೃದಯದ ಮೇಲೆ ಉದುರಿಸಿದ್ದ. ಹೃದಯದ ಸ್ವಲ್ಪ ಭಾಗವನ್ನು ಆತ ತಂದಿರಬಹುದು ಎಂಬ ಶಂಕೆಯಿದೆ. ಸದ್ಯ ಆತನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ತಿಳಿಸಿದ್ರು.

  • ಮಗಳನ್ನು ಟೆರೇಸ್ ಮೇಲಿಂದ ಎಸೆದಿದ್ದು ಯಾಕೆ?

    ಮಗಳನ್ನು ಟೆರೇಸ್ ಮೇಲಿಂದ ಎಸೆದಿದ್ದು ಯಾಕೆ?

    ಬೆಂಗಳೂರು: ಬಡತನ ಮತ್ತು ಮಗಳ ಬುದ್ದಿಮಾಂದ್ಯತೆಯಿಂದಾಗಿ ತಾಯಿ ಸ್ವಾತಿಯು ತನ್ನ 9 ವರ್ಷದ ಮಗಳು ಶ್ರೇಯಾಳನ್ನು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.

    ಶ್ರೇಯಾ ಬುದ್ದಿಮಾಂದ್ಯ ಬಾಲಕಿಯಾಗಿದ್ದಳು. ಇನ್ನೂ ಸ್ವಾತಿಗೆ ಮುಂದೆ ಮಕ್ಕಳಾಗಲ್ಲ ಎಂಬ ವಿಚಾರ ತಿಳಿದ ಪತಿರಾಯ ಸರ್ಕಾರ್ ಕಳೆದ ಆರು ತಿಂಗಳಿನಿಂದ ಹೆಂಡತಿ ಮತ್ತು ಮಗುವನ್ನು ಬಿಟ್ಟು ಬೇರೊಂದು ಕಡೆ ವಾಸವಾಗಿದ್ದನು. ಎರಡು ದಿನಗಳಿಂದ ಊಟಕ್ಕೆ ದುಡ್ಡಿಲ್ಲದೇ ತಾಯಿ ಮತ್ತು ಮಗು ಇಬ್ಬರೂ ಪರದಾಡುತ್ತಿದ್ದರು. ಸ್ವಾತಿ ತನ್ನ ಮಗಳಿಗೆ ಚಿಕಿತ್ಸೆ ಕೊಡಿಸಲು ದುಡ್ಡಿಲ್ಲದೆ ಸಾಕಷ್ಟು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ

    ಮಗಳು ಶ್ರೇಯಾ ಮನೆಯಲ್ಲಿ ತುಂಬಾ ಗಲಾಟೆ ಮಾಡುತ್ತಿದ್ದಳು. ಇದನ್ನು ನೋಡಿದ ಸ್ವಾತಿ ಬೇಸತ್ತು ಮಗಳನ್ನು ಟೇರೆಸ್ ಮೇಲಿಂದ ಎಸೆದು ಕೊಲೆ ಮಾಡಿದ್ದಾಳೆ. ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಅಷ್ಟರಲ್ಲಿಯೇ ಸ್ಥಳೀಯರು ಸ್ವಾತಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಸ್ವಾತಿ ಪುಟ್ಟೆನಹಳ್ಳಿ ಪೊಲೀಸರ ವಶದಲ್ಲಿದ್ದಾಳೆ.

    ಭಾನುವಾರ ನಡೆದಿದ್ದೇನು?:
    ಮಧ್ಯಾಹ್ನ 3.30ರ ವೇಳೆಗೆ ಮನೆಯ 3 ಮಹಡಿಯಿಂದ ಸ್ವಾತಿ ಶ್ರೇಯಾಳನ್ನು ಎಸೆದಿದ್ದಳು. ನಂತರ ಕೆಳಗೆ ಬಂದು ನೋಡಿದಾಗ ಶ್ರೇಯಾ ಜೀವಂತ ಇರುವುದನ್ನು ನೋಡಿದ್ದಾಳೆ. ಪುನಃ ಮಗುವನ್ನು ಎತ್ತಿಕೊಂಡು ಅದೇ ಜಾಗಕ್ಕೆ ಹೋಗಿ ಎರಡನೇ ಬಾರಿ ಮೇಲಿನಿಂದ ಕೆಳಗಡೆ ಎಸೆದಿದ್ದಾಳೆ.

