Tag: mother

  • ಕೊಡಗು ಗುಡ್ಡ ಕುಸಿತದ ವೇಳೆ ಸಾವನ್ನೇ ಗೆದ್ದು ಬಂದ ಅಮ್ಮ-ಮಗ! ವಿಡಿಯೋ ನೋಡಿ

    ಕೊಡಗು ಗುಡ್ಡ ಕುಸಿತದ ವೇಳೆ ಸಾವನ್ನೇ ಗೆದ್ದು ಬಂದ ಅಮ್ಮ-ಮಗ! ವಿಡಿಯೋ ನೋಡಿ

    – 12 ಕಿ.ಮೀ ದೂರದವರೆಗೂ ತಾಯಿಯನ್ನು ಹೊತ್ತುಕೊಂಡು ಸಾಗಿದ!

    ಬೆಂಗಳೂರು: ಭಾರೀ ಮಳೆಯಿಂದಾಗಿ ತತ್ತರಿಸಿ ಹೋದ ಕೊಡಗಿನ ಜಲಪ್ರಳಯದಿಂದ ವ್ಯಕ್ತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ 12 ಕಿ.ಮೀ ದೂರದವೆರೆಗೂ ತಾಯಿಯನ್ನು ಹೆಗಲ ಮೇಲೆ ಹೊತ್ತು ತಂದು ಇದೀಗ ಸಾವನ್ನೇ ಗೆದ್ದು ಬಂದಿದ್ದಾರೆ.

    ಮಡಿಕೇರಿ ತಾಲೂಕು ಮಕ್ಕಂದೂರು ಮೇಘತಾಳ ಗ್ರಾಮದವರಾದ ಮಡ್ಲಂಡ ತಮ್ಮಯ್ಯ, ತಾಯಿ 90 ವರ್ಷದ ಮುತ್ತವ್ವ ಹಾಗೂ ಪತ್ನಿ ವಿನೀತ ಜಲ ಕಂಟಕದಿಂದ ಬದುಕಿ ಬಂದಿದ್ದಾರೆ.

    ನಡೆದಿದ್ದು ಏನು?
    ಭಾರೀ ಮಳೆಯಿಂದಾಗಿ ತಮ್ಮಯ್ಯ ಅವರ ಮನೆ ಹಾಗೂ 15 ಎಕರೆ ಜಮೀನು ನಾಶವಾಗಿದ್ದು, ಇದನ್ನು ಕಣ್ಣಾರೆ ಕಂಡ ತಮ್ಮಯ್ಯ ಹಾಗೂ ಪತ್ನಿ ವಿನೀತ, ತಾಯಿ ಮುತ್ತವ್ವ ಕುಟುಂಬಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಓಡಲು ಪ್ರಾರಂಭಿಸಿದ್ದರು. ಈ ವೇಳೆ ತಮ್ಮಯ್ಯ ಹಾಗೂ ವಿನೀತ ಹಿರಿಯ ವಯಸ್ಸಿನ ಮುತ್ತವ್ವರನ್ನು ರಕ್ಷಿಸಲು ಓಡಿ ಹೋಗಿ ಕಾಲೂರಿನಿಂದ 15 ಕಿ.ಮೀ ನಡೆದುಕೊಂಡು ಹೆಬ್ಬೆಟುಗೆರೆ ಎಂಬ ಸ್ಥಳಕ್ಕೆ ಬಂದು ತಲುಪಿದ್ದಾರೆ. ಇಲ್ಲಿಯೂ ಭಾರೀ ಪ್ರಮಾಣದಲ್ಲೇ ಕುಸಿತ ಸಂಭವಿಸಿದ್ದು, ಊರಿನವರ ನೆರವಿನಿಂದ ವಿನೀತ ಅವರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

    ತಮ್ಮಯ್ಯವರು ತಾಯಿ ಮುತ್ತವ್ವ ಅವರೊಂದಿಗೆ ತಮ್ಮ ಮನೆಯಿಂದ ಬೆಟ್ಟವನ್ನು ಹತ್ತಿ ಒಂದು ದಿನ ಬೆಟ್ಟದ ತುದಿಯಲ್ಲೇ 150 ಜನರೊಂದಿಗೆ ತಂಗಿದ್ದರು. ಆದರೆ ಅಲ್ಲಿಯೂ ಗುಡ್ಡ ಕುಸಿತವಾದ ಕಾರಣ ಎಲ್ಲರೂ ಬೆಟ್ಟದಿಂದ ಹೊರಡಲು ನಿರ್ಧರಿಸಿ, ಹೆದ್ದಾರಿಗೆ ಬಂದಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ನಲ್ಲಿ ರಕ್ಷಣಾ ಕಾರ್ಯ ನಡೆಸಿದರೂ ಬೆಟ್ಟದ ಮೇಲೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಸಮಸ್ಯೆ ಎದುರಾಗಿತ್ತು.

    ಅಲ್ಲಿಂದ ರಸ್ತೆಗಳು ಅಸ್ತವ್ಯಸ್ತವಾಗಿದ್ದರಿಂದ ತಮ್ಮಯ್ಯ, ತಾಯಿ ಮುತ್ತವ್ವ ರನ್ನು ಸುಮಾರು 12 ಕಿ.ಮೀ ದೂರದವರೆಗೂ ಹೆಗಲ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಮಗನ ಕಷ್ಟವನ್ನು ಕಂಡ ಮತ್ತವ್ವ ತನ್ನನ್ನು ಬಿಟ್ಟು ಬೀಡು ನೀನಾದರೂ ಹೋಗಿ ಬದುಕಿಕೋ ಎಂದು ಹೇಳಿದರು ತಮ್ಮಯ್ಯ ಅವರು ಮಳೆಯಲ್ಲೇ ದಾರಿ ಮಾಡಿಕೊಂಡು ಅಮ್ಮನನ್ನು ರಕ್ಷಿಸಿದ್ದಾರೆ.

