Tag: mother

  • ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

    ತಾಯಿ ಸಾವಿನಿಂದ ಮನನೊಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ

    ಮೈಸೂರು: ತಾಯಿಯ ಸಾವಿನಿಂದ ಮನನೊಂದು ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ.

    ವಾಜಮಂಗಲದ ರತ್ನಮ್ಮ(55) ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ತಾಯಿ ಮೃತಪಡುವುದು ಸ್ಪಷ್ಟವಾಗುತ್ತಿದ್ದಂತೆ ಮಗ ಸತೀಶ್ ಆತ್ಮಹತ್ಯೆ ನಿರ್ಧಾರ ಮಾಡಿ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಇನ್ನೂ ಕೆಲವೇ ಕ್ಷಣಗಳಲ್ಲಿ ನನ್ನ ತಾಯಿ ಸಾಯುತ್ತಾರೆ. ಹೀಗಾಗಿ ನಾನು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ತಾಯಿಯ ಸಾವಿನ ಸುದ್ದಿ ಅಧಿಕೃತವಾಗುತ್ತಿದ್ದಂತೆ ಸತೀಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ವಿಡಿಯೋದಲ್ಲೇನಿದೆ?: ಎಲ್ಲಾ ನನ್ನ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರಗಳು. ನಮ್ಮ ತಾಯಿ ಬೆಳಗ್ಗೆ ತೀರಿಕೊಳ್ಳುತ್ತಿದ್ದಾರೆ. ಅದಕ್ಕೆ ನನಗೆ ನನ್ನ ತಾಯಿಯನ್ನು ಬಿಟ್ಟು ಬದುಕಲು ಆಗಲ್ಲ. ಹಾಗಾಗಿ ನಾನು ನನ್ನ ತಾಯಿ ಜೊತೆ ಹೋಗಬೇಕು ಎಂದು ನಿರ್ಧರಿಸಿದ್ದೇನೆ. ನಾನು ಏಕೆ ಈ ವಿಡಿಯೋ ಮಾಡುತ್ತಿದ್ದೀನಿ ಎಂದರೆ ನನ್ನ ಸ್ನೇಹಿತರು ಹಾಗೂ ನನ್ನ ಸಂಬಂಧಿಕರು ಎಲ್ಲರನ್ನೂ ನಾನು ಪ್ರೀತಿಯಿಂದ ಮೋಸ ಮಾಡುತ್ತಿದ್ದೀನಿ. ಏಕೆಂದರೆ ನನ್ನ ತಾಯಿ ತೀರಿಕೊಳ್ಳತ್ತಿದ್ದಾರೆ. ನನ್ನ ಪ್ರೀತಿಸೋ ಎಲ್ಲ ಸ್ನೇಹಿತರಿಗೂ ನನ್ನ ಕಡೆಯ ನಮಸ್ಕಾರಗಳು ಹಾಗೂ ನನ್ನ ಪ್ರೀತಿಯ ಕುಮಾರಣ್ಣನಿಗೆ, ಸತೀಶ್ ಅಣ್ಣ, ವೀರೂ, ಜಿದ್ದು, ವಿನೋದ್, ಯೋಗೇಶ್ ಹಾಗೂ ನನ್ನ ಇತರ ಆತ್ಮೀಯ ಸ್ನೇಹಿತರಿಗೆ ನನ್ನ ಕಡೆಯ ನಮಸ್ಕಾರ. ದಯವಿಟ್ಟು ನನ್ನ ಕ್ಷಮಿಸಿ. ನಾನು ಕೆಲವರಿಗೆ ಮೋಸ ಮಾಡಿ ಹೋಗುತ್ತಿದ್ದೀನಿ. ಯಾಕೆ ಎಂದು ಹೇಳೋಕೆ ಆಗಲ್ಲ. ನನ್ನ ತಾಯಿ ಚೆನ್ನಾಗಿ ಇದಿದ್ದರೆ ನಾನು ಯಾರಿಗೂ ಮೋಸ ಮಾಡುತ್ತಿರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಸತೀಶ್ ತನ್ನ ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ. ಹೀಗಾಗಿ ತಾಯಿಯ ಸಾವಿನ ಬೆನ್ನಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ವರ್ಷಗಳ ಹಿಂದಷ್ಟೇ ಸತೀಶ್ ತಂದೆಯೂ ತೀರಿಕೊಂಡಿದ್ದರು. ನಾಲ್ಕು ಜನರ ಕುಟುಂಬದಲ್ಲಿ ಈಗ ಒಬ್ಬ ಮಗಳಷ್ಟೇ ಬದುಕುಳಿದಿದ್ದಾಳೆ. ಕುಟುಂಬದ ಮೂವರನ್ನ ಕಳೆದುಕೊಂಡ ಮನೆ ಮಗಳ ಗೋಳು ಮುಗಿಲು ಮುಟ್ಟಿದೆ.

    ಈ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

  • ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

    ವಿಧವೆ ತಾಯಿಗೆ ವರನನ್ನು ಹುಡುಕಿ ಮದ್ವೆ ಮಾಡಿಸಿದ ಮಗಳು

    ಜೈಪುರ: ಎಲ್ಲಾ ಸಾಮಾಜಿಕ ನಿಯಮಗಳ ವಿರುದ್ಧ ಹೋರಾಡಿ ವಿವಾಹಿತ ತಾಯಿಗೆ ಮರು ಮದುವೆ ಮಾಡಿಸಿದ ರಾಜಸ್ಥಾನದ ಹುಡುಗಿಯ ಕಥೆ ಇದು.

