Tag: mother

  • ಬೈದಿದ್ದಕ್ಕೆ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಮಗ!

    ಬೈದಿದ್ದಕ್ಕೆ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಮಗ!

    ಮುಂಬೈ: ಮನೆಕೆಲಸಕ್ಕೆ ಸಹಾಯ ಮಾಡಲಿಲ್ಲವೆಂದು ತಾಯಿ ಬೈದರು ಅಂತ ಮನನೊಂದು 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸೋಮವಾರ ರಾತ್ರಿ ನಗರದ ಅಂಬೋಲಿ ಮನೆಯಲ್ಲಿ ನೀಲೇಶ್ ಗುಪ್ತಾ ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆಕಸ್ಮಿಕ ಸಾವು ಅಂತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈಗಾಗಲೇ ನಿಲೇಶ್ ಗೆ ಪರೀಕ್ಷೆ ಮುಗಿದಿದ್ದು, ಹೀಗಾಗಿ ರಜೆಯಲ್ಲಿ ಮಜಾ ಮಾಡುತ್ತಿದ್ದನು. ಅಲ್ಲದೇ ಈತ ನಿಧಾನವಾಗಿ ತನ್ನ ಕೆಲಸಗಳನ್ನು ಮಾಡುತ್ತಿದ್ದನು. ಇದರಿಂದ ತಾಯಿ ಆತನ ವಿರುದ್ಧ ಸಿಟ್ಟುಗೊಂಡಿದ್ದರು. ಆತ ತಾಯಿಯೊಂದಿಗೆ ಮನೆ ಕೆಲಸವನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ ಗುಪ್ತಾನಿಗೆ ಬೈಯುತ್ತಿದ್ದರು.

    ಸೋಮವಾರ ಮನೆಕೆಲಸ ಮಾಡು ಎಂದು ತಾಯಿ ಹೇಳಿದ್ದರೂ ಆತ ಟಿವಿ ನೋಡುತ್ತಾ ಕಾಲ ಕಳೆಯುತ್ತಿದ್ದ. ಇದೇ ವಿಚಾರವಾಗಿ ಅಂದು ಸಂಜೆಯೂ ತಾಯಿ ಆತನಿಗೆ ಬೈದಿದ್ದರು. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾನೆ.

    ತಾಯಿ ಮತ್ತು ಸಹೋದರಿ ಹೊರಹೋಗುವುದನ್ನೇ ಕಾಯುತ್ತಿದ್ದ ಆತ ಕೆಲಸ ನಿಮಿತ್ತ ಮನೆಯಿಂದ ಹೊರಗಡೆ ಇವರಿಬ್ಬರು ತೆರಳುತ್ತಿದ್ದಂತೆಯೇ ಅಂದ್ರೆ ರಾತ್ರಿ 9.30ರ ಸುಮಾರಿಗೆ ತನ್ನ ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

    ತಾಯಿ ಹಾಗೂ ಸಹೋದರಿ ಮನೆಗೆ ಮತ್ತೆ ಹಿಂದಿರುಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಹಲವು ಬಾರಿ ಬಾಗಿಲು ಬಡಿದರೂ ಒಳಗಿದ್ದ ಗುಪ್ತಾ ಮಾತ್ರ ಬಾಗಿಲು ತೆರೆಯಲಿಲ್ಲ. ಇದರಿಂದ ಗಾಬರಿಗೊಳಗಾದ ಅವರು ನೆರೆಹೊರೆಯವರಿಗೆ ಸುದ್ದಿ ಮುಟ್ಟಿಸಿದ್ರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಬಾಗಿಲು ಒಡೆದು ಒಳಗೆ ಹೋದ್ರೆ ಗುಪ್ತಾ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತನ್ನು ಕುಣಿಕೆಯಿಂದ ತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ಸದ್ಯ ಗುಪ್ತಾ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣವೇನೆಂದು ತಿಳಿಯಲು ಆತನ ಗೆಳೆಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಏನಾದ್ರೂ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಖಿನ್ನತೆಗೊಳಗಾಗಿದ್ದಾನೋ ಎಂಬುದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆದ್ರೆ ಆತನೇ ಆತ್ಮಹತ್ಯೆಗೆ ಶರಣಾಗಿರುವುದು ನಿಜವೆಂದು ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಎಸ್‍ಪಿ ಭರತ್ ಗಾಯಕ್‍ವಾಡ್ ಸ್ಪಷ್ಟನೆ ನೀಡಿದ್ದಾರೆ.

  • 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಬಳ್ಳಾರಿ: ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರನ್ನ ನೋಡಿರಬಹುದು, ಆದರೆ ಜಿಲ್ಲೆಯಲ್ಲಿ ಮಹಿಳೆಯೊಬ್ಬರು 10 ವರ್ಷದ ನಂತರ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

    ಸಿರಗುಪ್ಪ ಪಟ್ಟಣದ ಸದಾಶಿವನಗರದ ಆಸ್ಪತ್ರೆಯಲ್ಲಿ ಸೀಮಾಂದ್ರದ ಕೌತಾಳಂನ ಮಾರಮ್ಮ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಕ್ಕಳು ಆರೋಗ್ಯವಾಗಿದ್ದಾರೆ.

    ಮದುವೆಯಾಗಿ ಹತ್ತು ವರ್ಷದ ನಂತರ ಏಕಕಾಲಕ್ಕೆ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವ ಕುಟುಂಬದವರಿಗೆ ತ್ರಿವಳಿ ಧಮಾಕ ಎನ್ನುವಂತಾಗಿದೆ. ಮೂವರು ಮಕ್ಕಳು ಆರೋಗ್ಯವಾಗಿರುವ ಪರಿಣಾಮ ಕುಟುಂಬದ ಸದಸ್ಯರಲ್ಲಿ ಹರ್ಷ ಮೂಡಿದೆ.

     

  • 50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    50 ಸಾವಿರ ಪಿಂಚಣಿಗಾಗಿ ತಾಯಿಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟ ಮಗ!

    ಕೋಲ್ಕತ್ತಾ: ಮಗನೊಬ್ಬ ತಾಯಿಯ ಪಿಂಚಣಿ ಪಡೆಯಲು ಆಕೆಯ ಮೃತದೇಹವನ್ನು 3 ವರ್ಷ ಫ್ರಿಡ್ಜ್ ನಲ್ಲಿಟ್ಟಿದ್ದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಸುಬ್ರೂತ್ ಮಜುಮ್ಮ್ ದಾರ್ ಪೆನ್ಷನ್ ಗಾಗಿ ತಾಯಿಯ ಮೃತದೇಹವನ್ನು ಫ್ರಿಡ್ಜ್ ನಲ್ಲಿಟ್ಟ ಮಗ. ಮೃತ ಮಹಿಳೆ ಭಾರತ ಆಹಾರ ನಿಗಮ(ಎಫ್‍ಸಿಐ)ನಿವೃತ್ತ ಅಧಿಕಾರಿಯಾಗಿದ್ದು, ತಿಂಗಳಿಗೆ 50 ಸಾವಿರ ರೂ. ಪೆನ್ಷನ್ ಪಡೆಯುತ್ತಿದ್ದರು. ಮೃತ ತಾಯಿಯ ಮಗ ಪೆನ್ಷನ್‍ಗಾಗಿ ತನ್ನ ಆಕೆಯ ಮೃತದೇಹವನ್ನು 3 ವರ್ಷಗಳ ಕಾಲ ಫ್ರಿಡ್ಜ್ ನಲ್ಲಿಟ್ಟದ್ದನು. ನಂತರ ತಿಂಗಳು ತಿಂಗಳು ಪೆನ್ಷನ್‍ಗಾಗಿ ಆತ ತನ್ನ ತಾಯಿಯ ಹೆಬ್ಬೆಟ್ಟನ್ನು ಪಡೆಯುತ್ತಿದ್ದ ಎಂದು ಹೇಳಲಾಗಿದೆ.

    ಪ್ರತಿ ತಿಂಗಳು ತನ್ನ ತಾಯಿಗೆ ಸಿಗುತ್ತಿದ್ದ ಪೆನ್ಷನ್ ಹಣವನ್ನು ಮಗ ಬ್ಯಾಂಕಿನಿಂದ ತೆಗೆಯುತ್ತಿದ್ದನು. ಮಹಿಳೆ ಸಾವಿನ ಮೂರು ವರ್ಷಗಳ ಕಾಲ ಹೀಗೆ ನಡೆಯುತ್ತಿತ್ತು. ಮೂರು ವರ್ಷ ಮೃತದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದನು ಎಂದು ಪೊಲೀಸರು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂರು ವರ್ಷದಿಂದ ಮಗ ಶವವನ್ನು ಫ್ರಿಡ್ಜ್ ನಲ್ಲಿಟ್ಟಿರುವುದು ನನಗೆ ತಿಳಿದಿತ್ತು ಎಂದು ಮಹಿಳೆಯ ಪತಿ ತಿಳಿಸಿದ್ದಾರೆ.

    ಇನ್ನೂ ಆರೋಪಿಗಳಿಬ್ಬರು ತಮ್ಮ ಜೊತೆ ಮಾತನಾಡುತ್ತಿರಲಿಲ್ಲ ಎಂದು ಅಕ್ಕಪಕ್ಕದ ಮನೆಯವರು ಮಾಧ್ಯಮದಲ್ಲಿ ತಿಳಿಸಿದ್ದಾರೆ. ಮಹಿಳೆ ಮೃತಪಟ್ಟ ವಿಷಯ ತಿಳಿದಿತ್ತು ಆದರೆ ಅಂತ್ಯಸಂಸ್ಕಾರ ಮಾಡಿದ್ದಾರೋ ಇಲ್ಲವೋ ಎಂಬುದು ತಿಳಿದಿಲ್ಲ ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ.

