Tag: mother

  • ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಅಹಮದಾಬಾದ್: ಹಿಂಸಾತ್ಮಕ ಮೊಬೈಲ್ ಗೇಮ್ ಆಡಲು ಆಡಿಕ್ಟ್ ಆಗಿದ್ದ ಅಪ್ರಾಪ್ತ ಬಾಲಕನೊಬ್ಬ, ಗೇಮ್ ಪ್ರೇರಣೆಯಿಂದ ಸ್ವತಃ ತಾಯಿ ಹಾಗೂ ಸಹೋದರಿನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದಿದೆ.

    ತಾಯಿ ಅಂಜಲಿ ಹಾಗೂ 11 ವರ್ಷದ ಸಹೋದರಿ ಕನ್ನಿಕಾ ಮೃತ ದುರ್ದೈವಿಗಳಾಗಿದ್ದು, ಇಬ್ಬರನ್ನು ಬ್ಯಾಟ್‍ನಿಂದ ಹೊಡೆದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

    ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿದ ನಂತರ ಬಾಲಕ ಮನೆಯಿಂದ 2 ಲಕ್ಷ ರೂ ಹಾಗೂ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಆದರೆ ಮೊಬೈಲ್ ಕರೆಯ ನೆಟ್‍ವರ್ಕ್ ಆಧರಿಸಿ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ನೋಯ್ಡಾಗೆ ವಾಪಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಮಾಡಿದ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಬಿಸ್ರಾಕ್ ಪೊಲೀಸ್ ಠಾಣೆ ಅಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.

    ಕೊಲೆಗೆ ಕಾರಣ ಏನೆಂಬುದರ ಕುರಿತು ವಿಚಾರಣೆ ನಡೆಸಿಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಸಿದ ಬಳಿಕ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸದ್ಯ ಕೊಲೆಯಾದ ಇಬ್ಬರ ಶವ ಪರೀಕ್ಷೆ ಪೂರ್ಣಗೊಂಡಿದ್ದು, ಅಂಜಲಿ ಅವರ ತಲೆಯಲ್ಲಿ 7 ಹಾಗೂ ಕನ್ನಿಕಾ ತಲೆಯಲ್ಲಿ 5 ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆ ಸೋಮವಾರ ರಾತ್ರಿ 8 ರಿಂದ 11 ರ ಸಮಯದಲ್ಲಿ ನಡೆದಿರುವ ಕುರಿತು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆತ ತನ್ನ ಓದಿನಲ್ಲಿ ಹಿಂದಿದ್ದ. ಅಲ್ಲದೇ ಮೊಬೈಲ್ ಫೋನ್ ನಲ್ಲಿ ಕ್ರೈಂ ಗ್ಯಾಂಗ್‍ಸ್ಟರ್ ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ. ಘಟನೆ ನಡೆದ ದಿನ ಆತನ ತಾಯಿ ಓದುವ ಬಗ್ಗೆ ಆತನನ್ನು ಬೈದಿದ್ದರು ಎಂದು ತಿಳಿದು ಬಂದಿದೆ.

  • ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ತಾಯಿಯ ಕೊನೆ ಆಸೆ ಈಡೇರಿಸಲು ಆಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹವಾದ!

    ಕೋಲ್ಕತ್ತಾ: ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಸಾವು ಬದುಕಿನ ನಡುವಿನ ನಡುವೆ ಹೋರಾಟ ನಡೆಸುತ್ತಿದ್ದ ತಾಯಿಯ ಕೊನೆ ಆಸೆ ಈಡೇರಿಸಲು ಯುವಕನೊಬ್ಬ ಅಮೆರಿಕದಲ್ಲಿದ್ದ ಯುವತಿಯೊಂದಿಗೆ ಸ್ಕೈಪ್‍ನಲ್ಲಿ ವಿವಾಹ ಮಾಡಿಕೊಂಡಿರುವ ಘಟನೆ ಕೋಲ್ಕತ್ತಾದ ರೂಬಿ ಆಸ್ಪತ್ರೆಯಲ್ಲಿ ನಡೆದಿದೆ.

    ಅಮೆರಿಕದ ಜೆನೆಸಿಯೊ ನೆವಾರ್ಕ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭಾಸ್ಕರ್ ರಾಯ್ ಬರ್ಧಾನ್ (33) ಹಾಗೂ ಅಮೆರಿಕದಲ್ಲಿ ಸಂಶೋಧನ ವಿದ್ಯಾರ್ಥಿಯಾಗಿರುವ ಚಂದ್ರಿಮಾ ಚಟರ್ಜಿ ಅವರ ವಿವಾಹವು ಡಿಸೆಂಬರ್ 15 ರಂದು ನಿಗದಿಯಾಗಿತ್ತು.

    ಈ ಮಧ್ಯೆ ಭಾಸ್ಕರ್ ಅವರ ತಾಯಿ ಭಶ್ವತಿ (61) ಅವರು ಕ್ಯಾನ್ಸರ್ ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಗನ ಮದುವೆ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ. ವೈದ್ಯರು ಸಹ ಡಿ.15ರ ವರೆಗೆ ತಾಯಿ ಬದುಕುವುದು ಅನುಮಾನ. ಹೀಗಾಗಿ ಬೇಗನೇ ಮದುವೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದ್ದರು.

    ಇದರಿಂದ ತಾಯಿ ಕೊನೆ ಆಸೆ ನೆರವೇರಿಸಲು ಮುಂದಾದ ಭಾಸ್ಕರ್ ಅವರು ತಾಯಿ ಅವರಿಗೆ ಚಿಕಿತ್ಸೆ ನೀಡುತಿದ್ದ ಕೊಲ್ಕತ್ತಾದ ರೂನಿ ಆಸ್ಪತ್ರೆ ಕೊಠಟಿಯಲ್ಲೇ ಗುರುವಾರ ಮದುವೆಗೆ ಸಿದ್ಧತೆ ನಡೆಸಿ, ಸ್ಕೈಪ್ ಮೂಲಕ ಅಮೆರಿಕದಲ್ಲಿದ್ದ ಚಂದ್ರಿಮಾ ಅವರನ್ನು ಮದುವೆಯಾಗಿದ್ದಾರೆ. ಇವರ ವಿವಾಹ ಮಹೋತ್ಸವವು ಬೆಂಗಾಲಿ ಸಾಂಪ್ರದಾಯದಂತೆ ನಡೆಯಿತು.

    ಈ ವೇಳೆ ಮದುಮಗನ ವೇಷದಲ್ಲಿದ್ದ ಮಗನನ್ನು ತಾಯಿ ಕಣ್ತುಂಬಿಕೊಂಡರು. ಇಬ್ಬರ ಮದುವೆ ನೋಡಿದ ಅವರು ಮನ ತುಂಬಿ ಆರ್ಶೀವಾದಿಸಿದ್ದಾರೆ.

    ಈ ವೇಳೆ ಮಾತನಾಡಿದ ಭಾಸ್ಕರ್ ಅವರು, ತಮ್ಮ ತಾಯಿ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ, ಆದರೆ ಅವರ ಮುಖದ ಮೇಲಿನ ನಗು ಹಾಗೂ ಕಣ್ಣಂಚಿನ ಸಂತೋಷದ ನೀರನ್ನು ನಾವು ನೋಡಬಹುದು. ಇದುವೆ ನಮಗೇ ಆರ್ಶೀವಾದ ಎಂದು ಹೇಳಿದರು.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಭಶ್ವತಿ ಪರಿಸ್ಥಿತಿ ಚಿಂತಜನಕವಾಗಿದ್ದು, ಈ ವೇಳೆ ಮಗನ ಮದುವೆ ನೋಡಲು ಆಸೆಪಟ್ಟಿದ್ದರು. ಅದ್ದರಿಂದ ಆಡಳಿತ ಮಂಡಳಿ ಇತರೇ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮದುವೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿತ್ತು ಎಂದು ಆಸ್ಪತ್ರೆಯ ವೈದ್ಯ ಅರಂಧಮ್ ರಾಯ್ ಚೌಧರಿ ತಿಳಿಸಿದ್ದಾರೆ.

  • ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಅಮ್ಮನ ಪರ ಮಾತಾಡ್ತಾಳೆಂದು 18 ವರ್ಷದ ಮಗಳನ್ನೇ ಕತ್ತುಹಿಸುಕಿ ಕೊಂದ!

    ಮಲಪ್ಪುರಂ: ತನ್ನ ಜೊತೆ ಅಮ್ಮನ ಪರ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಪೆರುವಲ್ಲುರ್ ಸಮೀಪದ ತೆನ್ಹಿಪ್ಪಲಮ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಇಂದು ಆರೋಪಿ ತಂದೆ 46 ವರ್ಷದ ಶಶಿ ಪೊಲೀಸ್ ಠಾಣೆಗೆ ಶಾರಣಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಏನಿದು ಪ್ರಕರಣ?: ಅಕ್ರಮ ಸಂಬಂಧದ ಬಗ್ಗೆ ತಾಯಿ ಮತ್ತು ತಂದೆ ಮಧ್ಯೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಗಳು ಶಾಲು ಇವರಿಬ್ಬರ ಮಧ್ಯೆ ಬಂದು ತಾಯಿ ಪರ ವಹಿಸಿ ಮಾತನಾಡಿದ್ದಾಳೆ. ಇದರಿಂದ ಸಿಟ್ಟುಗೊಂಡ ತಂದೆ ಬುಧವಾರ ಮಧ್ಯರಾತ್ರಿ ಕಿರುಚಾಡದಂತೆ ಬಾತ್ ಟವಲ್ ನನ್ನು ಆಕೆಯ ಮುಖಕ್ಕೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಶವದ ಜೊತೆ ಕಳೆದಿದ್ದಾನೆ. ಬೆಳಗ್ಗೆಯಾಗುತ್ತಿದ್ದಂತೆಯೇ ಆರೋಪಿ ತಂದೆ ನೇರವಾಗಿ ತೆನ್ಹಿಪ್ಪಲಮ್ ಪೊಲೀಸ್ ಠಾನೆಗೆ ಬಂದು ಶರಣಾಗಿದ್ದಾನೆ.

    ಮೃತ ಶಾಲು ತಾಯಿ ಶೈಲಜಾ ಪೆರಿಂಥಾಲ್ಮಣ್ಣಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ತಂದೆ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಬಂಧಿತ ಶಶಿಯನ್ನು ಇಂದು ಪರಪ್ಪನಂಗಡಿಯಲ್ಲಿರೋ ಕೋರ್ಟ್ ಗೆ ಹಾಜರು ಪಡಿಸಲಾಗಿದೆ.

    ಬಂಧಿತ ಆರೋಪಿಗೆ ಆತನ ಪತ್ನಿಗೆ ಅಕ್ರಮ ಸಂಬಂಧವಿರೋ ಶಂಕೆ ವ್ಯಕ್ತವಾಗಿದ್ದು, ಪ್ರತೀ ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಗಳು ಅಮ್ಮನ ಪರ ವಹಿಸಿ ಮಾತನಾಡುತ್ತಿದ್ದಳು. ಇದರಿಂದ ಆತನಿಗೆ ಮಗಳು ಶಾಲು ಮೇಲೆಯೂ ಸಂಶಯ ವ್ಯಕ್ತವಾಗಿ ಈ ಕೃತ್ಯ ಎಸಗಿದ್ದಾನೆ ಅಂತ ತಿರುರಂಗಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ತನಿಖಾಧಿಕಾರಿ ಇ. ಸುನಿಲ್ ಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕಳೆದ ವರ್ಷವಷ್ಟೇ ಪೆರುವಲ್ಲರ್ ನ ಪ್ರೌಢಶಾಲೆಯಲ್ಲಿ ತನ್ನ ಓದು ಮುಗಿಸಿದ್ದ ಶಾಲು ಸದ್ಯ ಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು.

  • ನಟಿ ಕಾವ್ಯಾ ಆಚಾರ್ಯ ಸಹೋದರನ ಮೇಲೆ ಕೊಲೆ ಯತ್ನ

    ನಟಿ ಕಾವ್ಯಾ ಆಚಾರ್ಯ ಸಹೋದರನ ಮೇಲೆ ಕೊಲೆ ಯತ್ನ

    ಶಿವಮೊಗ್ಗ: ಸ್ವಾಮೀಜಿ ಜೊತೆ ರಾಸಲೀಲೆ ಪ್ರಕರಣದಿಂದ ಸುದ್ದಿಯಾಗಿದ್ದ ನಟಿ ಕಾವ್ಯಾ ಆಚಾರ್ಯ ಸಹೋದರ ಕೃಷ್ಣ ಆಚಾರ್ಯ ಮೇಲೆ ಕೊಲೆ ಯತ್ನ ಹಾಗೂ ಅಮ್ಮ ನಾಗರತ್ನ ಅವರಿಗೆ ಅಪರಿಚಿತರು ಜೀವ ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಇವರಿಬ್ಬರೂ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಸಮೀಪ ಶಿವರಾಜಪುರದ ಬಳಿ ಓಮ್ನಿಯಲ್ಲಿ ಬಂದಿದ್ದ ಐದು ಜನ ಅಪರಿಚಿತ ವ್ಯಕ್ತಿಗಳು ಇವರ ಕಾರು ಅಡ್ಡ ಹಾಕಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

    ಬಳಿಕ ಈ ಕುರಿತು ಕೇಸು, ಕಂಪ್ಲೇಂಟ್ ಎಂದು ಹೋದಲ್ಲಿ ಇಡೀ ಕುಟುಂಬದ ಎಲ್ಲರನ್ನೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಕೃಷ್ಣ ಅವರಿಗೆ ಚೂರಿಯಿಂದ ಇರಿದು ಕೊಲೆಗೆ ಕೂಡ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

    ಸದ್ಯ ಗಾಯಾಳು ಕೃಷ್ಣ ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=jzvC69jzdBg

    https://www.youtube.com/watch?v=s_FMyEPUKf4

    https://www.youtube.com/watch?v=9JvRzC7ZT_g

    https://www.youtube.com/watch?v=4hUdbxqu6qw

    https://www.youtube.com/watch?v=Ro8s_y6UJHE

    https://www.youtube.com/watch?v=Wju-SCH4x1s

  • ಗ್ರೂಪ್ ಫೋಟೋ ತೆಗ್ಸಿ ಮಗಳ ಕಾಲುಗಳನ್ನು ಕಟ್ಟಿ ರೈಲ್ವೇ ಟ್ರ್ಯಾಕ್ ಗೆ ಎಸೆದು ತಾಯಿಯೂ ಆತ್ಮಹತ್ಯೆ!

    ಗ್ರೂಪ್ ಫೋಟೋ ತೆಗ್ಸಿ ಮಗಳ ಕಾಲುಗಳನ್ನು ಕಟ್ಟಿ ರೈಲ್ವೇ ಟ್ರ್ಯಾಕ್ ಗೆ ಎಸೆದು ತಾಯಿಯೂ ಆತ್ಮಹತ್ಯೆ!

    – ತಾಯಿ ಮಕ್ಕಳ ಸಾವಿನಿಂದ ಮನನೊಂದ ತಂದೆಯೂ ಆತ್ಮಹತ್ಯೆ

    ಗುಂಟೂರು: ತನ್ನ ಏಳು ವರ್ಷದ ಮಗಳ ಹುಟ್ಟುಹಬ್ಬದ ದಿನದಂದೇ ಮಕ್ಕಳನ್ನು ರೈಲ್ವೇ ಟ್ರ್ಯಾಕ್ ನಲ್ಲಿ ರೈಲಿನ ಮುಂದೆ ಎಸೆದು ಬಳಿಕ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ನರಸಾರೊಪೆಟ್ ಎಂಬಲ್ಲಿ ನಡೆದಿದೆ. ಮೃತರನ್ನು ತಾಯಿ ವಿಜಯಲಕ್ಷ್ಮೀ(32) ಹಾಗೂ ಮಕ್ಕಳಾದ ದಿಗ್ವಿಜಯ(7), ಸಾಯಿಗಣೇಶ್(4) ಎಂದು ಗುರುತಿಸಲಾಗಿದೆ. ಮೃತ ವಿಜಯಲಕ್ಷ್ಮೀ ಅವರು ಪಂಗಲೂರು ಮಂದಲ್ ನ ರಾಮಕುರು ಗ್ರಾಮದ ಪೆನುಬೋತ್ ಸೋಮಶೇಖರ್(40) ಎಂಬವರನ್ನು 2008ರಲ್ಲಿ ಮದುವೆಯಾಗಿದ್ದರು.

    ಏನಿದು ಘಟನೆ?: ಸೋಮವಾರ ಮಗಳು ದಿಗ್ವಿಜಯಳ ಹುಟ್ಟು ಹಬ್ಬವಾಗಿತ್ತು. ಹೀಗಾಗಿ ವಿಜಯಲಕ್ಷ್ಮಿ ಅವರು ನಿನ್ನೆ ಶಾಲೆಗೆ ತೆರಳಿ ತನ್ನಿಬ್ಬರು ಮಕ್ಕಳನ್ನು ಶಾಪಿಂಗ್ ಮಾಡಲೆಂದು ಕರೆದುಕೊಂಡು ಬಂದಿದ್ದರು. ಅಂತೆಯೇ ಮಗಳ ಹುಟ್ಟುಹಬ್ಬವಾಗಿದ್ದರಿಂದ ಫೋಟೋ ತೆಗೆಸಿಕೊಳ್ಳೋಣ ಎಂದು ಸ್ಟುಡಿಯೋಗೆ ತೆರಳಿ ಮೂವರ ಗ್ರೂಪ್ ಫೋಟೋ ತೆಗೆಸಿಕೊಂಡಿದ್ದಾರೆ. ಅಲ್ಲದೇ ಆ ಕೂಡಲೇ ಸಿಕ್ಕ ಫೋಟೋದ ಹಿಂಬದಿಯಲ್ಲಿ ಮೂವರ ಹೆಸರನ್ನು ಕೂಡ ತಾಯಿ ಬರೆದ್ರು. ನಂತರ ಅಲ್ಲಿಂದ ಸೀದಾ ರೈಲ್ವೇ ಟ್ರ್ಯಾಕ್ ಬಳಿ ಮೂವರು ಹೋಗಿದ್ದಾರೆ.

    ರೈಲ್ವೇ ಟ್ರ್ಯಾಕ್ ಬಳಿ ಮಗಳು ಓಡಿ ಹೋಗದಂತೆ ತಾಯಿ ಆಕೆಯ ಕಾಲುಗಳನ್ನು ಹಗ್ಗದಿಂದ ಬಿಗಿಯಾಗಿ ಕಟ್ಟಿದ್ದಾರೆ. ನಂತರ ತನ್ನ ಪತಿಗೆ ಕರೆ ಮಾಡಿ ಮಕ್ಕಳೊಂದಿಗೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಹೀಗೆ ಗಂಡನಿಗೆ ಮಾಹಿತಿ ನೀಡಿ ಫೋನ್ ಕಟ್ ಮಾಡಿದ ಮಹಿಳೆ, ತನ್ನಿಬ್ಬರು ಮಕ್ಕಳನ್ನು ರೈಲ್ವೇ ಹಳಿಗೆ ಬಿಸಾಕಿ, ಬಳಿಕ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದಾಗಿ ತಾಯಿ ಹಾಗೂ ಇಬ್ಬರು ಮಕ್ಕಳೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇತ್ತ ತಾಯಿ-ಮಕ್ಕಳ ಆತ್ಮಹತ್ಯೆಯ ಸುದ್ದಿ ಇಡೀ ಗ್ರಾಮಕ್ಕೆ ಹಬ್ಬುತ್ತಿದ್ದಂತೆಯೇ ಮೃತ ಮಹಿಳೆಯ ಪತಿ ಸೋಮಶೇಖರ್ ಅವರು, ತನ್ನ ತಂದೆಯ ಬಳಿಯಿಂದ 200ರೂ. ತೆಗೆದುಕೊಂಡು ಕೀಟನಾಶಕ ಬಾಟಲಿಯನ್ನು ಅಂಗಡಿಯಿಂದ ಖರೀದಿ ಮಾಡಿದ್ದಾರೆ. ಅಂಗಡಿಯಿಂದ ನೇರವಾಗಿ ಮಿಲ್ ಗೆ ಬಂದ ಸೋಮಶೇಖರ್, ಕೀಟನಾಶಕವನ್ನು ಕುಡಿದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಈ ಕುಟುಂಬಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಸಮಸ್ಯೆಗಳಿರಲಿಲ್ಲ. ಒಟ್ಟಿನಲ್ಲಿ ಮಗಳ ಹುಟ್ಟುಹಬ್ಬದಂದೇ ತಾಯಿ ಈ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದುಬಂದಿಲ್ಲ.

    ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿದ್ಳು ಪಾಪಿ ತಾಯಿ

    ಹೈದರಾಬಾದ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಯಿತೆಂದು ಪಾಪಿ ತಾಯಿಯೊಬ್ಬಳು ತನ್ನ 4 ವರ್ಷದ ಮಗುವನ್ನ ಬಿಸಿ ಕಾವಲಿಯ ಮೇಲೆ ಕೂರಿಸಿದ ಘಟನೆ ತೆಲಂಗಾಣದ ಎಸ್‍ಆರ್ ನಗರದಲ್ಲಿ ಭಾನುವಾರದಂದು ನಡೆದಿದೆ.

    ಮೂಲತಃ ಶ್ರೀಕಾಕುಲಂ ಜಿಲ್ಲೆಯವಳಾದ ಲಲಿತಾ ಅದೇ ಜಿಲ್ಲೆಯವನಾದ ಪ್ರಕಾಶ್ ಎಂಬವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಗಂಡನನ್ನು ತೊರೆದಿದ್ದ ಲಲಿತಾ 4 ವರ್ಷದ ಮಗಳನ್ನು ತನ್ನೊಂದಿಗೆ ಇರಿಸಿಕೊಂಡಿದ್ದಳು. 9 ತಿಂಗಳ ಹಿಂದೆ ಇಬ್ಬರೂ ಹೈದರಾಬಾದ್‍ಗೆ ಬಂದಿದ್ದರು. ಅಂದಿನಿಂದ ಲಲಿತಾ ಎಸ್‍ಆರ್ ನಗರದ ಶ್ರೀನಿವಾಸ್ ನಗರದ ಮನೆಯೊಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಳು. ಪ್ರಕಾಶ್ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಆದ್ರೆ ಮಗಳು ರೂಪಳನ್ನ ದೂರ ಮಾಡುವಂತೆ ಪ್ರಕಾಶ್ ಲಲಿತಾಗೆ ಹೇಳುತ್ತಲೇ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಈ ಮಧ್ಯೆ ಲಲಿತಾ ತನ್ನ ಮಗಳನ್ನ ಬಿಸಿಯಾದ ಕಾವಲಿ ಮೇಲೆ ಕೂರಿಸಿ, ನಂತರ ಅದರ ಮೇಲೆ ನಿಲ್ಲಿಸಿ ವಿಕೃತಿ ಮೆರೆದಿದ್ದಾಳೆ. ಈ ಜೋಡಿ ಮಗುವನ್ನ ಮಹಿಳಾ ಮತ್ತು ಮಕ್ಕಳ ಕೇಂದ್ರವಾದ ಭರೋಸಾಗೆ ಕರೆದುಕೊಂಡು ಹೋಗಿದ್ದು, ಇದು ಅನಾಥ ಮಗು. ರಸ್ತೆ ಬದಿಯಲ್ಲಿ ಸಿಕ್ಕಿತು ಎಂದು ಹೇಳಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

    ಭರೋಸಾ ಸಿಬ್ಬಂದಿ ಅಧಿಕೃತವಾಗಿ ದೂರು ದಾಖಲಿಸಲು ಮೂವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ದೇಹದ ಮೇಲೆ ಗಾಯದ ಗುರುತುಗಳನ್ನ ನೋಡಿದ ಪೊಲೀಸರಿಗೆ ಅನುಮಾನ ಬಂದಿದ್ದು, ಎಸ್‍ಆರ್ ನಗರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

    ಪ್ರಕಾಶ್ ಹಾಗೂ ಲಲಿತಾ ಮಗುವಿನಿಂದ ಮುಕ್ತಿ ಪಡೆಯಲು ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ತಮ್ಮ ಸಂಬಂಧಕ್ಕೆ ಮಗು ಅಡ್ಡಿಯಾಯಿತೆಂದು ಬಿಸಿ ಕಾವಲಿ ಮೇಲೆ ಮಗುವನ್ನ ಕೂರಿಸಿ ಹಿಂಸೆ ನೀಡಿದ್ದಾರೆ.

    ಸದ್ಯ ಪೊಲೀಸರು ಲಲಿತಾ ಹಾಗೂ ಪ್ರಕಾಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ. ಮಗುವನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    10 ಜನ ದುಷ್ಕರ್ಮಿಗಳು ಯುವಕನ ಕಿಡ್ನ್ಯಾಪ್ ಮಾಡಿ ಡ್ರಾಗರ್, ಚಾಕುಗಳಿಂದ ಹಲ್ಲೆಗೈದ್ರು!

    ಬೆಂಗಳೂರು: ಕೊಲೆ ಮಾಡುವ ಉದ್ದೇಶದಿಂದ ಕಿಡ್ನ್ಯಾಪ್ ಮಾಡಿ ಥಳಿಸಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ.

    ಅರುಣ್ ಕುಮಾರ್ ಹಲ್ಲೆಗೊಳಗಾದ ಯುವಕ. ಶನಿವಾರ ಸಂಜೆ ವೇಳೆ ಇಂದಿರಾನಗರ ಡಿಪೋ ಬಳಿ ತಾಯಿಯನ್ನು ಬಿಟ್ಟು ಬರುತ್ತಿದ್ದಾಗ 10 ಜನ ದುಷ್ಕರ್ಮಿಗಳು ಅರುಣ್ ನನ್ನು ಕಿಡ್ನ್ಯಾಪ್ ನಾಡಿ ಹತ್ತಿರದ ಗ್ರೌಂಡ್‍ಗೆ ಕರೆದೊಯ್ದಿದ್ದರು.

    ಅಪಹರಣಗೈದ ಬಳಿಕ ಮಾತನಾಡಲೂ ಬಿಡದೆ ಕೊಲೆ ಮಾಡುವ ಉದ್ದೇಶದಿಂದ ಡ್ರಾಗರ್, ಚಾಕುಗಳಿಂದ ಹಲ್ಲೆಯನ್ನ ನಡೆಸಿದ್ರು. ಬಳಿಕ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಅರುಣ್, ಪೋಷಕರಿಗೆ ವಿಷಯ ತಿಳಿಸಿದ್ದಾನೆ. ನಂತರ ಆತನನ್ನು ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ರು.

    ಕಳೆದ ಮೂರು ತಿಂಗಳ ಹಿಂದೆ ಮನೆಯ ಬಳಿ ವಿಜಯ್ ಕುಮಾರ್ ಎಂಬಾತನ ಜೊತೆ ಕಿರಿಕ್ ಮಾಡಿಕೊಂಡಿದ್ದ ಅರುಣ್, ನಂತರ ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನದ ಬಳಿಕ ವಿಜಯ್ ಕುಮಾರ್ ಕೊಲೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಈತನೆ ಕೊಲೆಗೆ ಯತ್ನಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

    ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮಗಳು ಸಾವನ್ನಪ್ಪಿದ ಮರುದಿನವೇ 17ನೇ ಮಹಡಿಯಿಂದ ಜಿಗಿದು ತಾಯಿ ಆತ್ಮಹತ್ಯೆ

    ಮಗಳು ಸಾವನ್ನಪ್ಪಿದ ಮರುದಿನವೇ 17ನೇ ಮಹಡಿಯಿಂದ ಜಿಗಿದು ತಾಯಿ ಆತ್ಮಹತ್ಯೆ

    ಮುಂಬೈ: 19 ವರ್ಷದ ಮಗಳು ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ ಆಕೆಯ ತಾಯಿ ಕೂಡ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಥಾಣೆಯ ವಸಂತ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಪೊಲೀಸರ ಪ್ರಕಾರ ತಾಯಿ ಮತ್ತು ಮಗಳ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಶಾಕ್‍ನಲ್ಲಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅನುಮಾನಿಸಲಾಗಿದೆ. ಆದ್ರೂ ಘಟನೆಗೆ ನಿರ್ದಿಷ್ಟ ಕಾರಣ ತಿಳಿಯಲು ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತ ಮಹಿಳೆ ಸಗುಣಾ ಕೊಡಮಂಚಿಲಿ(45) ಆಂಧ್ರಪ್ರದೇಶ ಮೂಲದವರಾಗಿದ್ದು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ತನ್ನ ಮಗಳು ನವ್ಯಾ ಜೊತೆಗೆ ವಾಸವಿದ್ದರು. ಕೆಲವು ದಿನಗಳ ಹಿಂದೆ ನವ್ಯಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಶನಿವಾರ ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಮೃತಪಟ್ಟಿದ್ದಳು.

    ಮಗಳ ಸಾವಿನ ಸುದ್ದಿ ತಿಳಿದು ಸಗುಣಾ ಆಘಾತಕ್ಕೆ ಒಳಗಾಗಿದ್ದರು. ನವ್ಯಾಳ ಅಂತ್ಯಕ್ರಿಯೆಗಾಗಿ ಭಾನುವಾರದಂದು ಸಿದ್ಧತೆ ಮಾಡಿಕೊಳ್ಳಲಾಗ್ತಿತ್ತು. ಈ ಸಂದರ್ಭದಲ್ಲಿ ಭಾನುವಾರ ಬೆಳಗ್ಗೆ 5.30ರ ವೇಳೆಗೆ ಸಗುಣಾ ಮನೆಯಿಂದ ಹೊರಹೋಗಿ 17ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಟ್ಟಡದ ಇತರೆ ನಿವಾಸಿಗಳ ಪ್ರಕಾರ, ಮೃತ ಮಹಿಳೆಯ ಗಂಡ ಹಿಂದೆಯೇ ಓಡಿಬಂದರು. ಆದ್ರೆ ಅವರು ಹಿಡಿದುಕೊಳ್ಳುವ ವೇಳೆಗೆ ಮಹಿಳೆ ಕೆಳಗೆ ಜಿಗಿದಿದ್ದರು. ಇವರ ಮಗಳು ಇತ್ತೀಚೆಗಷ್ಟೇ ಪರೀಕ್ಷೆ ಬರೆದಿದ್ದಳು. ಆದರೆ ಈ ರೀತಿ ಯಾಕೆ ಮಾಡಿಕೊಂಡಳು ಎಂದು ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.

    ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಚಿತಲ್ಸರ್ ಮನ್‍ಪಾದಾ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಮಗಳ ಸಾವಿಗೆ ಸಂಬಂಧಿಸಿದಂತೆ ವರ್ತಕ್ ನಗರ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.

    ನಾವು ಕೆಲವು ಸಂಬಂಧಿಕರ ಹೇಳಿಕೆ ದಾಖಲಿಸಿಕೊಂಡಿದ್ದೇವೆ. ಯುವತಿಯ ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಪ್ರಾಥಮಿಕ ತನಿಖೆ ನಡೆಸುತ್ತಿದ್ದೇವೆ. ಮಹಿಳೆಗೆ ಈಕೆ ಒಬ್ಬಳೇ ಮಗಳಾಗಿದ್ದರಿಂದ ಆಕೆಯ ಸಾವಿನಿಂದ ಖಿನ್ನತೆಗೆ ಒಳಗಾಗಿರುವ ಶಂಕೆಯಿದೆ. ಇದೇ ಶಾಕ್‍ನಲ್ಲಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು. ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಚಿತಲ್ಸರ್ ಮನ್‍ಪಾದಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಗಣ್‍ಪತ್ ಪಿಂಗಾಲೇ ಹೇಳಿದ್ದಾರೆ.

  • ಹೆರಿಗೆಯಾದ್ಮೇಲೆ ತಾಯಿ ಸಾವನ್ನಪ್ಪಿದ್ದಾರೆಂದ ವೈದ್ಯರು- ಅಂತ್ಯಕ್ರಿಯೆ ವೇಳೆ ಕಣ್ಣು ಬಿಟ್ಟು ಮತ್ತೆ ಸಾವನ್ನಪ್ಪಿದ ಮಹಿಳೆ

    ಹೆರಿಗೆಯಾದ್ಮೇಲೆ ತಾಯಿ ಸಾವನ್ನಪ್ಪಿದ್ದಾರೆಂದ ವೈದ್ಯರು- ಅಂತ್ಯಕ್ರಿಯೆ ವೇಳೆ ಕಣ್ಣು ಬಿಟ್ಟು ಮತ್ತೆ ಸಾವನ್ನಪ್ಪಿದ ಮಹಿಳೆ

    ಹಾವೇರಿ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ನಾಗಮ್ಮ ಯಮನಪ್ಪ ಕೋಡೇರ (25) ಎಂದು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ಲೋ ಬಿಪಿ ಆಗಿದ್ದರಿಂದ ಮಹಿಳೆಯನ್ನ ರಾಣೇಬೆನ್ನೂರು ಹೆರಿಗೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಹೆರಿಗೆ ಆಸ್ಪತ್ರೆ ಸಿಬ್ಬಂದಿ ನಾಗಮ್ಮರನ್ನು ಸರಿಯಾಗಿ ಪರೀಕ್ಷಿಸದೆ ಸಾವನ್ನಪ್ಪಿದ್ದಾರೆಂದು ಹೇಳಿ ಬಾಣಂತಿಯನ್ನ ಸಾಗಹಾಕಿದ್ದರು.

    ಬಾಣಂತಿ ಸತ್ತಿದ್ದಾರೆಂದು ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವೇಳೆ ನಾಗಮ್ಮ ಕಣ್ಣು ತೆರೆದಿದ್ದರು. ನಂತರ ಮತ್ತೆ ನಾಗಮ್ಮರನ್ನ ಗ್ರಾಮದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.

    ಹೆರಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ದೂರದ ಹಳ್ಳಿಯಿಂದ ಬಂದು ದಾರಿ ತಪ್ಪಿದ ಅಜ್ಜಿ – ಮಲ್ಲೇಶ್ವರಂನಲ್ಲಿ ರಾತ್ರಿಯೆಲ್ಲಾ ಪರದಾಟ

    ದೂರದ ಹಳ್ಳಿಯಿಂದ ಬಂದು ದಾರಿ ತಪ್ಪಿದ ಅಜ್ಜಿ – ಮಲ್ಲೇಶ್ವರಂನಲ್ಲಿ ರಾತ್ರಿಯೆಲ್ಲಾ ಪರದಾಟ

    – ಹೆತ್ತ ಮಕ್ಕಳು ಬೇಕಂತಲೇ ಬಿಟ್ಟು ಹೋಗಿರುವ ಶಂಕೆ

    ಬೆಂಗಳೂರು: ದೂರದ ಹಳ್ಳಿಯಿಂದ ಬೆಂಗಳೂರಿಗೆ ಬಂದ 90 ವರ್ಷದ ಅಜ್ಜಿಯೊಬ್ಬರು ದಾರಿ ತಿಳಿಯದೇ ಕಂಗಾಲಾಗಿದ್ದಾರೆ. ಬಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಎಟಿಎಂವೊಂದರ ಬಳಿ ಈ ಅಜ್ಜಿ ಭಾನುವಾರ ಮಧ್ಯಾಹ್ನದಿಂದ ಕುಳಿತುಕೊಂಡಿದ್ದಾರೆ.

    ಅಜ್ಜಿಯನ್ನು ನೋಡಿದ ಸ್ಥಳೀಯರು ಎಲ್ಲಿಂದ ಬಂದ್ದಿದೀರಿ, ಎಲ್ಲಿ ಹೋಗಬೇಕು ಅಂತಾ ಪ್ರಶ್ನೆ ಮಾಡಿದ್ದಾರೆ. ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದೆ ಎಲ್ಲಾ ಬಿಟ್ಟು ಹೋದ್ರು ಅಂತಾ ಅಜ್ಜಿ ಹೇಳುತ್ತಿದ್ದಾರೆ. ಹೆತ್ತ ಮಕ್ಕಳೇ ಸಾಕೋಕೆ ಕಷ್ಟ ಅಂತಾ ಈ ರೀತಿ ಬಿಟ್ಟು ಹೋದ್ರಾ ಅನ್ನೋ ಅನುಮಾನ ಎಲ್ಲರಲ್ಲಿ ಮೂಡಿದೆ.

    ತಡರಾತ್ರಿ 11 ಗಂಟೆಯಾದರೂ ಅಜ್ಜಿ ರಸ್ತೆಯ ಬದಿಯೇ ಕುಳಿತಿದನ್ನು ನೋಡಿದ ಸ್ಥಳೀಯರು, ಮಲ್ಲೇಶ್ವರಂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಜ್ಜಿಯ ರಕ್ಷಣೆ ಮಾಡಿದ್ದಾರೆ.