    ಸಂಹಿತಾ ಅಗರ್‍ವಾಲ್ ತನ್ನ ತಾಯಿಗೆ ಮರು ಮದುವೆ ಮಾಡಿಸಿ ಈಗ ಸುದ್ದಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ತನ್ನ 52 ವರ್ಷದ ತಂದೆಯನ್ನು ಸಂಹಿತಾ ಅಗರ್‍ವಾಲ್ ಕಳೆದುಕೊಂಡಿದ್ದರು. ತಂದೆ ಮೃತಪಟ್ಟ ಬಳಿಕ ತಾಯಿ ಬೇಸರಗೊಂಡಿರುವುದನ್ನು ಗಮನಿಸಿ ಅವರ ಏಕಾಂಗಿತನವನ್ನು ದೂರ ಮಾಡಲು ಅವರ ಮನಒಲಿಸಿ ಮತ್ತೊಂದು ಮದುವೆ ಮಾಡಿ ಯಶಸ್ವಿಯಾಗಿದ್ದಾರೆ.

    ತಾಯಿಗೆ ಮದುವೆ ಮಾಡಿದ್ದು ಹೀಗೆ:
    ನನ್ನ ತಂದೆ ಸುಮಾರು 2 ವರ್ಷಗಳ ಹಿಂದೆ ನಿಧನರಾದದರು. ಈ ವಿಚಾರ ತಿಳಿದು ನನಗೆ, ಸಹೋದರಿ, ತಾಯಿಗೆ ಆಘಾತವಾಯಿತು. ಈ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜೀವನವೇ ಬೇಡವೆನ್ನಿಸಿತು. ಈ ಮಧ್ಯೆ ಮುಂದೆ ಜೀವನದ ದಿಕ್ಕೆ ತೋಚದಂತೆ ಏನು ಮಾಡುವುದು ಎಂದು ಬೇಸರದಲ್ಲಿದ್ದೆವು. ಈ ವೇಳೆ ದುಃಖವನ್ನು ಮರೆಯಲು ನನ್ನ ಅಕ್ಕ ಕೆಲಸದಲ್ಲಿ ಬ್ಯುಸಿಯಾದರು. ಆದರೆ ನನಗೆ ಮತ್ತು ತಾಯಿಗೆ ಅಪ್ಪನ ಕಳೆದುಕೊಂಡ ನೋವನ್ನು ಮರೆಯಲು ಸಾಧ್ಯವಾಗಲಿಲ್ಲ.

    ಎಂದಿನಂತೆ ನಾನು ಪ್ರತಿದಿನ ಕೆಲಸ ಮುಗಿಸಿ ಕಚೇರಿಯಿಂದ ಹೋಗುತ್ತಿದ್ದೆ. ಆದರೆ ಕೆಲಸ ಮುಗಿಸಿ ಮನೆಗೆ ಬರುವಾಗ ಅಮ್ಮ ಮನೆಯ ಹೊರಗಡೆ ದುಃಖದಲ್ಲಿ ಕುಳಿತಿರುತ್ತಿದ್ದರು. ನನ್ನ ಜೊತೆ ಕೂಡ ಮಾತನಾಡುತ್ತಿರಲಿಲ್ಲ. ಬಳಿಕ ನಾನೇ ಕೆಲವು ದಿನಗಳವರೆಗೆ ಅವರೇ ಪತಿ ಕಳೆದುಕೊಂಡ ನೋವು, ಯೋಚನೆಗಳಿಂದ ಹೊರ ಬಂದು ಮಾತನಾಡಿಸುತ್ತಾರೆ ಎಂದು ಸುಮ್ಮನಾದೆ.

    ತಿಂಗಳುಗಳು ಕಳೆದು ಹೋದರೂ ಅಮ್ಮ ಅವರ ನೋವಿನಿಂದ ಹೊರ ಬರಲೇ ಇಲ್ಲ. ಮೌನವಾಗಿಯೇ ಇದ್ದರು. ಈ ಸಂದರ್ಭದಲ್ಲಿ ನಾನು ಕೆಲಸಕ್ಕಾಗಿ ಅಮ್ಮನನ್ನು ಬಿಟ್ಟು ಮನೆಯಿಂದ ದೂರ ಹೋಗಬೇಕಾದ ಸಂದರ್ಭ ಬಂತು. ಆದರೆ ನನಗೆ ತಾಯಿಯನ್ನು ಬಿಟ್ಟು ಹೋಗುವುದಕ್ಕೆ ಮನಸ್ಸಾಗಲಿಲ್ಲ. ಅದಕ್ಕಾಗಿ ಕಷ್ಟವಾದರೂ ಪರವಾಗಿಲ್ಲ ಎಂದು ನಮ್ಮ ನಗರದಲ್ಲಿ ಕೆಲಸವನ್ನು ಪಡೆಯಲು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ನಾನು ಅಮ್ಮನ ಬಿಟ್ಟು ಬೇರೆ ಹೋಗಲೇಬೇಕಾಯಿತು. ಅಮ್ಮನನ್ನು ಬಿಟ್ಟು ಹೋಗಿದ್ದಕ್ಕೆ ನನ್ನನ್ನು ನಾನೇ ಶಪಿಸಿಕೊಂಡೆನು. ದೂರ ಹೋದರೂ ಪ್ರತಿ ವಾರ ಎರಡು ದಿನ ಅಮ್ಮನನ್ನು ಭೇಟಿಯಾಗುಲು ಬರುತ್ತಿದ್ದೆ. ಇದರಿಂದ ಅವರಿಗೂ ಸಂತೋಷವಾಗುತ್ತಿತ್ತು. ಆದರೆ ನಾನು ನನ್ನ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡು ಸ್ವಾರ್ಥಿಯಾಗಿದ್ದೇನೆ ಎನ್ನಿಸಿತು. ಆದರೆ ಅಮ್ಮ ಯಾವಾಗಲೂ ನಿನ್ನ ಕೆಲಸವನ್ನು ಕಳೆದುಕೊಳ್ಳಬೇಡ ಎಂದು ಧೈರ್ಯ ಹೇಳುತ್ತಿದ್ದರು.