    ಗೊತ್ತಾಗಿದ್ದು ಹೇಗೆ?
    ಸ್ವಾತಿ ಎರಡನೇ ಬಾರಿ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದಿರುವುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಮಗಳನ್ನು ಎಸೆಯುವುದನ್ನು ನೋಡಿದ ನಂತರ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ.

    ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ:
    ಶ್ರೇಯಾ ಬಿದ್ದ ಕೂಡಲೇ ನನ್ನ ಮಗಳು ಮನೆಗೆ ಬಂದು ಅಮ್ಮ ಮಗು ಮೇಲಿನಿಂದ ಬಿದ್ದಿದ್ದಾಳೆ ಎಂದು ಹೇಳಿದಳು. ಕೂಡಲೇ ನಾನು ಮನೆಯ ಹೊರಗಡೆ ಬಂದೆ. ಆಗ ಆಕೆ ಮಗಳನ್ನು ಎತ್ತಿಕೊಂಡು ಮೇಲಕ್ಕೆ ಹೋಗುತ್ತಿದ್ದಳು. ಆಕೆಯನ್ನು ನಾನು ಹಿಂಬಾಲಿಸಿ ಹೋದೆ. ಅಷ್ಟರಲ್ಲಿ ಆಕೆ ಮೇಲುಗಡೆಗೆ ಹೋಗಿ ಮಗಳನ್ನು ಎಸೆದೇ ಬಿಟ್ಟಳು. ಶ್ರೇಯಾ ಕೆಳಗಡೆ ಬಿದ್ದ ಕೂಡಲೇ ನಮ್ಮ ಯಜಮಾನರಿಗೆ ಗೊತ್ತಾಯಿತು. ಅವರು ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಯಿತು. 15 ನಿಮಿಷ ಆದ ಬಳಿಕ ಆಕೆ ನೈಟಿಯನ್ನು ಬದಲಾಯಿಸಿ ಚೂಡಿಧಾರ್ ಧರಿಸಿ ಮನೆಯಿಂದ ಕೆಳಗಡೆ ಇಳಿದಳು. ಮಗಳಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಪ್ರತಿದಿನ ಮಗಳ ಜೊತೆ ಸ್ವಾತಿ ಆಟವಾಡುತ್ತಿದ್ದಳು. ಆದರೆ ಇಂದು ಏನಾಯ್ತು ಗೊತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ಹೆತ್ತ ತಾಯಿಯೇ 9 ವರ್ಷದ ಮಗಳನ್ನು ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ಳು!

    ಹೆತ್ತ ತಾಯಿಯೇ 9 ವರ್ಷದ ಮಗಳನ್ನು ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ಳು!

    ಬೆಂಗಳೂರು: ಹೆತ್ತ ತಾಯಿಯೇ 9 ವರ್ಷ ಮಗಳನ್ನು ಕಟ್ಟಡದ ಎರಡನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಶಾಕಿಂಗ್ ಘಟನೆ ಭಾನುವಾರ ಮಧ್ಯಾಹ್ನ ಜೆಪಿ ನಗರದಲ್ಲಿ ನಡೆದಿದೆ.

    ಶ್ರೇಯಾ(9) ಕೊಲೆಯಾದ ಬಾಲಕಿ. ಮಗಳನ್ನು ತಳ್ಳಿದ ಆರೋಪದ ಅಡಿ ತಾಯಿ ಸ್ವಾತಿಯನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಬೆಂಗಳೂರಿನ ಜೆಪಿ ನಗರದ ಜರಗನಹಳ್ಳಿಯಲ್ಲಿ ಕೋಲ್ಕತ್ತಾ ಮೂಲದ ಸರ್ಕಾರ್ ಮತ್ತು ಸ್ವಾತಿ ನೆಲೆಸಿದ್ದರು. ಪತಿ ಸರ್ಕಾರ್ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಶಿಕ್ಷಕಿಯಾಗಿದ್ದ ಸ್ವಾತಿ ಎರಡು ವರ್ಷಗಳಿಂದ ಮನೆಯಲ್ಲಿದ್ದಳು. ಕಳೆದ ಒಂದು ವರ್ಷದಿಂದ ಸರ್ಕಾರ್ ಬೇರೆ ಕಡೆ ನೆಲೆಸಿದ್ದರು.

    ಇಂದು ಏನಾಯ್ತು?
    ಮಧ್ಯಾಹ್ನ 3.30ರ ವೇಳೆಗೆ ಮನೆಯ 3 ಮಹಡಿಯಿಂದ ಸ್ವಾತಿ ಶ್ರೇಯಾಳನ್ನು ಎಸೆದಿದ್ದಾಳೆ. ನಂತರ ಕೆಳಗೆ ಬಂದು ನೋಡಿದಾಗ ಸ್ವಾತಿ ಜೀವಂತ ಇರುವುದನ್ನು ನೋಡಿದ್ದಾಳೆ. ಪುನಃ ಮಗುವನ್ನು ಎತ್ತಿಕೊಂಡು ಅದೇ ಜಾಗಕ್ಕೆ ಹೋಗಿ ಎರಡನೇ ಬಾರಿ ಮೇಲಿನಿಂದ ಕೆಳಗಡೆ ಎಸೆದಿದ್ದಾಳೆ.

    ಗೊತ್ತಾಗಿದ್ದು ಹೇಗೆ?
    ಸ್ವಾತಿ ಎರಡನೇ ಬಾರಿ ಬಂದು ಮಗುವನ್ನು ಎತ್ತಿಕೊಂಡು ಹೋಗಿ ಮೇಲಿನಿಂದ ಎಸೆದಿರುವುದನ್ನು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ನೋಡಿದ್ದಾರೆ. ಮಗಳನ್ನು ಎಸೆಯುವುದನ್ನು ನೋಡಿದ ನಂತರ ಆಕೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ತಿಳಿಸಿದ್ದಾರೆ.

    ಸ್ವಾತಿ ಮಾನಸಿಕ ಅಸ್ವಸ್ಥೆ ಎನ್ನುವ ಶಂಕೆ ವ್ಯಕ್ತವಾಗಿದೆ. 9 ವರ್ಷದ ಶ್ರೇಯಾಗೆ ಮಾತು ಬರುತ್ತಿರಲಿಲ್ಲ ಎನ್ನುವ ಲಭ್ಯವಾಗಿದೆ. ಪೊಲೀಸರು ಈಗ ಸ್ವಾತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು ಹೀಗೆ:
    ಶ್ರೇಯಾ ಬಿದ್ದದ್ದನ್ನು ಗಮನಿಸಿ ನನ್ನ ಮಗಳು ಮನೆಗೆ ಬಂದು ಅಮ್ಮ ಮಗು ಮೇಲಿನಿಂದ ಬಿದ್ದಿದ್ದಾಳೆ ಎಂದು ಹೇಳಿದಳು. ಕೂಡಲೇ ನಾನು ಮನೆಯ ಹೊರಗಡೆ ಬಂದೆ. ಆಗ ಆಕೆ ಮಗಳನ್ನು ಎತ್ತಿಕೊಂಡು ಮೇಲಕ್ಕೆ ಹೋಗುತ್ತಿದ್ದಳು. ಆಕೆಯನ್ನು ನಾನು ಹಿಂಬಾಲಿಸಿ ಹೋದೆ. ಅಷ್ಟರಲ್ಲಿ ಆಕೆ ಮೇಲುಗಡೆಗೆ ಹೋಗಿ ಮಗಳನ್ನು ಎಸೆದೇ ಬಿಟ್ಟಳು. ಶ್ರೇಯಾ ಕೆಳಗಡೆ ಬಿದ್ದ ಕೂಡಲೇ ನಮ್ಮ ಯಜಮಾನರಿಗೆ ಗೊತ್ತಾಯಿತು. ಅವರು ನೋಡಿದಾಗ ಆಕೆ ಮೃತಪಟ್ಟಿರುವುದು ಗೊತ್ತಾಯಿತು. 15 ನಿಮಿಷ ಆದ ಬಳಿಕ ಆಕೆ ನೈಟಿಯನ್ನು ಬದಲಾಯಿಸಿ ಚೂಡಿಧಾರ್ ಧರಿಸಿ ಮನೆಯಿಂದ ಕೆಳಗಡೆ ಇಳಿದಳು. ಮಗಳಿಗೆ ಸರಿಯಾಗಿ ಮಾತು ಬರುತ್ತಿರಲಿಲ್ಲ. ಪ್ರತಿದಿನ ಮಗಳ ಜೊತೆ ಸ್ವಾತಿ ಆಟವಾಡುತ್ತಿದ್ದಳು. ಆದರೆ ಇಂದು ಏನಾಯ್ತು ಗೊತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ವಿಡಿಯೋ: ತಾಯಿ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನಿಗೆ ಬಿತ್ತು ಚಪ್ಪಲಿ ಏಟು

    ವಿಡಿಯೋ: ತಾಯಿ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನಿಗೆ ಬಿತ್ತು ಚಪ್ಪಲಿ ಏಟು

    ಹಾವೇರಿ: ತನ್ನ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವತಿಯೊಬ್ಬಳು ರೌದ್ರಾವತಾರ ತಾಳಿ ಯುವಕನನ್ನ ಚಪ್ಪಲಿಯಿಂದ ಥಳಿಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಪಿಬಿ ರಸ್ತೆಯಲ್ಲಿ ನಡೆದಿದೆ.

    ಆಗಸ್ಟ್ 18ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ ಧರ್ಮದೇಟು ನೀಡಿದ ಯುವತಿ ಯಾರು ಮತ್ತು ಧರ್ಮದೇಟು ತಿಂದ ಆಸಾಮಿ ಯಾರು ಎಂಬುದು ಇನ್ನು ಗೊತ್ತಾಗಿಲ್ಲ.

    ದಾವಣಗೆರೆ ಜಿಲ್ಲೆಯ ಹರಿಹರ ಕಡೆಯಿಂದ ಬಂದಿದ್ದ ಯುವತಿ ಮತ್ತು ಆಕೆಯ ತಾಯಿ ರಾಣೇಬೆನ್ನೂರು ನಗರದವರು ಇರಬಹುದು ಎನ್ನಲಾಗಿದೆ. ಮನೆ ಸೇರುವ ಧಾವಂತದಲ್ಲಿ ತಾಯಿ ಮತ್ತು ಮಗಳು ಮನೆಗೆ ಹೋಗುತ್ತಿದ್ದಾಗ ಟೆಂಪೋ ಬಳಿ ನಿಂತಿದ್ದ ಯುವಕನೊಬ್ಬ ಯುವತಿಯ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದ್ರಿಂದ ಕೋಪಗೊಂಡ ಯುವತಿ ಕೈಯಲ್ಲಿ ಚಪ್ಪಲಿ ಹಿಡಿದು ಯುವಕನಿಗೆ ಥಳಿಸಿದ್ದಾರೆ.

    ನನ್ನ ತಾಯಿ ಜೊತೆಗೆ ಅಸಭ್ಯವಾಗಿ ವರ್ತಿಸ್ತೀಯಾ. ನೀನು ಜೀವನದಲ್ಲಿ ಎಂದೂ ಮರೆಯಬಾರ್ದು ಎನ್ನುತ್ತಲೇ ಯುವತಿ ಚಪ್ಪಲಿಯಿಂದ ಥಳಿಸಿದ್ದಾರೆ. ನಂತರ ಸ್ಥಳೀಯರು ಯುವತಿಯನ್ನ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಈ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಈ ಕುರಿತು ಇದೂವರೆಗೂ ಯಾವುದೇ ದೂರು ದಾಖಲಾಗಿಲ್ಲ.

    https://www.youtube.com/watch?v=0E8g37ElkJk

  • ನಾಪತ್ತೆಯಾಗಿದ್ದ ಮೈಸೂರಿನ ತಾಯಿ, ಮಗಳು ಶವವಾಗಿ ಪತ್ತೆ – ಪತಿ ಮೇಲೆ ಶಂಕೆ

    ನಾಪತ್ತೆಯಾಗಿದ್ದ ಮೈಸೂರಿನ ತಾಯಿ, ಮಗಳು ಶವವಾಗಿ ಪತ್ತೆ – ಪತಿ ಮೇಲೆ ಶಂಕೆ

    ಮೈಸೂರು: ಇಲ್ಲಿನ ಕುವೆಂಪುನಗರದಿಂದ ಗೃಹಿಣಿ ಮತ್ತು ಆಕೆಯ ಪುತ್ರಿ ನಾಪತ್ತೆಯಾಗಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಗೃಹಿಣಿ ಸ್ಫೂರ್ತಿ ಮತ್ತು ಆಕೆಯ ಪುತ್ರಿ ಹೇಮಾನಿ ಶವ ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಸಿಕ್ಕಿದೆ.

    ಸ್ಫೂರ್ತಿಯ ಪತಿ ಯೋಗಾನಂದ್, ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿ ಕುಕ್ಕರಹಳ್ಳಿ ಕೆರೆಗೆ ಎಸೆದು ಪತ್ನಿ, ಮಗಳು ನಾಪತ್ತೆಯಾಗಿದ್ದಾರೆ ಎಂದು ನಾಟಕವಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಅಲ್ಲದೆ ಯೋಗಾನಂದ್ ಇವತ್ತಿನಿಂದ ಒಂದು ತಿಂಗಳ ಪ್ರವಾಸಕ್ಕಾಗಿ ದುಬೈಗೆ ಹೋಗಲು ಸಿದ್ಧನಾಗಿದ್ದ. ಟಿಕೆಟ್ ಕೂಡ ಬುಕ್ ಆಗಿತ್ತು. ಪತ್ನಿ ಮತ್ತು ಮಗಳ ಶವ ಸಿಗುವ ಮುನ್ನವೇ ವಿದೇಶಕ್ಕೆ ಹೋಗುವುದು ಯೋಗಾನಂದ್ ಉದ್ದೇಶವಾಗಿತ್ತು ಎಂದು ಸ್ಫೂರ್ತಿ ಪೋಷಕರು ಆರೋಪಿಸಿದ್ದಾರೆ.

    ಯೋಗಾನಂದ್‍ಗೆ ತನ್ನ ಕಚೇರಿಯಲ್ಲಿನ ಯುವತಿ ಜೊತೆ ಅಕ್ರಮ ಸಂಬಂಧ ಇತ್ತು. ಈ ಕಾರಣಕ್ಕೆ ಪತ್ನಿ ಜೊತೆ ಜಗಳವಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಯೋಗಾನಂದ್ ಮತ್ತು ಸ್ಫೂರ್ತಿ ಇಬ್ಬರಿಗೂ ಇದು ಎರಡನೇ ಮದುವೆ. ಮೃತ ಹೇಮಾನಿ, ಸ್ಫೂರ್ತಿಯ ಮೊದಲ ದಾಂಪತ್ಯದ ಕೂಸು.

    ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮನೆಗೆ ನುಗ್ಗಿದ ಮಳೆ ನೀರು: ಕಂದಮ್ಮನೊಂದಿಗೆ ಬಾಣಂತಿ ಪರದಾಟ!

    ಮನೆಗೆ ನುಗ್ಗಿದ ಮಳೆ ನೀರು: ಕಂದಮ್ಮನೊಂದಿಗೆ ಬಾಣಂತಿ ಪರದಾಟ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಮವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ಕೋರಮಂಗಲದ ರಾಷ್ಟ್ರೀಯ ಹೈನುಗಾರಿಕೆ ಇಲಾಖಾ ಮತ್ತು ನ್ಯಾಷನಲ್ ವಿಲೇಜ್ ಗೇಮ್ ಸಂಪೂರ್ಣ ಜಲಾವೃತಗೊಂಡಿದೆ.

    ಕೋರಮಂಗಲದ ನಾಲ್ಕನೇ ಕ್ರಾಸ್ ನಲ್ಲಿರುವ ಮನೆಯೊಂದಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಬಾಣಂತಿ ಹಾಗೂ 3 ತಿಂಗಳ ಪುಟ್ಟ ಕಂದಮ್ಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ನರೆಹೊರೆಯವರು ಬಾಣಂತಿ ಹಾಗೂ ಮಗುವನ್ನು ಬೇರೆ ಕಡೆ ಸ್ಥಳಾಂತರಿಸಲು ಸಹಕರಿಸಿದ್ದಾರೆ.

