Tag: mother

  • ಹೆತ್ತತಾಯಿ ಮಗಳಿಗೆ ಹೊಡೆದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಹೆತ್ತತಾಯಿ ಮಗಳಿಗೆ ಹೊಡೆದ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಕೊಪ್ಪಳ: ಹೆತ್ತತಾಯಿ ಮಗಳಿಗೆ ಬಾಸುಂಡೆ ಬರೋ ಹಾಗೆ ಹೊಡೆದಿರೋ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಇದರಲ್ಲಿ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಭಂಟ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ ಕೈವಾಡವಿದೆ ಅಂತ ಮಹಿಳೆ ಆರೋಪಿಸ್ತಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಹತ್ತು ವರ್ಷದ ಹಿಂದೆ ಶರೀಫ್ ಹಾಗೂ ಫಾತೀಮಾ ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ರು. ಫಾತೀಮಾ ತನ್ನ ಮಗಳಾದ ಪರ್ವಿನ್ ಗೆ ಥಳಿಸಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಈ ಪ್ರಕರಣದಲ್ಲಿ ಪತಿ ಮೇಲೆಯೇ ಮಹಿಳೆ ಆರೋಪ ಮಾಡ್ತಿದ್ದಾರೆ.

    ಪತಿ ಶರೀಫ್ ಮದುವೆಯಾದ ಬಳಿಕ ಕಿರುಕುಳ ಕೊಡಲು ಆರಂಭಿಸಿದ್ದ. ಜೊತೆಗೆ ಕುಟುಂಬ ನಿರ್ವಹಣೆಗಾಗಿ ಸಾಲ ಮಾಡಿರೋದನ್ನ ತೀರಿಸಲಾಗದೆ, ಸಾಲ ಕೊಟ್ಟಿರೋರ ಬಳಿ ಹಾಸಿಗೆ ಹಂಚಿಕೋ ಅಂತ ಪೀಡಿಸುತ್ತಿದ್ದ. ಶರೀಫ್ ತಂದೆಯೂ ಮಲಗಲು ಬಾ ಅಂತ ಕರೀತಿದ್ದ. ಈ ಎಲ್ಲಾ ಘಟನೆಗಳಿಂದ ಬೇಸತ್ತು ನಾನೇ ಶರೀಫ್‍ಗೆ ವಿಚ್ಛೇದನ ನೀಡಿದ್ದೆ. ಮೂರು ಮಕ್ಕಳನ್ನ ಕಟ್ಟಿಕೊಂಡು ಜೀವನ ಸಾಗಿಸ್ತಿದ್ದೇನೆ. ಇದನ್ನೇ ಬಂಡವಾಳ ಮಾಡಿಕೊಂಡ ಮಾಜಿ ನಗರಸಭೆ ಅಧ್ಯಕ್ಷ ಶಾಮೀದ್ ಮನಿಯಾರ, ನಿನಗೆ ಜೀವನ ಕೊಡ್ತೀನಿ. ನನ್ನೊಂದಿಗೆ ಇರು ಅಂತ ಕೇಳಿದ. ಅವನಿಗೆ ಛೀಮಾರಿ ಹಾಕಿದ್ದೇನೆ. ಆತನ ಮಾತಿಗೆ ಒಪ್ಪದಕ್ಕೆ ಈಗ ರೀತಿ ಮಾಡಿಸುತ್ತಿದ್ದಾರೆ ಅಂತ ಫಾತೀಮಾ ಆರೋಪಿಸಿದ್ದಾರೆ.

    ಶರಿಫ್ ಇಲ್ಲಸಲ್ಲದ ಆರೋಪ ಮಾಡಿ ನನಗೆ ಅನೈತಿಕ ಸಂಬಂಧವಿದೆ ಅಂತ ಮಾಧ್ಯಮಗಳ ಮುಂದೆ ಹೇಳಿದ್ದ. ನಾನು ನನ್ನ ಮಗಳಿಗೆ ಹೊಡೆದಿದ್ದೆ. ಆದ್ರೆ ನನಗೆ ಯಾವ ಪ್ರಿಯಕರನೂ ಇಲ್ಲ. ಈ ಜೀವನವೇ ಬೇಡ ಅಂತ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ರಾಜಾಭಕ್ಷಿ ಅನ್ನೋವ್ರು ನನಗೆ ಧೈರ್ಯ ತುಂಬಿ ಸಹಾಯ ಮಾಡಿದ್ದಾರೆ. ಆದ್ರೆ ನನ್ನ ಪತಿ ಇವರೊಂದಿಗೆ ಸಂಬಂಧ ಕಲ್ಪಿಸಿದ್ದಾನೆ. ನಾನು ಮತ್ತು ಶರೀಫ್ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದೆವು ಅಂತ ಫಾತೀಮಾ ಹೇಳಿದ್ದಾರೆ.