    ಮೂರು ತಿಂಗಳ ಬಳಿಕ ನಾನು ಯೋಚನೆ ಮಾಡಿ ತಾಯಿಗಾಗಿ ಸಂಗಾತಿಯನ್ನು ಹುಡುಕಲು ನಿರ್ಧಾರ ಮಾಡಿಕೊಂಡೆ. ಅವರ ಸಂತೋಷ ಮತ್ತು ಭರವಸೆ, ನೋವುಗಳನ್ನು ಹಂಚಿಕೊಳ್ಳಲು ಒಬ್ಬ ಜೀವನ ಸಂಗಾತಿಯ ಅವಶ್ಯಕತೆ ಇದೆ ಎಂದು ಈ ನಿರ್ಧಾರ ಮಾಡಿದೆ. ನಂತರ ತಾಯಿ ಹೆಸರಿನಲ್ಲಿ ಮ್ಯಾಟ್ರಿಮೋನಿಯ ವೆಬ್‍ಸೈಟ್‍ನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿ ಅನೇಕ ವರಗಳನ್ನು ಹುಡುಕಾಡಿದೆ. ಯಾರು ಕೂಡ ನನಗೆ ಒಪ್ಪಿಗೆಯಾಗಿಲ್ಲ. ಅಂತಿಮವಾಗಿ ಒಬ್ಬರು ನನಗೆ ಇಷ್ಟವಾದರು. ಅವರು ಕೂಡ ನನ್ನ ಅಮ್ಮನಂತೆಯೇ ಸರ್ಕಾರಿ ಕೆಲಸವನ್ನು ಹೊಂದಿದ್ದರು. ಜೊತೆಗೆ ಬುದ್ಧಿವಂತ ಮತ್ತು ಪ್ರೌಢರಾಗಿದ್ದರು.

    ಸಂಗಾತಿಯನ್ನು ಹುಡುಕುವ ಕೆಲಸ ಮುಗಿದರೂ ತಾಯಿಯನ್ನು ಒಪ್ಪಿಸುವುದು ತುಂಬಾ ಕಷ್ಟವೆನಿಸಿತು. ಆದರೂ ಬಿಡದೇ ಅಮ್ಮನ ಜೊತೆ ಮಾತನಾಡಿದೆ. ಅಮ್ಮ ಈ ಭೂಮಿಯ ಮೇಲೆ ಇರುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನವನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾರೆ. ಏಕೆಂದರೆ ಈ ಸಮಾಜದಲ್ಲಿ ವಯಸ್ಸಾದ ಮೇಲೆ ನಮ್ಮೊಂದಿಗೆ ಯಾರು ಇರುವುದಿಲ್ಲ. ನಮಗೆ ಅನಾರೋಗ್ಯ ಸಮಸ್ಯೆ ಎದುರಾದಾಗ ನಮ್ಮ ಸಹಾಯಕ್ಕೆ ಸಂಬಂಧಿಕರು ಯಾರು ಬರುವುದಿಲ್ಲ. ಆದ್ದರಿಂದ ನಮ್ಮ ಜೀವನದ ಸಂಗಾತಿ ಮಾತ್ರ ನಮ್ಮ ಜೊತೆ ಕೊನೆತನಕ ಇರುತ್ತಾರೆ. ನಿಮ್ಮ ಜೀವನದಲ್ಲಿ ಇರುವ ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಸಂಗಾತಿಯ ಅಗತ್ಯವಿದೆ ಯೋಚಿಸಿ ಎಂದು ನಾನು ತಾಯಿಗೆ ತಿಳಿಸಿದೆ.

    ನಾನು ಇಷ್ಟೆಲ್ಲ ವಿವರವಾಗಿ ವಿವರಿಸಿದ ಮೇಲೆ ಅಂತಿಮವಾಗಿ ತಾಯಿ ಮದುವೆಗೆ ಒಪ್ಪಿಗೆ ಸೂಚಿಸಿದರು. ಕೆಲ ದಿನದ ಹಿಂದೆ ತಾಯಿಯ ಮದುವೆ ನಡೆದಿದ್ದು, ಈಗ ನೋವುಗಳನ್ನು ಮರೆತು ಅವರು ತುಂಬಾ ಸಂತೋಷವಾಗಿದ್ದಾರೆ ಎಂದು ಸಂಹಿತಾ ಹೇಳಿದರು.

  • ತಲೆಯನ್ನು ಗೋಡೆಗೆ ಗುದ್ದಿ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ!