    ಈ ವೇಳೆ ಸುಭಾಸ್ ಎಂಬವರು ತಮ್ಮಯ್ಯ ಅವರ ಸ್ಥಿತಿ ಕಂಡು ತಾಯಿ ಮುತ್ತವ್ವರನ್ನು ಮೈತ್ರಿಯಾ ಹಾಲ್ ಎಂಬ ಪುರ್ನವಸತಿ ಕೇಂದ್ರಕ್ಕೆ ಕರೆದುಕೊಂಡು ಹೋಗುವ ಬದಲು ತಮ್ಮ ಮನೆಗೆ ಕರೆದುಕೊಂಡು ಹೋಗಿ ಮುತ್ತವ್ವ ಅವರಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಬಹುಬೇಗ ಬಂದ ಪತ್ನಿ ವಿನೀತ ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

    ತಮ್ಮಯ್ಯ ಅವರು ಮಡಿಕೇರಿಗೆ ಬಂದ ಬಳಿಕ ಬೇರೆ ಅವರಿಂದ ಫೋನ್ ಪಡೆದು ಬೆಂಗಳೂರಿನಲ್ಲಿದ್ದ ಮತ್ತವ್ವ ಅವರ ತಮ್ಮ ಚಂಗಪ್ಪ ಚಂಡಿರಕರೂರುರಿಗೆ ಕರೆಮಾಡಿ ತಾವಿರುವ ಪರಿಸ್ಥಿತಿಯನ್ನು ಹೇಳಿದ್ದು ಬಳಿಕ ಬೆಂಗಳೂರಿಗೆ ವಾಹನ ವ್ಯವಸ್ಥೆ ಪಡೆದು ಚಂಗಪ್ಪ ಮನೆ ತಲುಪಿದ್ದಾರೆ.

    ಇದೇ ರೀತಿ ಮತ್ತೊಬ್ಬರೂ ಶಾರದ ಎನ್ನುವವರು ಮಡಿಕೇರಿಯ ಇಂದ್ರನಗರದ ನಿವಾಸಿಯಾಗಿದ್ದು, ಪ್ರವಾಹದಿಂದ ಬದುಕಿ ಬಂದಿದ್ದು ಪುರ್ನವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

    https://www.youtube.com/watch?v=eGDVxLWkqao

    https://www.youtube.com/watch?v=QNRET4_ZoP4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಗೂ ತಾಯಿ ಸಂಪರ್ಕಕ್ಕೆ ಸಿಕ್ಕ ಮಗಳು!

    ಕೊನೆಗೂ ತಾಯಿ ಸಂಪರ್ಕಕ್ಕೆ ಸಿಕ್ಕ ಮಗಳು!

    ಮಂಗಳೂರು: ಜೋಡುಪಾಲದ 2ನೇ ಮೊಣ್ಣಂಗೇರಿ ನಿವಾಸಿ 60ರ ವೃದ್ಧೆ ಗಿರಿಜಾ ಎಂಬವರು ನನ್ನ ಪರಿಸ್ಥಿತಿ ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದು, ಕೊನೆಗೂ ಈಗ ಮಗಳು ತಾಯಿ ಸಂಪರ್ಕಕ್ಕೆ ಸಿಕ್ಕಿದ್ದಾರೆ.

    ಜೋಡುಪಾಲ ದುರಂತದಲ್ಲಿ ಗಿರಿಜಾ ಅವರು ತನ್ನ ಮಗಳಿಗಾಗಿ ಬೇಡಿಕೊಂಡಿದ್ದರು. ಗಿರಿಜಾ ಭೂ ಕುಸಿತದಲ್ಲಿ ಮನೆ ಕಳೆದುಕೊಂಡು ಏಕಾಂಗಿಯಾಗಿದ್ದರು. ಸದ್ಯ ಮಗಳು ಲತಾಮಣಿ ಮಾಧ್ಯಮಗಳ ವರದಿಯನ್ನು ನೋಡಿ ತಾಯಿಯನ್ನು ಸಂಪರ್ಕಿಸಿದ್ದಾರೆ.

    ಲತಾಮಣಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹೋಮ್ ನರ್ಸ್ ಆಗಿದ್ದಾರೆ. ಅಲ್ಲದೇ ಅವರ ತಾಯಿ ಗಿರಿಜಾ ಕೊಡಗಿನ ಗಡಿಭಾಗ ಸುಳ್ಯ ತಾಲೂಕಿನ ಸಂಪಾಜೆಯ ಪರಿಹಾರ ಕೇಂದ್ರದಲ್ಲಿದ್ದಾರೆ. ಇದನ್ನೂ ಓದಿ: ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು

    ಏನಿದು ಘಟನೆ?
    ಗಿರಿಜಾರ ಮಗಳು ಲತಾಮಣಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಕೆಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿಹೇಳಿ ಎಂದು ಮನವಿ ಮಾಡಿಕೊಂಡಿದ್ದರು. ಮೊಣ್ಣಂಗೇರಿಯ ಮನೆಯಲ್ಲಿ ನಾನೊಬ್ಬಳೇ ವಾಸವಿದ್ದು, ನೋಡನೋಡುತ್ತಲೇ ಕಲ್ಲು ಬಂಡೆಗಳು ನೀರಿನೊಂದಿಗೆ ಉರುಳಿ ಬಂದು ತನ್ನ ಮನೆಯನ್ನು ಸೀಳಿಕೊಂಡು ಹೋಯಿತು. ಕೆಲಹೊತ್ತಿನಲ್ಲಿ ಕಾಡಿನಿಂದ ಆನೆಗಳು ಘೀಳಿಟ್ಟವು. ಬೆಳಗಿನವರೆಗೂ ಅಲ್ಲೆ ಪಕ್ಕದಲ್ಲಿ ಕೂತು, ಆರು ಗಂಟೆಗೆ ಇಳಿದು ಬಂದಿದ್ದೇನೆ ಎಂದು ಹೇಳಿದ್ದರು.