    ಸುಮಾರು ಐದು ಎಕರೆ ಆವರಣದಲ್ಲಿ ಮಳೆ ನೀರು ತುಂಬಿದ್ದು, ತುಂಬೆಲ್ಲಾ ತುಂಬಿರುವ ನೀರಿನಿಂದಾಗಿ ಕೋರಮಮಂಗಲ ಬಿಟಿಎಂಟಿಸಿ ಅಂಡರ್ ಪಾಸ್ ಫುಲ್ ಬಂದ್ ಆಗಿತ್ತು. ಹೀಗಾಗಿ ಅಂಡರ್ ಪಾಸ್ ನ ಪಾರ್ಕಿಂಗ್ ನಲ್ಲಿ ನಿಂತಿದ್ದ 20 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ಮುಳುಗಿವೆ. ಅಲ್ಲದೇ ಬೈಕ್ ಗಳು ಗುರುತು ಸಿಗದಷ್ಟು ನೀರಿನಲ್ಲಿ ಮುಳುಗಿವೆ.

    ಚಿನ್ಮಯ ಸ್ಕೂಲ್ ಆವರಣ ಕೂಡ ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಯಾಗಿದೆ. ಧ್ವಜರೋಹಣ ಮಾಡಿದ ಶಾಲಾ ಮಂಡಳಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೈಬಿಟ್ಟಿದೆ.

     

  • ಅಮೆರಿಕದಿಂದ ಬಂದ ಟೆಕ್ಕಿ ನೋಡಿದ್ದು ಅಮ್ಮನ ಕೊಳೆತ ಶವ!

    ಅಮೆರಿಕದಿಂದ ಬಂದ ಟೆಕ್ಕಿ ನೋಡಿದ್ದು ಅಮ್ಮನ ಕೊಳೆತ ಶವ!

    ಮುಂಬೈ: ಇಲ್ಲಿನ ಅಂಧೇರಿಯ ಮನೆಯೊಂದರಲ್ಲಿ 63 ವರ್ಷದ ಮಹಿಳೆಯೊಬ್ಬರ ಕೊಳೆತ ಶವ ಭಾನುವಾರ ಪತ್ತೆಯಾಗಿದೆ.

    ಮೃತ ಮಹಿಳೆಯನ್ನು ಆಶಾ ಸಹಾನಿ ಎಂದು ಗುರುತಿಸಲಾಗಿದೆ. ಆಶಾ ಅವರ ಮಗ ಅಮೆರಿಕದಿಂದ ಮುಂಬೈನ ಮನೆಗೆ ಬಂದು ನೋಡಿದಾಗ ತನ್ನ ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

    ಸಹಾನಿಯವರ ಗಂಡ ತೀರಿಕೊಂಡ ಬಳಿಕ ಅಂಧೇರಿಯ ಲೋಖಂಡ್ವಾಲಾ ಕಾಂಪ್ಲೆಕ್ಸ್ ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇವರ ಒಬ್ಬನೇ ಮಗನಾದ ರಿತುರಾಜ್ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದು, ಅಮೆರಿಕದಲ್ಲಿ ನೆಲೆಸಿದ್ದಾರೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರಿತುರಾಜ್ ಇಂದು ಬೆಳಗ್ಗೆ ಅಮೆರಿಕದಿಂದ ಮುಂಬೈಗೆ ಬಂದಿಳಿದರು. ತನ್ನ ಮನೆ ತಲುಪಿದ ನಂತರ ಡೋರ್ ಬೆಲ್ ಮಾಡಿದ್ರು. ಆದ್ರೆ ಮನೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಆತಂಕಗೊಂಡ ರಿತುರಾಜ್ ಮನೆಗೆ ಕೀ ತಯಾರಕರನ್ನು ಕರೆಸಿದ್ದಾರೆ. ಅವರ ಸಹಾಯದಿಂದ ಸಂಜೆ ಸುಮಾರು 4.30ರ ಸುಮಾರಿಗೆ ಮನೆಯ ಕೀ ತೆಗೆದು ಒಳಗೆ ಹೋಗಿ ನೋಡಿದಾಗ ಅಮ್ಮನ ಶವ ಕೊಳೆತು ಬಿದ್ದಿರುವುದು ಪತ್ತೆಯಾಗಿದೆ. ಘಟನೆಗೆ ಕಾರಣವೇನು ಹಾಗೂ ಅವರು ಯಾವಾಗ ಸಾವನ್ನಪ್ಪಿದ್ದಾರೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಒಶೀವಾರಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

  • ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ವಿಶೇಷಚೇತನ ತಾಯಿಗಾಗಿ ಗಲ್ಲಿಗಲ್ಲಿ ಶೋಧ- ಅಮ್ಮನಿಗಾಗಿ ಪೋಸ್ಟರ್ ಅಂಟಿಸ್ತಿದ್ದಾರೆ ಮಕ್ಕಳು

    ಉಡುಪಿ: ಮೊಮ್ಮಗನಿಗೆ ರಂಜಾನ್ ಗಿಫ್ಟ್ ಕೊಡಬೇಕು ಅಂತ ಮಹಿಳೆಯೊಬ್ಬರು ಭಟ್ಕಳದಲ್ಲಿ ಬಸ್ ಹತ್ತಿದ್ದಾರೆ. ಮಾತು ಬಾರದ ಕಿವಿ ಕೇಳದ ಅವರು ಒಂದು ಸ್ಟಾಪ್ ಮುಂದೆ ಬಸ್ಸಿಂದ ಇಳಿದಿದ್ದಾರೆ. ತಾನೆಲ್ಲಿ ಇಳಿದಿದ್ದೇನೆ ಅಂತ ತಿಳಿಯದ ಜುಲೇಖಾ ಊರೂರು ಸುತ್ತಿ ಕಣ್ಮರೆಯಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ರವೂಫ್ ಇದೀಗ ಅಮ್ಮನಿಗಾಗಿ ಕೈಯ್ಯಲ್ಲಿ ಪೋಸ್ಟರ್ ಹಿಡಿದು ಊರೂರು ಸುತ್ತುತ್ತಿದ್ದಾರೆ. ಜೂನ್ 23ರಂದು ಕರಾವಳಿಯಲ್ಲಿ ರಂಜಾನ್ ಹಬ್ಬವಿತ್ತು. ಭಟ್ಕಳದ ಜುಲೆಖಾ ಕುಂದಾಪುರದ ಹೆಮ್ಮಾಡಿಗೆ ತನ್ನ ಮೊಮ್ಮಗನನ್ನು ನೋಡಲು ಬಸ್ ಹತ್ತಿದ್ದರು. ಹೆಮ್ಮಾಡಿಯಲ್ಲಿ ಇಳಿಯುವ ಬದಲು ಕುಂದಾಪುರದಲ್ಲಿ ಇಳಿದಿದ್ದರು. ತಾನೆಲ್ಲಿ ಇಳಿದ್ದೇನೆ ಎಂಬುದನ್ನು ಅರಿಯದ ಜುಲೇಖಾ ಇದೀಗ ಕಳೆದುಹೋಗಿದ್ದಾರೆ. ತನ್ನ ತಾಯಿ ಕಳೆದು ಹೋಗಿದ್ದಾರೆ ಅನ್ನೋದು ಗೊತ್ತಾಗಿ ಕತಾರ್‍ನಿಂದ ಮಗ ಬಂದಿದ್ದಾರೆ. ಮಂಗಳೂರು ಸೇರಿ ಹಲವು ಕಡೆ ಹುಡುಕಾಟ ನಡೆದಿದೆ. ಆದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಗಲ್ಲಿ ಗಲ್ಲಿಯಲ್ಲಿ ಪೋಸ್ಟರ್- ಸ್ಟಿಕ್ಕರ್ ಅಂಟಿಸಲು ಶುರು ಮಾಡಿದ್ದಾರೆ.

    ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ ಪೊಲೀಸರು ಪತ್ತೆಗೆ ಪ್ರಯತ್ನ ಮಾಡುತ್ತಿಲ್ಲ ಅಂತ ಕುಟುಂಬಸ್ಥರು ದೂರಿದ್ದಾರೆ. ಭಾವಚಿತ್ರದಲ್ಲಿರುವ ಜಲೇಕಾ ಎಲ್ಲಾದ್ರು ಕಾಣಸಿಕ್ಕರೆ ಮಾಹಿತಿ ಕೊಡಿ ಅಂತ ಕೇಳಿಕೊಂಡಿದ್ದಾರೆ.