    ತಲೆಯನ್ನು ಗೋಡೆಗೆ ಗುದ್ದಿ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದ ಪಾಪಿ ಮಗ!

    ಬೆಂಗಳೂರು: ಹೊತ್ತು-ಹೆತ್ತು ಸಾಕಿ ಸಲುಹಿದ ತಾಯಿಯೊಬ್ಬರು ಮಗನ ಕೈಯಿಂದಲೇ ಬರ್ಬರವಾಗಿ ಹತ್ಯೆಗೀಡಾದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆ ಆಡುಗೋಡಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಲಕ್ಷ್ಮೀ(80) ಮೃತ ದುರ್ದೈವಿಯಾಗಿದ್ದು, ಪ್ರಕರಣ ಸಂಬಂಧ ಮಗ ಸೆಲ್ವರಾಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಜ.4 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮದ್ಯಪಾನ ಮಾಡಲು ಹಣ ನೀಡುವಂತೆ ತಾಯಿಯನ್ನು ಮಗ ಸೆಲ್ವರಾಜ್ ಪೀಡಿಸಿದ್ದಾನೆ. ಈ ವೇಳೆ ಹಣ ನೀಡಲು ತಾಯಿ ನಿರಾಕರಿಸಿದ್ದಕ್ಕೆ ಸಿಟ್ಟಾದ ಮಗ ತಾಯಿಯ ತಲೆಯನ್ನು ಗೋಡೆಗೆ ಗುದ್ದಿ ಬರ್ಬರವಾಗಿ ಕೊಲೆಗೈದಿದ್ದಾನೆ.

    ಘಟನೆ ಸಂಬಂಧ ಆಡಿಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

    ಭೋಪಾಲ್: 12 ವರ್ಷದ ಬಾಲಕಿಯ ಮೇಲೆ ಸತತ 5 ವರ್ಷಗಳ ಕಾಲ ತಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ತನ್ನ ಪತಿ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಕುರಿತು ತಾಯಿಗೆ ಗೊತ್ತಿದ್ದರೂ ಆಕೆ ಹೀನಕೃತ್ಯಕ್ಕೆ ಅಡ್ಡಿಪಡಿಸಿಲ್ಲ. ಅಲ್ಲದೇ ತಾಯಿಯೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದ್ದಾಳೆ.

    ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಸಹೋದರ ಒಂದು ವರ್ಷದ ಹಿಂದೆಯೇ ವಿರೋಧ ವ್ಯಕ್ತಪಡಿಸಲು ಮುಂದಾಗ ಆತನಿಗೆ ಸುಮ್ಮನಿರುವಂತೆ ತಂದೆ ಧಮ್ಕಿ ಹಾಕಿ ಸುಮ್ಮನಿರುವಂತೆ ಹೇಳಿದ್ದ. ಆದರೆ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಬಂದ ಸಂದರ್ಭದಲ್ಲಿ ತಂದೆಯ ಕೃತ್ಯದ ಕುರಿತು ತನ್ನ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರ ತಿಳಿದು ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

    ಬಾಲಕಿಯ ಹೇಳಿಕೆ ಪಡೆದ ಪೊಲೀಸರು ತಂದೆ ಹಾಗೂ ತಾಯಿ ಇಬ್ಬರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ ತನ್ನ ತಂದೆ ಹಾಗೂ ತಾಯಿ ಇಬ್ಬರಿಗೂ ಮರಣ ದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾಳೆ.

     

  • ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ತಾಯಿಗಿಂತಲೂ ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ಪತ್ನಿಯಿಂದ ವಿಚ್ಛೇದನ!

    ರಿಯಾದ್: ಪತಿ ನನ್ನನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ವಿವಾಹ ವಿಚ್ಛೇದನ ಪಡೆಯುವುದನ್ನು ನೋಡಿದ್ದೇವೆ. ಆದರೆ ಸೌದಿ ಅರೇಬಿಯಾದ ಮಹಿಳೆಯೊಬ್ಬರು ತಾಯಿಗಿಂತಲೂ ನನ್ನನ್ನು ಹೆಚ್ಚು ಪ್ರೀತಿಸಿದ್ದಕ್ಕೆ ಪತಿಗೆ ವಿಚ್ಛೇದನ ನೀಡಿದ್ದಾರೆ.

    ಹೌದು, ಕೋರ್ಟ್ ನಲ್ಲಿ ನ್ಯಾಯಾಧೀಶರು ವಿಚ್ಛೇದನ ಪಡೆಯಲು ಕಾರಣ ಕೇಳಿದ ಸಂದರ್ಭದಲ್ಲಿ ಮಹಿಳೆ, ತನ್ನ ಪತ್ನಿಗಾಗಿ ಎಲ್ಲವನ್ನೂ ಮಾಡುವ ಮನುಷ್ಯನನ್ನು ನಾನು ಎಂದಿಗೂ ನಂಬುವುದಿಲ್ಲ. ಏಕೆಂದರೆ ತನ್ನ ಸ್ವಂತ ತಾಯಿಗಾಗಿ ಸಣ್ಣ ಸಹಾಯವನ್ನು ಮಾಡುವುದಿಲ್ಲ. ಯಾವುದೇ ಒಬ್ಬ ವ್ಯಕ್ತಿ ತನ್ನ ಸ್ವಂತ ತಾಯಿಗೆ ಉತ್ತಮ ಮಗನಾಗಿರದೇ ಇದ್ದಲ್ಲಿ ಆತನನ್ನು ನಂಬಲು ಸಾಧ್ಯವಿಲ್ಲ. ಆತ ಭವಿಷ್ಯದಲ್ಲಿ ತನಗೂ ಇದೇ ಸ್ಥಿತಿ ಉಂಟುಮಾಡಬಹುದು ಎಂದು ತಿಳಿಸಿರುವುದಾಗಿ ಸೌದಿ ಮಾಧ್ಯಮ ವರದಿ ಮಾಡಿದೆ.