    ನನ್ನ ಮಗಳು ಲತಾಮಣಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾಳೆ. ಲತಾಳನ್ನು ಸಂಪರ್ಕಿಸಲು ಮೊಬೈಲ್ ನಂಬರ್ ಗೊತ್ತಿಲ್ಲ. ಏನು ಕೆಲಸ ಅನ್ನೋದೂ ಗೊತ್ತಿಲ್ಲ. ನನಗೆ ಹೀಗಾಗಿದ್ದು ಮಗಳಿಗೆ ಗೊತ್ತಿರಲಿಕ್ಕಿಲ್ಲ ಅಂತಾ ಅಲವತ್ತುಕೊಂಡಿದ್ದರು. ಸದ್ಯಕ್ಕೆ ಗಿರಿಜಾ ಸಂಪಾಜೆಯ ಪರಿಹಾರ ಕೇಂದ್ರದಲ್ಲಿದ್ದು, ಬೆಂಗಳೂರಿನ ಮಂದಿ ನನ್ನ ಪರಿಸ್ಥಿತಿಯನ್ನು ಮಗಳಿಗೆ ತಿಳಿಸಲು ಸಾಧ್ಯವೇ ಅಂತಾ ಕೇಳಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಅಮ್ಮನ ತೀರ್ಥಯಾತ್ರೆ ಆಸೆ-ಸ್ಕೂಟರ್‌ನಲ್ಲೇ ಜೀವ ತುಂಬಿದ ಆಧುನಿಕ ಶ್ರವಣಕುಮಾರ

    ಧಾರವಾಡ: ತಂದೆ ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ತೀರ್ಥ ಯಾತ್ರೆ ಮಾಡಿದ ಶ್ರವಣಕುಮಾರ ಬಗ್ಗೆ ನಾವು ಕೇಳಿದ್ದೆವೆ. ಆದರೆ ಇಂದಿನ ಕಾಲದಲ್ಲಿ ಅಂತಹ ಮಕ್ಕಳು ಇಲ್ಲ ಎನ್ನುವರೇ ಹೆಚ್ಚು. ಆದರೆ ಇಲ್ಲೊಬ್ಬರು ತಮ್ಮ ತಾಯಿಯ ಆಸೆ ಪೂರ್ಣಗೊಳಿಸಲು ಸ್ಕೂಟರ್ ಮೇಲೆಯೇ ತೀರ್ಥ ಯಾತ್ರೆ ನಡೆಸಿದ್ದಾರೆ.

    ಹೌದು, ಮೂಲತಃ ಮೈಸೂರಿನವರಾದ ಡಿ ಕೃಷ್ಣಕುಮಾರ ಸದ್ಯ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತಾಯಿ ಚುಡರತ್ನ ಅವರ ಆಸೆಯಂತೆ ತೀರ್ಥಯಾತ್ರೆ ಮಾಡುತ್ತಿದ್ದಾರೆ. ದಕ್ಷಿಣ ಭಾರತದ 6 ರಾಜ್ಯಗಳ ಪ್ರವಾಸ ಮುಗಿಸಿದ್ದು, ಇಂದು ಧಾರವಾಡಕ್ಕೆ ಆಗಮಿಸಿದ್ದರು.

    ತಂದೆ ಸ್ಕೂಟರ್ ಮೇಲೆಯೇ ಸವಾರಿ: ವಿಶೇಷ ಎಂದರೆ ಕೃಷ್ಣಕುಮಾರ್ ಅವರು ತಂದೆಯ ಬಜಾಜ್ ಚೇತಕ್ ಸ್ಕೂಟರ್ ನಲ್ಲೇ ತೀರ್ಥಯಾತ್ರೆ ನಡೆಸಿದ್ದು, ಇಬ್ಬರು ಸದ್ಯ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಇವರಿಗೆ 20 ವರ್ಷಗಳ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಕೂಡ ಇವರಿಗೆ ಸಾಥ್ ನೀಡಿದೆ.

    ತಂದೆ ಇದ್ದಾಗ ಈ ಪ್ರವಾಸ ಮಾಡಲು ಆಗಲಿಲ್ಲ, ಆದರೆ ತಂದೆ ನಿಧನ ಬಳಿಕ ತಾಯಿಯ ಇಚ್ಛೆಯಂತೆ ಯಾತ್ರೆ ಆರಂಭ ಮಾಡಿದ್ದೇನೆ ಎಂದು ಕೃಷ್ಣಕುಮಾರ್ ತಿಳಿಸಿದ್ದಾರೆ. ಜನವರಿ 16 ರಿಂದ ಆರಂಭವಾಗಿರುವ ಇವರ ತೀರ್ಥಯಾತ್ರೆ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಧಾರವಾಡದಿಂದ ಬೆಂಗಳೂರಿಗೆ ಪ್ರಯಾಣ ಮುಂದುವರಿಸಿರುವ ಇವರು ಹಲವು ದೇವಸ್ಥಾನಗಳಿಗೆ ಭೇಟಿ ನೀಡಲಿದ್ದಾರೆ. ಇನ್ನು ಪ್ರಯಾಣ ವೇಳೆ ಹಣ್ಣು ಹಂಪಲು ಸೇವಿಸುವ ಇವರು ದೇವಾಲಯ, ಮಠಗಳಲ್ಲಿ ನೀಡುವ ದೇವರ ಪ್ರಸಾದವನ್ನು ಸೇವಿಸುತ್ತಾ ಪ್ರಯಾಣ ಬೆಳೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅನು ಪ್ರಭಾಕರ್

    ಸ್ವಾತಂತ್ರ್ಯ ದಿನಾಚರಣೆಯಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅನು ಪ್ರಭಾಕರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅನು ಪ್ರಭಾಕರ್ ಸ್ವಾತಂತ್ರ್ಯ ದಿನಾಚರಣೆಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ರಘು ಮುಖರ್ಜಿ ಅವರು ಈ ಕುರಿತು ಫೋಟೋವನ್ನ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಮಗು ಹಾಗೂ ಅನು ಪ್ರಭಾಕರ್ ಇಬ್ಬರು ಆರೋಗ್ಯವಾಗಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/BmfhstbgzDy/?hl=en&taken-by=raghumukherjee

    ರಘು ಅವರ ಪೋಸ್ಟ್ ಹಲವು ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೆಲ ಅಭಿಮಾನಿಗಳು ಮಗುವಿನ ಫೋಟೋ ನಿರೀಕ್ಷೆಯಲ್ಲಿದ್ದೇವೆ ಎಂದು ಬೇಡಿಕೆ ಇಟ್ಟಿದ್ದಾರೆ.

    ಈ ಹಿಂದೆ ಪತ್ನಿ ಅನು ಪ್ರಭಾಕರ್ ಗರ್ಭಿಣಿ ಆಗಿದ್ದ ವಿಚಾರವನ್ನು ಹಂಚಿಕೊಂಡಿದ್ದ ರಘು ಮುಖರ್ಜಿ, ನೀವು ಖಂಡಿತ ಟೆರಿಫಿಕ್ ಅಮ್ಮ ಆಗಲಿದ್ದೀರಿ ಎಂದು ಟ್ವೀಟ್ ಮಾಡಿದ್ದರು. ಅಂದಹಾಗೇ ನಟಿ ಅನು ಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ಅವರು 2016 ಏಪ್ರಿಲ್ 25 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಇಬ್ಬರಿಗೂ ಇದು ಎರಡನೇ ಮದುವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗು ಅತ್ತಿದ್ದಕ್ಕೆ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ!

    ಮಗು ಅತ್ತಿದ್ದಕ್ಕೆ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ!

    ಮುಂಬೈ: ತನ್ನ ಮಗು ನಿರಂತರವಾಗಿ ಅಳುತ್ತದೆ ಎಂಬ ಒಂದೇ ಕಾರಣಕ್ಕೆ ತಾಯಿಯೊಬ್ಬಳು ತನ್ನ 6 ತಿಂಗಳ ಕಂದಮ್ಮನನ್ನೇ ಕೊಂದಿರುವ ಹೃದಯವಿದ್ರಾವಕ ಘಟನೆ ಭಿವಂಡಿ ತಾಲೂಕಿನ ಕವಾಡ ಪಂಚಾಯ್ತಿ ವ್ಯಾಪ್ತಿಯ ಛಾಪಶಿಪಾಡಿ ಎಂಬಲ್ಲಿ ನಡೆದಿದೆ. ಮಗು ಹುಟ್ಟಿದಾಗಿನಿಂದಲೂ ಅನಾರೋಗ್ಯದಿಂದ ಕೂಡಿದ್ದು, ನಿರಂತರವಾಗಿ ಅಳುತ್ತಿತ್ತು. ಮಗುವಿನ ಅಳು ಶಬ್ಧ ಕೇಳಲಾರದೇ ತಾಯಿಯೇ ಕೊಂದಿದ್ದಾಳೆಂದು ಹೇಳಲಾಗುತ್ತಿದೆ.

    ಆದಿವಾಸಿ ಜನಾಂಗದ ಕಲ್ಪನಾ ಗಾಯಕರ್ (25) ಮಗುವನ್ನ ಕೊಂದ ಕ್ರೂರಿ ತಾಯಿ. ಮಹಿಳೆಗೆ ಇಬ್ಬರು ಮಕ್ಕಳಿದ್ದು, 6 ತಿಂಗಳ ವೃಷಭ್ ಹುಟ್ಟಿನಿಂದಲೇ ಶೀತ, ಕೆಮ್ಮು, ತೀವ್ರ ಜ್ವರದಿಂದ ಬಳಲುತ್ತಿದ್ದನು. ಮಗುವಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ, ಕಲ್ಪನಾ ತಂತ್ರ-ಮಂತ್ರದ ಮೊರೆ ಹೋಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರುಗಳಿಂದಾಗಿ ಮಗು ನಿರಂತರವಾಗಿ ಅಳುತ್ತಿತ್ತು.

    ನೀರಿನಲ್ಲಿ ಮುಳುಗಿಸಿ ಕೊಲೆ:
    ಮಗುವಿನ ಅಳುವಿನ ಶಬ್ಧದಿಂದ ವಿಚಲಿತಳಾದ ಕಲ್ಪನಾ ಆಗಸ್ಟ್ 8 ರಂದು ಮಗುವನ್ನು ಕರೆದುಕೊಂಡು ನಿತ್ಯಾನಂದ ಕಾಲೋನಿಯಲ್ಲಿರುವ ತವರು ಮನೆಗೆ ತೆರಳಿದ್ದಳು. ಕಾಲುವೆಯ ಬಳಿ ಮಗುವನ್ನು ಕರೆದುಕೊಂಡು ಹೋದ ಕಲ್ಪನಾ ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಮಗುವಿನ ಶವ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಕಲ್ಪನಾ ತನ್ನ ರೋಗಗ್ರಸ್ಥ ಮಗುವನ್ನು ಸಾಯಿಸುತ್ತೇನೆ ಎಂದು ಹಲವು ಬಾರಿ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದಳು. ಮಗುವಿನ ಶವ ಪತ್ತೆಯಾದ ಕೂಡಲೇ ಗ್ರಾಮಸ್ಥರಲ್ಲಿ ಕಲ್ಪನಾ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಕಲ್ಪಾಳನ್ನು ವಶಕ್ಕೆ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.

    2 ವರ್ಷದ ಹಿಂದೆಯೂ ಮಗು ಕೊಲೆ:
    ಮೂಢನಂಬಿಕೆಗೆ ಒಳಗಾಗಿ ಕಲ್ಪನಾ ಮಗುವನ್ನು ಕೊಂದಿರುವ ಶಂಕೆಗಳು ವ್ಯಕ್ತವಾಗುತ್ತಿವೆ. ಎರಡು ವರ್ಷಗಳ ಹಿಂದೆ ನಿಧಿ ಆಸೆಗಾಗಿ ಕಲ್ಪನಾ ಪತಿ ನಿಲೇಶ್ ಗಾಯಕರ್ ತನ್ನ ಮೊದಲ ಮಗುವನ್ನು ಇದೇ ರೀತಿ ಕೊಂದಿದ್ದನು. ಹೀಗಾಗಿ ಇದೀಗ ಈ ಎರಡೂ ಕೊಲೆಗಳಲ್ಲಿ ಒಂದೇ ಹೋಲಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಗು ಬೇಕು ಮಗು ಎಂದು ಸಾವಿನ ದವಡೆಯಲ್ಲಿರುವ ತಾಯಿಯ ಅಳಲು!

    ಮಗು ಬೇಕು ಮಗು ಎಂದು ಸಾವಿನ ದವಡೆಯಲ್ಲಿರುವ ತಾಯಿಯ ಅಳಲು!

    ಹಾಸನ: ಎರಡೂ ಕಿಡ್ನಿ ವೈಫಲ್ಯವಾಗಿದ್ದು ತಾನು ಕಣ್ಮುಚ್ಚುವ ಮುನ್ನ ತನ್ನ ಕಂದನನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಮಹಿಳೆ ಆಸೆಪಟ್ಟಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ತಾನೇ ಹಡೆದ ಮಗುವನ್ನು ಆಕೆ ನೋಡಲಾಗುತ್ತಿಲ್ಲ. ಬೇಕು ಅಂತಲೇ ತಾಯಿ-ಮಗನನ್ನು ಬೇರ್ಪಡಿಸಿದ್ದಾರೆ. ನನಗೆ ನನ್ನ ಮಗುವನ್ನು ತೋರಿಸಿ ಎಂದು ನೋವಿನಲ್ಲೂ ಕಣ್ಣೀರು ಹಾಕುತ್ತಿದ್ದಾರೆ.

    ರೂಪಶ್ರೀ ನತದೃಷ್ಟ ತಾಯಿ. 2 ವರ್ಷಗಳ ಹಿಂದೆ ಆಲೂರು ತಾಲೂಕು ರಾಜನಹಳ್ಳಿಯ ಮಹೇಶ್‍ನೊಂದಿಗೆ ರೂಪಶ್ರೀ ಮದುವೆಯಾಗಿದ್ದರು. ಮೊದಲ ಮಗು ಜನಿಸಿದ ನಂತರ ಮತ್ತೊಂದು ಮಗುವಿಗೆ ಅಂತರ ಇರಲಿ ಎಂದು ವೈದ್ಯರು ಹೇಳಿದ್ದರೂ, ರೂಪಶ್ರೀ ಗರ್ಭಿಣಿಯಾಗಿದ್ದರು. 2ನೇ ಮಗುವಾದರೆ ತಾಯಿ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ ಬಳಿಕ ರೂಪಶ್ರೀಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆಗಲೇ ರೂಪಶ್ರೀಗೆ ಎರಡೂ ಕಿಡ್ನಿ ವೈಫಲ್ಯವಾಗಿ ಎಂಬ ಆಘಾತಕಾರಿ ಸುದ್ದಿ ತಿಳಿಯಿತ್ತು. ಅಲ್ಲಿಂದ ಇಲ್ಲಿಯವರೆಗೂ ರೂಪಶ್ರೀಗೆ ಆಸ್ಪತ್ರೆಯೇ ವಾಸದ ಮನೆಯಾಗಿದೆ.

    ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಶ್ರೀಗೆ ತನ್ನ ಒಬ್ಬನೇ ಮಗ ಲಲಿತ್ ಕುಮಾರ್ ನನ್ನು ಒಂದು ಬಾರಿ ನೋಡೋ ಆಸೆಯಾಗಿದೆ. ಅದಕ್ಕಾಗಿ ಮಗ ಬೇಕು, ಮಗಬೇಕು ಅಂತ ರೂಪಶ್ರೀ ಒಂದೇ ಸಮನೆ ಹಲುಬುತ್ತಿದ್ದಾರೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಅಷ್ಟರೊಳಗೆ ತನ್ನ ಮಗನನ್ನು ಒಮ್ಮೆ ಒಡಲಲ್ಲಿ ಮಲಗಿಸಿ ಮುದ್ದಾಡಬೇಕು ಅಂತ ತನ್ನ ಸುತ್ತಮುತ್ತ ಇರೋ ರೋಗಿಗಳ ಬಳಿ ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ.

    ರೂಪಶ್ರೀ ತಂದೆ ಹೆಸರಿನಲ್ಲಿ 2 ಎಕರೆ ಆಸ್ತಿಯಿದೆ. ಅದರಲ್ಲಿ ಪಾಲು ಬೇಕು ಎಂದು ದುರಾಸೆಗೆ ಬಿದ್ದಿರುವ ಪತಿ ಮಹೇಶ್ ಮತ್ತು ಆತನ ಮನೆಯವರು, ತಾಯಿಯಿಂದ ಮಗುವನ್ನು ಬೇರ್ಪಡಿಸಿ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ರೂಪಶ್ರಿ ಪೋಷಕರು ಆರೋಪಿಸಿದ್ದು, ಹಾಸನ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಪತ್ನಿ ಅನಾರೋಗ್ಯದಿಂದ ನರಳುತ್ತಿದ್ದರೂ ಒಮ್ಮೆಯೂ ಆಸ್ಪತ್ರೆಯತ್ತ ಪತಿ ಮಹಾಶಯ ಸುಳಿಯದ ಕಾರಣ, ಈಗಾಗಲೇ 2 ಲಕ್ಷ ಖರ್ಚು ಮಾಡಿರುವ ಹೆತ್ತವರೇ ಮಗಳನ್ನು ಆರೈಕೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 7ರ ಅಂಗವಿಕಲ ಮಗನನ್ನು ಸೊಂಟದಲ್ಲಿಟ್ಟುಕೊಂಡು ಅರ್ಧ ಗಂಟೆ ನಿಂತ್ರೂ ಕ್ಯಾರೆ ಎಂದಿಲ್ಲ ಸಿಬ್ಬಂದಿ!

    7ರ ಅಂಗವಿಕಲ ಮಗನನ್ನು ಸೊಂಟದಲ್ಲಿಟ್ಟುಕೊಂಡು ಅರ್ಧ ಗಂಟೆ ನಿಂತ್ರೂ ಕ್ಯಾರೆ ಎಂದಿಲ್ಲ ಸಿಬ್ಬಂದಿ!

    ತುಮಕೂರು: ತಾಯಿಯೋರ್ವಳು ತನ್ನ ವಿಕಲಚೇತನ ಮಗುವಿನ ವೇತನಕ್ಕಾಗಿ ಮಗನನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ಪರಿಪರಿಯಾಗಿ ಕೇಳಿಕೊಂಡ್ರೂ ಅಲ್ಲಿಯ ಸಿಬ್ಬಂದಿಗಳು ಕ್ಯಾರೆ ಎನ್ನದ ಅಮಾನವೀಯ ಘಟನೆಯೊಂದು ಜಿಲ್ಲೆಯ ಕುಣಿಗಲ್ ತಾಲೂಕು ಕಚೇರಿಯಲ್ಲಿ ನಡೆದಿದೆ.

    ಪಾವಸಂದ್ರ ಗ್ರಾಮದ ಮಹಿಳೆ ಕುಮಾರಿ ತನ್ನ 7 ವರ್ಷದ ಮಗ ಹರೀಶನಿಗೆ ಅಂಗವಿಕಲ ವೇತನಕ್ಕಾಗಿ ಅರ್ಜಿ ಹಾಕಲು ಬಂದಿದ್ದರು. ಮಗುವನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸೊಂಟದ ಮೇಲೆ ಎತ್ತಿಕೊಂಡು ಸಿಬ್ಬಂದಿಗಳ ಬಳಿ ಮಾಹಿತಿ ಕೇಳಿದ್ದಾರೆ. ಆದರೂ ಯಾರೂ ಈ ಬಡ ಮಹಿಳೆ ಮಾತು ಕೇಳಿಲ್ಲ. ಸೊಂಟ ಸೋತು ಬಂದಾಗ ಕಚೇರಿ ಕೌಂಟರ್ ಕೆಳಗೆ ಮಗುವನ್ನು ಮಲಗಿಸಿ ಪರಿಪರಿಯಾಗಿ ಕೇಳಿಕೊಂಡರೂ ಆಗಲೂ ಅರೆಬರೆ ಮಾಹಿತಿ ನೀಡಿದ್ದಾರೆ.