    ಕೃತ್ಯದ ಬಗ್ಗೆ ಮೂಲಗಳ ಖಚಿತ ಮಾಹಿತಿ ತಿಳಿದು ಸುಬ್ರೂತ್ ಮಜುಮ್ಮ್‍ದಾರ್ ಮನೆಗೆ ಪೊಲೀಸರು ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೃತದೇಹವನ್ನು ವಶಕ್ಕೆ ಪಡೆದು ಮಗ ಹಾಗೂ ಆತನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್-ಪ್ರಶ್ನಿಸಿದ ತಾಯಿಯನ್ನ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಸಲಿಂಗಿ ಮಗಳು

    ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್-ಪ್ರಶ್ನಿಸಿದ ತಾಯಿಯನ್ನ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಸಲಿಂಗಿ ಮಗಳು

    ಘಾಜಿಯಾಬಾದ್: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿ ಇದ್ದಿದ್ದನ್ನು ಪ್ರಶ್ನಿಸಿದ ತಾಯಿಯನ್ನು ಕೊಲೆಗೈದಿರುವ ಘಟನೆ ದೆಹಲಿಯ ಕವಿ ನಗರದಲ್ಲಿ ನಡೆದಿದೆ.

    ಪುಷ್ಪಾದೇವಿ ರಾಣಾ ಮಗಳಿಂದಲೇ ಕೊಲೆಯಾದ ತಾಯಿ. 21 ವರ್ಷದ ಮಗಳು ರಶ್ಮಿ ರಾಣಾ ತನ್ನ ಶಿಕ್ಷಕಿ ನಿಶಾ ಗೌತಮ್ ಎಂಬಾಕೆ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿದ್ದಳು. ಮಗಳ ವಿಷಯ ತಿಳಿದ ತಾಯಿ ಸಲಿಂಗ ಕಾಮದಿಂದ ದೂರ ಉಳಿಯುವಂತೆ ತಿಳಿಹೇಳಿದ್ದರು. ತನ್ನ ಸಂಬಂಧಕ್ಕೆ ತಾಯಿ ಅಡ್ಡವಾಗುತ್ತಾಳೆಂದು ತಿಳಿದ ರಶ್ಮಿ ತನ್ನ ಸಂಗಾತಿ ನಿಶಾ ಜೊತೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪುಷ್ಪಾರನ್ನು ಕೊಂದಿದ್ದಾರೆ. ತಲೆಯ ಭಾಗಕ್ಕೆ ತೀವ್ರವಾದ ಗಾಯಗೊಂಡಿದ್ದರಿಂದ ಪುಷ್ಪಾ ಸಾವನ್ನಪ್ಪಿದ್ದಾರೆ.

    ಪುಷ್ಪಾದೇವಿಯ ಕೊಲೆಯ ಬಳಿಕ ಪತಿ ಸತೀಶ್ ರಾಣಾ ಮಾರ್ಚ್ 09ರಂದು ಕವಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಮತ್ತು ನಿಶಾ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಘಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ರಶ್ಮಿ ಮತ್ತು ನಿಶಾ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ರಶ್ಮಿ ತಾಯಿಯ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

    ರಶ್ಮಿ ಮತ್ತು ನಿಶಾ ಕೆಲವು ದಿನಗಳಿಂದ ಸಂಬಂಧದಲ್ಲಿದ್ದರು. ಮಗಳ ಅನೈತಿಕ ಸಂಬಂಧದ ವಿಷಯ ತಿಳಿದ ತಾಯಿ ನಿಶಾಳಿಂದ ದೂರ ಉಳಿಯುವಂತೆ ಒತ್ತಡ ಹಾಕುತ್ತಿದ್ದರು. ನಿಶಾ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಇಚ್ಛಿಸದ ರಶ್ಮಿ ತಂದೆ ಮನೆಯಲ್ಲಿರದ ವೇಳೆಯಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ತಾಯಿಯನ್ನು ಕೊಂದಿದ್ದಾಳೆ ಅಂತಾ ಪೊಲೀಸ್ ಅಧೀಕ್ಷಕ ಆಕಾಶ್ ತೊಮರ್ ಹೇಳಿದ್ದಾರೆ.

    ಸದ್ಯ ರಶ್ಮಿ ಮತ್ತು ನಿಶಾ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದೆ.

    https://youtu.be/d1FND3HKo5w

  • ತಾಯಿಯ 100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕವನ ಹೇಳಿ ಮೃತಪಟ್ಟ ಮಗಳು!

    ತಾಯಿಯ 100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕವನ ಹೇಳಿ ಮೃತಪಟ್ಟ ಮಗಳು!

    ಮಂಗಳೂರು: ತಾಯಿಯ ನೂರನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲೇ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಗ್ಲೋರಿಯಾ ಲೋಬೋ(75) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30 ರಂದು ಶತಮಾನೋತ್ಸವ ಕಂಡಿದ್ದರು. ಆದರೆ ತಾಯಿಯ ನೂರನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಾಸವಾಗಿರುವ ಪುತ್ರಿ ಗ್ಲೋರಿಯಾ ಲೋಬೋ ಪಾಂಡೇಶ್ವರದ ಹಿರಿಯರ ಆಶ್ರಮದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಿದ್ದರು.

    ತಾಯಿ ಬದುಕಿನ ವಿವಿಧ ಹಂತದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನೂರರ ಹರೆಯದ ತಾಯಿ ಕೇಕ್ ಕಟ್ ಮಾಡೋವಾಗ ಗ್ಲೋರಿಯಾ ತಾನೇ ಬರೆದ ಕವನ ಹೇಳಿ ಸಂಭ್ರಮ ಪಟ್ಟಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಗ್ಲೋರಿಯಾ ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಓದಿ: 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕಳು, ಮರಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಅಜ್ಜಿ

    ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾಯಿ ಹುಟ್ಟು ಹಬ್ಬ ಆಚರಿಸಲೆಂದು ಕಳೆದ ಎರಡು ವಾರದ ಹಿಂದೆಯಷ್ಟೇ ಗ್ಲೋರಿಯಾ ಕೆನಡಾದಿಂದ ಮಂಗಳೂರಿಗೆ ಆಗಮಿಸಿದ್ದರು.

  • ಮಗನೊಂದಿಗೆ ಎಸ್‍ಎಸ್‍ಎಲ್ ಸಿ ಪರೀಕ್ಷೆ ಬರೆದ 44 ವರ್ಷದ ತಾಯಿ

    ಮಗನೊಂದಿಗೆ ಎಸ್‍ಎಸ್‍ಎಲ್ ಸಿ ಪರೀಕ್ಷೆ ಬರೆದ 44 ವರ್ಷದ ತಾಯಿ

    ಚಂಡೀಗಢ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ, ಇದಕ್ಕೆ ಸಾಕ್ಷಿ  44 ವರ್ಷದ ತಾಯಿಯೊಬ್ಬರು ತನ್ನ 10 ನೇ ತರಗತಿಯ ಮಗನೊಂದಿಗೆ ಬೋರ್ಡ್ ಪರೀಕ್ಷೆ ಬರೆಯಲು ಹಾಜರಾಗಿರುವ ಘಟನೆ ಪಂಜಾಬ್‍ನ ಲೂಧಿಯಾನದಲ್ಲಿ ನಡೆದಿದೆ.

    44 ವರ್ಷದ ರಂಜನಿ ಬಾಲಾ ಮಗನೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಾರೆ. ಇವರು 1989ರಲ್ಲಿ 9ನೇ ತರಗತಿ ಮುಗಿಸಿದ್ದರು. ಕೆಲವೊಂದು ತೊಂದರೆಗಳಿಂದ ಮುಂದಿನ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ. ಅದೇ ವೇಳೆ ರಂಜನಿ ಅವರು ಮದುವೆಯಾಗಿ ಸಂಸಾರಿಕ ಜೀವನದಲ್ಲಿ ಮಗ್ನರಾಗಿದ್ದರು.

    ಈ ಹಿಂದೆ ಅನೇಕ ಸಲ ನನ್ನ ಪತಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಂಡಿದ್ದರು. ನಾನು ಮೂವರು ಮಕ್ಕಳ ತಾಯಿಯಾಗಿದ್ದ ಕಾರಣ ಪರೀಕ್ಷೆ ಬರೆಯಲು ಮನಸ್ಸು ಮಾಡಲಿಲ್ಲ. ನಾನು ಸಿವಿಲ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದೀಗ ನನ್ನ ಮಗನೊಂದಿಗೆ ಸೇರಿ ಅಭ್ಯಾಸ ಮಾಡಿದ್ದೆ. ಆದ್ದರಿಂದ ಈ ಬಾರಿ ಆತನೊಂದಿಗೆ ಪರೀಕ್ಷೆ ಸಹ ಬರೆಯುತ್ತಿದ್ದೇನೆ ಎಂದು ರಂಜನಿ ಅವರು ಹೇಳಿದ್ದಾರೆ.

    ನಾನು ಶಿಕ್ಷಣವನ್ನು ಮುಂದುವರೆಸಿ ಪದವಿ ಪೂರ್ಣಗೊಳಿಸುತ್ತೇನೆ. ಜೊತೆಗೆ ಹಿಂದಿ ಅಥವಾ ಯಾವುದೇ ವಿಷಯದಲ್ಲಿ ಪದವೀಧರೆಯಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ರಂಜನಿ ಅವರ ಈ ಕಾರ್ಯಕ್ಕೆ ಪತಿ, ಮಕ್ಕಳು, ಅತ್ತೆ ಎಲ್ಲರೂ ಬೆಂಬಲ ಸೂಚಿಸಿದ್ದಾರೆ.

  • 6 ತಿಂಗಳ ಮಗುವನ್ನು 60 ಸಾವಿರಕ್ಕೆ ಮಾರಿದ ತಾಯಿ- ದುಃಖದಿಂದ ಸಾವನ್ನಪ್ಪಿದ್ದ 5 ವರ್ಷದ ಸಹೋದರಿ

    6 ತಿಂಗಳ ಮಗುವನ್ನು 60 ಸಾವಿರಕ್ಕೆ ಮಾರಿದ ತಾಯಿ- ದುಃಖದಿಂದ ಸಾವನ್ನಪ್ಪಿದ್ದ 5 ವರ್ಷದ ಸಹೋದರಿ

    ಲಕ್ನೋ: ಹಣಕ್ಕಾಗಿ ಹೆತ್ತ ತಾಯಿಯೊಬ್ಬಳು ತನ್ನ 6 ತಿಂಗಳ ಮಗುವನ್ನು ಮಾರಿದ ವಿಚಾರವನ್ನು ತಿಳಿದು ಮಗುವಿನ ಸಹೋದರಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಕ್ನೋನಲ್ಲಿ ನಡೆದಿದೆ.

    ಪಾಯಲ್ ಮಗುವನ್ನು ಮಾರಿದ ತಾಯಿ. ಬಾಜಾರ್‍ಕಾಲಾ ಇಲಾಖೆಯಲ್ಲಿರುವ ಪಾಯಲ್‍ನ ಪತಿ ಅನಿಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಪಾಯಲ್ ಬೇರೆಯವರ ಮನೆಗೆಲಸಕ್ಕೆ ಮಾಡಿಕೊಂಡಿದ್ದಳು. ಮನೆಗೆಲಸಕ್ಕೆ ಹೋಗುವಾಗ ಪಾಯಲ್ ತನ್ನ 6 ತಿಂಗಳ ಮಗು ಓಂನನ್ನು ಹತ್ತಿರದಲ್ಲಿರುವ ತನ್ನ ತವರು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದಳು.

    ಕಳೆದ ಬುಧವಾರ ಪಾಯಲ್ ಮನೆಗೆಲಸ ಮುಗಿಸಿ ಹಿಂತಿರುಗುವಾಗ ಆಕೆಯ ಮಗು ಓಂ ಜೊತೆಯಲ್ಲಿ ಇರಲಿಲ್ಲ. ಇದನ್ನು ಗಮನಿಸಿದ ಪತಿ ಅನಿಲ್ ಹಾಗೂ ಮಗಳು ಮೇಘಾ ಪಾಯಲ್‍ನನ್ನು ಪ್ರಶ್ನಿಸಿದ್ದರು. ಆದರೆ ಪಾಯಲ್ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದ್ದಳು. ನಂತರ ಮರುದಿನವೂ ಕೂಡ ಪಾಯಲ್ ತನ್ನ ಮಗುವನ್ನು ಜೊತೆಗೆ ಕರೆದುಕೊಂಡು ಬರಲಿಲ್ಲ ಎಂದು ವರದಿಯಾಗಿದೆ.

    ತನ್ನ ತಮ್ಮ ಓಂ ತಾಯಿ ಜೊತೆ ಬರಲಿಲ್ಲ ಎಂದು ತಿಳಿದ ಆತನ ಸಹೋದರಿ ಮೇಘಾ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಮೇಘಾ ತನ್ನ ತಮ್ಮನ ಜೊತೆ ಹೆಚ್ಚಿನ ಕಾಲ ಕಳೆಯುತ್ತಿದ್ದು, ಆತ ಹಿಂತಿರುಗದ ಕಾರಣ ಮೇಘಾಳ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದಳು. ಮೇಘಾ ಆರೋಗ್ಯದ ಸ್ಥಿತಿ ತುಂಬ ಹದ್ದಗೆಟ್ಟಿದ್ದರೂ ಪಾಯಲ್ ಮಗನನ್ನು ಮನೆಗೆ ಕರೆದುಕೊಂಡು ಬಾರದನ್ನು ನೋಡಿ ಪತಿ ಅನಿಲ್‍ಗೆ ಅನುಮಾನ ಮೂಡಿದೆ. ಆದರೆ ಮಗಳ ಆರೋಗ್ಯದ ಕಡೆ ಹೆಚ್ಚು ಗಮನ ಇದಿದ್ದರಿಂದ ಅನಿಲ್ ತನ್ನ ಪತ್ನಿ ಪಾಯಲ್‍ಗೆ ಹೆಚ್ಚು ಪ್ರಶ್ನಿಸಲಿಲ್ಲ ಎಂದು ಹೇಳಲಾಗಿದೆ.

    ಮೇಘಾ ಆರೋಗ್ಯದ ಸ್ಥಿತಿ ತುಂಬ ಹದಗೆಟ್ಟು ಶುಕ್ರವಾರ ಸಾವನ್ನಪ್ಪಿದ್ದಳು. ನಂತರ ಅನಿಲ್ ತನ್ನ ಪತ್ನಿ ವಿರುದ್ಧ ಮಗ ಕಾಣೆಯಾಗಿರುವುದರ ಬಗ್ಗೆ ಕೇಸ್ ದಾಖಲಿಸಿದ್ದರು. ಬಳಿಕ ಪೊಲೀಸರು ಪಾಯಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗನನ್ನು 60 ಸಾವಿರ ರೂ. ಗೆ ಅಶು ಎಂಬಾತನಿಗೆ ಮಾರಾಟ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾಳೆ. ಮಗುವಿನ ದೇಹಕ್ಕೆ ಹಚ್ಚೆ ಹಾಕಿ ಮಾರಾಟ ಮಾಡಿದ್ದು, ಈಗ ಇಬ್ಬರನ್ನು ಪೊಲೀಸರು ಬಂಧಿಸಿ ಮಗುವನ್ನು ಅನಿಲ್ ವಶಕ್ಕೆ ನೀಡಿದ್ದಾರೆ.

  • ಪತ್ನಿ ಬಿಟ್ಟು ಹೋಗಿದ್ದಕ್ಕೆ ಕಾಮತೃಷೆಗಾಗಿ ಮಗಳನ್ನೇ ಬಳಸಿಕೊಂಡ ಪಾಪಿ ತಂದೆ!

    ಪತ್ನಿ ಬಿಟ್ಟು ಹೋಗಿದ್ದಕ್ಕೆ ಕಾಮತೃಷೆಗಾಗಿ ಮಗಳನ್ನೇ ಬಳಸಿಕೊಂಡ ಪಾಪಿ ತಂದೆ!

    ಚಂಡೀಗಢ: ಲೂಧಿಯಾನದಲ್ಲಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 32 ವರ್ಷದ ಕಾರ್ಮಿಕನೊಬ್ಬನನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

    ಬಾಲಕಿಯ ತಾಯಿಗೆ ವರ್ಷದ ಹಿಂದೆಯಷ್ಟೇ ಬೇರೆ ಮದುವೆಯಾಗಿದ್ದು, ತನ್ನ ಎರಡನೇಯ ಪತಿಯ ಜೊತೆ ಆಕೆ ವಾಸವಿದ್ದರು. ಇದೀಗ ಬಾಲಕಿ, ತಂದೆ ತನ್ನೊಂದಿಗೆ ಮೆರೆದ ವಿಕೃತಿಯನ್ನು ತಾಯಿ ಬಳಿ ಹೇಳಿಕೊಂಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

    ದುಷ್ಟ ತಂದೆ ಸ್ಕೂಟರಿನ ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಕಳೆದ ಒಂದು ವರ್ಷಗಳಿಂದ ಕಾರ್ಮಿಕನಾಗಿದ್ದಾನೆ. ತನ್ನ ಪತ್ನಿ ಎರಡನೇ ಮದುವೆ ಮಾಡಿಕೊಂಡ ಬಳಿಕ ಈತ 8 ವರ್ಷದ ಹಾಗೂ 2 ವರ್ಷದ ಹೆಣ್ಣು ಮಕ್ಕಳೊಂದಿಗೆ ಉತ್ತರಪ್ರದೇಶದ ಕಾನ್ಪುರದಲ್ಲಿ ವಾಸವಾಗಿದ್ದನು. ಇದೀಗ ಮಗಳ ಮೇಲಿನ ಅತ್ಯಾಚಾರವನ್ನು ಖಂಡಿಸಿದ ತಾಯಿ ಕೂಡಲೇ ತನ್ನ ಮಗಳ ಜೊತೆ ಪೊಲೀಸ್ ಠಾಣೆಗೆ ತೆರಳಿ ಮಾಜಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧಿಸಿದಂತೆ ಆರೋಪಿ ತಂದೆಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು 379(ಲೈಂಗಿಕ ದೌರ್ಜನ್ಯ), ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆಗೆ ಬೆಳಕಿಗೆ ಬಂದಿದ್ದು ಹೇಗೆ?: ಕಳೆದ 9 ವರ್ಷದ ಹಿಂದೆ ನಾನು ಆರೋಪಿಯನ್ನು ವರಿಸಿದ್ದೇನೆ. ನಮಗಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಆ ಬಳಿಕ ಆತ ನನಗೆ ಮತ್ತು ನನ್ನಿಬ್ಬರು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಲು ಆರಂಭಿಸಿದ್ದನು. ಹೀಗಾಗಿ ಕಳೆದ ವರ್ಷ ಆತ ನನ್ನಿಂದ ದೂರವಾಗಿ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ಕಾನ್ಪುರದ ಗ್ರಾಮವೊಂದರಲ್ಲಿ ನೆಲೆಸಿದ್ದನು. ಆದ್ರೂ ಕೆಲ ತಿಂಗಳ ಕಾಲ ನಾನು ಆತನಿಗಾಗಿ ಕಾದೆ. ನಂತರ ಬೇರೊಬ್ಬನನ್ನು ಮದುವೆಯಾಗಿ ಹೊಸ ಜೀವನ ನಡೆಸಲು ಆರಂಭಿಸಿದೆನು ಅಂತ ಬಾಲಕಿಯ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಮಾರ್ಕೆಟ್ ನಲ್ಲಿ ನನ್ನ ಮಾಜಿ ಪತಿಯನ್ನು ಭೇಟಿಯಾಗಿದೆ. ಈ ವೇಳೆ ತನ್ನ ಮಕ್ಕಳನ್ನು ನೋಡುವ ಆಸೆ ವ್ಯಕ್ತಪಡಿಸಿದೆ. ಅದಕ್ಕೆ ಆತ ಒಪ್ಪಿಗೆ ಸೂಚಿಸಿದ. ಹೀಗೆ ಮಕ್ಕಳನ್ನು ನೋಡಲು ಹೋದವಳು ಅವರನ್ನು ತನ್ನೊಂದಿಗೆ ಕರೆದುಕೊಂಡು ಬಂದಿದ್ದೆ. ಈ ವೇಳೆ ದೊಡ್ಡ ಮಗಳು ಆಕೆಯ ಮೇಲೆ ತಂದೆ ನಡೆಸಿದ ಅತ್ಯಾಚಾರವನ್ನು ನನಗೆ ತಿಳಿಸಿದ್ದಾಳೆ. ಮಗಳ ಮೇಲೆ ಅತ್ಯಾಚಾರವೆಸಗಿದ್ದಲ್ಲದೇ, ಆ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳದಂತೆ ಹೊಡೆದಿದ್ದಾರೆ ಮತ್ತು ಬೆದರಿಕೆ ಕೂಡ ಹಾಕಿದ್ದಾನೆ ಅಂತ ಮಗಳು ತಿಳಿಸಿರುವುದಾಗಿ ಹೇಳಿದ್ದಾರೆ.

    ನನ್ನ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತೇನೆ. ಅವರಿಗೆ ಶಿಕ್ಷಣವನ್ನು ಕೊಡಿಸುತ್ತೇನೆ ಅಂತ ಹೇಳಿದ್ದಾರೆ. ಮಕ್ಕಳು ಆರೋಪಿ ಜೊತೆ ಇದ್ದರೆ ಆತ ಶಾಲೆಗೆ ಕಳುಹಿಸಲ್ಲ. ಹೀಗಾಗಿ ನಾನೇ ಅವರನ್ನು ನೋಡಿಕೊಳ್ಳುತ್ತೇನೆ ಅಂತ ತಾಯಿ ಹೇಳಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ತಾಯಿ ದೂರು ನೀಡುತ್ತಿದ್ದಂತೆಯೇ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆಯಿಂದಲೇ ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಯೇ ಇಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಸಲು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಕೂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಅಂತ ಸಹಾಯ ಪೊಲೀಸ್ ಇನ್ಸ್ ಪೆಕ್ಟರ್ ರಾಜ್ ವಂತ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಹೆತ್ತ ತಾಯಿಯ ಎದೆಗೆ ಜಾಡಿಸಿ ಒದ್ದ ನೀಚ ಮಗ!

    ಬಳ್ಳಾರಿ: 9 ತಿಂಗಳು ಕಾಲ ಹೊಟ್ಟೆಯಲ್ಲಿ ಹೊತ್ತುಕೊಂಡು ಹೆತ್ತು ಸಾಕಿದ ಮಗನೇ ತಾಯಿ ಎದೆಗೆ ಜಾಡಿಸಿ ಒದ್ದ ಅಮಾನವೀಯ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

    ಹೊಸಪೇಟೆಯ ಸರ್ದಾರ್ ಮೊಹಲ್ಲಾದಲ್ಲಿ ಮಹಮ್ಮದ್ ಗಫೂರ್ ಎಂಬಾತನೇ ತಾಯಿ ಎದೆಗೆ ಒದ್ದ ಪಾಪಿ ಮಗ. ಈತ ಆಸ್ತಿಗಾಗಿ ತನ್ನ 70 ವರ್ಷದ ಹೆತ್ತ ತಾಯಿಯನ್ನು ಒದ್ದು ವಿಕೃತಿ ಮೆರೆದಿದ್ದಾನೆ. ಕಳೆದ ಆರು ತಿಂಗಳಿನಿಂದ ಈ ದುಷ್ಟಮಗ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹಿಂಸಿಸುತ್ತಿದ್ದನು ಎಂಬುದಾಗಿ ತಿಳಿದುಬಂದಿದೆ.

    ಸೋಮವಾರ ಮತ್ತೆ ಆಸ್ತಿಗಾಗಿ ಮಗ ತಗಾದೆ ತೆಗೆದಿದ್ದು, ತಾಯಿ ಮಾಬುನ್ನಿಯನ್ನು ಕಾಲಿನಿಂದ ಒದಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

    ಸದ್ಯ ಮಗನಿಂದ ಹಲ್ಲೆಗೆ ಒಳಗಾದ ಪುತ್ರನ ವಿರುದ್ಧ ತಾಯಿ ಹೊಸಪೇಟೆ ಬಡಾವಣೆ ಠಾಣೆಗೆ ದೂರು ದಾಖಲು ಮಾಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ-ತಾಯಿಯ ಸ್ಥಿತಿ ಕಂಡು ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸಪ್ ನಲ್ಲಿ ಹರಿಬಿಟ್ಟ ಮಗ!

    ಅಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ-ತಾಯಿಯ ಸ್ಥಿತಿ ಕಂಡು ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸಪ್ ನಲ್ಲಿ ಹರಿಬಿಟ್ಟ ಮಗ!

    ಹಾವೇರಿ: ಅಂಬುಲೆನ್ಸ್ ವಾಹನದಲ್ಲಿ ಆಕ್ಸಿಜನ್ ಕೊರತೆ ಆರೋಪಿಸಿ ತಾಯಿಯ ಸ್ಥಿತಿ ಕಂಡು ಕಣ್ಣೀರಿಟ್ಟ ಪುತ್ರ ವಿಡಿಯೋ ಚಿತ್ರೀಕರಣ ಮಾಡಿ ಫೇಸ್ ಬುಕ್ ಹಾಗೂ ವಾಟ್ಸಪ್ ಹರಿಬಿಟ್ಟ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

    ಹಾವೇರಿ ಜಿಲ್ಲಾಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುತ್ತಿದ್ದ ವಾಹನದಲ್ಲಿ ಈ ಘಟನೆ ನಡೆದಿದೆ. ಮುಮ್ತಾಜ್(56) ಜಿಲ್ಲೆಯ ಬ್ಯಾಡಗಿ ಪಟ್ಟಣದ ನಿವಾಸಿಯಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹುಬ್ಬಳ್ಳಿ ಆಸ್ಪತ್ರೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಆಕ್ಸಿಜನ್ ಕೊರತೆ ಕಾಣಿಸಿದ್ದರಿಂದ ಬೇರೆ ಅಂಬುಲೆನ್ಸ್ ಗಳಿಗೆ ಫೋನ್ ಮಾಡಿ ಪರಶುರಾಮ ಆಕ್ಸಿಜನ್ ಕೇಳಿದ್ದಾರೆ.

    ಆಕ್ಸಿಜನ್ ಕೊರತೆ ಆಗಿರೋದು ಕಂಡು ತನ್ನ ಮೊಬೈಲ್ ನಲ್ಲಿ ತಾಯಿಯ ಸ್ಥಿತಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಗ ಹರಿಬಿಟ್ಟಿದ್ದಾರೆ. ತಾಯಿಯ ಸ್ಥಿತಿ ಚಿತ್ರೀಕರಿಸಿದ ನಂತರ ಸೆಲ್ಫಿ ವಿಡಿಯೋ ಮೂಲಕ ಅಂಬುಲೆನ್ಸ್ ದುಃಸ್ಥಿತಿ ವಿರುದ್ಧ ಕಣ್ಣೀರು ಹಾಕಿ ಇಂತಹ ಸ್ಥಿತಿ ಯಾವ ತಾಯಿಗೆ ಬರಬಾರದು ಇದನ್ನು ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಆಕ್ಸಿಜನ್ ಕೊರತೆ ನಡುವೆಯೂ ಹುಬ್ಬಳ್ಳಿಯ ಕಿಮ್ಸ್ ಗೆ ಮುಮ್ತಾಜ್ ರನ್ನು ಸೇಫ್ ಆಗಿ ಒಯ್ದು ಚಿಕಿತ್ಸೆಗಾಗಿ ಅಂಬುಲೆನ್ಸ್ ಸಿಬ್ಬಂದಿ ದಾಖಲು ಮಾಡಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ದಾಖಲಾದ ಮುಮ್ತಾಜ್ ಅವರಿಗೆ ಚಿಕಿತ್ಸೆ ಪಡೆದುಕೊಂಡು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಮಾತನಾಡಿದ ಸಿಬ್ಬಂದಿ ಯಾವುದೇ ತೊಂದರೆ ಇಲ್ಲದೆ ಕಿಮ್ಸ್ ಆಸ್ಪತ್ರೆ ದಾಖಲಿಸಿದ್ದೇವೆ. ಆಕ್ಸಿಜನ್ ಕೊರತೆ ಇತ್ತು ಎಂಬುದನ್ನು ಅಂಬುಲೆನ್ಸ್ ಸಿಬ್ಬಂದಿ ಅಲ್ಲಗಳೆದಿದ್ದಾರೆ.