    ತನ್ನ ತಾಯಿಯನ್ನು ಕೈಬಿಟ್ಟ ರೀತಿಯಲ್ಲಿ ತನ್ನನ್ನು ಭವಿಷ್ಯದಲ್ಲಿ ಬಿಟ್ಟು ಬಿಡುವ ದಿನಕ್ಕಾಗಿ ನಾನು ಕಾಯಲು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ. ವಿಚಾರಣೆ ವೇಳೆ ಪತಿ, ನಿನಗಾಗಿ ನನ್ನ ಕುಟುಂಬವನ್ನು ತ್ಯಜಿಸಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪತ್ನಿ, ಈ ಕಾರಣಕ್ಕೆ ನಾನು ನಿನಗೆ ವಿಚ್ಛೇದನ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

    ಪತ್ನಿ ಮಾತು ಕೇಳಿ ಶಾಕ್ ಒಳಗಾದ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ನಿರಾಕರಿಸಿದ್ದು, ಆಕೆಗಾಗಿ ಏನು ಬೇಕಾದರು ಮಾಡಲು ಸಿದ್ಧ ಎಂದು ಮನವಿ ಸಲ್ಲಿಸಿದ್ದಾರೆ. ಆದರೆ ಮಹಿಳೆ ಪತಿಯ ಮನವಿಯನ್ನು ತಿರಸ್ಕರಿಸಿದ್ದಾರೆ.

    ಪತಿ ತಾನು ಬಯಸಿದ ವಿದೇಶಿ ಪ್ರವಾಸ ಸೇರಿದಂತೆ, ಎಲ್ಲವನ್ನೂ ಖರೀದಿಸಲು ಹಣ ಖರ್ಚು ಮಾಡಿದ್ದು, ತನ್ನನ್ನು ಸಂತೋಷದಿಂದ ನೋಡಿಕೊಂಡಿದ್ದಾರೆ. ಆದರೆ ನನ್ನ ವಿಚ್ಛೇದನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎಂದು ಪತ್ನಿ ಹೇಳಿದ್ದಾರೆ.

    ಮಾಧ್ಯಮ ವರದಿಯ ಪ್ರಕಾರ ಮಹಿಳೆಯೂ ಪತಿ ನೀಡಿದ ವರದಕ್ಷಿಣೆಯನ್ನು ಹಿಂದಿರುಗಿಸಿದ್ದು, ಮಹಿಳೆ ವಾದ ಕೇಳಿದ ನ್ಯಾಯಾಧೀಶರು ವಿಚ್ಛೇದನವಕ್ಕೆ ಒಪ್ಪಿಗೆ ನೀಡಿದ್ದಾರೆ.

  • ಹೆತ್ತ ತಾಯಿಯನ್ನ ಟೆರೆಸ್‍ನಿಂದ ತಳ್ಳಿ, ಆತ್ಮಹತ್ಯೆ ಅಂತ ನಾಟಕವಾಡಿದ ಪ್ರಾಧ್ಯಾಪಕ

    ಹೆತ್ತ ತಾಯಿಯನ್ನ ಟೆರೆಸ್‍ನಿಂದ ತಳ್ಳಿ, ಆತ್ಮಹತ್ಯೆ ಅಂತ ನಾಟಕವಾಡಿದ ಪ್ರಾಧ್ಯಾಪಕ

    ಗಾಂಧಿನಗರ: ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟೆರೆಸ್‍ನಿಂದ ತಳ್ಳಿ ಕೊಂದಿರುವ ಅಮಾನವೀಯ ಘಟನೆ ಗುಜರಾತ್‍ನ ರಾಜ್‍ಕೋಟ್ ನಗರದಲ್ಲಿ ನಡೆದಿದೆ.

    36 ವರ್ಷದ ಸಂದೀಪ್ ನಥ್ವಾನಿ ಕೊಲೆ ಮಾಡಿರುವ ಆರೋಪಿ. ಈತ ಸ್ಥಳೀಯ ಫಾರ್ಮಸಿ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜೈಶ್ರೀಬೇನ್ ರನ್ನು ಡಿಸೆಂಬರ್ 29 ರಂದು ಅಪಾರ್ಟ್ ಮೆಂಟ್‍ನ ಟೆರೆಸ್‍ನಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೈಶ್ರೀಬೇನ್ ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದರಿಂದ ತಮ್ಮ ಸಮತೋಲನ ಕಳೆದುಕೊಂಡು ಟೆರೆಸ್‍ನಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಥ್ವಾನಿ ಕುಟುಂಬದವರು ಮೊದಲಿಗೆ ಹೇಳಿದ್ದರು. ನಂತರ ಅನಾಮಧೇಯ ಅರ್ಜಿಯೊಂದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯ ಮಾರ್ಗವನ್ನು ಬದಲಿಸಿ ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ.

    ಅರ್ಜಿ ಸ್ವೀಕರಿಸಿದ ನಂತರ ನಾವು ಅಪಾರ್ಟ್ ಮೆಂಟ್‍ನ ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಜೈಶ್ರೀಬೇನ್ ಟೆರೆಸ್‍ನಿಂದ ಕೆಳಗೆ ಬಿದ್ದ ಸಂದರ್ಭದಲ್ಲಿ ಸಂದೀಪ್ ಅವರ ಜೊತೆಯಲ್ಲೇ ಇರೋದು ಪತ್ತೆಯಾಗಿದೆ ಎಂದು ಡಿಸಿಪಿ ಕರಣ್ರಾಜ್ ವಘೇಲಾ ಹೇಳಿದ್ದಾರೆ.

    ಆರೋಪಿ ಸಂದೀಪ್ ನನ್ನು ಬಂಧಿಸಿ ವಿಚಾರಣೆ ನಡೆಸುವಾಗ ಮೊದಲು ತಾನು ಈ ಕೊಲೆ ಮಾಡಿಲ್ಲ ಎಂದು ಹೇಳುತ್ತಿದ್ದ. ಆದರೆ ನಂತರ ತಪ್ಪೊಪ್ಪಿಕೊಂಡಿದ್ದಾನೆ. ತಾಯಿಯ ಅನಾರೋಗ್ಯದಿಂದ ಬೇಸತ್ತು ತಾನೇ ತಾಯಿಯನ್ನು ಟೆರೆಸ್ ಮೇಲೆ ಕರೆದುಕೊಂಡು ಹೋಗಿ ತಳ್ಳಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ನಾನು ನಂಬಿದ ದೇವರು ಆರೋಪಿಗಳಿಗೆ ಶಿಕ್ಷೆ ನೀಡ್ತಾನೆ: ದೀಪಕ್ ತಾಯಿ ಕಣ್ಣೀರು

    ಮಂಗಳೂರು: ನನ್ನ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆಯಾಗಲಿ. ನಾನು ನಂಬಿದ ದೇವರು ಅವರನ್ನು ಬಿಡಲ್ಲ. ಕೊಂದವರಿಗೆ ತಕ್ಕುದಾದ ಶಿಕ್ಷೆಯನ್ನು ದೇವರು ಕೊಡುತ್ತಾನೆ ಎಂದು ಮೃತ ದೀಪಕ್ ತಾಯಿ ಪ್ರೇಮರಾವ್ ಕಣ್ಣೀರು ಹಾಕಿದ್ದಾರೆ.

    ಮಗನ ಸಾವಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗ ಪಾಪದ ಹುಡುಗ. ಯಾವ ಗಲಾಟೆಗೂ ಹೋಗುವವನಲ್ಲ, ಬೆಳಗ್ಗೆ ಚಹಾ ಕುಡಿದು ಹೋದವ ಮತ್ತೆ ವಾಪಾಸ್ ಬರಲಿಲ್ಲ. ದೀಪಕ್ ಕೊಲೆಯಾದ ಬಗ್ಗೆ ಯಾರೂ ನನಗೆ ಹೇಳಲಿಲ್ಲ. ಪ್ರಸ್ತುತ ನಮ್ಮ ಕುಟುಂಬದ ಆಧಾರವೇ ಇಲ್ಲವಾಗಿದೆ ಎಂದು ಕಣ್ಣೀರಿಟ್ಟರು.

    ಮಗನಿಗೆ ಮದುವೆ ಮಾಡುವ ಕನಸು ಹೊತ್ತಿದ್ದೆವು. ಆದರೆ ಮದುವೆ ಒಂದು ವರ್ಷ ಬೇಡ ಎಂದು ದೀಪಕ್ ಹೇಳಿದ್ದ. ವಿದೇಶದಲ್ಲಿ ಉದ್ಯೋಗ ಮಾಡುತ್ತೇನೆ ಎಂದು ಹಠ ಮಾಡುತ್ತಿದ್ದ. ನಾನೇ ವಿದೇಶದಲ್ಲಿ ಕೆಲಸ ಬೇಡ ಎಂದು ಹೇಳಿದ್ದೆ. ಸಾಲ ಮಾಡಿ ಮನೆ ಕಟ್ಟಿಸಿದ್ದ. ಮನೆಯ ಸಾಲ ಇನ್ನೂ ತೀರಿಸಿಲ್ಲ ಎಂದು ದು:ಖ ವ್ಯಕ್ತಪಡಿಸಿದರು. ಇದನ್ನೂ ಓದಿ: ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ 

    ಸರ್ಕಾರ ದೀಪಕ್ ಸಾವಿಗೆ ಪರಿಹಾರವಾಗಿ ಘೋಷಣೆ ಮಾಡಿದ್ದ 10 ಲಕ್ಷ ರೂ.ಪರಿಹಾರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸುವ ಸಲುವಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದೀಪಕ್ ಮನೆಗೆ ಆಗಮಿಸಿ ತಾಯಿಗೆ ಚೆಕ್ ಹಸ್ತಾಂತರಿಸಲು ಮುಂದಾದರು. ಆದರೆ ದೀಪಕ್ ತಾಯಿ ಸರ್ಕಾರದ ಚೆಕ್ ಬೇಡ ಎಂದು ಕಣ್ಣೀರಿಟ್ಟರು. ಈ ವೇಳೆ ಡಿಸಿ ಸಸಿಕಾಂತ್ ಅವರು, ನಾನು ನಿಮ್ಮ ಮಗನ ಹಾಗೇ, ಸರಕಾರ ಕೊಟ್ಟ ಪರಿಹಾರ ಬೇಡ ಎನ್ನಬೇಡಿ ಎಂದು ದೀಪಕ್ ಅವರ ತಾಯಿಯನ್ನು ಮನವೊಲಿಸಿದರು. ಇದನ್ನೂ ಓದಿ: 7 ವರ್ಷಗಳ ಕಾಲ ನನ್ನ ಜೊತೆಯಿದ್ದ ದೀಪಕ್ ಸಾವು ಊಹಿಸಲು ಸಾಧ್ಯವಿಲ್ಲ: ಮಾಲೀಕ ಮಜೀದ್

    ಈ ನಡುವೆ ದೀಪಕ್ ಮೂಗ ತಮ್ಮ ಸತೀಶ್ ತನ್ನ ನೋವನ್ನು ಯಾರಿಗೂ ಹೇಳಲು ಆಗದೇ ರೋದನ ಅನುಭವಿಸುತ್ತಿದ್ದು ಕಂಡು ಬಂತು. ದೀಪಕ್ ಸಾವಿನಿಂದ ಸುರತ್ಕಲ್ ಕಾಟಿಪಳ್ಳದಲ್ಲಿರುವ ಮನೆಯಲ್ಲಿ ಮಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ.

    ಇದನ್ನೂ ಓದಿ: Exclusive: ಪೊಲೀಸ್ ಇಲಾಖೆಯಲ್ಲಿನ ‘ಹಸ್ತ’ಕ್ಷೇಪವೇ ಕರಾವಳಿಯಲ್ಲಿ ಶಾಂತಿ ಕದಡಲು ಕಾರಣ!

    ಇದನ್ನೂ ಓದಿ: ಕೊಲೆ ಸಂಖ್ಯೆ 21. ಇನ್ನು ಎಷ್ಟು ಕೊಲೆಯಾಗಬೇಕು: ಸಿಎಂಗೆ ಪ್ರತಾಪ್ ಸಿಂಹ ಪ್ರಶ್ನೆ

    ಇದನ್ನೂ ಓದಿ: ಆಗ ಸುಮ್ಮನಿದ್ದವರು ಈಗೇನು ಮಾತನಾಡೋದು: ಬಿಜೆಪಿ ನಾಯಕರ ವಿರುದ್ಧ ಮುತಾಲಿಕ್ ಕಿಡಿ

    https://www.youtube.com/watch?v=h2ySxt7VrtE

  • ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಮಲಗಿದ್ದಾಗ ಹೊದಿಕೆಯಿಂದ್ಲೇ ಕುತ್ತಿಗೆ ಬಿಗಿದು ಹೆತ್ತ ತಾಯಿಯನ್ನೇ ಕೊಲೆಗೈದ!

    ಚಿತ್ತೂರು: ಮದ್ಯಪಾನಕ್ಕೆ ಹಣ ನೀಡಲು ನಿರಾಕರಿಸಿದ ತಾಯಿಯನ್ನೇ 29 ವರ್ಷದ ಯುವಕನೊಬ್ಬ ಕೊಲೆಗೈದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಿವಿನಿ ಕುಪ್ಪಂ ಎಂಬಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ಬೆಲ್ಲಮ್ಮ(50) ತನ್ನ ಮಗ ಜೆ ಸುಬ್ರಹ್ಮಣ್ಯಂ ಕೈಯಿಂದ್ಲೇ ಕೊಲೆಯಾಗಿದ್ದಾರೆ.

    ಏನಿದು ಘಟನೆ?: ಆರೋಪಿ ಸುಬ್ರಹ್ಮಣ್ಯಂಗೆ ಕುಡಿತದ ಚಟವಿತ್ತು. ಹೀಗಾಗಿ ಪತ್ನಿ ದೂರವಾದ ಬಳಿಕ ಈತ ಪಕ್ಕದ ಗ್ರಾಮದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದನು. ಪ್ರತೀ ದಿನ ಮದ್ಯಪಾನ ಮಾಡಲು ಹಣ ಕೊಡುವಂತೆ ತಾಯಿಯನ್ನು ಪೀಡಿಸುತ್ತಿದ್ದನು.

    ಅಂತೆಯೇ ಸೋಮವಾರವೂ ಕೂಡ ತಾಯಿಯ ಬಳಿ ಬಂದು ಹಣ ಕೇಳಿದ್ದಾನೆ. ಆದ್ರೆ ತಾಯಿ ಮಾತ್ರ ಆತನಿಗೆ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡಿದ್ದ ಮಗ ಸುಬ್ರಹ್ಮಣ್ಯಂ ತಾಯಿ ಮಲಗಿದ್ದ ಸಂದರ್ಭದಲ್ಲಿ ಹೊದಿಕೆಯನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಮಂಗಳವಾರ ಬೆಳಗ್ಗೆ ತಾಯಿಯನ್ನು ನೋಡಲೆಂದು ಬೆಲ್ಲಮ್ಮ ಮಗಳು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಮೃತ ಬೆಲ್ಲಮ್ಮ ಅವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರಲ್ಲಿ 1.5 ಎಕರೆ ಜಮೀನಿದೆ. ಕಳೆದ ತಿಂಗಳಷ್ಟೇ ಆಟೋ ರಿಕ್ಷಾ ಖರೀದಿಸಲು ತಾಯಿ ದೊಡ್ಡ ಮಗನಿಗೆ 50,000 ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಎರಡನೇ ಮಗ ಸುಬ್ರಹ್ಮಣ್ಯಂ ತನಗೂ ಹಣ ಕೊಡುವಂತೆ ಹಾಗೂ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರಿದ್ದನು ಎಂಬುದಾಗಿ ವರದಿಯಾಗಿದೆ.