    ಮೂಲತಃ ನಾನು ಹಿಂದೂ. ಮನೆಯವರ ವಿರೋಧದ ನಡುವೆಯೂ ಶರೀಫ್ ನನ್ನು ಮದುವೆಯಾದೆ. ಮದುವೆಯಾದ ಹತ್ತು ವರ್ಷಗಳಿಂದ್ಲೂ ಕಿರುಕುಳ ನೀಡುತ್ತಾ ಬಂದಿದ್ದಾರೆ. ಮುಸ್ಲಿಂ ಹಿರಿಯರ ಸಮ್ಮುಖದಲ್ಲೇ ವಿವಾಹ ವಿಚ್ಛೇದನ ಪಡೆದೆ. ಪ್ರತಿ ತಿಂಗಳು ಐದು ಸಾವಿರ ರೂ. ಜೀವನಾಂಶ ಕೊಡಬೇಕೆಂದು ಕೂಡಾ ತೀರ್ಮಾನವಾಗಿತ್ತು. ಇಲ್ಲಿಯವರೆಗೂ ನನಗೆ ಶರೀಫ್ ಹಣ ಕೊಟ್ಟಿಲ್ಲ. ನಾನು ಮಾನಸಿಕವಾಗಿ ನೊಂದಿದ್ದೇನೆ. ನನ್ನ ಮಗಳಿಗೆ ಹೊಡೆದಿರೋದನ್ನ ಮುಂದಿಟ್ಟುಕೊಂಡು ನನ್ನ ಮೂರು ಮಕ್ಕಳನ್ನ ನನ್ನಿಂದ ಕಿತ್ತುಕೊಂಡಿದ್ದಾರೆ. ದಯವಿಟ್ಟು ನನಗೆ ನನ್ನ ಮಕ್ಕಳನ್ನ ಕೊಡಿಸಿ ಅಂತ ಇದೀಗ ಮಹಿಳೆ ಅಂಗಲಾಚುತ್ತಿದ್ದಾರೆ.

  • ಮಗನ ಜೊತೆಗಿದ್ರೆ ಗರ್ಲ್ ಫ್ರೆಂಡ್ ಅನ್ಕೋತಾರಂತೆ ಜನ- ಈ ಮಹಿಳೆ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರ!

    ಮಗನ ಜೊತೆಗಿದ್ರೆ ಗರ್ಲ್ ಫ್ರೆಂಡ್ ಅನ್ಕೋತಾರಂತೆ ಜನ- ಈ ಮಹಿಳೆ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರ!

    ಜಕಾರ್ತಾ: ವಯಸ್ಸಾಗೋದನ್ನ ತಡೆಯೋಕಾಗಲ್ಲ. ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ. ಇನ್ನೂ ಕೆಲವರಿಗೆ ಕಾಂತಿಯುತವಾದ ತ್ವಚೆ ಇದ್ದು, ಯಂಗ್ ಆಗಿ ಕಾಣಿಸಿದ್ರೂ ಅವರ ವಯಸ್ಸನ್ನ ಊಹಿಸಿಬಿಡಬಹುದು. ಆದ್ರೆ ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರಿಗೆ ವಯಸ್ಸು 50 ಆದರೂ ಇನ್ನೂ ಯುವತಿಯಂತೆ ಕಾಣಿಸೋದ್ರಿಂದ ಇವರ ನಿಜವಾದ ವಯಸ್ಸು ಕೇಳಿದಾಗ ಜನ ಶಾಕ್ ಆಗ್ತಾರೆ.

    ಜಕಾರ್ತಾದವರಾದ ಪುಷ್ಪ ದೇವಿಗೆ 50 ವರ್ಷ ವಯಸ್ಸು. ಆದ್ರೆ ಇನ್ನೂ ಯುವತಿಯಂತೆ ಕಾಣೋದ್ರಿಂದ ಜನರ ಹುಬ್ಬೇರಿಸಿದ್ದಾರೆ. ಇವರು ಹದಿಜೆನೆಟಿಕ್ಸ್ ಅನ್ನೋ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಬರೋಬ್ಬರಿ 2.5 ಲಕ್ಷಕ್ಕಿಂತ ಅಧಿಕ ಫ್ಯಾನ್ ಫಾಲೋವರ್‍ಗಳಿದ್ದಾರೆ. ಅಲ್ಲದೆ ಇವರು ಇಂಡೋನೇಷ್ಯಾದ ಕಿರುತೆರೆಯಲ್ಲೂ ಪ್ರಸಿದ್ಧರಾಗಿದ್ದಾರೆ.

    ಇತ್ತೀಚಿಗೆ ಪುಷ್ಪ ದೇವಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದವರಿಗೆ ಇವರ ನಿಜವಾದ ವಯಸ್ಸು ಕೇಳಿ ನಂಬಲಾಗಿರಲಿಲ್ಲ. ಇನ್ನೂ ವಿಚಿತ್ರ ಅಂದ್ರೆ ಸಾಕಷ್ಟು ಬಾರಿ ಪುಷ್ಪಾ ಮಗನ ಜೊತೆಗಿದ್ದಾಗ ಜನ ಇವರು ಆತನ ಗರ್ಲ್ ಫ್ರೆಂಡ್ ಎಂದುಕೊಳ್ತಾರಂತೆ.

