Tag: mother

  • ಮಾನಸಿಕ ಖಿನ್ನತೆಗೊಳಗಾಗಿರೋ ಮಗಳನ್ನು 12 ವರ್ಷದಿಂದ ಸರಪಳಿಯಿಂದ ಬಂಧಿಸಿದ ಮಹಿಳೆ!

    ಮಾನಸಿಕ ಖಿನ್ನತೆಗೊಳಗಾಗಿರೋ ಮಗಳನ್ನು 12 ವರ್ಷದಿಂದ ಸರಪಳಿಯಿಂದ ಬಂಧಿಸಿದ ಮಹಿಳೆ!

    ಚಿತ್ರದುರ್ಗ: ಮಾನಸಿಕವಾಗಿ ಖಿನ್ನತೆಗೊಳಗಾಗಿರೋ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗದೇ ಸರಪಳಿಯಿಂದ ಬಂಧಿಸಿರೋ ಅಮಾನವೀಯ ಕೃತ್ಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಕೋನಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಅಪ್ರಾಪ್ತ ವಯಸ್ಸಿಗೆ ಸರಸ್ವತಿಯ ವಿವಾಹವಾಗಿದ್ದು, ಕೌಟಂಬಿಕ ಕಲಹದಿಂದ ಈಕೆಯ ಪತಿ ಬೊಮ್ಮಣ್ಣ ದೂರವಾಗಿ ಮತ್ತೊಂದು ವಿವಾಹವಾಗಿದ್ದನು. ಹೀಗಾಗಿ ಅಂದಿನಿಂದ ಮಾನಸಿಕ ಖಿನ್ನತೆಗೊಳಗಾಗಿ ಗ್ರಾಮದ ಜನರೊಂದಿಗೆ ಜಗಳಕ್ಕಿಯುವ ವಿಚಿತ್ರ ಮನೋಸ್ಥಿತಿಯನ್ನು ರೂಢಿಸಿಕೊಂಡಿದ್ದ.

    21 ವರ್ಷದ ಸರಸ್ವತಿಗೆ ಆಕೆಯ ತಾಯಿ ಚಿಕಿತ್ಸೆ ಕೊಡಿಸಲಾಗದೇ, ಮನನೊಂದು ಕಳೆದ 12 ವರ್ಷಗಳಿಂದ ಈಕೆಯ ಕಾಲಿಗೆ ಸರಪಳಿ ಮೂಲಕ ಮರದ ತುಂಡೊಂದನ್ನು ಬಿಗಿದು ಎಲ್ಲೂ ಓಡಾಡದಂತೆ ಶಿಕ್ಷೆ ವಿಧಿಸಿದ್ದಾರೆ. ಆದ್ರೆ ಈವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇವರ ಸಂಕಷ್ಟ ಅರಿತು ಚಿಕಿತ್ಸೆಗೆ ಸಹಕರಿಸದಿರೋದು ದುರದೃಷ್ಟಕರ.

  • ತಾಯಿ ಸ್ನಾನ ಮಾಡ್ತಿದ್ದಾಗ ಇಣುಕಿ ನೋಡಿದ್ದ ಗೆಳೆಯನ ಕೊಂದೇ ಬಿಟ್ಟ!

    ತಾಯಿ ಸ್ನಾನ ಮಾಡ್ತಿದ್ದಾಗ ಇಣುಕಿ ನೋಡಿದ್ದ ಗೆಳೆಯನ ಕೊಂದೇ ಬಿಟ್ಟ!

    ಹೈದರಾಬಾದ್: ತನ್ನ ತಾಯಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಿದನೆಂದು ಸಿಟ್ಟುಗೊಂಡಿದ್ದ ವ್ಯಕ್ತಿಯೋರ್ವ ಗೆಳೆಯನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸೆರ್ಲಿಂಗಪಳ್ಳಿ ಎಂಬಲ್ಲಿ ನಡೆದಿದೆ.

    23 ವರ್ಷದ ಯುವಕ ತನ್ನ ಗೆಳೆಯನಿಂದಲೇ ಹತ್ಯೆಯಾಗಿದ್ದಾನೆ. ಕಳೆದ ರಾತ್ರಿ ಕುಡಿದ ಮತ್ತಿನಲ್ಲಿದ್ದ ವೇಳೆ ಯುವಕನ ಕತ್ತು ಸೀಳಿದ್ದಾನೆ.

    ಘಟನೆಯಿಂದ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆತನ ಸಹೋದರ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಇತ್ತ ಗೆಳೆಯನ ಕುತ್ತಿಗೆಗೆ ಚೂರಿಯಿಂದ ಇರಿದ ಬಳಿಕ ಕ್ಯಾಬ್ ಡ್ರೈವರ್ ಆಗಿರೋ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಅಲ್ಲದೇ ವಿಚಾರಣೆಯ ವೇಳೆ ಯುವಕ ತನ್ನ ತಾಯಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಕದ್ದು ನೋಡಿದ್ದಾನೆ. ಕಳೆದ ತಿಂಗಳು ಆತ ನೋಡಿರುವುದನ್ನು ನಾನು ಗಮನಿಸಿದ್ದೆನು. ಇದರಿಂದ ಸಿಟ್ಟುಗೊಂಡು ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

  • ಮೊಬೈಲ್‍ನಲ್ಲಿ ಮಗನ ಜೊತೆ ಮಾತನಾಡುತ್ತಲೇ ನದಿಗೆ ಹಾರಿ ತಾಯಿ ಆತ್ಮಹತ್ಯೆ!

    ಮೊಬೈಲ್‍ನಲ್ಲಿ ಮಗನ ಜೊತೆ ಮಾತನಾಡುತ್ತಲೇ ನದಿಗೆ ಹಾರಿ ತಾಯಿ ಆತ್ಮಹತ್ಯೆ!

    ಶಿವಮೊಗ್ಗ: ಗಂಡನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಮಹಿಳೆಯೊಬ್ಬರು ತನ್ನ ಮಗನ ಜೊತೆ ಮಾತನಾಡುತ್ತಲೇ ತುಂಬಿ ಹರಿಯುತ್ತಿದ್ದ ತುಂಗಾ ನದಿಗೆ ಹಾರಿದ ಘಟನೆ ಶಿವಮೊಗ್ಗದ ಕೋರ್ಪಳಯ್ಯ ಛತ್ರದ ಬಳಿ ನಡೆದಿದೆ.

    ಸಾವಿತ್ರಮ್ಮ(58) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇಂದು ಬೆಳ್ಳಗ್ಗೆ 11 ಗಂಟೆಯ ಹೊತ್ತಿಗೆ ಮಗ ಕಿರಣ್‍ಗೆ ಫೋನ್ ಮಾಡಿ, ಪತಿ ಇಲ್ಲದೇ ಬದುಕಲು ನನಗೆ ಇಷ್ಟವಿಲ್ಲ. ನೀವೆಲ್ಲರೂ ಚೆನ್ನಾಗಿ ಬಾಳಿ- ಬದುಕಿ ಎಂದು ಮಾತನಾಡುತ್ತಲೇ ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗ ಕಿರಣ್ ಹಾಗೂ ಆತನ ಗೆಳೆಯರು ತಕ್ಷಣ ತುಂಬಿ ಹರಿಯುತ್ತಿದ್ದ ತುಂಗಾ ನದಿ ದಡಕ್ಕೆ ಬಂದು ಶೋಧಿಸಿದ್ದಾರೆ.

    ಒಂದು ವರ್ಷದ ಹಿಂದೆ ಸಾವಿತ್ರಮ್ಮ ಅವರ ಪತಿ ಮೃತಪಟ್ಟಿದ್ದರು. ಈ ಬಗ್ಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಕ್ಕಾಗಿ ಶೋಧ ನಡೆದಿದ್ದು, ನದಿ ತುಂಬಿ ಹರಿಯುತ್ತಿದ್ದ ಕಾರಣ ಶೋಧ ಕಾರ್ಯಕ್ಕೆ ಹಿನ್ನಡೆಯಾಗಿದೆ.

  • ಮೊಬೈಲ್‍ನಲ್ಲಿ ಗೇಮ್ ಆಡ್ಬೇಡ ಅಂದಿದ್ದೆ ತಪ್ಪಾಯ್ತು – ಅಂಕಲ್‍ನನ್ನೇ ಇರಿದು ಕೊಲೆ ಮಾಡಿದ್ರು ಅಮ್ಮ, ಮಗ

    ಮೊಬೈಲ್‍ನಲ್ಲಿ ಗೇಮ್ ಆಡ್ಬೇಡ ಅಂದಿದ್ದೆ ತಪ್ಪಾಯ್ತು – ಅಂಕಲ್‍ನನ್ನೇ ಇರಿದು ಕೊಲೆ ಮಾಡಿದ್ರು ಅಮ್ಮ, ಮಗ

    ಬೆಂಗಳೂರು: ಸದಾ ಮೊಬೈಲ್ ಅಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಸ್ನೇಹಿತನ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆ ಯುವಕ ತನ್ನ ತಾಯಿಯೊಂದಿಗೆ ಸೇರಿ ಆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಸೋಲದೇವನ ಹಳ್ಳಿಯಲ್ಲಿ ನಡೆದಿದೆ.

    ಬಷೀರ್ ಅಹಮ್ಮದ್ (47) ಕೊಲೆಯಾದ ವ್ಯಕ್ತಿಯಾಗಿದ್ದು, ರೋಷನ್ (20) ಹಾಗೂ ಆತನ ತಾಯಿ ಜೈನಾಬಿ (42) ಕೊಲೆ ಮಾಡಿದ ಆರೋಪಿಗಳು. ಸಣ್ಣ ವಿಚಾರಕ್ಕೆ ಕೊಲೆ ಮಾಡಿ ಅಮ್ಮ, ಮಗ ಇಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

    ಏನಿದು ಪ್ರಕರಣ?
    ನಗರದ ಸೋಲದೇವನಹಳ್ಳಿಯಲ್ಲಿ ವಾಸಿಸುತ್ತಿದ್ದ ಬಷೀರ್ ಅಹಮ್ಮದ್ ಹಾಗೂ ಇಲಿಯಾಜ್ ಕಳೆದ 15 ವರ್ಷಗಳಿಂದ ಪ್ರಾಣ ಸ್ನೇಹಿತರು. ವಿಜಯಪುರ ಮೂಲದ ಬಷೀರ್ ರನ್ನು ಇಲಿಯಾಜ್ ತನ್ನ ಮನೆಯಲ್ಲೇ ಇಟ್ಟುಕೊಂಡು ಕೆಲಸ ಮಾಡುತ್ತಾ ಒಟ್ಟಿಗೆ ವಾಸಿಸುತ್ತಿದ್ದರು.

    ಕಳೆದ ಜೂನ್ 30 ರಂದು ಇಲಿಯಾಜ್ ಕೆಲಸದ ನಿಮಿತ್ತ ಬೇರೊಂದು ಊರಿಗೆ ಹೋಗಿದ್ದು, ಈ ವೇಳೆ ಇಲಿಯಾಜ್ ಮಗ ರೋಷನ್ ಸದಾ ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚು ಬೆಳೆಸಿಕೊಂಡು ಕಾಲ ಕಳೆಯುವುದನ್ನು ಕಂಡು ಬುದ್ಧಿವಾದ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಮಗ ರೋಷನ್ ಆತನ ತಾಯಿ ಜೈನಾಬಿ ಸೇರಿ ಬಷೀರ್ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

    ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ್ರು: ಬಷೀರ್ ನನ್ನು ಕೊಲೆ ಮಾಡಿದ ಆರೋಪಿಗಳು ಬಳಿಕ ಮೃತ ದೇಹವನ್ನು ಕಾರಿನಲ್ಲಿ ಮೈಸೂರಿನ ಕೆಆರ್ ನಗರದ ಬಳಿ ತೆಗೆದುಕೊಂಡು ಹೋಗಿ ನದಿಯೊಂದಕ್ಕೆ ಎಸೆದು ಬಂದಿದ್ದರು. ಆದರೆ ಇದಾದ ಎರಡು ದಿನದ ನಂತರ ಯಾರಿಗೂ ಅನುಮಾನ ಬರದೇ ಇರಲಿ ಎಂದು ತಾವೇ ಹೋಗಿ ಪೊಲೀಸ್ ಠಾಣೆಯಲ್ಲಿ ಬಷೀರ್ ನಾಪತ್ತೆಯಾಗಿದ್ದಾಗಿ ದೂರು ದಾಖಲಿಸಿದ್ದರು.

    ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣೆ ಪೊಲೀಸರು ಅಮ್ಮ ತನಿಖೆ ನಡೆಸಿದ್ದರು. ಪ್ರಕರಣದ ತನಿಖೆ ವೇಳೆ ಕೊಲೆಯಾದ ದಿನ ಆರೋಪಿ ರೋಷನ್ ಹಾಗೂ ಜೈನಾಬಿ ಮೊಬೈಲ್ ನೇಟ್ ವರ್ಕ್ ಲೋಕೇಷನ್ ಕೆಆರ್ ನಗರಕ್ಕೆ ಹೋಗಿದ್ದರ ಬಗ್ಗೆ ಸುಳಿವು ದೊರೆತಿತ್ತು. ಅಲ್ಲದೇ ಆರೋಪಿಗಳಿಬ್ಬರ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿದ ಕುರಿತು ಬಾಯ್ಬಿಟ್ಟಿದ್ದಾರೆ.

    ಸ್ನೇಹಿತ ಬಷೀರ್ ನನ್ನು ಸ್ವತಃ ಪುತ್ರ ಹಾಗೂ ಪತ್ನಿಯೇ ಕೊಲೆ ಮಾಡಿದ ವಿಷಯ ತಿಳಿದ ಇಲಿಯಾಜ್ ಶಾಕ್ ಆಗಿದ್ದು. ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಜೈಲು ಸೇರಿದ್ದಾರೆ.

  • ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಅಮ್ಮ ನಾನು ಬದುಕಬೇಕು, ನಿಮ್ಮನ್ನೆಲ್ಲಾ ಸಾಕಬೇಕು ಎನ್ನುವ ಬಾಲಕಿ ಹೃದಯ ಶಸ್ತ್ರಚಿಕಿತ್ಸೆಗೆ ಬೇಕಿದೆ ನೆರವು

    ಬೆಂಗಳೂರು: ಮಗಳಿಗೆ ಇರುವ ಆರೋಗ್ಯ ಸಮಸ್ಯೆಯಿಂದಾಗಿ ತಾಯಿ ಕಣ್ಣೀರು ಹಾಕುತ್ತಲೇ ದೇವರಿಗೆ ಮೊರೆ ಹೋಗುತ್ತಿದ್ದಾರೆ. ಈ ಕುಟುಂಬವು ನಗರದ ಎಲೆಕ್ಟ್ರಾನಿಕ್ ಸಿಟಿಯ ಕೂಡ್ಲಗೇಟ್‍ನಲ್ಲಿ ವಾಸವಾಗಿದೆ.

    13 ವರ್ಷದ ಜ್ಯೋತಿ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಜ್ಯೋತಿಗೆ ತಂದೆ ಇಲ್ಲ, ತಾಯಿ ಸೆಲ್ವಮ್ಮ ಮಾತ್ರ ಇರುವುದು. ಎಲ್ಲ ಮಕ್ಕಳಂತೆ ಶಾಲೆಗೆ ಹೋಗಿ, ಆಟ ಆಡಿ, ಪಾಠ ಕಲಿಯುವ ಆಸೆ. ಆದರೆ ಈಕೆಗೆ ಹುಟ್ಟಿನಿಂದಲೇ ಹೃದಯದಲ್ಲಿ ರಂಧ್ರವಿದೆ. ಹೀಗಾಗಿ ಉಸಿರಾಟದ ತೊಂದರೆಯಿದ್ದು ಓಡಾಡಲು, ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ.

    ಮನೆಯಲ್ಲಿ ಕಡುಬಡತನವಿದ್ದು, ತಾಯಿ ಸೆಲ್ವಮ್ಮ ಅವರಿವರ ಮನೆ ಕೆಲಸ ಮಾಡಿಕೊಂಡು ವಯಸ್ಸಾದ ತಂದೆ ತಾಯಿಯನ್ನು ಸಾಕುತ್ತಿದ್ದಾರೆ. ಜ್ಯೋತಿ ಹೃದಯದಲ್ಲಿ ರಂಧ್ರವಿರುವುದು ಗೊತ್ತಾಗಿನಿಂದ ನಿತ್ಯವೂ ಕಣ್ಣೀರಲ್ಲೆ ಕಾಲ ಕಳೆಯುತ್ತಿದ್ದಾರೆ.

    ಬಾಲಕಿ ಜ್ಯೋತಿಯ ಹೃದಯದಲ್ಲಿ ರಂಧ್ರವಿರುವುದಕ್ಕೆ ಚನ್ನೈ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಿದ ಮೇಲೂ ಮಗಳು ಉಳಿಯುತ್ತಾಳೆ ಅಂತಾ ಹೇಳಲಿಕ್ಕೆ ಆಗುವುದಿಲ್ಲ. ಅಲ್ಲದೆ ದುಬಾರಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರಂತೆ. ಇದರಿಂದ ಭಯಗೊಂಡ ತಾಯಿ ಸೆಲ್ವಮ್ಮ ಅವರು ಸರಿಯಾದ ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಮರುಗುತ್ತಿದ್ದಾರೆ.

    “ಅಮ್ಮ ನಾನು ಬದುಕಬೇಕು. ಓದಬೇಕು. ಓದಿ ನಿಮ್ಮನ್ನೆಲ್ಲಾ ಸಾಕಬೇಕು” ಎಂದು ಬಾಲಕಿ ಜ್ಯೋತಿ ಕಣ್ಣೀರು ಹಾಕಿ ಹೇಳುವುದನ್ನು ಕಂಡು ತಾಯಿ ಜೀವನ ಮರುಗಿದೆ. ಆದಾಗಿ ನೊಂದ ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೋಡಿ ನನ್ನ ಮಗಳಿಗೆ ಚಿಕಿತ್ಸೆ ಕೊಡಿಸಿ ಅಂತಾ ಅಳಲು ತೊಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=pkzEJsH8wgU

  • 9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    9 ತಿಂಗಳ ಕಂದಮ್ಮನಿಗಾಗಿ ಮೂತ್ರಪಿಂಡ ದಾನ ಮಾಡಿದ ಮಹಾತಾಯಿ!

    ಮುಂಬೈ: 9 ತಿಂಗಳ ಮಗುವಿಗೆ ತಾಯಿಯ ಮೂತ್ರಪಿಂಡ ಜೋಡಣೆ ಶಸ್ತ್ರಚಿಕಿತ್ಸೆಯನ್ನು ಮುಂಬೈಯ ವೊಕಾರ್ಡ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ.

    ಪಾಲ್ಗರ್ ಜಿಲ್ಲೆಯ ಗೋಲ್ವಾಡ್ ಗ್ರಾಮದ ನಿವಾಸಿಗಳಾದ ವಿವೇಕ್ ಹಾಗೂ ನಿಶಾ ದಂಪತಿಯ 9 ತಿಂಗಳ ಮೊದಲನೇ ಗಂಡು ಮಗು ಸದ್ಯ ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದೆ ಎಂದು ವೊಕಾರ್ಡ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಈ ವೇಳೆ ಮಾತನಾಡಿದ ವೊಕಾರ್ಡ್ ಆಸ್ಪತ್ರೆಯ ಮುಖ್ಯ ವೈದ್ಯರಾದ ಅನುರಾಗ್ ಶ್ರೀಮಾಲ್, ಇದು ಭಾರತದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದ್ದು, ತಜ್ಞವೈದ್ಯರಿಂದ ಸುಮಾರು 14 ಗಂಟೆಗಳ ಕಾಲ 9 ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಗೊಳಿಸಿದ್ದೇವೆ. ಮಗುವಿಗೆ ತಾಯಿಯ ಮೂತ್ರಪಿಂಡವನ್ನು ಜೋಡಣೆಮಾಡುವುದು ನಮಗೆ ಸವಾಲಿನ ಸಂಗತಿಯಾಗಿತ್ತು ಎಂದು ತಿಳಿಸಿದರು.

    ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಮಗುವಿನ ಜೀವಕ್ಕೆ ಆಪತ್ತು ಬರಬಹುದಾಗಿದ್ದರಿಂದ ತೀವ್ರ ನಿಗಾ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಮಗು ತುಂಬಾ ಗಟ್ಟಿಯಾಗಿದ್ದು, ತನ್ನ 9ನೇ ತಿಂಗಳಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಸ್ಪಂದಿಸಿದೆ. ಮೂತ್ರಪಿಂಡ ಬದಲಾವಣೆಗಾಗಿ ತಾಯಿಯ ಮೂತ್ರಪಿಂಡದ ತೂಕವನ್ನು 260 ಗ್ರಾಂಗಳಿಂದ 210 ಗ್ರಾಂಗೆ ಇಳಿಸಿ ಜೋಡಿಸಲಾಗಿದೆ. ಈ ಶಸ್ತ್ರಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸಿದ್ದು ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಗಳಾಗುವುದಿಲ್ಲ ಎಂದು ತಿಳಿಸಿದ್ದಾರೆ.

    ದಂಪತಿಯ ಮಗು ಹುಟ್ಟಿನಿಂದಲೇ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿಗೆ ಮೂತ್ರಪಿಂಡ ಕಸಿ ಮಾಡುವ ವಿಚಾರವನ್ನು ವೈದ್ಯರು ಪೋಷಕರಿಗೆ ತಿಳಿಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಶಸ್ತ್ರಚಿಕಿತ್ಸೆಯನ್ನು ಪೋಷಕರು ಭರಿಸುವಲ್ಲಿ ಶಕ್ತರಾಗಿರಲಿಲ್ಲ. ವೊಕಾರ್ಡ್ ಆಸ್ಪತ್ರೆಯು ಮುಂದೆ ಬಂದು ಮಗುವಿನ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.

    ಮಗುವಿಗೆ ಮೂತ್ರಪಿಂಡದ ಅವಶ್ಯಕತೆ ಹಿನ್ನೆಲೆಯಲ್ಲಿ ದಂಪತಿಗಳು ತಮ್ಮದೇ ಮೂತ್ರಪಿಂಡವನ್ನು ನೀಡಲು ಮುಂದಾಗಿದ್ದರು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ತಾಯಿಯ ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ಹೇಳಿದಾಗ, ತಾಯಿಯು ತನ್ನ ಪುಟ್ಟ ಕಂದಮ್ಮನಿಗಾಗಿ ಹಿಂದೆಮುಂದು ನೋಡದೆ ಶಸ್ತ್ರಚಿಕಿತ್ಸೆಗೆ ಸಿದ್ಧರಾಗಿದ್ದರು. ಈ ಶಸ್ತ್ರಚಿಕಿತ್ಸೆಗಾಗಿ ತಮ್ಮ ತೂಕವನ್ನು ಸಹ ಇಳಿಸಿಕೊಂಡಿದ್ದರು.

  • ಕಲ್ಲಿನಿಂದ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

    ಕಲ್ಲಿನಿಂದ ಹೊಡೆದು ಮಗನಿಂದಲೇ ತಾಯಿಯ ಬರ್ಬರ ಹತ್ಯೆ!

    ಧಾರವಾಡ: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನು ಮಗನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದಲ್ಲಿ ನಡೆದಿದೆ.

    ಶಂಕ್ರವ್ವ ನಿಗದಿ(68) ಕೊಲೆಯಾದ ಮಹಿಳೆ. ಮಗ ವೀರಭದ್ರಪ್ಪ ನಿಗದಿ(35) ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿಯಲು ಹಣ ಕೊಡುವಂತೆ ತಾಯಿಯನ್ನು ಮಗ ಪ್ರತಿ ದಿನ ಕಾಡುತ್ತಿದ್ದನು. ಹಣ ಕೊಡದ ವೇಳೆ ತಾಯಿಯ ಜೊತೆ ಪ್ರತಿ ದಿನ ಜಗಳ ಮಾಡುತ್ತಿದ್ದನು.

    ಕಳೆದ ಎರಡು ದಿನಗಳ ಹಿಂದೆಯೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ-ಮಗನ ಮಧ್ಯೆ ಗಲಾಟೆ ನಡೆದಿದೆ. ಕೊನೆಗೆ ಹಣ ಕೊಡಲು ತಾಯಿ ಒಪ್ಪದಿದ್ದಾಗ ಸಿಟ್ಟಿನಿಂದ ಮಗ ವೀರಭದ್ರಪ್ಪ ತಾಯಿಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಜಗಳ ಬಿಡಿಸಲು ಬಂದ ಹೆಂಡತಿ ಬಸವ್ವಾ ತಲೆಗೆ ಅದೇ ಕಲ್ಲಿನಿಂದ ಹೊಡೆದಿದ್ದಾನೆ. ಸದ್ಯ ಬಸವ್ವಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾಯಿಯನ್ನು ಕೊಲೆ ಮಾಡಿರೋ ಮಗ ವೀರಭದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

  • 6 ವರ್ಷದ ಮಗನಿಗೆ ಸ್ನಾನ ಮಾಡಿಸೋವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ತಾಯಿ!

    6 ವರ್ಷದ ಮಗನಿಗೆ ಸ್ನಾನ ಮಾಡಿಸೋವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ತಾಯಿ!

    ಚಂಡಿಗಢ: ತಾಯಿಯೊಬ್ಬಳು ತನ್ನ 6 ವರ್ಷದ ಮಗನನ್ನು ಸ್ನಾನ ಮಾಡಿಸುವಾಗ ಡ್ರ್ಯಾಗರ್ ನಿಂದ ಹೊಡೆದು ಕೊಂದ ಘಟನೆ ಪಂಜಾಬ್‍ನ ಬಟಿಂದ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆ ಬಾಯಿ ಮಾತಿ ದಾಸ್‍ನಗರದ ನಿವಾಸಿಯಾಗಿದ್ದು, ತನಗಿದ್ದ ಒಬ್ಬನೇ ಮಗನನ್ನು ಡ್ರ್ಯಾಗರ್ ನಿಂದ ಹೊಡೆದು ಕೊಂದಿದ್ದಾಳೆ ಎಂದು ಬಟಿಂದದ ಸ್ಟೇಷನ್ ಹೌಸ್ ಅಧಿಕಾರಿ ರಾಶ್‍ಪಲ್ ಸಿಂಗ್ ತಿಳಿಸಿದ್ದಾರೆ.

    ಡ್ರ್ಯಾಗರ್ ಹೊಡೆತದಿಂದ ಬಾಲಕನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಲ್ಲದೇ ತಾಯಿ ತನ್ನ ಮಗನನ್ನು ಏಕೆ ಕೊಂದಿದ್ದಾಳೆ ಎಂಬ ಸತ್ಯ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮಹಿಳೆಯನ್ನು ಬಂಧಿಸಿ ಆಕೆಯ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಘಟನೆಗೆ ಸಂಬಂಧಪಟ್ಟ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ. ಇನ್ನೂ ಮಹಿಳೆ ತನ್ನ ಮಗನನ್ನು ಏಕೆ ಕೊಂದಳು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ರಾಶ್‍ಪಲ್ ಸಿಂಗ್ ತಿಳಿಸಿದ್ದಾರೆ.

  • ಬಾಡಿಗೆ ಆಸೆಗೆ ಹೆತ್ತವರನ್ನೇ ಹೊರಹಾಕಿದ ಮಗ- ಮನೆಯಲ್ಲಿದ್ದ ವಸ್ತುಗಳ ಧ್ವಂಸ

    ಬಾಡಿಗೆ ಆಸೆಗೆ ಹೆತ್ತವರನ್ನೇ ಹೊರಹಾಕಿದ ಮಗ- ಮನೆಯಲ್ಲಿದ್ದ ವಸ್ತುಗಳ ಧ್ವಂಸ

    ಹಾಸನ: ಬಾಡಿಗೆ ಹಣದ ಆಸೆಗೆ ಮಗನೇ ತಂದೆ-ತಾಯಿಯನ್ನು ಮನೆ ಖಾಲಿ ಮಾಡುವಂತೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸಗೊಳಸಿರುವ ಘಟನೆ ಹಾಸದಲ್ಲಿ ನಡೆದಿದೆ.

    ನಗರದ ವಲ್ಲಭಾಯಿ ರಸ್ತೆಯ ನಿವಾಸಿಗಳಾದ ಕೃಷ್ಣಪ್ಪ ಮತ್ತು ಗಂಗಮ್ಮ ಹಲ್ಲೆಗೊಳಗಾಗಿರುವ ವೃದ್ಧ ದಂಪತಿ. ಕೃಷ್ಣಪ್ಪ ಮತ್ತು ಗಂಗಮ್ಮ ತಮ್ಮ ಇಬ್ಬರು ಮಕ್ಕಳಿಗೂ ಒಂದೊಂದು ಮನೆಯನ್ನು ನೀಡಿ ತಾವು ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು.

    ಹಿರಿಯ ಮಗ ನಾಗೇಶ್ ಮನೆಯನ್ನು ಬಾಡಿಗೆಗೆ ನೀಡಿದ್ರೆ ಒಂದಿಷ್ಟು ಹಣ ಸಿಗುತ್ತೆ ಎಂಬ ದುರಾಸೆಯಿಂದ ತಂದೆ-ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೆಳಿಸಿ ಕಿರುಕುಳ ನೀಡಿದ್ದಾನೆ. ದಿನನಿತ್ಯ ಕುಡಿದು ಬಂದು ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಮಗನಿಂದ ನಮಗೆ ರಕ್ಷಣೆ ನೀಡಿ ಎಂದು ವೃದ್ಧ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.

  • ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಬೇಕಿದೆ ನೆರವು!

    ದಾವಣಗೆರೆ: ಎಸ್‍ಎಸ್‍ಎಲ್‍ಸಿಯಲ್ಲಿ 94% ಅಂಕ ಪಡೆದಿರುವ ಚನ್ನಗಿರಿ ತಾಲೂಕಿನ ದೇವನಹಳ್ಳಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಓದುವ ಕನಸು ಕಾಣುತ್ತಿದ್ದರೂ ಬಡತನ ಅಡ್ಡಿಯಾಗಿದೆ.

    ದೇವನಹಳ್ಳಿ ಗ್ರಾಮದ ಹನುಮಂತಯ್ಯ ಹಾಗೂ ಮಂಜುಳಾಬಾಯಿಯರ ಪುತ್ರನಾಗಿರುವ ಚೇತನ್ ಬಡತನ ಎನ್ನುವ ಬೆಂಕಿಯಲ್ಲಿ ಅರಳಿದ ಪ್ರತಿಭೆಯಾಗಿದ್ದಾನೆ. ಇಡೀ ಶಾಲೆಗೆ ಓದಿನಲ್ಲಿ ಪ್ರಥಮನಾಗಿರುವ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದಾರೆ. ಅವರು ದುಡಿದರೇ ಮಾತ್ರ ಕುಟುಂಬಕ್ಕೆ ಒಂದು ತುತ್ತು ಅನ್ನ ಇಲ್ಲವಾದರೆ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ. ಆದರೆ ಓದಿ ಓಳ್ಳೆಯ ಕೆಲಸ ಪಡೆದು ತಾಯಿಯನ್ನು ಸುಖವಾಗಿ ನೋಡಿಕೊಳ್ಳುವ ಆಸೆ ಈ ಹುಡುಗನದ್ದು. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಈ ಪ್ರತಿಭಾವಂತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಿದೆ.

     

    ತಂದೆ ವೃತ್ತಿಯಲ್ಲಿ ಬಸ್ ಕಂಡಕ್ಟರ್, ತಾಯಿ ಮಂಜುಳಾಬಾಯಿ ಗ್ರಾಮದ ನವೋದಯ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ತಂದೆಗೆ ಕೆಲವು ವರ್ಷಗಳ ಹಿಂದೆ ಅಪಘಾತವಾಗಿ ಸೊಂಟ ಮುರಿದು ಹೋಗಿದೆ. ಅಂದಿನಿಂದ ತಾಯಿಯೇ ನವೋದಯ ಶಾಲೆಯಲ್ಲಿ ಕೆಲಸ ಮಾಡಿ ಬಂದ 6 ಸಾವಿರ ರೂಪಾಯಿ ಸಂಬಳದಿಂದ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಇದರ ಫಲವಾಗಿ ಮಗ ಚೇತನ್ ಛಲದಿಂದ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಶೇಕಡಾ 94% ಅಂಕ ಪಡೆದು ಜಿಲ್ಲೆಗೆ 3ನೇ ರ‍್ಯಾಂಕ್ ತಂದು ಕೊಟ್ಟಿದ್ದಾನೆ.

    ಬಡತನದ ನಡೆಯುವೆಯೂ ಚೇತನ್ ಓದಿ ಉತ್ತಮ ಅಂಕ ಪಡೆದಿದ್ದನ್ನು ನೋಡಿ ವ್ಯಕ್ತಿಯೊಬ್ಬರು ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುವುದಾಗಿ ಹೇಳಿ ಶೃಂಗೇರಿ  ಬಿಜಿಎಸ್ ಸೈನ್ಸ್ ಪಿಯು ಕಾಲೇಜಿಗೆ ಪ್ರಥಮ ಪಿಯುಸಿ ಪಿಸಿಎಂಬಿಗೆ ಅಡ್ಮಿಷನ್ ಮಾಡಿಸಿದ್ದರು. ಆದರೆ ಶುಲ್ಕ ಪಾವತಿ ಮಾಡದೇ ಕೈಕೊಟ್ಟಿದ್ದಾರೆ. ಆದಾಗಿ ತಾಯಿ ತನ್ನ ಮಾಂಗಲ್ಯ ಮಾರಿ ಶುಲ್ಕ ಪಾವತಿ ಮಾಡಿ ಓದಿಸಿದ್ದಾರೆ. ಮಗ ಚೇತನ್ ಪ್ರಥಮ ಪಿಯುಸಿ ಪಿಸಿಎಂಬಿಯಲ್ಲಿ ಶೇಕಡಾ 94% ಅಂಕ ಗಳಿಸಿದ್ದಾನೆ. ಆದರೆ ಈಗ ದ್ವಿತೀಯ ಪಿಯುಸಿಗೆ ಪ್ರವೇಶ ಶುಲ್ಕ ಭರಿಸಲಾಗದೇ ತಾಯಿ ಕಷ್ಟಕ್ಕೆ ಸಿಲುಕಿದ್ದಾರೆ.

    ಚೆನ್ನಾಗಿ ಓದಿ ಕೆಲಸಕ್ಕೆ ಸೇರಿಕೊಂಡು ಪೋಷಕರನ್ನು ನೋಡಿಕೊಳ್ಳಬೇಕು, ತಂಗಿಯನ್ನು ಚೆನ್ನಾಗಿ ಓದಿಸಬೇಕೆಂಬ ಕನಸು ಕಂಡಿರುವ ಚೇತನ್‍ಗೆ ಬಡತನ ಅಡ್ಡಿಯಾಗಿದೆ. ಮಗಳು ಎಸ್‍ಎಸ್‍ಎಲ್‍ಸಿ ಓದುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು ಸಹಾಯ ಮಾಡಿ ಎಂದು ತಾಯಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    https://www.youtube.com/watch?v=yFZYGNtdb1o