    ಸದ್ಯ ತಾಯಿ ಕೊಲೆ ಪ್ರಕರಣ ಸಂಬಂಧ ಮಗಳು ಸ್ಥಳೀಯ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ. ಮೃತ ಬೆಲ್ಲಮ್ಮ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

  • ಕುಡಿದ ಅಮಲಿನಲ್ಲಿ ತಾಯಿಯನ್ನು ರೇಪ್ ಮಾಡಿ ಕೊಂದೇಬಿಟ್ಟ!

    ಕುಡಿದ ಅಮಲಿನಲ್ಲಿ ತಾಯಿಯನ್ನು ರೇಪ್ ಮಾಡಿ ಕೊಂದೇಬಿಟ್ಟ!

    ಕೋಲಾರ: ಕುಡಿದ ನಶೆಯಲ್ಲಿ ತನ್ನ ಹೆತ್ತ ತಾಯಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಗಡಿ ಆಂಧ್ರದ ಚಿತ್ತೂರು ಜಿಲ್ಲೆಯ ವಿ ಕೋಟಾ ಬಳಿ ಇರುವ ಶಿವನಿ ಕುಪ್ಪಂ ಗ್ರಾಮದಲ್ಲಿ ನಡೆದಿದೆ.

    50 ವರ್ಷದ ಯಲ್ಲಮ್ಮನ ಕೊಲೆಯಾದ ತಾಯಿ. ಹೊಸ ವರ್ಷದ ಹಿನ್ನಲೆಯಲ್ಲಿ ಆರೋಪಿ ಮಗ ಸುಬ್ರಮಣ್ಯ (28) ಕುಡಿದ ನಶೆಯಲ್ಲಿ ಸೋಮವಾರ ಈ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾನೆ.

    ಸುಬ್ರಮಣ್ಯ ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನು ನಗ್ನಗೊಳಿಸಿ ಬಲವಂತವಾಗಿ ಕತ್ತು ಹಿಸುಕಿ ಕೊಲೆ ಮಾಡಿ ಆತ್ಯಾಚಾರವೆಸಗಿದ್ದಾನೆ. ಇನ್ನೂ ವಿಚಾರ ತಿಳಿದ ಗ್ರಾಮಸ್ಥರು ಆರೋಪಿ ಸುಬ್ರಮಣ್ಯ ಹಾಗೂ ಆತನ ಸ್ನೇಹಿತನನ್ನ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.

    ಆರೋಪಿಗಳನ್ನು ವಿ ಕೋಟಾ ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

    ಗಂಡನ ಚಿಕಿತ್ಸೆಗಾಗಿ 15 ದಿನಗಳ ಮಗುವನ್ನ 45 ಸಾವಿರಕ್ಕೆ ಮಾರಿದ ತಾಯಿ

    ಲಕ್ನೋ: ಮಹಿಳೆಯೊಬ್ಬರು ಗಂಡನ ಚಿಕಿತ್ಸೆಗಾಗಿ ಹಣ ಹೊಂದಿಸಲು ತನ್ನ 15 ದಿನಗಳ ಪುಟ್ಟ ಮಗುವನ್ನ 45 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಗಂಡನ ಚಿಕಿತ್ಸೆಯ ವೆಚ್ಛವನ್ನ ಭರಿಸಲು ಬೇರೆ ದಾರಿಯಿಲ್ಲದೆ ಮಗುವನ್ನ ಮಾರಾಟ ಮಾಡಬೇಕಾಯ್ತು ಎಂದು ಮಹಿಳೆ ಹೇಳಿದ್ದಾರೆ. ನಮ್ಮ ಬಳಿ ಅಗತ್ಯವಾದಷ್ಟು ಹಣ ಇರಲಿಲ್ಲ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಸಿದ್ದಾರೆ.

    ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಮೀರ್‍ಗಂಜ್‍ನಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಆಘಾತಕಾರಿ ಎಂದೆನಿಸಿದರೂ ಈ ರೀತಿ ನಡೆದಿರುವುದು ಇದೇ ಮೊದಲ ಬಾರಿ ಏನಲ್ಲ. 2017ರ ಮೇ ನಲ್ಲಿ ತ್ರಿಪುರಾದಲ್ಲಿ ಕುಟುಂಬವೊಂದು ಕೇವಲ 200 ರೂ. ಗೆ ಮಗುವನ್ನ ಮಾರಾಟ ಮಾಡಿತ್ತು. ಆಟೋ ರಿಕ್ಷಾ ಚಾಲಕರೊಬ್ಬರಿಗೆ ಮಗುವನ್ನ ಮಾರಲಾಗಿತ್ತು.

    ಸಮಾಜ ಕಲ್ಯಾಣ ಮತ್ತು ಸಮಾಜ ಶಿಕ್ಷಣ ಇಲಾಖೆ ಈ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಮಗುವನ್ನ ಕುಟುಂಬದೊಂದಿಗೆ ಮರಳಿ ಸೇರಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದೆ.