Tag: mother

  • ಅರೇಂಜ್ ಮ್ಯಾರೇಜ್ ಆಗಲ್ಲ ಅಂದಿದ್ದಕ್ಕೆ ಮಗಳ ದೇಹದ ಮೇಲೆ ಬಿಸಿ ಎಣ್ಣೆ ಹಾಕಿ ಬಿದಿರಿನ ಕೋಲುಗಳಿಂದ ಹೊಡೆದ್ರು!

    ಅರೇಂಜ್ ಮ್ಯಾರೇಜ್ ಆಗಲ್ಲ ಅಂದಿದ್ದಕ್ಕೆ ಮಗಳ ದೇಹದ ಮೇಲೆ ಬಿಸಿ ಎಣ್ಣೆ ಹಾಕಿ ಬಿದಿರಿನ ಕೋಲುಗಳಿಂದ ಹೊಡೆದ್ರು!

    ಸ್ಯಾನ್‍ ಅಂಟೋನಿಯೋ: ಮನೆಯಲ್ಲಿ ನಿಶ್ಚಯಿಸಿದ ಮದುವೆ ಆಗಲ್ಲ ಅಂತಾ ಹೇಳಿದ್ದಕ್ಕೆ, ಪೋಷಕರು ಹೊಡೆದು ದೇಹದ ಮೇಲೆಲ್ಲಾ ಬಿಸಿ ಎಣ್ಣೆ ಹಾಕಿ ಕಿರುಕುಳ ನೀಡಿರುವ ಘಟನೆ ಅಮೆರಿಕದ ಬೆಕ್ಸರ್ ಕಂಟ್ರಿಯಲ್ಲಿ ನಡೆದಿದೆ.

    16 ವರ್ಷದ ಮಾರಿಬ್ ಅಲ್ ಹಿಶ್ಮಾವಿ ಪೋಷಕರಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ. ಮನೆಯಲ್ಲಿ ಪೋಷಕರ ಕಿರುಕುಳ ತಾಳಲಾರದೇ ಮಾರಿಬ್ ಜನವರಿ ತಿಂಗಳಲ್ಲಿ ಮನೆಯಿಂದ ನಾಪತ್ತೆಯಾಗಿದ್ದಳು. ಮಗಳು ಕಾಣೆಯಾದ ಬಳಿಕ ತಂದೆ ಅಬ್ದುಲ್ಲಾ ಫ್ಹಮಿ ಅಲ್ ಹಿಶ್ಮಾವಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾರ್ಚ್ ಎರಡನೇ ವಾರದಲ್ಲಿ ಕಾಣೆಯಾಗಿದ್ದ ಮಾರಿಬ್‍ಳನ್ನು ಪತ್ತೆ ಹಚ್ಚಿದ್ದಾರೆ.

    ಮಾರಿಬ್‍ಳ ಪೋಷಕರು

    ಪೋಷಕರು ಪಕ್ಕದ ಊರಿನ ವ್ಯಕ್ತಿಯೊಂದಿಗೆ ನನ್ನ ಮದುವೆ ಮಾಡಲು ನಿರ್ಧರಿಸಿದ್ರು. ಆದ್ರೆ ನಾನು ಆತನನ್ನು ಮದುವೆ ಆಗಲು ವಿರೋಧ ವ್ಯಕ್ತಪಡಿಸಿದ್ದರಿಂದ ನನ್ನ ದೇಹದ ಮೇಲೆ ಬಿಸಿ ಎಣ್ಣೆ ಹಾಕಿ, ಬಿದಿರಿನ ಕೋಲುಗಳಿಂದ ಹೊಡೆದು ಹಲ್ಲೆ ನಡೆಸಿದ್ರು. ಇದ್ರಿಂದ ನಾನು ಬೇಸತ್ತು ಮನೆಯಿಂದ ಹೊರ ಬಂದು ದೂರದ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದೆ. ಆ ವ್ಯಕ್ತಿಯ ಜೊತೆ ನನ್ನ ಮದುವೆ ಮಾಡಿಸಿದ್ರೆ, ಆತ ಪೋಷಕರಿಗೆ 12 ಲಕ್ಷ ರೂ. (20 ಸಾವಿರ ಡಾಲರ್) ನೀಡಬೇಕೆಂಬ ಒಪ್ಪಂದವಾಗಿತ್ತು ಅಂತಾ ಮಾರಿಬ್ ಪೊಲೀಸರಿಗೆ ತಿಳಿಸಿದ್ದಾಳೆ.

    ಮಾರಿಬ್ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು ಆಕೆಯ ತಂದೆ ಅಬ್ದುಲ್ಲಾ ಮತ್ತು ತಾಯಿ ಹಮ್‍ದಿಯಾಶಾ ಫ್ಹಮಿ ಅಲ್ ಹಿಶ್ಮಾವಿ ಇಬ್ಬರನ್ನು ಬಂಧಿಸಿದ್ದಾರೆ. ಇತ್ತ ಮಾರಿಬ್‍ಳನ್ನು ಮಕ್ಕಳ ಸುರಕ್ಷತೆ ಸೇವಾ ಕೇಂದ್ರದಲ್ಲಿ ಇರಿಸಲಾಗಿದೆ. ಇತ್ತ ಮಾರಿಬ್‍ಳನ್ನು ಮದುವೆ ಆಗಲು ತಯಾರಾಗಿದ್ದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತಾ ಪೊಲೀಸರು ಹೇಳಿದ್ದಾರೆ.

  • ಮನೆಯ ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ: ಮಗ ಬೇಕೆಂದು 10 ಮಕ್ಕಳನ್ನು ಅಪಹರಿಸಿದ ಆರೋಪ- ತಾಯಿ, ಮಗಳು ಅರೆಸ್ಟ್

    ಮನೆಯ ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ: ಮಗ ಬೇಕೆಂದು 10 ಮಕ್ಕಳನ್ನು ಅಪಹರಿಸಿದ ಆರೋಪ- ತಾಯಿ, ಮಗಳು ಅರೆಸ್ಟ್

    ಗಾಂಧಿನಗರ: 10 ಮಕ್ಕಳ ಅಪಹರಣ ಆರೋಪದ ಮೇಲೆ 40 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಂಧಿಸಿದ ಘಟನೆ ಗುಜರಾತ್ ನ ಅಂಕಲೇಶ್ವರ ಪಟ್ಟಣದಲ್ಲಿ ನಡೆದಿದೆ.

    ರಶೀದಾ ಪಟೇಲ್(40) ಮತ್ತು ಮೊಹ್ಸಿನಾ(19) ಬಂಧಿತ ಆರೋಪಿಗಳಾಗಿದ್ದಾರೆ. ಭರೂಚ್ ನ ಅಂಕೆಲೆಶ್ವರ್ ಪೊಲೀಸರು ರಶೀದಾ ಮನೆಯನ್ನು ಪರಿಶೀಲಿಸಿದಾಗ ಮನೆಯ ಹಿಂಭಾಗದಲ್ಲಿ ಬಾಲಕನ ಅಸ್ಥಿಪಂಜರ ಸಿಕ್ಕಿದೆ. ಆದ್ದರಿಂದ ಇವರನ್ನು ಗುರುವಾರ ಕೊಲೆ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

    ರಶೀದಾ ಮನೆಯಲ್ಲಿ ದೊರೆತ ಅಸ್ಥಿಪಂಜರವು ಏಳು ವರ್ಷದ ವಿಕಿ ದೇವಿಪುಜಾಕ್ ಎಂಬ ಬಾಲಕನದ್ದು ಎಂದು ತಿಳಿದಿಬಂದಿದೆ. ಈ ಬಾಲಕ 2016ರ ಮಾರ್ಚ್ ನಲ್ಲಿ ನಗರದ ಗುರುದ್ವಾರ ಪ್ರದೇಶದ ತನ್ನ ಮನೆಯಿಂದ ಕಾಣೆಯಾಗಿದ್ದ. ಬಾಲಕನ ಸಾವಿಗೆ ಕಾರಣ ತಿಳಿಯಲು ದೇಹದ ಅವಶೇಷಗಳನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜೆಜಿ ಅಮಿತ್ ಹೇಳಿದ್ದಾರೆ.

    ಆದ್ರೆ ಬಾಲಕ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದ ಎಂದು ರಶೀದಾ ಹೇಳಿದ್ದಾಳೆ. ಈ ಸಂಬಂಧ ಪೊಲೀಸರು ರಶಿದಾಳನ್ನು ವಿಚಾರಣೆಗೆ ಒಳಪಡಿಸಿದಾಗ ಈಕೆಯ ಗಂಡು ಮಗು ಹಲವು ವರ್ಷಗಳ ಹಿಂದೆ ತೀರಿಕೊಂಡಿತ್ತು ಎಂದು ತಿಳಿದುಬಂದಿದೆ. ತನ್ನ ಕೊನೆಗಾಲದಲ್ಲಿ ನೋಡಿಕೊಳ್ಳಲು ಮಗ ಬೇಕೆಂದು ರಶೀದಾ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಮಾರ್ಚ್ 17 ರಂದು ರಶೀದಾ ಪಟೇಲ್ ಮತ್ತು ಮೊಹ್ಸಿನಾಳನ್ನು ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. 2017ರ ನವೆಂಬರ್ 17ರಂದು ಮೋಹಿತ್ ಪಾಸ್ವಾನ್ ಎಂಬ 7 ವರ್ಷದ ಬಾಲಕ ಕಾಣೆಯಾಗಿದ್ದ. ರಶೀದಾ ಬಾಲಕನನ್ನ ತನ್ನ ಮನೆಯಲ್ಲಿ ಕೂಡಿಹಾಕಿದ್ದಳು. ಆದರೆ ಅವನು 4 ತಿಂಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ರಶೀದಾ ಬಗ್ಗೆ ವಿವರಿಸಿ, ಆಕೆ ನನಗೆ ಹೊಡೆಯುತ್ತಿದ್ದಳೆಂದು ತಿಳಿಸಿದ್ದನು. ನಂತರ ಬಾಲಕನ ತಂದೆ ರಶೀದಾ ಮತ್ತು ಮಗಳ ಮೇಲೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ತನಿಖೆ ನಡೆಸಿದಾಗ ರಶೀದಾ ಮನೆಯ ಹಿತ್ತಲಿನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ.

    2017ರಲ್ಲಿ ಭರೂಚ್‍ನಲ್ಲಿ ಇನ್ನೂ 8 ಮಕ್ಕಳು ಕಾಣೆಯಾಗಿದ್ದು, ಇದರ ಹಿಂದೆ ರಶೀದಾ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

  • 90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    ತಿರುವನಂತಪುರಂ: ನಿರ್ದಯಿ ಮೊಮ್ಮಗಳೊಬ್ಬಳು 90 ವರ್ಷದ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾಗಿ ಥಳಿಸಿ ಹಲ್ಲೆಗೈದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಅಯಿಕ್ಕೆರ ಎಂಬಲ್ಲಿ ನಡೆದಿದೆ.

    30 ವರ್ಷದ ದೀಪಾ ತನ್ನ ತಾಯಿಯ ತಾಯಿ ಕಲ್ಯಾಣಿ ಅವರಿಗೆ ಹಲ್ಲೆ ನಡೆಸಿದ್ದಾಳೆ. ಅಜ್ಜಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣ ಸಂಬಂಧಿಸಿದಂತೆ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೊದಲ್ಲೇನಿದೆ?: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ ಕಲ್ಯಾಣಿ ಅಮ್ಮ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾಳೆ. ಅಲ್ಲದೇ ಅಜ್ಜಿ ಮೈಮೇಲಿದ್ದ ಬಟ್ಟೆಯನ್ನು ಎಳೆದಾಡಿ, ಅದರಲ್ಲೇ ಥಳಿಸಿದ್ದಾಳೆ. ಬಳಿಕ  ಅಜ್ಜಿಯನ್ನು ಮಲಗಿದ್ದಲ್ಲಿಂದ ಎಬ್ಬಿಸಿ, ಕುಳಿತುಕೊಳ್ಳಿಸಿ ಮತ್ತೆ ಹಲವಾರು ಬಾರಿ ಥಳಿಸುವ ಮೂಲಕ ಕ್ರೂರ ವರ್ತನೆ ತೋರಿದ್ದಾಳೆ. ಹೀಗೆ 5 ನಿಮಿಷಗಳ ಕಾಲ ಚೆನ್ನಾಗಿ ಥಳಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಸಾರ್ವಜನಿಕರು ಹಲ್ಲೆ ನಡೆಸದಂತೆ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ವೃದ್ಧೆಯ ಸಹಾಯಕ್ಕೆ ನಿಂತ ಸಾರ್ವಜನಿಕರ ಮೇಲೆಯೇ ದೀಪಾ ರೇಗಾಡಿರುವುದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

    ಹಲ್ಲೆ ಮಾಡಲು ಕಾರಣವೇನು?: ಹಲ್ಲೆ ನಡೆಸಿದ ದೀಪಾ ತನ್ನ ಇಬ್ಬರು ಮಕ್ಕಳೊಂದಿಗೆ ಅಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ದೀಪಾ ಕೆಲಸ ಕಳೆದುಕೊಂಡಿದ್ದಳು. ಹೀಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದಳು. ಈ ಮಧ್ಯೆ ಅಜ್ಜಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿತ್ತು. ಇದರಿಂದ ದೀಪಾ ಕಿರಿಕಿರಿ ಅನುಭವಿಸುತ್ತಿದ್ದು, ಅಜ್ಜಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 323ರ (ಸ್ವಯಂಪ್ರೇರಿತ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಆರೋಪಿ ಅಮ್ಮ ಹಾಗೂ ಅಜ್ಜಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.facebook.com/kayalfriends/videos/2021498344530524/

  • ಮೂರು ಮಕ್ಕಳಿಗೆ ವಿಷವುಣಿಸಿದ ತಾಯಿ

    ಮೂರು ಮಕ್ಕಳಿಗೆ ವಿಷವುಣಿಸಿದ ತಾಯಿ

    ಪಾಟ್ನಾ: ಮನೆ, ಕುಟುಂಬ ಅಂದ್ಮೇಲೆ ಕಷ್ಟ, ಜಗಳಗಳು ಸಾಮನ್ಯವಾಗಿ ನಡೆಯುತ್ತಿರುತ್ತವೆ. ಆದ್ರೆ ಮಹಿಳೆಯೊಬ್ಬಳು ಮನೆಯಲ್ಲಿ ಶಾಂತಿ ಇಲ್ಲ, ಒಂದರ ಮೇಲೊಂದು ಕಷ್ಟಗಳು ಎದುರಾಗುತ್ತಿವೆ ಅಂತಾ ತಾನು ಹೆತ್ತ ಮಕ್ಕಳಿಗೆ ವಿಷ ಉಣಿಸಿರುವ ಹೃದಯ ವಿದ್ರಾವಕ ಘಟನೆ ಬಿಹಾರ ರಾಜ್ಯದ ಗೋಪಾಲಗಂಜ್ ಜಿಲ್ಲೆಯ ಭೋರೆ ತಾಲೂಕಿನ ತಿಲಕಡುಮಾರ್ ಗ್ರಾಮದಲ್ಲಿ ನಡೆದಿದೆ.

    ಮಮತಾದೇವಿ ಮಕ್ಕಳಿಗೆ ವಿಷವುಣಿಸಿದ ತಾಯಿ. ದಿಗ್ವಿಜಯ್ ಕುಮಾರ್ (4), ಕುಮಾರಿ (5) ಮತ್ತು ರಣ್‍ವಿಜಯ್ ಕುಮಾರ್ (3) ಸಾವನ್ನಪ್ಪಿದ ಮಕ್ಕಳು. ಕೌಟುಂಬಿಕ ಕಲಹದಿಂದ ಬೇಸತ್ತ ಮಮತಾದೇವಿ ಭಾನುವಾರ ರಾತ್ರಿ ತನ್ನ ಮೂವರು ಮಕ್ಕಳಿಗೆ ವಿಷ ಮಿಶ್ರಿತ ಆಹಾರವನ್ನು ತಿನ್ನಿಸಿದ್ದಾಳೆ. ವಿಷಾಹಾರ ಸೇವಿಸಿದ ಮೂರು ಕಂದಮ್ಮಗಳು ಮನೆಯಲ್ಲಿಯೇ ಸಾವನ್ನಪ್ಪಿವೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಆರೋಪಿ ಮಮತಾದೇವಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಮತಾಳ ನೆರೆಹೊರೆ ಅವರಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಆದ್ರೆ ಮಮತಾ ಮಾತ್ರ ತಾನೇಕೆ ಮಕ್ಕಳನ್ನು ಕೊಂದೇ ಎಂಬುದರ ಬಗ್ಗೆ ಹೇಳಿಲ್ಲ ಅಂತಾ ಪೊಲೀಸರು ತಿಳಿಸಿದ್ದಾರೆ.

    ಕೌಟುಂಬಿಕ ಕಲಹಕ್ಕೆ ಮನನೊಂದು ಮಮತಾ ಮಕ್ಕಳನ್ನು ಕೊಲೆ ಮಾಡಿದ್ದಾಳೆ ಅಂತಾ ಶಂಕಿಸಲಾಗಿದೆ. ಆದರೆ ಘಟನೆಯ ಬಗ್ಗೆ ಗ್ರಾಮಸ್ಥರು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ.

  • ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    – ಅಂಬರೀಶ್ ವಿರುದ್ಧ ರಂಜಿತಾ ಸ್ಪರ್ಧೆ

    ಮಂಡ್ಯ: 2018 ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಂಸದೆ ರಮ್ಯಾ ಅವರ ತಾಯಿ ಸ್ಪರ್ಧೆ ಮಾಡಲಿದ್ದು, ಈ ಬಗ್ಗೆ ಇನ್ನೊಂದು ವಾರದಲ್ಲಿ ಮಂಡ್ಯಕ್ಕೆ ಬಂದು ಬೆಂಬಲಿಗರ ಜೊತೆ ಚರ್ಚಿಸಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿರುವ ರಮ್ಯಾ ತಾಯಿ ರಂಜಿತಾ, ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. 1980ರ ದಶಕದಲ್ಲಿ 2 ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದೇವೆ. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಪಕ್ಷಕ್ಕಾಗಿ ಮನೆ ಮನೆ ಬಾಗಿಲಿಗೆ ಹೋಗಿ ಕ್ಯಾಂಪೇನ್ ಮಾಡಿದ್ದೇವೆ. ಆದ್ರೆ ಕಾಂಗ್ರೆಸ್ ಪಕ್ಷದವರು ಪಕ್ಷಕ್ಕಾಗಿ ದುಡಿದ ನಮ್ಮನ್ನು ಕಡೆಗಣಿಸಿದ್ದಾರೆ ಅಂತ ತನ್ನ ಅಳಲುತೋಡಿಕೊಂಡಿದ್ದಾರೆ.

    ರಮ್ಯಾ ಅವರು ಸೋತ ನಂತರ ಅವರಿಗೂ ಯಾವುದೇ ಸ್ಥಾನಮಾನ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಒಳಗಿದ್ದುಕೊಂಡೇ ರಮ್ಯಾರನ್ನು ಸೋಲಿಸಿದ್ರು. ರಾಜ್ಯ ರಾಜಕಾರಣದಲ್ಲಿ ರಮ್ಯಾರನ್ನು ಕಡೆಗಣಿಸಲಾಗಿದೆ. ಇದೆಲ್ಲ ಮನಸ್ಸಿಗೆ ನೋವುಂಟು ಮಾಡಿದೆ. ಈ ನೋವು ರಮ್ಯಾಗೂ ಇದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯುತ್ತೇನೆ ಅಂತ ಅಸಮಾಧಾನ ಹೊರಹಾಕಿದ್ದಾರೆ.

    ಜನ ಆಶೀರ್ವಾದ ಮಾಡಿದ್ರೆ ಅವರ ಸೇವೆ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದಿಂದಲೇ ಟಿಕೆಟ್ ಕೇಳುತ್ತಿದ್ದೆ. ಆದ್ರೆ ಅಂಬರೀಶ್ ಅಣ್ಣ ಕಾಂಗ್ರೆಸ್ ಪಕ್ಷದಿಂದ ಎಲೆಕ್ಷನ್‍ಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಪಕ್ಷದಿಂದ ಟಿಕೆಟ್ ಕೇಳಿಲ್ಲ. ನನ್ನ ಸ್ಪರ್ಧೆಯ ಬಗ್ಗೆ ರಮ್ಯಾ ಜೊತೆ ಮಾತನಾಡಿಲ್ಲ. ರಮ್ಯಾರನ್ನು ನಂಬಿ ಓಟ್ ಮಾಡಿದ ಮತದಾರರಿಗಾಗಿ ದುಡಿಯಬೇಕಿದೆ. ಹಾಗಾಗಿ ಚುನಾವಣೆಗೆ ನಿಲ್ಲುತ್ತೇನೆ ಅಂತ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.

  • 37 ವರ್ಷವಾದ್ರೂ ಮದ್ವೆಯಾಗಿಲ್ಲವೆಂದು ಮನನೊಂದು ತಾಯಿ – ಮಗಳು ಆತ್ಮಹತ್ಯೆ

    37 ವರ್ಷವಾದ್ರೂ ಮದ್ವೆಯಾಗಿಲ್ಲವೆಂದು ಮನನೊಂದು ತಾಯಿ – ಮಗಳು ಆತ್ಮಹತ್ಯೆ

    ಬೆಂಗಳೂರು: ಮಗಳಿಗೆ 37 ವರ್ಷವಾದ್ದರೂ ಮದುವೆಯಾಗಿಲ್ಲ ಎಂದು ತಾಯಿ – ಮಗಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

    ಸಾವಿತ್ರಮ್ಮ (67) ಮಂಜುಳಾ (37) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಸಾವಿತ್ರಮ್ಮ ಹಾಗೂ ಮಂಜುಳಾ ಮೂಲತಃ ಮಂಡ್ಯದವರಾಗಿದ್ದು, ಕೆಲ ವರ್ಷಗಳಿಂದ ಮನೆಯಲ್ಲಿ ಇಬ್ಬರೇ ವಾಸವಾಗಿದ್ದರು. ಮಂಜುಳಾಗೆ 37 ವರ್ಷಗಳಾದ್ದರೂ ಮದುವೆ ಆಗಿರಲಿಲ್ಲ.

    ಮನೆಯ ಹೊರಗಡೆ ಎಲ್ಲೂ ಸಾವಿತ್ರಮ್ಮ ಹಾಗೂ ಮಂಜುಳಾ ಕಾಣಿಸಿಕೊಳ್ಳದ ಕಾರಣ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸಾವಿತ್ರಮ್ಮ ಮನೆಗೆ ಬಂದು ಪರಿಶೀಲಿಸಿದ್ದಾಗ ಮೂರು ದಿನದ ಹಿಂದೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

    ಸಾವಿತ್ರಮ್ಮನ ಗಂಡ ಸಾವನ್ನಪ್ಪಿದ್ದು, ಮಗ ಕೂಡ ಮದುವೆಯಾಗಿ ತನ್ನ ಪತ್ನಿಯ ಜೊತೆ ಪ್ರತ್ಯೇಕವಾಗಿ ಕೆಂಗೇರಿಯಲ್ಲಿ ವಾಸವಾಗಿದ್ದನು. ಮಗಳಿಗೆ ಮದುವೆಯಾಗಿಲ್ಲದ ವಿಚಾರವನ್ನು ಸಾವಿತ್ರಮ್ಮ ಹತ್ತಿರದ ಮನೆಯವರಲ್ಲಿ ಪ್ರಸ್ತಾಪಿಸಿ ಬೇಸರ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಈ ವಿಚಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

  • ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಶವದ ಪಕ್ಕದಲ್ಲೇ ಕಾದು ಕುಳಿತ ಪುತ್ರ!

    ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಶವದ ಪಕ್ಕದಲ್ಲೇ ಕಾದು ಕುಳಿತ ಪುತ್ರ!

    ಕೋಲ್ಕತಾ: ಮೃತ ತಾಯಿಗಾಗಿ ಅನ್ನ, ನೀರು ಬಿಟ್ಟು ಪುತ್ರನೊಬ್ಬ ಶವದ ಪಕ್ಕದಲ್ಲೇ ಕಾದು ಕುಳಿತ ಘಟನೆ ಭಾನುವಾರ ಕೋಲ್ಕತಾದ ಬೌಬಜಾರ್ ನಲ್ಲಿ ನಡೆದಿದೆ.

    ಹೆತ್ತ ತಾಯಿಗಾಗಿ ಆಕೆಯ ಮೃತದೇಹದ ಬಳಿ 30 ವರ್ಷದ ಪುತ್ರ ಕಾದು ಕುಳಿತ್ತಿದ್ದು, ಈಗ ಆತನಿಗೆ ಮಾತನಾಡಲು ಹಾಗೂ ಎದ್ದು ಓಡಾಡಲು ಸಾಧ್ಯವಾಗುತ್ತಿಲ್ಲ. ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಚ್ಚಿಪರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಶಶಿಬುಸನ್ ದೇ ಸ್ಟ್ರೀಟ್‍ನಲ್ಲಿರುವ ಈತನ ಮನೆಯಿಂದ ಮೃತದೇಹದ ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ನಮಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ನಾವು ಆತನ ಮನೆಯ ಬಾಗಿಲನ್ನು ಹೊಡೆದು ಒಳಗೆ ಹೋದೆವು. ನಂತರ ಮಂಚದ ಮೇಲಿದ್ದ ಮಹಿಳೆಯ ಮೃತದೇಹವನ್ನು ನೋಡಿದ್ದೇವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಿ, ನಂತರ ಅನ್ನ, ನೀರು ಬಿಟ್ಟು ಕುಳಿತ ಆ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೂಲಗಳ ಪ್ರಕಾರ ತಾಯಿ ಕಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

  • ಕ್ಷುಲಕ ಕಾರಣಕ್ಕೆ ತಾಯಿಯ ರುಂಡವನ್ನೇ ಕತ್ತರಿಸಿದ ಮಗ

    ಕ್ಷುಲಕ ಕಾರಣಕ್ಕೆ ತಾಯಿಯ ರುಂಡವನ್ನೇ ಕತ್ತರಿಸಿದ ಮಗ

    ಚೆನ್ನೈ: ಕ್ಷುಲಕ ಕಾರಣಕ್ಕೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬ ತನ್ನ ತಾಯಿಯ ರುಂಡವನ್ನು ಕತ್ತರಿಸಿದ ಬಳಿಕ ಪೊಲೀಸರಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಪುದುಕೋಟೈ ಜಿಲ್ಲೆಯಲ್ಲಿ ನಡೆದಿದೆ.

    ರಾಣಿ ಕೊಲೆಯಾದ ಮಹಿಳೆಯಾಗಿದ್ದು, ಅನಂದ್ (30) ಕೊಲೆ ಮಾಡಿದ ಆರೋಪಿ. ಈಗಾಗಲೇ ಗಂಡನನ್ನು ಕಳೆದುಕೊಂಡಿರುವ ರಾಣಿ ಮಗ ಅನಂದನೊಂದಿಗೆ ವಾಸವಿದ್ದರು. ಆದರೆ ಕಳೆದ ಹಲವು ದಿನಗಳಿಂದ ತಾಯಿ ಮಗನ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

    ಇಂದು ಬೆಳಗ್ಗೆ ಮನೆಯಲ್ಲಿ ಕ್ಷುಲಕ ಕಾರಣಕ್ಕೆ ತಾಯಿ ಮಗನ ನಡುವೆ ಜಗಳ ಆರಂಭವಾಗಿದ್ದು, ಈ ವೇಳೆ ಅನಂದ್ ಹರಿತವಾದ ಆಯುಧದಿಂದ ತಾಯಿಯ ರುಂಡವನ್ನು ಕತ್ತರಿಸಿ, ರುಂಡ ಸಮೇತ ಸ್ಥಳೀಯ ಕರಾಂಬಕುಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಕೊಲೆಯಾದ ಮಹಿಳೆ 10 ವರ್ಷಗಳ ಹಿಂದೆ ತನ್ನ ಗಂಡನ ಕೊಲೆ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ಸದ್ಯ ಅನಂದ್ ನನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.

  • ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ನನ್ನ ಸಾವಿನಿಂದ ಅಪ್ಪ, ಸಹೋದರಿ ಖುಷಿಯಾಗ್ತಾರೆ- ಡೆತ್‍ನೋಟ್ ಬರೆದಿಟ್ಟು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ ಮನನೊಂದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ನಾಗೊಳೆಯ ಜೈಪುರ ಕಾಲೋನಿಯಲ್ಲಿ ಗುರುವಾರ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು 18 ವರ್ಷದ ಸಾಯಿ ಪ್ರಿಯಾ ಎನ್ನಲಾಗಿದೆ. ಈಕೆ ಭೋಪಾಲ್ ರೆಡ್ಡಿ ಮಗಳು. ಸಾಯಿ ಪ್ರಿಯಾ ಇತ್ತೀಚೆಗೆಷ್ಟೇ ತನ್ನ ಪಿಯುಸಿ ಪರೀಕ್ಷೆ ಮುಗಿಸಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಳು.

    ಏನಿದು ಘಟನೆ?: ಗುರುವಾರ ಸಂಜೆ ಸಾಯಿ ಪ್ರಿಯಾ ತನ್ನ ಸಹೋದರಿ ಜೊತೆ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದಳು. ಈ ವೇಳೆ ಮೊಬೈಲ್ ಜಾಸ್ತಿ ಬಳಕೆ ಮಾಡುತ್ತಿದ್ದೀಯಾ ಅಂತ ತಂದೆ ಬೈದಿದ್ದಾರೆ. ಹಾಗೂ ಅದರ ಬಳಕೆ ಕಡಿಮೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಪರಿಣಾಮ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

    ಇದರಿಂದ ಮನನೊಂದ ಪ್ರಿಯಾ, ನೇರವಾಗಿ ತನ್ನ ಬೆಡ್ ರೂಂ ಗೆ ತೆರಳಿ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೂಡಲೇ ಮಗಳ ಕೃತ್ಯವನ್ನು ಗಮನಿಸಿದ ಹೆತ್ತವರು ಕೋಣೆಯ ಬಾಗಿಲು ಒಡೆದು, ಮಗಳನ್ನು ತಕ್ಷಣವೇ ಸುಪ್ರಜಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಆಕೆ ಅದಾಗಲೇ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಪ್ರಿಯಾ ಡೆತ್ ನೋಟ್ ಬರೆದಿದ್ದು, ಅದರಲ್ಲಿ ತಾನು ಪರೀಕ್ಷೆಯನ್ನು ಚೆನ್ನಾಗಿಯೇ ಎದುರಿಸಿದ್ದೇನೆ ಅಂತ ಹೇಳಿದ್ದಾಳೆ. ಸದ್ಯ ಪ್ರಿಯಾಳ ತಂದೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    `ನಾನು ಎಲ್ಲರೊಂದಿಗೂ ಸಿಟ್ಟು ಮಾಡಿಕೊಳ್ಳುತ್ತಿದ್ದೇನೆ. ಹೀಗಾಗಿ ನಾನ್ಯಾಕೆ ಇನ್ನೂ ಬದುಕಿರಬೇಕು ಅನಿಸಿದೆ. ಕ್ಷಮಿಸಿ ಅಪ್ಪ… ಐ ಲವ್ ಯೂ ಅಮ್ಮ, ಅಪ್ಪ. ಪರೀಕ್ಷೆಯಲ್ಲಿ ಚೆನ್ನಾಗಿಯೇ ಬರೆದಿದ್ದೇನೆ. ಹೀಗಾಗಿ ಆ ಕಾರಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ… ನನ್ನ ಸಾವಿನಿಂದ ಅಪ್ಪ ಹಾಗೂ ಸಹೋದರಿ ಖುಷಿ ಪಡುತ್ತಾರೆ ಅಂತ ತನ್ನ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದು, ಇದೀಗ ಪೊಲೀಸರು ಪತ್ರವನ್ನು ವಶಪಡಿಸಿಕೊಂಡಿದ್ದಾರೆ.

  • 3 ವರ್ಷದ ಮಗಳನ್ನ ಕೊಂದು ಮಹಿಳೆ ಪರಾರಿ

    3 ವರ್ಷದ ಮಗಳನ್ನ ಕೊಂದು ಮಹಿಳೆ ಪರಾರಿ

    ಮುಂಬೈ: ತನ್ನ ಮೂರು ವರ್ಷದ ಮಗಳನ್ನೇ ಕೊಲೆ ಮಾಡಿ ತಲೆಮರೆಸಿಕೊಂಡಿರುವ ಮಹಿಳೆಗಾಗಿ ಮುಂಬೈನ ಶಿವಾಜಿನಗರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ರಾಜವಾಡಿ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ಪೊಲೀಸರು ಹೇಳುವ ಪ್ರಕಾರ ಅವರು ಆಸ್ಪತ್ರೆಗೆ ಹೋದ ಬಳಿಕ ಆರೋಪಿ ತಾಯಿ ನಾದ್ರಾ ಶೇಕ್(22) ಬಗ್ಗೆ ಗೊತ್ತಾಗಿದೆ. ಈಕೆ ತನ್ನ ಮಗಳೊಂದಿಗೆ ಆಸ್ಪತ್ರೆಗೆ ಬಂದಿದ್ದಳು ಎಂದು ವೈದ್ಯರು ಹೇಳಿದ್ದಾರೆ.

    ನಾದ್ರಾ ಬಂದು ಮಗಳಿಗೆ ಹುಷಾರಿಲ್ಲ ಎಂದು ಹೇಳಿದಳು. ಬಾಲಕಿಗೆ ಏನಾಗಿದೆ? ಆಕೆ ಯಾವುದಾದ್ರೂ ಕಾಯಿಲೆಯಿಂದ ಬಳಲುತ್ತಿದ್ದಾಳಾ ಎಂದು ಕೇಳಿದಾಗ, ನನ್ನ ಮಗಳಿಗೆ ಹೊಟ್ಟೆ ನೋವಿದೆ ಎಂದು ಹೇಳಿದಳು. ಚಿಕಿತ್ಸೆಗೆ ಸಂಬಂಧಿಸಿದಂತೆ ಕಾಗದಗಳನ್ನ ತೋರಿಸುವಂತೆ ಕೇಳಿದಾಗ ಅವು ಮನೆಯಲ್ಲಿವೆ ಎಂದು ಹೇಳಿದಳು. ನಂತರ ಕಾಗದಗಳನ್ನ ತರುವುದಾಗಿ ಹೇಳಿ ಹೋದಳು. ಆದ್ರೆ ಆಕೆ ವಾಪಸ್ ಬರಲಿಲ್ಲ ಎಂದು ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಬರುವಿಕೆಗಾಗಿ ಕೆಲ ಸಮಯ ಕಾದ ನಂತರ ಆಸ್ಪತ್ರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ ಬಳಿಕ ಶಿವಾಜಿನಗರದಲ್ಲಿನ ಆರೋಪಿ ನಾದ್ರಾ ಮನೆಗೆ ಹೋಗಿದ್ದಾರು. ನಾದ್ರಾ ತನ್ನ ಗಂಡ ಹಾಗೂ ಐದು ವರ್ಷದ ಮಗನೊಂದಿಗೆ ವಾಸವಿದ್ದಳು. ಆದ್ರೆ ಅಂದು ಆಕೆ ಮನೆಯಲ್ಲಿ ಇರಲಿಲ್ಲ. ನಾದ್ರಾ ಬಗ್ಗೆ ನೆರೆಹೊರೆಯವರನ್ನ ವಿಚಾರಿಸಿದಾಗ, ಆಕೆ ಯಾವಾಗ್ಲೂ ಬೇರೆಯವರೊಂದಿಗೆ ಜಗಳವಾಡುತ್ತಿದ್ದಳು. ಒಮ್ಮೆ ತನ್ನ ಮಗನಿಗೆ ರಕ್ತಬರುವಂತೆ ಹೊಡೆದಿದ್ದಳು ಎಂದು ಹೇಳಿದ್ದಾರೆ.

    ಪೊಲೀಸರು ಬಾಲಕನನ್ನು ವಿಚಾರಿಸಿದಾಗ, ತನ್ನ ತಂಗಿಗೆ ತಾಯಿ ನಾದ್ರಾ ಯಾವ ರೀತಿ ಹೊಡೆದಳು ಎಂಬುದನ್ನ ಹೇಳಿದ್ದಾನೆ. ಆರೋಪಿ ಮಹಿಳೆಯನ್ನ ಪತ್ತೆ ಮಾಡಲು ಪೊಲೀಸರು ಹಲವು ಸ್ಥಳಗಳಲ್ಲಿ ತಂಡಗಳನ್ನ ನಿಯೋಜಿಸಿದ್ದಾರೆ.

    ಆರೋಪಿ ಮಹಿಳೆಯ ಗಂಡ ಸದ್ಯ ಕೆಲಸದ ಮೇಲೆ ಬಿಹಾರಕ್ಕೆ ಹೋಗಿದ್ದು, ಅವರನ್ನ ಸಂಪರ್ಕಿಸಿದ್ದೇವೆ. ಅವರು ಮುಂಬೈಗೆ ಬರುತ್ತಿದ್ದಾರೆ. ಬಾಲಕಿಯ ಮೃತದೇಹದ ಮೇಲೆ ಹಲವು ಗಾಯದ ಗುರುತುಗಳ ಇರೋದನ್ನ ಆಸ್ಪತ್ರೆಯವರು ಪತ್ತೆ ಮಾಡಿದ್ದಾರೆ. ಯಾವುದೋ ವಸ್ತುವಿನಿಂದ ಬಾಲಕಿ ಮೇಲೆ ಹಲ್ಲೆ ಮಾಡಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ಆದ್ರೆ ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ. ಹಲ್ಲೆಯಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆಂದು ದೃಢಪಟ್ಟರೆ ಐಪಿಸಿ ಸೆಕ್ಷನ್ 302(ಕೊಲೆ) ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಶಿವಾಜಿನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಹುಸೇನ್ ಜಟ್ಕರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.