    ಪುಷ್ಪ ದೇವಿ ಅವರು ಸಂದರ್ಶನವೊಂದರಲ್ಲಿ ತಮ್ಮ ಬ್ಯೂಟಿ ಸಿಕ್ರೇಟ್ ಬಗ್ಗೆ ಮಾತನಾಡಿ, ನನಗೆ ವಯಸ್ಸಾದಂತೆಲ್ಲಾ ಯಂಗ್ ಆಗಿ ಕಾಣುತ್ತೇನೆ ಎಂದು ಜನರು ಹೇಳುತ್ತಾರೆ. ಇದು ನಿಜ ಆಗಿರಬಹುದು. ಏಕೆಂದರೆ ನಾನು ಈಗ ತುಂಬಾ ಸಂತೋಷದಿಂದ ಇದ್ದೇನೆ. ನನ್ನ ಮಕ್ಕಳು ಬೆಳಿದಿದ್ದಾರೆ. ನನಗೆ ಇಷ್ಟ ಆಗುವ ಕೆಲಸವನ್ನೇ ಮಾಡುತ್ತಿದ್ದೇನೆ. ನಾನು ಸಂತೋಷವನ್ನು ಪಸರಿಸುತ್ತಿದ್ದೇನೆ ಎಂದು ಅನಿಸುತ್ತದೆ ಎಂದಿದ್ದಾರೆ.

    ಪುಷ್ಪಾ ಆರೋಗ್ಯಕರವಾದ ಆಹಾರವನ್ನ ಸೇವಿಸುತ್ತಾರಂತೆ. ಏರೋಬಿಕ್ಸ್, ಸ್ವಿಮ್ಮಿಂಗ್, ಬ್ಯಾಡಿಂಟನ್ ಮತ್ತು ಝುಂಬಾ ಎಂದರೆ ಇವರಿಗೆ ಇಷ್ಟವಂತೆ.

     

  • ಅಜ್ಜಿ, ಅಮ್ಮ ಸೇರಿ ಒಂದು ದಿನದ ಗಂಡು ಶಿಶುವನ್ನು ಕತ್ತುಸೀಳಿ ಕೊಂದೇ ಬಿಟ್ರು!

    ಅಜ್ಜಿ, ಅಮ್ಮ ಸೇರಿ ಒಂದು ದಿನದ ಗಂಡು ಶಿಶುವನ್ನು ಕತ್ತುಸೀಳಿ ಕೊಂದೇ ಬಿಟ್ರು!

    ಮುಂಬೈ: ಹುಟ್ಟಿ ಒಂದು ದಿನವಾದಗಲೇ ಗಂಡು ಶಿಶುವನ್ನು ಕತ್ತುಸೀಳಿ ಕೊಂದು ಬಳಿಕ ಕಸದತೊಟ್ಟಿಯಲ್ಲಿ ಹಾಕಿದ ಅಮಾನವೀಯ ಘಟನೆಯೊಂದು ನಡೆದಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಶಿಶುವಿನ ಅಜ್ಜಿ 50 ವರ್ಷದ ಶಾಂತ ಸಪ್ನಾ ನ್ಯಾನರ್ಜಿ ಹಾಗೂ ಈಕೆಯ ಮಗಳ ಗೆಳೆಯ ಮಹೇಶ್ ಪಾಂಡೆಯನ್ನು ಕಲ್ಯಾನ್ ಕೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಸದ್ಯ ಇವರಿಬ್ಬರನ್ನು ಅಕ್ಟೋಬರ್ 17ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು, ಘಟನೆಗೆ ಸಂಬಂಧಿಸಿದಂತೆ ಶಿಶುವಿನ ತಾಯಿಯನ್ನೂ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಬಂಧಿಸಲಾಗುವುದು ಅಂತ ಪೊಲೀಸರು ತಿಳಿಸಿದ್ದಾರೆ.

    ಶಿಶುವಿನ ತಾಯಿ ಬ್ಯಾಂಕಿಂಗ್ ಹಾಗೂ ಇನ್ಶುರೆನ್ಸ್ ವಿಭಾಗದಲ್ಲಿ ಪದವಿ ಪಡೆದವಳಾಗಿದ್ದು, ಒಂದೊಳ್ಳೆಯ ಕುಟುಂಬದಿಂದ ಬಂದವಳೇ ಆಗಿದ್ದಾಳೆ. ಅಕ್ಟೋಬರ್ 9ರಂದು ಸುಮಾರು 10.15ರ ವೇಳೆಗೆ ಮನ್ಪದಾದಲ್ಲಿರೋ ಕಸದ ತೊಟ್ಟಿಯಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಆಗ ತಾನೇ ಹುಟ್ಟಿದ ಶಿಶುವಿನ ದೇಹವೊಂದು ದೊರೆದಿತ್ತು ಅಂತ ಪೊಲೀಸರು ತಿಳಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳನ್ನು ವಿಚಾರಣೆ ನಡೆಸಿದ್ದೆವು. ಈ ವೇಳೆ ಕೆಲ ದಿನಗಳ ಹಿಂದೆಯಷ್ಟೇ 20 ವರ್ಷದ ಅವಿವಾಹಿತೆ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಕುರಿತು ಮಾಹಿತಿ ದೊರೆಯಿತು. ಹೀಗಾಗಿ ಆ ಮಹಿಳೆ ಮತ್ತು ಆಕೆಯ ತಾಯಿಯನ್ನು ಪ್ರಶ್ನಿಸಿದಾಗ ಘಟನೆಯ ಬಗ್ಗೆ ವಿವರಣೆ ನೀಡಿ ತಮ್ಮ ತಮ್ಮನ್ನು ಒಪ್ಪಿಕೊಂಡರು. ಸದ್ಯ ಆರೋಪಿಗಳನ್ನು ಪನ್ಪದಾ ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ಹಿರಿಯ ಪೊಲಿಸ್ ಅಧಿಕಾರಿ ಸಂಜು ಜಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ. ಯಾಕೆ ಶಿಶುವನ್ನು ಕೊಲೆ ಮಾಡಿದ್ದಾರೆ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ ಅಂತ ಪನ್ಪದಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ ಶೆಂಧೆ ಹೇಳಿದ್ದಾರೆ.

     

  • ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡದ್ದಕ್ಕೆ ವಿಷ ಕುಡಿದ ತಾಯಿ

    ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡದ್ದಕ್ಕೆ ವಿಷ ಕುಡಿದ ತಾಯಿ

    ಬೆಂಗಳೂರು: ಮಗನ ಹೊಸ ಬೈಕ್ ಎಕ್ಸ್ ಚೇಂಜ್ ಮಾಡಿಕೊಡಲು ಶೋ ರೂಮ್ ಸಿಬ್ಬಂದಿ ನಿರಾಕರಿಸಿದ್ದಕ್ಕೆ ಮನನೊಂದ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಸರೋಜಮ್ಮ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸರೋಜಮ್ಮರ ಮಗ ಶ್ರೀಪಾದ ರಾಘವ್ ಎರಡು ತಿಂಗಳ ಹಿಂದೆ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮ್ ನಲ್ಲಿ ಡೋಮಿನರ್ 400 ಸಿಸಿ ಬೈಕ್ ಖರೀದಿಸಿದ್ದರು. ಆದರೆ ಹೊಸ ಬೈಕ್ ಎರಡೇ ತಿಂಗಳಲ್ಲಿ ಕೆಟ್ಟು ಹೋಗಿತ್ತು.

    ಬೈಕ್ ಎಕ್ಸ್ ಚೇಂಜ್ ಮಾಡಿಕೊಡುವಂತೆ ಶ್ರೀಪಾದ ಮನವಿ ಮಾಡಿಕೊಂಡಿದ್ದರು. ಆದರೆ ಶೋ ರೂಮ್ ಸಿಬ್ಬಂದಿ ಬೈಕ್ ಎಕ್ಸ್ ಚೇಂಜ್ ಮಾಡಿಕೊಡಲು ನಿರಾಕರಿಸಿದ್ದರು. ಇದರಿಂದ ಮನನೊಂದ ಸರೋಜಮ್ಮ ಶೋ ರೂಮ್ ಗೆ ಬಂದು ವಿಷ ಸೇವಿಸಿದ್ದಾರೆ.

    ಸದ್ಯ ಸರೋಜಮ್ಮ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರೋಜಮ್ಮ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಹತ್ತು ದಿನ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನ- ವಿರೋಧಿಸಿದ್ದಕ್ಕೆ ಕೊಂದೇಬಿಟ್ಟ ಪಾಪಿ ಮಗ!

    ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನ- ವಿರೋಧಿಸಿದ್ದಕ್ಕೆ ಕೊಂದೇಬಿಟ್ಟ ಪಾಪಿ ಮಗ!

    ಭೋಪಾಲ್: 24 ವರ್ಷದ ಯುವಕನೊಬ್ಬ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದು, ಇದನ್ನು ವಿರೋಧಿಸಿದ್ದಕ್ಕೆ ತಾಯಿಯನ್ನೇ ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಶನಿವಾರ ಭೋಪಾಲ್ ನ ಕೈಲರಸ್ ನಗರದಲ್ಲಿ ನಡೆದಿದೆ. ಆರೋಪಿ ಪಾಪಿ ಮಗನನ್ನು ಸೂರಜ್ ಮಿತ್ತಲ್ ಎಂಬವುದಾಗಿ ಗುರುತಿಸಲಾಗಿದ್ದು, ಈತನನ್ನು ಸೋಮವಾರ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಮೃತ ದುರ್ದೈವಿ ಮಹಿಳೆಯನ್ನು ಲಕ್ಷ್ಮೀ ಎಂಬುವುದಾಗಿ ಗುರುತಿಸಲಾಗಿದ್ದು, ಈಕೆಯ ಪತಿ 8 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ಬಳಿಕ ಲಕ್ಷ್ಮೀ ತನ್ನ ಮಗನ ಜೊತೆ ಜೀವನ ನಡೆಸುತ್ತಿದ್ದಳು. ಆದ್ರೆ ಕುಡುಕ ಮಗ ಇಂದು ತನ್ನ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಶನಿವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದ ಸೂರಜ್, ತಾಯಿಯನ್ನೇ ರೇಪ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ತಾಯಿ ಮಗನ ಕೃತ್ಯವನ್ನು ವಿರೋಧಿಸಿದ್ದಾಳೆ. ಇದರಿಂದ ಸಿಟ್ಟುಗೊಂಡ ಮಗ ಸೂರಜ್ ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆರಾಮಾಗಿ ನಿದ್ದೆ ಮಾಡಿದ್ದಾನೆ.

    ಕಳೆದ ರಾತ್ರಿ ಸೂರಜ್ ಮನೆಯಿಂದ ಜೋರಾಗಿ ಕಿರುಚಿಕೊಳ್ಳುವ ಶಬ್ಧ ಕೇಳಿಸಿರುವುದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕೊಲೆಯ ಹಿಂದೆ ಹೊರಗಿನವರ ಕೈವಾಡವಿರುವ ಬಗ್ಗೆ ಎಸ್‍ಐ ಎಪಿ ಸಿಂಗ್ ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಆರೋಪಿಯನ್ನು ಸೆರೆಹಿಡಿದಿದ್ದು, ನ್ಯಾಯಾಂಗ ಬಂಧನಕ್ಕೆ ಇಂದು ಒಪ್ಪಿಸಿದ್ದಾರೆ.

  • ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!

    ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗಿದ್ದ ರೇಪಿಸ್ಟ್ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ಳು!

    ಮುಂಬೈ: ಮಾದಕ ವ್ಯಸನಿಯಾಗಿದ್ದ ಹಾಗೂ ತನ್ನ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿದ್ದ ಮಗನಿಂದ ಬೇಸತ್ತ ತಾಯಿ ಸುಪಾರಿ ಕೊಟ್ಟು ಆತನನ್ನು ಕೊಲೆ ಮಾಡಿಸಿದ್ದಾಳೆ.

    ಇಲ್ಲಿನ ಪಶ್ಚಿಮ ಭಾಯಂದರ್ ನಿವಾಸಿಯಾದ ಮಹಿಳೆ 50 ಸಾವಿರ ರೂ. ಕೊಟ್ಟು ಆಗಸ್ಟ್ 20ರಂದು ಮಗನನ್ನು ಕೊಲೆ ಮಾಡಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ವಾಸೈ ಪೊಲೀಸರು ಮಹಿಳೆ ಹಾಗು ಇತರೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ಕೊಲೆಯಾದ 21 ವರ್ಷದ ರಾಮಚಂದ್ರನ್ ರಾಮದಾಸ್ ದ್ವಿವೇದಿ ಮಾದಕ ದ್ರವ್ಯ ಹಾಗೂ ಸೆಕ್ಸ್ ನ ವ್ಯಸನಿಯಾಗಿದ್ದ. ತನ್ನ ತಾಯಿ, ಮಲತಾಯಿ ಸೇರಿದಂತೆ ಸಾಕಷ್ಟು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ. ಇದರಿಂದ ಬೇಸತ್ತಿದ್ದ ತಾಯಿ ತನ್ನ ಹಿರಿಯ ಮಗ ಸೀತಾರಾಮ್ ಜೊತೆಗೂಡಿ ರಾಮಚಂದ್ರನ್‍ನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು.

    ನಂತರ ತನ್ನ ಇಬ್ಬರು ಸ್ನೇಹಿತರಾದ ಕೇಶವ್ ಮಿಸ್ತ್ರಿ ಹಾಗೂ ರಾಕೇಶ್ ಯಾದವ್‍ಗೆ ಮಗನನ್ನು ಕೊಲೆ ಮಾಡುವಂತೆ ಹೇಳಿ 50 ಸಾವಿರ ರೂ. ನೀಡಿದ್ದಳು. ಪ್ಲಾನ್‍ನಂತೆ ಆಗಸ್ಟ್ 20ರಂದು ಸೀತಾರಾಮ್, ಕೇಶವ್ ಹಾಗೂ ರಾಕೇಶ್ ಏನೋ ಸುಳ್ಳು ಹೇಳಿ ರಾಮಚಂದ್ರನ್‍ನನ್ನು ಟೆಂಪೋದಲ್ಲಿ ಭಾಯಂದರ್‍ನಿಂದ ಜಾನಕಿಪಾದಾ ಪ್ರದೇಶಕ್ಕೆ ಸುಮಾರು 2 ಗಂಟೆ ರಾತ್ರಿಯಲ್ಲಿ ಕರೆದುಕೊಂಡು ಹೋಗಿದ್ದರು. ನಂತರ ರಾಮಚಂದ್ರನ್‍ನನ್ನು ಟೆಂಪೋದಿಂದ ಕೆಳಗಿಳಿಸಿ ಆತನ ಕತ್ತು ಸೀಳಿ, ಗಣಿ ಪ್ರದೇಶದಲ್ಲಿ ಶವವನ್ನ ಎಸೆದು ಅಲ್ಲಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಮರುದಿನ ವಾಲಿವ್ ಪೊಲೀಸರಿಗೆ ರಾಮಚಂದ್ರನ್‍ನ ಶವ ಸಿಕ್ಕಿತ್ತು. ಥಾಣೆ, ಮೀರಾ ಭಾಯಂದರ್, ಪಾಲ್ಘರ್‍ನಲ್ಲಿ ಪೋಸ್ಟರ್‍ಗಳನ್ನು ಹಾಕಿದ್ದರೂ ಸೆಪ್ಟೆಂಬರ್ 14ರವರೆಗೆ ಆತನ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ರಾಮಚಂದ್ರನ್‍ನ ಶವ ಪತ್ತೆಯಾದ ದಿನದಿಂದಲೇ ಅದೇ ಮುಖ ಚಹರೆಯ ವ್ಯಕ್ತಿ ಕಾಣೆಯಾಗಿರುವುದು ಪೊಲೀಸರಿಗೆ ಗೊತ್ತಾಯಿತು. ನಂತರ ಆತನ ಗುರುತು ಪತ್ತೆ ಮಾಡಿ ಪೊಲೀಸರು ಆರೋಪಿಗಳ ಬೆನ್ನು ಬಿದ್ದರು.

    ನಾವು ಭಾನುವಾರದಂದು ಐಪಿಸಿ ಸೆಕ್ಷನ್ 302, 201 ಹಾಗೂ 34ರ ಅಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದೇವೆ. ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆರೋಪಿಗಳು ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ವಾಸೈ ವಿಭಾಗದ ಎಸ್‍ಡಿಪಿಓ ಅನಿಲ್ ಅಖ್ಡೆ ಹೇಳಿದ್ದಾರೆ.

  • 45 ವರ್ಷದ ಮಗನಿಂದ ನಿರಂತರ ಅತ್ಯಾಚಾರ- 70ರ ತಾಯಿಯಿಂದ ಪೊಲೀಸರಿಗೆ ದೂರು

    45 ವರ್ಷದ ಮಗನಿಂದ ನಿರಂತರ ಅತ್ಯಾಚಾರ- 70ರ ತಾಯಿಯಿಂದ ಪೊಲೀಸರಿಗೆ ದೂರು

    ಚಂಡೀಘಢ: 70 ವರ್ಷದ ಮಹಿಳೆಯ ಮೇಲೆ 45 ವರ್ಷ ವಯಸ್ಸಿನ ತನ್ನ ಮಗನೇ ನಿರಂತರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

    ಪಂಜಾಬ್ ರಾಜ್ಯದ ಬಾತಲಾ ಗ್ರಾಮದ ನಿವಾಸಿಯಾದ ವೃದ್ಧೆ ಈ ಬಗ್ಗೆ ಶುಕ್ರವಾರದಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಗೆ ನಾಲ್ಕು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳಿದ್ದು, ಬ್ರಹ್ಮಚಾರಿಯಾಗಿರೋ ಮಗನೊಂದಿಗೆ ವಾಸವಿದ್ದೇನೆ. ಉಳಿದ ಮಕ್ಕಳಿಗೆ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ವೃದ್ಧ ತಾಯಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಕುಡಿತದ ಚಟಕ್ಕೆ ದಾಸನಾದ ಮಗ ತನ್ನ ತಾಯಿಯ ಮೇಲೆ ನಿರಂತರವಾಗಿ ಎರಡು ವರ್ಷಗಳಿಂದ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ಸಂತ್ರಸ್ತ ತಾಯಿ ಎಲ್ಲಿಯೂ ಈ ವಿಷಯವನ್ನ ಹೇಳಿಕೊಂಡಿರಲಿಲ್ಲ ಎಂದು ಅದಿಕಾರಿಗಳು ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

    ತನ್ನ ಮೇಲಾಗುತ್ತಿರುವ ಅತ್ಯಾಚರದ ಬಗ್ಗೆ ತಾಯಿ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬರಿಗೆ ಹೇಳಿಕೊಂಡಿದ್ದರು. ವಿಷಯ ತಿಳಿದ ನಂತರ ಕುಟುಂಬದವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದರು.

    ತಾಯಿಯ ದೂರಿನನ್ವಯ ಮಗನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸದ್ಯ ಆರೋಪಿ ಮಗ ಪಾರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

  • ತಾಯಂದಿರಿಗೆ ಸಿಎಂ ಸಿದ್ದರಾಮಯ್ಯ ಮಹಾಮೋಸ-ಮಹತ್ವದ ಮಡಿಲು ಕಿಟ್ ಯೋಜನೆಗೆ ತಿಲಾಂಜಲಿ

    ತಾಯಂದಿರಿಗೆ ಸಿಎಂ ಸಿದ್ದರಾಮಯ್ಯ ಮಹಾಮೋಸ-ಮಹತ್ವದ ಮಡಿಲು ಕಿಟ್ ಯೋಜನೆಗೆ ತಿಲಾಂಜಲಿ

    ಬೆಂಗಳೂರು: ಬಡವರ ಉಪಯೋಗಕಾರಿ ಮಡಿಲು ಯೋಜನೆಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಸದ್ದಿಲ್ಲದೇ ಕತ್ತರಿ ಹಾಕುತ್ತಿದೆ. ಬಾಣಂತಿಯರ ಆರೈಕೆಗಾಗಿ ಇದ್ದ ಮಹತ್ವದ  ಯೋಜನೆಗೆ ಅನುದಾನ ನೀಡದೇ ತಾಯಂದಿರ ಪಾಲಿನ ಶತ್ರುವಾಗಿದೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ಬಡ ಹೆಣ್ಣು ಮಕ್ಕಳಿಗೆ ನೀಡುತ್ತಿದ್ದ ಮಡಿಲು ಕಿಟ್ ಯೋಜನೆಗೆ ತಿಲಾಂಜಲಿ ಇಟ್ಟಿದೆ. ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆ ಮಾಡದೇ ತಾಯಿ-ಮಗುವಿನ ಆರೈಕೆಗೆಂದು ಇದ್ದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ `ಮಡಿಲು ಕಿಟ್’ ಹಳ್ಳ ಹಿಡಿದಿದೆ.

    ಏನಿದು ಮಡಿಲು ಕಿಟ್?: ಬಡವರ್ಗಕ್ಕೆ ಸೇರಿದ ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುಕೊಳ್ಳುವಂತೆ ಪ್ರೋತ್ಸಾಹಿಸುವುದು. ಹೆರಿಗೆ ಬಳಿಕ ಮಗು ಹಾಗೂ ತಾಯಿ ಆರೈಕೆಗೆ ಬೇಕಾದ ವಸ್ತುಗಳನ್ನು ಉಚಿತವಾಗಿ ನೀಡುವುದು. ಈ ಕಿಟ್ ನಲ್ಲಿ ಸೊಳ್ಳೆ ಪರದೆ, ತಾಯಿಯ ಹೊಟ್ಟೆಗೆ ಕಟ್ಟುವ ಬಟ್ಟೆ, ಸ್ಯಾನಿಟರಿ ಪ್ಯಾಡ್, ಬೇಬಿ ಸೋಪು, ಬೇಬಿ ಪೌಡರ್, ಮಗುವಿಗೆ ಸ್ವೆಟರ್, ಸಾಕ್ಸ್ ಸೇರಿ ಇತರೆ ಸಾಮಾಗ್ರಿಗಳಿರುತ್ತವೆ.

    2007ರಲ್ಲಿ ಪ್ರಾರಂಭವಾದ ಮಡಿಲು ಯೋಜನೆಯಿಂದ ವಾರ್ಷಿಕ ಸುಮಾರು 2 ಲಕ್ಷಕ್ಕೂ ಹೆಚ್ಚು ಬಾಣಂತಿಯರಿಗೆ ಪ್ರಯೋಜನವಾಗುತ್ತಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಕೇವಲ ಮೊದಲ ಎರಡು ವರ್ಷ ಯೋಜನೆಗೆ ಹಣ ನೀಡಿ ಕಳೆದ 2 ವರ್ಷಗಳಿಂದ ಹಣವೇ ನೀಡಿಲ್ಲ. 2014-15ರಲ್ಲಿ 62 ಕೋಟಿ ರೂಪಾಯಿ, 2015-16ರಲ್ಲಿ 37 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದ್ರೆ 2016-17 ಹಾಗೂ 2017-18 ಸಾಲಿಗೆ ಸರ್ಕಾರ ಹಣ ಬಿಡುಗಡೆಯೇ ಮಾಡಿಲ್ಲ. ಬಜೆಟ್‍ನಲ್ಲಿ ಅನುದಾನ ನೀಡಿಲ್ಲದ್ದರಿಂದ ಹಣ ಬಿಡುಗಡೆ ಆಗಿಲ್ಲ ಅಂತ ಆರೋಗ್ಯ ಇಲಾಖೆ ಹೇಳುತ್ತಿದೆ. ಸಚಿª ರಮೇಶ್ ಕುಮಾರ್ ಯುನಿರ್ವಸಲ್ ಕಾರ್ಡ್ ಮಾಡುತ್ತಿದ್ದೇವೆ. ಹಾಗಾಗಿ ಸದ್ಯಕ್ಕೆ ಈ ಯೋಜನೆಯನ್ನು ಸ್ಟಾಪ್ ಮಾಡಿದ್ದೇವೆ ಎಂದು ಹೇಳುತ್ತಾರೆ.

    ಯುನಿರ್ವಸಲ್ ಕಾರ್ಡ್‍ನಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ನೀಡ್ತಾರೆ. ಆದ್ರೆ ತಾಯಿ-ಮಗುವಿನ ಆರೈಕೆಗೆ ಸಾಮಗ್ರಿ ನೀಡೋಲ್ಲ. ಅಷ್ಟಕ್ಕೂ ಯುನಿರ್ವಸಲ್ ಕಾರ್ಡ್ ಬರ್ತಿರೋದು ಈಗ. ಕಳೆದ ಎರಡು ವರ್ಷದಿಂದ ಮಡಿಲು ಕಿಟ್‍ಗೆ ಕೊಕ್ ನೀಡಿದ್ದು ಯಾಕೆ ಅನ್ನೋದು ಮಾತ್ರ ತಿಳಿಯುತ್ತಿಲ್ಲ.

  • ತಾಯಿಯನ್ನು ಕಾಪಾಡಲು ಬಂದ ಮೂವರು ಮಕ್ಕಳು ಸಜೀವ ದಹನ

    ತಾಯಿಯನ್ನು ಕಾಪಾಡಲು ಬಂದ ಮೂವರು ಮಕ್ಕಳು ಸಜೀವ ದಹನ

    ಭೋಪಾಲ್: ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆ ಮಾಡಿಕೊಳ್ಳುತ್ತಿದ್ದ ತಾಯಿಯನ್ನು ಉಳಿಸಲು ಹೋಗಿ ಮೂವರು ಹೆಣ್ಣು ಮಕ್ಕಳು ಸಜೀವವಾಗಿ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ಮಧ್ಯಪ್ರದೇಶದ ದಾಮೋಹ್‍ನ ಮೌನ್ಸಿಪುರ ಗ್ರಾಮದಲ್ಲಿ ನಡೆದಿದೆ.

    ತಾಯಿ ರಾಣಿ ಲೋಧಿ ಮೊದಲಿಗೆ ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಯಿಯನ್ನು ಕಂಡ ಮಕ್ಕಳು ಕಾಪಾಡಲು ಬಂದು ಸಜೀವ ದಹನವಾಗಿದ್ದಾರೆ. ತುಲ್ಸಾ (2), ಮುಸ್ಕಾನ್ (5) ಹಾಗೂ ಮಾನ್ಸಿ (7) ಸಾವನ್ನಪ್ಪಿದ ಕಂದಮ್ಮಗಳು.

    ಲೋಧಿ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ನೋಡಿದ ಮಕ್ಕಳು ತಾಯಿಯನ್ನು ಕಾಪಾಡಲು ಹೋಗಿ ತಾವು ಬೆಂಕಿಗೆ ಸಿಲುಕಿಕೊಂಡಿದ್ದಾರೆ. ಮಕ್ಕಳ ಕಿರುಚಾಟವನ್ನು ಕೇಳಿದ ನೆರೆಹೊರೆಯವರು ಬಂದು ಲೋಧಿಯನ್ನು ಸಮೀಪದ ಜಬಲ್ಪುರ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಬೆಂಕಿಯಿಂದ 70% ರಷ್ಟು ದೇಹ ಸುಟ್ಟು ಹೋಗಿದ್ದು, ಸಾವು ಬದುಕಿನಮ ಮಧ್ಯೆ ಹೋರಾಡುತ್ತಿದ್ದಾರೆ.

    ಲೋಧಿ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಹೊಟ್ಟೆ ನೋವನ್ನು ತಾಳಲಾರದೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.

  • ಆಸ್ಪತ್ರೆ ಬಳಿ ಗಂಡು ಮಗುವಿಗೆ ಜನ್ಮ ಕೊಟ್ಟು ಅಲ್ಲೇ ಬಿಟ್ಟು ಹೋದ ತಾಯಿ

    ಆಸ್ಪತ್ರೆ ಬಳಿ ಗಂಡು ಮಗುವಿಗೆ ಜನ್ಮ ಕೊಟ್ಟು ಅಲ್ಲೇ ಬಿಟ್ಟು ಹೋದ ತಾಯಿ

    ಚಾಮರಾಜನಗರ: ಹೃದಯಹೀನ ತಾಯಿಯೊಬ್ಬಳು ಆಸ್ಪತ್ರೆಯ ಮುಂಭಾಗದಲ್ಲಿ ನವಜಾತ ಗಂಡು ಶಿಶುವಿಗೆ ಜನ್ಮ ನೀಡಿ ಶಿಶುವನ್ನು ಆಸ್ಪತ್ರೆಯ ಬಳಿಯೇ ಬಿಟ್ಟು ಹೋಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರದ ಜಿಲ್ಲಾಸ್ಪತ್ರೆಯ ಮುಂಭಾಗದ ಜನರಿಕ್ ಔಷಧಿ ಮಳಿಗೆಯ ಬಳಿ ಗಂಡು ಮಗುವಿಗೆ ಜನ್ಮ ನೀಡಿ ಮಗುವನ್ನು ಮಳಿಗೆಯ ಬಳಿ ತಾಯಿ ಬಿಟ್ಟು ಹೋಗಿದ್ದಾಳೆ. ಮಧ್ಯರಾತ್ರಿ 12 ಗಂಟೆ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಮಗುವಿನ ಅಳುವಿನ ಶಬ್ದ ಕೇಳಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಕರೆತಂದು ವೈದ್ಯರಿಗೆ ವಿಷಯ ತಿಳಿಸಿದ್ದಾರೆ.

    ನಂತರ ವೈದ್ಯರು ಜಿಲ್ಲಾಸ್ಪತ್ರೆಯ ಶಿಶು ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ನೀಡಿದ್ದು, ಸದ್ಯ ಮಗು ಆರೋಗ್ಯಕರವಾಗಿದೆ.