Tag: mother

  • ಸ್ವಂತ ಮಗಳಿಂದಲೇ ವೃದ್ಧ ತಾಯಿ, ತಂಗಿಯ ಗೃಹ ಬಂಧನ!

    ಸ್ವಂತ ಮಗಳಿಂದಲೇ ವೃದ್ಧ ತಾಯಿ, ತಂಗಿಯ ಗೃಹ ಬಂಧನ!

    ಮಂಡ್ಯ: ಆಸ್ತಿ ಆಸೆಗಾಗಿ ವೃದ್ಧ ತಾಯಿ ಮತ್ತು ತಂಗಿಯನ್ನು ಸ್ವಂತ ಮಗಳೇ ಗೃಹ ಬಂಧನದಲ್ಲಿರಿಸಿರುವ ಅಮಾನವೀಯ ಘಟನೆ ಮಂಡ್ಯ ನಗರದ ಹೌಸಿಂಗ್‍ಬೋರ್ಡ್‍ನಲ್ಲಿ ನಡೆದಿದೆ.

    ತಾಯಿ ಸುನಂದಮ್ಮ ಮತ್ತು ತಂಗಿ ರಮ್ಯಾ ಅವರನ್ನು ಕೂಡಿ ಹಾಕಿ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸುನಂದಮ್ಮ ಅವರ ಪತಿ ಚನ್ನೇಗೌಡ ಸರ್ಕಾರಿ ಕೆಲಸದಲ್ಲಿದ್ದು ನಿವೃತ್ತರಾದ ನಂತರ ಮರಣ ಹೊಂದಿದ್ರು. ಪತಿ ಚನ್ನೇಗೌಡ ಅವರು ಸ್ವಯಾರ್ಜಿತವಾಗಿ ದುಡಿದು ಕಟ್ಟಿದ ಮನೆಯಲ್ಲಿ ಸನಂದಮ್ಮ ಮತ್ತು ಎರಡನೇ ಮಗಳು ಸೌಮ್ಯ ವಾಸವಾಗಿದ್ರು.

    ಮಂಡ್ಯ ನಗರದಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮನೆಯ ಮೇಲೆ ಕಣ್ಣು ಹಾಕಿದ ಹಿರಿಯ ಮಗಳು ಗೀತಾ ಮತ್ತು ಅಳಿಯ ನಾಗರಾಜು, ಮನೆಯನ್ನು ತಮ್ಮ ಹೆಸರಿಗೆ ಬರೆದು ಕೊಡುವಂತೆ ಸುನಂದಮ್ಮನಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

    ವರದಕ್ಷಿಣೆ, ನಿವೇಶನ, ಚಿನ್ನಾಭರಣ ಕೊಟ್ಟು ಮದುವೆ ಮಾಡಿದ್ರೂ ಕೂಡ ಹಿರಿಯ ಮಗಳು ಮತ್ತು ಅಳಿಯ ಆಸ್ತಿಗಾಗಿ ಪದೇ ಪದೇ ಕಿರುಕುಳ ನೀಡುತ್ತಿರುವುದರಿಂದ ನೊಂದ ಸುನಂದಮ್ಮ, ಮಂಡ್ಯ ನಗರದಲ್ಲಿರುವ ಮನೆ ಕೊಡಲು ನಿರಾಕರಿಸಿದ್ದರು. ಇದ್ರಿಂದ ಕುಪಿತರಾಗಿ ಗೀತಾ ಮತ್ತು ನಾಗರಾಜು, ಸುನಂದಮ್ಮ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ.

    ಇಂದು ಬೆಳಗ್ಗೆ ಮನೆಯಿಂದ ಜೋರಾಗಿ ಕೂಗುತ್ತಿರುವ ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಅಕ್ಕಪಕ್ಕದ ಮನೆಯವರು, ಕೂಡಲೇ ವೃದ್ಧ ತಾಯಿ ಮತ್ತು ಕಿರಿಯ ಮಗಳಿಗೆ ರಕ್ಷಣೆ ನೀಡಿ, ಹಿಂಸೆ ನೀಡುತ್ತಿರುವ ಅಳಿಯ-ಮಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಗಲಾಟೆ ಶುರುವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಮಗಳು, ನಾವೇನು ಕೂಡಿ ಹಾಕಿಲ್ಲ. ಅವರೇ ಒಳಗಿನಿಂದ ಬೀಗ ಹಾಕಿಕೊಂಡು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

  • ಅಳುವಿನಿಂದ ಬೇಸತ್ತು 25 ದಿನಗಳ ಹಸುಗೂಸನ್ನ ಕಸದ ತೊಟ್ಟಿಗೆ ಎಸೆದಳು ನಿರ್ದಯಿ ತಾಯಿ

    ಅಳುವಿನಿಂದ ಬೇಸತ್ತು 25 ದಿನಗಳ ಹಸುಗೂಸನ್ನ ಕಸದ ತೊಟ್ಟಿಗೆ ಎಸೆದಳು ನಿರ್ದಯಿ ತಾಯಿ

    ನವದೆಹಲಿ: ನವಜಾತ ಮಗು ನಿರಂತರವಾಗಿ ಅಳುತ್ತಿದ್ದುದನ್ನು ಕೇಳಲಾಗದೆ ತಾಯಿಯೊಬ್ಬಳು ಕಂದಮ್ಮನನ್ನು ಕಸದ ತೊಟ್ಟಿಗೆ ಎಸೆದ ಅಮಾವನೀಯ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿ ತಾಯಿ ನೇಹಾಳನ್ನು ಶನಿವಾರದಂದು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಮಗುವನ್ನ ನೋಡಿಕೊಳ್ಳಲು ಬೇಸತ್ತು ಕೋಪದಿಂದ ಈ ರೀತಿ ಮಾಡಿದ್ದಾಗಿ ಆಕೆ ಪೊಲೀಸರಿಗೆ ಹೇಳಿದ್ದಾಳೆ. ಕಸದ ತೊಟ್ಟಿಗೆ ಎಸೆಯಲ್ಪಟ್ಟಿದ್ದ 25 ದಿನಗಳ ಹಸುಗೂಸನ್ನ ರಕ್ಷಣೆ ಮಾಡಲಾಯಿತಾದರೂ ಮಗು ಸಾವನ್ನಪ್ಪಿದೆ.

    ದೆಹಲಿಯ ವಿನೋದ್‍ಪುರ್‍ನಲ್ಲಿ ಮಗು ಕಾಣೆಯಾದ ಬಗ್ಗೆ ಕುಟುಂಬಸ್ಥರು ಶುಕ್ರವಾರದಂದು ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡಿದ್ದರು.

    ಮಗುವನ್ನು ಹುಡುಕುವ ಸಂದರ್ಭದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು, ಮಹಿಳೆ ಕಸದ ತೊಟ್ಟಿಯಲ್ಲಿ ಏನನ್ನೋ ಎಸೆಯುತ್ತಿದ್ದುದನ್ನು ನೋಡಿದ್ದೆವು ಎಂದು ಹೇಳಿದ ಬಳಿಕ ನೇಹಾ ಮೇಲೆ ಅನುಮಾನ ಮೂಡಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ನಂತರ ವಿಚಾರಣೆ ನಡೆಸಿದಾಗ ಆರೋಪಿ ನೇಹಾ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು, ಮಗುವನ್ನ ಎಸೆದ ಸ್ಥಳದ ಬಗ್ಗೆ ಬಹಿರಂಗಪಡಿಸಿದ್ದಾಳೆ. ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಮಗು ಜೀವಂತವಾಗಿ ಪತ್ತೆಯಾಗಿತ್ತು. ಕೂಡಲೇ ಕಂದಮ್ಮನನ್ನು ಜಿಟಿಬಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿ ಮಗು ಮೃತಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

  • ಮಗ ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ತಾಯಿಯನ್ನ ಕಂಬಕ್ಕೆ ಕಟ್ಟಿ ಥಳಿಸಿದ್ರು

    ಮಗ ಯುವತಿಯೊಂದಿಗೆ ಓಡಿಹೋಗಿದ್ದಕ್ಕೆ ತಾಯಿಯನ್ನ ಕಂಬಕ್ಕೆ ಕಟ್ಟಿ ಥಳಿಸಿದ್ರು

    ಗಾಂಧಿನಗರ: ಮಗ ಪ್ರೀತಿ ಮಾಡಿ ಯುವತಿಯೊಂದಿಗೆ ಪರಾರಿ ಆಗಿದ್ದಕ್ಕೆ ಆತನ ತಾಯಿಯನ್ನು ಕೊಟ್ಟಿಗೆಯಲ್ಲಿ ಕಟ್ಟಿ ಥಳಿಸಿರುವ ಅಮಾನವೀಯ ಘಟನೆಯೊಂದು ಗುಜರಾತ್ ನ ನರ್ಮದಾ ಜಿಲ್ಲೆಯ ಬಿತಾಡಾ ಗ್ರಾಮದಲ್ಲಿ ನಡೆದಿದೆ.

    ಫೆಬ್ರವರಿ 16ರಂದು ಈ ಅಮಾನವೀಯ ಘಟನೆ ನಡೆದಿದೆ. ಮಹಿಳೆಯ ಮಗ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇಬ್ಬರೂ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಊರು ಬಿಟ್ಟು ಓಡಿ ಹೋಗಿದ್ದರು. ಈ ಸಂಬಂಧ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವೆ ಪಂಚಾಯ್ತಿ ಕೂಡ ಮಾಡಲಾಗಿತ್ತು. ಆದ್ರೆ ಪಂಚಾಯ್ತಿಯಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ಲವ್ವರ್ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದ ಮಗಳು!

    ಮಗಳು ಓಡಿ ಹೋಗಿದ್ದಕ್ಕೆ ಗ್ರಾಮದಲ್ಲಿ ಅವಮಾನಿತರಾದ ಆಕೆಯ ಪೋಷಕರು ಯುವಕನ ತಾಯಿಯನ್ನು ಹಿಡಿದು ತಂದು ಹಸುಗಳ ಕೊಟ್ಟಿಗೆಯಲ್ಲಿಯ ಕಂಬವೊಂದಕ್ಕೆ ಕಟ್ಟಿ ಥಳಿಸಿದ್ದಾರೆ. ನಂತರ ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಕ್ಕೆ ಆಗಮಿಸಿದ ಪೊಲೀಸರು ಕಂಬಕ್ಕೆ ಕಟ್ಟಲಾಗಿದ್ದ ಯುವಕನ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ: ಅನ್ಯಜಾತಿ ಹುಡ್ಗನನ್ನು ಲವ್ ಮಾಡಿದ ಮಗಳನ್ನು ದೊಣ್ಣೆಯಿಂದ ಹೊಡೆದು ಸುಟ್ಟ ತಂದೆ

    ಇದನ್ನೂ ಓದಿ: ನವದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ವಧುವಿನ ಚಿಕ್ಕಪ್ಪಂದಿರು

    ಇದನ್ನೂ ಓದಿ: ಬೇರೊಬ್ಬ ಯುವಕನನ್ನು ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಸೋದರಿಯನ್ನ ಚಾಕುವಿನಿಂದ ಚುಚ್ಚಿ..ಚುಚ್ಚಿ ಕೊಂದ ಸಹೋದರ

  • ಪತ್ರಕರ್ತನ ಅಮ್ಮ, 1 ವರ್ಷದ ಮಗಳನ್ನು ಕೊಂದು ಶವವನ್ನು ಚೀಲದಲ್ಲಿ ತುಂಬಿ ಬಿಸಾಕಿದ!

    ಪತ್ರಕರ್ತನ ಅಮ್ಮ, 1 ವರ್ಷದ ಮಗಳನ್ನು ಕೊಂದು ಶವವನ್ನು ಚೀಲದಲ್ಲಿ ತುಂಬಿ ಬಿಸಾಕಿದ!

    ನಾಗ್ಪುರ: ಸ್ಥಳೀಯ ಪತ್ರಕರ್ತರೊಬ್ಬರ ತಾಯಿ ಹಾಗೂ ಒಂದು ವರ್ಷದ ಮಗಳನ್ನು ಕೊಲೆಗೈದು ಬಳಿಕ ಶವವನ್ನು ಚೀಲದಲ್ಲಿ ತುಂಬಿಸಿ ಬಿಸಾಕಿರೋ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪತ್ರಕರ್ತ ರವಿಕಾಂತ್ ಕಂಬ್ಳೆ ಅವರ 52 ವರ್ಷದ ಉಷಾ ಕಂಬ್ಳೆ ಹಾಗೂ ರಾಶಿ ದುಷ್ಕರ್ಮಿಗಳ ಕೈಯಲ್ಲಿ ಹತ್ಯೆಗೀಡಾದ ಮೃತ ದುರ್ದೈವಿಗಳು.

    ಏನಿದು ಘಟನೆ?: ಸ್ಥಳೀಯ ದೈನಂದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರೋ ರವಿಕಾಂತ್ ಅವರ ತಾಯಿ ಮತ್ತು ಮಗಳು ಭಾನುವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದರು. ಆದ್ರೆ ಇದೀಗ ಅವರಿಬ್ಬರೂ ಶವವಾಗಿ ಸುಲ್ಲಾದ ಬಹದೂರ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಷಾ ಅವರು ಸಾಲ ನೀಡುವ ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ನಿಲೇಶ್ ಭಾರ್ನೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಎಲ್ಲಿಂದ ನಾಪತ್ತೆ?: ತನ್ನ ಒಂದು ವರ್ಷದ ಮೊಮ್ಮಗಳೊಂದಿಗೆ ಉಷಾ ಅವರು ಭಾನುವಾರ ಸಂಜೆ 5.30ರ ಸುಮಾರು ಮನೆಯ ಪಕ್ಕದಲ್ಲಿರೋ ಜ್ಯುವೆಲ್ಲರಿ ಶಾಪ್ ಗೆ ತೆರಳಿದ್ದರು. ಹಾಗೆಯೇ ತೆರಳಿದವರು ತಡವಾದ್ರೂ ಬರದಿದ್ದಾಗ ಉಷಾ ಪತಿ ಕರೆ ಮಾಡಿದ್ದಾರೆ. ಆದ್ರೆ ಅದಾಗಲೇ ಉಷಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮಗ ರವಿಕಾಂತ್ ಕೆಲಸದಿಂದ ವಾಪಾಸ್ಸಾಗಿ ತಾಯಿ ಮತ್ತು ಮಗಳು ನಾಪತ್ತೆಯಾಗಿರೋ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರದ ಪವನ್ ಪುತ್ರ ಪ್ರದೇಶದ 26 ವರ್ಷದ ಗಣೇಶ್ ರಂಬಾರಣ್ ಶಾಹು ಎಂಬಾತನನನು ಬಂಧಿಸಲಾಗಿದೆ. ಈತ ಭಾನುವಾರ ಸಂಜೆಯಷ್ಟೇ ಹಣದ ವಿಚಾರವಾಗಿ ಉಷಾ ಅವರ ಜೊತೆ ಜಗಳವಾಡಿದ್ದನು ಎಂದು ಜಂಟಿ ಪೊಲೀಸ್ ಕಮಿಷನರ್ ಶಿವಾಜಿ ತಿಳಿಸಿದ್ದಾರೆ.

    ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಉಷಾ ಅವರು ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಶಾಹಿ ಉಷಾ ಅವರ ಕುತ್ತಿಗೆಯನ್ನು ಸೀಳಿದ್ದಾನೆ. ಇದೇ ವೇಳೆ ಉಷಾ ಜೊತೆಯಿದ್ದ ಮೊಮ್ಮಗಳು ರಾಶಿಯನ್ನು ಕೂಡ ಕೊಲೆಗೈದಿದ್ದಾನೆ. ನಂತರ ಅವರಿಬ್ಬರ ಶವವನ್ನು ಒಂದು ಚೀಲದೊಳಗೆ ತುಂಬಿಸಿ ನುಲ್ಲಾ ಪ್ರದೇಶದಲ್ಲಿ ಬಿಸಾಕಿದ್ದಾನೆ ಅಂತ ವಿಚಾರಣೆ ನಡೆಸಿದಾಗ ಬಂಧಿತ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಮಗಳನ್ನೇ ಕೊಲೆ ಮಾಡಲು ಪ್ರಿಯಕರನೊಂದಿಗೆ ತಾಯಿ ಪ್ಲಾನ್!

    ಮಗಳನ್ನೇ ಕೊಲೆ ಮಾಡಲು ಪ್ರಿಯಕರನೊಂದಿಗೆ ತಾಯಿ ಪ್ಲಾನ್!

    ಕಲಬುರಗಿ: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದಳು ಎಂಬ ಕಾರಣಕ್ಕೆ ಸ್ವಂತ ಮಗಳನ್ನೇ ಕೊಲೆ ಮಾಡಲು ತಾಯಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ಧೂತ್ತರಗಾಂಗ ಗ್ರಾಮದಲ್ಲಿ ನಡೆದಿದೆ.

    ತನ್ನ ಸ್ವಂತ ಮಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಮಹಿಳೆ ಹೆಸರು ಹೀರಾಬಾಯಿ. ಈಕೆ ಇದೇ ಗ್ರಾಮದ ಭೀಮಣ್ಣ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಷಯ ತಿಳಿದ ಮಗಳು ನಾಗಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಹೀರಾಬಾಯಿ ಮಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ.

    ತಾಯಿಯ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಹೀರಾಬಾಯಿ, ನೀನೂ ಬೇಕಾದರೂ ಆತನ ಜೊತೆ ಮಲಗು. ಆದರೆ ತನ್ನ ಕೃತ್ಯದ ಕುರಿತು ಯಾರಿಗೂ ಹೇಳಬೇಡ ಎಂದು ಹೇಳಿದ್ದಾಳೆ. ಇನ್ನು ಭೀಮಣ್ಣ ಸಹ ನಾಗಮ್ಮ ಅವರಿಗೆ ತನ್ನ ಜೊತೆ ಮಲಗಲು ಹೇಳಿದ್ದಾನೆ.

    ತಾಯಿಯ ಆಕ್ರಮ ಸಂಬಂಧವನ್ನು ತಪ್ಪಿಸಲು ನಾಗಮ್ಮ ಆಕೆಯ ಮೊಬೈಲ್ ಕಸಿದುಕೊಂಡಿದ್ದಾರೆ. ಆದರೆ ಹೀರಾಬಾಯಿ ಮಗಳ ಮೊಬೈಲ್ ನಿಂದ ತನ್ನ ಪ್ರಿಯಕರನಿಗೆ ಕರೆ ಮಾಡಿ ಕೊಲೆ ಮಾಡಲು ಸೂಚಿಸಿದ್ದಾಳೆ. ನಂತರ ಮೊಬೈಲ್ ಸಂಭಾಷಣೆ ಕೇಳಿದ ವೇಳೆ ತಾಯಿಯ ಸಂಚು ಬೆಳಕಿಗೆ ಬಂದಿದೆ. ಈ ಕುರಿತು ನಾಗಮ್ಮ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

    ಈಗಾಗಲೇ ನಾಗಮ್ಮರಿಗೆ ಮದುವೆಯಾಗಿದ್ದು, ಗಂಡನ ಕಿರುಕುಳದಿಂದ ನೊಂದ ಆಕೆ ತಾಯಿಯ ಬಳಿ ಆಶ್ರಯ ಪಡೆದಿದ್ದರು. ಆದರೆ ಸದ್ಯ ತಾಯಿಯೇ ಕೊಲೆ ಮಾಡಲು ಸಂಚು ರೂಪಿಸಿರುವುದು ನಾಗಮ್ಮಗೆ ಸಂಕಷ್ಟವನ್ನು ಉಂಟು ಮಾಡಿದೆ. ಆದರೆ ಪ್ರಕರಣದ ದೂರು ಪಡೆದು ನಾಗಮ್ಮರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಭೀಮಣ್ಣನ ಪ್ರಭಾವಕ್ಕೆ ಒಳಗಾಗಿ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪ ಕೇಳಿಬಂದಿದೆ.

  • 40ರ ವಿವಾಹಿತನೊಡನೆ 16ರ ಅಪ್ರಾಪ್ತೆಯ ಮದುವೆ!

    40ರ ವಿವಾಹಿತನೊಡನೆ 16ರ ಅಪ್ರಾಪ್ತೆಯ ಮದುವೆ!

    ಮೈಸೂರು: 16 ವರ್ಷದ ಅಪ್ರಾಪ್ತ ಬಾಲಕಿಗೆ 40 ವರ್ಷದ ವಿವಾಹಿತ ವ್ಯಕ್ತಿಯ ಜೊತೆ ತಾಯಿಯೇ ಮದುವೆ ಮಾಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಕೆ.ಬೆಳತ್ತೂರು ಗ್ರಾಮದಲ್ಲಿ ನಡೆದಿದೆ.

    ನಾಗರಾಜಶೆಟ್ಟಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ವ್ಯಕ್ತಿ. ಮದುವೆ ಒಂದು ವಾರದ ಹಿಂದೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಮೊಲದ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಿದ್ದಾನೆ. ಅಪ್ರಾಪ್ತ ಬಾಲಕಿಯ ತಾಯಿ ಪತಿಗೆ ತಿಳಿಸದೇ ಮದುವೆ ಕಾರ್ಯ ನಡೆಸಿದ್ದಾಳೆ. ಆನಂತರ ಮದುವೆಯ ವಿಷಯ ತಿಳಿದ ಬಾಲಕಿಯ ತಂದೆ ಮಕ್ಕಳ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಪ್ರಕರಣವನ್ನು ಬೇಧಿಸಿದ್ದಾರೆ. ಪ್ರಸ್ತುತ ಅಪಾಪ್ತ ಬಾಲಕಿಗೆ ಕೌನ್ಸಿಲಿಂಗ್ ನಡೆಸಲಾಗಿದ್ದು, ತಾಲೂಕು ಮಹಿಳಾ ಸಾಂತ್ವನ ಕೇಂದ್ರದ ವಶಕ್ಕೆ ಆಕೆಯನ್ನು ನೀಡಲಾಗಿದೆ. ಘಟನೆ ಕುರಿತು ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ಪ್ರಕರಣ ದೂರು ದಾಖಲಾಗಿದೆ.

  • ಗಂಡು ಮಕ್ಕಳಾಗದಕ್ಕೆ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ, ತಾಯಿ ಆತ್ಮಹತ್ಯೆ

    ಗಂಡು ಮಕ್ಕಳಾಗದಕ್ಕೆ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ, ತಾಯಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಗಂಡು ಮಕ್ಕಳಾಗಲಿಲ್ಲ ಎನ್ನುವ ಕೊರಗಿನಿಂದ ತಾಯಿ ತನ್ನ ಮೂವರು ಹೆಣ್ಣು ಮಕ್ಕಳನ್ನ ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಾಕಲಚಿಂತೆ ಗ್ರಾಮದಲ್ಲಿ ನಡೆದಿದೆ.

    ತಾಯಿ ನಾಗಶ್ರೀ (30) ಮಕ್ಕಳಾದ ನವ್ಯಶ್ರೀ (6) ದಿವ್ಯಶ್ರೀ (3) ಹಾಗೂ ಮೂರು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದವರು. ಮೃತ ನಾಗಶ್ರೀ ಹಾಗೂ ಗಂಗರಾಜು ದಂಪತಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರಿಗೆ ಮೂವರು ಹೆಣ್ಣು ಮಕ್ಕಳು ಜನಿಸಿದ್ದರು.

    ಆದರೆ ನಮ್ಮ ಸಂಸಾರಕ್ಕೆ ಗಂಡು ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದ ನಾಗಶ್ರೀ ಇಂದು ಗ್ರಾಮದ ಹೊರವಲಯದ ಬಾವಿಗೆ ತನ್ನ ಮೂವರು ಮಕ್ಕಳನ್ನ ತಳ್ಳಿ ತಾನು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವಿದ್ಯುತ್ ಶಾಕ್ ಹೊಡೆದು ಮಂಗ ಸಾವು- ತಾಯಿ ಅಂತ್ಯ ಸಂಸ್ಕಾರಕ್ಕೆ ಬಿಡದೇ ಅಪ್ಪಿಕೊಂಡಿರುವ ಮರಿಮಂಗ

    ವಿದ್ಯುತ್ ಶಾಕ್ ಹೊಡೆದು ಮಂಗ ಸಾವು- ತಾಯಿ ಅಂತ್ಯ ಸಂಸ್ಕಾರಕ್ಕೆ ಬಿಡದೇ ಅಪ್ಪಿಕೊಂಡಿರುವ ಮರಿಮಂಗ

    ಗದಗ: ವಿದ್ಯುತ್ ಶಾಕ್ ಹೊಡೆದು ಮಂಗ ಸಾವನ್ನಪ್ಪಿದ್ದು, ತಾಯಿ ಅಂತ್ಯ ಸಂಸ್ಕಾರಕ್ಕೆ ಮರಿ ಮಂಗ ಬಿಟ್ಟುಕೊಡದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ಕ್ರಾಸ್ ಬಳಿ ವಿದ್ಯುತ್ ಸ್ಪರ್ಶದಿಂದ ಮಂಗ ಸಾವನ್ನಪ್ಪಿದೆ. ಮೃತ ಕೋತಿಗೆ ಸ್ಥಳೀಯರು ಹೂ ಮಾಲೆ ಹಾಕಿ ಪೂಜೆ ಮಾಡಿದರೂ ಮರಿ ಕೋತಿ ತಾಯಿಯನ್ನ ಬಿಟ್ಟು ಕದಲುತ್ತಿಲ್ಲ. ನೂರಾರು ಜನರಿದ್ದರೂ ಅಂತ್ಯಕ್ರಿಯೆಗೆ ಬಿಡದೇ ತಾಯಿಯನ್ನ ಅಪ್ಪಿಕೊಂಡು ಕಣ್ಣೀರು ಹಾಕುತ್ತಿದೆ.

    ತಾಯಿಯನ್ನು ಒಂದು ನಿಮಿಷ ಕೂಡಾ ಬಿಟ್ಟು ಕದಲದ ಮರಿ ಮಂಗದ ದೃಶ್ಯ ಕಂಡು ಲಕ್ಷ್ಮೇಶ್ವರದ ಸಾರ್ವಜನಿಕರು ಕೂಡ ಕಣ್ಣೀರು ಹಾಕಿದ್ದಾರೆ.

  • ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

    ತಾಯಿ ಸಾವನ್ನಪ್ಪಿದ ವಿಷಯ ತಿಳಿಯದೇ ಆಕೆಯ ಪಕ್ಕ ನಿದ್ದೆಗೆ ಜಾರಿದ್ದ 5ರ ಮಗ

    ಹೈದರಾಬಾದ್: ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತ ಪಟ್ಟ ನಂತರ ಆಕೆಯ ಐದು ವರ್ಷದ ಮಗ ಅದನ್ನು ತಿಳಿಯದೆ ಆಕೆಯ ಪಕ್ಕದಲ್ಲೇ ಮಲಗಿದ್ದ ಹೃದಯವಿದ್ರಾವಕ ಘಟನೆ ಹೈದರಾಬಾದ್‍ನ ಉಸ್ಮಾನಿಯಾ ಆಸ್ಪತ್ರೆಯಲ್ಲಿ ನಡೆದಿದೆ.

    ಸಮೀನಾ ಸುಲ್ತಾನ ಮೃತ ಪಟ್ಟ ಮಹಿಳೆ. ಸಮೀನಾ ಹಾಗೂ ಆಕೆಯ 5 ವರ್ಷದ ಮಗ ಹೈದರಬಾದ್‍ನ ಖಾರೆದಾನ್ ಕೈಗಾರಿಕಾ ಪ್ರದೇಶದ ನಿವಾಸಿಗಳು. ಸಮೀನಾ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಪಡೆಯಲು ನೆರೆ ಮನೆಯವರ ಸಹಾಯದಿಂದ ಸೋಮವಾರ ಆಸ್ಪತ್ರೆಗೆ  ದಾಖಲಾಗಿದ್ದರು. ಆದರೆ ವೈದ್ಯರು ಚಿಕಿತ್ಸೆ ನೀಡಿದ ನಂತರ ಚಿಕಿತ್ಸೆ ಫಲಿಸದೇ ಸಮೀನಾ ಮೃತ ಪಟ್ಟಿದ್ದಾರೆ.

    ತನ್ನ ತಾಯಿ ಮೃತ ಪಟ್ಟಿರುವುದನ್ನು ತಿಳಿಯದ ಬಾಲಕ ಆಸ್ಪತ್ರೆಯ ಹಾಸಿಗೆ ಮೇಲೆ ಅಮ್ಮನ ಪಕ್ಕದಲ್ಲೇ ಮಲಗಿ 5 ಗಂಟೆಗಳ ಕಾಲ ನಿದ್ರೆಗೆ ಜಾರಿದ್ದಾನೆ. ಇದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ನಂತರ ಬಾಲಕನನ್ನು ತಾಯಿಂದ ಬೇರ್ಪಡಿಸಿ ಬೇರೆ ಕೊಠಡಿಗೆ ಕಳುಹಿಸಿದ್ದಾರೆ.

    ಸಮೀನಾ ಸುಲ್ತಾನ ಅವರ ಹೆಚ್ಚಿನ ಮಾಹಿತಿ ತಿಳಿಯದ ಆಸ್ಪತ್ರೆಯ ಸಿಬ್ಬಂದಿ ಹೈದರಾಬಾದ್ ಹೆಲ್ಪಿಂಗ್ ಹ್ಯಾಂಡ್ ಫೌಂಡೇಷನ್ ಎನ್‍ಜಿಓ ಸಹಾಯ ಪಡೆದಿದ್ದಾರೆ. ಎನ್‍ಜಿಓ ಸಮೀನಾ ಅವರ ಆಧಾರ್ ಸಂಖ್ಯೆಯ ನೆರವಿನಿಂದ ಅವರ ಸಂಬಂಧಿಕರನ್ನು ಪತ್ತೆ ಹಚ್ಚಿದ್ದಾರೆ. ಮಾಹಿತಿ ಪಡೆದು ಆಸ್ಪತ್ರೆಗೆ ಬಂದ ಸಮೀನಾ ಅವರ ಸಂಬಂಧಿ ಬಾಲಕನ ಜವಾಬ್ದಾರಿ ಪಡೆದಿದ್ದಾರೆ. ಘಟನೆ ಕುರಿತು ಎನ್‍ಜಿಓ ಸಂಸ್ಥೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

  • ತಾಯಿಯ ಸಾವಿನ ಸುದ್ದಿ ಕೇಳಿ ಮಗಳಿಗೆ ಹೃದಯಾಘಾತ!

    ತಾಯಿಯ ಸಾವಿನ ಸುದ್ದಿ ಕೇಳಿ ಮಗಳಿಗೆ ಹೃದಯಾಘಾತ!

    ರಾಮನಗರ: ತಾಯಿಯ ಸಾವಿನ ಸುದ್ದಿ ಕೇಳಿದ ಮಗಳು ಕೂಡ ಹೃದಯಾಘಾತದಿಂದ ಸಾವನ್ನಪ್ಪಿರುವ ಮನಕಲುಕುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ನಡೆದಿದೆ.

    ಪುಟ್ಟಲಿಂಗಮ್ಮ(75) ಎಂಬುವವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಈ ಸುದ್ದಿ ಕೇಳಿದ ಮಗಳು ಪದ್ಮಮ್ಮ (59)ಕೂಡ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

    ಸ್ವಗ್ರಾಮದಲ್ಲಿ ಇಂದು ಪುಟ್ಟಲಿಂಗಮ್ಮನವರ ಅಂತ್ಯಕ್ರಿಯೆ ನಡೆದಿದ್ದು, ನಾಳೆ ಪದ್ಮಮ್ಮನವರ ಅಂತ್ಯಕ್ರಿಯೆ ನಡೆಯಲಿದೆ. ತಾಯಿ-ಮಗಳ ಸಾವಿನಿಂದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.  ಇದನ್ನೂ ಓದಿ: ಮಗನ ಶವಯಾತ್ರೆಯ ವೇಳೆ ಹೃದಯಾಘಾತವಾಗಿ ತಂದೆಯೂ ಸಾವು