    ಇದನ್ನು ಗಮನಿಸಿದ ಕರ್ನಾಟ ರಕ್ಷಣಾ ವೇದಿಕೆ ಕಾರ್ಯಕರ್ತರ ಮಂಜುನಾಥ್ ಮಹಿಳೆ ಸಹಾಯಕ್ಕೆ ಧಾವಿಸಿದ್ದಾರೆ. ತಾಲೂಕು ಕಚೇರಿ ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡು ಅಂಗವಿಕಲ ವೇತನದ ಅರ್ಜಿ ಹಾಕಲು ಸಹಾಯ ಮಾಡಿದ್ದಾರೆ. ಈ ನಡುವೆ ಒಂದೂವರೆ ವರ್ಷದ ಹಿಂದೆಯೇ ಮಧ್ಯವರ್ತಿ ಕೆಂಪಣ್ಣ ಎನ್ನುವ ವ್ಯಕ್ತಿ ಅಂಗವಿಕಲ ವೇತನ ಕೊಡಿಸುವುದಾಗಿ ಹೇಳಿ 1300 ರೂ ವಸೂಲಿ ಮಾಡಿದ್ದಾನಂತೆ. ಆತನಿಂದ ಕೆಲಸ ಆಗದೇ ಇದ್ದಾಗ ವಿಕಲಚೇತನ ಮಗುವನ್ನೇ ಎತ್ತಿಕೊಂಡು ತಾಲೂಕು ಕಚೇರಿಗೆ ಬಂದಿದ್ದು ಕರುಳು ಚುರ್ ಎನಿಸುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

    ಕಟುಕರು ಮುಂಗಾಲುಗಳನ್ನು ಕಡಿದ್ರೂ ಕರುವಿಗೆ ಜನ್ಮ ನೀಡಿ ಪ್ರಾಣತೆತ್ತ ಗೋಮಾತೆ!

    – ಮಂಗಳೂರಿನಲ್ಲೊಂದು ಮನಕಲಕುವ ಘಟನೆ

    ಮಂಗಳೂರು: ತಾಯಿ ಪ್ರೀತಿಗೆ ಎಂದೂ ಬೆಲೆ ಕಟ್ಟಲು ಸಾಧ್ಯ ಇಲ್ಲ ಅನ್ನುವುದಕ್ಕೆ ಈ ಗೋವಿನ ಕಥೆಯೇ ನಿದರ್ಶನ. ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಕರುವಿಗೆ ಜನ್ಮ ನೀಡಿದೆ.

    ಆಗ ಅದು ಆರು ತಿಂಗಳ ಗರ್ಭಿಣಿಯಾಗಿದ್ದ ಗೋವು. ತನ್ನ ಪಾಡಿಗೆ ಅಡ್ಡಾಡುತ್ತ, ಕಂದನ ಆಗಮನದ ನಿರೀಕ್ಷೆಯಲ್ಲಿರುವಾಗಲೇ ಕಟುಕರು ರಾತ್ರೋರಾತ್ರಿ ಹೊತ್ತೊಯ್ದಿದ್ದರು. ಅಲ್ಲದೆ ವಾಹನಕ್ಕೆ ತುಂಬುವಾಗಲೇ ಗೋವಿನ ಎರಡು ಕಾಲನ್ನು ಕಡಿದು ಹಾಕಿದ್ದರು. ಆದರೆ ತಾನು ಸತ್ತರೂ ತನ್ನ ಹೊಟ್ಟೆಯಲ್ಲಿರುವ ಕಂದಮ್ಮ ಸಾಯಬಾರದೆಂದು ಆಕೆ ಕಳ್ಳರ ಕೈಯಿಂದ ಬಿಡಿಸಿ ವಾಹನದಿಂದ ಹೊರಕ್ಕೆ ನೆಗೆದು ಪ್ರಾಣ ಕಾಪಾಡಿಕೊಂಡಿದ್ದಳು ಗೋಮಾತೆ.

    ಹೀಗೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋವನ್ನು ಮಂಗಳೂರಿನ ಶಕ್ತಿನಗರದ ಆನಿಮಲ್ ಕೇರ್ ಟ್ರಸ್ಟ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ತನ್ನ ಮುಂಗಾಲುಗಳನ್ನು ಕಳೆದುಕೊಂಡ ಗೋಮಾತೆ ಮತ್ತೆ ಮೂರು ತಿಂಗಳು ನಿಲ್ಲಲೂ ಆಗದೆ, ಮಲಗಲೂ ಆಗದೆ ಕಷ್ಟ ಪಟ್ಟು ಕೊನೆಗೂ ಗಂಡು ಕರುವಿಗೆ ಜನ್ಮ ನೀಡಿದ್ದಾಳೆ. ದುರಂತ ಏನಂದರೆ ತಾನು ಸತ್ತು ಕರುವನ್ನು ಬದುಕಿಸಿದ ಆ ಗೋವು ಕರುವಿಗೆ ಜನ್ಮ ನೀಡಿದ ಹತ್ತೇ ದಿನದಲ್ಲಿ ಸಾವನ್ನಪ್ಪಿದೆ. ಹೀಗಾಗಿ ಹತ್ತು ದಿನದಲ್ಲಿ ಕರು ತಬ್ಬಲಿಯಾಗಿದೆ.

    ಈ ಪುಣ್ಯಕೋಟಿಗೆ ಟ್ರಸ್ಟ್ ಸಿಬ್ಬಂದಿ ರಾಧೆ ಎಂದು ಹೆಸರಿಟ್ಟಿದ್ದರೆ. ತಬ್ಬಲಿ ಗಂಡು ಕರುವಿಗೆ ಚೋಟಾ ಭೀಮ್ ಎಂದು ಹೆಸರಿಟ್ಟಿದ್ದಾರೆ. ಚೋಟಾ ಭೀಮ್ ಈಗ ತಾಯಿ ಇಲ್ಲದ ತಬ್ಬಲಿಯಾಗಿದ್ದು, ಟ್ರಸ್ಟ್ ಸಿಬ್ಬಂದಿ ಬಾಟಲಿ ಹಾಲುಣಿಸಿ ಸಾಕುತ್ತಿದ್ದಾರೆ. ತನ್ನ ಮಗುವನ್ನು ಉಳಿಸಲು ಮೂರು ತಿಂಗಳು ಸಾವು ಬದುಕಿನ ನಡುವೆ ಹೋರಾಡಿ ಕರು ಜನನವಾದ ಕೂಡಲೇ ಮರಣ ಹೊಂದಿದ ರಾಧೆಯ ತಾಯಿ ಪ್ರೇಮಕ್ಕೆ ಟ್ರಸ್ಟ್ ಸಿಬ್ಬಂದಿ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲಿ ಕಳೆಯುವಂತೆ ಮಾಡಿದ ಪಾಪಿ ಮಗ

    ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲಿ ಕಳೆಯುವಂತೆ ಮಾಡಿದ ಪಾಪಿ ಮಗ

    ಮೈಸೂರು: ತಾಯಿಯೊಬ್ಬರಿಗೆ ನಾಲ್ಕು ಮಕ್ಕಳು ಇದ್ದರೂ ಆಕೆ ಅನಾಥೆ. ಏಕೆಂದರೆ ಹೆತ್ತ ಮಕ್ಕಳಿಗೆ ತಾಯಿ ಬೇಕಿಲ್ಲ. ತಾಯಿ ಬಂದು ಮನೆ ಬಾಗಿಲಲ್ಲಿ ಕುಳಿತಿದ್ದರು ರಾತ್ರಿಯೆಲ್ಲ ಮನೆ ಬಾಗಿಲು ತೆಗೆಯದೆ ಇಳಿ ವಯಸ್ಸಿನಲ್ಲಿರುವ ತಾಯಿಯನ್ನು ಇಡೀ ರಾತ್ರಿ ಬೀದಿಯಲ್ಲೆ ಕಳೆಯುವಂತೆ ಮಾಡಿದ್ದಾರೆ.

    ಮೈಸೂರಿನ ಬನ್ನಿ ಮಂಟಪದ ಮೂರನೇ ಹಂತದಲ್ಲಿ ಈ ಘಟನೆ ನಡೆದಿದೆ. 80 ವರ್ಷದ ಅಮೀನಾ ಅವರಿಗೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಕ್ಕಳು ತಾಯಿಯನ್ನು ಸಾಕಲಾರದೆ ಬೆಂಗಳೂರಿನ ಅನಾಥಶ್ರಮಕ್ಕೆ ಬಿಟ್ಟಿದ್ದರು. ಅಲ್ಲಿರಲು ಮನಸ್ಸಾಗದೆ ಅಮೀನಾ ಶನಿವಾರ ರಾತ್ರಿ ತಮ್ಮ ಮನೆಗೆ ಬಂದರು. ತಾಯಿ ವಾಪಸ್ ಬಂದಿದ್ದನ್ನು ಕಂಡ ಮಕ್ಕಳು ಮನೆ ಬಾಗಿಲು ಹಾಕಿಕೊಂಡು ತಮ್ಮ ಸಂಸಾರ ಸಮೇತ ಹೊರಗೆ ಹೋಗಿದ್ದಾರೆ.

    ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಈ ಪ್ರಮೇಯವನ್ನು ಕಂಡು, ತಮ್ಮ ಮನೆಯಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

  • ಬೆಂಕಿ ಹಚ್ಚಿಕೊಂಡು 2 ವರ್ಷದ ಕಂದಮ್ಮನೊಂದಿಗೆ ತಾಯಿ ಆತ್ಮಹತ್ಯೆ!

    ಬೆಂಕಿ ಹಚ್ಚಿಕೊಂಡು 2 ವರ್ಷದ ಕಂದಮ್ಮನೊಂದಿಗೆ ತಾಯಿ ಆತ್ಮಹತ್ಯೆ!

    ಮೈಸೂರು: ವರದಕ್ಷಣೆ ಕಿರುಕುಳ ತಾಳಲಾರದೇ ತಾಯಿ ತನ್ನ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮಹದೇವಪುರದಲ್ಲಿ ನಡೆದಿದೆ.

    24 ವರ್ಷದ ಗೌರಮ್ಮ ತನ್ನ 2 ವರ್ಷದ ಮಗ ನಿಯಾಲ್ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ ಆರ್ ಪೇಟೆ ಮೂಲದ ಗೌರಮ್ಮ, 3 ವರ್ಷದ ಹಿಂದೆ ಮೈಸೂರಿನ ಲೋಹಿತ್ ರನ್ನು ಮದುಮೆಯಾಗಿದ್ದರು. ಪತಿ ಲೋಹಿತ್ ಮಾಲೂರಿನಲ್ಲಿ ಶಿಕ್ಷಕ ವೃತ್ತಿ ಮಾಡುತ್ತಿದ್ದರು. ಮದುವೆ ಸಮಯದಲ್ಲಿ ಸಾಕಷ್ಟು ವರದಕ್ಷಿಣೆ ನೀಡಲಾಗಿದ್ದು, ಆದರೂ ಹಣಕ್ಕಾಗಿ ಪತಿ ಮನೆಯಿಂದ ಕಿರುಕುಳ ನೀಡಲಾಗಿತ್ತು. ಹಾಗಾಗಿ ಕಿರುಕುಳ ತಾಳಲಾರದೇ ಗೌರಮ್ಮ ಕೊಠಡಿಯೊಳಗೆ ಹೋಗಿ ಮೊದಲು ಮಗ ನಿಯಾಲ್‍ಗೆ ಬೆಂಕಿ ಹಚ್ಚಿ, ಬಳಿಕ ತಾನೂ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews